ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಸುದ್ದಿಗಳು News

Posted by vidyamaana on 2024-07-25 09:34:49 |

Share: | | | | |


ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಬೆಂಗಳೂರು : ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಮೃತ ಯುವತಿಯನ್ನು ಬಿಹಾರದ ಕೃತಿ ಕುಮಾರಿ‌ (24) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯತಮನೇ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ .

ಕೃತಿ ಕುಮಾರಿ ತಾನು ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾರೆ. ರಾತ್ರಿ 11:30ಕ್ಕೆ ಕೃತಿ ಕುಮಾರಿಯೇ ಯುವಕನನ್ನು ಕರೆದುಕೊಂಡು ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತಿಯ ರೂಂಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ.

ಪಿಜಿಯ ಸಿಸಿಟಿವಿ ಎಲ್ಲವನ್ನು ಕೂಡ ಪರಿಶೀಲನೆ ನಡೆಸಿದ್ದೇವೆ. ಪಿಜಿಯ ನಿರ್ಲಕ್ಷ್ಯತನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡವನ್ನ ರಚನೆ ಮಾಡಲಾಗಿದೆ ಎಂದಿದ್ದಾರೆ

 Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

Posted by Vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಹಿರಿಯ ನಾಗರೀಕರಿಗೆ ಹಾಗೂ ಅಂಗವಿಕಲರಿಗೆ ನಡೆಯುವ ಮನೆ ಮತಧಾನದ ದಿನಾಂಕ ಬದಲು ಇಲ್ಲಿದೆ ಬದಲಾದ ದಿನಾಂಕ

Posted by Vidyamaana on 2024-04-13 13:43:08 |

Share: | | | | |


ಹಿರಿಯ ನಾಗರೀಕರಿಗೆ ಹಾಗೂ ಅಂಗವಿಕಲರಿಗೆ ನಡೆಯುವ ಮನೆ ಮತಧಾನದ ದಿನಾಂಕ ಬದಲು ಇಲ್ಲಿದೆ ಬದಲಾದ ದಿನಾಂಕ

ಪುತ್ತೂರು: ಹಿರಿಯ ನಾಗರೀಕರಿಗೆ ಹಾಗೂ ಅಂಗವಿಕಲರಿಗೆ ನಡೆಯುವ ಮನೆ ಮತಧಾನ ಪ್ರಕ್ರಿಯೆ ಏ.೧೪ರಂದು ಸೌರ ಯುಗಾದಿ (ವಿಷು ಹಬ್ಬ) ಇರುವ ಹಿನ್ನಲೆಯಲ್ಲಿ ಏ.೧೪ರ ಬದಲಾಗಿ ಏ.೧೫ರಂದು ಪ್ರಾರಂಭವಾಗಿ, ೧೭ರವರೆಗೆ ನಡೆಯಲಿದೆ. 

ಮೇ 28 ಕ್ಕೆ ನೂತನ ಸಂಸತ್ ಭವನ ಲೋಕಾರ್ಪಣೆ

Posted by Vidyamaana on 2023-05-18 16:17:57 |

Share: | | | | |


ಮೇ 28 ಕ್ಕೆ ನೂತನ ಸಂಸತ್ ಭವನ ಲೋಕಾರ್ಪಣೆ

ನವದೆಹಲಿ: ನೂತನ ಸಂಸತ್ ಭವನ ಮೇ 28ಕ್ಕೆ ಲೋಕಾರ್ಪಣೆಯಾಗಲಿದೆ ಎಂದು ಲೋಕಸಭೆ ಕಾರ್ಯಾಲಯ ಮಾಹಿತಿ ನೀಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೂತನ ಸಂಸತ್‌ ಭವನವನ್ನು ದೇಶಕ್ಕೆ ಸಮರ್ಪಿಸುವರು.ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ಭೇಟಿ ಮಾಡಿದ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ನೂತನ ಸಂಸತ್‌ ಕಟ್ಟಡ ಉದ್ಘಾಟನೆಗೆ ಆಹ್ವಾನಿಸಿದರು.ಸಂಸತ್‌ ಭವನ ಕಾಮಗಾರಿ ಪೂರ್ಣಗೊಂಡಿದ್ದು, ಹೊಸ ಕಟ್ಟಡ ಸ್ವಾವಲಂಬಿ ಭಾರತದ ಪ್ರತೀಕ ಎಂದು ಲೋಕಸಭೆ ಸಚಿವಾಲಯ ಹೇಳಿದೆ

ಮತ್ತೊಂದು ರೈಲು ದುರಂತ: ಆಂಧ್ರಪ್ರದೇಶದಲ್ಲಿ ಎರಡು ರೈಲು ಡಿಕ್ಕಿ: 3 ಜನ ಸಾವು

Posted by Vidyamaana on 2023-10-29 21:17:09 |

Share: | | | | |


ಮತ್ತೊಂದು ರೈಲು ದುರಂತ: ಆಂಧ್ರಪ್ರದೇಶದಲ್ಲಿ ಎರಡು ರೈಲು ಡಿಕ್ಕಿ: 3 ಜನ ಸಾವು


ವಿಶಾಖಪಟ್ಟಣಂ : ಆಂಧ್ರ ಪ್ರದೇಶದಲ್ಲಿ ಭಾನುವಾರ ಸಂಜೆ ರೈಲು ಅವಘಡ ಸಂಭವಿಸಿದ್ದು, ವಿಶಾಖಪಟ್ಟಣಂ-ಪಲಾಸ ಪ್ಯಾಸೆಂಜರ್ ರೈಲು ಮತ್ತು ವಿಶಾಖಪಟ್ಟಣಂ-ರಗಡ ಪ್ಯಾಸೆಂಜರ್ ರೈಲಿನ ನಡುವೆ ಹಿಂಬದಿ ಢಿಕ್ಕಿ ಸಂಭವಿಸಿದ್ದು  ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು,  ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.


ಅಪಘಾತದಲ್ಲಿ 3 ಕೋಚ್‌ಗಳು ಹಳಿ ತಪ್ಪಿದ್ದು, ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ, ಸಹಾಯ ಮತ್ತು ಆಂಬ್ಯುಲೆನ್ಸ್‌ಗಾಗಿ ಸ್ಥಳೀಯ ಆಡಳಿತ ಮತ್ತು ಎನ್‌ಡಿಆರ್‌ಎಫ್‌ಗೆ ತಿಳಿಸಲಾಗಿದೆ. ಅಪಘಾತ ಪರಿಹಾರಕ್ಕಾಗಿ ತಂಡಗಳು ರೈಲುಗಳ ಸ್ಥಳಕ್ಕೆ ತಲುಪಿವೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ತತ್ ಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಮತ್ತು ವಿಜಯನಗರದ ಹತ್ತಿರದ ಜಿಲ್ಲೆಗಳಾದ ವಿಶಾಖಪಟ್ಟಣಂ ಮತ್ತು ಅನಕಾಪಲ್ಲಿಯಿಂದ ಸಾಧ್ಯವಾದಷ್ಟು ಆಂಬ್ಯುಲೆನ್ಸ್‌ಗಳನ್ನು ಕಳುಹಿಸಲು, ಉತ್ತಮ ವೈದ್ಯಕೀಯ ಸೇವೆಯನ್ನು ಒದಗಿಸಲು ಹತ್ತಿರದ ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲು ಆದೇಶಿಸಿದ್ದಾರೆ.

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ…

ಪುತ್ತೂರು ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ನಾಮಪತ್ರ ಸಲ್ಲಿಕೆ

Posted by Vidyamaana on 2023-04-20 21:02:46 |

Share: | | | | |


ಪುತ್ತೂರು ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ನಾಮಪತ್ರ ಸಲ್ಲಿಕೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಬ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ಗುರುವಾರ ನಾಮಪತ್ರ ಸಲ್ಲಿಸಿದರು.

ಬುಧವಾರ ತನ್ನ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸುವ ಪ್ರಕಟಣೆ ನೀಡಿದ್ದರು. ಯಾವುದೋ ಕಾರಣಗಳಿಂದ ನಾಮಪತ್ರ ಸಲ್ಲಿಕೆಯಾಗಿಲ್ಲ.  ಗುರುವಾರ ಬೆಳಿಗ್ಗೆ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಐ.ಸಿ.ಕೈಲಾಸ್, ಮಹಿಳಾ ಪದಾಧಿಕಾರಿಗಳಾದ ಝೊಹರಾ ನಿಸಾರ್, ಪದ್ಮಾಮಣಿ ಉಪಸ್ಥಿತರಿದ್ದರು.

ಶ್ವೇತಾ ನಾಪತ್ತೆ

Posted by Vidyamaana on 2024-05-30 22:29:35 |

Share: | | | | |


ಶ್ವೇತಾ ನಾಪತ್ತೆ

ಮಂಗಳೂರು: ಮನೆಯಿಂದ ಹೊರಗೆ ತೆರಳಿದ್ದ ತಾಯಿ ಮತ್ತು ಮಗು ನಾಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ನಾಪತ್ತೆಯಾಗಿರುವ ಕುರಿತು ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕಂಪಾಡಿ ಮೀನಕಳಿಯ ನಿವಾಸಿಗಳಾಗಿರುವ ಶ್ವೇತಾ(31) ಮತ್ತು ಇಶಿಕಾ(6) ನಾಪತ್ತೆಯಾದ ತಾಯಿ ಹಾಗೂ ಮಗಳು ಎಂದು ತಿಳಿದು ಬಂದಿದೆ.

Recent News


Leave a Comment: