ನಕಲಿ ದಾಖಲೆ ಪತ್ರ ಜಾಲ ಪತ್ತೆ: ಪುತ್ತೂರು ಮೂಲದ ಆರೋಪಿ ಸಿಸಿಬಿ ಬಲೆಗೆ

ಸುದ್ದಿಗಳು News

Posted by vidyamaana on 2023-10-06 20:36:38 | Last Updated by Vidyamaana on 2023-10-06 20:36:38

Share: | | | | |


ನಕಲಿ ದಾಖಲೆ ಪತ್ರ ಜಾಲ ಪತ್ತೆ: ಪುತ್ತೂರು ಮೂಲದ ಆರೋಪಿ ಸಿಸಿಬಿ ಬಲೆಗೆ

ಮಂಗಳೂರು, ಅ.6: ಆಧಾರ್, ರೇಶನ್ ಕಾರ್ಡ್, ಅಂಕಪಟ್ಟಿ ಮತ್ತಿತರ ಅತ್ಯಮೂಲ್ಯ ದಾಖಲೆ ಪತ್ರಗಳನ್ನೇ ಸೃಷ್ಟಿಸಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಹಾರ್ಟ್ ಅಟ್ಯಾಕ್ - ಹಾರ್ಟ್ ಫೈಲ್ಯೂರ್ - ಕಾರ್ಡಿಯಾಕ್ ಅರೆಸ್ಟ್: ಏನಿದೆ ವ್ಯತ್ಯಾಸ?



ಮಂಗಳೂರು ನಗರದ ಕಂಕನಾಡಿ– ಪಂಪ್ವೆಲ್ ಹಳೆ ರಸ್ತೆಯ ವಿಶ್ವಾಸ್ ಕ್ರೌನ್ ಅಪಾರ್ಟ್ಮೆಂಟಿನ ನೆಲ ಅಂತಸ್ತಿನಲ್ಲಿ ‘’ಹೆಲ್ಪ್ ಲೈನ್ ಮಂಗಳೂರು” ಎಂಬ ಹೆಸರಿನ ಶಾಪ್ ಇಟ್ಟುಕೊಂಡು ನಕಲಿ ದಾಖಲಾತಿಗಳನ್ನು ತಯಾರಿಸಿಕೊಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಕರ್ನಕಟ್ಟೆ ನಿವಾಸಿ ಬರ್ನಾಡ್ ರೋಶನ್ ಮೆಸ್ಕರೇನಸ್ (41) ಮೂಲತ ಪುತ್ತೂರು ತಾಲೂಕಿನ ದರ್ಬೆ ಕಾವೇರಿ ಕಟ್ಟೆ ನಿವಾಸಿ 

 ಹಾರ್ಟ್ ಅಟ್ಯಾಕ್ - ಹಾರ್ಟ್ ಫೈಲ್ಯೂರ್ - ಕಾರ್ಡಿಯಾಕ್ ಅರೆಸ್ಟ್: ಏನಿದೆ ವ್ಯತ್ಯಾಸ?


ಈತನ ಕಚೇರಿಯಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ, ನಕಲಿ ಶೈಕ್ಷಣಿಕ ದಾಖಲೆ ಪತ್ರಗಳು, ಜನನ ಪ್ರಮಾಣಪತ್ರ ಇತ್ಯಾದಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಅವುಗಳನ್ನು ಬಳಸಿಕೊಂಡು ಇತರೇ ದಾಖಲಾತಿಗಳನ್ನು ಮಾಡಿಕೊಡುತ್ತಿದ್ದ. ಅವನ್ನೇ ನೈಜ ದಾಖಲಾತಿಗಳೆಂದು ನಂಬಿಸಿ ಸಾರ್ವಜನಿಕರಿಗೆ ಮತ್ತು ಸರಕಾರಕ್ಕೆ ವಂಚಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ  ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.

 

ದಾಳಿ ಸಂದರ್ಭದಲ್ಲಿ ವಿವಿಧ ಹೆಸರುಗಳಲ್ಲಿ ತಯಾರಿಸಿಟ್ಟಿದ್ದ ನಕಲಿ ಆಧಾರ್ ಕಾರ್ಡ್ ಗಳು, ನಕಲಿ ರೇಷನ್ ಕಾರ್ಡ್, ನಕಲಿ ಉದ್ದಿಮೆ ಪರವಾನಿಗೆ ಪತ್ರ, ನಕಲಿ ಎಸ್ಎಸ್ಎಲ್ಸಿ ಅಂಕಪಟ್ಟಿ, ನಕಲಿ ಜನನ ಪ್ರಮಾಣ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ಮೂರು ವರ್ಷಗಳಿಂದ ಈತನಿಂದ ನಕಲಿ ದಾಖಲಾತಿಗಳನ್ನು ಪಡೆದವರು ಬ್ಯಾಂಕ್ ಇನ್ನಿತರ ಕಚೇರಿಗಳಿಗೆ ಸಾಲ ಸೌಲಭ್ಯಕ್ಕಾಗಿ ಮತ್ತು ಸರಕಾರಿ ಸೌಲಭ್ಯಗಳನ್ನು ಪಡೆಯಲು ಉಪಯೋಗಿಸಿದ್ದಾರೆ. ಆಮೂಲಕ ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟ ಉಂಟು ಮಾಡಿದ್ದಾನೆ.

 ಹಾರ್ಟ್ ಅಟ್ಯಾಕ್ - ಹಾರ್ಟ್ ಫೈಲ್ಯೂರ್ - ಕಾರ್ಡಿಯಾಕ್ ಅರೆಸ್ಟ್: ಏನಿದೆ ವ್ಯತ್ಯಾಸ?


ನಕಲಿ ಪ್ರಮಾಣ ಪತ್ರಗಳನ್ನು ತಯಾರಿಸಲು ಬಳಸುತ್ತಿದ್ದ ಲ್ಯಾಪ್ ಟಾಪ್, ಕಲರ್ ಪ್ರಿಂಟರ್, ಲ್ಯಾಮಿನೇಟರ್ ಮೆಶಿನ್, ಬಯೋಮೆಟ್ರಿಕ್ ಡಿವೈಸ್ ಗಳನ್ನು ವಶಪಡಿಸಲಾಗಿದೆ. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ದಾಖಲೆ ಪತ್ರ ತಯಾರಿ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು ಪತ್ತೆ ಕಾರ್ಯ ಮುಂದುವರಿದಿದೆ. 


ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಸಿಸಿಬಿ ಎಸಿಪಿ ಪಿಎ ಹೆಗಡೆ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಶ್ಯಾಮಸುಂದರ್, ತಂಡದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

 Share: | | | | |


ಲಿಟ್ಲ್ ಫ್ಲವ‌ರ್ ಶಾಲೆಯಲ್ಲಿ ಮೇಲೈಸಿದ ಶಾಲಾ ಸ್ಕೌಟ್ ಗೈಡ್, ಕಬ್, ಬುಲ್ ಬುಲ್ ದಳದ ವಾರ್ಷಿಕ ಮೇಳ

Posted by Vidyamaana on 2024-02-18 07:45:15 |

Share: | | | | |


ಲಿಟ್ಲ್  ಫ್ಲವ‌ರ್ ಶಾಲೆಯಲ್ಲಿ ಮೇಲೈಸಿದ ಶಾಲಾ ಸ್ಕೌಟ್  ಗೈಡ್, ಕಬ್, ಬುಲ್ ಬುಲ್ ದಳದ ವಾರ್ಷಿಕ ಮೇಳ

ಪುತ್ತೂರು: ದರ್ಬೆ ಲಿಟ್ಲ್  ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಸ್ಕೌಟ್ , ಗೈಡ್, ಕಬ್ ಮತ್ತು ಬುಲ್ ಬುಲ್ ದಳದ ವಾರ್ಷಿಕ ಮೇಳ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಶಾಲಾ ಸೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ಮಕ್ಕಳಿಂದ ಗೂಡುದೀಪ ರಚನೆ, ನಕ್ಷತ್ರ ರಚನೆ, ರಾಷ್ಟ್ರಧ್ವಜದ ಚಿತ್ರ ರಚನೆ, ಎಲೆಗಳಿಂದ ಆಕೃತಿ ತಯಾರಿ ನಡೆಯಿತು. ರಂಗಬೆಳಕು ತಂಡ ಪುತ್ತೂರು ವತಿಯಿಂದ ಕೃಷ್ಣಪ್ಪ ಬಂಬಿಲ ನೇತೃತ್ವದಲ್ಲಿ ಜಾಗೃತಿ ಗೀತೆಗಳ ಗಾಯನ ನಡೆಯಿತು. ದರ್ಬೆ ವೃತ್ತದಿಂದ 352 ವಿದ್ಯಾರ್ಥಿಗಳು, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆದ ಆಕರ್ಷಕ ಪಥಸಂಚಲನವನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್ ಉದ್ಘಾಟಿಸಿದರು. ನಂತರ ಶಾಲಾ ಸ್ಕೌಟ್ , ಗೈಡ್, ಕಬ್ ಮತ್ತು ಬುಲ್ ಬುಲ್ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಕರೋಕೆ ಹಾಡುಗಳ ಸುಮಧುರ ಗಾಯನ ನೆರವೇರಿತು.ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ. ಎಸ್., ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್‌, ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷ ಸತೀಶ್‌ ಆ‌ರ್, ಶಾಲಾ ಸೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ದಳದವರು, ಶಿಕ್ಷಕ ಶಿಕ್ಷಕಿಯರ ಉಪಸ್ಥಿತಿಯೊಂದಿಗೆ ಧ್ವಜಾರೋಹಣ ನೆರವೇರಿತು. ಬಳಿಕ ನಡೆದ ಸಮಾರಂಭವನ್ನು ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ, ಉದ್ಘಾಟಿಸಿದರು. ಶಾಲಾ ಸಂಚಾಲಕಿ ವಂದನೀಯ ಭಗಿನಿ ಪ್ರಶಾಂತಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ಧೇಶಕ ಡಾ. ಯು. ಪಿ ಶಿವಾನಂದ, ಪುತ್ತೂರು ನಗರ ಸಭೆಯ ಸ್ಥಳೀಯ ಸದಸ್ಯೆ ಶಶಿಕಲಾ, ನಿವೃತ್ತ ಸೈನಿಕರ ಸಂಘದ ಗೌರವಾಧ್ಯಕ್ಷ ಕರ್ನಲ್ ಡಿ. ಜಿ. ಭಟ್‌, ನಿವೃತ್ತ ಶಿಕ್ಷಕಿ ಮೇರಿ ಡಿಸಿಲ್ವ, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್, ಶಾಲಾ ಸುರಕ್ಷಾ ಸಮಿತಿಯ ಅಧ್ಯಕ್ಷ ಸತೀಶ್‌ ಆ‌ರ್. ಉಪಸ್ಥಿತರಿದ್ದರು.ಬಳಿಕ ಕೆಮ್ಮಿಂಜೆ ಅಗ್ನಿಶಾಮಕ ದಳದ ವತಿಯಿಂದ ಅಗ್ನಿಶಾಮಕ ಪ್ರಾತ್ಯಕ್ಷಿಕೆ ಅಗ್ನಿಶಾಮಕ ದಳದ ಮುಖ್ಯಸ್ಥ ರುಕ್ಕಯ ಗೌಡ ಅವರ ನೇತೃತ್ವದಲ್ಲಿ ನೆರವೇರಿತು. ಬಳಿಕ ಪುತ್ತೂರು ಸೌಟ್, ಗೈಡ್, ಸ್ಥಳೀಯ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ವೇದಾವತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ ಶಾಲಾ ಸಂಚಾಲಕಿ ವಂದನೀಯ ಭಗಿನಿ ಪ್ರಶಾಂತಿ ಬಿ. ಎಸ್. ಅಧ್ಯಕ್ಷತೆಯಲ್ಲಿ, ಪುತ್ತೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾನ್ಯ ಲೋಕೇಶ್ ಎಸ್‌. ಆ‌ರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಪುತ್ತೂರು ಸೈಟ್, ಗೈಡ್, ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ವಿದ್ಯಾ ಆರ್. ಗೌರಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪಾಪೆಮಜಲು ಇಲ್ಲಿನ ಶಿಕ್ಷಕಿ ಶ್ರೀಮತಿ ಮೇಬಲ್ ಡಿಸೋಜ, ಪುತ್ತೂರು ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶಶಿಕಲಾ, ಅಮ‌ರ್ ಅಕ್ಟ‌ರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿಯ ಸ್ಥಾಪಕಾಧ್ಯಕ್ಷರಾದ ರಝಾಕ್ ಬಪ್ಪಳಿಗೆ, ಶಾಲಾ ದಾನಿಗಳಾದ ಶ್ರೀಮತಿ ಸುನೀತಾ ರಕ್ಷಕ ಶಿಕ್ಷಕ ಸಂಘದ ನಿಕಟಪೂರ್ವ ಉಪಾಧ್ಯಕ್ಷರಾದ ಶ್ರೀಯುತ ರಘುನಾಥ ರೈ, ಪುತ್ತೂರು ಸ್ಕೌಟ್ , ಗೈಡ್, ಸ್ಥಳೀಯ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ವೇದಾವತಿ, ಪುತ್ತೂರು ಸ್ಕೌಟ್  ಗೈಡ್ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಶ್ರೀಮತಿ ಡೋರತಿ ಮೇರಿ ಡಿಸೋಜ, ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ಮೇರಿ ಡಿಸಿಲ್ವ, ಶ್ರೀಮತಿ ಲಿಡಿಯಾ ಮರಿಯಾ ರಸ್ಕಿನ್ಹ, ಶ್ರೀಮತಿ ಐರಿನ್ ವೇಗಸ್, ಹಿರಿಯ ವಿದ್ಯಾರ್ಥಿ ಡಾ. ಶ್ರೀಪ್ರಕಾಶ್‌, ಪೋಷಕರಾದ ಶ್ರೀಮತಿ ಡಾ. ವಿಜಯ ಸರಸ್ವತಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಯುತ ರಾಮಚಂದ್ರ ಭಟ್, ಶಾಲಾ ಸುರಕ್ಷಾ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಸತೀಶ್ ಆರ್, ಹಾಗೂ ಭಗಿನಿ ಫೆಲ್ಸಿ ಡಿಸೋಜ ಉಪಸ್ಥಿತರಿದ್ದರು. ಬಳಿಕ 352 ವಿದ್ಯಾರ್ಥಿಗಳ ಭಾಗವಹಿಸುವಿಕೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.ಮರುದಿನ ಬಿ ಪಿ ಸಿಕ್ಸ್ ವ್ಯಾಯಾಮ, ಸರ್ವಧರ್ಮ ಪ್ರಾರ್ಥನೆ ನಡೆಯಿತು. ಉಪಾಹಾರದ ಬಳಿಕ ಬೆಂಕಿ ಬಳಸದ ಅಡುಗೆ ಗಮನ ಸೆಳೆಯಿತು. ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಸಂಚಾಲಕ ಪ್ರವೀಣ್‌ ವರ್ಣಕುಟೀರ ಅವರಿಂದ ಮುಖವಾಡ ತಯಾರಿ, ಗೊಂಬೆ ತಯಾರಿ, ಕರಕುಶಲ ವಸ್ತುಗಳ ಪ್ರಾತ್ಯಕ್ಷಿಕೆ ನೆರವೇರಿತು.


ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಶಿಕ್ಷಕಿ ಭಗಿನಿ ವೆನಿಶಾ ಬಿ. ಎಸ್. ವಹಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್, ಶಾಲಾ ಸ್ಕೌಟ್ಸ್ , ಗೈಡ್, ಕಬ್ ಮತ್ತು ಬುಲ್ ಬುಲ್ ದಳದ ವಾರ್ಷಿಕ ಮೇಳದ ನಾಯಕಿ ವಿಲ್ಮಾ ಫೆರ್ನಾಂಡಿಸ್, ಸ್ಕೌಟ್ಸ್  ಶಿಕ್ಷಕರಾದ ಬಾಲಕೃಷ್ಣ ಪೊರ್ದಾಲ್, ಭವ್ಯ, ಬುಲ್ ಬುಲ್ ಶಿಕ್ಷಕಿಯರಾದ ಜೋಸ್ಲಿನ್ ಪಾಯಸ್, ಮಮತಾ, ದೀಕ್ಷಾ, ಕಬ್ ಶಿಕ್ಷಕಿಯರಾದ ಸುಶ್ಮಿತಾ, ದಿವ್ಯ, ಗೈಡ್ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ಟಾರ್ ಚಂದ್ರು ಪರ ಪ್ರಚಾರಕ್ಕಿಳಿದ ನಟ ದರ್ಶನ್ ಕುಮಾರಸ್ವಾಮಿ ಪರ ಪ್ರಚಾರ ಮಾಡದ ಸುಮಲತಾ

Posted by Vidyamaana on 2024-04-18 12:50:47 |

Share: | | | | |


ಸ್ಟಾರ್ ಚಂದ್ರು ಪರ ಪ್ರಚಾರಕ್ಕಿಳಿದ ನಟ ದರ್ಶನ್ ಕುಮಾರಸ್ವಾಮಿ ಪರ ಪ್ರಚಾರ ಮಾಡದ ಸುಮಲತಾ

ಮಂಡ್ಯ ಏಪ್ರಿಲ್ 18: ಮಂಡ್ಯದ ಲೋಕಸಭಾ ಚುನಾವಣಾ ಅಖಾಡ ರಂಗೇರುತ್ತಿದೆ. ಇಂದು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಹಲಗೂರಿನಲ್ಲಿ ಮತಭೇಟೆ ಆರಂಭಿಸಿದ್ದು, ಸ್ಯಾಂಡಲ್‌ವುಡ್‌ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರದಲ್ಲಿ ಭಾಗವಹಿಸಿ ಅಚ್ಚರಿ ಮೂಡಿಸಿದ್ದಾರೆ.ಈ ವೇಳೆ ಮಂಡ್ಯ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಡಿ ಬಾಸ್ ದರ್ಶನ್, ನಾನು ಅಂದು ಕೂಡ ಇಂದು ಕೂಡ ವ್ಯಕ್ತಿಯನ್ನು ನೋಡಿ ಪ್ರಚಾರಕ್ಕೆ ಬಂದಿದ್ದೇನೆ. ಪಕ್ಷವನ್ನು ನೋಡಿ ಅಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನೂ ಇದೇ ವೇಳೆ,ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರ ನಿಂತಾದ್ದಾರೆ ನಿಮ್ಮ ಅಮೂಲ್ಯವಾದ ಮತ ಅವರಿಗೆ ನೀಡಿ ಎಂದು ಮನವಿ ಮಾಡಿದರು.

ಈ ಬಾರಿ ಕಾಂಗ್ರೆಸ್‌ ವಿರುದ್ಧ ಜಯ ಸಾಧಿಸಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತಿವೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಎಚ್‌ಡಿ ಕುಮರಸ್ವಾಮಿಗೆ ಟಿಕೆಟ್ ನೀಡಲಾಗಿದೆ. ಸಂಸದೆ ಸಮಲತಾ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಮಾತ್ರವಲ್ಲದೆ ಬಿಜೆಪಿಗೆ ಮತ ಹಾಕಿ ಅಂತಲೂ ಹೇಳಿದ್ದಾರೆ

ಚಂಡೀಗಢ ಮೇಯರ್ ಚುನಾವಣೆ

Posted by Vidyamaana on 2024-02-21 04:29:50 |

Share: | | | | |


ಚಂಡೀಗಢ ಮೇಯರ್ ಚುನಾವಣೆ

ನವದೆಹಲಿ, ಫೆ.21: ಭಾರೀ ಚರ್ಚೆಗೆ ಗ್ರಾಸವಾಗಿದ್ದ ಚಂಡೀಗಢ ಮೇಯರ್ ಸ್ಥಾನದ ಚುನಾವಣೆಯ ಬಗ್ಗೆ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯನ್ನು ಗೆದ್ದ ಅಭ್ಯರ್ಥಿಯೆಂದು ಘೋಷಿಸಿದೆ. ಅಲ್ಲದೆ, ಮತಪತ್ರಗಳನ್ನು ತಿರುಚಿದ್ದ ಚುನಾವಣಾಧಿಕಾರಿ ಅನಿಲ್ ಮೆಸ್ಸಿ ಅವರ ವಿರುದ್ಧ ಛೀಮಾರಿ ಹಾಕಿದ್ದು, ಕಾನೂನು ಕ್ರಮಕ್ಕೆ ನೋಟೀಸ್ ಮಾಡಿದೆ.


ಜನವರಿ 30ರಂದು ನಡೆದ ಚಂಡೀಗಢ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಆಪ್- ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಕುಲದೀಪ್ ಕುಮಾರ್ ಅವರನ್ನು ಸೋಲಿಸಲು ಚುನಾವಣಾಧಿಕಾರಿ ಮತ ಪತ್ರಗಳನ್ನೇ ತಿರುಚಿದ್ದರು ಎಂಬ ಆರೋಪ ಕೇಳಿಬಂದಿತ್ತು. ಚುನಾವಣೆಯಲ್ಲಿ ಎಂಟು ಮತಪತ್ರಗಳನ್ನು ಅಸಿಂಧು ಎಂದು ಹೇಳಿ ಬಿಜೆಪಿ ಅಭ್ಯರ್ಥಿ ಮನೋಜ್ ಸೋನ್ಕರ್ ಗೆಲ್ಲಲು ಸಹಕರಿಸಿದ್ದರು. ಬಿಜೆಪಿ ಪರವಾಗಿ 16 ಮತ, ಆಪ್ ಪರವಾಗಿ 14 ಮತಗಳು ಬಿದ್ದಿದ್ದವು. ಆಪ್ ಪರವಾಗಿದ್ದ ಎಂಟು ಮತಗಳನ್ನು ಅಸಿಂಧುವೆಂದು ಹೇಳಲಾಗಿತ್ತು.


ಈ ಬಗ್ಗೆ ಆಪ್ ಮತ್ತು ಕಾಂಗ್ರೆಸ್ ಪಂಜಾಬ್- ಹರ್ಯಾಣ ಹೈಕೋರ್ಟಿನಲ್ಲಿ ದೂರು ಸಲ್ಲಿಸಿತ್ತು. ಒಟ್ಟು ಚುನಾವಣೆ ಪ್ರಕ್ರಿಯೆಯನ್ನು ರದ್ದುಪಡಿಸಿ ಮರು ಚುನಾವಣೆ ನಡೆಸುವಂತೆ ಕೇಳಿಕೊಂಡಿತ್ತು. ಆದರೆ ಚುನಾವಣೆ ರದ್ದುಪಡಿಸಲು ಹೈಕೋರ್ಟ್ ಒಪ್ಪಿರಲಿಲ್ಲ. ಆನಂತರ, ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಲಾಗಿತ್ತು. ಕೋರ್ಟಿಗೆ ಚುನಾವಣಾಧಿಕಾರಿ ಮತಪತ್ರಗಳನ್ನು ತಿರುಚಿದ ಬಗ್ಗೆ ಸಾಕ್ಷ್ಯವನ್ನು ಒದಗಿಸಲಾಗಿತ್ತು. ಅದರಂತೆ ತೀರ್ಪು ನೀಡಿರುವ ಕೋರ್ಟ್, ಅಸಿಂಧುಗೊಳಿಸಿದ ಮತಪತ್ರಗಳನ್ನು ಊರ್ಜಿತಗೊಳಿಸಿದ್ದು ಆಪ್ ಅಭ್ಯರ್ಥಿಯೇ ಮೇಯರ್ ಎಂದು ಘೋಷಣೆ ಮಾಡಿದೆ. ಅಲ್ಲದೆ, ಚುನಾವಣಾಧಿಕಾರಿ ಅನಿಲ್ ಮೆಸ್ಸಿ ವಿರುದ್ಧ ಗಂಭೀರ ಲೋಪ ಎಸಗಿದ್ದಕ್ಕಾಗಿ ಕಾನೂನು ಕ್ರಮಕ್ಕೆ ಶಿಫಾರಸು ಮಾಡಿದೆ. ನಿಮ್ಮ ವಿರುದ್ಧ ಏಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಶೋಕಾಸ್ ನೋಟಿಸ್ ನೀಡಿದ್ದು, ಹೈಕೋರ್ಟಿಗೆ ಮೂರು ವಾರಗಳಲ್ಲಿ ಸ್ಪಷ್ಟನೆ ನೀಡುವಂತೆ ಸೂಚಿಸಿದೆ.


ಚಂಡೀಗಢ ಮೇಯರ್ ಆಯ್ಕೆಯಲ್ಲಿ ಬಿಜೆಪಿಯೇ ಚುನಾವಣಾಧಿಕಾರಿಯನ್ನು ತನ್ನ ಪರವಾಗಿ ಬಳಸಿಕೊಂಡಿದೆ ಎಂಬ ಆರೋಪ ವ್ಯಕ್ತವಾಗಿತ್ತು. ಆದರೆ, ಬಿಜೆಪಿ ತನ್ನ ಮೇಲಿನ ಆರೋಪವನ್ನು ನಿರಾಕರಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಬಿಜೆಪಿಗೆ ಪರೋಕ್ಷವಾಗಿ ಚಾಟಿ ಬೀಸಿದಂತಾಗಿದೆ. ಎಂಟು ಮತ ಪತ್ರಗಳನ್ನು ಅಕ್ರಮವಾಗಿ ಅಸಿಂಧುಗೊಳಿಸಿದ ಕಾರಣದಿಂದ ಬಿಜೆಪಿ ಅಭ್ಯರ್ಥಿ ಮೇಯರ್ ಆಗುವಂತಾಗಿತ್ತು.

ಬೆಳ್ತಂಗಡಿ : ಚಾರ್ಮಾಡಿ ಅಕ್ರಮ ಮರಳು ಸಾಗಾಟ

Posted by Vidyamaana on 2023-07-16 16:31:27 |

Share: | | | | |


ಬೆಳ್ತಂಗಡಿ : ಚಾರ್ಮಾಡಿ ಅಕ್ರಮ ಮರಳು ಸಾಗಾಟ

ಬೆಳ್ತಂಗಡಿ: ಚಾರ್ಮಾಡಿಯಲ್ಲಿ ಪರವಾನಿಗೆ ಇಲ್ಲದೆ ಸಾಗಿಸುತಿದ್ದ ಅಕ್ರಮ ಮರಳು ಸಾಗಾಟದ ಲಾರಿಯನ್ನು ಧರ್ಮಸ್ಥಳ ಪೊಲೀಸರು ವಶ ಪಡಿಸಿಕೊಂಡ ಘಟನೆ ಚಾರ್ಮಾಡಿಯಲ್ಲಿ ನಡೆದಿದೆ.


ಚಾರ್ಮಾಡಿಯಲ್ಲಿ  ವಾಹನಗಳನ್ನು  ತಪಾಸಣೆಗೈಯುತ್ತಿರುವ ವೇಳೆ ಮುನೀರ್ ಎಂಬತನಿಗೆ ಸೇರಿದ KA-19-AB-9516 ಸಂಖ್ಯೆಯ ಸುಲ್ತಾನ್ ಎಂಬ ಹೆಸರಿನ ಲಾರಿಯೊಂದನ್ನು ನಿಲ್ಲಿಸಿ ತಪಾಸಣೆ ಮಾಡುವಾಗ ಅದರಲ್ಲಿ ಯಾವುದೇ ಸರಕಾರಕ್ಕೆ ಉಪ ಖನಜ ಪಾವತಿ ಮಾಡದೆ ಪರವಾನಿಗೆ ಪಡೆಯದೆ ಅಕ್ರಮ ಮರಳು ಸಾಗಿಸುತ್ತಿರುವುದು ಪತ್ತೆಯಾಗಿದೆ.


ಲಾರಿ ಚಾಲಕ ಅನ್ಸರ್ ಎಂಬಾತನಲ್ಲಿ ಮರಳು ಸಾಗಾಟದ ಪರವಾನಿಗೆ ಹಾಗೂ ದಾಖಲೆಗಳನ್ನು ಕೇಳಿದಾಗ ಯಾವುದೇ ದಾಖಲೆಗಳಿಲ್ಲ ಎಂದಿದ್ದು ಅದರಂತೆ ಲಾರಿಯನ್ನು ವಶಪಡಿಸಿಕೊಂಡ ಧರ್ಮಸ್ಥಳ ಪೊಲೀಸರು  ಮುಂದಿನ ಕ್ರಮಕ್ಕಾಗಿ ಗಣಿ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.


ತಪಾಸಣೆ ವೇಳೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಡಿ , ಸಿಬ್ಬಂದಿಗಳಾದ ಪ್ರಶಾಂತ್, ಮಲ್ಲಿಕಾರ್ಜುನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

ಕುಂಡಡ್ಕ ನಿವಾಸಿ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್ ತಲಪಾಡಿಯಿಂದ ನಾಪತ್ತೆ

Posted by Vidyamaana on 2023-11-18 11:58:36 |

Share: | | | | |


ಕುಂಡಡ್ಕ ನಿವಾಸಿ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್ ತಲಪಾಡಿಯಿಂದ ನಾಪತ್ತೆ

ಸುಳ್ಯ  ಪೆರುವಾಜೆ ಗ್ರಾಮದ ಕುಂಡಡ್ಕ ಹನೀಪ್ ಇಂದ್ರಾಜೆ ಅವರ ಪುತ್ರ, ತಲಪಾಡಿ ಬಿಲಾಲ್ ಮಸೀದಿಯ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್ ಎಂಬ ಬಾಲಕ ನ.16 ರ ಸಂಜೆಯಿಂದ ನಾಪತ್ತೆಯಾಗಿದ್ದಾನೆ(Sullia student missing case ) .


ಈತ ತಲಪಾಡಿಯ ಬಿಲಾಲ್ ಮಸೀದಿಯಲ್ಲಿ ಮದ್ರಸ ಶಿಕ್ಷಣದ ಜತೆಗೆ ಶಾಲಾ ಶಿಕ್ಷಣ ಪಡೆಯುತಿದ್ದ. ಎಂಟನೇ ತರಗತಿಯ ವಿದ್ಯಾರ್ಥಿ ಆಗಿರುವ ಈತ ಗುರುವಾರ ಸಂಜೆ ಶಾಲೆಯಿಂದ ಮಸೀದಿಗೆ ಬಂದಿದ್ದು, ಅಲ್ಲಿ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವನು ಮರಳಿ ಬಂದಿಲ್ಲ. ಪೋಷಕರು ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದು ಹುಡುಕಾಟ ನಡೆಸುತ್ತಿದ್ದಾರೆ.


ಗೋಧಿ ಮೈಬಣ್ಣ ಹೊಂದಿದ್ದು ಎತ್ತರ ನಾಲ್ಕೂವರೆ ಅಡಿ ಉದ್ದವಿದ್ದು ಕಾಣಲು ಸೌಮ್ಯ ಸ್ವಭಾವದ ಬಾಲಕನಾಗಿದ್ದು ಯಾರಾದರೂ ಕಂಡು ಬಂದಲ್ಲಿ ತಕ್ಷಣ ಈ ನಂಬರಿಗೆ 9731293268, 9686123077 ಕರೆ ಮಾಡುವಂತೆ ಮನೆಯವರು ವಿನಂತಿಸಿಕೊಂಡಿದ್ದಾರೆ.

ಕುಕ್ಕುಜಡ್ಕದ ನವೀನ್ ಸಂಕೇಶ ಭೀಕರ ಅಪಘಾತಕ್ಕೆ ಬಲಿ

Posted by Vidyamaana on 2023-05-23 15:30:40 |

Share: | | | | |


ಕುಕ್ಕುಜಡ್ಕದ ನವೀನ್ ಸಂಕೇಶ ಭೀಕರ ಅಪಘಾತಕ್ಕೆ ಬಲಿ

ಪುತ್ತೂರು: ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಅರಂತೋಡು ಗೂನಡ್ಕದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ



Leave a Comment: