ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ಮುದ್ದಾಗಿ ಬೆಳೆಸಿದ ಮಗನನ್ನೇ ಮದುವೆಯಾದ 53 ವರ್ಷದ ತಾಯಿ!

Posted by Vidyamaana on 2023-10-28 08:00:00 |

Share: | | | | |


ಮುದ್ದಾಗಿ ಬೆಳೆಸಿದ ಮಗನನ್ನೇ ಮದುವೆಯಾದ 53 ವರ್ಷದ ತಾಯಿ!

ನವದೆಹಲಿ : ಪ್ರೀತಿ ಅನ್ನೋದು ಜಗತ್ತಿನ ಬ್ಯೂಟಿಫುಲ್‌ ಫೀಲಿಂಗ್‌. ಯಾರಿಗೆ ಬೇಕಾದ್ರೂ ಯಾವಾಗ ಬೇಕಾದರೂ ಆಗಬಹುದು. ಆದರೆ, ರಷ್ಯಾದಲ್ಲಿ ತಾಯಿಯೊಬ್ಬಳು ತನ್ನ ಮಗನಿಂದಲೇ ಇಂಥ ಪ್ರೀತಿಯನ್ನು ಪಡೆದುಕೊಂಡಿದ್ದಾಳೆ. ತಾಯಿ-ಮಗನ ಸಂಬಂಧಕ್ಕೆ ಭಾರತದಲ್ಲಿ ಎಷ್ಟು ಪೂಜ್ಯ ಸ್ಥಾನವಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ.ಆದರೆ, ದೂರದ ರಷ್ಯಾದಲ್ಲಿ ತಾಯಿಯೊಬ್ಬಳು ತಾನು ಬೆಳೆಸಿದ ಮಗನನ್ನೇ ವಿವಾಹವಾಗಿದ್ದಾಳೆ. ಈ ಮದುವೆ ಈಗ ರಷ್ಯಾದಲ್ಲಿ ಸಾಕಷ್ಟು ಸುದ್ದಿಯಾಗಿದೆ. ತನಗಿಂತ 31 ವರ್ಷ ಕಿರಿಯವನಾದ ಮಲ ಮಗನನ್ನು ಮದುವೆಯಾಗಿದ್ದಾಳೆ. 53 ವರ್ಷದ ಸಂಗೀತಗಾರ್ತಿಯಾಗಿರುವವ ಅಸಿಲು ಚಿಜೆವ್ಸ್ಕಯಾ ಮಿಂಗಾಲಿಮ್ ತನ್ನ 22 ವರ್ಷದ ಮಲಮಗ ಡೇನಿಯಲ್ ಚಿಜೆವ್ಸ್ಕಿಯನ್ನು ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ರಷ್ಯಾದ ಮಕ್ಕಳ ಕಲ್ಯಾಣ ಇಲಾಖೆ ಕೂಡ ಈ ಮದುವೆಗೆ ಅಚ್ಚರಿ ವ್ಯಕ್ತಪಡಿಸಿದೆ. ರಷ್ಯಾದ ರಿಪಬ್ಲಿಕ್ ಆಫ್ ಟಾಟರ್ಸ್ತಾನ್‌ನ ಕಜಾನ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ದಂಪತಿಗಳು ಪರಸ್ಪರ ಒಟ್ಟಾಗಿ ಬಾಳುವುದಾಗಿ ಹಾಗೂ ಸಾಯುವವರೆಗೂ ಜೊತೆಯಾಗಿಯೇ ಇರುವುದಾಗಿ ಪ್ರಮಾಣ ಮಾಡಿ ಮದುವೆಯಾಗಿದ್ದಾರೆ.ಸ್ಥಳೀಯ ಮಾಧ್ಯಮಗಳಿಂದ ಪಡೆದ ಮಾಹಿತಿಯನ್ನು ನಂಬುವುದಾದರೆ, ಮಿಂಗಲಿಮ್ ಅವರು ಡೇನಿಯಲ್‌ಗೆ 13 ವರ್ಷವಾಗಿದ್ದಾಗಿನಿಂದಲೂ ಆತನನ್ನು ಸಾಕಿ ಬೆಳೆಸಿದ್ದಾಳೆ. ಅನಾಥಾಶ್ರಮದಲ್ಲಿ ಸಿಕ್ಕಿದ್ದ ಡೇನಿಯಲ್‌ನನ್ನು ಮಗನ ರೀತಿಯಲ್ಲಿ ದತ್ತು ಪಡೆದು ಸಾಕಿದ್ದಳು. ತನ್ನ ಮನೆಯಲ್ಲಿಯೇ ಮಿಂಗಲಿಮ್ ಡೇನಿಯಲ್‌ಗೆ ಸಂಗೀತ ಕಲಿಸುತ್ತಿದ್ದರು ಮತ್ತು ಆ ಸಮಯದಲ್ಲಿ ಅವರು ಕೇವಲ 13 ವರ್ಷ ವಯಸ್ಸಿನವರಾಗಿದ್ದರು ಎಂದು ಹೇಳಲಾಗಿದೆ.


ಆದರೆ, ಮಗನನ್ನೇ ಮದುವೆಯಾದ ಬಳಿಕ ಮಿಂಗಲಿಮ್‌ಗೆ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ರಷ್ಯಾದ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಿಂಗಲಿಮ್‌ ಇದ್ದ ಮನೆಯನ್ನು ಸೀಜ್‌ ಮಾಡಿದ್ದು, ಮಿಂಗಲಿಮ್‌ ಈಗಾಗಲೇ ದತ್ತು ಪಡೆದಿದ್ದ ಐದಕ್ಕೂ ಅಧಿಕ ಮಕ್ಕಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿ ನಾಲ್ವರು ಹೆಣ್ಣು ಮಕ್ಕಳಾಗಿದ್ದರೆ, ಇನ್ನೊಂದು ಗಂಡು ಮಗುವಾಗಿದೆ.ಮಿಂಗಲಿಮ್‌ ತಾನು ಬೆಳೆಸಿದ್ದ ಮಗನನ್ನೇ ಮದುವೆಯಾಗಿರುವ ಕಾರಣ ಅವರ ಉದ್ದೇಶ ಇಲ್ಲಿ ಅರ್ಥವಾಗಿದೆ. ಹಾಗಾಗಿ ಈ ಮಕ್ಕಳನ್ನು ಅವರು ಸರಿಯಾದ ರೀತಿಯಲ್ಲಿ ಬೆಳೆಸುವ ಸಾಧ್ಯತೆ ಕಡಿಮೆ ಎನ್ನುವ ಸಂಶಯ ನಮಗೆ ಬಂದಿದೆ ಎಂದು ತಿಳಿಸಿದ್ದಾರೆ.


ಡೇನಿಯಲ್‌ನನ್ನು ಮನೆಗೆ ನಾನು ಕರೆತಂದಾಗಲೇ ಆತನೊಂದಿಗೆ ರೊಮಾಂಟಿಕ್‌ ಸಂಬಂಧ ಬೆಳೆದಿತ್ತು ಎಂದು ಮಿಂಗಲಿಮ್‌ ಹೇಳಿದ್ದಾರೆ. ನಮ್ಮ ರಿಲೇಷನ್‌ಷಿಪ್‌ ಅತ್ಯಂತ ಪರ್ಫೆಕ್ಟ್‌. ನಾವಿಬ್ಬರೂ ಬೇರೆ ಬೇರೆಯಾಗಿ ಬದುಕೋದಕ್ಕೆ ಸಾಧ್ಯವೇ ಇಲ್ಲ. ಇನ್ನು ನಮ್ಮಿಬ್ಬರ ಯೋಚನೆಗಳು ಕೂಡ ಉತ್ತಮವಾಗಿ ಹೊಂದಿಕೆ ಆಗುತ್ತದೆ ಎಂದಿದ್ದಾರೆ.ಟಾಟರ್ಸ್ತಾನ್ ಟಿವಿ ಸ್ಟೇಷನ್‌ಗಾಗಿ ಚಲನಚಿತ್ರ ಯೋಜನೆಯ ಸಮಯದಲ್ಲಿ ಅನಾಥಾಶ್ರದಲ್ಲಿ ಡೇನಿಯಲ್‌ನನ್ನು ಭೇಟಿಯಾದ ನಂತರ ಮಿಂಗಾಲಿಮ್ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಪ್ರಾರಂಭಿಸಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರಸ್ತುತ, ಮಿಂಗಾಲಿಮ್ ಟಾಟರ್ಸ್ತಾನ್‌ನಿಂದ ಹೊರಡಲು ತೀರ್ಮಾನ ಮಾಡಿದ್ದಾರೆ. ತನ್ನ ಹೊಸ ಪತಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಲು ಬಯಸಿರುವ ಮಿಂಗಲಿಮ್‌, ಮಾಸ್ಕೋಗೆ ತೆರಳಿ ತನ್ನ ಐವರು ಇತರ ಮಕ್ಕಳೊಂದಿಗೆ ವಾಸ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ

ಡಿಪ್ಲೋಮಾ ಪದವೀಧರರಿಗೆ ಗುಡ್ ನ್ಯೂಸ್ : ಯುವನಿಧಿ ಜಾರಿಗೆ ಮುಹೂರ್ತ ಫಿಕ್ಸ್

Posted by Vidyamaana on 2023-11-10 12:54:44 |

Share: | | | | |


ಡಿಪ್ಲೋಮಾ ಪದವೀಧರರಿಗೆ ಗುಡ್ ನ್ಯೂಸ್ : ಯುವನಿಧಿ ಜಾರಿಗೆ ಮುಹೂರ್ತ ಫಿಕ್ಸ್

ಬೆಂಗಳೂರು : ರಾಜ್ಯ ಸರ್ಕಾರದ 5 ನೇ ಗ್ಯಾರಂಟಿ ಯೋಜನೆಯಾದ ಡಿಪ್ಲೋಮಾ, ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, 2024 ರ ಜನವರಿಯಿಂದ ಜಾರಿಗೊಳಿಸುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.


ಈ ಕುರಿತು ಮಾಹಿತಿ ನೀಡಿರುವ ಮಧು ಬಂಗಾರಪ್ಪ ಅವರು, ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಯನ್ನು ಜನವರಿಯಿಂದ ಜಾರಿಗೊಳಿಸಲಾಗುತ್ತಿದ್ದು, ಡಿಪ್ಲೋಮಾ ಪೂರ್ಣಗೊಳಿಸಿದವರಿಗೆ 1,500 ರೂ. ಪದವಿ ಪೂರ್ಣಗೊಂಡವರಿಗೆ 3,000 ರೂ. ಹಣವನ್ನು ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.


ಶಿಕ್ಷಣ ಮುಗಿಸಿ ಕೆಲಸ ಸಿಗದೆ ಮನೆಯಲ್ಲಿರುವ ವಿದ್ಯಾರ್ಥಿಗಳು ತಂದೆ-ತಾಯಿಗಳಿಗೆ ಹೊರೆಯಾಗದಿರಲೆಂದು ಹಾಗೂ ತಮ್ಮ ಸಣ್ಣ ಪುಟ್ಟ ಖರ್ಚುಗಳು, ಉದ್ಯೋಗ ಹುಡುಕಲು ಅನುಕೂಲವಾಗಲೆಂಬ ಉದ್ದೇಶದಿಂದ ಯುವನಿಧಿ ಯೋಜನೆಯನ್ನು ಜನವರಿಯಿಂದ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದ್ದಾರೆ.

ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ಬೆಳ್ತಂಗಡಿ ಪೊಲೀಸರಿಂದ ಆರೋಪಿ ಕೇಶವ ಪೂಜಾರಿ ಪೊಲೀಸ್ ವಶಕ್ಕೆ

Posted by Vidyamaana on 2023-11-13 21:40:41 |

Share: | | | | |


ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ಬೆಳ್ತಂಗಡಿ ಪೊಲೀಸರಿಂದ ಆರೋಪಿ ಕೇಶವ ಪೂಜಾರಿ ಪೊಲೀಸ್ ವಶಕ್ಕೆ

ಬೆಳ್ತಂಗಡಿ : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಬಾಲಕಿಯನ್ನು 5 ತಿಂಗಳ ಗರ್ಭಿಣಿಯಾಗಿಸಿದ ಪ್ರಕರಣದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.


ಬಂಧಿತ ಆರೋಪಿ ಧರ್ಮಸ್ಥಳ ಗ್ರಾಮದ ನಿವಾಸಿ ಕೇಶವ ಪೂಜಾರಿ (43) ಬಂಧಿತ.ಆರೋಪಿ ಬಾಲಕಿಯ ಮನೆಯವರಿಗೆ ಪರಿಚಯಸ್ಥನಾಗಿದ್ದ.ಹತ್ತನೇ ತರಗತಿಯ ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.


ಬಾಲಕಿ ಐದು ತಿಂಗಳ ಗರ್ಭಿಣಿಯಾದಾಗಲೇ ಮನೆಯವರಿಗೆ ಘಟನೆಯ ಬಗ್ಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಬಾಲಕಿಯ ತಾಯಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟೆರೇಸ್ ನಿಂದ ಬಿದ್ದು ಮುಖ್ಯ ಶಿಕ್ಷಕ ಸುಂದರ್ ಮೃತ್ಯು

Posted by Vidyamaana on 2024-05-03 20:42:57 |

Share: | | | | |


ಟೆರೇಸ್ ನಿಂದ ಬಿದ್ದು ಮುಖ್ಯ ಶಿಕ್ಷಕ ಸುಂದರ್ ಮೃತ್ಯು

ಉಡುಪಿ (ಮೇ 3): ಟೆರೇಸ್ ನಿಂದ ಬಿದ್ದು ಮುಖ್ಯ ಶಿಕ್ಷಕ ಸಾವನ್ನಪ್ಪಿರುವ ಘಟನೆ ಉಡುಪಿಯ ಅಜೆಕಾರು ಸಮೀಪದ ಎಣ್ಣೆಹೊಳೆಯಲ್ಲಿ ನಡೆದಿದೆ.

ಜುಲೈ 29 : ಶ್ರೀರಾಮ್ ನಿಂದ ಬೃಹತ್ ಮೇಳ

Posted by Vidyamaana on 2023-07-28 16:19:22 |

Share: | | | | |


ಜುಲೈ 29 : ಶ್ರೀರಾಮ್ ನಿಂದ ಬೃಹತ್ ಮೇಳ

ಪುತ್ತೂರು: ಶ್ರೀರಾಮ್ನಲ್ಲಿ ಜುಲೈ 29ರಂದು ಎಲ್ಲಾ ಮಾದರಿಯ ವಾಹನಗಳ ಖರೀದಿ ಹಾಗೂ ಮಾರಾಟದ ಬೃಹತ್ ಮೇಳ ನಡೆಯಲಿದೆ.

ಪುತ್ತೂರಿನ ನೆಹರುನಗರ ಮಾಸ್ಟರ್ ಪ್ಲಾನರಿ ಬಳಿಯ ಎಸ್.ಆರ್. ರೋಡಿನ ನಂದಾದೀಪ ಶಾರದಾ ಯಾರ್ಡಿನಲ್ಲಿ ಮೇಳ ಹಮ್ಮಿಕೊಳ್ಳಲಾಗಿದೆ. ಮೇಳಕ್ಕೆ ಪೂರಕ ಎಂಬಂತೆ ಶ್ರೀರಾಮ್ ಫೈನಾನ್ಸ್ ಸಂಸ್ಥೆ ವತಿಯಿಂದ ಸಾಲ ಸೌಲಭ್ಯದ ವ್ಯವಸ್ಥೆಯೂ ಇದೆ ಎಂದು ಪ್ರಕಟಣೆ ತಿಳಿಸಿದೆ.ಹೆಚ್ಚಿನ ವಿವರಗಳಿಗೆ ಈ ನಂಬರ್ ನ್ನು ಸಂಪರ್ಕಿಸಿ


 Kaushik - 9008920180, Sudhakar -96864 31133 Lakshmikanth-8073143248, Raksha -8448997061

Anil kumar -9845341253

ಉಳ್ಳಾಲ ದರ್ಗಾ ಚುನಾವಣೆ: ಆಡಳಿತ ಸಮಿತಿಗೆ 55 ಮಂದಿ ಆಯ್ಕೆ.

Posted by Vidyamaana on 2023-02-25 16:30:25 |

Share: | | | | |


ಉಳ್ಳಾಲ ದರ್ಗಾ ಚುನಾವಣೆ: ಆಡಳಿತ ಸಮಿತಿಗೆ 55 ಮಂದಿ ಆಯ್ಕೆ.

ಮಂಗಳೂರು, ಫೆ.25: ಉಳ್ಳಾಲ ಜುಮಾ ಮಸ್ಟಿದ್ ಮತ್ತು ಸೈಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ಆಡಳಿತ ಸಮಿತಿಗೆ ಶನಿವಾರ ಶಾಂತಿಯುತ ಚುನಾವಣೆ ನಡೆಯಿತು.

ನೋಂದಾಯಿತ 3,512 ಮತದಾರರ ಪೈಕಿ 2,935 ಮಂದಿಮತ ಚಲಾಯಿಸಿದರು. ಒಟ್ಟು ಶೇ.86.6 ಮತದಾನವಾಗಿದೆ ಎಂದು ದ.ಕ.ಜಿಲ್ಲಾ ವಕ್ಸ್ ಅಧಿಕಾರಿ ಹಾಗೂ ಚುನಾವಣಾಧಿಕಾರಿ ಸೈಯದ್ ಮೊಹಝಂ ಪಾಶಾತಿಳಿಸಿದ್ದಾರೆ.

ಕೋಟೆಪುರ, ಮೇಲಂಗಡಿ, ಮುಕ್ಕಚೇರಿ, ಅಳೇಕಲ, ಕಲ್ಲಾಪು ಹೀಗೆ 5 ಕರಿಯ (ವಲಯ)ಗಳಿಂದ ತಲಾ 11 ಮಂದಿಯಂತೆ 55 ಮಂದಿ ಸದಸ್ಯರ ಆಯ್ಕೆಗೆ 80 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತದಾನವು ಮುಕ್ಕಚೇರಿ- ಒಂಭತ್ತುಕೆರೆಯ ದ.ಕ.ಜಿ.ಪಂ. ಹಿ.ಪ್ರಾ. ಶಾಲೆಯಲ್ಲಿ ಬೆಳಗ್ಗೆ 8ರಿಂದ ಅಪರಾಹ್ನ 3ರವರೆಗೆ ನಡೆಯಿತು. ಸಂಜೆ 4ಕ್ಕೆ ಮತ ಎಣಿಕೆ ಆರಂಭಿಸಲಾಗಿದ್ದು, ರಾತ್ರಿ ಫಲಿತಾಂಶ ಪ್ರಕಟಿಸಲಾಯಿತು. ಮತದಾನ ಕೇಂದ್ರದ ವ್ಯಾಪ್ತಿಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಚುನಾಯಿತರಾದ ನೂತನ ಸದಸ್ಯರ ವಿವರ:-

ಮೇಲಂಗಡಿ ಕರಿಯ:

ಜಬ್ಬಾರ್ ಯು.ಎಂ., ನಝೀರ್ ಉಳ್ಳಾಲ ಬಾವಾ, ಮುಹಮ್ಮದ್ ಇಸಾಕ್, ಮೊಹಿದಿನಬ್ಬ ಅಶ್ರಫ್, ಅಬ್ದುಲ್ ಸಮದ್, ಇಬ್ರಾಹಿಂ ಶೌಕತ್, ಮೈನುದ್ದೀನ್, ಮುಹಮ್ಮದ್ ಬಾವಾ ಉಳ್ಳಾಲ, ಮುಹಮ್ಮದ್ ರಫೀಕ್, ಬಾವಾ ಗುಲಾಂ ಹನೀಫ್,

ಅಲೇಕಳ ಕರಿಯ:

ಮುಹಮ್ಮದ್ ಹನೀಫಾ, ಮುಹಮ್ಮದ್ ಫಾರೂಕ್ ಯು, ಅಶ್ರಫ್ ಅಹ್ಮದ್ ಯು.ಎಂ, ಅಬ್ದುಲ್ ಖಾದರ್ ಯು.ಎಂ, ಅಬ್ದುಲ್ ಹಮೀದ್ ಯು.ಡಿ., ಇಬ್ರಾಹಿಂ ಸಯ್ಯದ್, ಇರ್ಫಾನ್, ಮುಹಮ್ಮದ್ ಶಿಹಾಬುದ್ದೀನ್ ಪಿ., ಮುಹಮ್ಮದ್ ರಿಯಾಝ್, ಮುಸ್ತಫಾ, ಸಯ್ಯದ್ ಅಬ್ದುಲ್ ಝಿಯಾದ್. ಅಬೂಬಕ್ಕರ್, ಅಯ್ಯಬ್ ಯು .ಕೆ., ಖಲೀಲ್, ಅಹ್ಮದ್ ತಂಝೀಲ್ ಎಸ್, ಇಸ್ಮಾಯಿಲ್, ಖಲೀಲ್, ಫಾರೂಕ್ ಅಬೂಬಕ್ಕರ್ ಉಳ್ಳಾಲ, ಆಝಾದ್ ಇಸ್ಮಾಯಿಲ್, ನಾಝಿಂ ರಹ್ಮಾನ್ ಉಳ್ಳಾಲ, ಮಯ್ಯದ್ದಿ ಉಳ್ಳಾಲ ಬಸ್ತಿಪಡು, ಉಳ್ಳಾಲ ನಾಸಿರ್

ಕಲ್ಲಾಪು ಕರಿಯ:

ಮುಹಮ್ಮದ್ ಕೆ., ಫಾರೂಕ್ ಯು.ಎಚ್., ಮುಹಮ್ಮದ್ ಅರೀಫ್ ಯು., ಅಮೀರ್ ಅಹ್ಮದ್, ಮುಹಮ್ಮದ್ ಇಮ್ಮಿಯಾಝ್ ಹುಸೇನ್, ಮುಹಮ್ಮದ್ ಇಜಾಝ್, ಮುಹಮ್ಮದ್ ಮುಸ್ತಫ, ಮುಹಮ್ಮದ್ ಪಿ.ಎಚ್., ಮುಹಮ್ಮದ್ ಮುಸ್ತಫ, ಮೊಯ್ದಿನ್, ಪೊಸಹಿತ್ತು ಹಮೀದ್.

ಕೋಟೆಪುರ ಕರಿಯ: ಅಬ್ದುಲ್ ಅಝೀಝ್, ಅಬ್ದುಲ್ ಖಾದರ್, ಬಶೀರ್ ಯುಬಿಎಂ, ಮುಹಮ್ಮದ್ ರಫೀಕ್, ಹಸೈನಾರ್ ಯುಕೆ, ಹಸೈನಾರ್ ಯು, ಅಬೂಬಕ್ಕರ್, ಅಶ್ರಫ್ ಮುಹಮ್ಮದ್, ಮುಹಮ್ಮದ್ ಅಬ್ದುಲ್ ಖಾದರ್, ರಫೀಕ್ ಯುಎಂ, ತಹಸೀನ್ ಯುಟಿ.

Recent News


Leave a Comment: