ನೇರಳಕಟ್ಟೆ : ಪಂತಡ್ಕ ನಿವಾಸಿ ಬಾತಿಷಾ ನಿಧನ

ಸುದ್ದಿಗಳು News

Posted by vidyamaana on 2024-07-25 19:32:58 | Last Updated by Vidyamaana on 2024-07-25 19:32:58

Share: | | | | |


ನೇರಳಕಟ್ಟೆ : ಪಂತಡ್ಕ ನಿವಾಸಿ ಬಾತಿಷಾ ನಿಧನ

ಬಂಟ್ವಾಳ : ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಮೃತಪಟ್ಟಿದ್ದಾರೆ. 

 ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಅಟೋ ರಿಕ್ಷಾ ಮೆಕೇನಿಕ್ ಸಿ.ಎಚ್. ಹನೀಫ್ ಅವರ ಪುತ್ರ

ಬಾತಿಷಾ( 22) ಮೃತಪಟ್ಟವರು.ಮಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮೇನ್ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ವಾರದ ಹಿಂದೆ ಜ್ವರ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದ, ಗುರುವಾರ ಬೆಳಿಗ್ಗೆ ಜ್ವರ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃತಪಟ್ಟಿದ್ದಾರೆ.

 Share: | | | | |


ಪುತ್ರನ ಟೆಸ್ಟ್ ಪದಾರ್ಪಣೆ ಕಂಡು ಭಾವುಕರಾದ ನೌಶಾದ್ ಖಾನ್ Video

Posted by Vidyamaana on 2024-02-15 13:35:25 |

Share: | | | | |


ಪುತ್ರನ ಟೆಸ್ಟ್ ಪದಾರ್ಪಣೆ ಕಂಡು ಭಾವುಕರಾದ ನೌಶಾದ್ ಖಾನ್ Video

ರಾಜ್ ಕೋಟ್: ಹಲವು ವರ್ಷಗಳ ಕಾಯುವಿಕೆಯ ಬಳಿಕ ಕೊನೆಗೂ ಮುಂಬೈನ ಆಟಗಾರ ಸರ್ಫರಾಜ್ ಖಾನ್ ಅವರಿಗೆ ಟೆಸ್ಟ್ ಕ್ಯಾಪ್ ಸಿಕ್ಕಿದೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸರ್ಪರಾಜ್ ಖಾನ್ ಪದಾರ್ಪಣೆ ಮಾಡಿದ್ದಾರೆ.


ರಾಜ್ ಕೋಟ್ ನಲ್ಲಿ ಪಂದ್ಯಕ್ಕೂ ಮುನ್ನ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು ಸರ್ಫರಾಜ್ ಖಾನ್ ಅವರಿಗೆ ಟೆಸ್ಟ್ ಕ್ಯಾಪ್ ನೀಡಿದರು.

ಸರ್ಫರಾಜ್ ತಂದೆ ನೌಶಾದ್ ಖಾನ್ ಅವರು ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದು, ಮಗನ ಈ ಐತಿಹಾಸಿಕ ಸನ್ನಿವೇಶವನ್ನು ಕಣ್ತುಂಬಿಕೊಂಡರು. ಇದೇ ವೇಳೆ ಭಾವುಕರಾದ ನೌಶಾದ್ ಖಾನ್ ಮಗನಿಗಾಗಿ ಸಂತಸ ವ್ಯಕ್ತಪಡಿಸಿದರು. ಕಣ್ಣೀರು ಹರಿಸುತ್ತಲೇ ಮಗನನ್ನು ಅಪ್ಪಿಕೊಂಡರು.

ಇದೇ ವೇಳೆ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಕೂಡಾ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ಜುರೆಲ್ ಗೆ ದಿನೇಶ್ ಕಾರ್ತಿಕ್ ಅವರು ಟೆಸ್ಟ್ ಕ್ಯಾಪ್ ನೀಡಿ ಹಾರೈಸಿದರು

ಹುಬ್ಬಳ್ಳಿ ಕೇಸ್‌ – ಕರಸೇವಕ ಶ್ರೀಕಾಂತ್‌ ಪೂಜಾರಿಗೆ ಜಾಮೀನು

Posted by Vidyamaana on 2024-01-05 16:04:32 |

Share: | | | | |


ಹುಬ್ಬಳ್ಳಿ ಕೇಸ್‌ – ಕರಸೇವಕ ಶ್ರೀಕಾಂತ್‌ ಪೂಜಾರಿಗೆ ಜಾಮೀನು

ಹುಬ್ಬಳ್ಳಿ: 31 ವರ್ಷದ ಬಳಿಕ ರಾಮಜನ್ಮಭೂಮಿ (Ram Janambhoomi) ಹೋರಾಟದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ದೇಶವ್ಯಾಪಿ ಸುದ್ದಿಯಾಗಿದ್ದ ಶ್ರೀಕಾಂತ್‌ ಪೂಜಾರಿಗೆ (Srikanth Poojari) ಕೋರ್ಟ್‌ (Court) ಜಾಮೀನು ಮಂಜೂರು ಮಾಡಿದೆ.ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಷರತ್ತುಬದ್ಧ ಜಾಮೀನು (Bail) ಮಂಜೂರು ಮಾಡಿದೆ.


ಶ್ರೀಕಾಂತ್‌ ಪೂಜಾರಿ ಪರ ವಕೀಲರು ಪ್ರತಿಕ್ರಿಯಿಸಿ, ನಮಗೆ ಜಾಮೀನು ಸಿಗಬಹುದು ಎಂಬ ವಿಶ್ವಾಸವಿತ್ತು. ಇಂದು ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ. ಯಾವ್ಯಾವ ಷರತ್ತು ವಿಧಿಸಿದ್ದಾರೆ ಎಂಬುದಕ್ಕೆ ಆದೇಶದ ಪ್ರತಿ ಇನ್ನೂ ನಮ್ಮ ಕೈ ಸೇರಿಲ್ಲ. ನಾಳೆ ಶ್ರೀಕಾಂತ್‌ ಪೂಜಾರಿ ಅವರ ಬಿಡುಗಡೆಯಾಗಲಿದೆ ಎಂದು ಹೇಳಿದರು.ಡಿಸೆಂಬರ್29 ರಂದು ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದರು. ಶ್ರೀಕಾಂತ್‌ ಪೂಜಾರಿ ಬಂಧನವನ್ನು ಖಂಡಿಸಿ ಬಿಜೆಪಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿತ್ತು.

ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನ ಹೃದಯಾಘಾತದಿಂದ ನಿಧನ

Posted by Vidyamaana on 2023-08-07 05:20:38 |

Share: | | | | |


ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನ ಹೃದಯಾಘಾತದಿಂದ ನಿಧನ

ಬೆಂಗಳೂರು: ಸ್ಯಾಂಡಲ್‌ ವುಡ್‌ ನಟ ವಿಜಯ್‌ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.


ವಿದೇಶಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಅವರಿಗೆ ಹಠಾತ್‌ ಹೃದಯಾಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಬ್ಯಾಂಕಾಕ್‌ ನಲ್ಲಿ ಅವರಿಗೆ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ.


ಸ್ಪಂದನಾ ವಿಜಯ್ ರಾಘವೇಂದ್ರ ಅವರು ಬೆಂಗಳೂರಿನಲ್ಲಿ ಜನಿಸಿದರು. ಮಾಜಿ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರ ಪುತ್ರಿ ಸ್ಪಂದನಾ ಅವರು ನಟ ವಿಜಯ್ ರಾಘವೇಂದ್ರ ಅವರನ್ನು 2007ರಲ್ಲಿ ವಿವಾಹವಾದರು. ಸ್ಪಂದನಾ ಅವರು 2016 ರಲ್ಲಿ ವಿ. ರವಿಚಂದ್ರನ್ ಜೊತೆಗೆ “ಅಪೂರ್ವ” ಚಿತ್ರದಲ್ಲಿ ನಟಿಸಿದ್ದಾರೆ.

ಸುಳ್ಯ; ನಾವು ವಿದ್ಯಾರ್ಥಿಗಳು ನಮ್ಮ ಬಳಿ ಫೀಸ್ ಕಟ್ಟಲು ಹಣವಿಲ್ಲವೆಂದು ಹೇಳಿ ಕದ್ದ ಚಿನ್ನವನ್ನು ಮಾರಾಟ ಮಾಡಿದ ದಂಪತಿ

Posted by Vidyamaana on 2023-09-05 01:57:39 |

Share: | | | | |


ಸುಳ್ಯ; ನಾವು ವಿದ್ಯಾರ್ಥಿಗಳು ನಮ್ಮ ಬಳಿ ಫೀಸ್ ಕಟ್ಟಲು ಹಣವಿಲ್ಲವೆಂದು ಹೇಳಿ ಕದ್ದ ಚಿನ್ನವನ್ನು ಮಾರಾಟ ಮಾಡಿದ ದಂಪತಿ

ಸುಳ್ಯ; ನಾವು ವಿದ್ಯಾರ್ಥಿಗಳು ನಮ್ಮ ಬಳಿ ಫೀಸ್ ಕಟ್ಟಲು ಹಣವಿಲ್ಲವೆಂದು ಹೇಳಿ ಕದ್ದ ಚಿನ್ನವನ್ನು ಮಾರಾಟ ಮಾಡಿ ದಂಪತಿ ಅಂದರ್ ಆದ ಘಟನೆ ಸುಳ್ಯದಲ್ಲಿ ನಡೆದಿದೆ.


ಕೇರಳದಿಂದ 3 ಪವನ್ ಚಿನ್ನದ ಸರವನ್ನು ಕದ್ದ ಕಿಲಾಡಿ ಸರ್ಜಾನ್ ದಂಪತಿ ಅದನ್ನು 22 ದಿನಗಳ ಹಿಂದೆ ಸುಳ್ಯದ ಚಿನ್ನದ ಅಂಗಡಿಯೊಂದರಲ್ಲಿ ಮಾರಾಟ ಮಾಡಿದ್ದರು. ಅಲ್ಲದೇ ನಾವು ವಿದ್ಯಾರ್ಥಿಗಳು ನಮ್ಮ ಬಳಿ ಫೀಸ್ ಕಟ್ಟಲು ಹಣವಿಲ್ಲವೆಂದು ಹೇಳಿ ಅದನ್ನು ಮಾರಾಟ ಮಾಡಿದ್ದರು. ಅಂಗಡಿ ಮಾಲೀಕರು ಕಿಲಾಡಿ ದಂಪತಿಗೆ 1 ಲಕ್ಷದ 43 ಸಾವಿರ ರೂಪಾಯಿ ನೀಡಿದ್ದರು


ಆದರೆ ಇದೀಗ ಈ ಸರದ ಹಿಂದಿನ ಅಸಲಿಯತ್ತು ಬಯಲಾಗಿದ್ದು ದಂಪತಿ ಕಳ್ಳರು ಅನ್ನೋದು ಗೊತ್ತಾಗಿದೆ. ಕೇರಳ ಪೊಲೀಸರು ಆರೋಪಿ ಸರ್ಜಾನ್ ಇದೇ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. ಅದರಂತೆ ಸೆಪ್ಟೆಂಬರ್ 2 ರಂದು ಸುಳ್ಯದ ಖಾಸಗಿ ಬಸ್ ಸ್ಟ್ಯಾಂಡ್ ಬಳಿಯಿರುವ ಚಿನ್ನದಂಗಡಿಗೆ ಕರೆದುಕೊಂಡು ಬಂದು ಸ್ಥಳ ಮಹಜರು ಮಾಡಿದ್ದಾರೆ.ಇದೀಗ ಕೇರಳ ಪೊಲೀಸರು ಬಂದು ವಿಚಾರಿಸಿ ಚಿನ್ನವನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಈ ಹಿಂದೆಯೂ ಆತ ಮೂರು ಕಡೆ ಹೀಗೆಯೇ ವಂಚಿಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಎಂದು ತಿಳಿದು ಬಂದಿದೆ. ಸ್ಥಳ ಮಹಜರಿಗೆ ಪೊಲೀಸರ ಜೊತೆ ಬಂದಿರುವ ಕಳ್ಳ ವಾಪಸ್ ನಾನು ಹಣ ನೀಡುವುದಾಗಿ ಜ್ಯುವೆಲರ್ಸ್ ಮಾಲೀಕರಿಗೆ ಹೇಳಿದ್ದಾನೆ ಎನ್ನಲಾಗಿದೆ.

ಡೀಪ್‌ ಫೇಕ್‌ ಕಂಟಕ ; ಭಾರತೀಯ ವ್ಯವಸ್ಥೆಯ ಅತ್ಯಂತ ದೊಡ್ಡ ಬೆದರಿಕೆ ಇದು ಬಹಳ ಜಾಗರೂಕರಾಗಿರಬೇಕು ಎಂದ ಪ್ರಧಾನಿ ಮೋದಿ

Posted by Vidyamaana on 2023-11-17 19:56:03 |

Share: | | | | |


ಡೀಪ್‌ ಫೇಕ್‌ ಕಂಟಕ ; ಭಾರತೀಯ  ವ್ಯವಸ್ಥೆಯ ಅತ್ಯಂತ ದೊಡ್ಡ ಬೆದರಿಕೆ ಇದು ಬಹಳ ಜಾಗರೂಕರಾಗಿರಬೇಕು ಎಂದ ಪ್ರಧಾನಿ ಮೋದಿ

ಹೊಸದಿಲ್ಲಿ, ನ.17: ಡೀಪ್‌ ಫೇಕ್‌ ಗಳು ಪ್ರಸ್ತುತ ಭಾರತೀಯ ವ್ಯವಸ್ಥೆಯು ಎದುರಿಸುತ್ತಿರುವ ದೊಡ್ಡ ಬೆದರಿಕೆಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.


ಇದು ಸಮಾಜದಲ್ಲಿ ಅವ್ಯವಸ್ಥೆಯನ್ನು ಉಂಟುಮಾಡಬಹುದು. ಹೆಚ್ಚುತ್ತಿರುವ ಸಮಸ್ಯೆಯ ಬಗ್ಗೆ ಜನರಿಗೆ ಶಿಕ್ಷಣ ನೀಡಬೇಕು ಎಂದು ಪ್ರಧಾನಿ ಮಾಧ್ಯಮಗಳಿಗೆ ಒತ್ತಾಯಿಸಿದರು.


ದೆಹಲಿಯ ಬಿಜೆಪಿಯ ಪ್ರಧಾನ ಕಛೇರಿಯಲ್ಲಿ ಬಿಜೆಪಿಯ ದೀಪಾವಳಿ ಮಿಲನ್ ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಡೀಪ್‌ ಫೇಕ್‌ ಗಳಿಗಾಗಿ ಕೃತಕ ಬುದ್ಧಿಮತ್ತೆಯನ್ನು ದುರುಪಯೋಗಪಡಿಸಿಕೊಳ್ಳುವಾಗ ನಾಗರಿಕರು ಮತ್ತು ಮಾಧ್ಯಮಗಳು ಬಹಳ ಜಾಗರೂಕರಾಗಿರಬೇಕು ಎಂದು ಹೇಳಿದರು.


ಪ್ರಜಾಪ್ರಭುತ್ವದ ಸಮಗ್ರತೆಗೆ ಡೀಪ್‌ಫೇಕ್‌ಗಳು ಹೇಗೆ ಗಣನೀಯ ಸವಾಲುಗಳನ್ನು ಒಡ್ಡುತ್ತಿವೆ? ನಕಲಿ ಮತ್ತು ನೈಜ ಕ್ಲಿಪ್‌ಗಳ ನಡುವೆ ವ್ಯತ್ಯಾಸ ಕಂಡುಹಿಡಿಯುವುದು ಕಷ್ಟಕರವಾಗಿದೆ. ಇದು ಇತ್ತೀಚೆಗೆ ರಾಜಕಾರಣಿಗಳನ್ನೂ ಗುರಿ ಮಾಡಲಾಗುತ್ತಿದೆ, ಕೃತಕ ವಾಯ್ಸ್‌ಓವರ್‌, ನಕಲಿ ವೀಡಿಯೋ ಕ್ಲಿಪ್‌ಗಳನ್ನು ಬಳಸಿ ರಾಜಕಾರಣಿಗಳನ್ನ ಗುರಿಯಾಗಿಸಲಾಗುತ್ತಿದೆ. ಇಂತಹ ಎಲ್ಲ ಸಮಸ್ಯೆಗಳ ಬಗ್ಗೆ ಅರಿತುಕೊಂಡು ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಕಿವಿಮಾತು ಹೇಳಿದ್ದಾರೆ.


ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಗರ್ಬಾ ನೃತ್ಯ ಮಾಡುತ್ತಿರುವ ಡೀಪ್‌ ಫೇಕ್‌ ವಿಡಿಯೋ ಉಲ್ಲೇಖಿಸಿ ಮಾತನಾಡಿದ್ದು, ತಾನು ಚಿಕ್ಕಂದಿನಿಂದಲೂ ಗರ್ಬಾ ನೃತ್ಯ ಮಾಡಿಲ್ಲ ಎಂದು ಹೇಳಿದ್ದಾರೆ.


ವೈರಲ್‌ ವೀಡಿಯೋದಲ್ಲಿ ಪ್ರಧಾನಿಯನ್ನೇ ಹೋಲುವ ವ್ಯಕ್ತಿಯೊಬ್ಬರು ಕೆಲ ಮಹಿಳೆಯರೊಂದಿಗೆ ನೃತ್ಯ ಮಾಡುವುದು ಕಂಡುಬಂದಿತ್ತು. ಆದ್ರೆ ಮಾಧ್ಯಮ ಸಂಸ್ಥೆಯೊಂದು ಅದನ್ನು ಫ್ಯಾಕ್ಟ್‌ಚೆಕ್‌ಗೆ ಒಳಪಡಿಸಿದಾಗ ವೀಡಿಯೋದಲ್ಲಿದ್ದ ವ್ಯಕ್ತಿ ಪ್ರಧಾನಿಯಲ್ಲ, ವಿಕಾಸ್‌ ಮಹಂತೆ ಎನ್ನುವ ನಟ‌ ಎಂದು ತಿಳಿದುಬಂದಿತ್ತು.


ಇತ್ತೀಚೆಗೆ ಡೀಪ್‌ ಫೇಕ್‌ ವೀಡಿಯೋಗಳು ಹೆಚ್ಚಾಗುತ್ತಿದ್ದು, ಸಹಜವಾಗಿಯೇ ನಟಿಯರಿಗೆ ಆತಂಕ ಹೆಚ್ಚಿಸಿದೆ. ಇಂತಹ ವಿಡಿಯೋಗಳನ್ನು ಮಾಡುವವರ ವಿರುದ್ಧ ಆದಷ್ಟು ಬೇಗ ಕಠಿಣ ಕ್ರಮಕ್ಕೆ ಮುಂದಾಗಿ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ನಟಿ ರಶ್ಮಿಕಾ ಮಂದಣ್ಣ ಅವರ ಬಳಿಕ ಕಾಜೋಲ್, ಕತ್ರಿನಾ ಕೈಫ್‌ ಅವರ ಡೀಪ್‌ಫೇಕ್ ವೀಡಿಯೋಗಳೂ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ

ವಯನಾಡಿನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ

Posted by Vidyamaana on 2024-08-10 13:56:28 |

Share: | | | | |


ವಯನಾಡಿನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ

ವಯನಾಡ್: ಭೂಕುಸಿತದಿಂದ ತತ್ತರಿಸಿರುವ ಕೇರಳದ ವಯನಾಡಿಗೆ ಇಂದು(ಶನಿವಾರ) ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ದುರಂತ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ಕೈಗೊಂಡರು.

ಕಣ್ಣೂರಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರ್ ಮೂಲಕ ವಯನಾಡ್ ತಲುಪಿದರು. ನಂತರ ಭೂಕುಸಿತ ಸಂಭವಿಸಿದ ಮುಂಡಕೈ- ಚೂರಲ್ಮಲ-ಪುಂಚಿರಿಮಟ್ಟಂ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಾಯಿತು.

Recent News


Leave a Comment: