ಮಂಗಳೂರಿನಲ್ಲಿ ಚಡ್ಡಿಗ್ಯಾಂಗ್ ಹಾವಳಿ - ಕೋಡಿಕಲ್ ನಲ್ಲಿ ಮನೆಯೊಂದರ ಕಿಟಕಿ ಗ್ರಿಲ್ಸ್ ಕತ್ತರಿಸಿದ ಕಳ್ಳತನಕ್ಕೆ ಯತ್ನಿಸಿದ ಕಳ್ಳರು

ಸುದ್ದಿಗಳು News

Posted by vidyamaana on 2024-07-08 08:23:43 |

Share: | | | | |


ಮಂಗಳೂರಿನಲ್ಲಿ ಚಡ್ಡಿಗ್ಯಾಂಗ್ ಹಾವಳಿ - ಕೋಡಿಕಲ್ ನಲ್ಲಿ ಮನೆಯೊಂದರ ಕಿಟಕಿ ಗ್ರಿಲ್ಸ್ ಕತ್ತರಿಸಿದ ಕಳ್ಳತನಕ್ಕೆ ಯತ್ನಿಸಿದ ಕಳ್ಳರು

 ಮಂಗಳೂರು : ಮಂಗಳೂರಿನಲ್ಲಿ ಒಂದೆಡೆ ಮುಂಗಾರು ಮಳೆ ಅಬ್ಬರವಿದ್ದರೆ ಇನ್ನೊಂದೆಡೆ ಕಳ್ಳರ ಭಯ ಪ್ರಾರಂಭವಾಗಿದ್ದು, ಕಳ್ಳತನಕ್ಕೆ ಹೆಸರು ಮಾಡಿರುವ ಚೆಡ್ಡಿ ಗ್ಯಾಂಗ್ ನಗರದಲ್ಲಿ ಕಾಣಿಸಿಕೊಂಡಿದೆ. ಅಲ್ಲದೆ ಕೋಡಿಕಲ್ ನಲ್ಲಿ ನಿನ್ನೆ ರಾತ್ರಿ ಮನೆಯೊಂದರ ಕಿಟಕಿ ಗ್ರಿಲ್ಸ್ ಕತ್ತರಿಸಿ ಕಳ್ಳರು ಮನೆಗೆ ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ.ಈ ಕೃತ್ಯವನ್ನು ಹೊರ ರಾಜ್ಯದ ಚಡ್ಡಿ ಗ್ಯಾಂಗ್ ನಡೆಸಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಳ್ಳರು ಮನೆಯ ಕಿಟಕಿ ಕತ್ತರಿಸುವುದಕ್ಕೂ ಮುನ್ನ ಕೋಡಿಕಲ್ ಪರಿಸರದಲ್ಲಿ ಅಡ್ಡಾಡುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಐವರಿದ್ದ ಕಳ್ಳರ ತಂಡ ಮೆಲ್ಲನೆ ಹೆಜ್ಜೆ ಇಡುತ್ತಾ ಕೈಯಲ್ಲಿ ಟಾರ್ಚ್ ಬೆಳಕು ಹರಿಸಿ ಕಳವಿಗೆ ಮನೆ ಹುಡುಕುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ‌. ಚಡ್ಡಿ ಹಾಕಿದ್ದ ಕಳ್ಳರ ಗ್ಯಾಂಗ್ ಸದಸ್ಯರು ಬರುತ್ತಿದ್ದಾಗಲೇ ನಾಯಿಗಳು ಜೋರಾಗಿ ಬೊಗಳಿದ್ದು ಅವುಗಳತ್ತ ಕಳ್ಳರು ಕಲ್ಲೆಸೆದು ಓಡಿಸಿದ್ದಾರೆ.

ಕಿಟಕಿ ಕತ್ತರಿಸಿ ಒಂದು ಮನೆಯ ಒಳಗೆ ನುಗ್ಗಿದ್ದ ಕಳ್ಳರು ಬೆಲೆಬಾಳುವ ವಸ್ತುಗಳಿಗಾಗಿ ಜಾಲಾಡಿದ್ದಾರೆ. ಆದರೆ ಅವರಿಗೆ ಚಿಲ್ಲರೆ ನಗದು ಬಿಟ್ಟರೆ ಯಾವುದೇ ವಸ್ತುಗಳು ಸಿಕ್ಕಿಲ್ಲ. ವಿಶೇಷ ಅಂದ್ರೆ, ಮನೆಮಂದಿ ಮಲಗಿದ್ದಾಗಲೇ ಕಳ್ಳರು ನುಗ್ಗಿ ಹುಡುಕಾಟ ಮುಗಿಸಿ ಸದ್ದಿಲ್ಲದೆ ಹೊರಕ್ಕೆ ತೆರಳಿದ್ದಾರೆ. ಮನೆಯವರಿಗೆ ಬೆಳಗಾದಾಗಲೇ ಕಳವು ಕೃತ್ಯ ತಿಳಿದುಬಂದಿತ್ತು.

 Share: | | | | |


ಹಣ ಹಾಕದೆಯೇ ಎಟಿಎಂ ಕಳ್ಳತನವೆಂದು ದೂರು: ಬೆಡ್ ಶೀಟ್ ಹಾಕ್ಕೊಂಡು ಬಂದಿದ್ದ ಬ್ಯಾಂಕ್‌ ಸಿಬ್ಬಂದಿಯ ಕಳ್ಳಾಟ ಬಯಲು

Posted by Vidyamaana on 2024-07-17 12:54:11 |

Share: | | | | |


ಹಣ ಹಾಕದೆಯೇ ಎಟಿಎಂ ಕಳ್ಳತನವೆಂದು ದೂರು: ಬೆಡ್ ಶೀಟ್ ಹಾಕ್ಕೊಂಡು ಬಂದಿದ್ದ ಬ್ಯಾಂಕ್‌ ಸಿಬ್ಬಂದಿಯ ಕಳ್ಳಾಟ ಬಯಲು

ಬೆಂಗಳೂರು, ಜು.16: ಬೆಡ್ ಶೀಟ್ ಹಾಕಿಕೊಂಡು ಬಂದು ಬೆಂಗಳೂರಿನ ಬೆಳ್ಳಂದೂರು(Bellandur) ಎಟಿಎಂ ಕಳ್ಳತನ ಮಾಡಿದ್ದ ಕೇಸ್​ಗೆ ಮೇಜರ್ ಟ್ವಿಸ್ಟ್‌ ಸಿಕ್ಕಿದೆ. ಹೌದು, ಪೊಲೀಸರ ತ‌ನಿಖೆಯಲ್ಲಿ 16.5 ಲಕ್ಷ ರೂ. ಹಣ ಕಳ್ಳತನ ಆಗಿದೆ ಎಂದು ದೂರು ಕೊಟ್ಟ ಬ್ಯಾಂಕ್ ಸಿಬ್ಬಂದಿಯ ಕಳ್ಳಾಟ ಬೆಳಕಿಗೆ ಬಂದಿದೆ. ಹಣ ಹಾಕದೆಯೇ ಎಟಿಎಂನಲ್ಲಿ ಕಳ್ಳತನ ಆಗಿದೆ ಎಂದು ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದ. ತನಿಖೆ ಕೈಗೊಂಡ ಪೊಲಿಸರು, ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದ ವೇಳೆ ಏಜೆನ್ಸಿಯವರು ಸಿಕ್ಕಿಬಿದ್ದಿದ್ದಾರೆ.

ಐವರನ್ನು ಬಂಧಿಸಿದ ಬೆಳ್ಳಂದೂರು ಪೊಲೀಸರು

ಇದುವರೆಗೂ ಐವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಫೀಲ್ಡ್ ಆಪರೇಷನ್ ಮ್ಯಾನೇಜರ್ ಪ್ರತಾಪ್, ಎಟಿಎಂ ಆಫಿಸರ್ ಪವನ್ ಕಲ್ಯಾಣ್(28), ಸೆಕ್ಯೂರ್ ವ್ಯಾಲ್ಯೂ ಕಂಪನಿ ಬೆಂಗಳೂರು ನಗರ ಎಟಿಎಂ ಇನ್ ಚಾರ್ಜ್ ಧರ್ಮೇಂದ್ರ(52),

ಸೆಕ್ಯೂರ್ ವ್ಯಾಲ್ಯೂ ಕಂಪನಿ ಮಡಿವಾಳ ಏರಿಯಾ ಬ್ರಾಂಚ್ ಹೆಡ್ ರಾಘವೇಂದ್ರ ( 36) , ಸೆಕ್ಯೂರ್ ವ್ಯಾಲ್ಯೂ ಕಂಪನಿ ಅಸ್ಸಿಸ್ಟೆಂಟ್ ಮ್ಯಾನೇಜರ್ ಮಹೇಶ್(30) ಎಂಬುವವರು ಬಂಧಿತ ಆರೋಪಿಗಳು.

ಟೈಟ್ ಆಗಿ ಮರ್ಮಾಂಗವನ್ನೇ ಕತ್ತರಿಸಿಕೊಂಡ ರಾಜ ಶೆಟ್ಟಿ

Posted by Vidyamaana on 2023-04-09 16:04:30 |

Share: | | | | |


ಟೈಟ್ ಆಗಿ ಮರ್ಮಾಂಗವನ್ನೇ ಕತ್ತರಿಸಿಕೊಂಡ ರಾಜ ಶೆಟ್ಟಿ

ಮೈಸೂರು, ಕುಡಿದ ಮತ್ತಿನಲ್ಲಿ ಮೈಸೂರಿನ ಹುಣಸೂರಿನಲ್ಲಿ ವ್ಯಕ್ತಿಯೊಬ್ಬ ಹುಚ್ಚಾಟ ಮೆರೆದಿದ್ದಾನೆ. ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡು ಪೇಚೆಗೆ ಸಿಲುಕಿದ ಘಟನೆ ನಡೆದಿದೆ.ಹುಣಸೂರಿನ ತೊಂಡಾಳು ಗ್ರಾಮದಲ್ಲಿ ರಾಜಶೆಟ್ಟಿ ಎಂಬಾತ ಕುಡಿದ ಮತ್ತಿನಲ್ಲಿ ತನ್ನ ಮರ್ಮಾಂಗವನ್ನು ಕತ್ತರಿಸಿದ್ದಾನೆ.

ಕುಡಿದ ಮತ್ತಿನಲ್ಲಿ ರಾಜಶೆಟ್ಟಿ ಶುಕ್ರವಾರ ತಡ ರಾತ್ರಿ ಮದ್ಯದ ನಶೆಯಲ್ಲಿ ತೂರಾಡುತ್ತಾ ಮನೆ ಕಡೆ ಹೋಗುವಾಗ ಕೆಲವರು ಬೈದಿದ್ದಾರೆ.ಇದರಿಂದ ಮನೆಯೊಂದರ ಬಳಿ ಇಟ್ಟಿದ್ದ ಕುಡುಗೋಲಿನಿಂದ ಏಕಾಏಕಿ ಮರ್ಮಾಂಗ ಕತ್ತರಿಸಿಕೊಂಡಿದ್ದಾನೆ.ಬಳಿಕ ನೋವಿನಿಂದ ಚೀರಾಡಿದ್ದಾನೆ.ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಸಭ್ಯ ವಾಗಿ ವರ್ತಿಸಿ ವಿದ್ಯಾರ್ಥಿನಿಗೆ ಚೂರಿ ಇರಿದವನಿಗೆ 18 ವರ್ಷ ಜೈಲು

Posted by Vidyamaana on 2024-01-13 06:26:14 |

Share: | | | | |


ಅಸಭ್ಯ ವಾಗಿ ವರ್ತಿಸಿ ವಿದ್ಯಾರ್ಥಿನಿಗೆ ಚೂರಿ ಇರಿದವನಿಗೆ 18 ವರ್ಷ ಜೈಲು

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬಗಂಬಿಲ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು ಅಸಭ್ಯ ವಾಗಿ ವರ್ತಿಸಿ ಆಕೆಗೆ ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಆರೋಪಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ( ವಿಶೇಷ) ನ್ಯಾಯಾಲಯ18 ವರ್ಷ 1 ತಿಂಗಳ ಸಜೆ ಪ್ರಕಟಿಸಿದೆ.ಸುಶಾಂತ್ ಯಾನೇ ಶಾನ್ (31) ಎಂಬಾತ ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ. ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು ಅಸಭ್ಯ ವಾಗಿ ವರ್ತಿಸಿ ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಬಳಿಕ ತಾನೂ ಕುತ್ತಿಗೆ ಹಾಗೂ ಕೈಗೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.2019 ರ ಜೂ.28ರಂದು ಘಟನೆ‌ ನಡೆದಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇಬ್ಬರೂ ಚೇತರಿಕೆ ಕಂಡಿದ್ದರು. ಪ್ರಕರಣದಲ್ಲಿ ಅಭಿಯೋಜನೆಯ ಪರವಾಗಿ ಒಟ್ಟು 21 ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿತ್ತು. ಸುಶಾಂತ್ ಮೇಲೆ‌ ಹೊರಿಸಲಾದ ಎಲ್ಲ ಶಿಕ್ಷಾರ್ಹ ಕಲಂಗೆ ಅಪರಾಧಿ ಎಂದು ನ್ಯಾಯಾಧೀಶರಾದ ಪ್ರೀತಿ ಕೆ.ಪಿ. ಅವರು ತೀರ್ಪು ಪ್ರಕಟಿಸಿದ್ದಾರೆ. ದಂಡ ರೂಪದಲ್ಲಿ ವಸೂಲಾಗುವ 2 ಲಕ್ಷ ರೂ‌. ಮೊತ್ತವನ್ನು ಸಂತ್ರಸ್ತೆಗೆ ನೀಡುವಂತೆ ಆದೇಶಿಸಲಾಗಿದೆ.ಸಂತ್ರಸ್ತೆ ಪರ ಸರಕಾರಿ ಅಭಿಯೋಜಕಿ ಜ್ಯೋತಿ‌ ಪ್ರಮೋದ ನಾಯಕ ಅವರು ವಾದ ಮಂಡನೆ ಮಾಡಿದ್ದಾರೆ.

ಉಡುಪಿಗೆ ಹೋಗಿ ಬರುವುದಾಗಿ ಹೇಳಿ ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ

Posted by Vidyamaana on 2023-10-13 14:50:42 |

Share: | | | | |


ಉಡುಪಿಗೆ ಹೋಗಿ ಬರುವುದಾಗಿ ಹೇಳಿ ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ

ಶಿರ್ವ: ಉಡುಪಿಗೆ ಹೋಗಿ ಬರುವುದಾಗಿ ತಿಳಿಸಿ ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದ ಯವತಿಯ ಶವ ಶಿರ್ವ ಪೊಲೀಸ್‌ ಠಾಣಾ ವ್ಯಾಪ್ತಿಯ ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ಸೇತುವೆಯ ಬಳಿ ಪಾಪನಾಶಿನಿ ನದಿಯ ಗುಂಡಿಯಲ್ಲಿ ಆ.13ರ ಶುಕ್ರವಾರ ಪತ್ತೆಯಾಗಿದೆ.


ಮೂಡುಬೆಳ್ಳೆ ಕೊಂಗಿಬೈಲು ನಿವಾಸಿ ಸದಾಶಿವ ಪೂಜಾರಿ ಅವರ ಪುತ್ರಿ ವಿನಿತಾ (22) ಅ. 9ರಂದು ಮಧ್ಯಾಹ್ನ 3 ಗಂಟೆಗೆ ತನ್ನ ಮನೆಯಿಂದ ಹೋದವರು ಕಾಣೆಯಾದ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಬಿ.ಕಾಂ. ಪದವೀಧರೆಯಾಗಿದ್ದ ಆಕೆ ಉಡುಪಿ ಎಂಜಿಎಂ ಕಾಲೇಜ್‌ ಬಳಿಯ ಎಲೆಕ್ಟ್ರಿಕಲ್‌ ಬೈಕ್‌ ಶೋರೂಂನಲ್ಲಿ ಸುಮಾರು 4 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದು, ವಾರದ ಹಿಂದೆ ಕೆಲಸಬಿಟ್ಟಿದ್ದರು. ಮಾನಸಿಕವಾಗಿ ನೊಂದಿದ್ದ ಈಕೆ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿರಬೇಕೆಂದು ಶಂಕಿಸಲಾಗಿದ್ದು, ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.


ಮಲ್ಪೆಯ ಮುಳುಗು ತಜ್ಞ ಈಶ್ವರ್‌ ಮಲ್ಪೆ ಕೊಳೆತ ಶವವನ್ನು ನದಿಯಿಂದ ಮೇಲಕ್ಕೆತ್ತಿದ್ದು, ಮರಣೋತ್ತರ ಶವ ಪರೀಕ್ಷೆ ನಡೆಸಲು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಲಕ್ಷದ್ವೀಪದಿಂದ ಮಂಗಳೂರಿಗೆ ಬಂತು ಹೈಸ್ಪೀಡ್ ಪ್ಯಾಸೆಂಜರ್ ಹಡಗು: ಟಿಕೆಟ್ ದರ ಕೇಳಿದ್ರೆ ಅಚ್ಚರಿ ಪಡ್ತೀರಾ

Posted by Vidyamaana on 2024-05-03 21:42:15 |

Share: | | | | |


ಲಕ್ಷದ್ವೀಪದಿಂದ ಮಂಗಳೂರಿಗೆ ಬಂತು ಹೈಸ್ಪೀಡ್ ಪ್ಯಾಸೆಂಜರ್ ಹಡಗು: ಟಿಕೆಟ್ ದರ ಕೇಳಿದ್ರೆ ಅಚ್ಚರಿ ಪಡ್ತೀರಾ

ಕೋವಿಡ್ 19 ಸಾಂಕ್ರಾಮಿಕ ರೋಗದ ನಂತರ ಸ್ಥಗಿತಗೊಂಡಿದ್ದ ಮಂಗಳೂರಿನಿಂದ ಲಕ್ಷದ್ವೀಪ ಪ್ರಯಾಣಿಕ ಹಡಗು ಪುನರಾರಂಭಗೊಂಡಿದೆ. ಇದರ ಅಂಗವಾಗಿ, ಲಕ್ಷದ್ವೀಪದಿಂದ ಮಂಗಳೂರಿನ ಹಳೆ ಬಂದರಿಗೆ ಮೊದಲ ಹೈಸ್ಪೀಡ್ ಪ್ರಯಾಣಿಕ ಹಡಗು ಎಂಎಸ್‌ವಿ ಪ್ಯಾರಾಲಿ ಮೇ 2ರಂದು ಗುರುವಾರ ಆಗಮಿಸಿದೆ.ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಯಾಣಿಕ ಹಡಗು ಸಂಚಾರ ಸ್ಥಗಿತಗೊಂಡಿತ್ತು. ಸೇವೆಯನ್ನು ಪುನರಾರಂಭಿಸುವ ಭರವಸೆ ಪ್ರವಾಸಿಗರಲ್ಲಿತ್ತು.


ಲಕ್ಷದ್ವೀಪದಿಂದ ಹಳೆ ಬಂದರಿಗೆ 150 ಪ್ರಯಾಣಿಕರು, 8 ಕಾರ್ಮಿಕರು ಮತ್ತು 3 ಸಿಬ್ಬಂದಿ ಪ್ರಯಾಣಿಕ ಹಡಗಿನಲ್ಲಿ ಬಂದರು. ಮಾಜಿ ಶಾಸಕ ಜೆ.ಆರ್.ಲೋಬೊ ಬಂದರಿನಲ್ಲಿ ಪ್ರಯಾಣಿಕರನ್ನು ಸ್ವಾಗತಿಸಿದರು.

ಈ ಹಡಗು ಶನಿವಾರ ಲಕ್ಷದ್ವೀಪಕ್ಕೆ ಮರಳಲಿದೆ. ಈ ಮೊದಲು ಲಕ್ಷದ್ವೀಪದಿಂದ ಹಳೆ ಬಂದರಿಗೆ ಹಡಗಿನ ಪ್ರಯಾಣಕ್ಕೆ 13 ಗಂಟೆ ಸಮಯ ತೆಗೆದುಕೊಳ್ಳುತ್ತಿತ್ತು ಆದರೆ ಈಗ ಹೈ-ಸ್ಪೀಡ್ ಹಡಗು ಕೇವಲ 7 ಗಂಟೆ ತೆಗೆದುಕೊಳ್ಳುತ್ತದೆ. ಪ್ರಯಾಣದ ದರ 450 ರೂ. ಇದೆ.

ಬಂಟ್ವಾಳ: ಓಮ್ನಿ-ಸ್ವಿಫ್ಟ್ ಕಾರು ನಡುವೆ ಅಪಘಾತ: ಹಲವರಿಗೆ ಗಂಭೀರ ಗಾಯ

Posted by Vidyamaana on 2023-07-09 03:49:17 |

Share: | | | | |


ಬಂಟ್ವಾಳ: ಓಮ್ನಿ-ಸ್ವಿಫ್ಟ್ ಕಾರು ನಡುವೆ ಅಪಘಾತ: ಹಲವರಿಗೆ ಗಂಭೀರ ಗಾಯ

ಬಂಟ್ವಾಳ: ಚರ್ಚ್ ಗೆ ಪೂಜೆಗೆಂದು ಬರುವ ಓಮ್ನಿ ವಾಹನವೊಂದಕ್ಕೆ ಹಿಂಬದಿಯಿಂದ ಬಂದ ಸ್ವಿಫ್ಟ್ ಕಾರೊಂದು ಡಿಕ್ಕಿಯಾಗಿ ಓಮ್ನಿ ಕಾರು ಪಲ್ಟಿಯಾಗಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಜುಲೈ 9 ರಂದು ಬೆಳಿಗ್ಗೆ ಬಿ.ಸಿ.ರೋಡು-ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಪರ್ಲ ಚರ್ಚ್ ಸಮೀಪ ನಡೆದಿದೆಓಮ್ನಿ ಕಾರು ಚಾಲಕ ರಾಯಿಸನ್ ಹಾಗೂ ಜೊತೆಯಲ್ಲಿ ಮಕ್ಕಳು ಸಹಿತ ಮೂರು ಜನ ಹಾಗೂ ಸ್ವಿಫ್ಟ್ ಕಾರು ಚಾಲಕ ಆದಿಲ್ ಎಂಬವರಿಗೂ ಗಾಯವಾಗಿದೆ.


ಎರಡು ಕಾರುಗಳು ವಗ್ಗದಿಂದ ಬರುತ್ತಿದ್ದು, ಪರ್ಲ ಚರ್ಚ್ ಬಳಿಗೆ ಬರುತ್ತಿದ್ದಂತೆ ಓಮ್ನಿ ಕಾರು ಚರ್ಚ್ ಗೆ ಹೋಗುವ ಉದ್ದೇಶದಿಂದ ಕಾರನ್ನು ತಿರುಗಿಸುವ ವೇಳೆ ವೇಗವಾಗಿ ಬಂದ ಸ್ವಿಫ್ಟ್ ಕಾರು ಹಿಂಬದಿಯಿಂದ ಒಮ್ನಿ ಕಾರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಓಮ್ನಿ ಕಾರನ್ನು ಸುಮಾರು ದೂರು ದೂಡಿಕೊಂಡು ಹೋಗಿದ್ದಲ್ಲದೆ ಕಾರು ಪಲ್ಟಿಯಾಗಿದೆ. ಕಾರಿನೊಳಗಿದ್ದ ಪ್ರಯಾಣಿಕರನ್ನು ಹಿಂಬದಿಯ ಗಾಜು ಒಡೆದು ಹೊರಕ್ಕೆ ತೆಗೆಯಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಪೋಲೀಸರು ಭೇಟಿ ನೀಡಿದ್ದಾರೆ.



Leave a Comment: