ಉಡುಪಿ: ನಾಳೆ (ಜು.09)ರಂದು ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಸುದ್ದಿಗಳು News

Posted by vidyamaana on 2024-07-08 17:22:55 |

Share: | | | | |


ಉಡುಪಿ: ನಾಳೆ (ಜು.09)ರಂದು ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ: ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನೆಲೆ ಜು.09 ರಂದು ರೆಡ್ ಅಲರ್ಟ್ ಘೋಷಿಸಿದ್ದು ಅದರಂತೆ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಮಂಗಳವಾರ ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಜು.9ರಂದು ರಜೆ ಘೋಷಿಸಿ ಉಡುಪಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ

 Share: | | | | |


ಭೀಕರ ರಸ್ತೆ ಅಪಘಾತ ಪ್ರಕರಣ : ಸಾವಿನ ಸಂಖ್ಯೆ 13ಕ್ಕೆ ಏರಿಕೆ,ಇಬ್ಬರ ಸ್ಥಿತಿ ಗಂಭೀರ

Posted by Vidyamaana on 2024-06-28 19:01:49 |

Share: | | | | |


ಭೀಕರ ರಸ್ತೆ ಅಪಘಾತ ಪ್ರಕರಣ : ಸಾವಿನ ಸಂಖ್ಯೆ 13ಕ್ಕೆ ಏರಿಕೆ,ಇಬ್ಬರ ಸ್ಥಿತಿ ಗಂಭೀರ

ಹಾವೇರಿ : ಇಂದು ಬೆಳ್ಳಂಬೆಳಗ್ಗೆ ಹಾವೇರಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಹತ್ತಕ್ಕೂ ಹೆಚ್ಚು ಜನರು ಸಾವನಪ್ಪಿದು ಇದೀಗ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ಹಾವೇರಿಯ ಎಸ್ ಪಿ ಅಂಶಿ ಕುಮಾರ್ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಇಬ್ಬರು ಮಕ್ಕಳು ಇಬ್ಬರು ಪುರುಷರು ಸೇರಿದಂತೆ 9 ಮಹಿಳೆಯರು ಸಾವನಪ್ಪಿದ್ದಾರೆ.

ಹೌದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಅಪಘಾತ ನಡೆದಿದೆ. ಚಿಂಚೋಳಿಯ ಮಾಯಮ್ಮ ದೇವಿ ದರ್ಶನ ಪಡೆದು ವಾಪಸಾಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಬೆಳ್ಳಂ ಬೆಳಗ್ಗೆ ಭೀಕರ ರಸ್ತೆ ಅಪಘಾತದಲ್ಲಿ 13 ಜನ ಸಾವನ್ನಪಪ್ಪಿದ್ದಾರೆ ಎಂದು ಎಸ್ ಪಿ ಅಂಶಿ ಕುಮಾರ್ ಮಾಹಿತಿ ನೀಡಿದ್ದಾರೆ.ಮೃತರು ಶಿವಮೊಗ್ಗ ಜಿಲ್ಲೆಯ ಮೂಲದವರು ಎಂದು ತಿಳಿದು ಬಂದಿದೆ. ಪರಶುರಾಮ, ಭಾಗ್ಯ, ನಾಗೇಶ್, ವಿಶಾಲಾಕ್ಷಿ,ಅರ್ಪಿತ,ಸುಭದ್ರ, ಬಾಯಿ, ಪುಣ್ಯ, ಮಂಜುಳಾಬಾಯಿ, ಆದರ್ಶ, ಮಾನಸ, ಅಪರೂಪ, ಮಂಜುಳಾ ಮೃತಪಟ್ಟವರ ಎಂದು ಗುರುತಿಸಲಾಗಿದೆ.

ಪುತ್ತೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭಾರೀ ಅವ್ಯವಹಾರ ಆರೋಪ

Posted by Vidyamaana on 2023-08-10 01:32:25 |

Share: | | | | |


ಪುತ್ತೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭಾರೀ ಅವ್ಯವಹಾರ ಆರೋಪ

ಪುತ್ತೂರು:ಇಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ಕುಮಾರ್‌ ರೈಯವರು ಆ. 8ರಂದು ಸಂಜೆ ದಿಢೀರ್‌ ಸಿಡಿಪಿಒ ಕಚೇರಿಗೆ ಭೇಟಿ ನೀಡಿದ್ದಾರೆ.ಈ ಸಂದರ್ಭ ಅಧಿಕಾರಿ ಶ್ರೀಲತಾ ಅವರು ಕಚೇರಿಯಲ್ಲಿರಲಿಲ್ಲ.ದೂರವಾಣಿ ಕರೆ ಮಾಡಿದಾಗ, ತಾನು ಬೆಳ್ತಂಗಡಿಗೆ ಹೋಗಿರುವುದಾಗಿ ತಿಳಿಸಿದರು.ಶಾಸಕರು ಫೋನ್ ಕರೆ ಮೂಲಕವೇಅಧಿಕಾರಿಣಿಯನ್ನು ತರಾಟೆಗೆತ್ತಿಕೊಂಡ 


ಘಟನೆ ವರದಿಯಾಗಿದೆ. ಇಲಾಖೆಯಿಂದ ಅಂಗನವಾಡಿಗೆ ಆಹಾರ ವಿತರಣೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ.ಖಾಸಗಿ ವ್ಯಕ್ತಿಗಳ ಜೊತೆ ಒಪ್ಪಂದ ಮಾಡಿಕೊಂಡು ಆಹಾರ ತಯಾರಿಕಾ ವ್ಯವಸ್ಥೆಯನ್ನು ಗುತ್ತಿಗೆ ನೀಡಿದ್ದೀರಿ, ಫುಡ್ ಸರಿಯಾಗಿ ವಿತರಣೆಯಾಗುತ್ತಿಲ್ಲ ಮತ್ತು ಗುಣಮಟ್ಟವೂಇಲ್ಲ. ಅರ್ಧಕ್ಕರ್ಧ ಪುಡ್ ಮಾತ್ರ ವಿತರಣೆ ಮಾಡಲಾಗುತ್ತಿದೆ,ಎಲ್ಲವೂ ನಿಮ್ಮ ಇಷ್ಟದಂತೆ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ಸರಕಾರದ ಸುತ್ತೋಲೆಯಂತೆ


ಇಲ್ಲಿ ವ್ಯವಹಾರ ನಡೆಯಬೇಕು ಎಂದು ಸೂಚಿಸಿದರು ಎಂದು ತಿಳಿದುಬಂದಿದೆ.


ಭ್ರಷ್ಟಾಚಾರವನ್ನು ಸಹಿಸುವ ಪ್ರಶ್ನೆಯೇ ಇಲ್ಲ-ಅಶೋಕ್ ಕುಮಾರ್ ರೈ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದೆ. ಎಂದು ಸಾರ್ವಜನಿಕರಿಂದ ಪದೇ ಪದೇ ದೂರುಗಳು ಬರುತ್ತಿವೆ.ನಾನು ಶಾಸಕನಾಗಿ ಎರಡು ತಿಂಗಳಷ್ಟೆ ಕಳೆದಿದೆ.ಬಹುತೇಕ ಎಲ್ಲಾ ಅಧಿಕಾರಿಗಳು ನನ್ನನ್ನು ಶಾಸಕನೆಂಬ ನೆಲೆಯಲ್ಲಿ ಭೇಟಿಯಾಗಿ ಇಲಾಖೆಗೆ ಸಂಬಂಧಿಸಿದ ವಿಚಾರಗಳ ಕುರಿತು ಮಾತುಕತೆ ನಡೆಸಿದ್ದಾರೆ.ಆದರೆ ಸಿಡಿಪಿಒ ಅವರು ಬರಲೇ ಇಲ್ಲ. ಇಲಾಖೆಗೆ ಸಂಬಂಧಪಟ್ಟ ಯಾವುದೇ ಮಾಹಿತಿಯನ್ನು ನನ್ನ ಜೊತೆ ಹಂಚಿಕೊಂಡಿಲ್ಲ. ಅವ್ಯವಹಾರದ ದೂರಿನ ಬಗ್ಗೆ ಕೇಳೋಣ ಎಂದು ಕಚೇರಿಗೆ ಕರೆದರೆ ಪದೇ ಪದೇ ತಪ್ಪಿಸಿಕೊಳ್ಳುತ್ತಿದ್ದಾರೆ.ಜನರಿಗೆ ನಾನು ಏನೆಂದು ಉತ್ತರಕೊಡಬೇಕು.ನಾನು ಕರೆದ ಯಾವುದೇ ಸಭೆಗೂ ಬಾರದೆ ತಪ್ಪಿಸಿಕೊಳ್ಳುತ್ತಿದ್ದಾರೆ.ಆಹಾರ ತಯಾರಿಕೆಯನ್ನು ಟೆಂಡರ್ ಕರೆಯದೆ ಅವರಿಗಿಷ್ಟ ಬಂದವರಿಗೆ ಗುತ್ತಿಗೆ ನೀಡಿ ಅದರಲ್ಲಿ ಅಧಿಕಾರಿ ಮತ್ತು ಮಂಗಳೂರಿನ ಒಬ್ಬ ಗುತ್ತಿಗೆದಾರ ಸೇರಿ ಕೋಟಿ ಕೋಟಿ ಲೂಟಿ ಹೊಡೆದಿದ್ದಾರೆ.ಮಕ್ಕಳ | ಮಟ್ಟದ ವಾಲಿ ಆಹಾರ ವಿತರಣೆಯಲ್ಲಿ ಇವರು ಗೋಲ್‌ಮಾಲ್ ಮಾಡಿದ್ದಾರೆ.ಕೇಳಿದರೆ ಉಡಾಫೆಯಿಂದ ಕುದ್ರೆಡ ಅಜ್ಜಿಕ ಉತ್ತರಿಸುತ್ತಾರೆ.ಪ್ರಕರಣವನ್ನು ನಾನು ಗಂಭೀರವಾಗಿ ಪರಿಗಣಿಸಿದ್ದು ನಡೆದಿರುವ ಸದಸ್ಯರಾದ ವ ಅವ್ಯವಹಾರವನ್ನು ತನಿಖೆ ಮಾಡಿಸುತ್ತೇನೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಬೇಕಿದೆ.ಬಡ ಮಕ್ಕಳಿಗೆ, ಗರ್ಭಿಣಿ-ಬಾಣಂತಿ ಮಹಿಳೆಯರಿಗೆ ಕೊಡಬೇಕಾದ ಫುಡ್ ವಿತರಣೆಯಲ್ಲಿ ತಯಾರಿಕೆಯಲ್ಲಿ ಇವರು ಲೂಟಿ ಹೊಡೆಯುತ್ತಾರಂದ್ರೆ ಅದನ್ನು ಸಹಿಸಲು ಸಾಧ್ಯವೇ ಇಲ್ಲ, ಭ್ರಷ್ಟಾಚಾರವನ್ನು ನಾನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಅಶೋಕ್‌ ಕುಮಾರ್ ರೈ ಹೇಳಿದ್ದಾರೆ.

ಜ.20-21: ರಾಷ್ಟ್ರಮಟ್ಟದ ಹೊನಲು ಬೆಳಕಿನ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಸಿಝ್ಲರ್ ಟ್ರೋಫಿ-2024

Posted by Vidyamaana on 2024-01-18 07:32:40 |

Share: | | | | |


ಜ.20-21: ರಾಷ್ಟ್ರಮಟ್ಟದ ಹೊನಲು ಬೆಳಕಿನ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಸಿಝ್ಲರ್ ಟ್ರೋಫಿ-2024

ಪುತ್ತೂರು: ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಾಮೆತ್ತಡ್ಕ ಸಿಝ್ಲರ್ ಸಾಫ್ಟ್ ಡ್ರಿಂಕ್ಸ್ ಜಂಟಿ ಆಶ್ರಯದಲ್ಲಿ ದಿ.ಶ್ರೀನಾಥ ಆಚಾರ್ಯ ಸ್ಮರಣಾರ್ಥ ರಾಷ್ಟ್ರಮಟ್ಟದ ಹೊನಲು ಬೆಳಕಿನ ಓವರ್ ಆರ್ಮ್‍ಕ್ರಿಕೆಟ್ ಪಂದ್ಯಾಟ ‘ಸಿಝ್ಲರ್ ಟ್ರೋಪಿ-2024’ ಜ.20 ಹಾಗೂ 21 ರಂದು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಾಮೆತ್ತಡ್ಕ ಯುವಕ ಮಂಡಲದ ಅಧ್ಯಕ್ಷ ರೋಶನ್ ರೆಬೆಲ್ಲೋ ತಿಳಿಸಿದ್ದಾರೆ.


ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ವಿವರ ನೀಡಿ, ಪಂದ್ಯಾಟದಲ್ಲಿ ಒಟ್ಟು ಎಂಟು ತಂಡಗಳು ಪಾಲ್ಗೊಳ್ಳಲಿದ್ದು ದಕ್ಷಿಣ ಕನ್ನಡ ಜಿಲ್ಲೆಯ ನಂ.1 ಈವೆಂಟ್ ಇದಾಗಿದೆ. ಪಂದ್ಯಾಟದಲ್ಲಿ ಪ್ರಥಮ ಬಹುಮಾನವಾಗಿ 2 ಲಕ್ಷ ರೂ. ನಗದು, ಸಿಝ್ಲರ್ ಟ್ರೋಫಿ, ದ್ವಿತೀಯ 1 ಲಕ್ಷ ರೂ. ನಗದು ಹಾಗೂ ಸಿಝ್ಲರ್ ಟ್ರೋಫಿ, ಮ್ಯಾನ್ ಆಫ್‍ದ ಮ್ಯಾಚ್‍ ಗೆ ಬೈಕ್ ಬಹುಮಾನ ನೀಡಲಾಗುವುದು. ವಿಶೇಷವೆಂದರೆ ನೊಂದಾವಣಿ ಶುಲ್ಕ ಸಂಪೂರ್ಣ ಉಚಿತವಾಗಿರುತ್ತದೆ ಎಂದು ಅವರು ತಿಳಿಸಿದರು.




ಜ.20 ರಂದು ಬೆಳಿಗ್ಗೆ 6.30 ಕ್ಕೆ ಪಂದ್ಯಾಟವನ್ನು ಪುತ್ತೂರು ಸಹಾಯಕ ಆಯುಕ್ತ ಜುಪಿನ್ ಮಹಾಪಾತ್ರ ಉದ್ಘಾಟಿಸಲಿದ್ದು, ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ಫಾ.ಲಾರೆನ್ಸ್ ಮಸ್ಕರೇನಸ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಶಿವಶಂಕರ್, ನಗರಸಭೆ ಪೌರಾಯುಕ್ತ ಮಧು ಎಸ್‍.ಮನೋಹರ್, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್‍ಕುಮಾರ್ ಭಂಡಾರಿ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಚೈತ್ರಾ ಕುಂದಾಪುರ ಡೀಲ್ ಪ್ರಕರಣ

Posted by Vidyamaana on 2023-09-15 04:43:05 |

Share: | | | | |


ಚೈತ್ರಾ ಕುಂದಾಪುರ ಡೀಲ್ ಪ್ರಕರಣ

ಬೆಂಗಳೂರು: ಚೈತ್ರಾ ಕುಂದಾಪುರ ಡೀಲ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಅಭಿನವ ಹಾಲಶ್ರೀ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ. ಈ ಮಧ್ಯೆ, ಸ್ವಾಮೀಜಿ ಇತ್ತೀಚೆಗೆ ಹೈಫೈ ಜೀವನ ನಡೆಸಿಕೊಂಡಿದ್ದರು. ಅಲ್ಲದೆ, ಬೇರೆ ಬೇರೆ ಕಡೆ ಆಸ್ತಿ ಖರೀದಿಸಿದ್ದರು ಅನ್ನುವ ವಿಚಾರ ಬೆಳಕಿಗೆ ಬಂದಿದೆ.


ಉದ್ಯಮಿ ಗೋವಿಂದ ಬಾಬು ಪೂಜಾರಿ ಬಳಿಯಿಂದ ಸ್ವಾಮೀಜಿ ಒಂದೂವರೆ ಕೋಟಿ ಹಣ ಪಡೆದಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ವಂಚನೆ ಪ್ರಕರಣದಲ್ಲಿ ಅಭಿನವ ಹಾಲಶ್ರೀ ಮೂರನೇ ಆರೋಪಿಯಾಗಿದ್ದಾರೆ. ಸ್ವಾಮೀಜಿ, ಹಿರೇಹಡಗಲಿ ಬಳಿಯಲ್ಲಿ ಎಂಟು ಎಕರೆ ಜಮೀನು ಖರೀದಿಸಿದ್ದು ಆ ಜಾಗದಲ್ಲಿ ಕಬ್ಬು ಬೆಳೆದಿದ್ದಾರೆ. ಆ ಜಮೀನಿಗೆ 68 ಲಕ್ಷ ಹಣ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.




ಇದಲ್ಲದೆ, ಪತ್ನಿಯ ತಂದೆಯಾದ ಮಲ್ಲಯ್ಯ ತುಂಬಿನಕೇರ ಅವರ ಹೆಸರಿನಲ್ಲಿ 40 ಲಕ್ಷ ರೂ. ಹಣ ನೀಡಿ ಜಾಗ ಖರೀದಿಸಿದ್ದು, ಅಲ್ಲಿ ಪೆಟ್ರೋಲ್ ಬಂಕ್ ನಿರ್ಮಾಣ ಮಾಡಿದ್ದಾರೆ. ಇದಕ್ಕಾಗಿ ಚಂದ್ರಪ್ಪ ಎಂಬವರ ಹೆಸರಿನಲ್ಲಿದ್ದ ಜಾಗವನ್ನು ಖರೀದಿಸಲಾಗಿತ್ತು. ಹಿರೇಹಡಗಲಿ ರಸ್ತೆಯ ಬದಿಯಲ್ಲಿ ಎಚ್ ಪಿ ಪೆಟ್ರೋಲ್ ಪಂಪ್ ನಿರ್ಮಾಣ ಆಗಿದ್ದು ಇದನ್ನು ಸ್ವಾಮೀಜಿ ಅವರೇ ನಿರ್ವಹಿಸುತ್ತಿದ್ದಾರೆ. ಗೋವಿಂದ ಬಾಬು ಪೂಜಾರಿ ನೀಡಿದ್ದ ಹಣದಲ್ಲಿಯೇ ಸ್ವಾಮೀಜಿ ಹೂಡಿಕೆ ಮಾಡಿದ್ದು, ಉದ್ಯಮ ಆರಂಭಿಸಿದ್ದರು.


ಆಬಳಿಕ ಗೋವಿಂದ ಬಾಬು ಪೂಜಾರಿ ತನ್ನ ಹಣವನ್ನು ವಾಪಸ್ ಕೇಳಿದಾಗ, ಪೇಚಿಗೆ ಸಿಲುಕಿದ್ದ ಸ್ವಾಮೀಜಿ ಸ್ವಲ್ಪ ಹಣ ಕೊಟ್ಟು ಸಂಭಾಳಿಸಲು ಯತ್ನಿಸಿದ್ದರು. ಇದಕ್ಕಾಗಿ ಹತ್ತು ಲಕ್ಷ ಸಾಲವನ್ನು ತನ್ನ ಪರಿಚಿತರ ಬಳಿ ಸ್ವಾಮೀಜಿ ಕೇಳಿದ್ದರಂತೆ. ಸಾಲ ಪಡೆದು ಉದ್ಯಮಿಗೆ ಹಣ ನೀಡಲು ಮುಂದಾಗಿದ್ದರು ಎನ್ನಲಾಗುತ್ತಿದೆ. ಹಣ ಹಿಂತಿರುಗಿಸುವಂತೆ ಕೇಳಿಕೊಂಡರೂ ನೀಡದೇ ಇರುವುದರಿಂದ ಗೋವಿಂದ ಬಾಬು ಪೂಜಾರಿ ಪೊಲೀಸ್ ಕೇಸು ದಾಖಲಿಸಿದ್ದರು. ಈ ನಡುವೆ, ಗೋವಿಂದ ಬಾಬು ಪೂಜಾರಿ ಹಾಗೂ ಚೈತ್ರಾ ಕುಂದಾಪುರ ಅವರು ಅಭಿನವ ಹಾಲಶ್ರೀ ಅವರ ಮಠಕ್ಕೆ ಬಂದು ಸ್ವಾಮೀಜಿಯ ಆಶೀರ್ವಾದ ಪಡೆಯುವ ಫೋಟೋಗಳು ಹೊರಬಂದಿದ್ದು, ವೈರಲ್ ಆಗಿವೆ.

ಚಾರ್ಮಾಡಿ ಘಾಟ್ ನಲ್ಲಿ ಬಸ್ ಗಳ ಮುಖಾಮುಖಿ ಡಿಕ್ಕಿ

Posted by Vidyamaana on 2023-07-07 13:49:31 |

Share: | | | | |


ಚಾರ್ಮಾಡಿ ಘಾಟ್  ನಲ್ಲಿ ಬಸ್ ಗಳ ಮುಖಾಮುಖಿ ಡಿಕ್ಕಿ

ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ನಲ್ಲಿ ಎರಡು ಸರ್ಕಾರಿ ಬಸ್ಸುಗಳು ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಎರಡೂ ಬಸ್ ಗಳ ಡ್ರೈವರ್ ಗಳ ಕಾಲಿಗೂ ತೀವ್ರ ಗಾಯಗಳಾಗಿದ್ದು ಇಬ್ಬರನ್ನೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ಘಟನೆ ನಡೆದಿದ್ದು, ಎರಡು ಬಸ್ಸುಗಳಲ್ಲಿ 80ಕ್ಕೂ ಹೆಚ್ಚು ಜನ ಪ್ರಯಾಣಿಕರು ಇದ್ದರು.

ಅಪಘಾತಕ್ಕೆ ರಸ್ತೆ ಕಾಮಗಾರಿ ಮತ್ತು ಕವಿದಿದ್ದ ದಟ್ಟ ಮಂಜು ಕಾರಣ ಎಂದು ಹೇಳಲಾಗಿದೆ.

ಅಪಘಾತದಿಂದಾಗಿ ಚಾರ್ಮಾಡಿ ಘಾಟ್ ನಲ್ಲಿ ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿ ಕೆಲವು ಪ್ರಯಾಣಿಕರು ಹತ್ತು ಕಿಲೋ ಮೀಟರ್ ದೂರ ನಡೆದು ಕೊಟ್ಟಿಗೆಹಾರ ತಲುಪಿದ್ದಾರೆ.

ಬಿಲ್ಕಿಸ್ ಬಾನೋ ಪ್ರಕರಣದಲ್ಲಿ‌ ಅಪರಾಧಿಗಳ ಬಿಡುಗಡೆ, ಗುಜರಾತ್‌ ಸರ್ಕಾರದ ಆದೇಶ ರದ್ದು

Posted by Vidyamaana on 2024-01-08 21:57:45 |

Share: | | | | |


ಬಿಲ್ಕಿಸ್ ಬಾನೋ ಪ್ರಕರಣದಲ್ಲಿ‌ ಅಪರಾಧಿಗಳ ಬಿಡುಗಡೆ, ಗುಜರಾತ್‌ ಸರ್ಕಾರದ ಆದೇಶ  ರದ್ದು

ನವದೆಹಲಿ ಜ.8: ಬಿಲ್ಕಿಸ್‌ ಬಾನು ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳನ್ನು ಅವಧಿಗೆ ಮೊದಲೇ ಬಿಡುಗಡೆಗೊಳಿಸಿದ್ದ ಗುಜರಾತ್‌ ಸರ್ಕಾರದ ಆದೇಶವನ್ನು ಸುಪ್ರೀಂಕೋರ್ಟ್‌ ರದ್ದುಗೊಳಿಸಿದೆ. ಚುನಾವಣೆ ಹೊತ್ತಲ್ಲಿ ಕೋರ್ಟ್ ನೀಡಿರುವ ಆದೇಶ ಗುಜರಾತ್‌ ಸರ್ಕಾರಕ್ಕೆ ಹಿನ್ನಡೆ ಆದಂತಾಗಿದೆ. 


ಗುಜರಾತ್‌ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಂತ್ರಸ್ತ ಮಹಿಳೆ ಬಿಲ್ಕಿಸ್‌ ಬಾನು ಸುಪ್ರೀಂಕೋರ್ಟ್‌ ಗೆ ಸಲ್ಲಿಸಿದ್ದ ಮನವಿಯನ್ನು ಜಸ್ಟೀಸ್‌ ಬಿ.ವಿ.ನಾಗರತ್ನ ಮತ್ತು ಜಸ್ಟೀಸ್‌ ಉಜ್ಜಾಲ್‌ ಭುವನ್‌ ಅವರನ್ನೊಳಗೊಂಡ ಪೀಠ ತೀರ್ಪು ನೀಡಿದೆ. 2002ರಲ್ಲಿ ಗುಜರಾತ್‌ ನ ಗೋಧ್ರಾದಲ್ಲಿ ಬಿಲ್ಕಿಸ್‌ ಬಾನು ಮೇಲೆ ಅತ್ಯಾಚಾರ ಎಸಗಿ, ಆಕೆಯ 7 ಮಂದಿ ಕುಟುಂಬ ಸದಸ್ಯರನ್ನು ಕೊಲೆಗೈದ ಪ್ರಕರಣದಲ್ಲಿ 11 ಮಂದಿ ದೋಷಿಗಳಾಗಿದ್ದು ಜೀವಾವಧಿ ಶಿಕ್ಷೆಗೆ ಒಳಗಾಗಿದ್ದರು.‌ ಆದರೆ ಗುಜರಾತ್‌ ಸರ್ಕಾರ 2022ರಲ್ಲಿ 11 ಅಪರಾಧಿಗಳನ್ನು ಅವಧಿ ಪೂರ್ವ ಬಿಡುಗಡೆಗೊಳಿಸಲು ಹೊರಡಿಸಿದ್ದ ಆದೇಶವನ್ನು ಸುಪ್ರೀಂಕೋರ್ಟ್‌ ರದ್ದು ಮಾಡಿದೆ. 




ಆ ರೀತಿಯ ಆದೇಶವನ್ನು ಜಾರಿಗೊಳಿಸುವ ಅಧಿಕಾರ ಗುಜರಾತ್‌ ಸರ್ಕಾರಕ್ಕಿಲ್ಲ. ಇದೊಂದು ವಂಚನೆ ಕೃತ್ಯ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಅಲ್ಲದೆ, 11 ಅಪರಾಧಿಗಳು ಎರಡು ವಾರದೊಳಗೆ ಶರಣಾಗಿ, ಜೈಲಿಗೆ ಮರಳಬೇಕು ಎಂದು ತೀರ್ಪಿನಲ್ಲಿ ಸೂಚಿಸಿದೆ. ಅಪರಾಧಿಗಳ ಶೀಘ್ರ ಬಿಡುಗಡೆಯ ಅಧಿಕಾರ ಗುಜರಾತ್‌ ಸರ್ಕಾರಕ್ಕಿಲ್ಲ. ಬದಲಿಗೆ ಅಪರಾಧಿಗಳ ಅವಧಿ ಪೂರ್ವ ಬಿಡುಗಡೆಗೆ ಮಹಾರಾಷ್ಟ್ರ ಸರ್ಕಾರ ಪರಿಶೀಲನೆ ನಡೆಸಬಹುದು, ಯಾಕೆಂದರೆ ಆರೋಪಿಗಳ ವಿಚಾರಣೆ ನಡೆದಿರುವುದು ಮಹಾರಾಷ್ಟ್ರದಲ್ಲಿ.  ಗುಜರಾತ್‌ ನಲ್ಲಿ ಅಲ್ಲ ಎಂದು ಸ್ಪಷ್ಟಪಡಿಸಿದೆ. 


ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದಲ್ಲಿ ಎಲ್ಲ 11 ಅಪರಾಧಿಗಳನ್ನು ಜೀವಾವಧಿ ಶಿಕ್ಷೆಯ 14 ವರ್ಷ ಪೂರ್ತಿಗೊಳಿಸಿದ್ದಾರೆಂದು ಹೇಳಿ ಗುಜರಾತ್ ಸರ್ಕಾರ, 2022ರ ಆಗಸ್ಟ್ 15ರಂದು ಅವರನ್ನು ಜೈಲಿನಿಂದ ಬಿಡುಗಡೆ ಮಾಡಿತ್ತು.



Leave a Comment: