ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಸುದ್ದಿಗಳು News

Posted by vidyamaana on 2024-07-03 19:23:39 |

Share: | | | | |


ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರೂ. ೫೦ ಸಾವಿರ ಸಹಾಯಧನವನ್ನು ನೀಡಿದರು. ಮಂಗಳೂರು ಕೇಂದ್ರ ಕಚೇರಿಯನ್ನು ಹೊಂದಿರುವ ಈ ಟ್ರಸ್ಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಟ್ರಸ್ಟ್‌ನಲ್ಲಿ ಸದಸ್ಯರಾಗಿರುತ್ತಾರೆ.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ದಿ ಟ್ರಸ್ಟ್ ಇದಾಗಿರುತ್ತದೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ತಾರಾಬಲ್ಲಾಲ್, ಪುತ್ತೂರು ತಾಲೂಕು ಅಧ್ಯಕ್ಷೆ ಕಮಲ, ತಾಲೂಕು ಕಾರ್ಯದರ್ಶಿ ಪುಷ್ಪಾವತಿ, ಸೇವಾಂಜಲಿ ಟ್ರಸ್ಟ್ ಉಪಾಧ್ಯಕ್ಷೆ ಅರುಣಾ ಡಿ, ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು.

 Share: | | | | |


ಉಡುಪಿ ವೀಡಿಯೋ ಪ್ರಕರಣ:

Posted by Vidyamaana on 2023-07-28 09:10:24 |

Share: | | | | |


ಉಡುಪಿ ವೀಡಿಯೋ ಪ್ರಕರಣ:

ಉಡುಪಿ: ಉಡುಪಿ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರೀಕರಣ ಮಾಡಿದ್ದಾರೆ ಎನ್ನಲಾದ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಉಡುಪಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಖುದ್ದಾಗಿ ಹಾಜರಾಗಿದ್ದಾರೆ.

ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಾಲಯ ವಿದ್ಯಾರ್ಥಿನಿಯರಿಗೆ ಷರತ್ತುಬದ್ಧ ಜಾಮೀನು ಮಂಜೂರುಗೊಳಿಸಿದೆ.


ಒಂದನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಂ ಪ್ರಕಾಶ್ ಅವರು ತೀರ್ಪು ನೀಡಿದ್ದಾರೆ. ಮೂವರು ವಿದ್ಯಾರ್ಥಿನಿಯರ ಪರವಾಗಿ ನ್ಯಾಯವಾದಿ ಅಸದುಲ್ಲ ವಾದಿಸಿದರು.


ಉಡುಪಿಯ ಖಾಸಗಿ ಕಾಲೇಜಿನಲ್ಲಿ ನಡೆದ ಮುಸ್ಲಿಂ ವಿದ್ಯಾರ್ಥಿನಿಯರಿಂದ ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಬಿಜೆಪಿಯಿಂದ ‘ಬೃಹತ್ ಪ್ರತಿಭಟನೆ ಮತ್ತು ಸಮಗ್ರ ತನಿಖೆಗೆ ಹಕ್ಕೊತ್ತಾಯ ಪೊಲೀಸ್ ಭದ್ರತೆಯ ನಡುವೆ ಶುಕ್ರವಾರ ಆರಂಭವಾಗಿದೆ.

ಇಂಟಕ್ ಅಧ್ಯಕ್ಷರಾಗಿ ನ್ಯೂಸ್ ಅಕ್ಕರೆ ಯ ಮುಖ್ಯಸ್ಥ ಜಯಪ್ರಕಾಶ್ ಬದಿನಾರು ಪುನರಾಯ್ಕೆ

Posted by Vidyamaana on 2024-02-13 07:50:16 |

Share: | | | | |


ಇಂಟಕ್ ಅಧ್ಯಕ್ಷರಾಗಿ ನ್ಯೂಸ್ ಅಕ್ಕರೆ ಯ ಮುಖ್ಯಸ್ಥ ಜಯಪ್ರಕಾಶ್ ಬದಿನಾರು ಪುನರಾಯ್ಕೆ

ಪುತ್ತೂರು: ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕ `ಇಂಟಕ್‌ನ ಪುತ್ತೂರು ತಾಲೂಕು ಅಧ್ಯಕ್ಷರಾಗಿ ಜಯಪ್ರಕಾಶ್‌ ಬದಿನಾರು ಪುನರಾಯ್ಕೆಯಾಗಿದ್ದಾರೆ.ಕೋಡಿಂಬಾಡಿ ಗ್ರಾಮದ ಬದಿನಾರು ನಿವಾಸಿಯಾಗಿರುವ ಜಯಪ್ರಕಾಶ್‌ ಅವರು ಪ್ರಸ್ತುತ ಕೋಡಿಂಬಾಡಿ ಗ್ರಾಮ ಪಂಚಾಯತ್‌ ಉಪಾಧ್ಯಕ್ಷರಾಗಿದ್ದು, ಸೇಡಿಯಾಪು ಫ್ರೆಂಡ್ಸ್ ಕ್ಲಬ್‌ ಗೌರವಾಧ್ಯಕ್ಷರಾಗಿ, ಕೋಡಿಂಬಾಡಿ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷರಾಗಿ, ಕೋಡಿಂಬಾಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರಾಗಿ, ಜಯಕರ್ನಾಟಕ ಕೋಡಿಂಬಾಡಿ ಘಟಕದ ಗೌರವಾಧ್ಯಕ್ಷರಾಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಕಾಸರಗೋಡು ಚಿಪ್ಪಾರು ಕೋಟಿ ಚೆನ್ನಯ ಬ್ರಹ್ಮಬೈದರ್ಕಳ ಗರಡಿಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ, ಯುವವಾಹಿನಿ ಪುತ್ತೂರು ಘಟಕದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ಜಯಪ್ರಕಾಶ್ ಬದಿನಾರು ಅವರು `ನ್ಯೂಸ್ ಅಕ್ಕರೆಯ ಮುಖ್ಯಸ್ಥರಾಗಿದ್ದಾರೆ. ಪುತ್ತೂರು ತಾಲೂಕು ಇಂಟಕ್ ಅಧ್ಯಕ್ಷರಾಗಿರುವ ಜಯಪ್ರಕಾಶ್‌ರವರನ್ನು ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ ಅವರು ಪುನರಾಯ್ಕೆಗೊಳಿಸಿ ಆದೇಶಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಗಲಾಟೆ: ಜೈಲರ್ ಸಿನಿಮಾದ ನಟನ ಬಂಧನ

Posted by Vidyamaana on 2023-10-25 15:40:01 |

Share: | | | | |


ಕುಡಿದ ಮತ್ತಿನಲ್ಲಿ ಗಲಾಟೆ: ಜೈಲರ್ ಸಿನಿಮಾದ ನಟನ ಬಂಧನ

ಕೊಚ್ಚಿ : ಕುಡಿದ ಮತ್ತಿನಲ್ಲಿ ಕೊಚ್ಚಿ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ ಆರೋಪದ ಮೇಲೆ ಜೈಲರ್ ನಟ ವಿನಾಯಕನ್ ಅವರನ್ನು ಕೇರಳ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ನಟ ಸಂಜೆ ಎರ್ನಾಕುಲಂ ಟೌನ್ ಉತ್ತರ ಪೊಲೀಸ್ ಠಾಣೆಯಲ್ಲಿ ಕೋಲಾಹಲ ಸೃಷ್ಟಿಸಿದ್ದಾರೆ. ಅವರು ತಮ್ಮ ಅಪಾರ್ಟ್ಮೆಂಟ್ನಲ್ಲಿ ಗಲಾಟೆ ಮಾಡಿದ್ದಕ್ಕಾಗಿ ನೆರೆದಿದ್ದವರು ಪೊಲೀಸರನ್ನು ಕರೆಸಿದರು.ಬಳಿಕ ಪೊಲೀಸ್ ಠಾಣೆಯಲ್ಲಿಯೂ ತೊಂದರೆ ಉಂಟುಮಾಡಿದ್ದಕ್ಕಾಗಿ ಆತನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಗತ್ಯ ವೈದ್ಯಕೀಯ ಪರೀಕ್ಷೆಗಾಗಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.


ವಿನಾಯಗನ್ ಅವರನ್ನು ಪೊಲೀಸ್ ಠಾಣೆಯ ಮೂಲೆಯೊಂದರಲ್ಲಿ ನಿಲ್ಲಿಸಿರುವ ಚಿತ್ರ ಹಾಗೂ ವಿನಾಯಗನ್ ಅವರನ್ನು ಆಟೋನಲ್ಲಿ ಕರೆದುಕೊಂಡು ಹೋಗುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಗನ ಸಾವಿನ ನೋವಲ್ಲಿ ತಾಯಿ ಸಹೋದರಿ ಆತ್ಮಹತ್ಯೆ ; ದೀಪಾವಳಿ ಮಧ್ಯೆ ಕುಟುಂಬಕ್ಕೆ ಆಘಾತ

Posted by Vidyamaana on 2023-11-15 05:50:17 |

Share: | | | | |


ಮಗನ ಸಾವಿನ ನೋವಲ್ಲಿ ತಾಯಿ ಸಹೋದರಿ ಆತ್ಮಹತ್ಯೆ ; ದೀಪಾವಳಿ ಮಧ್ಯೆ ಕುಟುಂಬಕ್ಕೆ ಆಘಾತ

ಕಾರವಾರ, ನ.15: ದೀಪಾವಳಿ ಸಂಭ್ರಮದ ನಡುವೆ ಒಂದೇ ಮನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಪುತ್ರನ ಸಾವಿನ ನೋವಿನಲ್ಲಿ ತಾಯಿ ಹಾಗೂ ಸಹೋದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರಸಿ ತಾಲೂಕಿನ ತಾರಗೋಡು ಬೆಳಲೆ ಗ್ರಾಮದಲ್ಲಿ ನಡೆದಿದೆ. 


ಅನಾರೋಗ್ಯದ ಹಿನ್ನೆಲೆ ಉದಯ ಬಾಲಚಂದ್ರ ಹೆಗಡೆ (22) ಎಂಬ ಯುವಕ ಮನೆಯಲ್ಲೇ ಮೃತಪಟ್ಟಿದ್ದರು.‌ ಪುತ್ರನ ಮೃತದೇಹದ ಪಕ್ಕದಲ್ಲೇ ಕುಳಿತು ಕಣ್ಣೀರು ಹಾಕುತ್ತಿದ್ದ ಆತನ ತಾಯಿ ಹಾಗೂ ಸಹೋದರಿ ಬಳಿಕ ತಾವು ಕೂಡ ಸಾವಿಗೆ ಶರಣಾಗಿದ್ದಾರೆ.‌‌ ತಾಯಿ ನರ್ಮದಾ ಬಾಲಚಂದ್ರ ಹೆಗಡೆ (50) ಹಾಗೂ ಸಹೋದರಿ ದಿವ್ಯಾ ಬಾಲಚಂದ್ರ ಹೆಗಡೆ (25) ಆತ್ಮಹತ್ಯೆ ಮಾಡಿಕೊಂಡವರು.‌


ಕೊರೊನಾ ಸಂದರ್ಭದಲ್ಲಿ ಆನಾರೋಗ್ಯ ಕಾಡಿದ್ದರಿಂದ ಊರಿಗೆ ಹಿಂತಿರುಗಿದ್ದ ಉದಯ ಬಾಲಚಂದ್ರ ಹೆಗಡೆ ಮನೆಯಲ್ಲಿದ್ದಕೊಂಡೇ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಮಗನ ಚಿಕಿತ್ಸೆಗಾಗಿ ಆಸ್ಪತ್ರೆ- ಮನೆ ಅಂತ ಅಲೆದಾಡುತ್ತಿದ್ದರು. ಅನಾರೋಗ್ಯ ತೀವ್ರಗೊಂಡ ಹಿನ್ನೆಲೆ‌ ಮಂಗಳವಾರ ಬೆಳಗ್ಗೆ ಮಗ ಸಾವಿಗೀಡಾಗಿದ್ದ.‌ ಮನೆ ಮಗನ ಸಾವಿನ ನೋವಿನಿಂದ ತಾಯಿ ಹಾಗೂ ಸಹೋದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 


ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ಮಹಿಳೆಯರ ಉಚಿತ ಬಸ್ ಪ್ರಯಾಣ ಕ್ಕೆ ಮತ್ತೊಂದು ಹೊಸ ರೂಲ್ಸ್

Posted by Vidyamaana on 2023-06-10 11:06:52 |

Share: | | | | |


ಮಹಿಳೆಯರ ಉಚಿತ ಬಸ್ ಪ್ರಯಾಣ ಕ್ಕೆ ಮತ್ತೊಂದು ಹೊಸ ರೂಲ್ಸ್

ಬೆಂಗಳೂರು : ನಾಳೆ ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಸಾರಿಗೆ ಬಸ್ ಉಚಿತ ಪ್ರಯಾಣ ಸೌಲಭ್ಯ ಆರಂಭಗೊಳ್ಳಲಿದೆ. ಈಗಾಗಲೇ ಹಲವು ಷರತ್ತು ವಿಧಿಸಿರುವಂತ ರಾಜ್ಯ ಸರ್ಕಾರ, ಈಗ ಮತ್ತೊಂದು ಹೊಸ ರೂಲ್ಸ್ ಜಾರಿಗೊಳಿಸಿದೆ. ಅದೇ ಸ್ಟಿಕ್ಕರ್ ಇದ್ದಂತ ಬಸ್ ಗಳಲ್ಲಿ ಮಾತ್ರವೇ ಸಂಚರಿಸೋದಕ್ಕೆ ಮಹಿಳೆಯರಿಗೆ ಅವಕಾಶ ನೀಡಿದೆ.ಈ ಕುರಿತಂತೆ ಇಂದು ನಾಳೆ ವಿಧಾನಸೌಧದ ಮುಂಭಾಗದಲ್ಲಿ ಶಕ್ತಿ ಯೋಜನೆ ಉದ್ಘಾಟನಾ ಕಾರ್ಯಕ್ರಮದ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾಳೆ ಶಕ್ತಿ ಯೋಜನೆಗೆ ಸಿಎಂ ಸಿದ್ಧರಾಮಯ್ಯ ಚಾಲನೆಗೊಳಿಸಲಿದ್ದಾರೆ ಎಂಬುದಾಗಿ ತಿಳಿಸಿದರು.ನಾಳೆ ಮಧ್ಯಾಹ್ನ 1ರ ನಂತ್ರ ರಾಜ್ಯಾಧ್ಯಂತ ಸಾರಿಗೆ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಆರಂಭದಲ್ಲಿ ಐಡಿ ಕಡ್ಡಾಯಗೊಳಿಸಲಾಗಿದೆ. ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ಪಡೆದು ಓಡಾಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.ಇನ್ನೂ ಈವರೆಗೆ ರಾಜಹಂಸ, ಎಸಿ, ನಾನ್ ಎಸಿ ಸ್ಲೀಪರ್ ಸೇರಿದಂತೆ ಐಷಾರಾಮಿ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿರಲಿಲ್ಲ ಎಂಬುದಾಗಿ ಷರತ್ತು ವಿಧಿಸಲಾಗಿತ್ತು. ಈಗ ಮತ್ತೊಂದು ಹೊಸ ರೂಲ್ಸ್ ಬಗ್ಗೆಯೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದಾರೆ. ಅದೇ ಸ್ಟಿಕ್ಕರ್ ಇರುವಂತ ಸಾರಿಗೆ ಬಸ್ ಗಳಲ್ಲಿ ಮಾತ್ರವೇ ಮಹಿಳೆಯರು ಪ್ರಯಾಣಿಸಲು ಅವಕಾಶ ಎಂಬುದಾಗಿದೆ

ವಾಟ್ಸಾಪ್ ಚಾನೆಲ್ ಸೇರಿದ ಪ್ರಧಾನಿ ಮೋದಿ : ನಮೋ ಸಂಪರ್ಕಿಸೋದು ಈಗ ಇನ್ನಷ್ಟು ಸುಲಭ

Posted by Vidyamaana on 2023-09-20 08:20:04 |

Share: | | | | |


ವಾಟ್ಸಾಪ್ ಚಾನೆಲ್ ಸೇರಿದ ಪ್ರಧಾನಿ ಮೋದಿ : ನಮೋ ಸಂಪರ್ಕಿಸೋದು ಈಗ ಇನ್ನಷ್ಟು ಸುಲಭ

ನವದೆಹಲಿ: ಬುಧವಾರವಷ್ಟೇ ಮೆಟಾ ಕಂಪನಿ(Meta) ಲಾಂಚ್ ಮಾಡಿದ್ದ ವಾಟ್ಸಾಪ್‌ನ ಹೊಸ ಫೀಚರ್ ‘ಚಾನೆಲ್’ (WhatsApp Channel) ಈಗ ಜನಪ್ರಿಯವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೂ ಈಗ ವಾಟ್ಸಾಪ್‌ ಚಾನೆಲ್ ಆರಂಭಿಸಿದ್ದಾರೆ. ವಾಟ್ಸಾಪ್‌ ಚಾನೆಲ್‌ನಲ್ಲಿ ಅಡ್ಮಿನ್‌ಗಳು (WhatsApp Channel Admin), ತಮ್ಮ ಫಾಲೋವರ್ಸ್‌ಗೆ ಪಠ್ಯ, ಟೆಕ್ಸ್ಟ್, ಫೋಟೋ, ವಿಡಿಯೋ, ಸ್ಟಿಕರ್ಸ್ ಷೇರ್ ಮಾಡಬಹುದು. ಜತೆಗೆ ಸಮೀಕ್ಷೆ ಕೂಡ ಕೈಗೊಳ್ಳಬಹುದು.

Read more.....

ಜನ ಸಂಪರ್ಕಕ್ಕೆ ವಾಟ್ಸಪ್ ಚಾನೆಲ್ ಆರಂಭಿಸಿದ ದೇಶದ ಮೊಟ್ಟ ಮೊದಲ ಸಿಎಂ ಸಿದ್ದರಾಮಯ್ಯ


ಏನಿದು ವಾಟ್ಸಾಪ್ ಚಾನೆಲ್?

ವಾಟ್ಸಾಪ್ ಚಾನೆಲ್, ಇದು ಒನ್‌ ವೇ ಬ್ರಾಡಕಾಸ್ಟರ್ ಸಾಧನವಾಗಿದೆ. ಅಡ್ಮಿನ್‌ಗಳು ಫಾಲೋವರ್ಸ್‌ಗಳೊಂದಿಗೆ ಪಠ್ಯದಿಂದ ಮಲ್ಟಿಮೀಡಿಯಾ ಮತ್ತು ಸಮೀಕ್ಷೆಗಳವರೆಗೆ ವಿವಿಧ ರೀತಿಯ ವಿಷಯವನ್ನು ಹಂಚಿಕೊಳ್ಳಲು ಇದು ಅನುಮತಿಸುತ್ತದೆ. ವ್ಯಕ್ತಿಗತ ಬಳಕೆದಾರರು ತಮ್ಮ ನೆಚ್ಚಿನ ವ್ಯಕ್ತಿಗಳು ಮತ್ತು ಸಂಸ್ಥೆಗಳ ಚಟುವಟಿಕೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರಲು ಇದರಿಂದ ಸಾಧ್ಯವಾಗಲಿದೆ. ಕುಟುಂಬ, ಸ್ನೇಹಿತರು ಮತ್ತು ಸಮುದಾಯಗಳೊಂದಿಗೆ ನಿಮ್ಮ ನಿಯಮಿತ ಚಾಟ್‌ಗಳಿಂದ ಭಿನ್ನವಾಗಿರುವ “ಅಪ್‌ಡೇಟ್‌ಗಳು” ಹೆಸರಿನ ಮೀಸಲಾದ ಟ್ಯಾಬ್ ಮೂಲಕ ವಾಟ್ಸಾಪ್ ಚಾನೆಲ್‌ ಪ್ರವೇಶಿಸಬಹುದಾಗಿದೆ.


ವಾಟ್ಸಾಪ್ ಚಾನೆಲ್ ಕಾರ್ಯ ಹೇಗೆ?

ಚಾನೆಲ್‌ಗಳು ಒನ್‌ವೇ ಬ್ರಾಡ್‌ಕಾಸ್ಟ್ ಆಗಿರುವುದರಿಂದ ಅಡ್ಮಿನ್‌ಗೆ ಮಾತ್ರ ಷೇರ್ ಮಾಡುವ ಹಕ್ಕಿರುತ್ತದೆ. ಬಳಕೆದಾರರು ಎಮೋಜಿಗಳ ಮೂಲಕ ಮಾತ್ರವೇ ಪ್ರತಿಕ್ರಿಯೆ ನೀಡಬಹುದು. ಹಾಗೆಯೇ, ಚಾನೆಲ್ ಪೋಸ್ಟ್‌ಗೆ ಎಷ್ಟು ರಿಯಾಕ್ಷನ್‌ಗಳು ಬಂದಿವೆ ಎಂಬುದನ್ನು ಲೆಕ್ಕ ಹಾಕಬಹುದು.


30 ದಿನಗಳವರೆಗೆ ಮಾತ್ರ ಅಡ್ಮಿನ್‌ಗಳಿಗೆ ತಮ್ಮ ಕಂಟೆಂಟ್ ಅಪ್‌ಡೇಟ್ ಮಾಡುವ ಇಲ್ಲವೇ ಬದಲಾವಣೆ ಮಾಡುವ ಅವಕಾಶವನ್ನು ಈ ಹೊಸ ಫೀಚರ್ ಒದಗಿಸುತ್ತದೆ. ಅದರ ವಾಟ್ಸಾಪ್, ತನ್ನ ಪ್ಲಾಟ್‌ಫಾರ್ಮ್ ಸರ್ವರ್‌ಗಳಿಂದ ಹಳೆಯ ಅಪ್‌ಡೇಟ್‌ಗಳನ್ನು ಸ್ವಯಂಚಾಲಿತವಾಗಿ ಡಿಲಿಟ್ ಮಾಡುತ್ತದೆ.ಇದಲ್ಲದೆ, ನೀವು ಚಾಟ್‌ಗಳು ಅಥವಾ ಗ್ರೂಪ್‌ಗಳಿಗೆ ಅಪ್‌ಡೇಟ್ಸ್ ಫಾರ್ವರ್ಡ್ ಮಾಡಿದಾಗ, ಅದು ಸ್ವಯಂಚಾಲಿತವಾಗಿ ಮೂಲ ಚಾನಲ್‌ಗೆ ಲಿಂಕ್ ಒಳಗೊಂಡಿರುತ್ತದೆ. ಇದರಿಂದಾಗಿ ಚಾನೆಲ್‌ನ ಕಂಟೆಂಟ್ ಹುಡುಕುವ ಇತರರಿಗೆ ಸುಲಭ ಪ್ರವೇಶ ಒದಗಿಸಲು ಸಾಧ್ಯವಾಗುತ್ತದೆ.


ನರೇಂದ್ರ ಮೋದಿ ವಾಟ್ಸಾಪ್ ಚಾನೆಲ್‌ ಫಾಲೋ ಮಾಡುವುದು ಹೇಗೆ?

ಮೊದಲಿಗೆ ನಿಮ್ಮ ವಾಟ್ಸಾಪ್‌ ಅಪ್‌ಡೇಟ್ ಆಗಿದೆಯಾ ಚೆಕ್ ಮಾಡಿಕೊಳ್ಳಿ. ಒಂದೊಮ್ಮೆ ಆಗಿರದಿದ್ದರೆ ಗೂಗಲ್ ಪ್ಲೇಸ್ಟೋರ್‌ಗೆ ಹೋಗಿ, ವಾಟ್ಸಾಪ್ ಅಪ್‌ಡೇಟ್ ಮಾಡಿಕೊಳ್ಳಿ. ಇಷ್ಟಾದ ಮೇಲೆ ಮೊದಲಿಗೆ ವಾಟ್ಸಾಪ್ ತೆರೆಯಿರಿ ಮತ್ತು ಅಪ್‌ಡೇಟ್‌ಗೆ ನ್ಯಾವಿಗೇಟ್ ಮಾಡಿ. ಬಳಿಕ, ನಿಮ್ಮ ಸ್ಕ್ರೀನ್‌ನ ಕೆಳಭಾಗದಲ್ಲಿ, ನೀವು “Find Channels” ಆಯ್ಕೆಯನ್ನು ಕಾಣುತ್ತೀರಿ. ಅದರ ಮೇಲೆ ಟ್ಯಾಪ್ ಮಾಡಿ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಲಭ್ಯವಿರುವ ಚಾನೆಲ್‌ಗಳ ಪಟ್ಟಿ ನಿಮ್ಮ ಮುಂದೆ ಗೋಚರವಾಗುತ್ತದೆ. ಚಾನೆಲ್‌ ಸೇರಲು, ಚಾನೆಲ್ ಮುಂದೆ ಇರುವ plus icon ಮೇಲೆ ಟ್ಯಾಪ್ ಮಾಡಿ. ಮತ್ತೊಂದು ರೀತಿಯಲ್ಲೂ ನೀವು ಚಾನೆಲ್ ಜಾಯಿನ್ ಆಗಬಹುದು. ಇದಕ್ಕಾಗಿ ನೀವು, ನಿಮ್ಮ ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ಹುಡುಕಾಟ ಐಕಾನ್ ಅನ್ನು ನೀವು ಬಳಸಬಹುದು ಅಥವಾ ಕ್ಲಿಕ್ ಮಾಡಿ ಮತ್ತು ಹುಡುಕಬಹುದು.



Leave a Comment: