ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ದಿಯಾ

ಸುದ್ದಿಗಳು News

Posted by vidyamaana on 2024-07-08 14:36:42 |

Share: | | | | |


ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ದಿಯಾ

ಬೆಂಗಳೂರು : ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ದಿಯಾ ಮಂಡೋಲ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.ದಿಯಾ ಮಂಡೋಲ್ ಪಶ್ಚಿಮ ಬಂಗಾಳ‌ ಮೂಲದವಳಾಗಿದ್ದು, ಮದರ್ ಥೆರೆಸಾ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದಳು.

ಮೂರು ದಿನಗಳ ಹಿಂದೆ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ದಿಯಾ ಕೌಟುಂಬಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಾಸ್ಟೆಲ್​​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹಪಾಠಿಗಳು ರೂಮಿಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಾಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

 Share: | | | | |


ಮಲಪ್ಪುರಂ ದೋಣಿ ದುರಂತ: ಒಂದೇ ಕುಟುಂಬದ 12 ಸದಸ್ಯರು ಸಹಿತ 22 ಮಂದಿ ಮೃತ್ಯು. ಮೃತರ ಕುಟುಂಬಕ್ಕೆ ಹತ್ತು ಲಕ್ಷ ರೂ ಪರಿಹಾರ ಘೋಷಣೆ

Posted by Vidyamaana on 2023-05-08 09:50:17 |

Share: | | | | |


ಮಲಪ್ಪುರಂ ದೋಣಿ ದುರಂತ: ಒಂದೇ ಕುಟುಂಬದ 12 ಸದಸ್ಯರು ಸಹಿತ 22 ಮಂದಿ ಮೃತ್ಯು. ಮೃತರ ಕುಟುಂಬಕ್ಕೆ ಹತ್ತು ಲಕ್ಷ ರೂ ಪರಿಹಾರ ಘೋಷಣೆ

ಮಲಪ್ಪುರಂ: ಮಲಪ್ಪುರಂನಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 22 ಮಂದಿಯನ್ನು ಬಲಿ ತೆಗೆದುಕೊಂಡ ಪ್ರವಾಸಿ ದೋಣಿ ದುರಂತದ ನ್ಯಾಯಾಂಗ ತನಿಖೆಗೆ ಕೇರಳ ಸರ್ಕಾರವು ಸೋಮವಾರ ಘೋಷಿಸಿದೆ. ಅಲ್ಲದೆ ಮೃತರ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರವನ್ನು ನೀಡಲು ನಿರ್ಧರಿಸಿದೆ.ತಿರುರಂಗಂಡಿ ತಾಲೂಕು ಆಸ್ಪತ್ರೆ ಮತ್ತು 12 ಸದಸ್ಯರನ್ನು ಕಳೆದುಕೊಂಡ ಕುನ್ನುಮ್ಮೆಲ್ ಕುಟುಂಬಕ್ಕೆ ಭೇಟಿ ನೀಡಿದ ನಂತರ ಇಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅಪಘಾತವನ್ನು ‘ದುರಂತ’ ಎಂದು ಬಣ್ಣಿಸಿದರು. ಚಿಕಿತ್ಸೆಯಲ್ಲಿರುವವರ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದರು.ತಾನೂರಿನಲ್ಲಿ ನಡೆದ ಸರ್ವಪಕ್ಷಗಳ ಸಭೆಯ ನಂತರ ವಿಜಯನ್ ಅವರು ತನಿಖೆ ಮತ್ತು ಪರಿಹಾರವನ್ನು ಘೋಷಿಸಿದರು. ಸಭೆಯಲ್ಲಿ ವಿರೋಧ ಪಕ್ಷದ ಹಿರಿಯ ನಾಯಕರು ಭಾಗವಹಿಸಿದ್ದರು.

ನಡುರಸ್ತೆಯಲ್ಲೇ ಗ್ರಾಮ ಪಂಚಾಯತ್ ಅಧ್ಯಕ್ಷನ ಬರ್ಬರ ಹತ್ಯೆ

Posted by Vidyamaana on 2023-10-13 13:03:13 |

Share: | | | | |


ನಡುರಸ್ತೆಯಲ್ಲೇ ಗ್ರಾಮ ಪಂಚಾಯತ್ ಅಧ್ಯಕ್ಷನ ಬರ್ಬರ ಹತ್ಯೆ

ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಪುರ ಗ್ರಾಮದಲ್ಲಿ ನಡೆದಿದೆ.

ಮದರಾ ಬಿ. ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಗೌಡಪ್ಪಗೌಡ ಪಾಟೀಲ್(50) ಎನ್ನುವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

ಗೌಡಪ್ಪಗೌಡ, ಅಫಜಲಪುರ ತಾಲೂಕಿನ ಮದರಿ ಗ್ರಾಮದ ನಿವಾಸಿಯಾಗಿದ್ದು. ಹಳೇ ವೈಷಮ್ಯ ಹಿನ್ನೆಲೆ ಗೌಡಪ್ಪಗೌಡನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಪುತ್ತೂರು ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

Posted by Vidyamaana on 2024-01-07 16:52:05 |

Share: | | | | |


ಪುತ್ತೂರು ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಪುತ್ತೂರು : ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಈಶ್ವರಮಂಗಲ ಸಮೀಪದ ಸುಳ್ಯಪದವು ಕನ್ನಡ್ಕದಲ್ಲಿ ನಡೆದಿದೆ.


ಕನ್ನಡ್ಕ ನಿವಾಸಿ, ಫಿಲೋಮಿನಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ದೀಕ್ಷಾ (16ವ) ಮೃತ ಯುವತಿ.ದೀಕ್ಷಾ ಮನೆಯ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ  ಕಾರಣ ತಿಳಿದು ಬಂದಿಲ್ಲ. ದೀಕ್ಷಾ ವಾಣಿಜ್ಯ ವಿಭಾಗದಲ್ಲಿ ಕಲಿಯುತ್ತಿದ್ದು, ನಾಳೆ ಅವರಿಗೆ ಲ್ಯಾಬ್ ಪರೀಕ್ಷೆಯಿತ್ತು ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.


ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೂಡಿಗೆರೆ : ರಸ್ತೆ ಮಧ್ಯ ಹಸುವಿಗೆ ಢಿಕ್ಕಿಯಾದ ಬೈಕ್ ಸವಾರರ ಮೇಲೆ ಹರಿದ ಲಾರಿ

Posted by Vidyamaana on 2023-11-05 04:30:43 |

Share: | | | | |


ಮೂಡಿಗೆರೆ : ರಸ್ತೆ ಮಧ್ಯ ಹಸುವಿಗೆ ಢಿಕ್ಕಿಯಾದ ಬೈಕ್ ಸವಾರರ ಮೇಲೆ ಹರಿದ ಲಾರಿ

ಮೂಡಿಗೆರೆ: ತಾಲೂಕಿನ ಬಿದರಹಳ್ಳಿ ಬಸ್ ಡಿಪೋ ಬಳಿ ಶನಿವಾರ ಭೀಕರ ಅಪಘಾತ ಸಂಭವಿಸಿದ್ದು, ರಸ್ತೆಮಧ್ಯೆ ಕೂತಿದ್ದ ಹಸುವಿಗೆ ಬೈಕ್ ಢಿಕ್ಕಿಯಾಗಿ ಕೆಳಗೆ ಬಿದ್ದ ಬೈಕ್ ಸವಾರರ ಮೇಲೆ ಗ್ಯಾಸ್ ಲಾರಿ ಹರಿದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರೆ ಗಂಭೀರವಾಗಿ ಗಾಯಗೊಂಡಿದ್ದಾರೆ.



ಲಾರಿ ಚಕ್ರದಡಿಗೆ ಸಿಲುಕಿದ ಪರಿಣಾಮವಾಗಿ ವಿಶ್ವೇಂದ್ರ (43) ಎಂಬ ದುರ್ದೈವಿ ಛಿದ್ರ-ಛಿದ್ರವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಭೀಕರ ಅಪಘಾತ ನಡೆದಿದ್ದು, ಬೈಕ್ ಹಿಂಬದಿ ಸವಾರೆಯಾಗಿದ್ದ ಲಕ್ಷ್ಮೀ ಎಂಬ ಮಹಿಳೆಯ ಕಾಲು ತುಂಡಾಗಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಇಬ್ಬರೂ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಲ್ಕೆರೆ ಗ್ರಾಮದವರು ಎಂದು ತಿಳಿದು ಬಂದಿದೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೆಸ್ ವಿಶ್ವಕಪ್ : ಪ್ರಜ್ಞಾನಂದಗೆ ವಿರೋಚಿತ ಸೋಲು

Posted by Vidyamaana on 2023-08-24 12:42:34 |

Share: | | | | |


ಚೆಸ್ ವಿಶ್ವಕಪ್ : ಪ್ರಜ್ಞಾನಂದಗೆ ವಿರೋಚಿತ ಸೋಲು

ವಿಶ್ವಕಪ್ ಚೆಸ್ ಫೈನಲ್ ಪಂದ್ಯದಲ್ಲಿ 2 ದಶಕಗಳ ಬಳಿಕ ಫೈನಲ್ ಪ್ರವೇಶಿಸಿದ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್ ಕಾರ್ಲ್ ಸನ್ವಿರುದ್ಧ ಸೋಲು ಕಂಡಿದ್ದಾರೆ.



ಆದರೆ ಸೋತರೂ ಕೊಟ್ಯಂತರ ಭಾರತೀಯ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.


ರಣರೋಚಕ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ವಿಶ್ವದ ನಂಬರ್ 1 ಚೆಸ್ ತಾರೆಗೆ ಎಲ್ಲಾ ರೀತಿಯಲ್ಲೂ ಪೈಪೋಟಿ ನೀಡುವಲ್ಲಿ ಪ್ರಜ್ಞಾನಂದ ಯಶಸ್ವಿಯಾಗಿದ್ದರು. ಆದರೆ ಟೈಬ್ರೇಕ್ ನಲ್ಲಿ ಮೇಲುಗೈ ಸಾಧಿಸುವ ಮೂಲಕ ಕಾರ್ಲ್ ಸೆನ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.



ಗುರುವಾರ ನಡೆದ ಟೈ ಬ್ರೇಕರ್ ಪಂದ್ಯದಲ್ಲಿ ಮೊದಲ ಸೆಟ್ ನಲ್ಲಿ ಹಿನ್ನಡೆ ಅನುಭವಿಸಿದ ಅವರು ಆ ಬಳಿಕದ ಸುತ್ತಿನಲ್ಲಿ ಡ್ರಾ ಸಾಧಿಸಿದರು. ಆದರೆ 1-0 ಮುನ್ನಡೆ ಕಾಯ್ದುಕೊಂಡ ಮ್ಯಾಗ್ನಸ್ ಕಾರ್ಲ್ ಸನ್ ಗೆದ್ದು 6ನೇ ಬಾರಿ ವಿಶ್ವ ಕಿರೀಟ ಗೆದ್ದರು. ಪ್ರಜ್ಞಾನಂದ ಅವರು ವಿಶ್ವನಾಥನ್ ಆನಂದ್ ಬಳಿಕ ಚೆಸ್ ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿದ ಕೇವಲ 2ನೇ ಭಾರತೀಯ ಎನಿಸಿಕೊಂಡಿದ್ದಾರೆ

ಸೌಜನ್ಯ ಸಮಾಧಿಗೆ ನಮಿಸಿ ತಾಯಿಗೆ ಆಮಂತ್ರಣ

Posted by Vidyamaana on 2023-08-11 11:51:00 |

Share: | | | | |


ಸೌಜನ್ಯ ಸಮಾಧಿಗೆ ನಮಿಸಿ ತಾಯಿಗೆ ಆಮಂತ್ರಣ

ಪುತ್ತೂರು: ಹಿಂದೂ ಫೈರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ಅವರ ಹೆಸರಿನಲ್ಲಿ ಹುಟ್ಟಿಕೊಂಡ ಪುತ್ತಿಲ‌ ಪರಿವಾರ ಇದೀಗ ಸೌಜನ್ಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ದಿಶೆಯಲ್ಲೂ ಹೋರಾಟ ಹಮ್ಮಿಕೊಂಡಿದೆ.

ಹಿಂದೂ ಪರವಾದ ಹಲವು ಹೋರಾಟಗಳನ್ನು ಹಮ್ಮಿಕೊಂಡು, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸಿ ಸೈ ಎನಿಸಿಕೊಂಡಿರುವುದು ಪುತ್ತಿಲ ಬಳಗದ ಹೆಚ್ಚುಗಾರಿಕೆ. ಚುನಾವಣೆ ಬಳಿಕ ಪುತ್ತಿಲ ಪರಿವಾರ ಸಂಘಟನೆ‌ ಅಸ್ತಿತ್ವಕ್ಕೆ ಬಂದಿದ್ದು, ಅದರ ಮೂಲಕ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು‌ ಹಮ್ಮಿಕೊಳ್ಳಲಾಗುತ್ತಿದೆ. ಇದೀಗ ಅತ್ಯಾಚಾರವಾಗಿ ಕೊಲೆಯಾದ ಸೌಜನ್ಯ ಪ್ರಕರಣವನ್ನು ಮರುತನಿಖೆ ನಡೆಸಬೇಕೆಂದು ಪುತ್ತೂರಿನಲ್ಲಿ ಆಗಸ್ಟ್ 14 ರಂದು ಪುತ್ತಿಲ ಪರಿವಾರದ ವತಿಯಿಂದ ಪಾದಯಾತ್ರೆ ಹಾಗೂ ರಸ್ತೆ ತಡೆ ಆಯೋಜಿಸಲಾಗಿದೆ. ಈ ಹೋರಾಟಕ್ಕೆ ಸೌಜನ್ಯ ತಾಯಿ ಕುಸುಮಾವತಿ ಅವರನ್ನು ಪುತ್ತಿಲ ಪರಿವಾರದ ವತಿಯಿಂದ ಆಹ್ವಾನಿಸಲಾಗಿದೆ.

ಸೌಜನ್ಯ ಸಮಾಧಿ ಬಳಿ ಪ್ರಾರ್ಥನೆ ಸಲ್ಲಿಸಿ, ತಾಯಿಗೆ ಮೊದಲ ಆಮಂತ್ರಣ ನೀಡಲಾಯಿತು.

ತಾಯಿ ಕುಸುಮಾವತಿ ಅವರ ಬಳಿ ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ವೀರಮಂಗಲ ಆಮಂತ್ರಣ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. 2013ರಲ್ಲೂ ಅರುಣ್ ಕುಮಾರ್ ಪುತ್ತಿಲರು ಹೋರಾಟ ನಡೆಸಿದ್ದಾರೆ. ಈಗ ಮರುತನಿಖೆಗೆ ಆಗ್ರಹಿಸಿ ಪುತ್ತೂರಿನಲ್ಲಿ ಹೋರಾಟ ನಡೆಸಲಿದ್ದೇವೆ. ಈ ಹೋರಾಟದ ಮೊದಲ ಆಮಂತ್ರಣ ನಿಮಗೆ ನೀಡಿ ಆಮಂತ್ರಿಸುತ್ತಿದ್ದೇವೆ ಎಂದರು.

ಈ ಸಂದರ್ಭ ನಗರ ಅಧ್ಯಕ್ಷರಾದ ಅನಿಲ್ ತೆಂಕಿಲ, ಮನೀಶ್, ಶನ್ಮಿತ್ ರೈ, ಶರತ್ ಎನ್.ಎಸ್. ವಿಟ್ಲ ಮೊದಲಾದವರು ಹಾಜರಿದ್ದರು.


ಆ.14ರಂದು ಬೆಳಿಗ್ಗೆ 9.30ರಿಂದ ದರ್ಬೆಯಿಂದ ಬಸ್ ನಿಲ್ದಾಣದವರೆಗೆ ಜಾಥಾ ಹಾಗೂ ರಸ್ತೆ ತಡೆ ನಡೆಯಲಿದೆ.


10 ಗಂಟೆಯಿಂದ 11 ಗಂಟೆಯವರೆಗೆ ಪುತ್ತೂರಿನ ಅಂಗಡಿ ಮಾಲೀಕರು 1 ಗಂಟೆ ಸ್ವಯಂಪ್ರೇರಿತ ಬಂದ್ ನಡೆಸಿ ಸೌಜನ್ಯಾ ಪ್ರಕರಣದ ನ್ಯಾಯಕ್ಕಾಗಿ ನಡೆಯುವ ಹೋರಾಟದಲ್ಲಿ ಭಾಗವಹಿಸುವಂತೆ ಕೇಳಿಕೊಳ್ಳಲಾಗಿದೆ.



Leave a Comment: