ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2024-07-03 18:55:10 | Last Updated by Vidyamaana on 2024-07-03 18:55:10

Share: | | | | |


ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಬೆಂಗಳೂರು : ಕಾಲೇಜು ವಿದ್ಯಾರ್ಥಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಓರ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ.

ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಜೈಕಿಸನ್ ರಾಯ್ ಕೊಲೆಯಾದ ಸೆಕ್ಯೂರಿಟಿ ಗಾರ್ಡ್. ಭಾರ್ಗವ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಇರಿದು ಸೆಕ್ಯೂರಿಟಿ ಗಾರ್ಡ್ ನನ್ನು ಹತ್ಯೆ ಮಾಡಿದ್ದಾನೆ.

ಸ್ಥಳದಲ್ಲೇ ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿದ್ದಾರೆ.

ಕೊಲೆಗೆ ಕಾರಣವೇನು?


ಇಂದು ಸಿಂಧಿ ಕಾಲೇಜಿನಲ್ಲಿ ಕಾರ್ಯಕ್ರಮ ಇತ್ತು. ಈ ವೇಳೆ ಆರೋಪಿ ವಿದ್ಯಾರ್ಥಿ ಭಾರ್ಗವ್, ಕಾಲೇಜಿಗೆ ಕುಡಿದು ಬಂದಿದ್ದಾನೆ. ಈ ಹಿನ್ನಲೆ ಸೆಕ್ಯೂರಿಟಿಗಾರ್ಡ್, ಭಾರ್ಗವ್​​​ನನ್ನು ಕಾಲೇಜಿನ ಒಳಗೆ ಬಿಡಲು ನಿರಾಕರಿಸಿದ್ದಾರೆ. ಇದರಿಂದ ಸೆಕ್ಯೂರಿಟಿ ಗಾರ್ಡ್​ ಹಾಗೂ ವಿದ್ಯಾರ್ಥಿ ಮಧ್ಯೆ ಗಲಾಟೆ ಆಗಿದೆ. ಬಳಿಕ ಅಂಗಡಿಗೆ ಹೋಗಿ ಚಾಕು ಖರೀದಿಸಿದ್ದ ಭಾರ್ಗವ್, ನೇರವಾಗಿ ಬಂದು ಸೆಕ್ಯೂರಿಟಿ ಗಾರ್ಡ್ ಎದೆಗೆ ಐದಾರು ಬಾರಿ ಇರಿದಿದ್ದಾನೆ. ಅದು ಹೃದಯಕ್ಕೆ ಹೊಕ್ಕು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.

 Share: | | | | |


ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

Posted by Vidyamaana on 2024-07-03 19:44:44 |

Share: | | | | |


ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಬುಧವಾರದಂದು ಬೆಂಗಳೂರಿನಲ್ಲಿ ಸಿ ಎಂ‌ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪುತ್ತೂರಿಗೆ‌ಮೆಡಿಕಲ್ ಕಾಲೇಜು ಮತ್ತು ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಿದರು.

   ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಶಾಸಕರು ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಡಿಕೆಯನ್ನು ನೆನಪಿಸಿದರು. ಬಜೆಟ್ ನಲ್ಲಿ ಈ ಬಾರಿ ಅನುಮೋದನೆಯಾಗಬೇಕು ಮತ್ತು ತನ್ನ ಕ್ಷೇತ್ರದ ಜನರ ಬಹುಕಾಲದ ಬೇಡಿಕೆಯಾದ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು. ಕಳೆದ ಬಜೆಟ್ ನಲ್ಲಿ ಅನುಮೋದನೆಯಾಗಬಹುದು ಎಂಬ ನಿರೀಕ್ಷೆ ಇತ್ತು ಆದರೆ ಗ್ಯಾರಂಟಿ ಯೋಜನೆಗೆ ಬಜೆಟ್ ನಲ್ಲಿ ಹೆಚ್ಚು ಅನುದಾನ ಇರಿಸಿದ ಕಾರಣ ನಾನು ಹೆಚ್ಚು ಒತ್ತಡ ಹಾಕಿರಲಿಲ್ಲ. ಮೆಡಿಕಲ್ ಕಾಲೇಜು ಆಗಬೇಕು‌ಎಂಬುದು‌ ನನ್ನ ಮತ್ತು ನನ್ನ ಕ್ಷೇತ್ರದ ಜನರ ಕನಸಾಗಿದೆ ಅದನ್ನು ನನಸು‌ಮಾಡಿಕೊಡಬೇಕು ಎಂದು ಸಿ ಎಂ ಅವರಲ್ಲಿ ಶಾಸಕರು ವಿನಂತಿಸಿದರು.

ಚಿನ್ನದ ಅಂಗಡಿ ಮೇಲೆ ನಕಲಿ ಅಧಿಕಾರಿಗಳ ದಾಳಿ 1 ಕೇಜಿ ಬಂಗಾರ ತೆಗೆದುಕೊಂಡು ಪರಾರಿಯಾಗುತ್ತಿದ್ದವರು ಪೊಲೀಸರ ಬಲಗೆ ಬಿದ್ದಿದ್ದೇ ರೋಚಕ

Posted by Vidyamaana on 2024-01-31 08:13:29 |

Share: | | | | |


ಚಿನ್ನದ ಅಂಗಡಿ ಮೇಲೆ ನಕಲಿ ಅಧಿಕಾರಿಗಳ ದಾಳಿ 1 ಕೇಜಿ ಬಂಗಾರ ತೆಗೆದುಕೊಂಡು ಪರಾರಿಯಾಗುತ್ತಿದ್ದವರು ಪೊಲೀಸರ ಬಲಗೆ ಬಿದ್ದಿದ್ದೇ ರೋಚಕ

ಬೆಂಗಳೂರು: ಇತ್ತೀಚಿಗೆ ನಗರದಲ್ಲಿ ನಕಲಿ ಅಧಿಕಾರಿಗಳ ಹಾವಳಿ ಹೆಚ್ಚಾಗಿದೆ. ಜನವರಿ 27 ರಂದು ಕೆಆರ್​ಪುರಂನಲ್ಲಿರುವ (KR Puram) ಚಿನ್ನದ ಅಂಗಡಿ (Gold Shop) ಮೇಲೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಅಧಿಕಾರಿಗಳು ದಾಳಿ ಮಾಡಿದ್ದರು. ಆದರೆ ದಾಳಿ ಮಾಡಿದವರು ಅಸಲಿ ಅಧಿಕಾರಿಗಳಲ್ಲ, ಬದಲಿಗೆ ನಕಲಿ ಅಧಿಕಾರಿಗಳು. 45 ನಿಮಿಷದ ಕಾರ್ಯಾಚರಣೆ ಥೇಟ್ ಸಿನಿಮಾ ಕಥೆಯನ್ನೇ ಹೊಲುವ ರೀತಿ ಇದೆ. ಯಾವಾಗ ಇವರು ನಕಲಿ ಅಧಿಕಾರಿಗಳು ಎಂದು ತಿಳಿಯಿತು, ಆಗ 30 ನಿಮಿಷದ ಪೊಲೀಸರ ಕಾರ್ಯಾಚರಣೆ ನಡೆದಿದ್ದು, ಇದು ಪ್ರಕರಣದ ಮೇಜರ್ ಟ್ವಿಸ್ಟ್ ಆಗಿದೆ.


ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಅಧಿಕಾರಿಗಳು ಅಂತ ಹೇಳಿ ಇದೇ ತಿಂಗಳು 27 ರಂದು ಇನೋವ್​ ಕಾರ್​ನಲ್ಲಿ ಎಂಟ್ರಿ ಕೊಟ್ಟಿದ್ದ ನಾಲ್ವರು ಕೆಆರ್​ಪುರಂನಲ್ಲಿರುವ ಮಹಾಲಕ್ಷ್ಮಿ ಜ್ಯುವೆಲರ್ಸ್ ಮೇಲೆ ದಾಳಿ ಮಾಡಿದ್ದರು. ಬೆಂಗಳೂರಿನ ಹಲವು ಬಂಗಾರದ ಅಂಗಡಿಗಳ ಮೇಲೆ ದಾಳಿ ಮಾಡಲಾಗಿದೆ ಅದರಲ್ಲಿ‌ ನಿಮ್ಮದೂ ಒಂದು. ಹಾಲ್ ಮಾರ್ಕ್ ಇಲ್ಲದೆ ಅಕ್ರಮವಾಗಿ ನೀವು ಚಿನ್ನ ಮಾರಾಟ ಮಾಡುತ್ತಿದ್ದೀರಿ ಎಂಬ ಮಾಹಿತಿ ನಮಗೆ ದೊರೆತಿದೆ ಹೀಗಾಗಿ ದಾಳಿ ಮಾಡಿದ್ದೇವೆ ಎಂದು ನಕಲಿ ಅಧಿಕಾರಿಗಳು ಹೇಳಿದ್ದಾರೆ. ಬಳಿಕ 45 ನಿಮಿಷ ಕಾರ್ಯಾಚರಣೆ ನಡೆಸಿದ ನಕಲಿ ಅಧಿಕಾರಿಗಳು, ಅಂಗಡಿಯಲ್ಲಿದ್ದ 80 ಲಕ್ಷ ರೂ. ಮೌಲ್ಯದ 1 ಕೆಜಿಗೂ ಅಧಿಕ ಚಿನ್ನ ತೆಗೆದುಕೊಂಡರು.


ಇವೆಲ್ಲವನ್ನೂ ಸೀಜ್ ಮಾಡುವುದಾಗಿ ನಕಲಿ ಅಧಿಕಾರಿಗಳು ಹೇಳಿದ್ದರು. ಬಳಿಕ ಅಂಗಡಿ ಮಾಲಿಕನ ಕೈಗೆ ನಕಲಿ ನೋಟಿಸ್ ನೀಡಿ, ಮುಂದಿನ ವಾರ ತಮಿಳುನಾಡಿನ ಕಚೇರಿಗೆ ಬರುವಂತೆ ಹೇಳಿ ಹೋದರು. ಹೀಗೆ ಹೋಗುವಾಗ ನಕಲಿ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದಾರೆ.ಊರು ಬಿಡುವ ಮುನ್ನವೇ ನಕಲಿ ಅಧಿಕಾರಿಗಳು ಲಾಕ್ ಆಗಿದ್ದೇಗೆ ?


ನಕಲಿ ಅಧಿಕಾರಿಗಳು ಚಿನ್ನದ ಅಂಗಡಿಯಿಂದ ಹೊರಡುವಾಗ ಸಿಸಿಟಿವಿ ಡಿವಿಆರ್ ತೆಗೆದುಕೊಂಡು ಹೋಗಿದ್ದಾರೆ. ಇದನ್ನು ಕಂಡು ಅನುಮಾನಗೊಂಡ ಚಿನ್ನದ ಅಂಗಡಿ ಕೆಲ ಸಿಬ್ಬಂದಿಗಳು, ನಕಲಿ ಅಧಿಕಾರಿಗಳನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಇದನ್ನು ತಿಳಿದ ನಕಲಿ ಅಧಿಕಾರಿಗಳು, ತಪ್ಪಿಸಿಕೊಳ್ಳುವ ಬರದಲ್ಲಿ ಟಿಸಿ ಪಾಳ್ಯದಲ್ಲಿ ಬೈಕ್​​ಗಳಿಗೆ ಗುದ್ದಿದ್ದಾರೆ.


ಇತ್ತ ಅಂಗಡಿ ಮಾಲಿಕರಿಗೂ ಅನುಮಾನ ಬಂದು ಕೆಆರ್​ಪುರಂ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಾಗುತಿದ್ದಂತೆ, ಪೊಲೀಸರಿಗೆ ಸರಣಿ ಅಪಘಾತದ ಮಾಹಿತಿ ದೊರೆತಿದೆ. ಕೂಡಲೇ ಅಲರ್ಟ್ ಆದ ಪೊಲೀಸರು ಟಿಸಿ ಪಾಳ್ಯದ ಕಡೆಗೆ ಹೋಗಿದ್ದಾರೆ. ಪೊಲೀಸರು ಬರುವುದನ್ನು ಕಂಡ ನಕಲಿ ಅಧಿಕಾರಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಪೊಲೀಸರು ಚೇಸ್​​ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.ಸಂಪತ್ ಕುಮಾರ್, ಜೊಶಿ ಥಾಮಸ್, ಅವಿನಾಶ್, ಸಂದೀಪ್ ಬಂಧಿತಕ ನಕಲಿ ಅಧಿಕಾರಿಗಳು. ಸಂಪತ್ ಈ ಹಿಂದೆ ಮಂಡ್ಯದಲ್ಲಿ ಸಹ ಕಳ್ಳತನ ಕೃತ್ಯ ಎಸಗಿದ್ದನು. ಈ ಪ್ರಕರಣ ಸಂಬಂಧ ಜೈಲು ವಾಸ ಅನುಭವಿಸಿ ಬಿಡುಗಡೆಯಾಗಿದ್ದನು. ಅದಾದ ಬಳಿಕ ತಮಿಳುನಾಡು ಮೂಲದ ಓರ್ವ ವ್ಯಕ್ತಿಯ ಸಂರ್ಪಕಕ್ಕೆ ಬಂದಿದ್ದಾನೆ. ಆತನ ನಿರ್ದೇಶನದಂತೆ ಈ ಕೃತ್ಯಕ್ಕೆ ಕೈ ಹಾಕಿದ್ದಾನೆ.


ಆರೋಪಿಗಳು ಅರೆಸ್ಟ್​ ಆಗುತ್ತಿದ್ದಂತೆ ತಮಿಳುನಾಡು ಮೂಲದ ಮಾಸ್ಟರ್ ಮೈಂಡ್ ನಾಪತ್ತೆಯಾಗಿದ್ದಾನೆ. ಕೆಆರ್​ಪುರಂ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಕಳ್ಳತನವಾಗಿದ್ದ ಸಂಪೂರ್ಣ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜ‌ರ್ ಸರ್ಜರಿ: ಐವರು IAS ಅಧಿಕಾರಿಗಳ ವರ್ಗಾವಣೆ

Posted by Vidyamaana on 2024-06-15 08:51:29 |

Share: | | | | |


BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜ‌ರ್ ಸರ್ಜರಿ: ಐವರು IAS ಅಧಿಕಾರಿಗಳ ವರ್ಗಾವಣೆ

ಬೆಂಗಳೂರು : ರಾಜ್ಯ ಸರ್ಕಾರದಿಂದ ಲೋಕಸಭಾ ಚುನಾವಣಾ ನೀತಿ ಸಂಹಿತೆ ತೆರವಿನ ಕೆಲ ದಿನಗಳ ನಂತ್ರ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಕೆಲಸ ಮಾಡಲಾಗಿದೆ. ಐವರು ಐಎಎಸ್ ಅಧಿಕಾರಿ ಹಾಗೂ ಓರ್ವ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.


ಇಂದು ರಾಜ್ಯ ಸರ್ಕಾರದಿಂದ ವರ್ಗಾವಣೆ ಅಧಿಸೂಚನೆ ಹೊರಡಿಸಿದ್ದು, ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಟಿ.ಕೆ., ಐಎಎಸ್ (ಕೆಎನ್: 1995) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ ಮತ್ತು ಮುಂದಿನ ಆದೇಶದವರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಷಣ) ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ ಆದೇಶಿಸಿದೆ.

ಇನ್ನೂ ಹರ್ಷ ಗುಪ್ತಾ, ಐಎಎಸ್ (ಕೆಎನ್: 1997) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಭೀಕರ ರಸ್ತೆ ಅಪಘಾತ: ಗಾಯಗೊಂಡಿದ್ದ ಡಿಯೋ ಸವಾರ ತೇಜಸ್ ದಾರಿಮಧ್ಯೆ ಮೃತ್ಯು

Posted by Vidyamaana on 2024-02-22 16:40:09 |

Share: | | | | |


ಭೀಕರ ರಸ್ತೆ ಅಪಘಾತ: ಗಾಯಗೊಂಡಿದ್ದ ಡಿಯೋ ಸವಾರ ತೇಜಸ್ ದಾರಿಮಧ್ಯೆ ಮೃತ್ಯು

ಪುತ್ತೂರು: ಮುರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಡಿಯೋ ಸವಾರ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಮೃತಪಟ್ಟವರನ್ನು ಗೋಳಿತ್ತೊಟ್ಟಿನ ತೇಜಸ್ (24) ಎಂದು ಗುರುತಿಸಲಾಗಿದೆ. ಇನ್ನೋರ್ವ ಸವಾರ ಪವನ್ ಗಂಭೀರ ಗಾಯಗೊಂಡಿದ್ದು, ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರಲ್ಲಿ ಡಿಯೋವನ್ನು ಚಲಾಯಿಸುತ್ತಿದವರು ಯಾರು ಎಂಬ ಮಾಹಿತಿ ತಿಳಿದುಬಂದಿಲ್ಲ.


ಟಿಪ್ಪರ್ ಹಾಗೂ ಡಿಯೋ ದ್ವಿಚಕ್ರ ವಾಹನಗಳ ನಡುವೆ ಮುರದಲ್ಲಿ ಗುರುವಾರ ಮಧ್ಯಾಹ್ನ ಅಪಘಾತ ಸಂಭವಿಸಿದೆ. ಪುತ್ತೂರಿನಿಂದ ಕಬಕ ಕಡೆ ತೆರಳುತ್ತಿದ್ದ ಡಿಯೋ ಹಾಗೂ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

ಇರ್ದೆ : ಬಡವರ ಅಕ್ರಮಸಕ್ರಮ ಕಡತ ವಿಲೇವಾರಿಗೂ ಹಣ ಕೇಳುತ್ತಿದ್ದ ಬಿಜೆಪಿಗರು ಇದೇ ಕಾರಣಕ್ಕೆ ನಾನು ಬಿಜೆಪಿ ಬಿಟ್ಟುಬಂದೆ: ಅಶೋಕ್ ರೈ

Posted by Vidyamaana on 2023-04-27 07:12:28 |

Share: | | | | |


ಇರ್ದೆ : ಬಡವರ ಅಕ್ರಮಸಕ್ರಮ ಕಡತ ವಿಲೇವಾರಿಗೂ ಹಣ ಕೇಳುತ್ತಿದ್ದ ಬಿಜೆಪಿಗರು ಇದೇ ಕಾರಣಕ್ಕೆ ನಾನು ಬಿಜೆಪಿ ಬಿಟ್ಟುಬಂದೆ: ಅಶೋಕ್ ರೈ

ಪುತ್ತೂರು: ನಾನು ಹಣಮಾಡಬೇಕು ಎಂಬ ಉದ್ದೇಶಕ್ಕೆ ರಾಜಕೀಯಕ್ಕೆ ಬಂದಿಲ್ಲ, ನನಗೆ ರಾಜಕೀಯಕ್ಕೆ ಬಂದು ಹಣ ಮಾಡಬೇಕೆಂಬ ಆಸೆಯೂ ಇಲ್ಲ. ನಾನು ಕಳೆದ ೨೨ ವರ್ಷಗಳಿಂದ ಮಾಡಿದ ಸಮಾಜ ಸೇವೆ ಸಾರ್ಥಕವಾಗಿದೆ ಎಂಬ ಸಂಥೋಷ ನನಗಿದೆ. ಅಭಿಮಾನಿಗಳು ಮತ್ತು ಕಾರ್ಯಕರ್ತರ ಅಭಿಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದೆಂದಿಗೂ ನಿಮ್ಮ ಜೊತೆಯೇ ಇರುವೆ, ನಿಮ್ಮ ನೋವು ನಲಿವುಗಳಿಗೆ ಸದಾ ಸ್ಪಂದಿಸುವೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್‌ಕುಮಾರ್ ಸಭೆಯಲ್ಲಿ ನೆರೆದ ನೂರಾರು ಮಂಧಿ ಕಾರ್ಯಕರ್ತರಿಗೆ ನೀಡಿದ ವಾಗ್ದಾನದ ಮಾತುಗಳು, ಈ ಮಾತುಗಳನ್ನಾಡುವ ವೇಳೆ ರೈಗಳು ಸ್ವಲ್ಪ ಹೊತ್ತು ಗದ್ದಧಿತರಾದರು.

ಮಂಗಳಮುಖಿ ಸ್ನೇಹದಿಂದ ಲಿಂಗ ಪರಿವರ್ತನೆಗೆ ಮುಂದಾದ 3 ಮಕ್ಕಳ ತಾಯಿ

Posted by Vidyamaana on 2023-10-07 12:45:59 |

Share: | | | | |


ಮಂಗಳಮುಖಿ ಸ್ನೇಹದಿಂದ ಲಿಂಗ ಪರಿವರ್ತನೆಗೆ ಮುಂದಾದ 3 ಮಕ್ಕಳ ತಾಯಿ

ಹಾವೇರಿ, ಅಕ್ಟೋಬರ್​ 4: ಮೂರು ಮಕ್ಕಳ ತಾಯಿಯೊಬ್ಬರು (Mother) ಲಿಂಗ ಪರಿವರ್ತನೆಗೆ ಮುಂದಾಗಿದ್ದಾರೆ. ಮಂಗಳಮುಖಿಯ (Transgender) ಸ್ನೇಹದಿಂದಾಗಿ ಸದರಿ ಮಹಿಳೆಯು ಈ ಪರಿವರ್ತನೆ ಬಯಸಿದ್ದಾರೆ. ಇದು ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಮಹಿಳೆಯೊಬ್ಬರ ಕಥೆ. ಈ ಮಧ್ಯೆ, ಇದೇ ವಿಷಯವಾಗಿ ರಾಣೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸದರಿ ಮಹಿಳೆಯು ಮೂಲತಃ ವಿಜಯಪುರ ಜಿಲ್ಲೆಯವರು. ಸುಮಾರು 40 ವರ್ಷಗಳಿಂದ ರಾಣೇಬೆನ್ನೂರಿನಲ್ಲಿ (Ranebennur, Haveri district) ವಾಸವಿದ್ದಾರೆ. ಮಂಗಳಮುಖಿಯ ಜೊತೆಗೆ ಸ್ನೇಹದಿಂದಾಗಿ ಗಂಡನಿಗೆ ವಿಚ್ಚೇದನ ನೀಡಿ, ಲಿಂಗ ಪರಿವರ್ತನೆಗೆ ಮುಂದಾಗಿದ್ದಾರೆ. ಈ ಮಧ್ಯೆ, ಮಂಗಳಮುಖಿ ಜೊತೆಗಿನ ಸಹವಾಸದಿಂದಾಗಿ ಮಹಿಳೆಗೆ ಡ್ರಗ್ಸ್ ಚಟ ಹತ್ತಿದೆ.ಈ ಬೆಳವಣಿಗಳಿಂದಾಗಿ ಆ ಮಹಿಳೆಯು ಮಂಗಳಮುಖಿಯ ಜೊತೆಗೆ ಜೀವನ ನಡೆಸುವ ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಆದರೆ ಮಹಿಳೆ ಲಿಂಗ ಪರಿವರ್ತನೆ ಬಯಸಿದ್ದರಾದರೂ, ತಾಂತ್ರಿಕ ದೋಷದಿಂದ ಅದು ಸಾಧ್ಯವಾಗಿಲ್ಲ.


ಹಾವೇರಿ ಇಡಾರಿ ಸಂಸ್ಥೆಯ ಮೂಲಕ ಸಮಾಲೋಚನೆ ನಡೆಸಿ ಲಿಂಗ‌ ಪರಿವರ್ತನೆಗೆ ಸದ್ಯ ತಡೆಯೊಡ್ಡಲಾಗಿದೆ. ಸದರಿ ಮಹಿಳೆಯು ತನ್ನ ಜೊತೆಗೆ ತನ್ನ ಎರಡು ಮಕ್ಕಳಿಗೂ ಲಿಂಗ ಪರಿವರ್ತನೆ ಮಾಡಿಸಲು ಮುಂದಾಗಿದ್ದರು ಎಂಬ ಆತಂಕಕಾರಿ ಮಾಹಿತಿ ದೊರೆತಿದೆ.



Leave a Comment: