ಮೊಬೈಲ್‌ ಬಳಕೆದಾರರೇ ಗಮನಿಸಿ : ನಿಮ್ಮ ಫೋನ್ ನಲ್ಲಿರುವ ಈ ಸಣ್ಣ ರಂಧ್ರದ ಉಪಯೋಗವೇನು ಗೊತ್ತಾ?

ಸುದ್ದಿಗಳು News

Posted by vidyamaana on 2024-07-25 13:38:46 |

Share: | | | | |


ಮೊಬೈಲ್‌ ಬಳಕೆದಾರರೇ ಗಮನಿಸಿ : ನಿಮ್ಮ ಫೋನ್ ನಲ್ಲಿರುವ ಈ ಸಣ್ಣ ರಂಧ್ರದ ಉಪಯೋಗವೇನು ಗೊತ್ತಾ?

      ನಾವೆಲ್ಲರೂ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳನ್ನು ಬಳಸುತ್ತೇವೆ, ಇದು ನಮ್ಮ ಜೀವನದ ಪ್ರಮುಖ ಭಾಗವಾಗಿದೆ, ಆದರೆ ನಿಮ್ಮ ಸ್ಮಾರ್ಟ್ಫೋನ್ ಅಡಿಯಲ್ಲಿ ಸಣ್ಣ ರಂಧ್ರವನ್ನು ನೀವು ಎಂದಾದರೂ ಗಮನಿಸಿದ್ದೀರಾ, ಆದರೆ ಅದು ಏನು ಬಳಸುತ್ತದೆ ಎಂಬುದರ ಬಗ್ಗೆ ನೀವು ಯೋಚಿಸಿದ್ದೀರಾ, ಜನರು ಇದನ್ನು ಮೈಕ್ರೊಫೋನ್ ಎಂದು ಪರಿಗಣಿಸುತ್ತಾರೆ, ಇದನ್ನು ಮೈಕ್ರೊಫೋನ್ ಗ್ರಿಲ್ ಎಂದು ಕರೆಯಲಾಗುತ್ತದೆ, ಇದು ನಿರ್ದಿಷ್ಟವಾಗಿ ಶಬ್ದ ರದ್ದುಗೊಳಿಸುವ ಮೈಕ್ರೊಫೋನ್ ಗಳನ್ನು ಒಳಗೊಂಡಿದೆ.ಶಬ್ದವನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಫೋನ್ ಕರೆಗಳ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ, ಅದರ ಬಗ್ಗೆ ಸಂಪೂರ್ಣ ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ

ಇದು ಹೇಗೆ ಕಾರ್ಯನಿರ್ವಹಿಸುತ್ತದೆ

ಶಬ್ದ ರದ್ದುಗೊಳಿಸುವ ಮೈಕ್ರೊಫೋನ್ ನಿಮ್ಮ ಫೋನ್ನ ಪ್ರಾಥಮಿಕ ಮೈಕ್ರೊಫೋನ್ನೊಂದಿಗೆ ಕಾರ್ಯನಿರ್ವಹಿಸುತ್ತದೆ, ಇದು ಸಾಮಾನ್ಯವಾಗಿ ಮುಂಭಾಗ ಅಥವಾ ಮೇಲ್ಭಾಗದಲ್ಲಿದೆ. ಕರೆ ಸಮಯದಲ್ಲಿ, ಮುಖ್ಯ ಮೈಕ್ರೊಫೋನ್ ನಿಮ್ಮ ಧ್ವನಿಯನ್ನು ಸೆರೆಹಿಡಿಯುತ್ತದೆ, ಶಬ್ದ ರದ್ದುಗೊಳಿಸುವ ಮೈಕ್ರೊಫೋನ್ ಸುತ್ತಮುತ್ತಲಿನ ಶಬ್ದಗಳನ್ನು ತೆಗೆದುಕೊಳ್ಳುತ್ತದೆ.

ಮೈಕ್ರೊಫೋನ್ ಗ್ರಿಲ್ ನ ಪ್ರಾಮುಖ್ಯತೆ

ಮೈಕ್ರೊಫೋನ್ ಗ್ರಿಲ್ ಶಬ್ದವನ್ನು ತೆಗೆದುಹಾಕುವುದು ಅಥವಾ ತಿರುಚುವುದು ನಿಮ್ಮ ಕರೆಯ ಗುಣಮಟ್ಟದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಈ ಘಟಕವಿಲ್ಲದೆ, ಹಿನ್ನೆಲೆ ಶಬ್ದಗಳು ಹೆಚ್ಚು ಸ್ಪಷ್ಟವಾಗುತ್ತವೆ, ಸಂವಹನವನ್ನು ಕಷ್ಟಕರವಾಗಿಸುತ್ತದೆ.ಎಲ್ಲೆಲ್ಲೂ ಇಲ್ಲ

ಎಲ್ಲಾ ಸ್ಮಾರ್ಟ್ಫೋನ್ಗಳು ಶಬ್ದ-ರದ್ದುಗೊಳಿಸುವ ಮೈಕ್ರೊಫೋನ್ ಅನ್ನು ಹೊಂದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ನಿಮ್ಮ ಸಾಧನವು ಈ ವೈಶಿಷ್ಟ್ಯವನ್ನು ಹೊಂದಿದೆಯೇ ಎಂದು ನಿಮಗೆ ಖಚಿತವಿಲ್ಲದಿದ್ದರೆ, ನಿಮ್ಮ ಫೋನ್ನ ಕೈಪಿಡಿಯನ್ನು ನೀವು ನೋಡಿಕೊಳ್ಳಬಹುದು.

 Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಜು 15

Posted by Vidyamaana on 2023-07-15 01:36:27 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಜು 15

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಜುಲೈ 15 ರಂದು.

ಬೆಳಿಗ್ಗೆ 10 ಗ್ರಾಪಂ ಉಪ ಚುನಾವಣೆಗೆ ಸಂಬಧಿಸಿದಂತೆ ನಿಡ್ಪಳ್ಳಿಯಲ್ಲಿ ಸಭೆ, ಬಳಿಕ ಆರ್ಯಾಪಿನಲ್ಲಿ ಸಭೆ 

ಉಳಿದಂತೆ ಖಾಸಗಿ ಕಾರ್ಯಕ್ರಮ

ಪಂಜಿಮೊಗರು ಜೋಡಿ ಕೊಲೆಯಾಗಿದ್ದ ಮನೆ ಮಾಲೀಕನಿಗೆ ಇರಿತ, ಆರೋಪಿ ಜಾವೇದ್ ಪರಾರಿ

Posted by Vidyamaana on 2024-04-07 10:42:15 |

Share: | | | | |


ಪಂಜಿಮೊಗರು ಜೋಡಿ ಕೊಲೆಯಾಗಿದ್ದ ಮನೆ ಮಾಲೀಕನಿಗೆ ಇರಿತ, ಆರೋಪಿ ಜಾವೇದ್ ಪರಾರಿ

ಉಳ್ಳಾಲ, ಎ.7: ಗುಜರಿ ವ್ಯಾಪಾರಿಯೋರ್ವನನ್ನ ತನ್ನ ಬಾಡಿಗೆ ಮನೆಗೆ ಕರೆಸಿ ಇರಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮಹಾತ್ಮ ಗಾಂಧಿ ರಂಗಮಂದಿರ ಬಳಿ ಶನಿವಾರ ಸಂಜೆ ನಡೆದಿದೆ.


ಮಂಗಳೂರಿನ‌ ಕಾವೂರು ಪಂಜಿಮೊಗರು ನಿವಾಸಿ ಹಮೀದ್ ಇರಿತಕ್ಕೊಳಗಾದ ಗುಜರಿ ವ್ಯಾಪಾರಿ. ಮೂಲತಃ ತಣ್ಣೀರುಬಾವಿ ನಿವಾಸಿ ಸದ್ರಿ ಉಳ್ಳಾಲದ ಮಹಾತ್ಮಗಾಂಧಿ ರಂಗಮಂದಿರದ ಬಳಿಯ ಬಾಡಿಗೆ ಮನೆಯಲ್ಲಿ ವಾಸವಿರುವ ಮೊಹಮ್ಮದ್ ಜಾವೇದ್ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪಿ.

ಜಾವೇದ್ ಇಂದು ಸಂಜೆ ಹಮೀದ್ ನನ್ನು ಹಣಕಾಸಿನ ವಿಚಾರದಲ್ಲಿ ಮಾತುಕತೆ ನಡೆಸಲು ಉಳ್ಳಾಲದ ತನ್ನ ಬಾಡಿಗೆ ಮನೆಗೆ ಕರೆಸಿಕೊಂಡಿದ್ದ. ಈ ವೇಳೆ ಹಮೀದ್ ಎದೆಯ ಭಾಗಕ್ಕೆ ಜಾವೇದ್ ಚೂರಿಯಿಂದ ಇರಿದಿದ್ದಾನೆ. ಗಂಭೀರ ಗಾಯಗೊಂಡ ಹಮೀದ್ ಹೇಗೋ ತಪ್ಪಿಸಿಕೊಂಡು ಉಳ್ಳಾಲದ ಖಾಸಗಿ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಹಮೀದ್ ಬಾಡಿಗೆ ಮನೆಯಿಂದ ತಪ್ಪಿಸಿ ಓಡಿದ ರಭಸಕ್ಕೆ ರಸ್ತೆಯಲ್ಲೆಲ್ಲಾ ರಕ್ತ ಹರಿದಿದೆ. ಗಂಭೀರ ಗಾಯಗೊಂಡಿದ್ದ ಹಮೀದ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುತ್ತೂರು ಮೂಲದ ತಹಶೀಲ್ದಾರ್ ಅಜಿತ್ ರೈ ರಾಯಚೂರಿನ ಸಿರಿವಾರಕ್ಕೆ ವರ್ಗಾವಣೆ

Posted by Vidyamaana on 2023-07-04 04:28:04 |

Share: | | | | |


ಪುತ್ತೂರು ಮೂಲದ ತಹಶೀಲ್ದಾರ್ ಅಜಿತ್ ರೈ ರಾಯಚೂರಿನ ಸಿರಿವಾರಕ್ಕೆ ವರ್ಗಾವಣೆ

ಬೆಂಗಳೂರು, ಜುಲೈ 3:  ಸರ್ಕಾರಿ ಸೇವೆ ಸಲ್ಲಿಸುವ ಅಧಿಕಾರಿ ಅಥವಾ ಯಾವುದೇ ನೌಕರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಎರಡಕ್ಕಿಂತ ಹೆಚ್ಚು ದಿನ ಬಂಧಿಸಿಟ್ಟಲ್ಲಿ ಆತನನ್ನು ಸರ್ಕಾರಿ ಸೇವೆಯಿಂದ ವಜಾ ಮಾಡಬಹುದು. ‌ಆದರೆ, ಲೋಕಾಯುಕ್ತಕ್ಕೆ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿರುವ ಭ್ರಷ್ಟ ತಹಸೀಲ್ದಾರ್ ಅಜಿತ್ ರೈಯನ್ನು ಬಂಧನದಲ್ಲಿ ಇರುವಾಗಲೇ ರಾಜ್ಯ ಸರ್ಕಾರ ಬೇರೆ ಕಡೆಗೆ ವರ್ಗಾವಣೆ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ. ‌


ಅಜಿತ್ ಕುಮಾರ್ ರೈ ಅವರನ್ನು ಬೆಂಗಳೂರು ಕೆಆರ್‌ ಪುರಂನಿಂದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿಗೆ ವರ್ಗಾವಣೆ ಮಾಡಿದ್ದು ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದರಿಂದ ಕಂದಾಯ ಇಲಾಖೆ ಅಜಿತ್ ರೈ ವಿರುದ್ಧ ಅಮಾನತು ಆದೇಶ ಹೊರಡಿಸಿತ್ತು. ಅಜಿತ್ ರೈ ಅಧಿಕಾರದಲ್ಲಿದ್ರೆ ಸಾಕ್ಷ್ಯನಾಶ, ಅಧಿಕಾರ ದುರ್ಬಳಕೆ, ತನಿಖೆಗೆ ಅಡ್ಡಿಯಾಗಬಹುದು ಎಂದು ಅಮಾನತಿನಲ್ಲಿಟ್ಟಿತ್ತು. ಅದ್ರೆ ಇದೀಗ ಅದೇ ಭ್ರಷ್ಟ ಅಧಿಕಾರಿ ಅಜಿತ್ ರೈಯನ್ನು ಬಂಧನದಿಂದ ಮುಕ್ತಗೊಳ್ಳುವ ಮೊದಲೇ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ. 


ಬೆಂಗಳೂರಿನ ತಹಸೀಲ್ದಾರ್ (ಗ್ರೇಡ್ 1) ಆಗಿದ್ದ ಅಜಿತ್ ರೈ ಬಳಿ ಅಪಾರ ಪ್ರಮಾಣದ ಬೇನಾಮಿ ಆಸ್ತಿ ಮತ್ತು ಅಕ್ರಮ ಹಣ ಪತ್ತೆಯಾಗಿತ್ತು. ಇದೀಗ ಗ್ರೇಡ್ -1 ಹುದ್ದೆಯಿಂದ ಗ್ರೇಡ್ - 2 ತಹಸೀಲ್ದಾರ್ ಆಗಿ ಹಿಂಬಡ್ತಿಗೊಳಿಸಿ ಸರ್ಕಾರ ವರ್ಗಾವಣೆ ಮಾಡಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಪತ್ತೆಯಾಗಿ ಸಾಕ್ಷ್ಯ ಸಮೇತ ಸಿಕ್ಕಿಬಿದ್ದಿದ್ರೂ ಸರ್ಕಾರ ಮಾತ್ರ ಅಮಾನತುಗೊಂಡ ತಹಸೀಲ್ದಾರರನ್ನ ತರಾತುರಿಯಲ್ಲಿ ರಾಯಚೂರಿಗೆ ವರ್ಗಾಯಿಸಿ ತನಿಖೆಗೆ ಅಡ್ಡಿ ಮಾಡದಂತಾಗಿದೆ

ರುದ್ರಪಾದೆಯಲ್ಲಿ ಪತ್ತೆಯಾಗಿದ್ದ ಚಪ್ಪಲಿ ವಸಂತ್ ಅವರದ್ದೇ | ವಸಂತ್ ಮೃತದೇಹ ಸೋಮೇಶ್ವರ ಸಮುದ್ರದಲ್ಲಿ ಪತ್ತೆ

Posted by Vidyamaana on 2023-04-27 12:11:12 |

Share: | | | | |


ರುದ್ರಪಾದೆಯಲ್ಲಿ ಪತ್ತೆಯಾಗಿದ್ದ ಚಪ್ಪಲಿ ವಸಂತ್ ಅವರದ್ದೇ | ವಸಂತ್ ಮೃತದೇಹ ಸೋಮೇಶ್ವರ ಸಮುದ್ರದಲ್ಲಿ ಪತ್ತೆ

ಪುತ್ತೂರು: ಪುರುಷರಕಟ್ಟೆಯ ಕುರೆಮಜಲು ಮೂಲದ ವಸಂತ ಅವರ ಮೃತದೇಹ ಸೋಮೇಶ್ವರ ಸಮುದ್ರದಲ್ಲಿ ಗುರುವಾರ ಸಂಜೆ ವೇಳೆ ಪತ್ತೆಯಾಗಿದೆ.

ರೈ ಚಾರಿಟೇಬಲ್ ಟ್ರಸ್ಟ್ ನಿಂದ ಕಾರ್ಮಿಕರ ಕಾರ್ಡ್ ವಿತರಣೆ

Posted by Vidyamaana on 2023-12-01 07:03:23 |

Share: | | | | |


ರೈ ಚಾರಿಟೇಬಲ್ ಟ್ರಸ್ಟ್ ನಿಂದ ಕಾರ್ಮಿಕರ ಕಾರ್ಡ್ ವಿತರಣೆ

ಪುತ್ತೂರು: ಬಡ ಜನರ ಸೇವೆಗೆಂದು ಕಳೆದ 11 ವರ್ಷಗಳಿಂದ ರೈ ಎಸ್ಟೇಟ್  ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ರಚನೆ ಮಾಡಲಾಗಿದ್ದು ಮುಂದೆಯೂ ಟ್ರಸ್ಟ್ ನ ಸಮಾಜ ಸೇವೆ ಮುಂದುವರೆಯುತ್ತದೆ ಎಂದು ಟ್ರಸ್ಟ್ ಅಧ್ಯಕ್ಷರಾದ ಶಾಸಕ ಅಶೋಕ್ ರೈ ಹೇಳಿದರು.

ಅವರು ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಾರ್ಮಿಕರಬಕಾರ್ಡ್ ವಿತರಿಸಿ ಮಾತನಾಡಿದರು.

ಒಟ್ಟು 5400 ಕಾರ್ಮಿಕ ಕಾರ್ಡುಗಳನ್ನು ವಿತರಿಸಲಾಗಿದೆ.‌ಕಾರ್ಮಿಕರಬಕಾರ್ಡು ನೀಡುವ ಮೂಲಕ ಬಡವರ ಬದುಕಿನಲ್ಲಿ‌ಭರವಸೆ ಮೂಡಿಸುವ ಕೆಲಸ ಟ್ರಸ್ಟಿನಿಂದ ನಡೆಯುತ್ತಿದೆ.

ಮುಂದಿನ‌ದಿನಗಳಲ್ಲಿ‌ಇನ್ನಷ್ಟು ಸಮಾಜ ಸೇವೆಗಳು ಟ್ರಸ್ಟ್ ವತಿಯಿಂದ ನಡೆಯಲಿದ್ದು ಜನರ ಸಹಕಾರವನ್ನು ಬಯಸುವುದಾಗಿ ಹೇಳಿದರು.

ವೇದಿಕೆಯಲ್ಲಿ ಟ್ರಸ್ಟ್ ಪ್ರಮುಖರಾದ ಕಾವು ಹೇಮನಾಥ ಶೆಟ್ಟಿ, ನಿಹಾಲ್ ಶೆಟ್ಟಿ ಕಲ್ಲಾರೆ, ಉಪಸ್ಥಿತರಿದ್ದರು. 

ರಚನಾ ರೈ ಸ್ವಾಗತಿಸಿ ಕಾರ್ಯಕ್ರಮ‌ನಿರೂಪಿಸಿದರು.

ನಾರಾಯಣ ನೇತ್ರಾಲಯ ಮುಖ್ಯಸ್ಥ - ಖ್ಯಾತ ನೇತ್ರ ತಜ್ಞ ಡಾ.ಕೆ ಭುಜಂಗ ಶೆಟ್ಟಿ ವಿಧಿವಶ

Posted by Vidyamaana on 2023-05-19 23:14:36 |

Share: | | | | |


ನಾರಾಯಣ ನೇತ್ರಾಲಯ ಮುಖ್ಯಸ್ಥ - ಖ್ಯಾತ ನೇತ್ರ ತಜ್ಞ ಡಾ.ಕೆ ಭುಜಂಗ ಶೆಟ್ಟಿ ವಿಧಿವಶ

ಬೆಂಗಳೂರು : ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಕೆ. ಭುಜಂಗ ಶೆಟ್ಟಿ (69) ಅವರು ಶುಕ್ರವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.ಇಂದು ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ಡಾ.ಭುಜಂಗ ಶೆಟ್ಟಿ ಅವರಿಗೆ ಸಂಜೆ ಮನೆಯಲ್ಲಿ ತೀವ್ರ ಹೃದಯಾಘಾತವಾಗಿದೆ. ಕೂಡಲೇ ಯಶವಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.ಡಾ.ಭುಜಂಗ ಶೆಟ್ಟಿ ನಿಪುಣ ಕಣ್ಣಿನ ಪೊರೆ ಮತ್ತು ಫಾಕೋಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸಕರಾಗಿದ್ದರು. 1978 ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡಿದ ಅವರು 1982 ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನ ಮಿಂಟೋ ಆಪ್ತಾಲ್ಮಿಕ್ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರದ ರೆಸಿಡೆನ್ಸಿ ಮಾಡಿದ್ದರು. ಅವರು ಎಂಬತ್ತರ ದಶಕದಲ್ಲಿ ಸಣ್ಣ ಕ್ಲಿನಿಕ್‌ನಲ್ಲಿ ನೇತ್ರಶಾಸ್ತ್ರವನ್ನು ಪ್ರಾರಂಭಿಸಿದರು. ನಾರಾಯಣ ನೇತ್ರಾಲಯವನ್ನು ಕರ್ನಾಟಕದ ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾಗಿ ಪರಿವರ್ತಿಸಿ ದ್ದರು.

Recent News


Leave a Comment: