ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಲೋಕಸಭೆ ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಶಾಕ್: ವಿಧಾನ​ ಪರಿಷತ್ ​ಸದಸ್ಯ ಸ್ಥಾನಕ್ಕೆ ತೇಜಸ್ವಿನಿ ಗೌಡ ರಾಜೀನಾಮೆ

Posted by Vidyamaana on 2024-03-27 14:09:19 |

Share: | | | | |


ಲೋಕಸಭೆ ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಶಾಕ್: ವಿಧಾನ​ ಪರಿಷತ್ ​ಸದಸ್ಯ ಸ್ಥಾನಕ್ಕೆ ತೇಜಸ್ವಿನಿ ಗೌಡ ರಾಜೀನಾಮೆ

ಬೆಂಗಳೂರು: ಬಿಜೆಪಿ ಪಕ್ಷದ ವಿಧಾನ ಪರಿಷತ್​ ಸದಸ್ಯೆ ತೇಜಸ್ವಿನಿಗೌಡ ರಮೇಶ್‌ಗೌಡ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.

ಸ್ಪೀಕರ್ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿದ ತೇಜಸ್ವಿನಿ ಗೌಡ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಹೊರಟ್ಟಿ ಅವರು, ಬಿಜೆಪಿಯ ತೇಜಸ್ವಿನಿಗೌಡ ರಮೇಶ್‌ಗೌಡ ರಾಜೀನಾಮೆ ನೀಡಿದ್ದಾರೆ. ವೈಯುಕ್ತಿಕ ಕಾರಣಗಳಿಂದ‌ ರಾಜೀನಾಮೆ ನೀಡುತ್ತಿದ್ದೇನೆ ಎಂದು‌ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.


ತೇಜಸ್ವಿನಿ ರಮೇಶ್ ಅವಧಿ‌ ಜೂನ್‌ವರೆಗೂ ಇತ್ತ, ಅವರೇ ಖುದ್ದು ಹಾಜರಾಗಿ ರಾಜೀನಾಮೆ ಕೊಟ್ಟ ಕಾರಣ ಸ್ವೀಕಾರ ಮಾಡಿದ್ದೇನೆ. ಯಾರೇ ಶಾಸಕರು ರಾಜೀನಾಮೆ ನೀಡಿದರೂ ನಮಗೆ ಮನವರಿಕೆ ಆದ ಮೇಲೆ ಸ್ವೀಕಾರ ಮಾಡೋದು, ಕೆಲವೊಮ್ಮೆ ಭಾವೋದ್ವೇಗಕ್ಕೆ ಒಳಗಾಗಿ, ಒತ್ತಡಗಳಿಗೆ ಒಳಗಾಗಿ ರಾಜೀನಾಮೆ ಕೊಡಬಹುದು. ಹೀಗಾಗಿ ಸ್ವಲ್ಪ ಸಮಯವಕಾಶ ನೀಡಿ ಆ ಬಳಿಕ ರಾಜೀನಾಮೆ ಸ್ವೀಕಾರ ಮಾಡ್ತೀವಿ ಎಂದು ಸ್ಪೀಕರ್ ತಿಳಿಸಿದ್ದಾರೆ.ಮೈಸೂರು ಕೊಡಗು ಕ್ಷೇತ್ರದಿಂದ ಟಿಕೆಟ್ ಮಿಸ್ ಆಗಿದ್ದಕ್ಕೆ ಬಿಜೆಪಿಗೆ ಗುಡ್ ಬೈ ಹೇಳಲು ತೇಜಸ್ವಿನಿಗೌಡ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕಿಯೇ ತಮ್ಮ ಎಂಎಲ್​ಸಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.

ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಆಶ್ರಯದಲ್ಲಿ ಮಾದಕ ವಸ್ತುಗಳ ಬಳಕೆ ವಿರುದ್ಧ ಕಾರ್ಯಾಗಾರ.

Posted by Vidyamaana on 2023-09-09 17:14:11 |

Share: | | | | |


ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಆಶ್ರಯದಲ್ಲಿ ಮಾದಕ ವಸ್ತುಗಳ ಬಳಕೆ ವಿರುದ್ಧ ಕಾರ್ಯಾಗಾರ.

ಬಂಟ್ವಾಳ :  ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಇದರ ಆಶ್ರಯದಲ್ಲಿ "ಮಾದಕ ವಸ್ತುಗಳ ಬಳಕೆ ವಿರುದ್ಧ ಕಾರ್ಯಾಗಾರ" ವು ಪಾಣೆಮಂಗಳೂರು ಸಾಗರ್ ಆಡಿಟೋರಿಯಂನಲ್ಲಿ  ಶುಕ್ರವಾರ  ನಡೆಯಿತು.

   

  ಕಾರ್ಯಾಗಾರವನ್ನು ಉದ್ಘಾಟಿಸಿದ ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರ್ಮಪ್ಪ ಎಂ.ಎನ್. ಮಾತನಾಡಿ ಮಕ್ಕಳ ಮೇಲೆ ಅತಿಯಾದ ಒತ್ತಡ, ಅತಿಯಾದ ನಿರೀಕ್ಷೆ ಅಥವಾ ಮಕ್ಕಳ ಮೇಲಿನ ಕಾಳಜಿ ರಹಿತ ಪೋಷಕತ್ವ  ಕೆಲವೊಮ್ಮೆ ಮಕ್ಕಳ ನೈಜ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ, ಮಗುವಿನ ಪರಿಪೂರ್ಣ ಬೆಳವಣಿಗೆಗೆ ಪೂರಕವಾದ ಪ್ರಾಥಮಿಕ ಶಿಕ್ಷಣ ನೀಡಬೇಕಾಗಿದೆ ಎಂದ ಅವರು ವ್ಯಸನಿಗಳಿಗೆ ಯಾವುದೇ ಧರ್ಮವಿಲ್ಲ ಅವರಿಗೆ ವ್ಯಸನವೇ ಧರ್ಮ, ವ್ಯಸನಮುಕ್ತ ಸಮಾಜದ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅತೀ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.


     ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪ್ರೇರಣಾ ಭಾಷಣಗಾರ ರಫೀಕ್ ಮಾಸ್ಟರ್ ಮಾತನಾಡಿ ದೇಶದ ಸಾಧಕರ ಪಟ್ಟಿಯಲ್ಲಿ ಇರಬೇಕಾದ ಯುವಜನತೆ ಕ್ಷಣಿಕ ಸುಖಕ್ಕಾಗಿ ಅಮಲು ಪದಾರ್ಥಗಳ ದಾಸರಾಗುತ್ತಿರುವುದು ದುರಂತ. ಇದನ್ನು ನಿವಾರಿಸಲು ಮನೆ ಮನೆಗಳಲ್ಲಿ ಮಾದಕ ವ್ಯಸನದ ಬಗ್ಗೆ ಜಾಗೃತಿ ಉಂಟಾಗಬೇಕಾದ ಅವಶ್ಯಕತೆ ಇದೆ ಎಂದರು.

 

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಯುಕ್ತ ಜಮಾಅತ್ ಅಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಇಂತಹ ಕಾರ್ಯಕ್ರಮಗಳು ಕಾಲದ ಅವಶ್ಯಕತೆಯಾಗಿದ್ದು ಪ್ರತೀ ಜಮಾಅತ್ ಮಟ್ಟದಲ್ಲಿ ಹಮ್ಮಿಕೊಳ್ಳುವರೇ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. 


ಬಂಟ್ವಾಳ ತಾಲೂಕು ಉಪ ತಹಸೀಲ್ದಾರ್ ನವೀನ್ ಕುಮಾರ್ ಬೆಂಜನಪದವು ಮಾತನಾಡಿದರು. ಸಂಯುಕ್ತ ಜಮಾಅತ್ ಕೋಶಾಧಿಕಾರಿ ಹಾಜಿ ಪಿ.ಎಸ್.ಅಬ್ದುಲ್ ಹಮೀದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


    ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಉಪಾಧ್ಯಕ್ಷ ಎಂ.ಎಸ್.ಮುಹಮ್ಮದ್ ಸ್ವಾಗತಿಸಿ,  ಕಾರ್ಯದರ್ಶಿ ನೋಟರಿ ಕೆ. ಅಬೂಬಕರ್ ವಿಟ್ಲ  ವಂದಿಸಿದರು. ಆಶಿಕ್ ಕುಕ್ಕಾಜೆ ಕಿರಾಅತ್ ಪಠಿಸಿದರು, ಜಮೀಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕಾದ್ಯಕ್ಷ ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ಪಿಯು ರಿಸಲ್ಟ್ ನಲ್ಲಿ ಅಮೋಘ ಪ್ರಗತಿ – ವಿಜ್ಞಾನ ವಿಭಾಗದಲ್ಲಿ 100 ಸಾಧನೆ

Posted by Vidyamaana on 2024-04-14 16:09:20 |

Share: | | | | |


ಪಿಯು ರಿಸಲ್ಟ್ ನಲ್ಲಿ ಅಮೋಘ ಪ್ರಗತಿ – ವಿಜ್ಞಾನ ವಿಭಾಗದಲ್ಲಿ 100 ಸಾಧನೆ

ಪುತ್ತೂರು: ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನ 2023-24ನೇ ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.99 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದ ಟ್ಯೂಷನ್ ತರಗತಿಯಲ್ಲಿ ದಾಖಲಾಗಿರುವ ಒಟ್ಟು 10 ವಿದ್ಯಾರ್ಥಿಗಳಲ್ಲಿ 7 ಮಂದಿ ಪ್ರಥಮ, 2 ಮಂದಿ ದ್ವಿತೀಯ ಹಾಗೂ ಓರ್ವ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಒಟ್ಟು 56 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ-1, ಪ್ರಥಮ ಶ್ರೇಣಿಯಲ್ಲಿ 21, ದ್ವಿತೀಯ ಶ್ರೇಣಿಯಲ್ಲಿ22 ಹಾಗೂ 11 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

ಕಲಾ ವಿಭಾಗದಲ್ಲಿ ಒಟ್ಟು 5 ವಿದ್ಯಾರ್ಥಿಗಳಲ್ಲಿ ಇಬ್ಬರು ಪ್ರಥಮ, ಒಬ್ಬರು ದ್ವಿತೀಯ ಹಾಗೂ ಒಬ್ಬರು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರುತ್ತಾರೆ ಎಂದು ಸಂಸ್ಥೆಯ ಪ್ರಾಂಶುಪಾಲೆ ಕೆ.ಹೇಮಲತಾ ಗೋಕಲ್ ನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ವಾಣಿಜ್ಯಶಾಸ್ತ್ರ/ಕಲಾ ವಿಭಾಗ

ದಿಶಾ-517, ಆಯಿಷಾತುಲ್ ಮಿಶ್ರಿಯಾ-479, ಹೇಮಂತ್ ಗೌಡ-459, ಚೈತಾಲಿ-447, ಗೌಡಪ್ಪ ಗೌಡ-425, ದರ್ಶನ್ ಸುಬ್ಬಯ್ಯ-413, ಧನುಷ್-410, ಧನುಷ್ ಪುಣಚ-410, ಮಹಮ್ಮದ್ ಯಝೀದ್-390, ಇಹ್‌ಶಾನ್-387, ಲಿಂಕಿತ್ ತಿಮ್ಮಯ್ಯ-386, ನಂದನಾ ಜೆ-352, ಮಹಮ್ಮದ್ ತಹಝ್ ಪಿ.-350, ಸಂಕೇತ್ ಪೂಜಾರಿ-349, ಮಹಮ್ಮದ್ ತಲ್‌ಹತ್-339, ಕುಮಾರಸ್ವಾಮಿ-335, ಶಂಬ್ರೀನಾ-327, ಯಶ್ವಂತ್-324, ನಿತಿನ್-320, ಲಿತಿಶ್-320.

ವಿಜ್ಞಾನ ಟ್ಯೂಷನ್ ವಿಭಾಗ :

ಅಶ್ವಿಜ-497, ಆಯಿಷಾ ಮುಶ್ರಿಫಾ-488, ಫಾತಿಮತ್ ಅಫೀದಾ-484, ಜೀವಿತಾ-450, ಇಬ್ರಾಹಿಂ ಅನಾಝ್-435, ಮಹಮ್ಮದ್ ರಿಝ್ವಾನ್-426, ಮಹಮ್ಮದ್ ಅನ್ಸಫ್-402, ಮಹಮ್ಮದ್ ಅಕ್ಮಲ್-337


ಬಂಟ್ವಾಳ : ಶೋಭಾಯಾತ್ರೆಯ ಮಾರ್ಗ ಬದಲಾವಣೆಗೆ ಒಪ್ಪದ ತಾಯಿ ಶಾರದೆ

Posted by Vidyamaana on 2023-09-10 20:10:13 |

Share: | | | | |


ಬಂಟ್ವಾಳ : ಶೋಭಾಯಾತ್ರೆಯ ಮಾರ್ಗ ಬದಲಾವಣೆಗೆ ಒಪ್ಪದ ತಾಯಿ ಶಾರದೆ

ಬಂಟ್ವಾಳ: ಬೇಂಕ್ಯ ಸುಭಾಶ್ ಯುವಕ ಮಂಡಲದ ಆಶ್ರಯದಲ್ಲಿ ಶ್ರೀ ಶಾರದಾ ಪೂಜಾ ಸಮಿತಿಯ ವತಿಯಿಂದ 97ನೇ ವರ್ಷದ ಶಾರದಾ ಪೂಜಾ ಕಾರ್ಯಕ್ರಮವು ಈ ಬಾರಿ ನಾಲ್ಕು ದಿನಗಳ ಕಾಲ ಸಜೀಪಮೂಡ ಬೇಂಕ್ಯ ಶಾಲೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಈ ಹಿನ್ನಲೆಯಲ್ಲಿ ಇಂದು (ಸೆ.10) ಮೂರು ಹಂತದ ಸಿದ್ಧಾತ ಸಭೆ ನಡೆಯಿತು. ಶಾರದ ನಗರ ಮಂದಿರದಲ್ಲಿ ನಡೆದ ಎರಡನೇ ಹಂತದ ಸಭೆಯಲ್ಲಿ ತಾಯಿ ಶಾರದೆಯ ಶೋಭಯಾತ್ರೆಯ ಕುರಿತಾಗಿ ಚರ್ಚೆ ನಡೆದುಸಭೆಯಲ್ಲಿದ್ದವರು ತಮ್ಮ ತಮ್ಮ ಸಲಹೆಗಳನ್ನು ನೀಡಿದರು.

ಈ ಸಭೆಯಲ್ಲಿ ಪ್ರಮುಖವಾಗಿ ಶೋಭಯಾತ್ರೆಯ ಮಾರ್ಗ ಬದಲಾವಣೆ ಕುರಿತಾಗಿಯೂ ಚರ್ಚೆ ಕೂಡ ನಡೆಯಿತು.

ಆ ಬಳಿಕ ಸಂಘದ ಹಿರಿಯರು ಹಾಗೂ ಅಧ್ಯಕ್ಷರು, ‘ತಾಯಿ ಶಾರದೆಗೆ ಶೋಭಯಾತ್ರೆಯ ಮಾರ್ಗ ಬದಲಾವಣೆಯ ಒಪ್ಪಿಗೆ ಇದೆಯಾ..?’ ಎಂದು ಮಂಗಳಾದೇವಿ ದೇವಸ್ಥಾನದಲ್ಲಿ ಗಣೇಶ್ ಐತಾಳ್ ಅವರಲ್ಲಿ ತಾಂಬೂಲ ಪ್ರಶ್ನೆ ಇರಿಸಿದ್ದು, ಈ ಸಂದರ್ಭ ತಾಯಿ ಶಾರದೆಗೆ ಮಾರ್ಗ ಬದಲಾವಣೆಯ ಒಪ್ಪಿಗೆ ಇಲ್ಲ ಎಂದು ಪ್ರಶ್ನೆಯಲ್ಲಿ ಕಂಡು ಬಂದಿದ್ದು,’ಇಷ್ಟು ವರ್ಷ ಯಾವ ಮಾರ್ಗದಲ್ಲಿ ತಾಯಿ ಶಾರದೆಯ ಮೆರವಣಿಗೆ ಸಾಗುತ್ತಿತ್ತೋ ಅದೇ ದಾರಿಯಲ್ಲೇ ನನ್ನ ಶೋಭಯಾತ್ರೆ ನಡೆಯಲಿ..’ ಎಂದು ತಾಯಿ ಶಾರದೆ ತಾಂಬೂಲ ಪ್ರಶ್ನೆಯಲ್ಲಿ ಸೂಚಿಸಿದ್ದಾಳೆ ಎಂದು ಕಂಡುಬಂತು.

ಹೀಗಾಗಿ ಇಂದು ನಡೆದ ಮೂರನೇ ಹಂತದ ಸಭೆಯಲ್ಲಿ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದ ಹಾಗೆ ಈ ಮೊದಲಿನಂತೆ ಶೋಭಯಾತ್ರೆ ನಡೆಯುತ್ತಿದ್ದ ಮಾರ್ಗದಲ್ಲೇ ಈ ಬಾರಿಯೂ ಶೋಭಾಯಾತ್ರೆ ಸಾಗಲಿ ಎಂದು ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ತೀರ್ಮಾನಿಸಿದ್ದಾರೆ.

ಈ ಸಂದರ್ಭ ಶಾರದಾ ಪೂಜಾ ಸಮಿತಿಯ ಅಧ್ಯಕ್ಷರಾದ ವಸಂತ್ ಕುಮಾರ್ ಬರ್ಕೆ, ಮಾಜಿ ಅಧ್ಯಕ್ಷರಾದ ಶ್ರೀನಾಥ ಶೆಟ್ಟಿ, ಪಂಚಾಯತ್ ಸದಸ್ಯರಾದ ಯೋಗೀಶ್ ಬೆಳ್ಚಾಡ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ದೇವಿ ಪ್ರಸಾದ್ ಪೂಂಜಾ, ಸದಾನಂದ ಶೆಟ್ಟಿ,ಪ್ರಹ್ಲಾದ್ ಬೇಂಕ್ಯ ಹಾಗೂ ಸಂಘದ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಈ ಘಟನೆ ದುಬೈನಲ್ಲಿ ಆಗ್ತಿದ್ರೆ ಕಥೆನೇ ಬೇರೆ ಇತ್ತು – ಕೊಲೆಗಾರನಿಗೆ ಮರಣ ದಂಡನೆಯಾಗ್ಬೇಕು

Posted by Vidyamaana on 2023-08-27 01:52:31 |

Share: | | | | |


ಈ ಘಟನೆ ದುಬೈನಲ್ಲಿ ಆಗ್ತಿದ್ರೆ ಕಥೆನೇ ಬೇರೆ ಇತ್ತು – ಕೊಲೆಗಾರನಿಗೆ ಮರಣ ದಂಡನೆಯಾಗ್ಬೇಕು

ಪುತ್ತೂರು: ದೇಶದಲ್ಲಿ ಕಾನೂನು ಕಠಿಣವಾಗಬೇಕಾದ ಅವಶ್ಯಕತೆಯಿದ್ದು ದುಬೈ ಮಾದರಿಯ ಕಾನೂನು ಇಲ್ಲಿ ಜಾರಿಗೆ ಬರಬೇಕಾದ ಅನಿವಾರ್ಯತೆಯಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಎರಡು ದಿನಗಳ ಹಿಂದೆ ಪುತ್ತೂರಿನಲ್ಲಿ ಪದ್ಮರಾಜ ಎಂಬಾತನಿಂದ ಕೊಲೆಯಾದ ವಿಟ್ಲ ಕುದ್ದುಪದವು ಸಮೀಪದ ಗೌರಿ ಅವರ ಮನೆಗೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರುನಮ್ಮಲ್ಲಿ ನಡೆದಂತಹ ಘಟನೆ ದುಬೈಯಲ್ಲಿ

ನಡೆಯುತ್ತಿದ್ದರೆ ಒಂದು ವಾರದಲ್ಲಿ ಇಲ್ಲವೇ ಹತ್ತು

ವಿಧಿಸುತ್ತಿದ್ದರು. ಕೊಲೆಗಾರರಿಗೆ,

ದಿನದೊಳಗೆ ಅವರಿಗೆ ಮರಣ ದಂಡನೆ ಶಿಕ್ಷೆ ಅತ್ಯಾಚಾರಿಗಳಿಗೆ ಅದೇ ರೀತಿಯ ಶಿಕ್ಷೆ ಇಲ್ಲೂ ಜಾರಿಯಾಗಬೇಕು. ಅಂತಹ ಶಿಕ್ಷೆ ಜಾರಿಯಾದಾಗಲೇ ಇಂತಹ ದುಷ್ಟ ಕೃತ್ಯಗಳನ್ನು, ಸಮಾಜ ವಿದ್ರೋಹಿ ಕೆಲಸಗಳನ್ನು ಮಟ್ಟ ಹಾಕಲು ಸಾಧ್ಯ ಎಂದು ಅವರು ಹೇಳಿದರುಕಾನೂನಿನ ಭಯ ಇಲ್ಲದೆ ಇರುವುದೇ ಎಂದು ಅನೇಕ ಕೆಟ್ಟ ಚಟುವಟಿಕೆಗಳಿಗೆ ಕಾರಣವಾಗುತ್ತಿದೆ. ಕೊಲೆ ಮಾಡಿ ಜೈಲಿಗೆ ಹೋದವರು ವಾಪಸ್ ಬಂದು ರಾಜಾರೋಷವಾಗಿ ತಿರುಗಾಡುತ್ತಾರೆ. ಅವರಿಗೆ ಸಮಾಜದಲ್ಲಿ ವಿಶೇಷ ಗೌರವ ಸಿಗುವ ಕಾರ್ಯಗಳು ಕೆಲವು ನಡೆಯುತ್ತಿದೆ. ಹಾಗಾಗಿ ಇಂತಹ ಕೃತ್ಯ ಎಸಗಿದವರಿಗೆ ಮರಣ ದಂಡನೆ ಶಿಕ್ಷೆ ಆಗಬೇಕು ಎಂದು ಅಶೋಕ್ ರೈ ಹೇಳಿದರು.


ಆರೋಪಿಗೆ ಹೇಗಾದರೂ ಶಿಕ್ಷೆ ಕೊಡಿಸಲೇಬೇಕು, ಆತನನ್ನು ಬಿಟ್ರೆ ಇನ್ನೂ ಹೀಗೆಯೇ ಮಾಡುತ್ತಾನೆ. ಇಷ್ಟು ಸಣ್ಣ ಹುಡುಗಿ ಸತ್ತ ಮೇಲೆ ಆತನೂ ಹೋಗಬೇಕು ಎಂದು ಶಾಸಕರಿಗೆ ಮೃತ ಗೌರಿಯವರತಾಯಿ ಸೀತಾ ಅವರು ಮನವಿ ಸಲ್ಲಿಸಿದರು. ಈ ವೇಳೆ ಅವರಿಗೆ ಉತ್ತರಿಸಿದ ಶಾಸಕರು, ನಮಲ್ಲಿರುವುದು ಹಳೆಯ ಕಾನೂನು. ಕೊಲೆ ಮಾಡಿದವರು 6 ತಿಂಗಳಲ್ಲಿ ಹೊರಗೆ ಬರುತ್ತಾರೆ.ಹಾಗೆ ಬರುವಾಗ ಪದ್ಮರಾಜೆ ಎಂದಿರುವವನು ಪದ್ಮಣ್ಣೆ ಆಗುತ್ತಾನೆ. ಇದು ನಮ್ಮ ಜನರ ಪರಿಸ್ಥಿತಿ. ಇದು ಕಡಿಮೆಯಾಗಬೇಕು. ಒಂದೆರಡು ಜನರಿಗೆ ಮರಣದಂಡನೆ ಶಿಕ್ಷೆಯಾದರೆ ಇದೆಲ್ಲವೂ ನಿಲ್ಲುತ್ತದೆ. ಕೆಲವೊಂದು ಬೇರೆ ಕೇಸ್‌ಗಳಲ್ಲಿ ಶಿಕ್ಷೆ ಆಗಲು 15 ವರ್ಷ ಬೇಕಾಗುತ್ತದೆ. ಆದರೆ ಇಂತಹ ಕೇಸ್‌ಗಳಲ್ಲಿ 1 ವರ್ಷದ ಒಳಗೆ ಶಿಕ್ಷೆ  ನೀಡಿದರೆ ಕಾನೂನಿನ 

ಬಗ್ಗೆ ಭಯ ಬರುತ್ತದೆ. ಕಾನೂನು ಮಾಡುವುದು ನಾವೇ ಜನಪ್ರತಿನಿಧಿಗಳು, ಕಾನೂನು ಬದಲಾವಣೆ ಮಾಡುವ ಅವಶ್ಯ ಕತೆ ಇದೆ ಎಂದು ಶಾಸಕರು ಉತ್ತರಿಸಿದರು


ಈ ಸಂದರ್ಭದಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಮಾಜಿ ಜಿ.ಪಂ. ಉಪಾಧ್ಯಕ್ಷ ಎಂ.ಎಸ್‌. ಮಹಮ್ಮದ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ಫಾರೂಕ್ ಪೆರ್ನೆ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಕಾರ್ಯದರ್ಶಿ ನಝೀರ್ ಮಠ, ಪುತ್ತೂರು ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಕಾಂಗ್ರೆಸ್‌ ಮುಖಂಡರಾದ ಪ್ರಹ್ಲಾದ್ ಬೆಳ್ಳಿಪ್ಪಾಡಿ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಪುತ್ತೂರು : ಸುಲ್ತಾನ್ ಡೈಮಂಡ್ಸ್ - ಗೋಲ್ಡ್ ಮಳಿಗೆಗೆ ಶಾಸಕ ಅಶೋಕ್‌ ಕುಮಾ‌ರ್ ರೈ ಭೇಟಿ

Posted by Vidyamaana on 2024-03-21 09:50:58 |

Share: | | | | |


ಪುತ್ತೂರು : ಸುಲ್ತಾನ್ ಡೈಮಂಡ್ಸ್ - ಗೋಲ್ಡ್ ಮಳಿಗೆಗೆ ಶಾಸಕ ಅಶೋಕ್‌ ಕುಮಾ‌ರ್ ರೈ ಭೇಟಿ

ಪುತ್ತೂರು: ಬಹುಭಾಷಾ ತಾರೆ ಪ್ರಿಯಾಮಣಿ ಅವರನ್ನು ಪುತ್ತೂರಿಗೆ ಕರೆಸಿಕೊಂಡು ಅದ್ದೂರಿಯಾಗಿ ಪುತ್ತೂರಿನ ಜನರ ಸೇವೆಗೆ ತೆರೆದುಕೊಂಡ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆಗೆ ಶಾಸಕ ಅಶೋಕ್‌ ಕುಮಾ‌ರ್ ರೈ ಭೇಟಿ ನೀಡಿದರು.

ಉದ್ಘಾಟನೆ ಸಂದರ್ಭ ಅಧಿವೇಶನ ನಡೆಯುತ್ತಿದ್ದ ಕಾರಣ ಭಾಗವಹಿಸಲು ಅಸಾಧ್ಯವಾಗಿತ್ತು. ಆದ್ದರಿಂದ ಇದೀಗ ಮಳಿಗೆಗೆ ಭೇಟಿ ನೀಡಿದರು.

ವಜ್ರ ಮತ್ತು ಚಿನ್ನದ ಆಭರಣಗಳ ವಿವಿಧ ವಿನ್ಯಾಸಗಳನ್ನು ಕಂಡ ಶಾಸಕ ಅಶೋಕ್ ಕುಮಾರ್ ರೈ ಅವರು ಮಳಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ರಾಂಚ್ ಮ್ಯಾನೇಜರ್ ಕೆ.ಎಸ್ ಮುಸ್ತಫಾ ಕಕ್ಕಿಂಜೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಹಮ್ರಾಝ್, ಪವನ್, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.



Leave a Comment: