ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಕೊಳ್ತಿಗೆ : ಹಾಡಹಗಲೇ ಮಹಿಳೆಯ ಚಿನ್ನದ ಸರ ಎಗರಿಸಿದ ಪ್ರಕರಣ ಭೇದಿಸಿದ ಬೆಳ್ಳಾರೆ ಪೊಲೀಸರು

Posted by Vidyamaana on 2024-02-03 11:15:11 |

Share: | | | | |


ಕೊಳ್ತಿಗೆ : ಹಾಡಹಗಲೇ ಮಹಿಳೆಯ ಚಿನ್ನದ ಸರ ಎಗರಿಸಿದ ಪ್ರಕರಣ ಭೇದಿಸಿದ ಬೆಳ್ಳಾರೆ ಪೊಲೀಸರು

ಬೆಳ್ಳಾರೆ : ಮಹಿಳೆಯೊಬ್ಬರ ಚಿನ್ನದ ಸರವನ್ನು ಅಪರಿಚಿತರು ಸುಲಿಗೆ ಮಾಡಿದ ಪ್ರಕರಣವನ್ನು ಬೆಳ್ಳಾರೆ ಪೊಲೀಸರು ಭೇಧಿಸಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.


ಪುತ್ತೂರು ನರಿಮೊಗರು ನಿವಾಸಿ ನೌಶಾದ್ ಬಿ.ಎ., ಕೇರಳ ನಿವಾಸಿ ಚಂದ್ರಮೋಹನ್ ಬಂಧಿತರು.



ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪಾಂಬಾರ್ ಎಂಬಲ್ಲಿ ಜ.11 ರಂದು ಮಧ್ಯಾಹ್ನ ಮಹಿಳೆಯೊಬ್ಬರ ಚಿನ್ನದ ಸರವನ್ನು ಅಪರಿಚಿತರು ಸುಲಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ. ಕ್ರ 08/2024 ಕಲಂ 392 ಜೊತೆಗೆ 34 ಐ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಶೀಘ್ರ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಸದ್ರಿ ತನಿಖಾ ತಂಡವು ಪ್ರಕರಣದ ತನಿಖೆ ನಡೆಸಿ, ನೌಶಾದ್ ಬಿ ಎ (36) ಮತ್ತು ಸುಲಿಗೆಗೆ ಸಹಕರಿಸಿದ ಕಾಸರಗೋಡು ಉದ್ಯಾವರ ನಿವಾಸಿ ಚಂದ್ರಮೋಹನ್ (42) ಎಂಬವರುಗಳನ್ನು ವಶಕ್ಕೆ ಪಡೆದಿದ್ದಾರೆ.


ಸದ್ರಿ ಆರೋಪಿಗಳಿಂದ ರೂ 80,000/- ಮೌಲ್ಯದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ರೂ 1,00,000/- ಮೌಲ್ಯದ ಸ್ಕೂಟರನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.


ಸದ್ರಿ ಪ್ರಕರಣದ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ. ಬಿ ರಿಷ್ಯಂತ್ ಐ ಪಿ ಎಸ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಕೆ ಎಸ್ ಪಿ ಎಸ್ ಮತ್ತು ರಾಜೇಂದ್ರ ಕೆಎಸ್‌ಪಿಎಸ್ ರವರುಗಳ ಮುಂದಾಳತ್ವದಲ್ಲಿ, ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಅರುಣ್ ನಾಗೇಗೌಡ ರವರ ನೇತೃತ್ವದಲ್ಲಿ, ಸುಳ್ಯ ವೃತ್ತ ನಿರೀಕ್ಷಕರಾದ ಮೋಹನ್ ಕೊಠಾರಿ , ಬೆಳ್ಳಾರೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರುಗಳಾದ ಸಂತೋಷ್ ಬಿ.ಪಿ ಮತ್ತು ಅಶೋಕ್ ಸಿಎಂ ರವರ ಎರಡು ವಿಶೇಷ ತನಿಖಾ ತಂಡಗಳು ಕಾರ್ಯಾಚರಿಸಿರುತ್ತದೆ.


ಸದ್ರಿ ತನಿಖಾ ತಂಡದಲ್ಲಿ ಎ ಎಸ್ ಐ ದಾಮೋದರ ನಾಯ್ಕ, ಸಿಬ್ಬಂದಿಗಳಾದ ನವೀನ್ ಕಟ್ಟತ್ತಾರು , ಸತೀಶ್ ಬಿ, ಕೃಷ್ಣಪ್ಪ, ಚಂದ್ರಶೇಖರಗೌಡ, ಚಂದ್ರಶೇಖರ ಗೆಜ್ಜಳ್ಳಿ, ಮಂಜುನಾಥ, ಚೇತನ, ಪ್ರವೀಣ ಬಾರ್ಕಿ, ಸಂತೋಷ ಕೆ ಜಿ, ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ, ಸಂಪತ್ ರವರುಗಳು ಕಾರ್ಯನಿರ್ವಹಿಸಿರುತ್ತಾರೆ.


ಸದ್ರಿ ತನಿಖಾ ತಂಡದ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿದ್ದು, ಸಾರ್ವಜನಿಕ ವಲಯದಲ್ಲಿಯೂ ಪ್ರಶಂಸೆಯನ್ನು ವ್ಯಕ್ತವಾಗಿದೆ.

ಉಪ್ಪಿನಂಗಡಿ: ಭೀಕರ ರಸ್ತೆ ಅಪಘಾತಕ್ಕೆ ಕಳಂಜಿಬೈಲ್ ನಿವಾಸಿ ಜಾಫರ್ ಮೃತ್ಯು.

Posted by Vidyamaana on 2023-04-22 11:58:16 |

Share: | | | | |


ಉಪ್ಪಿನಂಗಡಿ: ಭೀಕರ ರಸ್ತೆ ಅಪಘಾತಕ್ಕೆ  ಕಳಂಜಿಬೈಲ್ ನಿವಾಸಿ ಜಾಫರ್ ಮೃತ್ಯು.

ಉಪ್ಪಿನಂಗಡಿ: ಭೀಕರ ರಸ್ತೆ ಅಪಘಾತಕ್ಕೆ ವ್ಯಕ್ತಿಯೋರ್ವರು ಬಲಿಯಾದ ಘಟನೆ ಉಪ್ಪಿನಂಗಡಿ ಸಮೀಪದ ಕಲ್ಲೇರಿಯಲ್ಲಿ ಇದೀಗ ಸಂಭವಿಸಿದೆ.ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಕಳಂಜಿಬೈಲ್ ನಿವಾಸಿ ಜಾಫರ್ (35) ಎಂದು ಗುರುತಿಸಲಾಗಿದೆ.



ಈದುಲ್ ಫಿತ್ರ್ ಸಂಭ್ರಮದಲ್ಲಿ ನೆಂಟರಸ್ಥರ ಮನೆಗೆ ತನ್ನೆರೆಡು ಮಕ್ಕಳ ಜತೆ ತೆರಳುತ್ತಿದ್ದ ಜಾಫರ್ ರವರ ಸ್ಕ್ಯೂಟರ್ ಗೆ ರಾಂಗ್ ಸೈಡ್ ನಲ್ಲಿ ಬಂದ ಕಾರೊಂದು ಢಿಕ್ಕಿ ಹೊಡೆದಿದ್ದು ಅಪಘಾತದ ರಭಸಕ್ಕೆ ಜಾಫರ್ ರವರ ಸ್ಕ್ಯೂಟರ್ ಪೊದೆಗೆ ಹೋಗಿ ಬಿದ್ದಿದ್ದು ಜಾಫರ್ ರವರು ಸ್ಥಳದಲ್ಲೇ ಅಸು ನೀಗಿದ್ದಾರೆ.ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ.ಹಬ್ಬದ ಸಂಭ್ರಮದಲ್ಲಿ ಈ ಅಪಘಾತ ನಿಜಕ್ಕೂ ಆಘಾತ ಮೂಡಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇಂದು ವಿಜಯೇಂದ್ರ ಪ್ರಮಾಣವಚನ ಕಮಲ ಪಾಳಯದಲ್ಲಿ ಭರ್ಜರಿ ಸಂಚಲನ

Posted by Vidyamaana on 2023-11-15 08:40:42 |

Share: | | | | |


ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇಂದು ವಿಜಯೇಂದ್ರ ಪ್ರಮಾಣವಚನ ಕಮಲ ಪಾಳಯದಲ್ಲಿ ಭರ್ಜರಿ ಸಂಚಲನ


ಬೆಂಗಳೂರು, (ನವೆಂಬರ್ 15): ರಾಜ್ಯ ಬಿಜೆಪಿಗೆ ನೂತನ ಸಾರಥಿಯಾಗಿ ಆಯ್ಕೆಯಾಗಿ ಮಿಂಚಿನ ಸಂಚಲನಕ್ಕೆ ಕಾರಣವಾಗಿರುವ ಬಿವೈ ವಿಜಯೇಂದ್ರ(BY Vijayendra )ಇಂದು(ಬುಧವಾರ) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಳಗ್ಗೆ 10ಗಂಟೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ. ಅದಕ್ಕೂ ಮೊದಲು ಬೆಳಗ್ಗೆ 9.45ಕ್ಕೆ ಬಿಜೆಪಿ ರಾಜ್ಯ ಕಚೇರಿಯಲ್ಲಿ ಬಿವೈವಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುತ್ತೆ. ಬಳಿಕ ಗೋಪೂಜೆ ನೆರರೇವರಿಸಲಿದ್ದಾರೆ. ಗಣಪತಿ ಹೋಮದ ಪೂರ್ಣಾಹುತಿ ನಂತರ ವಿಜಯೇಂದ್ರಗೆ ಹಾಲಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.ರಾತ್ರಿಯೇ ಬಿಜೆಪಿ ಕಚೇರಿಯಲ್ಲಿ ಹೋಮ, ಹವನ


ಬಿಜೆಪಿ ಕಚೇರಿಯಲ್ಲಿ ನಿನ್ನೆ ರಾತ್ರಿಯಿಂದಲೇ ಪೂಜೆ, ಹೋಮ ಹವನಗಳು ನೆರವೇರುತ್ತಿವೆ. ನಿನ್ನೆ ದುರ್ಗಾಹೋಮ, ಗಣಪತಿ ಹೋಮ ನಡೆದಿದೆ. ಇನ್ನು ಮಲ್ಲೇಶ್ವರಂನಲ್ಲಿ ರಸ್ತೆಯುದ್ಧಕ್ಕೂ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ. ಎಲ್ಲೆಲ್ಲೂ ವಿಜಯೇಂದ್ರ ಪೋಸ್ಟರ್‌ಗಳು ಮಿಂಚುತ್ತಿವೆ. ಅಲ್ಲದೇ ಬಿಜೆಪಿ ಕಚೇರಿ ತಳಿರು ತೋರಣಗಳಿಂದ ಸಿಂಗಾರಗೊಂಡಿದೆ. ಕಮಲಪಾಳಯದಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿದೆ.ಮೊನ್ನೆ ಮಠಮಾನ್ಯಗಳಿಗೆ ರೌಂಡ್ಸ್ ಹಾಕಿದ್ದ ವಿಜಯೇಂದ್ರ, ನಿನ್ನೆ ಮುಳುಬಾಗಿಲು ತಾಲೂಕಿನಲ್ಲಿರುವ ಕುರುಡುಮಲೆ ವಿನಾಯಕನ ದರ್ಶನ ಪಡೆದಿದ್ದರು, ಅಲ್ಲದೇ ಸಂಜೆ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿರುವ ಶಕ್ತಿದೇವತೆ ಅಣ್ಣಮ್ಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದದ್ದರು.


ವಿಜಯೇಂದ್ರ ಆಯ್ಕೆಯಿಂದಾಗಿ ಯಡಿಯೂರಪ್ಪ ವಿರೋಧಿ ಬಣ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ವಿ.ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್ ಮೌನಕ್ಕೆ ಜಾರಿದ್ದಾರೆ. ಹೀಗಾಗಿ ಇಂದಿನ ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮಕ್ಕೆ ಬಂಡಾಯ ಬಾವುಟದ ಬಿಸಿ ತಟ್ಟಲಿದ್ದು, ಹಲವು ನಾಯಕರು ಗೈರಾಗುವ ಸಾಧ್ಯತೆ ಇದೆ.ಬಿ.ವೈ.ವಿಜಯೇಂದ್ರ ಅವರು ಪಕ್ಷದ ನಾಯಕರಿಗೆ ಖುದ್ದು ಕರೆ ಮಾಡಿ ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಸಚಿವರು, ಜಿಲ್ಲಾಧ್ಯಕ್ಷರು ಸೇರಿ ಹಲವರಿಗೆ ವಿಜಯೇಂದ್ರ ಅವರೇ ಕರೆ ಮಾಡಿ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಆದ್ರೆ, ಇಂದಿನ ಪದಗ್ರಹಣ ಕಾರ್ಯಕ್ರಮಕ್ಕೆ ಸಿ.ಟಿ.ರವಿ ಗೈರಾಗಲಿದ್ದು, ಇನ್ನುಳಿದಂತೆ ಅಸಮಾಧಾನಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆ ಎದ್ದಿದ್ದು, ಮುಂದೆ ವಿಜಯೇಂದ್ರ ಇದೆಲ್ಲವನ್ನು ಹೇಗೆ ಸರಿದೂಗಿಸಿಕೊಂಡು ಹೋಗುತ್ತಾರೆ ಎನ್ನುವುದೇ ಸದ್ಯದ ಕುತೂಹಲ.

ಜೂನ್ 8ರಿಂದ ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿಯ ಸಹಿತ ಭಾರೀ ಮಳೆಯ ಮುನ್ನೆಚ್ಚರಿಕೆ

Posted by Vidyamaana on 2024-06-08 06:54:08 |

Share: | | | | |


ಜೂನ್ 8ರಿಂದ ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿಯ ಸಹಿತ ಭಾರೀ ಮಳೆಯ ಮುನ್ನೆಚ್ಚರಿಕೆ

ಮಂಗಳೂರು, ಜೂನ್ 8: ಕರಾವಳಿ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಜೂನ್ 8 ಮತ್ತು 9ರಂದು ಆರೆಂಜ್ ಅಲರ್ಟ್ ಘೋಷಿಸಿದೆ.

ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪೆರೆದ ಮಳೆ

Posted by Vidyamaana on 2023-03-15 09:47:10 |

Share: | | | | |


ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪೆರೆದ ಮಳೆ

ಪುತ್ತೂರು: ಇಲ್ಲಿನ ಪುಣಚದಲ್ಲಿ ಬುಧವಾರ ಮಧ್ಯಾಹ್ನ‌ ಮಳೆಯಾಗಿದೆ.ಪುತ್ತೂರು ತಾಲೂಕಿನಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದು, ಗುಡುಗಿನ‌ ಸದ್ದು ಕೇಳಿಬರುತ್ತಿತ್ತು.

ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತುಸು ತಂಪೆರೆದಿದೆ. ಇನ್ನು ಕೆಲ ದಿನ ಮಳೆ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಇತ್ತೀಚೆಗೆ ಹವಾಮಾನ ಇಲಾಖೆ, ಕರಾವಳಿ ಸಹಿತ ರಾಜ್ಯದ ಹಲವೆಡೆ ಮುಂದಿನ ಐದು ದಿನ ಮಳೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿತ್ತು. ಇದೀಗ, ಹವಾಮಾನ ಇಲಾಖೆಯ ವರದಿ ನಿಜವಾಗಿದೆ.

ಶಾಲೆಗಳಿಗೆ ರಜೆ ಸಂಬಂಧಿಸಿದ ನಕಲಿ ಆದೇಶ ಪತ್ರ ವೈರಲ್

Posted by Vidyamaana on 2023-07-27 02:03:40 |

Share: | | | | |


ಶಾಲೆಗಳಿಗೆ ರಜೆ ಸಂಬಂಧಿಸಿದ ನಕಲಿ ಆದೇಶ ಪತ್ರ ವೈರಲ್

ಮಂಗಳೂರು : ಮಳೆಯ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಕಚೇರಿಯ ಮೊಹರು, ಸಹಿ ಹೊಂದಿದ ನಕಲಿ ಆದೇಶ ಪತ್ರವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯ ಬಿಟ್ಟ ಪ್ರಸಂಗ ಇಂದು ರಾತ್ರಿ ನಡೆದಿದೆ

ಈ ಸಂಬಂಧ ಎಚ್ಚರಿಕೆ ನೀಡಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಇಂತಹ ದುಷ್ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.




Leave a Comment: