ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು

ಸುದ್ದಿಗಳು News

Posted by vidyamaana on 2024-07-25 16:34:52 |

Share: | | | | |


ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಲಾಗುತ್ತದೆ. ಹೀಗಾಗಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕರ್ನಾಟಕ ವಿದ್ಯುತ್ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್ ಬುಧವಾರ ಮುನ್ನೆಚ್ಚರಿಕೆ ನೀಡಿದ್ದಾರೆ

ಕಾರ್ಗಲ್ ನ ಲಿಂಗನಮಕ್ಕಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ಸದ್ಯ 60 ಸಾವಿರ ಕ್ಯುಸೆಕ್ ಒಳಹರಿವು ಇದೆ.

Additional Image


ಜಲಾಶಯದ ಗರಿಷ್ಠ ಮಟ್ಟ 1819 ಅಡಿಗಳು ಇದ್ದು, ಜಲಾಶಯದಲ್ಲಿ ಈಗ 1801. 20 ಅಡಿ ನೀರಿನ ಸಂಗ್ರಹ ಇದೆ. ಮಳೆ ಹೆಚ್ಚಿರುವುದರಿಂದ ಜಲಾಶಯದ ಮಟ್ಟ ಶೀಘ್ರವೇ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ.


ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಬಹುದು ಎಂದು ಕೆಪಿಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

 Share: | | | | |


ಪುತ್ತೂರು ನಗರ ಠಾಣೆಯ ಎಎಸ್ ಐ ಸುಂದರ ಕಾನಾವು ನಿಧನ

Posted by Vidyamaana on 2024-07-22 11:26:34 |

Share: | | | | |


ಪುತ್ತೂರು ನಗರ ಠಾಣೆಯ ಎಎಸ್ ಐ ಸುಂದರ ಕಾನಾವು ನಿಧನ

ಮುಕ್ಕೂರು : ಪೆರುವಾಜೆ ಗ್ರಾಮದ ಕಾನಾವು ನಿವಾಸಿ, ಪುತ್ತೂರು ನಗರ ಠಾಣೆಯ ಎಎಸ್ ಐ ಸುಂದರ ಕಾನಾವು ಜು.22 ರಂದು ಬೆಳಗ್ಗೆ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.



ಮಂಗಳೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ

Posted by Vidyamaana on 2023-10-15 21:48:29 |

Share: | | | | |


ಮಂಗಳೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ

ಮಂಗಳೂರು: ಮಂಗಳೂರು ನಗರದ ಸುರತ್ಕಲ್ ಮತ್ತು ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ನಿರತರಾಗಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಚೇಳ್ಯಾರು ಪರಿಸರದಲ್ಲಿ ಹಾಗೂ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಫಳ್ನೀರು ಎಂಬಲ್ಲಿ ಮೊಬೈಲ್ ಫೋನ್ ನಲ್ಲಿ ಬೆಟ್ಟಿಂಗ್ ಅ್ಯಪ್ ಉಪಯೋಗಿಸಿಕೊಂಡು ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾಟಗಳ ಸೋಲು ಗೆಲುವಿನ ಬಗ್ಗೆ ಕ್ರಿಕೆಟ್ ಬೆಟ್ಟಿಂಗ್  ಜೂಜಾಡಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಅಕ್ರಮ ಬೆಟ್ಟಿಂಗ್ ದಂಧೆಯಲ್ಲಿ ನಿರತರಾಗಿರುವ ಖಚಿತ ಮಾಹಿತಿಯೊಂದಿಗೆ ಸಿಸಿಬಿ ಪೊಲೀಸರು ಎರಡು ಕಡೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.


ಹಳೆಯಂಗಡಿ ಬಳಿಯ ಚೇಳ್ಯಾರು ನಿವಾಸಿ ದೀಪಕ್(33), ಮರಕಡ  ಪಂಜಗುತ್ತು ಮನೆ ನಿವಾಸಿ ಸಂದೀಪ್ ಶೆಟ್ಟಿ(38) ಬಂಧಿತರು. ಇವರ ವಶದಿಂದ ಬೆಟ್ಟಿಂಗ್ ದಂಧೆಗೆ ಸಾರ್ವಜನಿಕರಿಂದ ಸಂಗ್ರಹಿಸಿದ ಒಟ್ಟು ರೂ. 31,000/- ನಗದು ಹಾಗೂ 4 ಮೊಬೈಲ್ ಫೋನ್ ಗಳನ್ನು ವಶಪಡಿಸಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಆಂದಾಜು ಮೌಲ್ಯ ರೂ. 1,11,000/- ಆಗಬಹುದು. ಈ ಬಗ್ಗೆ ಸುರತ್ಕಲ್ ಹಾಗೂ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಬೆಟ್ಟಿಂಗ್ ದಂಧೆಯಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.

ಅರುಣ್‌ ಕುಮಾರ್‌ ಪುತ್ತಿಲ-ಮಹಿಳೆ ಸಂಭಾಷಣೆ ವೈರಲ್‌

Posted by Vidyamaana on 2024-08-27 01:14:39 |

Share: | | | | |


ಅರುಣ್‌ ಕುಮಾರ್‌ ಪುತ್ತಿಲ-ಮಹಿಳೆ ಸಂಭಾಷಣೆ ವೈರಲ್‌

ಪುತ್ತೂರು: ಬಿಜೆಪಿ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಹಾಗೂ ಮಹಿಳೆಯೋರ್ವರ ನಡುವಿನ ರಾಜಕೀಯ ವಿಚಾರಕ್ಕೆ ಸಂಬಂಧಿಸಿರುವ ದೂರವಾಣಿ ಸಂಭಾಷಣೆ ಎನ್ನಲಾದ ಆಡಿಯೋ ತುಣುಕನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಇದರಲ್ಲಿ ಇರುವ ಕೆಲವು ಅಂಶಗಳು ಚರ್ಚೆಗೆ ಗ್ರಾಸವಾಗಿದೆ.ಸುಮಾರು 7.46 ನಿಮಿಷದ ಸಂಭಾಷಣೆ ಇದಾಗಿದ್ದು, ಪುತ್ತಿಲ ಅವರ ರಾಜಕೀಯ ನಿಲುವಿನ ಬಗ್ಗೆ ಮಹಿಳೆ ಗಂಭೀರ, ಹಾಸ್ಯಭರಿತ ಧಾಟಿಯಲ್ಲಿ ಪ್ರಶ್ನಿಸಿದ್ದು, ಇದಕ್ಕೆ ಪುತ್ತಿಲ ಎಂದು ಹೇಳಲಾಗಿರುವ ವ್ಯಕ್ತಿ ಜವಾಬು ನೀಡು ತ್ತಿರುವುದು ದಾಖಲಾಗಿದೆ. ಇಬ್ಬರೂ ಪರಿಚಿತರಾಗಿದ್ದು, ಬಹುವಚನದಲ್ಲೇ ಸಂಭಾಷಣೆ ನಡೆಸಿದ್ದಾರೆ. ಯಾವುದೇ ಕೆಟ್ಟ ಮಾತುಗಳು ವಿನಮಯವಾಗಿಲ್ಲ.

BREAKING : ಗುಂಡು ಹಾರಿಸಿಕೊಂಡು ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್ ಪ್ರಕಾಶ್ ಕಪಾಡೆ ಆತ್ಮಹತ್ಯೆ

Posted by Vidyamaana on 2024-05-15 21:00:12 |

Share: | | | | |


BREAKING : ಗುಂಡು ಹಾರಿಸಿಕೊಂಡು ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್ ಪ್ರಕಾಶ್ ಕಪಾಡೆ ಆತ್ಮಹತ್ಯೆ

ಜಾಮ್ನರ್ : ರಜೆ ಕಳೆಯಲು ಮನೆಗೆ ಬಂದಿದ್ದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್ `ಪ್ರಕಾಶ್ ಕಪಾಡೆ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ರಾತ್ರಿ ಜಾಮ್ನರ್ ನಲ್ಲಿ ಈ ಘಟನೆ ನಡೆದಿದೆ.ಜಾಮ್ನರ್ ಗಣಪತಿ ನಗರ ನಿವಾಸಿ ಪ್ರಕಾಶ್ ಗೋವಿಂದ ಕಪ್ಡೆ (37).

ಪುತ್ತೂರು : ಶ್ರೀಧರ್ ಭಟ್ ಮುಂಭಾಗ ಅನಧಿಕೃತ ಬಸ್ ನಿಲ್ದಾಣ

Posted by Vidyamaana on 2023-06-22 07:55:19 |

Share: | | | | |


ಪುತ್ತೂರು : ಶ್ರೀಧರ್ ಭಟ್ ಮುಂಭಾಗ ಅನಧಿಕೃತ ಬಸ್ ನಿಲ್ದಾಣ

ಪುತ್ತೂರು: ನಗರದ ಮುಖ್ಯರಸ್ತೆಯಲ್ಲಿ‌ ಪ್ರತಿದಿನ ಟ್ರಾಫಿಕ್ ಜಾಮ್. ಇದಕ್ಕೊಂದು ಶಾಶ್ವತ ಪರಿಹಾರ ನೀಡಲು ಸಾಧ್ಯವೇ ಇಲ್ಲವೇ ಎಂಬ ಪ್ರಶ್ನೆ ಆಗಾಗ ಸಾರ್ವಜನಿಕರಿಂದ ವ್ಯಕ್ತವಾಗುತ್ತಲೇ ಇದೆ. ಕನಿಷ್ಠ ಪಕ್ಷ, ಟ್ರಾಫಿಕ್ ದಟ್ಟಣೆಗೆ ಕಾರಣವಾಗುವ ತಡೆಗಳನ್ನಾದರೂ ನಿವಾರಿಸಿ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ಟ್ರಾಫಿಕ್ ದಟ್ಟಣೆಗೆ ಕಾರಣವಾಗುವ ಹಲವು ಅಡೆ - ತಡೆಗಳಲ್ಲಿ ಅನಧಿಕೃತ ಬಸ್ ನಿಲ್ದಾಣದ ಪಾತ್ರವೂ ದೊಡ್ಡದಿದೆ. ಬಸ್ ನಿಲ್ದಾಣ ಇಲ್ಲದೇ ಇರುವ ಕೆಲ ಆಯಕಟ್ಟಿನ‌ ಪ್ರದೇಶಗಳಲ್ಲಿ ಪ್ರಯಾಣಿಕರನ್ನು ಹತ್ತಿಸಲು ಬಸ್ ನಿಲ್ಲಿಸುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಟ್ರಾಫಿಕ್ ದಟ್ಟಣೆ ಉಂಟಾಗಿ ಸಾರ್ವಜನಿಕರು ಇನ್ನಿಲ್ಲದ ಸಂಕಷ್ಟ ಅನುಭವಿಸುತ್ತಿದ್ದಾರೆ.

ಪುತ್ತೂರು ಮುಖ್ಯರಸ್ತೆಯ ಹಲವು ಕಡೆಗಳಲ್ಲಿ ಬಸ್ ಗಳನ್ನು ಹೀಗೆ ಅನಧಿಕೃತವಾಗಿ ನಿಲ್ಲಿಸುವ ಪರಿಪಾಠ ಬೆಳೆಸಿಕೊಂಡು ಬರಲಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ಪೊಲೀಸ್ ಸ್ಟೇಷನ್ ಪಕ್ಕದಲ್ಲೇ ಇರುವ ಶ್ರೀಧರ್ ಭಟ್ ಬ್ರದರ್ಸ್ ಮಳಿಗೆ ಮುಂಭಾಗ.

ಇದು ಮೂರು ರಸ್ತೆ ಸೇರುವ ಪಟ್ಟಣದ ಆಯಕಟ್ಟಿನ ಪ್ರದೇಶ. ದಿನವಿಡೀ ಜನನಿಬಿಡ, ವಾಹನ ದಟ್ಟಣೆಯ ರಸ್ತೆ. ಪುತ್ತೂರು - ಮಂಗಳೂರು, ಪುತ್ತೂರು - ವಿಟ್ಲ, ಪುತ್ತೂರು - ಉಪ್ಪಿನಂಗಡಿ, ಧರ್ಮಸ್ಥಳ ಹೀಗೆ ನಾನಾ ಕಡೆಗಳಿಗೆ ಹೋಗುವ ವಾಹನಗಳು ಈ ರಸ್ತೆಯಾಗಿ ಚಲಿಸುತ್ತಿರುತ್ತವೆ. ಇನ್ನೊಂದೆಡೆ ಬೈಪಾಸ್ ರಸ್ತೆಯಾಗಿ ಬರುವ ವಾಹನಗಳು ಪೇಟೆಯನ್ನು ಸಂಪರ್ಕಿಸುವುದು ಇದೇ ರಸ್ತೆಯಿಂದಾಗಿ. ಪರ್ಲಡ್ಕ ರಸ್ತೆಯಾಗಿ ಬರುವ ಬಸ್, ವಾಹನಗಳಿಗೂ ಇದೇ ರಸ್ತೆ ಅನಿವಾರ್ಯ. ಇಷ್ಟು ವಾಹನ ದಟ್ಟಣೆಯಿರುವ ರಸ್ತೆಯಲ್ಲಿ ಬಸ್ಸೊಂದು ಕೆಲ ನಿಮಿಷ ಪ್ರಯಾಣಿಕರನ್ನು‌ ಹತ್ತಿಸಿಕೊಳ್ಳಲು ನಿಲ್ಲಿಸಿದರೆ ಟ್ರಾಫಿಕ್ ಸಮಸ್ಯೆ ಹೇಗೆ ಬಿಗಡಾಯಿಸಬಹುದು ನೀವೇ ಊಹಿಸಿ.

ಪ್ರತಿದಿನ ಈ ಪ್ರದೇಶದಲ್ಲಿ ಬಸ್ ನಿಲ್ಲಿಸುತ್ತಿರುವುದರಿಂದ, ಈಗ ಜನರು ಇದೇ ಜಾಗದಲ್ಲಿ ಬಸ್ ಕಾಯುತ್ತಿರುವ ದೃಶ್ಯ ದಿನನಿತ್ಯ ಕಾಣಲು ಸಾಧ್ಯ. ಸ್ವಲ್ಪವೇ ಸ್ವಲ್ಪ ಮುಂದೆ ಹೋದರೂ, ಅಧಿಕೃತವಾದ ಬಸ್ ನಿಲ್ದಾಣ ಇದೆ. ಇದನ್ನು ಬಿಟ್ಟು ಸಂಚಾರ ದಟ್ಟಣೆಗೆ ಸಮಸ್ಯೆ ಉಂಟು ಮಾಡುವುದು ಎಷ್ಟು ಸರಿ? ಸಂಬಂಧಪಟ್ಟವರು ಗಮನ ಹರಿಸಬೇಕು.

ಆಕ್ರೋಶಕ್ಕೆ ಮಣಿದ ಸರ್ಕಾರ : ದೇವಸ್ಥಾನಗಳ ಅನುದಾನ ತಡೆ ಆದೇಶ ವಾಪಸ್

Posted by Vidyamaana on 2023-08-18 09:36:13 |

Share: | | | | |


ಆಕ್ರೋಶಕ್ಕೆ ಮಣಿದ ಸರ್ಕಾರ : ದೇವಸ್ಥಾನಗಳ ಅನುದಾನ ತಡೆ ಆದೇಶ ವಾಪಸ್

ಬೆಂಗಳೂರು : ದೇವಸ್ಥಾನಗಳ ಅಭಿವೃದ್ಧಿ, ಜೀರ್ಣೋದ್ದಾರ ಅನುದಾನ ತಡೆ ಹಿಡಿದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಮೂರು ವಿಷಯಗಳನ್ನು ಮುಂದಿಟ್ಟು ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಳ ಜೀರ್ಣೋದ್ದಾರ ಅನುದಾನ ತಡೆ ಹಿಡಿದಿತ್ತು. ಅನುದಾನ ಮಂಜೂರಾಗಿದ್ದು, ಕಾಮಗಾರಿ ಆರಂಭಿಸದಿದ್ದರೆ ಮುಂದಿನ ಸೂಚನೆಯವರೆಗೂ ಹಣ ಬಿಡುಗಡೆ ಮಾಡಬಾರದು

 ಅನುದಾನ ಮಂಜೂರಾಗಿ ಈಗಾಗಲೇ ಶೇ.50ರಷ್ಟು ಹಣ ಬಿಡುಗಡೆ ಆಗಿದ್ದು, ಹಣ ಬಳಕೆ ಆಗದಿದ್ದಲ್ಲಿ ಉಳಿದ ಹಣ ಬಿಡುಗಡೆ ಮಾಡಬಾರದು ಹಾಗೂ ಕಾಮಗಾರಿ ಆರಂಭ ಆಗದಿದ್ದಲ್ಲಿ ಕಾಮಗಾರಿ ಪ್ರಾರಂಭ ಮಾಡದಂತೆ ತಡೆಯುಬೇಕು. 3. ಆಡಳಿತಾತ್ಮಕ ಮಂಜೂರಾತಿ ಸ್ವೀಕೃತವಾಗಿದ್ದರೆ ಮುಂದಿನ ನಿರ್ದೇಶನದವರೆಗೆ ತಡೆ ಹಿಡಿಯಬೇಕು ಎಂದು ಮುಜರಾಯಿ ಇಲಾಖೆ ಆದೇಶದಲ್ಲಿ ತಿಳಿಸಿತ್ತು.


ಇದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆ ದಿಢೀರ್ ಆದೇಶ ಹಿಂಪಡೆದಿದೆ. ಈ ಕುರಿತು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

Recent News


Leave a Comment: