ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ 4ರಿಂದ 6 ರೂಪಾಯಿ ಕಡಿತಕ್ಕೆ ಚಿಂತನೆ

Posted by Vidyamaana on 2023-12-31 04:55:39 |

Share: | | | | |


ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ 4ರಿಂದ 6 ರೂಪಾಯಿ ಕಡಿತಕ್ಕೆ ಚಿಂತನೆ

ನವದೆಹಲಿ: 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರವು ಶೀಘ್ರದಲ್ಲೇ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಇಳಿಕೆ ಮಾಡಲು ಚಿಂತನೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ. ಪ್ರತಿ ಲೀಟರ್‌ಗೆ 4 ರಿಂದ 6 ರೂಪಾಯಿಗಳವರೆಗೆ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ. ಸಾಮಾನ್ಯ ಜನರಿಗೆ ಬೆಲೆ ಏರಿಕೆ ಬಿಸಿ ತಗ್ಗಿಸಲು ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಚರ್ಚೆಗಳು ನಡೆಯುತ್ತಿವೆ. ಬೆಲೆ ಕಡಿತದ ಸಮಾನ ಹೊರೆಯನ್ನು ಸರ್ಕಾರ ಮತ್ತು ತೈಲ ಮಾರುಕಟ್ಟೆ ಕಂಪೆನಿಗಳಿಗೆ ವಹಿಸುವ ಪ್ರಸ್ತಾವನೆಯು ಪರಿಗಣನೆಯಲ್ಲಿದೆ ಎಂದು ಬಿಸಿನೆಸ್‌ ಟುಡೇ ವರದಿ ತಿಳಿಸಿದೆ. ಕೇಂದ್ರವು ಪ್ರತಿ ಲೀಟರ್‌ಗೆ 10 ರೂ.ವರೆಗೆ ಹೆಚ್ಚಿನ ಬೆಲೆ ಕಡಿತಕ್ಕೆ ಮುಂದಾಗಬಹುದು. ಇಂಧನ ಬೆಲೆ ಕಡಿತವು ನವೆಂಬರ್‌ನಲ್ಲಿ ಮೂರು ತಿಂಗಳ ಗರಿಷ್ಠ 5.55% ಕ್ಕೆ ಏರಿದೆ. ಪೆಟ್ರೋಲಿಯಂ ಸಚಿವಾಲಯ ಮತ್ತು ಹಣಕಾಸು ಸಚಿವಾಲಯ ಇತ್ತೀಚೆಗೆ ಚರ್ಚೆ ನಡೆಸಿದ್ದು, ಈ ಕುರಿತು ಪ್ರಧಾನಿ ಕಾರ್ಯಾಲಯಕ್ಕೆ ಆಯ್ಕೆಗಳನ್ನು ಸಲ್ಲಿಸಿದೆ. ಈ ಎರಡು ಸಚಿವಾಲಯಗಳು ಪ್ರತಿ ಹದಿನೈದು ದಿನಗಳಿಗೊಮ್ಮೆ ಇಂಧನ ಬೆಲೆಗಳ ಬಗ್ಗೆ ಚರ್ಚೆ ನಡೆಸುತ್ತವೆ. ವಾಹನ ಸವಾರರಿಗೆ ಗುಡ್ ನ್ಯೂಸ್: ಅಗ್ಗವಾಗಲಿದೆ ಪೆಟ್ರೋಲ್, ಡೀಸೆಲ್ ಬೆಲೆ! ಕಳೆದ ಮೂರು ತಿಂಗಳಿನಿಂದ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 70-80 ಡಾಲರ್‌ಗಳ ಮಧ್ಯೆ ಏರಿಳಿತವಾಗುತ್ತಿರುವ ಕಾರಣ ಕೇಂದ್ರ ಸರ್ಕಾರ ಇಂಧನ ಬೆಲೆ ಕಡಿತಕ್ಕೆ ಚಿಂತನೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರವು ಕೇಂದ್ರ ಅಬಕಾರಿ ಸುಂಕವನ್ನು ನವೆಂಬರ್ 2021 ಮತ್ತು ಮೇ 2022 ರಲ್ಲಿ ಎರಡು ಕಂತುಗಳಲ್ಲಿ ಕ್ರಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪ್ರತಿ ಲೀಟರ್‌ಗೆ ಒಟ್ಟು ರೂ 13 ಮತ್ತು ರೂ 16 ರಷ್ಟು ಕಡಿಮೆ ಮಾಡಿದೆ. ಅಬಕಾರಿ ಕಡಿತವನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸಲಾಯಿತು ಮತ್ತು ಇದರ ಪರಿಣಾಮವಾಗಿ ಚಿಲ್ಲರೆ ಬೆಲೆಗಳು ಕುಸಿಯಿತು. ಕಡಿಮೆ ಕಚ್ಚಾ ತೈಲ ಬೆಲೆಗಳು ಮೂರು ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪ್ (IOC), ಭಾರತ್ ಪೆಟ್ರೋಲಿಯಂ ಕಾರ್ಪ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ (HPCL) ದೊಡ್ಡ ಲಾಭವನ್ನು ನೀಡಿದೆ. ಗುರುವಾರ ತೈಲ ಬೆಲೆಗಳು ಸ್ಥಿರವಾಗಿವೆ. ಬ್ರೆಂಟ್ ಒಂದು ಬ್ಯಾರೆಲ್‌ಗೆ $80 ರ ಸಮೀಪದಲ್ಲಿ ವ್ಯಾಪಾರ ಮಾಡುವುದರೊಂದಿಗೆ ಹೆಚ್ಚಿನ ದಾಸ್ತಾನುಗಳು ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿನ ದಾಖಲೆಯ ಉತ್ಪಾದನೆಯು ಕೆಂಪು ಸಮುದ್ರದಲ್ಲಿನ ಜಾಗತಿಕ ವ್ಯಾಪಾರದ ಅಡೆತಡೆಗಳ ಮೇಲೆ ಆತಂಕವನ್ನು ಕಡಿಮೆ ಮಾಡಿದೆ.

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ, ವಿದೇಶಕ್ಕೆ ಹೋದರಾ ಸಂಸದ

Posted by Vidyamaana on 2024-04-28 05:58:23 |

Share: | | | | |


ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ,  ವಿದೇಶಕ್ಕೆ ಹೋದರಾ ಸಂಸದ

ಬೆಂಗಳೂರು : ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾದ ವಿಡಿಯೋ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (special investigation team) ರಚನೆಯಾಗಲಿದೆ. ರಾಜ್ಯ ಸರ್ಕಾರದಿಂದ (state government) ಇದೀಗ ಆದೇಶ ಹೊರಬಿದ್ದಿದೆ.ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ತುಣುಕುಗಳು ಈಗಾಗಲೇ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ (SIT) ತನಿಖೆ ನಡೆಸುವಂತೆ ಮಹಿಳಾ ಆಯೋಗದ (Womens Commission) ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ತನಿಖೆಗೆ ಸರ್ಕಾರ ವಿಶೇಷ ತನಿಖಾ ತಂಡ ರಚನೆ ಮಾಡಿದೆ. ಈ ಕುರಿತಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಟ್ವೀಟ್ ಮಾಡಿ, ಮಾಹಿತಿ ನೀಡಿದ್ದಾರೆ.

ಡಿ.03ರಂದು ನಡೆಯಲಿದೆ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮಾನ್ಯ ಜ್ಞಾನ ಪರೀಕ್ಷಾ ಸ್ಪರ್ಧೆ

Posted by Vidyamaana on 2023-11-24 11:50:09 |

Share: | | | | |


ಡಿ.03ರಂದು ನಡೆಯಲಿದೆ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮಾನ್ಯ ಜ್ಞಾನ ಪರೀಕ್ಷಾ ಸ್ಪರ್ಧೆ

ಪುತ್ತೂರು : ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯ ಸಂಯೋಜನೆಯಲ್ಲಿ, ಪುತ್ತೂರು ನಗರ ಆರಕ್ಷಕ ಉಪನಿರೀಕ್ಷಕರಾಗಿರುವ ಆಂಜನೇಯ ರೆಡ್ಡಿ ರವರ ಮಾರ್ಗದರ್ಶನದಲ್ಲಿ ಡಿಸೆಂಬರ್ 3ರಂದು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜು(ಸ್ವಾಯತ್ತ) ನಲ್ಲಿ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತೇಜಿಸುವ ದೃಷ್ಟಿಯಿಂದ ಮಾದರಿ ಸಾಮಾನ್ಯ ಜ್ಞಾನ ಪರೀಕ್ಷಾ ಸ್ಪರ್ಧೆಯು ನಡೆಯಲಿದೆ.

ಕೆ.ಎ.ಎಸ್,  ಎಫ್.ಡಿ.ಎ, ಎಸ್.ಡಿ.ಎ,  ಪಿ.ಎಸ್.ಐ, ಪಿ.ಸಿ, ಪಿ.ಡಿ.ಒ, ಬ್ಯಾಂಕಿಂಗ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿಯಲ್ಲಿರುವವರಿಗೆ ಪ್ರೇರಣೆ ನೀಡಲು ರಾಜ್ಯದಲ್ಲೇ ಪ್ರಥಮ ಬಾರಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಪಿಯುಸಿ / ಪದವಿ ಓದುತ್ತಿರುವ / ಓದು ಮುಗಿಸಿರುವ 40 ವರ್ಷದ ವರೆಗಿನ ಅಭ್ಯರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಮೊದಲು ನೋಂದಣಿ ಮಾಡಿದ 1000 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಋಣಾತ್ಮಕ ಅಂಕಗಳನ್ನು ಪರಿಗಣಿಸಲಾಗುತ್ತದೆ.100 ಅಂಕಗಳ ಪ್ರಶ್ನೆ ಪತ್ರಿಕೆ ಇದಾಗಿದ್ದು, ಬಹು ಆಯ್ಕೆಯ ಪ್ರಶ್ನೆಗಳಿರುತ್ತವೆ. ಕಾಲಾವಕಾಶ 90 ನಿಮಿಷ (ಬೆಳಿಗ್ಗೆ 11:00 ರಿಂದ 12:30). 

ಭಾಗವಹಿಸುವ ಅಭ್ಯರ್ಥಿಗಳು ಬೆಳಿಗ್ಗೆ 10:00 ರ ಒಳಗಾಗಿ ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಹಾಜರಿರತಕ್ಕದ್ದು. ನಂತರ ಬಂದವರಿಗೆ ಅವಕಾಶವಿಲ್ಲ. ಪರೀಕ್ಷಾ ಪತ್ರಿಕೆ ಕನ್ನಡ ಮಾಧ್ಯಮದಲ್ಲಿ ಇರುತ್ತದೆ. ಆಯೋಜಕರ ತೀರ್ಮಾನವೇ ಅಂತಿಮವಾಗಿರುತ್ತದೆ. ನೋಂದಣಿಗಾಗಿ ವಿದ್ಯಾಮಾತಾದ ಪುತ್ತೂರು / ಸುಳ್ಯ ಕಛೇರಿಗೆ 26 ನವೆಂಬರ್ 2023ರ ಒಳಗಾಗಿ ಭೇಟಿ ನೀಡಬಹುದು. ಇಲ್ಲವೇ ಇಲ್ಲಿ ನೀಡಿರುವ QR ಕೋಡ್ ಬಳಸಿ ನೋಂದಾಯಿಸಿಕೊಳ್ಳಬಹುದು.



 ಹೆಚ್ಚಿನ ಮಾಹಿತಿಗಾಗಿ ವಿದ್ಯಾಮಾತಾ  ಅಕಾಡೆಮಿ,ಹಿಂದೂಸ್ತಾನ್ ಕಾಂಪ್ಲೇಕ್ಸ್, ಎಪಿಯಂಸಿ ರಸ್ತೆ, ಪುತ್ತೂರು. ದ.ಕ

ಫೋನ್ ನಂ. :  9148935808 / 9620468869

ಸುಳ್ಯ ಶಾಖೆ :

ವಿದ್ಯಾಮಾತಾ ಅಕಾಡೆಮಿ

 ಟಿ.ಎ.ಪಿ.ಸಿ.ಎಂ.ಎಸ್  ಬಿಲ್ಡಿಂಗ್ ಕಾರ್ ಸ್ಟ್ರೀಟ್ ಸುಳ್ಯ ದ.ಕ 574239

PH: 9448527606 ನ್ನು ಸಂಪರ್ಕಿಸಬಹುದು.

10ನೇ ತರಗತಿ ವಿದ್ಯಾರ್ಥಿನಿ ಮೇಲೆ 9ನೇ ಕ್ಲಾಸ್ ಹುಡುಗನ ಪ್ರೀತಿ: ಲವ್ ನಿರಾಕರಿಸಿದ್ದಕ್ಕೆ ಚಾಕು ಇರಿತ

Posted by Vidyamaana on 2024-02-22 22:15:21 |

Share: | | | | |


10ನೇ ತರಗತಿ ವಿದ್ಯಾರ್ಥಿನಿ ಮೇಲೆ 9ನೇ ಕ್ಲಾಸ್ ಹುಡುಗನ ಪ್ರೀತಿ: ಲವ್ ನಿರಾಕರಿಸಿದ್ದಕ್ಕೆ ಚಾಕು ಇರಿತ

ಕಲಬುರ್ಗಿ: 10ನೇ ತರಗತಿ ಓದುತ್ತಿದ್ದಂತ ವಿದ್ಯಾರ್ಥಿನಿಯನ್ನು 9ನೇ ತರಗತಿ ಓದುತ್ತಿದ್ದಂತ ವಿದ್ಯಾರ್ಥಿಯೊಬ್ಬ ಒನ್ ಸೈಡ್ ಪ್ರೀತಿ ಮಾಡಿದ್ದಾನೆ. ಆದರೇ ಆತನ ಪ್ರೀತಿಯನ್ನು ಅಪ್ರಾಪ್ತ ಬಾಲಕಿ ನಿರಾಕರಿಸಿದ್ದಾಳೆ. ಇಷ್ಟಕ್ಕೇ ಸಿಟ್ಟಾದಂತ ಆತ, ಆಕೆ ತೆರಳುತ್ತಿದ್ದಂತ ಬಸ್ ಹಿಂಬಾಲಿಸಿ ಬೈಕ್ ನಲ್ಲಿ ತೆರಳಿ, ಕೆಳಗೆ ಇಳಿಸಿಕೊಂಡು ಚಾಕುವಿನಿಂದ ಇರಿದಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.ಕಲಬುರ್ಗಿ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಅಟ್ಟೂರು ಕ್ರಾಸ್ ಬಳಿಯಲ್ಲಿ ಇಂದು ಜಿಲ್ಲೆಯ ಜನತೆ ಬೆಚ್ಚಿ ಬೀಳಿಸುವಂತ ಘಟನೆ ನಡೆದಿದೆ. ಅಲ್ಲದೇ ಸಿನಿಮೀಯ ರೀತಿಯಲ್ಲಿ ನಡೆದಂತ ಘಟನೆಯಿಂದ ಜನರು ಆಘಾತಗೊಳ್ಳುವಂತೆ ಮಾಡಿದೆ. ಅದೇ 9ನೇ ತರಗತಿಯಲ್ಲಿ ಓದುತ್ತಿದ್ದಂತ ಬಾಲಕ, 10ನೇ ತರಗತಿಯಲ್ಲಿ ಓದುತ್ತಿದ್ದಂತ ಬಾಲಕಿಯನ್ನು ಪ್ರೀತಿಸುವಂತೆ ಮಾಡಿದ ಮನವಿ ನಿರಾಕರಿಸಿದಂತ ನಂತ್ರ ಆದಂತ ಘಟನೆಯಾಗಿದೆ.


9ನೇ ತರಗತಿ ಬಾಲಕ, 10ನೇ ತರಗತಿ ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸಿದರೂ, ಆತನ ಪ್ರೀತಿಯನ್ನು ಒಪ್ಪಿಕೊಂಡಿಲ್ಲ. ಇಷ್ಟಕ್ಕೇ ಕೋಪಗೊಂಡ ಆ ಅಪ್ರಾಪ್ತ ಬಾಲಕ, ಇಂದು ಶಾಲೆಗೆ ತೆರಳುತ್ತಿದ್ದಂತ ಬಾಲಕಿಯ ಬಸ್ ಅನ್ನು ಬೈಕ್ ನಲ್ಲಿ ಹಿಂಬಾಲಿಸಿ ಲವ್ ಏನು ಬೇಡ. ಬಾ ಮಾತನಾಡುವುದಿದೆ ಎಂಬುದಾಗಿ ಕೆಳಗೆ ಇಳಿಸಿಕೊಂಡಿದ್ದಾನೆ. ಆ ಬಳಿಕ ಬಾಲಕಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ಬಾಲಕನಿಂದ ಚಾಕು ಇರಿತಕ್ಕೆ ಒಳಗಾದಂತ ಬಾಲಕಿಯನ್ನು ಕೂಡಲೇ ಕಲಬುರ್ಗಿ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬಾಲಕಿಯ ಸ್ಥಿತಿ ಗಂಭೀರವಾಗಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಮೀನಿನ ತಲೆಗಳನ್ನು ತಿನ್ನುವ 98% ಜನರಿಗೆ ಈ ಸತ್ಯ ತಿಳಿದಿಲ್ಲ.! ಇಲ್ಲಿದೆ ನೋಡಿ ಅಚ್ಚರಿಯ ಮಾಹಿತಿ

Posted by Vidyamaana on 2024-07-28 17:03:48 |

Share: | | | | |


ಮೀನಿನ ತಲೆಗಳನ್ನು ತಿನ್ನುವ 98% ಜನರಿಗೆ ಈ ಸತ್ಯ ತಿಳಿದಿಲ್ಲ.! ಇಲ್ಲಿದೆ ನೋಡಿ ಅಚ್ಚರಿಯ ಮಾಹಿತಿ

ನವದೆಹಲಿ: ಮಾಂಸಾಹಾರಿಗಳು ಚಿಕನ್ ಮಟನ್‌ ಸೇರಿದಂತೆ ಇತರೆ ಮಾಂಸವನ್ನು ಸೇವಿಸುತ್ತಾರೆ, ಆದರೆ ಹೆಚ್ಚಿನ ಮಾಂಸಾಹಾರಿಗಳು ಮೀನು ಸೇವಿಸಲು ಬಯಸುತ್ತಾರೆ ಕೂಡ ಅಂದ ಹಾಗೇ ಮೀನು ಸೇವಿಸುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ.

ಮೀನು ತಿನ್ನುವುದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂದು ಎಲ್ಲರಿಗೂ ತಿಳಿದಿದೆ, ಆದರೆ ಮೀನಿನ ತಲೆ ನಿಮ್ಮ ದೇಹವು ಎಷ್ಟು ಪ್ರಯೋಜನ ಪಡೆಯುತ್ತದೆ ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ.

ಪುತ್ತೂರು : ಸುಲ್ತಾನ್ ಡೈಮಂಡ್ಸ್ - ಗೋಲ್ಡ್’ಗೆ ಉತ್ಸಾಹಿ ಅಭ್ಯರ್ಥಿಗಳು ಬೇಕಾಗಿದ್ದಾರೆ

Posted by Vidyamaana on 2024-02-09 11:54:53 |

Share: | | | | |


ಪುತ್ತೂರು : ಸುಲ್ತಾನ್ ಡೈಮಂಡ್ಸ್ - ಗೋಲ್ಡ್’ಗೆ ಉತ್ಸಾಹಿ ಅಭ್ಯರ್ಥಿಗಳು ಬೇಕಾಗಿದ್ದಾರೆ

ಪುತ್ತೂರು: ಶೀಘ್ರದಲ್ಲಿ ಶುಭಾರಂಭಗೊಳ್ಳಲಿರುವ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಚಿನ್ನಾಭರಣ ಸಂಸ್ಥೆಯ ಪುತ್ತೂರು ಮಳಿಗೆಗೆ ಉತ್ಸಾಹಿ ಅಭ್ಯರ್ಥಿಗಳ ಆಯ್ಕೆಗೆ ವಾಕ್-ಇನ್-ಇಂಟರ್ ವ್ಯೂ ಕರೆಯಲಾಗಿದೆ.

ಕಾಸರಗೋಡು ಮೂಲದ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಂಗಳೂರು, ಬೆಂಗಳೂರು, ಕಾಞಂಗಾಡ್, ಕಾಸರಗೋಡು, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಶಾಖೆಗಳನ್ನು ಹೊಂದಿದೆ. ಸೊಗಸಾದ ವಿನ್ಯಾಸ, ಸಾಟಿಯಿಲ್ಲದ ಶುದ್ಧತೆಯ ಮೂಲಕ ಚಿನ್ನದ ವೈವಿಧ್ಯತೆಯನ್ನು ಗ್ರಾಹಕರ ಮುಂದಿಡುವಲ್ಲಿ ಸಂಸ್ಥೆ ಈಗಾಗಲೇ ಯಶಸ್ವಿಯಾಗಿದೆ.

ಫೆ. 11ರ ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ದರ್ಬೆ ಸಂತ ಫಿಲೋಮಿನಾ ಕ್ಯಾಂಪಸಿನ ಫಿಲೋಮಿನಾ ಇಂಗ್ಲೀಷ್ ಮೀಡಿಯಂ ಸ್ಕೂಲಿನ ಹಾಲಿನಲ್ಲಿ ನೇರ ಸಂದರ್ಶನ ನಡೆಯಲಿದೆ.

ಹುದ್ದೆಗಳ ವಿವರ ಹೀಗಿದೆ:

ಸೇಲ್ಸ್ ಎಕ್ಸಿಕ್ಯೂಟಿವ್ – ಜ್ಯುವೆಲ್ಲರಿ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷ ಅನುಭವ ಹೊಂದಿರಬೇಕು. 

ಸೇಲ್ಸ್ ಟ್ರೈನಿ – 25 ವರ್ಷದೊಳಗಿನವರಿಗೆ ಆದ್ಯತೆ.

ಕಸ್ಟಮರ್ ರಿಲೇಷನ್ಸ್ ಎಕ್ಸಿಕ್ಯೂಟಿವ್ – ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ

ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ – ದ್ವಿಚಕ್ರ ವಾಹನ  ಹೊಂದಿರಲೇಬೇಕು.

ಪ್ಯಾಕಿಂಗ್ ಬಾಯ್

ಎಲೆಕ್ಟ್ರಿಷಿಯನ್

ಪ್ಯಾಂಟ್ರಿ ಬಾಯ್ಸ್

ಹೌಸ್ ಕೀಪರ್ಸ್

ಚಾಲಕರು

ಸೆಕ್ಯೂರಿಟಿ

ಅಡುಗೆಯವರು

ಹೆಚ್ಚಿನ ವಿವರಕ್ಕೆ ಸಂಪರ್ಕಿಸಿ: 9945474916, 9663748916



Leave a Comment: