ನೇರಳಕಟ್ಟೆ : ಪಂತಡ್ಕ ನಿವಾಸಿ ಬಾತಿಷಾ ನಿಧನ

ಸುದ್ದಿಗಳು News

Posted by vidyamaana on 2024-07-25 19:32:58 | Last Updated by Vidyamaana on 2024-07-25 19:32:58

Share: | | | | |


ನೇರಳಕಟ್ಟೆ : ಪಂತಡ್ಕ ನಿವಾಸಿ ಬಾತಿಷಾ ನಿಧನ

ಬಂಟ್ವಾಳ : ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಮೃತಪಟ್ಟಿದ್ದಾರೆ. 

 ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಅಟೋ ರಿಕ್ಷಾ ಮೆಕೇನಿಕ್ ಸಿ.ಎಚ್. ಹನೀಫ್ ಅವರ ಪುತ್ರ

ಬಾತಿಷಾ( 22) ಮೃತಪಟ್ಟವರು.ಮಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮೇನ್ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ವಾರದ ಹಿಂದೆ ಜ್ವರ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದ, ಗುರುವಾರ ಬೆಳಿಗ್ಗೆ ಜ್ವರ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃತಪಟ್ಟಿದ್ದಾರೆ.

 Share: | | | | |


ಗಮನಿಸಿ : ಪ್ರಧಾನಿ ನರೇಂದ್ರ ಮೋದಿಯವರನ್ನು ಸಂಪರ್ಕಿಸುವುದು ಹೇಗೆ : ಇಲ್ಲಿದೆ (PMO) ಕಚೇರಿ ಸಂಪರ್ಕ ವಿವರಗಳು

Posted by Vidyamaana on 2024-07-28 19:41:11 |

Share: | | | | |


ಗಮನಿಸಿ : ಪ್ರಧಾನಿ ನರೇಂದ್ರ ಮೋದಿಯವರನ್ನು ಸಂಪರ್ಕಿಸುವುದು ಹೇಗೆ : ಇಲ್ಲಿದೆ (PMO) ಕಚೇರಿ ಸಂಪರ್ಕ ವಿವರಗಳು

ನವದೆಹಲಿ : ನೀವು ನರೇಂದ್ರ ಮೋದಿ ಅಥವಾ ಪ್ರಧಾನಿ ಕಚೇರಿಯನ್ನು (ಪಿಎಂಒ) ಸಂಪರ್ಕಿಸಲು ಬಯಸಿದರೆ, ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.

ಪಿಎಂಒ ನವದೆಹಲಿಯ ಸೌತ್ ಬ್ಲಾಕ್ನಲ್ಲಿದೆ-110011. ನೇರ ಸಂವಹನಕ್ಕಾಗಿ, ನೀವು 011-23386447 ಗೆ ಫೋನ್ ಮೂಲಕ ಸಂಪರ್ಕಿಸಬಹುದು.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ

Posted by Vidyamaana on 2023-11-10 19:15:26 |

Share: | | | | |


ಬಿಜೆಪಿ ರಾಜ್ಯಾಧ್ಯಕ್ಷರಾಗಿ  ವಿಜಯೇಂದ್ರ ಆಯ್ಕೆ

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ  ಬಿ.ವೈ. ವಿಜಯೇಂದ್ರ ಆಯ್ಕೆಯಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸೀಟು ಗೆಲ್ಲದ ಹಿನ್ನಲೆಯಲ್ಲಿ ನಳೀನು ಕುಮಾರ್ ಕಟೀಲ್‌ ಅವರನ್ನು ಬದಲಾವಣೆ ಮಾಡಲಾಗುವುದು ಎನ್ನಲಾಗುತ್ತಿತ್ತು. ಯಾರಾಗ್ತಾರೆ ಬಿಜೆಪಿ ರಾಜ್ಯಾಧ್ಯಕ್ಷ ಎಂಬ ಬಗ್ಗೆಯೂ ಚರ್ಚೆಯಾಗುತ್ತಿತ್ತು. ಎಲ್ಲದಕ್ಕೂ ಈಗ ಫುಲ್ ಸ್ಟಾಪ್‌ ಬಿದ್ದಿದೆ. ಬಿಜೆಪಿ ಹೈಕಮಾಂಡ್‌ ಮಾಜಿ ಸಿಎಂ ಬಿ.ವೈ. ಯಡಿಯೂರಪ್ಪರ ಪುತ್ರ ಬಿ ಬೈ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿದೆ.


ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರ ಪುತ್ರ ವಿಜಯೇಂದ್ರ ಈ ಹಿಂದೆ ಭಾರತೀಯ ಜನತಾ ಯುವ ಮೋರ್ಚಾದ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಈ ಹಿಂದೆ ವಕೀಲರಾಗಿ ಸ್ವಲ್ಪ ಸಮಯ ಕೆಲಸ ಮಾಡಿದ್ದರು. ಸದ್ಯ ಶಿಕಾರಿ ಪುರದ ಶಾಸಕರಾಗಿದ್ದಾರೆ.

ಎಂಎಂವೈಸಿ ಇಫ್ತಾರ್ ಕೂಟ: ರಾಮಲಿಂಗ ರೆಡ್ಡಿ ಭಾಗಿ

Posted by Vidyamaana on 2023-04-14 21:57:18 |

Share: | | | | |


ಎಂಎಂವೈಸಿ ಇಫ್ತಾರ್ ಕೂಟ: ರಾಮಲಿಂಗ ರೆಡ್ಡಿ ಭಾಗಿ

ಬೆಂಗಳೂರು: ಎಂ.ಎಂ.ವೈ.ಸಿ. ಬೆಂಗಳೂರು ಇದರ ಹತ್ತನೇ ವಾರ್ಷಿಕೋತ್ಸವ ಪ್ರಯುಕ್ತ ಇಫ್ತಾರ್ ಕೂಟ ನಡೆಯಿತು.

ಸಮಾರಂಭಕ್ಕೆ ಆಗಮಿಸಿದ ಮಾಜಿ ಗೃಹ ಸಚಿವ ರಾಮಲಿಂಗ ರೆಡ್ಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಮುದಾಯಕ್ಕೆ ಕೆಟ್ಟ ಹೆಸರು ಬಾರದಂತೆ ನೋಡಿಕೊಳ್ಳಿ:

ಆಶೀರ್ವಾದ್ ಲಕ್ಕಿ ಸ್ಕೀಂನ 2ನೇ ಸೀಸನ್ ಆರಂಭಕ್ಕೆ ಸಿದ್ಧತೆ

Posted by Vidyamaana on 2024-08-20 00:43:01 |

Share: | | | | |


ಆಶೀರ್ವಾದ್ ಲಕ್ಕಿ ಸ್ಕೀಂನ 2ನೇ ಸೀಸನ್ ಆರಂಭಕ್ಕೆ ಸಿದ್ಧತೆ

ಪುತ್ತೂರು: ಜನಸಾಮಾನ್ಯರ ಪಾಲಿನ ಆಶೀರ್ವಾದ ಎಂದೇ ಪ್ರಖ್ಯಾತವಾಗಿರುವ ಆಶೀರ್ವಾದ್ ಎಂಟರ್ ಪ್ರೈಸಸ್ ನ 2ನೇ ಸೀಸನ್ ಶುಭಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.

ಮೊದಲ ಸೀಸನ್ ನಲ್ಲಿ ಗ್ರಾಮೀಣ ಭಾಗದ ಮೂಲೆಮೂಲೆಯ ಜನರನ್ನು ತಲುಪಿ, ನಂಬಿಕಾರ್ಹ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಪಡೆದಿರುವುದು ಆಶೀರ್ವಾದ್ ಎಂಟರ್ ಪ್ರೈಸಸ್ ನ ಹೆಚ್ಚುಗಾರಿಕೆ. ಲಕ್ಕಿ ಸ್ಕೀಂ ಮೂಲಕ ಜನರ ಮನಸೊಳಗಿದ್ದ ಆಕಾಂಕ್ಷೆಯನ್ನು ಪೂರೈಸುತ್ತಿರುವ ದರ್ಬೆ ಮೊಯಿದ್ದೀನ್ ಕಾಂಪ್ಲೆಕ್ಸ್’ನ ಪ್ರಥಮ ಮಹಡಿಯಿಂದ ಕಾರ್ಯಾಚರಿಸುತ್ತಿರುವ ಆಶೀರ್ವಾದ್ ಲಕ್ಕಿ ಸ್ಕೀಂ ಡ್ರಾ ಹೊಸ ಅಧ್ಯಾಯವನ್ನೇ ಬರೆಯಿತು.

ಇದೀಗ ಆಶೀರ್ವಾದ್ ಲಕ್ಕಿ ಸ್ಕೀಂನ 2ನೇ ಸೀಸನ್ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. 2ನೇ ಸೀಸನ್ ಶುಭಾರಂಭದ ಜೊತೆಗೆ ಲೋಗೋ ಅನಾವರಣ ಹಾಗೂ 160 ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸ್ವಾತಂತ್ರ್ಯೋತ್ಸವದಂದು ಲಾಡು, ಸ್ಕೂಲ್ ಬ್ಯಾಗ್ ವಿತರಣೆ:

ಸ್ವಾತಂತ್ರ್ಯೋತ್ಸವ ದಿನದಂದು ಆಶೀರ್ವಾದ್ ಎಂಟರ್ ಪ್ರೈಸಸ್ ನಿಂದ ಮಾದರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಾಲೂಕಿನ ಆಯ್ದ 6 ಶಾಲೆಗಳ 160 ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಿಸಿದ್ದು, ವಿವಿಧ ಶಾಲೆಗಳಿಗೆ ಸುಮಾರು 4 ಸಾವಿರದಷ್ಟು ಲಾಡು ವಿತರಣೆ ಮಾಡಲಾಗಿದೆ.


ದ.ಕ.ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ನೇಮಕ

Posted by Vidyamaana on 2024-03-11 07:24:23 |

Share: | | | | |


ದ.ಕ.ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ನೇಮಕ

ಪುತ್ತೂರು:ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ಗೆ ನೂತನ ಪದಾಧಿಕಾರಿಗಳ ನೇಮಕವಾಗಿದ್ದು ಪುತ್ತೂರು,ಉಪ್ಪಿನಂಗಡಿ ಮತ್ತು ಕಡಬದ ಐವರಿಗೆ ಅವಕಾಶ ನೀಡಲಾಗಿದೆ.ವಿಧಾನಪರಿಷತ್ ಶಾಸಕರೂ ಆಗಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅವರು ನೂತನ ಪದಾಧಿಕಾರಿಗಳನ್ನು ನೇಮಿಸಿ ಆದೇಶಿಸಿದ್ದಾರೆ.

ಹೊಸದಾಗಿ ಎಂಟು ಮಂದಿ ಸಕ್ರಿಯ ಕಾರ್ಯಕರ್ತರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ, ನಾಲ್ವರನ್ನು ಉಪಾಧ್ಯಕ್ಷರಾಗಿ ಮತ್ತು 8 ಮಂದಿಯನ್ನು  ಕಾರ್ಯದರ್ಶಿಗಳಾಗಿ ನೇಮಕಗೊಳಿಸಲಾಗಿದೆ. ಉಪ್ಪಳಿಗೆಯ ಕೃಷ್ಣಪ್ರಸಾದ್ ಆಳ್ವ, ಕಡಬದ ಸಿ.ಜೆ.ಸೈಮನ್, ಉಪ್ಪಿನಂಗಡಿಯ ಅಬ್ದುಲ್ ನಝೀರ್ ಮಠ, ಅಶ್ರಫ್ ಬಸ್ತಿಕಾರ್ ಅವರನ್ನು ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕಗೊಳಿಸಲಾಗಿದೆ.ಅರ್ಷದ್ ದರ್ಬೆ ಅವರನ್ನು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ನೇಮಕಗೊಳಿಸಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಕೃಷ್ಣಪ್ರಸಾದ್ ಆಳ್ವ ಅವರು ಈ ಹಿಂದೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಕೆಡಿಪಿ ನಾಮನಿರ್ದೇಶಿತ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.ಪ್ರಸ್ತುತ ಅವರು ಭೂನ್ಯಾಯ ಮಂಡಳಿ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.ಉಪ್ಪಿನಂಗಡಿಯ ಅಬ್ದುಲ್ ನಝೀರ್ ಮಠ ಅವರು ಕರ್ನಾಟಕ ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್‌ನ ಕಾರ್ಯದರ್ಶಿಯಾಗಿ, ಜಿಲ್ಲಾ  ಯುವ ಕಾಂಗ್ರೆಸ್‌ ಉಪಾಧ್ಯಕ್ಷ, ರಾಜ್ಯ ಇಂಟಕ್ ಕಾರ್ಯದರ್ಶಿಯಾಗಿ, ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷರಾಗಿ ಹುದ್ದೆ ನಿರ್ವಹಿಸಿದ್ದು, ಪ್ರಸ್ತುತ ಕೆಪಿಸಿಸಿ ಅಲ್ಪಸಂಖ್ಯಾತ ಘಟ ಕದ ರಾಜ್ಯ ಕಾರ್ಯದರ್ಶಿಯಾಗಿರುತ್ತಾರೆ. ಉಪ್ಪಿನಂಗಡಿಯ ಆಶ್ರಫ್ ಬಸ್ತಿಕಾರ್ ಅವರು ಉಪ್ಪಿನಂಗಡಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಪುತ್ತೂರು ತಾಲೂಕು ಕೆಡಿಪಿ ಸದಸ್ಯರಾಗಿ,  ಗಾಂಪಾ ಗೆಳೆಯರು ಸಂಘಟನೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‌ನ ವಕ್ತಾರ ಹಾಗೂ ಉಪಾಧ್ಯಕ್ಷರಾಗಿರುತ್ತಾರೆ.ಕಡಬ  ನಿವಾಸಿಯಾಗಿರುವ ಸೈಮನ್ ಸಿ.ಜೆ.ಅವರು ವಿದ್ಯಾರ್ಥಿಯಾಗಿದ್ದಾಗ ಎನ್.ಎಸ್.ಯು.ಐ. # ಕಾರ್ಯದರ್ಶಿಯಾಗಿ ಬಳಿಕ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ, ಜಿಲ್ಲಾ  ಕಾಂಗ್ರೆಸ್ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಇದೀಗ ಜಿಲ್ಲಾ ಪ್ರಧಾನ  ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಈ ಅರ್ಷದ್ ದರ್ಬೆ ಅವರು ಈ ಹಿಂದೆ ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸಹಿತ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು.

ಗೆಲುವಿನ ಹಿಂದೆ ಮಂಗಳೂರು ಜಿಲ್ಲಾಧಿಕಾರಿಯಾಗಿದ್ದವರ ಕೈವಾಡ

Posted by Vidyamaana on 2023-05-15 23:19:46 |

Share: | | | | |


ಗೆಲುವಿನ ಹಿಂದೆ ಮಂಗಳೂರು ಜಿಲ್ಲಾಧಿಕಾರಿಯಾಗಿದ್ದವರ ಕೈವಾಡ

ಬೆಂಗಳೂರು : ಕರ್ನಾಟಕದ ಈ ಬಾರಿಯ ವಿಧಾನಸಭಾ ಚುನಾವಣಾ ಫಲಿತಾಂಶಗಳು ರಾಜಕೀಯದ ಪ್ರಸ್ತುತತೆ, ಧ್ರುವೀಕರಣ ಅನೇಕ ನಿರೂಪಣೆಗಳು ಮತ್ತು ತೀರ್ಮಾನಗಳನ್ನು ಹುಟ್ಟುಹಾಕಿದ್ದು, ಕಾಂಗ್ರೆಸ್ ಪಕ್ಷದ ಹೋರಾಟದಲ್ಲಿ ಮಾಜಿ ಐಎಎಸ್ ಅಧಿಕಾರಿಯೊಬ್ಬರ ಪಾತ್ರವೂ ಗಮನಾರ್ಹವಾಗಿದೆ.ಕಾಂಗ್ರೆಸ್ ವಾರ್ ರೂಮ್ ಮುಖ್ಯಸ್ಥರಾಗಿ ಸಸಿಕಾಂತ್ ಸೆಂಥಿಲ್ ಅವರು ತನ್ನದೇ ಆದ ದೊಡ್ಡ ಕೊಡುಗೆಯನ್ನು ಕಾಂಗ್ರೆಸ್ ಗೆಲುವಿನಲ್ಲಿ ಕೊಟ್ಟು ಯಶಸ್ಸನ್ನು ಸಂಭ್ರಮಿಸಿದ್ದಾರೆ. ಸೆಂಥಿಲ್ ಮತ್ತು ಅನುಭವಿ ಯುವ ತಂಡ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಿ ಯಶಸ್ಸು ‘ಕೈ’ಗೆ ತಂದು ಕೊಟ್ಟಿದೆ.ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ತಮಿಳುನಾಡು ಮೂಲದ ಮಾಜಿ ಐಎಎಸ್ ಅಧಿಕಾರಿ (ಕರ್ನಾಟಕ ಕೇಡರ್) ಸಸಿಕಾಂತ್ ಸೆಂಥಿಲ್ ಅವರು ನಾಗರಿಕ ಸೇವೆಯನ್ನು ತೊರೆದು 2019 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು

New Categories
Recent News
Popular News


Leave a Comment: