ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ಹೃದಯ, ಮೆದುಳಿನ ಶಸ್ತ್ರಚಿಕಿತ್ಸೆಗೆ ಬಾಲಕನಿಗೆ ಬೇಕಿದೆ ದಾನಿಗಳ ನೆರವು

Posted by Vidyamaana on 2023-03-09 13:27:52 |

Share: | | | | |


ಹೃದಯ, ಮೆದುಳಿನ ಶಸ್ತ್ರಚಿಕಿತ್ಸೆಗೆ ಬಾಲಕನಿಗೆ ಬೇಕಿದೆ ದಾನಿಗಳ ನೆರವು

ಚಿಕ್ಕಮಗಳೂರು: ಹೃದಯ ಹಾಗೂ ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಚಿಕ್ಕಮಗಳೂರಿನ ಉಪ್ಪಳ್ಳಿಯ ಬಾಲಕ ನುಹ್ಮಾನ್ ಅವರ ಕುಟುಂಬ, ಚಿಕಿತ್ಸೆಯ ಖರ್ಚಿಗಾಗಿ ದಾನಿಗಳ ನೆರವಿಗಾಗಿ ಎದುರು ನೋಡುತ್ತಿದ್ದಾರೆ.

ಬಾಲಕ ನುಹ್ಮಾನ್ ಚುರುಕು ಹಾಗೂ ಪ್ರತಿಭಾವಂತ. ಇದ್ದಕ್ಕಿದ್ದಂತೆ ಒಂದು ದಿನ ಅನಾರೋಗ್ಯ ಕಾಡುತ್ತದೆ. ಅನಾರೋಗ್ಯ ತೀವ್ರಗೊಳ್ಳುತ್ತಿದ್ದಂತೆ, ಆಸ್ಪತ್ರೆಯ ಹಾದಿ ಹಿಡಿಯುತ್ತಾರೆ ಮನೆಯವರು. ವೈದ್ಯರು ಹೇಳಿದ ವಿಷಯ ಕೇಳಿ ದಂಗಾಗಿ ಬಿಡುತ್ತಾರೆ. ಕಾರಣ, ನುಹ್ಮಾನ್ ಏಕಕಾಲದಲ್ಲಿ ಮೆದುಳು‌ ಹಾಗೂ ಹೃದಯದ ಕಾಯಿಲೆಗೆ ತುತ್ತಾಗಿದ್ದ. ಸದ್ಯ ನುಹ್ಮಾನ್ ಬೆಂಗಳೂರಿನ‌ ನಿಮ್ಹಾನ್ಸಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮಗನನ್ನೇನೋ ಆಸ್ಪತ್ರೆಗೆ ಸೇರಿಸಿದರು ಹೆತ್ತವರು. ಆದರೆ ವೈದ್ಯರು ಹೇಳಿದ 15 ಲಕ್ಷ ರೂ.ವನ್ನು‌ ಹೊಂದಿಸಿಕೊಳ್ಳಲು ಹೆತ್ತವರ ಕೈಯಿಂದ ಆಗುತ್ತಿಲ್ಲ. ಆದ್ದರಿಂದ ದಾನಿಗಳ ನೆರವಿಗಾಗಿ ಮನವಿ ಮಾಡಿದ್ದಾರೆ. ಸಂಪರ್ಕಕ್ಕಾಗಿ 7892938854,

ಪ್ರಧಾನಿ ಮೋದಿಯವರಿಂದ ಪಿಎಂ ಕಿಸಾನ್ 16ನೇ ಕಂತು ಬಿಡುಗಡೆ : 9 ಕೋಟಿ ರೈತರ ಖಾತೆಗೆ 21 ಸಾವಿರ ಕೋಟಿ ಜಮಾ

Posted by Vidyamaana on 2024-02-28 21:56:14 |

Share: | | | | |


ಪ್ರಧಾನಿ ಮೋದಿಯವರಿಂದ  ಪಿಎಂ ಕಿಸಾನ್ 16ನೇ ಕಂತು ಬಿಡುಗಡೆ : 9 ಕೋಟಿ ರೈತರ ಖಾತೆಗೆ 21 ಸಾವಿರ ಕೋಟಿ ಜಮಾ

ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಂದರೆ ಫೆಬ್ರವರಿ 28 ರಂದು ಮಹಾರಾಷ್ಟ್ರದ ಯವತ್ಮಾಲ್ನಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 16ನೇ ಕಂತನ್ನ ಬಿಡುಗಡೆ ಮಾಡಿದ್ದಾರೆ. 16ನೇ ಕಂತಿನಡಿ 21 ಸಾವಿರ ಕೋಟಿಗೂ ಹೆಚ್ಚು ಸಮ್ಮಾನ್ ಮೊತ್ತವನ್ನ 9 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ.ಮೊತ್ತವನ್ನ ಡಿಬಿಟಿ ಮೂಲಕ ರೈತರ ಖಾತೆಗೆ ವರ್ಗಾಯಿಸಲಾಗಿದೆ.


ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರೈತರಿಗೆ ವಾರ್ಷಿಕ 6,000 ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ. ಈ ಮೊತ್ತವನ್ನ ಪ್ರತಿ 4 ತಿಂಗಳ ಅಂತರದಲ್ಲಿ ತಲಾ 2,000 ರೂ.ಗಳಂತೆ 3 ಕಂತುಗಳಲ್ಲಿ ರೈತರ ಖಾತೆಗಳಿಗೆ ಕಳುಹಿಸಲಾಗುತ್ತದೆ.ಅಂತಹ ರೈತರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ.!

ಕುಟುಂಬದಲ್ಲಿ ಯಾರಾದರೂ ತೆರಿಗೆ ಪಾವತಿಸಿದರೆ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ. ಅಂದರೆ ಕಳೆದ ವರ್ಷ ಗಂಡ ಅಥವಾ ಹೆಂಡತಿ ಆದಾಯ ತೆರಿಗೆ ಪಾವತಿಸಿದ್ದರೆ ಅವರಿಗೆ ಸಿಗುವುದಿಲ್ಲ. ಈ ಯೋಜನೆಯ ಲಾಭ, ಕೃಷಿ ಭೂಮಿಯನ್ನ ಕೃಷಿ ಕೆಲಸಗಳ ಬದಲಿಗೆ ಇತರ ಉದ್ದೇಶಗಳಿಗೆ ಬಳಸುತ್ತಿರುವವರು ಅಥವಾ ಇತರರ ಹೊಲಗಳಲ್ಲಿ ಕೃಷಿ ಕೆಲಸ ಮಾಡುವಂತಹ ರೈತರು ಸಹ ಈ ಯೋಜನೆಯ ಲಾಭವನ್ನ ಪಡೆಯಲು ಸಾಧ್ಯವಿಲ್ಲ.


ಒಬ್ಬ ರೈತ ವ್ಯವಸಾಯ ಮಾಡುತ್ತಿದ್ದು, ಅವನ ಹೆಸರಿನಲ್ಲಿ ಜಮೀನು ಇಲ್ಲದಿದ್ದಲ್ಲಿ ಆತನಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ. ಜಮೀನು ತನ್ನ ತಂದೆ ಅಥವಾ ತಾತನ ಹೆಸರಲ್ಲಿದ್ದರೂ ಸಹ ಈ ಯೋಜನೆಯ ಲಾಭವನ್ನ ಪಡೆಯಲು ಸಾಧ್ಯವಿಲ್ಲ. ಯಾರಾದರೂ ಕೃಷಿ ಜಮೀನು ಹೊಂದಿರುವವರು ಸರ್ಕಾರಿ ನೌಕರನಾಗಿದ್ದರೆ ಅಥವಾ ನಿವೃತ್ತಿ ಹೊಂದಿದವರಾಗಿದ್ದರೆ ಅವರೂ ಈ ಯೋಜನೆಯಿಂದ ವಂಚಿತರಾಗುತ್ತಾರೆ.ಇದೇ ಸಮಯದಲ್ಲಿ ಹಾಲಿ ಅಥವಾ ಮಾಜಿ ಸಂಸದರು, ಶಾಸಕರು, ಸಚಿವರು ಕೂಡ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಪ್ರಯೋಜನ ಪಡೆಯುವುದಿಲ್ಲ.ಅನರ್ಹ ವೃತ್ತಿಪರ ನೋಂದಾಯಿತ ವೈದ್ಯರು, ಇಂಜಿನಿಯರ್‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು ಅಥವಾ ಅವರ ಕುಟುಂಬದ ಸದಸ್ಯರು ಕೂಡ ಪಟ್ಟಿಯಲ್ಲಿ ಬರುತ್ತಾರೆ. ರೈತರಾಗಿದ್ದರೂ, ಯಾರಾದರೂ ತಿಂಗಳಿಗೆ 10,000 ರೂ.ಗಿಂತ ಹೆಚ್ಚು ಪಿಂಚಣಿ ಪಡೆದರೆ, ಅವರು ಈ ಯೋಜನೆಯ ಫಲಾನುಭವಿಯಾಗಲು ಸಾಧ್ಯವಿಲ್ಲ.


ರೈತರು ಇಲ್ಲಿ ಸಂಪರ್ಕಿಸಬೇಕು : ಎಲ್ಲವೂ ಸರಿಯಾಗಿದ್ದ ನಂತರವೂ ಪಿಎಂ ಕಿಸಾನ್ ಯೋಜನೆಯ ಮೊತ್ತವು ನಿಮ್ಮ ಖಾತೆಗೆ ತಲುಪಿಲ್ಲವಾದರೆ, ಮೊದಲು ನೀವು ಅಧಿಕೃತ ಇಮೇಲ್ ಐಡಿ pmkisan-ict@gov.in ನಲ್ಲಿ ಸಂಪರ್ಕಿಸಬಹುದು. ನೀವು ಪಿಎಂ ಕಿಸಾನ್ ಯೋಜನೆಯ ಸಹಾಯವಾಣಿ ಸಂಖ್ಯೆ - 155261 ಅಥವಾ 1800115526 (ಟೋಲ್ ಫ್ರೀ) ಅಥವಾ 011-23381092 ಅನ್ನು ಸಂಪರ್ಕಿಸಬಹುದು. ಇಲ್ಲಿಯೂ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ.

ಪೆರ್ನಾಳ್ ಸಂಭ್ರಮದ ನಡುವೆ ಆ ದುರಂತ ವಾರ್ತೆ ಮರುಕಳಿಸದಿರಲಿ

Posted by Vidyamaana on 2024-04-10 06:35:52 |

Share: | | | | |


ಪೆರ್ನಾಳ್ ಸಂಭ್ರಮದ ನಡುವೆ ಆ ದುರಂತ ವಾರ್ತೆ ಮರುಕಳಿಸದಿರಲಿ

ಕೈಯಲ್ಲೊಂದು ಮೊಬೈಲ್, ಸಂಚರಿಸಲೊಂದು ಬೈಕ್ ಸಿಕ್ಕರೆ ಹದಿಹರೆಯದ ಯುವಕರಿಗೆ ಮತ್ತೆ ಉಪದೇಶದ ಅಗತ್ಯವೂ, ಕೇಳಿಸಿಕೊಳ್ಳುವ ವ್ಯವಧಾನವೂ ತೀರಾ ಇಲ್ಲದಾಗಿದೆ.

ಹಬ್ಬದ ಸಂಭ್ರಮ ದ ಹೆಸರಿನಲ್ಲಿ ಮೈಮರೆತು ಓಡಾಡದಿರಿ.

ಕೈಯಲ್ಲಿರುವ ಬೈಕ್ ನ ನಿಯಂತ್ರಣ ನಿಮ್ಮಲ್ಲಿದ್ದರೂ ಮುಂದುಗಡೆಯಿಂದ ಬರುವ ವಾಹನದ ನಿಯಂತ್ರಣ ನಿಮ್ಮಲ್ಲಿರಲ್ಲ ಎಂಬ ಪ್ರಜ್ಞೆಯಾದರೂ ಇರಲಿ.ಸಣ್ಣ ಪ್ರಾಯದ ಯುವಕರು ರಸ್ತೆಯ ನಡುವೆ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಕಳೆದುಕೊಳ್ಳುವಾಗ ಯಾರಿಗೆ ತಾನೆ ಅದನ್ನು ಸಹಿಸಲು ಸಾಧ್ಯ.

ಆಸ್ಪತ್ರೆಯ ಶವಾಗಾರದ ಮುಂದೆ ಏನೂ ಪರಿಚಯವಿಲ್ಲದವರೇ ಜನಾಝವನ್ನು ನೋಡಿ ಬಿಕ್ಕಿ ಬಿಕ್ಕಿ ಅಳುವಾಗ, ಹೆತ್ತು ಸಾಕಿ ಸಲಹಿದ ಆ ಹೆತ್ತವರ ರೋಧನೆ ಅದೆಷ್ಟರ ಮಟ್ಟಿಗೆ ಇರಬಹುದು?

ತಾಯಿಗೆ ಸಲಾಂ ಹೇಳಿ ಮನೆಯಿಂದ ಹೊರಟ ಮಗ ಮರಳಿ ಬಂದದ್ದು ಬಿಳಿ ವಸ್ತ್ರವನ್ನು ಹೊದಿಸಿದ ರೂಪದಲ್ಲಿ ಮಯ್ಯತ್ತಾಗಿಯಾಗಿತ್ತು!

ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಗನ ಕಬರ್ ತೋಡಿದ್ದು ಸ್ವತಃ ಅಪ್ಪನೇ ಆಗಿತ್ತು!

ಇಂತಹ ಹೃದಯ ಕಲ್ಲಾಗಿಸುವ ಅದೆಷ್ಟು ಮರಣ ವಾರ್ತೆಗಳಾಗಿದೆ ಕಳೆದ ಆರೇಳು ವರ್ಷಗಳಿಂದ ನಾವು ಕಣ್ಣಾರೆ ಕಾಣುತ್ತಿರುವುದು?

ಮರಣದ ಸ್ಮರಣೆಗಿಂತ ಉತ್ತಮವಾದ ಉಪದೇಶ ಮತ್ತೊಂದಿಲ್ಲ.ಆದರೂ ಪ್ರತಿಯೊಂದು ಮರಣ ಸಂಭವಿಸಿದಾಗಲೂ ಒಂದೆರಡು ವಾರಗಳಲ್ಲಿ ನಾವದನ್ನು ಮರೆತುಬಿಡುತ್ತೇವೆ.

BREAKING:ಉಪಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ

Posted by Vidyamaana on 2024-06-05 15:25:31 |

Share: | | | | |


BREAKING:ಉಪಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿಯ ಸೋಲಿನ ಜವಾಬ್ದಾರಿಯನ್ನು ಹೊತ್ತು ಉಪಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ಬುಧವಾರ ರಾಜೀನಾಮೆ ನೀಡಿದ್ದಾರೆ. ಪಕ್ಷದ ಕಳಪೆ ಪ್ರದರ್ಶನದ ನಂತರ ಅವರು ರಾಜ್ಯದ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರೋದಾಗಿ ತಿಳಿದು ಬಂದಿದೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ತಮ್ಮನ್ನು ಉಪಮುಖ್ಯಮಂತ್ರಿ ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ಬಿಜೆಪಿ ನಾಯಕತ್ವವನ್ನು ವಿನಂತಿಸಲು ಸಜ್ಜಾಗಿದ್ದಾರೆ.

ಮಾಡಾವು :ಈಜಲು ತೆರಳಿ ನಾಪತ್ತೆಯಾಗಿದ್ದ ತಸ್ಲೀಮ್ ನ ಮೃತದೇಹ ಪತ್ತೆ

Posted by Vidyamaana on 2023-10-16 07:56:47 |

Share: | | | | |


ಮಾಡಾವು :ಈಜಲು ತೆರಳಿ ನಾಪತ್ತೆಯಾಗಿದ್ದ ತಸ್ಲೀಮ್ ನ ಮೃತದೇಹ ಪತ್ತೆ

ಪುತ್ತೂರು: ಈಜಲು ಹೊಳೆಗೆ ಹೋಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.

ಮಾಡಾವು ಕಟ್ಟತ್ತಾರು ನಿವಾಸಿ ಹಂಝ ಎಂಬವರ ಪುತ್ರ ತಸ್ಲೀಮ್ (17ವ) ಮೃತಪಟ್ಟವರು. ತಸಗಲೀಮ್ ಅ. 15ರಂದು ಸಂಜೆ ಗೆಳೆಯರ ಜೊತೆಗೂಡಿ ಅರಿಕ್ಕಿಲ ಸಮೀಪದ ಎರಕ್ಕಲ ಎಂಬಲ್ಲಿ ಹೊಳೆಗೆ ಈಜಲು ತೆರಳಿದ್ದ ವೇಳೆ ಘಟನೆ ಸಂಭವಿಸಿತ್ತು. ಯುವಕ ನಾಪತ್ತೆಯಾಗುತ್ತಿದ್ದಂತೆ ಸ್ನೇಹಿತರು ಮನೆಯವರಿಗೆ, ಸ್ಥಳೀಯರಿಗೆ ವಿಷಯ ತಲುಪಿಸಿದ್ದರು.

ತಕ್ಷಣ ಸ್ಥಳೀಯರು ಹೊಳೆಯಲ್ಲಿ ಹುಡುಕಾಟ ನಡೆಸಿದರಾದರೂ ಮೃತದೇಹ ಪತ್ತೆಯಾಗಿರಲಿಲ್ಲ. ಬಳಿಕ ಮುಳುಗು ತಜ್ಞರು ಕಾರ್ಯಾಚರಣೆ ಮುಂದುವರಿಸಿದ್ದರು. ಅದರೂ, ಮೃತದೇಹ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಿಗ್ಗೆ ಹುಡುಕಾಟ ಮುಂದುವರಿಸಿದಾಗ ಈಜಲು ತೆರಳಿದ್ದ ಸ್ಥಳದ ಆಸುಪಾಸೇ ಮೃತದೇಹ ಪತ್ತೆಯಾಗಿದೆ.

ಸೌಹಾರ್ಧತೆಗೆ ಧಕ್ಕೆಯಾಗುವ ಬ್ಯಾನರ್ ಅಳವಡಿಕೆ ಆರೋಪ

Posted by Vidyamaana on 2023-10-30 16:59:38 |

Share: | | | | |


ಸೌಹಾರ್ಧತೆಗೆ ಧಕ್ಕೆಯಾಗುವ ಬ್ಯಾನರ್ ಅಳವಡಿಕೆ ಆರೋಪ

ಬೆಳ್ತಂಗಡಿ : ಧರ್ಮಸಂರಕ್ಷಣಾ ಯಾತ್ರೆಯ ಸಲುವಾಗಿ ಹಾಕಿದ ಬ್ಯಾನರ್ ಗಳ ಸಮೀಪ ಪ್ರಾದೇಶಿಕ ಗುಂಪುಗಳ ನಡುವಣ ಸೌಹಾರ್ಧಕ್ಕೆ ಬಾಧಕವಾಗುವಂತಹ ಬರವಣಿಗೆ ಇರುವ ಬ್ಯಾನರ್ ಅಳವಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.ಬೆಳ್ತಂಗಡಿ ನಿವಾಸಿ ಸಂದೀಪ್ ರೈ ನೀಡಿರುವ ದೂರಿನ ಮೇರೆಗೆ ಉಜಿರೆಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ಮತ್ತು ಮಹೇಶ್ ಶೆಟ್ಟಿ ತಿಮರೋಡಿ, ಅನಿಲ್ ಕುಮಾರ್ ಅಂತರ, ಕಿರಣ್ ಗೌಡ, ಪ್ರಜ್ವಲ್ ಕೆ.ವಿ ಗೌಡ, ಮನೋಹರ್ ಮನ್ನಡ್ಕ, ಮನೋಜ್ ಸಾಲ್ಯಾನ್ ಕುಂಜರ್ಪ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.


ಅ.29 ರಂದು ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಧರ್ಮಸಂರಕ್ಷಣಾ ಯಾತ್ರೆಯ ಸಲುವಾಗಿ, ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದು ಯಾತ್ರೆಗೆ ಬೆಂಬಲ ಸೂಚಿಸಿ ಅಳವಡಿಸಲಾಗಿದ್ದ ಬ್ಯಾನರ್ ಗಳ ಸಮೀಪದಲ್ಲೇ, ಸದ್ರಿ ಪಾದಯಾತ್ರೆಯನ್ನು ನಿಲ್ಲಿಸುವ ಒಳಸಂಚಿನಿಂದ ಪ್ರಾದೇಶಿಕ ಗುಂಪುಗಳ ನಡುವಣ ಸೌಹಾರ್ಧತೆಕ್ಕೆ ಬಾಧಕವಾಗುವಂತಹ ಬರವಣೆಗೆಗಳನ್ನು ಹೊಂದಿರುವ ಬ್ಯಾನರ್ ಗಳನ್ನು ಅಳವಡಿಸಿ, ಪ್ರಾದೇಶಿಕ ಗುಂಪುಗಳ ನಡುವೆ ವೈರತ್ವ, ದ್ವೇಷ ,ವೈಮನಸ್ಸು ಭಾವನೆಗಳನ್ನು ಬಿತ್ತಿಸಿ ಅಸೌಹಾರ್ಧತೆಯನ್ನು ಸೃಷ್ಟಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.


ಮಹೇಶ್ ಶೆಟ್ಟಿ ತಿಮರೋಡಿ, ಅನಿಲ್ ಕುಮಾರ್ ಅಂತರ, ಕಿರಣ್ ಗೌಡ, ಪ್ರಜ್ವಲ್ ಕೆ ವಿ ಗೌಡ, ಮನೋಹರ್ ಮನ್ನಡ್ಕ,ಮನೋಜ್ ಸಾಲ್ಯಾನ್ ಕುಂಜರ್ಪ, ಮತ್ತು ಇತರರ ವಿರುದ್ದ ಹಾಗೂ ಸಮಾಜದ ಸ್ವಾಸ್ತ್ಯವನ್ನು ಕದಡುವಂತಹ ಕೆಟ್ಟದಾಗಿ ಶಬ್ದಗಳನ್ನು ಬರೆದ ಬ್ಯಾನರ್ ಅಳವಡಿಸುವುದಕ್ಕೆ ಅನುಮತಿ ನೀಡಿದ ಉಜಿರೆಯ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಹಾಗೂ ಕಾರ್ಯದರ್ಶಿ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ 106 /2023 ಕಲಂ; 120(B)153(A) 153(B) ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



Leave a Comment: