ಕೊಣಾಜೆ: ಬೋಳಿಯಾರ್ ಅಮಾಯಕ ಮುಸ್ಲಿಮರ ಬಂಧನ ವಿರೋಧಿಸಿ SDPI ಪ್ರತಿಭಟನೆ

ಸುದ್ದಿಗಳು News

Posted by vidyamaana on 2024-06-25 21:01:31 |

Share: | | | | |


ಕೊಣಾಜೆ: ಬೋಳಿಯಾರ್ ಅಮಾಯಕ ಮುಸ್ಲಿಮರ ಬಂಧನ ವಿರೋಧಿಸಿ SDPI ಪ್ರತಿಭಟನೆ

ಕೊಣಾಜೆ: ಬೋಳಿಯಾರಿನಲ್ಲಿ ಅಮಾಯಕ ಮುಸ್ಲಿಮರ ಬಂಧನ ವಿರೋಧಿಸಿ ಎಸ್ ಡಿಪಿಐ ಕೊಣಾಜೆ ಪೊಲೀಸ್ ಠಾಣೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದೆ.

ಮಳೆಯನ್ನು ಲೆಕ್ಕಿಸದೆ ಸೇರಿದ ನೂರಾರು ಜನ ಸೇರಿದ್ದಾರೆ. ಬೋಳಿಯಾರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಇರಿತ ಪ್ರಕರಣದಲ್ಲಿ ಹದಿನಾರು ಮಂದಿ ಆರೋಪಿಗಳ ಬಂಧನವಾಗಿದ್ದರೂ ಪೊಲೀಸರು ಬೇಟೆ ಮುಂದುವರಿಸಿದ್ದಾರೆ. ಕಣ್ಣು ಮುಚ್ಚಿ ಕುಳಿತ ರಾಜ್ಯ ಸರಕಾರದ ದ್ವಿಮುಖ ದೋರಣೆಯನ್ನು ವಿರೋಧಿಸಿ SDPI ಪ್ರತಿಭಟನೆ ನಡೆಸುತ್ತಿದೆ.

 Share: | | | | |


ಸ್ನಾನ ಮಾಡುತ್ತಿದ್ದ ಮಹಿಳೆಯ ವೀಡಿಯೊ ಚಿತ್ರೀಕರಣ ಪ್ರಕರಣ: ಸುಮಂತ್ ಪೂಜಾರಿಗೆ ನ್ಯಾಯಾಂಗ ಬಂಧನ

Posted by Vidyamaana on 2023-08-05 10:51:31 |

Share: | | | | |


ಸ್ನಾನ ಮಾಡುತ್ತಿದ್ದ ಮಹಿಳೆಯ ವೀಡಿಯೊ ಚಿತ್ರೀಕರಣ ಪ್ರಕರಣ: ಸುಮಂತ್ ಪೂಜಾರಿಗೆ ನ್ಯಾಯಾಂಗ ಬಂಧನ

ಮಂಗಳೂರು: ಮಹಿಳೆಯೊಬ್ಬರು ಸ್ನಾನ ಮಾಡುವಾಗ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದವ ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆಯೊಂದು ಬುಧವಾರ ನಡೆದಿದ್ದು, ಸುಮಂತ್ ಪೂಜಾರಿಗೆ ನ್ಯಾಯಾಂಗ ಬಂಧನವಾಗಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ, ಘಟನೆಗೆ ಸಂಬಂಧಿಸಿ ಪ್ರಜ್ವಲ್ ಎಂಬವರು ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸುಮಂತ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯವು ಸುಮಂತ್ ಗೆ ನ್ಯಾಯಾಂಗ ಬಂಧನ ವಿಧಿಸಿದೆ. ಮೊಬೈಲ್ ಫೋನ್ ನ್ನು ಎಫ್ಎಸ್ಎಲ್ ತನಿಖೆಗೆ ಕಳುಹಿಸಲಾಗಿದ್ದು, ವರದಿಯ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ

ವಿಟ್ಲ : ಮಳೆಗೆ ಮರ ಬಿದ್ದು ಮನೆಗೆ ಹಾನಿ

Posted by Vidyamaana on 2023-05-12 11:28:43 |

Share: | | | | |


ವಿಟ್ಲ : ಮಳೆಗೆ ಮರ ಬಿದ್ದು ಮನೆಗೆ ಹಾನಿ

ವಿಟ್ಲ: ವಿಟ್ಲ ಕಸಬಾ ಗ್ರಾಮದ ನೆತ್ರಕೆರೆ ಎಂಬಲ್ಲಿ ಭಾರೀ ಮಳೆಗಾಳಿಗೆ ಮನೆ ಮೇಲೆ ಮರ ಬಿದ್ದು ಹಾನಿಗೊಂಡ ಮನೆಗೆ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಭೇಟಿ ನೀಡಿದರು. 

ವೈದ್ಯಾಧಿಕಾರಿಣಿ ಗರ್ಭಪಾತಕ್ಕೆ ಕಾರಣವಾದ ಗ್ರಾಮಸಭೆ ಪ್ರಶ್ನೆಗಳ ಸುರಿಮಳೆ!!

Posted by Vidyamaana on 2023-08-15 07:34:22 |

Share: | | | | |


ವೈದ್ಯಾಧಿಕಾರಿಣಿ ಗರ್ಭಪಾತಕ್ಕೆ ಕಾರಣವಾದ ಗ್ರಾಮಸಭೆ ಪ್ರಶ್ನೆಗಳ ಸುರಿಮಳೆ!!

ಗ್ರಾಮಸಭೆಯಲ್ಲಿ ಪ್ರಶ್ನೆಗಳ ಸುರಿಮ

ಪುತ್ತೂರು: ಯುವತಿ ಸಾವಿನ ವಿಚಾರವನ್ನು ಮುಂದಿಟ್ಟುಕೊಂಡು ಗ್ರಾಮಸಭೆಯಲ್ಲಿ ವೈದ್ಯಾಧಿಕಾರಿಯನ್ನು ಗ್ರಾಮಸ್ಥರೋರ್ವರು ತರಾಟೆಗೆತ್ತಿಕೊಂಡ ಘಟನೆಯಿಂದ ಗರ್ಭಿಣಿಯಾಗಿದ್ದ ವೈದ್ಯಾಧಿಕಾರಿ ಕುಸಿದು ಬಿದ್ದು, ಗರ್ಭಪಾತವಾಗಿತ್ತು. ಈ ಪ್ರಕರಣ ಬಗ್ಗೆ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದ.ಕ ಜಿಲ್ಲಾ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಒತ್ತಾಯಿಸಿದೆ.

ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಗ್ರಾಮಸ್ಥರ ಮಾನಸಿಕ ಒತ್ತಡದಿಂದ ನೆಲ್ಯಾಡಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಗರ್ಭಿಣಿ ಡಾ.ಶಿಶಿರಾ ಅವರಿಗೆ ಗರ್ಭಪಾತವಾಗಿದೆ ಅನ್ನುವ ದೂರು ದಾಖಲಾಗಿದೆ. ಮಾನಸಿಕ ಹಿಂಸೆ ನೀಡಿದ್ದಾರೆ. ಡೀಕಯ್ಯ ಪೂಜಾರಿ ಮತ್ತು ಗಣೇಶ್ ವಿರುದ್ದ ದೂರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


ಏನಿದು ಘಟನೆ?

ದ.ಕ ಜಿಲ್ಲೆಯ ಕಡಬ ತಾಲೂಕಿನ ಗೋಳಿತೊಟ್ಟು ಗ್ರಾ.ಪಂ ನಲ್ಲಿ ಆ. 9ರಂದು ಗ್ರಾಮ ಸಭೆ ನಡೆದಿತ್ತು. ಈ ವೇಳೆ ವಿದ್ಯಾರ್ಥಿನಿಯೊಬ್ಬಳು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾಳೆ ಅನ್ನುವ ದೂರು ಸಭೆಯಲ್ಲಿ ಕೇಳಿ ಬಂದಿತ್ತು. ಈ ವೇಳೆ ಡಾ.ಶಿಶಿರಾ ಉತ್ತರ ನೀಡಿದರು. ಇದಕ್ಕೆ ಡೀಕಯ್ಯ ಪೂಜಾರಿ ಮತ್ತು ಗಣೇಶ್ ಸಂತೃಪ್ತರಾಗದೆ ಮತ್ತಷ್ಟು ಗದ್ದಲ ಎಬ್ಬಿಸಿದರು. ಈ ವೇಳೆ ಪ್ರಶ್ನೆಗಳಿಗೆ ಉತ್ತರಿಸುತ್ತಲೇ ಡಾ.ಶಿಶಿರಾ ಕುಸಿದು ಬಿದ್ದಿದ್ದರು. ಶಿಶಿರ ಅವರು ತಲೆ ತಿರುಗಿ ಬಿದ್ದ ಬಳಿಕ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಗರ್ಭಪಾತವಾಗಿರುವುದು ಬೆಳಕಿಗೆ ಬಂದಿದೆ. ಬಳಿಕ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸದ್ಯ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ತಿಳಿದು ಬಂದಿದೆ.


ಗ್ರಾಮಸಭೆಯಲ್ಲಿ ವೈದ್ಯಾಧಿಕಾರಿಗೆ ಇಲ್ಲಸಲ್ಲದ ಪ್ರಶ್ನೆ:

ಗ್ರಾಮಸಭೆಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಸಭೆಗಳಾಗುತ್ತಿರುವುದು ಬಹಳ ಬೇಸರದ ಸಂಗತಿ. ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳುವುದಲ್ಲದೇ, ಅಧಿಕಾರಿಗಳಿಗೆ ವೃಥಾ ತೊಂದರೆ ಕೊಡುವ ಪ್ರಯತ್ನಗಳಾಗುತ್ತಿವೆ. ಗೋಳಿತ್ತೊಟ್ಟಿನಲ್ಲಿ ನಡೆದಿದ್ದ ಯುವತಿ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ಗ್ರಾಮಸಭೆಯಲ್ಲಿ ಸುಮಾರು‌ 40 ನಿಮಿಷ, ಜಿಲ್ಲೆಯ ಪ್ರಸಿದ್ಧ ವೈದ್ಯಾಧಿಕಾರಿಯೋರ್ವರಿಗೆ ಹಿಂಸೆ ನೀಡಲಾಗಿದೆ. ಇದರಿಂದ ಅವರು ತಲೆತಿರುಗಿ ಬಿದ್ದು, ಗರ್ಭಪಾತವಾಗಿದೆ. ಈಗಲೂ ಅವರು ವೆಂಟಿಲೇಟರಲ್ಲೇ ಇದ್ದಾರೆ. ಗ್ರಾಪಂ ಅಧ್ಯಕ್ಷರು, ಚರ್ಚಾ ನಿಯಂತ್ರಣಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದೇನೆ.

ಡಾ. ದೀಪಕ್ ರೈ, ಅಧ್ಯಕ್ಷರು, ದ.ಕ. ಜಿಲ್ಲಾ ಶಾಖೆ, ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ

ತನ್ನ ಮಾಜಿ ಪ್ರಿಯಕರನನ್ನು ವಶೀಕರಣ ಮಾಡಿಕೊಳ್ಳಲು 8.2 ಲಕ್ಷ ರೂಪಾಯಿ ಕಳೆದುಕೊಂಡಳೋರ್ವ ಯುವತಿ

Posted by Vidyamaana on 2024-01-24 06:34:18 |

Share: | | | | |


ತನ್ನ ಮಾಜಿ ಪ್ರಿಯಕರನನ್ನು ವಶೀಕರಣ ಮಾಡಿಕೊಳ್ಳಲು 8.2 ಲಕ್ಷ ರೂಪಾಯಿ ಕಳೆದುಕೊಂಡಳೋರ್ವ ಯುವತಿ

ಬೆಂಗಳೂರಿನ ಜಾಲಹಳ್ಳಿಯಲ್ಲಿ ಪ್ರಿಯಕರನನ್ನು ವಶೀಕರಣ ಮಾಡಿಕೊಳ್ಳಲು ಹೋಗಿ ಯುವತಿಯೊಬ್ಬಳು ₹8.2 ಲಕ್ಷ ಕಳೆದುಕೊಂಡ ಘಟನೆಯೊಂದು ನಡೆದಿದೆ.ಮೋಸ ಹೋದ ಯುವತಿ ಓರ್ವ ಯುವಕನನ್ನು ಪ್ರೀತಿ ಮಾಡುತ್ತಿದ್ದಳು. ಕಾರಣಾಂತರಗಳಿಂದ ಇಬ್ಬರ ನಡುವೆ ವೈಮನಸ್ಸು ಮೂಡಿ ದೂರ ಆಗಿದ್ದರು.ಬ್ರೇಕ್‌ ಅಪ್‌ನಿಂದ ನೊಂದಿದ್ದ ಯುವತಿ ತಾನು ಪ್ರೀತಿ ಮಾಡುತ್ತಿದ್ದ ಮಾಜಿ ಪ್ರಿಯಕರನನ್ನು ಮಾಟ ಮಂತ್ರ ಅಥವಾ ವಶೀಕರಣದ ಮೂಲಕ ಮತ್ತೆ ತನ್ನ ಬಳಿ ಸೆಳೆಯಲು ತನ್ನ ಸ್ನೇಹಿತನ ಸಹಾಯದಿಂದ ಆನ್‌ಲೈನ್ ಮೂಲಕ ವಶೀಕರಣ ಮಾಡುವ ಜ್ಯೋತಿಷಿಯೊಬ್ಬರನ್ನು ಸಂಪರ್ಕ ಮಾಡುತ್ತಾಳೆ. ಮೊದಲಿಗೆ ಆನ್‌ಲೈನ್ ಮುಖಾಂತರ ಭೇಟಿ ಮಾಡಿದ ಜ್ಯೋತಿಷಿ, ನಿನ್ನ ಪ್ರಿಯಕರ ನಿನಗೆ ಸಿಗುತ್ತಾನೆ. ಆದಷ್ಟು ಬೇಗ ಬಂದು ನಿನ್ನನ್ನು ತಲುಪುತ್ತಾನೆ ಎಂದು ಯುವತಿಯಲ್ಲಿ ಮೊದಲಿಗೆ ಭರವಸೆ ತುಂಬಿದ್ದಾನೆ. ಪ್ರಿಯಕರನನ್ನು ವಶೀಕರಣ ಮಾಡಿಕೊಳ್ಳಲು ಹಾಗೂ ಆತನ ಪೋಷಕರ ಮೇಲೆ ಮಾಟಮಂತ್ರದ ಆಚರಣೆಗಳನ್ನು ಮಾಡಲು ಡಿಸೆಂಬರ್ 22 ರಂದು ಮೊದಲ ಹಂತವಾಗಿ ₹2.4 ಲಕ್ಷ ಯುವತಿ ಆನ್‌ಲೈನ್​​ ಮೂಲಕ ಜ್ಯೋತಿಷಿಗೆ ಪಾವತಿ ಮಾಡಿದ್ದಾಳೆ. ಬಳಿಕ, ಪದೇ ಪದೆ ಹಣಕಾಸಿನ ಬೇಡಿಕೆ ಇಟ್ಟ ಸ್ವಾಮೀಜಿ, ಕೆಲವು ದಿನಗಳ ನಂತರ, ಹೆಚ್ಚುವರಿ ₹1.7 ಲಕ್ಷ ಪಾವತಿ ಮಾಡುವಂತೆ ಕೇಳುತ್ತಾನೆ.ನಿರಂತರವಾಗಿ ಹಣ ಕೇಳಿದಾಗ ಯುವತಿ ಹಣವಿಲ್ಲ ಎಂದಾಗ ಹಣ ನೀಡದಿದ್ದರೆ ನಿನ್ನ ಮಾಜಿ ಪ್ರಿಯಕರನಿಗೆ ಈ ವಿಷಯ ತಿಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಇದರಿಂದ ಹೆದರಿದ ಯುವತಿ ಜನವರಿ 10ರಂದು ₹4.1 ಲಕ್ಷ ನೀಡಿದ್ದಾಳೆ. ಹೀಗೆ ಯುವತಿ ಜ್ಯೋತಿಷಿಗೆ ಬರೋಬ್ಬರಿ ₹8.2 ಲಕ್ಷ ನೀಡಿದ್ದಾಳೆ. ಯುವತಿಯ ಈ ವಿಚಾರ ತಿಳಿದ ಪೋಷಕರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಜಾಲಹಳ್ಳಿ ಪೊಲೀಸ್​​​ ಠಾಣೆಯಲ್ಲಿ ಜ್ಯೋತಿಷಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆಯಾಗಿದೆ.

ಅಬುದಾಬಿ : 33 ಕೋಟಿ ಬಹುಮಾನ ಗೆದ್ದ ಕೇರಳದ ರಾಜೀವ್‌

Posted by Vidyamaana on 2024-02-11 08:46:14 |

Share: | | | | |


ಅಬುದಾಬಿ : 33 ಕೋಟಿ ಬಹುಮಾನ ಗೆದ್ದ ಕೇರಳದ ರಾಜೀವ್‌

ಅಬುಧಾಬಿ: ಯುಎಇ ಯಲ್ಲಿ ನೆಲೆಸಿರುವ ಕೇರಳದ ರಾಜೀವ್‌ ಅರಿಕ್ಕಾಟ್‌ ಅವರಿಗೆ ಅಬುದಾಬಿ ಲಾಟರಿಯಲ್ಲಿ ಬರೋಬ್ಬರಿ 33 ಕೋಟಿ ರೂ.(15 ಮಿಲಿಯನ್‌ ದಿರ್ಹಾಮ್‌) ಬಂಪರ್‌ ಬಹುಮಾನ ಬಂದಿದೆ. ಅವರು ತಮ್ಮ ಮಕ್ಕಳ ಜನ್ಮದಿನಕ್ಕೆ ಹೋಲುವ ನಂಬರಿನ ಲಾಟರಿ ಟಿಕೆಟ್‌ ಖರೀದಿಸಿದ್ದರು. ಇದು ಅವರಿಗೆ ಅದೃಷ್ಟವಾಗಿ ಮೊದಲ ಬಹುಮಾನ ಗಳಿಸುವಂತೆ ಮಾಡಿದೆ. ಅಬುಧಾಬಿಯ ಅರ್ಕಿಟೆಕ್ಚರ್‌ ಸಂಸ್ಥೆ ಅಲ್‌ ಐನ್‌ನಲ್ಲಿ ರಾಜೀವ್‌ ಕೆಲಸ ಮಾಡುತ್ತಿದ್ದಾರೆ. “ನಾನು 3 ವರ್ಷಗಳಿಂದ ಬಿಗ್‌ ಟಿಕೆಟ್‌ ಲಾಟರಿಗಳನ್ನು ಖರೀದಿಸುತ್ತಿದ್ದೇನೆ. ಮೊತ್ತವನ್ನು 19 ಜನರೊಂದಿಗೆ ಸಮಾನವಾಗಿ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.

ಪೊಲೀಸರ ಮಹತ್ವದ ಕ್ರಮ : ಇನ್ಮುಂದೆ ವಾಟ್ಸಪ್ ಮೂಲಕವೂ ದೂರು ನೀಡಬಹುದು!

Posted by Vidyamaana on 2023-06-16 04:21:50 |

Share: | | | | |


ಪೊಲೀಸರ ಮಹತ್ವದ ಕ್ರಮ : ಇನ್ಮುಂದೆ ವಾಟ್ಸಪ್ ಮೂಲಕವೂ ದೂರು ನೀಡಬಹುದು!

ಬೆಂಗಳೂರು :ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ಇನ್ಮುಂದೆ ವಾಟ್ಸಪ್ ಮೂಲಕವೂ ದೂರು ಪಡೆಯಲು ಮುಂದಾಗಿದ್ದಾರೆ.ಈ ಬಗ್ಗೆ ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು, ದಯಾನಂದ್, ನಮ್ಮ 112 ಉನ್ನತೀಕರಿಸಲು ಮೊದಲ ಹೆಜ್ಜೆ ಇರಿಸಲಾಗಿದೆ.ನಾಗರಿಕರು ತುರ್ತು ಸಂದರ್ಭದಲ್ಲಿ ಸಹಾಯಕ್ಕೆ ಹಾಗೂ ಇತರೆ ಯಾವುದೇ ರೀತಿಯ ದೂರುಗಳು ಇದ್ದರೆ ಇನ್ನು ಮುಂದೆ 9480801000 ವಾಟ್ಸ್‌ಆಯಪ್ ನಂಬರ್‌ಗೆ ಕಳುಹಿಸಬಹುದು ಎಂದು ಹೇಳಿದ್ದಾರೆ.

ನಮ್ಮ 112 ನಿಯಂತ್ರಣ ಕೊಠಡಿ‌ ಮೂಲಕ ಜನರ ದೂರು ಸ್ವೀಕರಿಸುತ್ತಿದ್ದ ಬೆಂಗಳೂರು ಪೊಲೀಸರು, ಇದೀಗ ವಾಟ್ಸ್‌ಆಯಪ್‌ ಮೂಲಕವೂ ದೂರು ಪಡೆಯಲು ಮುಂದಾಗಿರುವುದರಿಂದ ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.

Recent News


Leave a Comment: