ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಸುದ್ದಿಗಳು News

Posted by vidyamaana on 2024-07-25 06:35:41 |

Share: | | | | |


ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಇಲಕಲ್ ನಗರದ ಕಂಠಿ ಸರ್ಕಲ್ ಬಳಿ ತ್ರಿಬಲ್ ರೈಡ್ ನಲ್ಲಿ ಬಂದ ಯುವಕರಿಗೆ ಪಿಎಸ್ ಐ ಬುದ್ದಿವಾದ ಹೇಳಿದ ಘಟನೆ ನಡೆದಿದೆ. ತ್ರಿಬಲ್ ರೈಡ್ ಮೂಲಕ ಕಾಲೇಜ್ ಅಡ್ಮಿಷನ್ ಗೆ ಹೊರಟಿದ್ದ ವಿದ್ಯಾರ್ಥಿಗಳನ್ನು ಇಳಕಲ್ ನಗರ ಠಾಣಾ ಮಹಿಳಾ ಪಿಎಸ್‌ಐ ಎಸ್.ಆರ್.ನಾಯಕ್ ಎಂಬವರು ಬಾಲಕನಿಗೆ ದಂಡ ಕಟ್ಟುವಂತೆ ಒತ್ತಾಯಿಸಿದ್ದರು.

ಆದ್ರೆ, ಕಣ್ಣೀರಿಟ್ಟ ಬಾಲಕ, ನನ್ನ ಬಳಿ ಹಣವಿಲ್ಲ ಆದರೆ, ಕಾಲೇಜು ಶುಲ್ಕ ಕಟ್ಟಲೆಂದು ಇಟ್ಟುಕೊಂಡಿರುವ ದುಡ್ಡಿದೆ ಅಷ್ಟೇ. ಅದನ್ನೇ ತಗೆದುಕೊಳ್ಳಿ ಎಂದು ಅಳುತ್ತ ದುಡ್ಡು ಕೊಟ್ಟಿದ್ದಾನೆ.

ಬಾಲಕನ ಹೇಳಿಕೆಯನ್ನು ಪರಿಶೀಲಿಸಿದ ಬಳಿಕ ಮಹಿಳಾ ಪಿಎಸ್‌ಐ ಅಪ್ಪಿಕೊಂಡು ಸಾಂತ್ವನ ತಿಳಿಸಿ, ತಮ್ಮ ಬಳಿಯಿದ್ದ ದಂಡದ ಹಣವನ್ನು ವಾಪಸ್ ಕೊಟ್ಟು, ಧೈರ್ಯ ತುಂಬಿದ್ದಾರೆ. ಪೋಷಕರು ಮಕ್ಕಳಿಗೆ ಬೈಕ್, ಸ್ಕೂಟರ್ ಕೊಡುವ ಮುನ್ನ ಹತ್ತು ಬಾರಿ ಎಚ್ಚರ ವಹಿಸಿ ಎಂದು ಮಹಿಳಾ ಪಿಎಸ್‌ಐ ಹೇಳಿದ್ದಾರೆ.

 Share: | | | | |


ಕಲ್ಲಡ್ಕ: ರೈಲಿನಡಿಗೆ ಬಿದ್ದು ಮಾಣಿ ಮಜಲು ನಿವಾಸಿ ಅರ್ಜುನ್ ಮೃತ್ಯು

Posted by Vidyamaana on 2023-03-17 04:42:27 |

Share: | | | | |


ಕಲ್ಲಡ್ಕ: ರೈಲಿನಡಿಗೆ ಬಿದ್ದು ಮಾಣಿ ಮಜಲು ನಿವಾಸಿ ಅರ್ಜುನ್ ಮೃತ್ಯು

ಕಲ್ಲಡ್ಕ: ರೈಲಿನಡಿಗೆ ಬಿದ್ದು ಯುವಕ ಮೃತಪಟ್ಟ ದಾರುಣ ಘಟನೆ ಮಾ 17 ರಂದು  ಬೆಳಗ್ಗೆ ಗೋಳ್ತಮಜಲು ಎಂಬಲ್ಲಿ ನಡೆದಿದೆ. ಮಾಣಿ ಮಜಲು ನಿವಾಸಿ ಅರ್ಜುನ್ (26) ಮೃತಪಟ್ಟ ದುರ್ದೈವಿ.

ಈ ಅಪಘಾತಕ್ಕೆ ಮೂಲ ಕಾರಣ ಏನೆಂದು ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನೀರಿಕ್ಷಿಸಲಾಗುತ್ತಿದೆ.

ಕೇರಳದ ಈ ಪಟ್ಟಣಕ್ಕೆ ಕಳೆದ 8 ವರ್ಷಗಳಿಂದ ಇಸ್ರೇಲ್ ಜತೆ ಇದೆ ವಿಶೇಷ ನಂಟು

Posted by Vidyamaana on 2023-10-19 16:23:09 |

Share: | | | | |


ಕೇರಳದ ಈ ಪಟ್ಟಣಕ್ಕೆ ಕಳೆದ 8 ವರ್ಷಗಳಿಂದ ಇಸ್ರೇಲ್ ಜತೆ ಇದೆ ವಿಶೇಷ ನಂಟು

ಕಣ್ಣೂರು: ಇಸ್ರೇಲ್ ಹಾಗೂ ಪ್ಯಾಲೆಸ್ತೀನ್

ವಿಚಾರದಲ್ಲಿ ದೇಶದ ರಾಜಕೀಯ ಪಕ್ಷಗಳು ಮತ್ತು ಜನರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಕೇರಳ ಕೂಡ ಇದರಿಂದ ಹೊರತಲ್ಲ. ಆದರೆ ಕೇರಳದ ಒಂದು ಪಟ್ಟಣಕ್ಕೂ, ಇಸ್ರೇಲ್ ಪೊಲೀಸ್ ಇಲಾಖೆಗೂ ಒಂದು ವಿಶಿಷ್ಟ ನಂಟು ಇದೆ ಎನ್ನುವುದು ಗೊತ್ತೇ? ಮುಖ್ಯವಾಗಿ ಅ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ ಬಳಿಕ ಕೇರಳದ ಉತ್ತರ ಭಾಗದಲ್ಲಿನ ಈ ಪಟ್ಟಣದ ಜನರ ಗುಂಪೊಂದು ಇಸ್ರೇಲ್‌ಗಾಗಿ ಮತ್ತಷ್ಟು ಚುರುಕಿನಿಂದ ಕೆಲಸ ಮಾಡುತ್ತಿದೆ!.


ಕಣ್ಣೂರಿನಲ್ಲಿನ ಮರ್ಯಮ್ ಅಪಾರೆಲ್ ಪ್ರೈ ಲಿಮಿಟೆಡ್ ಎಂಬ ಉಡುಪು ತಯಾರಿಕಾ ಕಂಪೆನಿಯು ಕಳೆದ ಎಂಟು ವರ್ಷಗಳಿಂದ ಇಸ್ರೇಲಿ ಪೊಲೀಸರಿಗಾಗಿ ಸಮವಸ್ತ್ರಗಳನ್ನು ಹೊಲೆದು ಕೊಡುತ್ತಿದೆ. ವರ್ಷಕ್ಕೆ ಸರಾಸರಿ ಒಂದು ಲಕ್ಷ ಯುನಿಟ್‌ಗಳಷ್ಟು ಸಮವಸ್ತ್ರಗಳನ್ನು ಪೂರೈಕೆ ಮಾಡುತ್ತಿದೆ.ಸಮವಸ್ತ್ರಗಳ ಗುಣಮಟ್ಟ ಪರಿಶೀಲಿಸಲು ಪ್ರತಿ ವರ್ಷವೂ ಇಸ್ರೇಲ್ ಪೊಲೀಸ್ ಅಧಿಕಾರಿಗಳು ಫ್ಯಾಕ್ಟರಿಗೆ ಭೇಟಿ ನೀಡುತ್ತಾರೆ. ಮುಂಬಯಿಯಲ್ಲಿ ನೆಲೆಯೂರಿರುವ ಕೇರಳದ ಉದ್ಯಮಿ ಥಾಮಸ್ ಒಲಿಕ್ಕಲ್ ಮಾಲೀಕತ್ವದ ಫ್ಯಾಕ್ಟರಿ ಇದು. ಎಂಟು ವರ್ಷಗಳಿಂದ ಪೂರೈಕೆ


ಇಸ್ರೇಲಿ ಪೊಲೀಸರ ಜತೆಗಿನ ವ್ಯವಹಾರದ ಕುರಿತು ಮಾತನಾಡಿದ ಫ್ಯಾಕ್ಟರಿ ವ್ಯವಸ್ಥಾಪಕ ಶಿಜಿನ್ ಕುಮಾರ್, ಎಂಟು ವರ್ಷಗಳ ಹಿಂದೆ ಇಸ್ರೇಲಿ ಪೊಲೀಸರು ಈ ಬಗ್ಗೆ ವಿಚಾರಿಸಿದ್ದರು. ಅಂದಿನಿಂದಲೂ ಅವರಿಗೆ ಸಮವಸ್ತ್ರಗಳನ್ನು ಫ್ಯಾಕ್ಟರಿ ಪೂರೈಕೆ ಮಾಡುತ್ತಿದೆ ಎಂದು ತಿಳಿಸಿದರು. "ನಾವು ಫಿಲಿಪ್ಪಿನ್ಸ್ ಸೇನೆಗೆ ಹಾಗೂ ಕುವೈತ್ ಸರ್ಕಾರದ ಅಧಿಕಾರಿಗಳಿಗೆ ಈ ಮೊದಲು ಸಮವಸ್ತ್ರಗಳನ್ನು ಪೂರೈಕೆ ಮಾಡುತ್ತಿದ್ದೆವು. ಬಳಿಕ ಇಸ್ರೇಲ್‌ನಿಂದ ಬೇಡಿಕೆ ಬಂದಿತ್ತು.

ಸಮವಸ್ತ್ರಗಳಪೂರೈಕೆಯ ಒಪ್ಪಂದ ಮಾಡಿಕೊಳ್ಳುವುದಕ್ಕೂ ಮುನ್ನ ನಮ್ಮ ಫ್ಯಾಕ್ಟರಿ ಹೇಗೆ ಕೆಲಸ ಮಾಡುತ್ತದೆ ಎಂದು ಪರಿಶೀಲಿಸಲು ಇಸ್ರೇಲಿ ಪೊಲೀಸ್ ಅಧಿಕಾರಿಗಳು ಕೇರಳಕ್ಕೆ ಭೇಟಿ ನೀಡಿದ್ದರು ಎಂದು ಶಿಜಿನ್ ಹೇಳಿದರು."ಪ್ರತಿ ವರ್ಷವೂ ನಮಗೆ ಬರುವ ಬೇಡಿಕೆಗಳನ್ನು ಯಶಸ್ವಿಯಾಗಿ ಪೂರೈಕೆ ಮಾಡಿದ್ದೇವೆ ಎಂದು ತಿಳಿಸಿದರು.


ಕೇರಳದ ಕಂಪೆನಿ ಘಟಕವು ಮೊದಲು ತಿರುವನಂತಪುರಂನಲ್ಲಿತ್ತು. ಬಳಿಕ ಅದು ಕಣ್ಣೂರಿಗೆ ಸ್ಥಳಾಂತರಗೊಂಡಿತು. ಸುಮಾರು 1500 ಮಂದಿ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಶೇ 95ಕ್ಕೂ ಹೆಚ್ಚು ಮಂದಿ ಮಹಿಳೆಯರು. ಉದ್ಯಮದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುವ ಸಾಮರ್ಥ್ಯ ಪಡೆಯಲು ತನ್ನ ಉದ್ಯೋಗಿಗಳಿಗೆ ಕಂಪೆನಿಯು ವಿಶೇಷ ಹಾಗೂ ನಿರ್ದಿಷ್ಟ ತರಬೇತಿಗಳನ್ನು ನೀಡುತ್ತದೆ.ಇಸ್ರೇಲ್ ಪೊಲೀಸರಿಗೆ ಸಮವಸ್ತ್ರದ ಅಂಗಿಗಳನ್ನು ಸಿದ್ಧಪಡಿಸಲು ಸ್ಥಳೀಯ ಘಟಕದ ನೂರಾರು ದರ್ಜಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಎರಡು ಜೇಬುಗಳ ಅಂಗಿಗಳ ಜತೆಗೆ, ತೋಳುಗಳಿಗೆ ಇಸ್ರೇಲ್ ಪೊಲೀಸ್ ಇಲಾಖೆಯ ಟ್ರೇಡ್‌ಮಾರ್ಕ್ ಚಿಹ್ನೆಯನ್ನು ವಿನ್ಯಾಸಗೊಳಿಸಿ ಅಳವಡಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ.

ಇಡುಕ್ಕಿ ಜಿಲ್ಲೆಯ ತೊಡುಪುಳದವರಾದ ಥಾಮಸ್ ಒಲಿಕ್ಕಲ್, ಯುದ್ಧ ಆರಂಭವಾದ ಬಳಿಕವೂ ಇಸ್ರೇಲ್ ಪೊಲೀಸರು ಕಂಪೆನಿಯನ್ನು ಸಂಪರ್ಕಿಸಿದ್ದು, ಮತ್ತಷ್ಟು ಸಮವಸ್ತ್ರಗಳಿಗಾಗಿ ಹೆಚ್ಚುವರಿ ಆರ್ಡ‌್ರಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.

ನನ್ನ ಬೂತ್ ನಾನು ಅಭ್ಯರ್ಥಿ ಅಭಿಯಾನ ಸ್ವಗ್ರಾಮದ ಬೂತಲ್ಲಿ ಶಾಸಕರಿಂದ ಭರ್ಜರಿ ಪ್ರಚಾರ

Posted by Vidyamaana on 2024-04-24 14:13:44 |

Share: | | | | |


ನನ್ನ ಬೂತ್ ನಾನು ಅಭ್ಯರ್ಥಿ ಅಭಿಯಾನ ಸ್ವಗ್ರಾಮದ ಬೂತಲ್ಲಿ ಶಾಸಕರಿಂದ ಭರ್ಜರಿ ಪ್ರಚಾರ

ಪುತ್ತೂರು: ನನ್ನ ಬೂತ್ ನಾನು ಅಭ್ಯರ್ಥಿ ಅಭಿಯಾನದಂತೆ ಶಾಸಕರಾದ ಅಶೋಕ್ ರೈ ಅವರು ತನ್ನ ಸ್ವ ಗ್ರಾಮದ ಬೂತ್ ನಂ: 53 ರಲ್ಲಿ ಭರ್ಜರಿ ಚುನಾವಣಾ ಪ್ರಚಾರ ಕಾರ್ಯ ನಡೆಸಿದರು.

ಸಂಟ್ಯಾರ್: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು: ನಿಡ್ಪಳ್ಳಿ ಗ್ರಾ.ಪಂ. ಸದಸ್ಯ ಮುರಳಿ ಭಟ್ ಮೃತ್ಯು

Posted by Vidyamaana on 2023-02-14 23:07:36 |

Share: | | | | |


ಸಂಟ್ಯಾರ್: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು: ನಿಡ್ಪಳ್ಳಿ ಗ್ರಾ.ಪಂ. ಸದಸ್ಯ ಮುರಳಿ ಭಟ್ ಮೃತ್ಯು

ಪುತ್ತೂರು:ಫೋರ್ಡ್ ಕಾರೊಂದು ವಿದ್ಯುತ್‌ ಕಂಬಗಳಿಗೆ ಡಿಕ್ಕಿಯಾಗಿ ತೋಟಕ್ಕೆ ಬಿದ್ದ ಅವಘಡದಲ್ಲಿ ಕಾರಲ್ಲಿದ್ದ ನಿಡ್ನಳ್ಳಿ ಗ್ರಾಮ ಪಂಚಾಯತ್‌ ಸದಸ್ಯರೋರ್ವರು ಮೃತಪಟ್ಟು ಇತರ ಮೂವರು ಗಾಯಗೊಂಡಿರುವ ಘಟನೆ ಫೆ.14ರಂದು ರಾತ್ರಿ ನಡೆದಿದೆ.

      ನಿವೃತ್ತ ಮುಖ್ಯಶಿಕ್ಷಕ ನಿಡ್ಡಳ್ಳಿ ಗ್ರಾಮದ ಮುಂಡೂರು ದಿ.ಶ್ರೀಧರ್ ಭಟ್ ಅವರ ಮಗ, ನಿಡ್ನಳ್ಳಿ ಗ್ರಾಮ ಪಂಚಾಯತ್‌ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಮುರಳೀಕೃಷ್ಣ ಭಟ್ (38ವ.) ಮೃತಪಟ್ಟವರು.ಕಾರು ಚಾಲಕ ಇರ್ದೆ ಗ್ರಾಮದ ದೂಮಡ್ಕ ಘಾಟೆ ಜಯರಾಮ ಭಟ್‌ರವರ ಪುತ್ರ ನವನೀತ್, ಕಾರಲ್ಲಿದ್ದ ಬೆಟ್ಟಂಪಾಡಿ ಗ್ರಾಮದ ಗುಂಡ್ಯಡ್ಕ ಗೋಪಾಲಕೃಷ್ಣರವರ ಮಗ ದಿಲೀಪ್‌ ಮತ್ತು ಇರ್ದೆ ಕಟೀಲಡ್ಕ ನಿವಾಸಿ, ಗುತ್ತಿಗೆದಾರ ಅಪ್ಪಣ್ಣ ನಾಯ್ ರವರ ಪುತ್ರ ಶಶಿ ಗಾಯಗೊಂಡಿದ್ದಾರೆ.ಈಪೈಕಿ ನವನೀತ್‌ ಮತ್ತು ದಿಲೀಪ್‌ ಅದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪುತ್ತೂರುನಿಂದ ಬೆಟ್ಟಂಪಾಡಿ ಕಡೆಗೆ ಹೋಗುತ್ತಿದ್ದಫೋರ್ಡ್‌ ಫಿಗೋ ಕಾರು (KA 21P5049) ಪುತ್ತೂರು ಪಾಣಾಜೆ ರಸ್ತೆಯಲ್ಲಿ ಸಂಟ್ಯಾ‌ರ್ ಸಮೀಪದ ಬಳಕ್ಕ ಎಂಬಲ್ಲಿ ರಸ್ತೆ ಬದಿಯ ಎರಡು ವಿದ್ಯುತ್‌ ಕಂಬಗಳಿಗೆ ಡಿಕ್ಕಿ ಯಾಗಿ ರಸ್ತೆ ಬದಿಯಲ್ಲಿರುವ ನಿವೃತ್ತ ಎಸ್.ಐ.ದೇವೋಜಿ ರಾವ್ ಅವರ ತೋಟಕ್ಕೆ ಬಿದ್ದಿದೆ. ಕಾರಲ್ಲಿದ್ದ ನಾಲ್ವರೂ ಪುತ್ತೂರು ಹೋಗಿದ್ದವರು ರಾತ್ರಿ ಹಿಂತಿರುಗಿ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.ಚಾಲಕ ನವನೀತ್‌ ಜೊತೆಗೆ ಮುರಳೀಕೃಷ್ಣ ಭಟ್ ಅವರು ಎದುರು ಸೀಟಿನಲ್ಲಿ ಕುಳಿತುಕೊಂಡಿದ್ದರೆ, ಇತರ ಇಬ್ಬರು ಹಿಂಬದಿ ಸೀಟಿನಲ್ಲಿ ಕುಳಿತುಕೊಂಡಿದ್ದರು. ಅವಿವಾಹಿತರಾಗಿದ್ದ ಮೃತ ಮುರಳಿ ಭಟ್ ಅವರು ಪಾಣಾಜೆ ಪ್ರಾಥಮಿಕ ಕೃಷಿ ನ ಸಹಕಾರಿ ಸಂಘದ ಸಿಬ್ಬಂದಿಯಾಗಿರುವ ಸಹೋದರ ಕೃಷ್ಣಕುಮಾರ್ ಹಾಗೂ ಮೂವರು - ಸಹೋದರಿಯರನ್ನು ಅಗಲಿದ್ದಾರೆ.ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬುಡಿಯಾರು ರಾಧಾಕೃಷ್ಣ ರೈ, ಗ್ರಾಮಾಂತರ ಮ೦ಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಾಜಿ ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ್ ರಾವ್ ಹಿಂದು ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಸಹಿತ ಹಲವು ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ.  ಸಂಪ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜ್ವಲ್‌ ಪ್ರಕರಣವು ಚುನಾವಣೆಗೆ ಪ್ರಭಾವ ಬೀರುತ್ತದೆ: ಸಿ.ಟಿ.ರವಿ

Posted by Vidyamaana on 2024-05-03 07:03:38 |

Share: | | | | |


ಪ್ರಜ್ವಲ್‌ ಪ್ರಕರಣವು ಚುನಾವಣೆಗೆ ಪ್ರಭಾವ ಬೀರುತ್ತದೆ: ಸಿ.ಟಿ.ರವಿ

ಬೆಳಗಾವಿ: ಪ್ರಜ್ವಲ್ ರೇವಣ್ಣ ಪ್ರಕರಣವು ಚುನಾವಣೆಯ ಮೇಲೆ ಪರೋಕ್ಷವಾಗಿ ಸಣ್ಣ ಪ್ರಮಾಣದ ಪ್ರಭಾವ ಬೀರುತ್ತದೆ ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದರು.ಬೆಳಗಾವಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಇದನ್ನು ಇಡೀ ಎನ್ ಡಿಎ ಅಪರಾಧ ಎನ್ನುವಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದೆ.

ಉಳ್ಳಾಲ: ಮುಖಂಡರಿಗೆ ಮಾಹಿತಿ ನೀಡದೆ ನಾಮಪತ್ರ ವಾಪಾಸ್ - ಜೆಡಿಎಸ್ ಅಭ್ಯರ್ಥಿ ನಾಪತ್ತೆ.

Posted by Vidyamaana on 2023-04-24 07:54:19 |

Share: | | | | |


ಉಳ್ಳಾಲ: ಮುಖಂಡರಿಗೆ ಮಾಹಿತಿ ನೀಡದೆ ನಾಮಪತ್ರ ವಾಪಾಸ್ - ಜೆಡಿಎಸ್ ಅಭ್ಯರ್ಥಿ ನಾಪತ್ತೆ.

ಉಳ್ಳಾಲ: ಉಳ್ಳಾಲ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಎಸ್ ಎಸ್ ಎಫ್ ನಾಯಕ ಅಲ್ತಾಫ್ ಕುಂಪಲ ಪಕ್ಷದ ಮುಖಂಡರಿಗೆ ಮಾಹಿತಿಯೇ ನೀಡದೆ ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ. ಅಲ್ಲದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವುದಾಗಿ ನಾಯಕರು ಆರೋಪಿಸಿದ್ದಾರೆ.

ಅಲ್ತಾಫ್ ಕುಂಪಲ ಇವರು ಹಲವು ವರ್ಷಗಳಿಂದ ಎಸ್ ಎಸ್ ಎಫ್ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು. ಇತ್ತೀಚೆಗೆ ಜೆಡಿಎಸ್ ಪಕ್ಷದಲ್ಲಿ ಕಾಣಿಸಿಕೊಂಡ ಅವರು ವಿಧಾನಪರಿಷತ್ ಸದಸ್ಯ ಬಿ.ಎಂ ಫಾರುಕ್ ಅವರ ಮನವೊಲಿಸಿ ಜೆಡಿಎಸ್ ನಿಂದ ಉಳ್ಳಾಲ ಕ್ಷೇತ್ರದಿಂದ ಸ್ಪರ್ಧಿಸಲು ಬ್ಲ್ಯಾಕ್ ಫಾರಂ ಪಡೆದುಕೊಂಡಿದ್ದರು.

ಉಳ್ಳಾಲ ನಗರಸಭೆಯ ಜೆಡಿಎಸ್ ಕೌನ್ಸಿಲರ್ ಹಾಗೂ ಜಿಲ್ಲಾ ಮುಖಂಡರ ಜೊತೆಗೆ ನಾಮಪತ್ರ ಸಲ್ಲಿಸಿದ್ದ ಅವರು ಪ್ರಚಾರ ಕಾರ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಎ.21 ರಂದು ಅಲ್ತಾಫ್ ಅವರು ತನ್ನ ಪಕ್ಷದ ಮುಖಂಡರುಗಳಿಗೆ ಮಾಹಿತಿಯೇ ಇಲ್ಲದೆ ನಾಮಪತ್ರ ವಾಪಸ್ಸು ಪಡೆದುಕೊಂಡಿದ್ದರು. ಈ ಕುರಿತು ಎ.22 ರಂದು ನೋಟೀಸು ಬೋರ್ಡಿನಲ್ಲಿ ಮಾಹಿತಿಯನ್ನು ಹಾಕಲಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಜೆಡಿಎಸ್ ಮುಖಂಡರುಗಳಿಗೆ ಮಾಹಿತಿ ನೀಡಿದ್ದಾರೆ. ಮುಖಂಡರು ಅಲ್ತಾಫ್ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಕಳೆದ ಎರಡು ದಿನಗಳಿಂದ ಮೊಬೈಲ್ ಸ್ವಿಚ್ ಆಫ್ ಆಗಿದೆ.

Recent News


Leave a Comment: