ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ - ಇಂದು ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ

ಸುದ್ದಿಗಳು News

Posted by vidyamaana on 2024-07-09 08:24:41 |

Share: | | | | |


ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ - ಇಂದು ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ

ಪುತ್ತೂರು: ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಹರಾ ಅರ್ಥಮೂವರ್ ಮತ್ತು ಬೋರ್ ವೆಲ್ ಮಾಲಕ ಪಿ.ಎಂ ಅಶ್ರಫ್, ಕಾರ್ಯದರ್ಶಿಯಾಗಿ ಕೊಂಕಣ್ ಗ್ಯಾಸ್ ನಲ್ಲಿ 22 ವರ್ಷ ಸೀನಿಯರ್ ಎಕೌಂಟೆಂಟ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಿ.ವಸಂತ್ ಶಂಕರ್, ಕೋಶಾಧಿಕಾರಿಯಾಗಿ ಯುನೈಟೆಡ್ ಇನ್ಸೂರೆನ್ನ ನಿವೃತ್ತ ಉದ್ಯೋಗಿ ನವೀನ್‌ಚಂದ್ರ  ರವರು ಆಯ್ಕೆಯಾಗಿದ್ದಾರೆ.

ಉಳಿದಂತೆ ಜೊತೆ ಕಾರ್ಯದರ್ಶಿ ಯಾಗಿ ನವ್ಯಶ್ರೀ , ನಿಯೋಜಿತ ಅಧ್ಯಕ್ಷರಾಗಿ ಚಂದ್ರಹಾಸ ರೈ ಬಿ, ಉಪಾಧ್ಯಕ್ಷರಾಗಿ ಪ್ರದೀಪ್‌ ಪೂಜಾರಿ, ನಿಕಟಪೂರ್ವ ಅಧ್ಯಕ್ಷರಾಗಿ ಡಾ.ರಾಜೇಶ್ ಬೆಜ್ಜಂಗಳ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಜಯಪ್ರಕಾಶ್ ಎ.ಎಲ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಲೋಕೇಶ್

ಎಂ.ಎಚ್, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇತಕರಾಗಿ ಸನತ್ ರೈ, ಯೂತ್ ಸರ್ವಿಸ್ ನಿರ್ದೇಶಕರಾಗಿ ಜಗನ್ನಾಥ್ ಆರಿಯಡ್ಕ, ಸಾರ್ಜಂಟ್ ಎಟ್ ಆರ್ಮ್ಸ್ ಶಿವರಾಂ ಎಂ.ಎಸ್. ಚೀರ್‌ಮ್ಯಾನ್‌ಗಳಾಗಿ ಡಾ.ರಾಮಚಂದ್ರ ಕೆ(ವೆಬ್), ಡಾ.ನಮಿತಾ(ಪೋಲಿಯೋ ಪ್ಲಸ್),ಭಾರತಿ ಎಸ್.ರೈ(ಟೀಚ್), ಜಯಪ್ರಕಾಶ್ಅಮೈ(ಟಿಆ‌ರ್ ಎಫ್), ಲಾವಣ್ಯ  (ಮೆಂಬರ್‌ಶಿಪ್ ಡೆವಲಪ್‌ಮೆಂಟ್). ಪದ್ಮನಾಭ ಶೆಟ್ಟಿ(ಜಿಲ್ಲಾ ಪ್ರಾಜೆಕ್ಟ್), ಸಂತೋಷ್ ಶೆಟ್ಟಿ(ಕ್ರೀಡೆ), ಪ್ರಮೋದ್ ಕುಮಾರ್ ಕೆ.ಕೆ(ಸಾಂಸ್ಕೃತಿಕ), ಪ್ರದೀಪ್ ಬೊಳ್ಳಾರ್ (ಫೆಲೋಶಿಪ್), ಶಾಂತಕುಮಾರ್(ಹಾಜರಾತಿ ಸಮಿತಿ), ಮೊಹಮ್ಮದ್ ರಫೀಕ್ ದರ್ಜೆ (ಸಿಎಲ್‌ಸಿಸಿ), ಅಮಿತಾ ಶೆಟ್ಟಿ(ಎಥಿಕ್ಸ್), ಸಂತೋಷ್ ಶೆಟ್ಟಿ(ಕ್ಲಬ್ ಫೆಸಿಲಿಟೇಟರ್ )ರವರು ಆಯ್ಕೆಯಾಗಿದ್ದಾರೆ.

ಇಂದು ಪದ ಪ್ರದಾನ: ಜು.9 ರಂದು ಪರ್ಲಡ್ಕ-ಬೈಪಾಸ್ ಆಫ್ರಿ ಕಂಫರ್ಟ್‌ನಲ್ಲಿ ಕ್ಲಬ್‌ನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ ಜರಗಲಿದ್ದು, ರೋಟರಿ ಜಿಲ್ಲೆ 3181 ಇದರ ಪಿಡಿಜಿ ರಂಗನಾಥ್ ಭಟ್ ರವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಲಿದ್ದಾರೆ. ವಲಯ ಐದರ ಅಸಿಸ್ಟಂಟ್ ಗವರ್ನರ್ ಸೂರ್ಯನಾಥ ಆಳ್ವ, ವಲಯ ಸೇನಾನಿ ಮೊಹಮದ್ ರಫೀಕ್ ದರ್ಬೆ, ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುರೇಶ್ ಪಿ.ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

 Share: | | | | |


ಮೇ.9ರಿಂದ ಹಜ್ ಯಾತ್ರೆ ಪ್ರಾರಂಭ: ಬೆಂಗಳೂರಿನಿಂದ ತೆರಳಲಿರುವ ಮೊದಲ ವಿಮಾನಕ್ಕೆ ಸಿಎಂ ಚಾಲನೆ ಸಾಧ್ಯತೆ

Posted by Vidyamaana on 2024-05-02 07:19:40 |

Share: | | | | |


ಮೇ.9ರಿಂದ ಹಜ್ ಯಾತ್ರೆ ಪ್ರಾರಂಭ: ಬೆಂಗಳೂರಿನಿಂದ ತೆರಳಲಿರುವ ಮೊದಲ ವಿಮಾನಕ್ಕೆ ಸಿಎಂ ಚಾಲನೆ ಸಾಧ್ಯತೆ

ಬೆಂಗಳೂರು : ಮೇ.9 ರಿಂದ ಹಜ್ ಯಾತ್ರೆ ಪ್ರಾರಂಭವಾಗಲಿದ್ದು, ಬೆಂಗಳೂರಿನಿಂದ ತೆರಳುವ ಮೊದಲ ವಿಮಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.ದೇಶದಾದ್ಯಂತ ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, ರಾಜ್ಯದಲ್ಲಿ ಉಳಿದ 14 ಕ್ಷೇತ್ರಗಳ ಮತದಾನ ಪ್ರಕ್ರಿಯೆ ಮೇ.7 ರಂದು ನಡೆಯಲಿದೆ.ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂದರೆ ಮೇ.8 ರಂದು ಕಾರ್ಯಕ್ರಮ ಆಯೋಜಿಸಲು ಕರ್ನಾಟಕ ಹಜ್ ಸಮಿತಿ ಚಿಂತನೆ ನಡೆಸಿದೆ.

ಬೆಳ್ತಂಗಡಿ ರಿಕ್ಷಾ ಢಿಕ್ಕಿ: ಮೂರು ವರ್ಷದ ಮಗು ಕೌಶಿಕ್ ಮೃತ್ಯು

Posted by Vidyamaana on 2024-03-17 07:54:31 |

Share: | | | | |


ಬೆಳ್ತಂಗಡಿ ರಿಕ್ಷಾ ಢಿಕ್ಕಿ: ಮೂರು ವರ್ಷದ ಮಗು ಕೌಶಿಕ್ ಮೃತ್ಯು

ಬೆಳ್ತಂಗಡಿ: ಸೋಣಂದೂರು ಪಣಕಜೆಯಲ್ಲಿ ರಿಕ್ಷಾ ಢಿಕ್ಕಿ ಹೊಡೆದು ಮೂರು ವರ್ಷದ ಮಗು ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ.ಕೌಶಿಕ್ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ.


ಮುಂಡಾಡಿಯಲ್ಲಿ ಚಂದ್ರಶೇಖ‌ರ್ ಅವರ ಮನೆ ರಸ್ತೆಯ ಹತ್ತಿರವಿದ್ದು, ಮನೆಯಲ್ಲಿದ್ದ ಮಗು ಮನೆಯವರು ನೋಡದೆ ಓಡಿ ರಸ್ತೆಗೆ ಬಂದಿದೆ ಎನ್ನಲಾಗುತ್ತಿದ್ದು, ಈ ಸಂದರ್ಭ ಮಗುವಿಗೆ ರಿಕ್ಷಾ ತಾಗಿ ಗಂಭೀರ ಗಾಯಗೊಂಡಿದ್ದು, ಮಗುವನ್ನು ಕೂಡಲೇ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ದರೂ, ಯಾವುದೇ ಪ್ರಯೋಜನವಾಗದೆ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಷೇತ್ರದ ಮಾದರಿ ಶಾಸಕ

Posted by Vidyamaana on 2023-05-21 10:39:46 |

Share: | | | | |


ಕ್ಷೇತ್ರದ ಮಾದರಿ ಶಾಸಕ

ಪುತ್ತೂರು: ಬ್ಯಾನರ್‌ ಪ್ರಕರಣದಲ್ಲಿ ಪೊಲೀಸ್‌ ದೌರ್ಜನ್ಯಕ್ಕೊಳಗಾಗಿ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಕಾರ್ಯಕರ್ತರನ್ನು ಭೇಟಿಯಾದ ಶಾಸಕ ಅಶೋಕ್‌ ಕುಮಾರ್‌ ರೈ ಆರೋಗ್ಯ ವಿಚಾರಿಸಿ ಮಾತುಕತೆ ನಡೆಸಿ, ಏನು ಸಹಕಾರ ಬೇಕಿದ್ದರೂ ನನಗೆ ಹೇಳಿ ಎಂದು ಸಾಂತ್ವನ ಹೇಳಿದ್ದಾರೆ.

ನಮ್ಮಿಂದಾಗುವ ಎಲ್ಲಾ ಕೆಲಸವನ್ನು ನಾವು ಮಾಡಿದ್ದೇವೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ಕೈವಾಡವಿಲ್ಲ, ಏನೆಲ್ಲಾ ವಿಚಾರ ಆಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಪೊಲೀಸರು ಪ್ರಕರಣವನ್ನು ಅಲ್ಲಿಂದಲ್ಲಿಗೆ ಮುಗಿಸುವ ಯೋಚನೆಯಲ್ಲಿದ್ದರು. ನಿಮ್ಮಲ್ಲಿಗೂ ಕೆಲವರು ಸಂಧಾನಕ್ಕೆ ಬಂದಿದ್ದಾರೆ ಎನ್ನುವುದು ಗೊತ್ತಾಗಿದೆ. ಘಟನೆ ಬಗ್ಗೆ ತಿಳಿಯುತ್ತಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು‌ ಹೇಳಿದ್ದೆ. ಏನು ಸಹಕಾರ ಬೇಕಿದ್ದರೂ ನನಗೆ ಹೇಳಿ ಎಂದು ಶಾಸಕ ಅಶೋಕ್‌ ಕುಮಾರ್‌ ರೈ ಸಾಂತ್ವನದ ಮಾತನ್ನಾಡಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವಿಟ್ಲ- ಉಪ್ಪಿನಂಗಡಿ ಬ್ಲಾಕ್‌ ಅಧಕ್ಷ ಡಾ.ರಾಜಾರಾಂ ಕೆ ಬಿ ಮತ್ತಿತರರು ಉಪಸ್ಥಿತರಿದ್ದರು.

ಸಾರ್ವಜನಿಕರೇ ಗಮನಿಸಿ : ಗುಡುಗು-ಸಿಡಿಲು ಹಾನಿಯಿಂದ ಸಂರಕ್ಷಣೆಗೆ ಈ ಕ್ರಮಗಳನ್ನು ಅನುಸರಿಸಿ

Posted by Vidyamaana on 2024-04-20 20:42:12 |

Share: | | | | |


ಸಾರ್ವಜನಿಕರೇ ಗಮನಿಸಿ :  ಗುಡುಗು-ಸಿಡಿಲು ಹಾನಿಯಿಂದ ಸಂರಕ್ಷಣೆಗೆ ಈ ಕ್ರಮಗಳನ್ನು ಅನುಸರಿಸಿ

ಬೆಂಗಳೂರು : ಆರಂಭದ ಮಳೆಗಾಲದಲ್ಲಿ ಕಂಡುಬರಬಹುದಾದ ಗುಡುಗು-ಸಿಡಿಲು ಹಾನಿಯಿಂದ ಸಂರಕ್ಷಣೆಗೆ ಅಗತ್ಯ ಕ್ರಮ ಅನುಸರಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಕಂಡುಬರುವ ಮಳೆಗಾಲದ ಆರಂಭದ ಹಂತದಲ್ಲಿ ತೀವ್ರತರದ ಗುಡುಗು-ಸಿಡಿಲು ಕಂಡುಬರುವುದು ಸಾಮಾನ್ಯವಾಗಿದ್ದು, ಜೊತೆಗೆ ಬಿರುಸಾಗಿ ಗಾಳಿ ಸಹಿತ ಮಳೆ ಕಂಡುಬರುವುದು ವಾಡಿಕೆಯಾಗಿದೆ.

ರಜೆಯ ಮೋಜು ತಂದ ಆಪತ್ತು ಆಟವಾಡಲೆಂದು ತೆರಳಿದ್ದ ಬಾಲಕ ದುರ್ಮರಣ

Posted by Vidyamaana on 2024-01-15 20:15:09 |

Share: | | | | |


ರಜೆಯ ಮೋಜು ತಂದ ಆಪತ್ತು ಆಟವಾಡಲೆಂದು ತೆರಳಿದ್ದ ಬಾಲಕ ದುರ್ಮರಣ

ಬೆಳ್ತಂಗಡಿ : ರಜೆ ಇದ್ದ ಕಾರಣ ಪಕ್ಕದ ಮನೆಗೆ ಹೋದ ಬಾಲಕ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಏಳು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯ ಪಣಕಜೆಯಲ್ಲಿ ನಡೆದಿದೆ.


ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಪಣಕಜೆ ಮೊಹಮ್ಮದ್ ಹನೀಫ್ ಎಂಬವರ ಎರಡನೇ ಪುತ್ರ ಎರಡನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಅನಾನ್(7) ಎಂಬಾತ ಜ.15 ರಂದು ಸಂಜೆ ಮನೆಯ ಪಕ್ಕದ ಮಕ್ಕಳ ಜೊತೆ ಆಟ ಆಡಲು ಹೋಗಿದ್ದ. ಪಕ್ಕದ ಮನೆಯ ಬಾವಿ ಕಟ್ಟೆ ಇಲ್ಲದ ಬಾವಿಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಮನೆಯವರು ತಕ್ಷಣ ಮಗುವನ್ನು ಬಾವಿಯಿಂದ ತೆಗೆದು ಬಾಬಾ ಆಂಬುಲೆನ್ಸ್‌ ಮೂಲಕ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ಮುಂದಾದಾಗ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸರು ಸ್ಥಳ ಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.ಬೆಳ್ತಂಗಡಿ ತಾಲೂಕಿನ ಆಸ್ಪತ್ರೆಗೆ ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ಭೇಟಿ ನೀಡಿ ಮನೆಯವರಿಗೆ ಸ್ವಂತಾನ ಹೇಳಿದ್ದಾರೆ.

ಪುತ್ತೂರು : ಉತ್ತರ ಪ್ರದೇಶ ಸಿಎಂ ಯೋಗಿ ಆಗಮನ ಹಿನ್ನೆಲೆ : ವಾಹನ ಸಂಚಾರದಲ್ಲಿ ಬದಲಾವಣೆ

Posted by Vidyamaana on 2023-05-05 12:07:39 |

Share: | | | | |


ಪುತ್ತೂರು : ಉತ್ತರ ಪ್ರದೇಶ ಸಿಎಂ ಯೋಗಿ ಆಗಮನ ಹಿನ್ನೆಲೆ : ವಾಹನ ಸಂಚಾರದಲ್ಲಿ ಬದಲಾವಣೆ

ಪುತ್ತೂರು : ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರು ಪುತ್ತೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ

.ಸದರಿ ಆದೇಶವನ್ನು ಕಾರ್ಯರೂಪಕ್ಕೆ ತರುವಾಗ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಲಾಗಿದೆ.

ಬದಲಿ ರಸ್ತೆಯ ವಿವರ :



Leave a Comment: