ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ಸುದ್ದಿಗಳು News

Posted by vidyamaana on 2024-07-03 08:00:29 |

Share: | | | | |


ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ಬೆಳ್ಳಾರೆ : ಎರಡು ವರ್ಷಗಳ ಹಿಂದೆ ನಡೆದ ಮನೆ ಕಳ್ಳತನ ಪ್ರಕರಣವನ್ನು ಬೆಳ್ಳಾರೆ ಪೊಲೀಸರು ಭೇದಿಸಿದ್ದಾರೆ.


ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿ ನಡೆದ ಸುಮಾರು 1,48,000 ರೂ. ಮೌಲ್ಯದ ಚಿನ್ನಾಭರಣಗಳು ಮತ್ತು ನಗದು ಹಣ 30,000 ರೂ. ಸೇರಿ ಒಟ್ಟು 1,78,000 ರೂ. ಮೌಲ್ಯದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯಲ್ಲಿ ಅಪರಾಧ ಕ್ರಮಾಂಕ. 22/2022 ಕಲಂ 457,380 ಭಾ. ದಂ. ಸಂ ರಂತೆ ಪ್ರಕರಣ ದಾಖಲಿಸಿಕೊಂಡು, ಕಳೆದ ಎರಡು ವರ್ಷಗಳಿಂದ ತನಿಖೆ ನಡೆಸಿದ್ದು, ಪ್ರಸ್ತುತ ಪ್ರಕರಣದ ಆರೋಪಿ ಬೆಳ್ತಂಗಡಿ ನೆರಿಯಾ ನಿವಾಸಿ ಶರತ್ (24) ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ಕಳವು ಮಾಡಿದ ಸೊತ್ತುಗಳನ್ನು ಪತ್ತೆ ಮಾಡಿ ಸ್ವಾದೀನಪಡಿಸಿಕೊಳ್ಳಲಾಗಿದೆ.

ಸದ್ರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಸಿ ಬಿ ರಿಷ್ಯಂತ್ ಐಪಿಎಸ್ ರವರು, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗದೀಶ್ ಎಂ ಕೆ.ಎಸ್.ಪಿ.ಎಸ್ ಮತ್ತು ರಾಜೇಂದ್ರ ಕೆ.ಎಸ್.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ವಿಜಯ ಪ್ರಸಾದ್, ಪ್ರಭಾರ ಪೊಲೀಸ್ ಉಪಾಧೀಕ್ಷಕರು, ಪುತ್ತೂರು ಉಪವಿಭಾಗ ಮತ್ತು ಸುಳ್ಯ ವೃತ್ತ ನಿರೀಕ್ಷಕರಾದ ಸತ್ಯನಾರಾಯಣ ಕೆ ರವರ ನೇತೃತ್ವದಲ್ಲಿ, ಸಂತೋಷ್ ಬಿ ಪಿ ಪೊಲೀಸ್ ಉಪನಿರೀಕ್ಷಕರು, ಬೆಳ್ಳಾರೆ ಪೊಲೀಸ್ ಠಾಣೆ ಹಾಗೂ ಬೆಳ್ಳಾರೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ ನವೀನ ಕೆ. ಚಂದ್ರಶೇಖರ್ ಗೌಡ, ಸಂತೋಷ್ ಜಿ. ಜೀಪು ಚಾಲಕ ಪುರಂದರ ಹಾಗೂ ಬೆರಳುಮುದ್ರೆ ಘಟಕದ ಪ್ರಶಾಂತ್ ಹೊಸಮನಿ ಮತ್ತು ಸಚಿನ್ ಬಿ. ಬಿ ರವರನ್ನೊಳಗೊಂಡು ವಿಶೇಷ ತನಿಖಾ ತಂಡವು ಕರ್ತವ್ಯ ನಿರ್ವಹಿಸಿರುತ್ತದೆ.

ಸದ್ರಿ ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ ಮತ್ತು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಯನ್ನು ವ್ಯಕ್ತವಾಗಿದೆ.

 Share: | | | | |


ಪಡೀಲು ಹಾಸ್ಟೆಲ್ ನಲ್ಲಿ ಸಾವಿಗೆ ಶರಣಾದ ವಿದ್ಯಾರ್ಥಿನಿ

Posted by Vidyamaana on 2023-06-11 23:18:39 |

Share: | | | | |


ಪಡೀಲು ಹಾಸ್ಟೆಲ್ ನಲ್ಲಿ ಸಾವಿಗೆ ಶರಣಾದ ವಿದ್ಯಾರ್ಥಿನಿ

ಪುತ್ತೂರು: ಕೊಕ್ಕಡದ ವಿದ್ಯಾರ್ಥಿನಿಯೋರ್ವಳು ಪುತ್ತೂರಿನ ಪಡೀಲ್‌ನಲ್ಲಿರುವ ಹಾಸ್ಟೇಲ್ ಒಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊಕ್ಕಡ ಗ್ರಾಮದ ನೇತ್ರಾಳ ನಿವಾಸಿ ಶ್ರೀಧರ ಆಚಾರ್ಯ ಹಾಗೂ ದಿ. ಪುಷ್ಪ ದಂಪತಿ ಪುತ್ರಿ ರೇಖಾ (೧೫) ಆತ್ಮಹತ್ಯೆ ಮಾಡಿಕೊಂಡವರು.

ಅವಳ ತಾಯಿ ಪುಷ್ಪ  ಅವರು  ಕಳೆದ ವರ್ಷ ನಿಧನರಾಗಿದ್ದರು. ತಂದೆ ಕೂಲಿ ಕೆಲಸ ಮಾಡುತ್ತಿದ್ದು, ತಾಯಿಯ ನಿಧನದ ಬಳಿಕ ಮಾನಸಿಕವಾಗಿ ಕುಗ್ಗಿದ್ದಳು.ಅಲ್ಲದೆ ಆಕೆ ತಮ್ಮ ಸಂಬಂಧಿಕರ ಮನೆಯಿಂದ ಶಾಲೆ ಹೋಗುತ್ತಿದ್ದಳು. ಕೊಕ್ಕಡ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕೆಯನ್ನು ಅತ್ತೆ ಒತ್ತಾಯದ ಮೇರೆಗೆ ಪುತ್ತೂರಿನ ಪಡಿಲ್ ಹಾಸ್ಟೆಲ್‌ಗೆ ಸೇರಿಸಿ ಓದುವಂತೆ ಹೇಳುತ್ತಿದ್ದಳು .ಆರಂಭದಲ್ಲಿ ಹಾಸ್ಟೆಲಿಗೆ ಹೋಗಲು ನಿರಾಕರಿಸಿದ ಆಕೆ ಬಳಿಕ ಹಾಸ್ಟೆಲ್ ಸೇರಲು ಒಪ್ಪಿದ್ದಳು. ಹಾಸ್ಟೆಲ್ ಬೇಡ, ಇಂಗ್ಲೀಷ್ ಕಷ್ಟದ ವಿಷಯ ಎಂದು ಆಗಾಗ ಹೇಳುತ್ತಿದ್ದಳು. ಕೊಕ್ಕಡ ಶಾಲೆಯಲ್ಲಿರುವಾಗ ಗೆಳತಿಯರೊಂದಿಗೆ ಉತ್ತಮವಾಗಿ ಬೆರೆತು ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದಳು.ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯ ಪ್ರಚಾರ ಅಖಾಡಕ್ಕೆ ಸುಮಲತಾ ಎಂಟ್ರಿ ಕ್ಯಾನ್ಸಲ್

Posted by Vidyamaana on 2024-04-24 15:10:09 |

Share: | | | | |


ಮಂಡ್ಯ ಪ್ರಚಾರ ಅಖಾಡಕ್ಕೆ ಸುಮಲತಾ ಎಂಟ್ರಿ ಕ್ಯಾನ್ಸಲ್

ಬೆಂಗಳೂರು : ಸುಮಲತಾ ಅಂಬರೀಶ್‌ ಅವರ ಮಂಡ್ಯ ಪ್ರಚಾರ ರದ್ದಾಗಿದೆ. ಇಂದಿನ ಪ್ರಚಾರದ ಬಗ್ಗೆ ಪಕ್ಷದಿಂದ ಯಾವುದೇ ಸ್ಪಷ್ಟ ನಿರ್ಧಾರ ತಿಳಿಸದ ಕಾರಣ ರದ್ದಾಗಿದೆ. ಮಂಡ್ಯಕ್ಕೆ (Mandya) ತೆರಳದೇ ಬೆಂಗಳೂರಲ್ಲಿ ಸುಮಲತಾ ಅಂಬರೀಶ್ ಉಳಿದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಇಂದು ಮೈತ್ರಿ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಪರ ಸುಮಲತಾ ಮತಯಾಚನೆ ಮಾಡುವ ಕಾರ್ಯಕ್ರಮ ಮಂಗಳವಾರ ನಿಗದಿಯಾಗಿತ್ತು.

10ನೇ ತರಗತಿ ವಿದ್ಯಾರ್ಥಿನಿ ಮೇಲೆ 9ನೇ ಕ್ಲಾಸ್ ಹುಡುಗನ ಪ್ರೀತಿ: ಲವ್ ನಿರಾಕರಿಸಿದ್ದಕ್ಕೆ ಚಾಕು ಇರಿತ

Posted by Vidyamaana on 2024-02-22 22:15:21 |

Share: | | | | |


10ನೇ ತರಗತಿ ವಿದ್ಯಾರ್ಥಿನಿ ಮೇಲೆ 9ನೇ ಕ್ಲಾಸ್ ಹುಡುಗನ ಪ್ರೀತಿ: ಲವ್ ನಿರಾಕರಿಸಿದ್ದಕ್ಕೆ ಚಾಕು ಇರಿತ

ಕಲಬುರ್ಗಿ: 10ನೇ ತರಗತಿ ಓದುತ್ತಿದ್ದಂತ ವಿದ್ಯಾರ್ಥಿನಿಯನ್ನು 9ನೇ ತರಗತಿ ಓದುತ್ತಿದ್ದಂತ ವಿದ್ಯಾರ್ಥಿಯೊಬ್ಬ ಒನ್ ಸೈಡ್ ಪ್ರೀತಿ ಮಾಡಿದ್ದಾನೆ. ಆದರೇ ಆತನ ಪ್ರೀತಿಯನ್ನು ಅಪ್ರಾಪ್ತ ಬಾಲಕಿ ನಿರಾಕರಿಸಿದ್ದಾಳೆ. ಇಷ್ಟಕ್ಕೇ ಸಿಟ್ಟಾದಂತ ಆತ, ಆಕೆ ತೆರಳುತ್ತಿದ್ದಂತ ಬಸ್ ಹಿಂಬಾಲಿಸಿ ಬೈಕ್ ನಲ್ಲಿ ತೆರಳಿ, ಕೆಳಗೆ ಇಳಿಸಿಕೊಂಡು ಚಾಕುವಿನಿಂದ ಇರಿದಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.ಕಲಬುರ್ಗಿ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಅಟ್ಟೂರು ಕ್ರಾಸ್ ಬಳಿಯಲ್ಲಿ ಇಂದು ಜಿಲ್ಲೆಯ ಜನತೆ ಬೆಚ್ಚಿ ಬೀಳಿಸುವಂತ ಘಟನೆ ನಡೆದಿದೆ. ಅಲ್ಲದೇ ಸಿನಿಮೀಯ ರೀತಿಯಲ್ಲಿ ನಡೆದಂತ ಘಟನೆಯಿಂದ ಜನರು ಆಘಾತಗೊಳ್ಳುವಂತೆ ಮಾಡಿದೆ. ಅದೇ 9ನೇ ತರಗತಿಯಲ್ಲಿ ಓದುತ್ತಿದ್ದಂತ ಬಾಲಕ, 10ನೇ ತರಗತಿಯಲ್ಲಿ ಓದುತ್ತಿದ್ದಂತ ಬಾಲಕಿಯನ್ನು ಪ್ರೀತಿಸುವಂತೆ ಮಾಡಿದ ಮನವಿ ನಿರಾಕರಿಸಿದಂತ ನಂತ್ರ ಆದಂತ ಘಟನೆಯಾಗಿದೆ.


9ನೇ ತರಗತಿ ಬಾಲಕ, 10ನೇ ತರಗತಿ ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸಿದರೂ, ಆತನ ಪ್ರೀತಿಯನ್ನು ಒಪ್ಪಿಕೊಂಡಿಲ್ಲ. ಇಷ್ಟಕ್ಕೇ ಕೋಪಗೊಂಡ ಆ ಅಪ್ರಾಪ್ತ ಬಾಲಕ, ಇಂದು ಶಾಲೆಗೆ ತೆರಳುತ್ತಿದ್ದಂತ ಬಾಲಕಿಯ ಬಸ್ ಅನ್ನು ಬೈಕ್ ನಲ್ಲಿ ಹಿಂಬಾಲಿಸಿ ಲವ್ ಏನು ಬೇಡ. ಬಾ ಮಾತನಾಡುವುದಿದೆ ಎಂಬುದಾಗಿ ಕೆಳಗೆ ಇಳಿಸಿಕೊಂಡಿದ್ದಾನೆ. ಆ ಬಳಿಕ ಬಾಲಕಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ಬಾಲಕನಿಂದ ಚಾಕು ಇರಿತಕ್ಕೆ ಒಳಗಾದಂತ ಬಾಲಕಿಯನ್ನು ಕೂಡಲೇ ಕಲಬುರ್ಗಿ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬಾಲಕಿಯ ಸ್ಥಿತಿ ಗಂಭೀರವಾಗಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಪುತ್ತೂರು : ಮೆಸ್ಕಾಂ ತುರ್ತು ಕಾಮಗಾರಿ: ಇಂದು (ಜುಲೈ 06) ವಿದ್ಯುತ್ ನಿಲುಗಡೆ

Posted by Vidyamaana on 2023-07-05 23:31:45 |

Share: | | | | |


ಪುತ್ತೂರು : ಮೆಸ್ಕಾಂ ತುರ್ತು ಕಾಮಗಾರಿ: ಇಂದು (ಜುಲೈ 06) ವಿದ್ಯುತ್ ನಿಲುಗಡೆ

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ರಾಮಕುಂಜ ಫೀಡರ್‌ನಲ್ಲಿ ಜು 06 ರಂದು . ಪೂರ್ವಾಹ್ನ ಗಂಟೆ 10 ರಿ೦ದ ಅಪರಾಹ್ನ 4:00 ರ ವರೆಗೆ ವಿದ್ಯುತ್‌ ನಿಲುಗಡೆ ಮಾಡಲಾಗುವುದು. ಆದುದರಿಂದ, 110/33/11ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್‌ ಸರಬರಾಜಾಗುವ ರಾಮಕುಂಜ ಗ್ರಾಮ, ಹಿರೇಬಂಡಾಡಿ ಗ್ರಾಮ, ಬೆಳ್ಳಿಪ್ಪಾಡಿ ಗ್ರಾಮ ಮತ್ತು ಕೋಡಿಂಬಾಡಿ ಗ್ರಾಮದ ವಿದ್ಯುತ್‌ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ದೆಹಲಿಯಲ್ಲಿ ಕಳುವಾಗಿದ್ದ ಜೆ.ಪಿ ನಡ್ಡಾ ಪತ್ನಿ ಕಾರು ವಾರಾಣಸಿಯಲ್ಲಿ ಪತ್ತೆ, ಇಬ್ಬರ ಬಂಧನ

Posted by Vidyamaana on 2024-04-07 10:29:44 |

Share: | | | | |


ದೆಹಲಿಯಲ್ಲಿ ಕಳುವಾಗಿದ್ದ ಜೆ.ಪಿ ನಡ್ಡಾ ಪತ್ನಿ ಕಾರು ವಾರಾಣಸಿಯಲ್ಲಿ ಪತ್ತೆ, ಇಬ್ಬರ ಬಂಧನ

ವಾರಾಣಸಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ ಅವರ ಕಾರನ್ನು ದೆಹಲಿಯ ಗೋವಿಂದಪುರಿ ಪ್ರದೇಶದಲ್ಲಿನ ಸರ್ವೀಸ್ ಸೆಂಟರ್‌ನಿಂದ ಕಳವು ಮಾಡಲಾಗಿದ್ದ ಕಾರನ್ನು ಪೊಲೀಸರು ವಾರಣಾಸಿಯಲ್ಲಿ ಪತ್ತೆಹಚ್ಚಿದ್ದು ಪ್ರಕರಣಕ್ಕೆ ಸಮಬಂಧಿಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಲ್ಲಿಕಾ ನಡ್ಡಾ ಅವರಿಗೆ ಸೇರಿದ್ದ ಬಿಳಿ ಬಣ್ಣದ ಫಾರ್ಚುನರ್ ಎಸ್‌ಯುವಿ ಕಾರು ಕಳೆದ ಮಾರ್ಚ್ 19 ರಂದು ಕಳ್ಳತನ ಮಾಡಲಾಗಿತ್ತು, ಈ ಕುರಿತು ಕಾರು ಚಾಲಕ ಜೋಗಿಂದರ್ ಸಿಂಗ್ ಅವರು ದೂರು ನೀಡಿದ್ದರು

ವಾಹನ ಸವಾರ ರಿಗೆ ಬಿಗ್ ರಿಲೀಫ್: HSRP ನಂಬರ್ ಪ್ಲೇಟ್ ಅಳವಡಿಕೆಗೆ ಅವಧಿ ವಿಸ್ತರಣೆ

Posted by Vidyamaana on 2023-11-15 07:48:38 |

Share: | | | | |


 ವಾಹನ ಸವಾರ ರಿಗೆ ಬಿಗ್ ರಿಲೀಫ್:  HSRP ನಂಬರ್ ಪ್ಲೇಟ್ ಅಳವಡಿಕೆಗೆ ಅವಧಿ ವಿಸ್ತರಣೆ

ಬೆಂಗಳೂರು : 2019, ಏಪ್ರಿಲ್ 1ರ ನಂತ್ರ ಖರೀದಿಸಿದಂತ ವಾಹನಗಳಿಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ( HSRP Number Plate ) ಅಳವಡಿಸೋದು ಕಡ್ಡಾಯಗೊಳಿಸಲಾಗಿತ್ತು. ಇದಕ್ಕಾಗಿ ನವೆಂಬರ್.17 ಡೆಡ್ ಲೈನ್ ನೀಡಲಾಗಿತ್ತು. ಈಗ ಈ ಅವಧಿಯನ್ನು ಫೆ.17, 2024ರವರೆಗೆ ವಿಸ್ತರಿಸಲಾಗಿದೆ.ಈ ಮೂಲಕ ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಲಾಗಿದೆ.


ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಿರುವಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ( Minister Ramalingareddy ) ಅವರು, ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಕೆಗೆ ಅವಧಿ ವಿಸ್ತರಿಸುವಂತೆ ವಾಹನ ಸವಾರರು ಮನವಿ ಮಾಡಿದ್ದಾರೆ. ಈ ಮನವಿಯ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದರು.


ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ನೀಡಲಾಗಿರುವಂತ ಗಡುವನ್ನು ನವೆಂಬರ್.17ರಿಂದ ಫೆಬ್ರಬರಿ.17, 2024ರವರೆಗೆ ವಿಸ್ತರಣೆ ಮಾಡೋದಕ್ಕೆ ಚಿಂತನೆ ನಡೆಸಲಾಗುತ್ತಿದೆ. ಈ ಸಂಬಂಧ ಇಂದು ಸಂಜೆ ಆದೇಶ ಹೊರಡಿಸಲಾಗುತ್ತದೆ ಎಂದು ಹೇಳಿದರು.

ಕರ್ನಾಟಕದಲ್ಲಿ HSRP ಪಡೆಯುವುದು ಹೇಗೆ?

ಕರ್ನಾಟಕ ಸಾರಿಗೆ ಇಲಾಖೆಯ ವೆಬ್ಸೈಟ್ - https://transport.karnataka.gov.in ಅಥವಾ www.siam.in ಭೇಟಿ ನೀಡಿ ಮತ್ತು ಬುಕ್ HSRP ಕ್ಲಿಕ್ ಮಾಡಿ. ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ ಮತ್ತು ಕೇಳಿದ ಮೂಲ ವಾಹನ ವಿವರವನ್ನು ಭರ್ತಿ ಮಾಡಿ. ನಂತರ ಎಚ್‌ಎಸ್‌ಆರ್ಪಿಯನ್ನು ಅಂಟಿಸಲು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ ಮತ್ತು ಆನ್ಲೈನ್ನಲ್ಲಿ HSRP ಶುಲ್ಕವನ್ನು ಪಾವತಿಸಲು ಮುಂದುವರಿಯಿರಿ. ಯಾವುದೇ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.


ಒಟಿಪಿಯನ್ನು ರಚಿಸಿ ವಾಹನ ಮಾಲೀಕರ ಮೊಬೈಲ್ ಗೆ ಕಳುಹಿಸಲಾಗುತ್ತದೆ. ಮಾಲೀಕರು ತಮ್ಮ ಅನುಕೂಲ ಮತ್ತು ವೆಬ್ಸೈಟ್ಗೆ ಅನುಗುಣವಾಗಿ ಅಂಟಿಸುವ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಬಹುದು.ನಂತರ ಮಾಲೀಕರು ಎಚ್‌ಎಸ್‌ಆರ್ಪಿಯನ್ನು ಅಂಟಿಸಲು ಅವನ / ಅವಳ ವಾಹನ ತಯಾರಕರು ಅಥವಾ ಡೀಲರ್ಗೆ ಭೇಟಿ ನೀಡಬೇಕು. ಕೆಲವು ತಯಾರಕರು ಮನೆಗಳು ಮತ್ತು ಕಚೇರಿಗಳ ಮನೆ ಬಾಗಿಲಿಗೆ ಎಚ್‌ಎಸ್‌ಆರ್ಪಿ ಸೇವೆಯನ್ನು ಒದಗಿಸುತ್ತಿದ್ದಾರೆ.



Leave a Comment: