ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಸುದ್ದಿಗಳು News

Posted by vidyamaana on 2024-07-03 19:28:29 |

Share: | | | | |


ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು:  ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಶಾಸಕ ಅಶೋಕ್ ರೈ ಕಚೇರಿ ಮೂಲಕ ಉಚಿತ ಕಾರ್ಮಿಕ ಇ ಕಾರ್ಡು ಮಾಡಿಸಿಕೊಂಡ ಕಟ್ಟಡ ಕಾರ್ಮಿಕರಿಗೆ ಕಾರ್ಡು ವಿತರಣಾ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.

ಒಟ್ಟು ೩೪ ಮಂದಿ ಕಾರ್ಮಿಕರಿಗೆ ಕಾರ್ಡು ವಿತರಿಸಲಾಯಿತು. ಕಟ್ಟಡ ಕಾರ್ಮಿಕರು ಶಾಸಕರ ಕಚೇರಿ ಮೂಲಕ ನೋಂದಾವಣೆ ಮಾಡಿಕೊಂಡಿದ್ದರು. ಇ ಕಾರ್ಡು ವಿತರಿಸಿ ಮಾತನಾಡಿದ ಶಾಸಕರು ರಾಜ್ಯ ಸರಕಾರದಿಂದ ಕಾರ್ಮಿಕರಿಗ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ.ಆಕಸ್ಮಿಕಮರಣಾವಾದರೆ ರೂ ೧ ಲಕ್ಷ ಮತ್ತು ಅಪಘಾತದಲ್ಲಿ ಮರಣಹೊಂದಿದರೆ ೫ ಲಕ್ಷ ಸರಕಾರದಿಂದ ಪರಿಹಾರ ಸಿಗುತ್ತದೆ. ಕಾರ್ಮಿಕರು ತನ್ನ ಕಚೇರಿ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಒಟ್ಟು ೩೦೦೦ ಮಂದಿಗೆ ಕಾರ್ಡು ವಿತರಣೆ ಮಾಡಲಾಗಿದೆ.

ಕಟ್ಟಡ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಸರಕಾರ ನೀಡುತ್ತಿದೆ. ಕಳೆದ ಸಾಲಿನಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ಕೂಡಾ ವಿತರಣೆ ಮಾಡಲಾಗಿದೆ. ಕಟ್ಟಡ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳುವುದರ ಜೊತೆ ಇದುವರೆಗೂ ಕಾರ್ಡು ಮಾಡಿಸದವರು ಶಾಸಕರ ಕಚೇರಿಗೆ ಬಂದು ಉಚಿತವಾಗಿ ಕಾರ್ಡು ಮಾಡಿಸಿಕೊಳ್ಳಬಹುದಾಗಿದೆ ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಮಾಧ್ಯಮ ಸಂಚಾಲಕ ಕೃಷ್ಣಪ್ರಸಾದ್ ಭಟ್ ಬೊಳ್ಳಾಯಿ ಉಪಸ್ಥಿತರಿದ್ದರು. ಸಿಬಂದಿ ರಚನಾ ಸ್ವಾಗತಿಸಿ ವಂದಿಸಿದರು.

 Share: | | | | |


ಪರ್ಲಡ್ಕ: ಸುನ್ನೀ ಮಹಲ್ ಫೆಡರೇಷನ್ ( ಎಸ್ ಎಂ ಎಫ್) ತಾಲೂಕು ಸಂಯೋಜಕರ ಸಭೆ

Posted by Vidyamaana on 2023-06-13 07:39:45 |

Share: | | | | |


ಪರ್ಲಡ್ಕ:  ಸುನ್ನೀ ಮಹಲ್ ಫೆಡರೇಷನ್ ( ಎಸ್ ಎಂ ಎಫ್) ತಾಲೂಕು ಸಂಯೋಜಕರ ಸಭೆ

ಪುತ್ತೂರು: ಮೊಹಲ್ಲಗಳ ಸಬಲೀಕರಣ ಹಾಗೂ ಅಭಿವೃದ್ಧಿಗೆ ಸಂಘಟಿತ ಪ್ರಯತ್ನವು ಅಗತ್ಯವಾಗಿದ್ದು,ಈ ನಿಟ್ಟಿನಲ್ಲಿ ಸಮಸ್ತದ ಅಂಗ ಸಂಸ್ಥೆಯಾದ ಸುನ್ನೀ ಮಹಲ್ ಫೆಡರೇಷನ್ ಸ್ತುತ್ಯರ್ಹವಾಗಿ ಕಾರ್ಯಾಚರಿಸುತ್ತಿದೆ ಎಂದು ದ.ಕ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಹೇಳಿದರು.

         ಪರ್ಲಡ್ಕ ಶಂಸುಲ್ ಉಲಮಾ ಮೆಮೋರಿಯಲ್ ಕಾಲೇಜಿನ ಆಡಳಿತ ಮಂಡಳಿ ಕಚೇರಿಯಲ್ಲಿ ನಡೆದ ಸುನ್ನೀ ಮಹಲ್ ಫೆಡರೇಷನ್ ( ಎಸ್ ಎಂ ಎಫ್) ತಾಲೂಕು ಸಂಯೋಜಕರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಸಮುದಾಯದ ಆಧ್ಯಾತ್ಮಿಕ,ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮೊಹಲ್ಲಾಗಳು ಪ್ರಮುಖ ಪಾತ್ರ ವಹಿಸುತ್ತಿದ್ದು,ಸುನ್ನತ್ ಜಮಾಅತ್ ನ ಬಲಿಷ್ಠತೆಗೆ ಪ್ರತಿ ಮೊಹಲ್ಲಾದಲ್ಲಿ ಎಸ್ ಎಂ ಎಫ್ ಅಗತ್ಯವಾಗಿದೆ.ಈ ನಿಟ್ಟಿನಲ್ಲಿ ಪ್ರತಿ ಮೊಹಲ್ಲಾದ ಆಡಳಿತ ಸಮಿತಿಯು ತಮ್ಮ ಮೊಹಲ್ಲಾ ವನ್ನು ಎಸ್ ಎಂ ಎಫ್ ಸಂಘಟನೆಯಲ್ಲಿ ನೋಂದಣಿ ಮಾಡಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ಎಸ್ ಎಂ ಎಫ್ ಸದಸ್ಯತ್ವ ಅಭಿಯಾನವು ಜೂನ್ 20 ರಿಂದ ಆಗಸ್ಟ್ 20 ರವರೆಗೆ ಜಿಲ್ಲಾದ್ಯಂತ ನಡೆಯಲಿದೆ ಎಂದು ಖಾಝಿಯವರು ಘೋಷಿಸಿದರು.

          ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಬಂಬ್ರಾಣ ಉಸ್ತಾದ್ ದುಆಗೈದರು.ಸಮಸ್ತ ಮುಶಾವರ ಸದಸ್ಯರಾದ ಉಸ್ಮಾನ್ ಫೈಝಿ ತೋಡಾರ್ ಉದ್ಘಾಟನೆಗೈದರು. ಎಸ್ ಎಂ ಎಫ್ ಕೇಂದ್ರ ಸಮಿತಿ ನಾಯಕರಾದ ಎ.ಕೆ ಆಲಿಪ್ಪರಂಬ್ ಉಸ್ತಾದ್, ಸಮಸ್ತ ಟ್ರೈನರ್ ಪಿ.ಸಿ ಉಮರ್ ದಾರಿಮಿ ವಿಷಯ ಮಂಡನೆಗೈದರು. 

       ಸಭೆಯಲ್ಲಿ ಜಿಫ್ರಿ ತಂಙಳ್ ಬೆಳ್ತಂಗಡಿ,ಶರೀಫ್ ದಾರಿಮಿ ಕೋಟ್ಟಯಂ,ಶರೀಫ್ ಫೈಝಿ ಕಡಬ,ಹುಸೈನ್ ದಾರಿಮಿ ರೆಂಜಲಾಡಿ,ಇರ್ಶಾದ್ ದಾರಿಮಿ ಮಿತ್ತಬೈಲ್,ರಶೀದ್ ರಹ್ಮಾನಿ ಪರ್ಲಡ್ಕ,ಹುಸೈನ್ ರಹ್ಮಾನಿ ಕಾಶಿಪಟ್ನ,ಮುಫತ್ತಿಷ್ ಉಮರ್ ದಾರಿಮಿ,ಎಲ್ ಟಿ ಅಬ್ದುಲ್ ರಝಾಕ್ ಹಾಜಿ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ,ಖಾದರ್ ಹಾಜಿ ಸುಂಕದಕಟ್ಟೆ,ಖಾದರ್ ಮಾಸ್ಟರ್ ಬಂಟ್ವಾಳ,ಇಬ್ರಾಹಿಂ ಕೊಣಾಜೆ,ಅಶ್ರಫ್ ಶೇಡಿಗುಂಡಿ ಉಪಸ್ಥಿತರಿದ್ದರು.ಹನೀಫ್ ಹಾಜಿ ಬಂದರ್ ಸ್ವಾಗತಿಸಿ, ಅಡ್ವೊಕೇಟ್ ಹನೀಫ್ ಹುದವಿ ಧನ್ಯವಾದಗೈದರು.

ಹೈಕಮಾಂಡ್ ನಾಯಕರನ್ನು ಭೇಟಿಗೆ ಅವಕಾಶ ನೀಡಿಲ್ಲ : ಬೇಸರ ವ್ಯಕ್ತಪಡಿಸಿದ ಡಿವಿಎಸ್‌

Posted by Vidyamaana on 2023-10-28 05:17:56 |

Share: | | | | |


ಹೈಕಮಾಂಡ್ ನಾಯಕರನ್ನು ಭೇಟಿಗೆ ಅವಕಾಶ ನೀಡಿಲ್ಲ : ಬೇಸರ ವ್ಯಕ್ತಪಡಿಸಿದ ಡಿವಿಎಸ್‌

ಬೆಂಗಳೂರು : ರಾಜ್ಯ ಬಿಜೆಪಿಯ ಆಂತರಿಕ ಸಮಸ್ಯೆಗಳ ಬಗ್ಗೆ ಮಾತನಾಡೋದಕ್ಕೆ ಹೈಕಮಾಂಡ್ ನಾಯಕರನ್ನು ಭೇಟಿಗೆ ಅವಕಾಶ ನೀಡಿಲ್ಲ ಎಂದು ದೆಹಲಿಗೆ ತೆರಳಿದ ಮಾಜಿ ಕೇಂದ್ರ ಸಚಿವ ಡಿವಿ ಸದಾನಂದಗೌಡ ನಿರಾಸೆ ವ್ಯಕ್ತಪಡಿಸಿದ್ದಾರೆ.ರಾಜ್ಯ ಬಿಜೆಪಿಯ ಆಂತರಿಕ ಸಮಸ್ಯೆಗಳ ಕುರಿತು 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಅವರಿಗೆ ಡಿವಿ ಸದಾನಂದಗೌಡ ಪತ್ರ ಬರೆದಿದ್ದರು.

ಪತ್ರ ಓದಿದ್ದ ಜೆಪಿ ನಡ್ಡಾ ದೆಹಲಿಯಲ್ಲಿ ಬಂದು ಭೇಟಿ ಮಾಡಿ, ಚರ್ಚಿಸಲು ಸೂಚನೆ ನೀಡಿದ್ದರು. ಈ ಬೆನ್ನಲ್ಲೆ ಡಿವಿಎಸ್, ಜೆಪಿ ನಡ್ಡಾ ಸೇರಿದಂತೆ ಬೇರೆ ಬೇರೆ ನಾಯಕರ ಭೇಟಿಗೆ ದೆಹಲಿಗೆ ಬಂದಿದ್ದರು .ಪಂಚ ರಾಜ್ಯಗಳ ಚುನಾವಣೆ ಭರದಲ್ಲಿರುವ ವರಿಷ್ಠರು ಭೇಟಿಗೆ ಸಮಯ ನೀಡಿಲ್ಲ ಎಂದಿದ್ದಾರೆ.

ಪುತ್ತೂರು ಶಾಸಕರ ಜನಪರ ಕಾಳಜಿ - ಎ.23ರ ಪದ್ಮರಾಜ್ ಚುನಾವಣಾ ರೋಡ್ ಶೋ ರದ್ದು

Posted by Vidyamaana on 2024-04-22 17:13:52 |

Share: | | | | |


ಪುತ್ತೂರು ಶಾಸಕರ ಜನಪರ ಕಾಳಜಿ - ಎ.23ರ ಪದ್ಮರಾಜ್ ಚುನಾವಣಾ ರೋಡ್ ಶೋ ರದ್ದು

ಪುತ್ತೂರು: ಏ.23ರಂದು ಕಾಂಗ್ರೆಸ್ ನ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಪರ ಪುತ್ತೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ರೋಡ್ ಶೋ ಚುನಾವಣಾ ರ್ಯಾಲಿಯನ್ನು ಸಾರ್ವಜನಿಕರ ಹಿತದೃಷ್ಠಿಯಿಂದ ರದ್ದುಗೊಳಿಸಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೋಡ್ ಶೋ ನಡೆಸುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಇದರಿಂದ ವಾಹನಗಳಲ್ಲಿ ವಿವಿಧ ಕಡೆ ತೆರಳುವ ಜನರಿಗೆ ತೊಂದರೆಯಾಗಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತೆರಳಲು ತೊಂದರೆಯಾಗಲಿದ್ದು, ದೈನಂದಿನ ವ್ಯವಹಾರಕ್ಕಾಗಿ ನಗರಕ್ಕೆ ಬರುವ ಜನಸಾಮಾನ್ಯರಿಗೂ ತೊಂದರೆಯಾಗಲಿದೆ ಎಂದು ಏ.23ರಂದು ನಡೆಸಲು ಉದ್ದೇಶಿಸಿದ್ದ ರೋಡ್ ಶೋ ಪ್ಯಾಲಿಯನ್ನು ರದ್ದುಗೊಳಿಸಲಾಗಿದೆ.

ಅವ್ರೇನು ರೇಪಿಸ್ಟ್ ಗಳಾ..ನಾಚಿಕೆಯಾಗ್ಬೇಕು ನಿಮ್ಮ ಜನ್ಮಕ್ಕೆ.. – ಡಿ.ವೈ.ಎಸ್.ಪಿಗೆ ಶಕು ಅಕ್ಕ ಸಖತ್ ತರಾಟೆ

Posted by Vidyamaana on 2023-05-18 05:08:42 |

Share: | | | | |


ಅವ್ರೇನು ರೇಪಿಸ್ಟ್ ಗಳಾ..ನಾಚಿಕೆಯಾಗ್ಬೇಕು ನಿಮ್ಮ ಜನ್ಮಕ್ಕೆ.. – ಡಿ.ವೈ.ಎಸ್.ಪಿಗೆ ಶಕು ಅಕ್ಕ ಸಖತ್ ತರಾಟೆ

ಪುತ್ತೂರು: ಕಟೀಲ್ ಹಾಗೂ ಡಿವಿ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿರುವವರ ಮೇಲೆ ಪುತ್ತೂರು ಪೊಲೀಸ್ ಇಲಾಖೆ ನಡೆಸಿದ ಥರ್ಡ್ ಡಿಗ್ರಿ ಟ್ರಿಟ್ ಮೆಂಟ್ ಗೆ ರಾಜ್ಯವೇ ಬೆಚ್ಚಿ ಬಿದ್ದಿದೆ.


ಮಾಜಿ ಶಾಸಕಿ ಶಕುಂತಲ ಶೆಟ್ಟಿ ಪುತ್ತೂರು ಡಿವೈಎಸ್ಪಿ ಗೆ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡ ಬಗ್ಗೆ ವರದಿಯಾಗಿದೆ. ಇದೊಂದು ರಾಜ್ಯವೇ ತಲೆತಗ್ಗಿಸುವ ವಿಷಯವಾಗಿದೆ ಎಂದರು.  


ದೇಶ ಹಾಗೂ ವಿದೇಶದಿಂದ ಹಲವು ಕರೆಗಳು ನನಗೆ  ಬರುತ್ತಿದ್ದು ಈ ಕೃತ್ಯಕ್ಕೆ ಜನತೆ ಭಯಭೀತರಾಗಿದ್ದಾರೆ ಎಂದು ಅಧಿಕಾರಿಯಲ್ಲಿ ಹೇಳಿದರು. 


ಬ್ಯಾನರ್ ಹಾಕಿ ಚಪ್ಪಲಿ ಹಾರ ಹಾಕಿದ ಕೂಡಲೇ ಅವರೇನು ತಳಮಟ್ಟಕ್ಕೆ ಹೋಗೋದಿಲ್ಲ,  ಹೂವಿನ ಹಾರ ಹಾಕಿದ ಕೂಡಲೇ ಮೇಲ್ಮಟ್ಟಕ್ಕೂ ಹೋಗೊದಿಲ್ಲ.  ಪೊಲೀಸರಿಗೆ ಅಷ್ಟು ಕೈ ತುರಿಸುವುದಿದ್ದರೆ ಎರಡು ಪೆಟ್ಟು ಕೊಟ್ಟು ಕೇಸ್ ದಾಖಲಿಸಬಹುದಿತ್ತು.  ಒತ್ತಡಕ್ಕೆ ಮಣಿದು ಈ ರೀತಿ ವರ್ತಿಸುವುದು ಇಲಾಖೆಗೆ ಶೋಭೆಯಲ್ಲ ಎಂದರು. 


ಅತ್ಯಾಚಾರಿಯೋರ್ವನನ್ನು ಇದಕ್ಕಿಂತ ಕಡೆ ಹಿಂಸಿಸಿದ್ದರೂ ಯಾರೂ ಕೇಳುತ್ತಿರಲಿಲ್ಲ.  ಕೇವಲ ಬ್ಯಾನರ್ ಕಟ್ಟಿದ ಸಣ್ಣ ವಿಷಯಕ್ಕೆ ಈ ರೀತಿ ಹಿಂಸಿಸಿದ್ದು ಪೊಲೀಸ್ ಇಲಾಖೆಯ ಘನತೆಗೆ ತಕ್ಕುದಾದ ಕ್ರಿಯವಲ್ಲ ಎಂದು ಪುತ್ತೂರು ಡಿವೈಎಸ್ಪಿಯನ್ನು ಶಕುಂತಲ ಶೆಟ್ಟಿ  ತರಾಟೆಗೆ ತೆಗೆದುಕೊಂಡರು.

ಚಪ್ಪ್ ಡಿ ಕೆಲಸಕ್ಕೆ ಬ್ರೇಕ್ ಹಾಕಿದ‌ ಶಾಸಕರು: ವಿಟ್ಲದಲ್ಲಿ ರಸ್ತೆ ಕಾಮಗಾರಿ ಕಳಪೆ

Posted by Vidyamaana on 2024-01-15 16:57:42 |

Share: | | | | |


ಚಪ್ಪ್ ಡಿ ಕೆಲಸಕ್ಕೆ ಬ್ರೇಕ್ ಹಾಕಿದ‌ ಶಾಸಕರು: ವಿಟ್ಲದಲ್ಲಿ ರಸ್ತೆ ಕಾಮಗಾರಿ  ಕಳಪೆ

ಪುತ್ತೂರು: ರೋಡ್ ರೋಲರ್ ಬಳಸದೆ ರಸ್ತೆಗೆ ಜಲ್ಲಿ ಹಾಕಿ ಚಪ್ ಡಿ ( ತೇಪೆ ) ಕಾಮಗಾರಿ ನಡೆಸುತ್ತಿದ್ದ ವೇಳೆ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕರು ಕಳಪೆ ಕಾಮಗಾರಿಯನ್ನು ಸ್ಥಗಿತಗೊಳಿಸಿದ ಘಟನೆ ವಿಟ್ಲ ಬೊಬ್ಬೆಕೇರಿಯಲ್ಲಿ ನಡೆದಿದೆ.

ಮಂಗಳೂರಿನಿಂದ‌ವಿಟ್ಲಕ್ಕೆ ತೆರಳುತ್ತಿದ್ದ ವೇಳೆ ಕಾರ್ಮಿಕರು ಹಾರೆಯ ಮೂಲಕ ರಸ್ತೆ ಹೊಂಡಗಳಿಗೆ ಜಲ್ಲಿ‌ಮಿಶ್ರಣವನ್ನು ಕೈಯಿಂದ ಗಟ್ಟಿ ಮಾಡುತ್ತಿದ್ದರು. ಇದನ್ನು ನೋಡಿದ ಶಾಸಕರು ಕಾರು ನಿಲ್ಲಿಸಿ ಕಾಮಗಾರಿ ಮಾಹಿತಿ ಪಡೆದರು. ಬಂಟ್ವಾಳ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರೀತಮ್ ರಿಗೆ ಕರೆ ಮಾಡಿ ಕಳಪೆ ಕಾಮಗಾರಿ ಅಥವಾ ಚಪ್ಪ್ ಡಿ ಕೆಲಸ‌ಮಾಡುವುದು ಬೇಡ. ರೋಡ್ ರೋಲರ್ ಬಳಸಿ ಗುಣಮಟ್ಟದ ಜಲ್ಲಿ ಡಾಮಾರು ಬಳಸಿ ಕಾಮಗಾರಿ ನಡೆಸಿ ಎಂದು ಸೂಚನೆ ನೀಡಿದರು.‌ಶಾಸಕರ ಎಚ್ಚರಿಕೆಯ ಬಳಿಕ‌ಕಾಮಗಾರಿ ಸ್ಥಗಿತಗೊಳಿಸಲಾಗಿದೆ

ಭೀಕರ ರಸ್ತೆ ಅಪಘಾತ ಪ್ರಕರಣ : ಸಾವಿನ ಸಂಖ್ಯೆ 13ಕ್ಕೆ ಏರಿಕೆ,ಇಬ್ಬರ ಸ್ಥಿತಿ ಗಂಭೀರ

Posted by Vidyamaana on 2024-06-28 19:01:49 |

Share: | | | | |


ಭೀಕರ ರಸ್ತೆ ಅಪಘಾತ ಪ್ರಕರಣ : ಸಾವಿನ ಸಂಖ್ಯೆ 13ಕ್ಕೆ ಏರಿಕೆ,ಇಬ್ಬರ ಸ್ಥಿತಿ ಗಂಭೀರ

ಹಾವೇರಿ : ಇಂದು ಬೆಳ್ಳಂಬೆಳಗ್ಗೆ ಹಾವೇರಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಹತ್ತಕ್ಕೂ ಹೆಚ್ಚು ಜನರು ಸಾವನಪ್ಪಿದು ಇದೀಗ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ಹಾವೇರಿಯ ಎಸ್ ಪಿ ಅಂಶಿ ಕುಮಾರ್ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಇಬ್ಬರು ಮಕ್ಕಳು ಇಬ್ಬರು ಪುರುಷರು ಸೇರಿದಂತೆ 9 ಮಹಿಳೆಯರು ಸಾವನಪ್ಪಿದ್ದಾರೆ.

ಹೌದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಅಪಘಾತ ನಡೆದಿದೆ. ಚಿಂಚೋಳಿಯ ಮಾಯಮ್ಮ ದೇವಿ ದರ್ಶನ ಪಡೆದು ವಾಪಸಾಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಬೆಳ್ಳಂ ಬೆಳಗ್ಗೆ ಭೀಕರ ರಸ್ತೆ ಅಪಘಾತದಲ್ಲಿ 13 ಜನ ಸಾವನ್ನಪಪ್ಪಿದ್ದಾರೆ ಎಂದು ಎಸ್ ಪಿ ಅಂಶಿ ಕುಮಾರ್ ಮಾಹಿತಿ ನೀಡಿದ್ದಾರೆ.ಮೃತರು ಶಿವಮೊಗ್ಗ ಜಿಲ್ಲೆಯ ಮೂಲದವರು ಎಂದು ತಿಳಿದು ಬಂದಿದೆ. ಪರಶುರಾಮ, ಭಾಗ್ಯ, ನಾಗೇಶ್, ವಿಶಾಲಾಕ್ಷಿ,ಅರ್ಪಿತ,ಸುಭದ್ರ, ಬಾಯಿ, ಪುಣ್ಯ, ಮಂಜುಳಾಬಾಯಿ, ಆದರ್ಶ, ಮಾನಸ, ಅಪರೂಪ, ಮಂಜುಳಾ ಮೃತಪಟ್ಟವರ ಎಂದು ಗುರುತಿಸಲಾಗಿದೆ.



Leave a Comment: