ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ದಿಯಾ

ಸುದ್ದಿಗಳು News

Posted by vidyamaana on 2024-07-08 14:36:42 |

Share: | | | | |


ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ದಿಯಾ

ಬೆಂಗಳೂರು : ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ದಿಯಾ ಮಂಡೋಲ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.ದಿಯಾ ಮಂಡೋಲ್ ಪಶ್ಚಿಮ ಬಂಗಾಳ‌ ಮೂಲದವಳಾಗಿದ್ದು, ಮದರ್ ಥೆರೆಸಾ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದಳು.

ಮೂರು ದಿನಗಳ ಹಿಂದೆ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ದಿಯಾ ಕೌಟುಂಬಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಾಸ್ಟೆಲ್​​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹಪಾಠಿಗಳು ರೂಮಿಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಾಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

 Share: | | | | |


ರಾಜಶೇಖರ್ ಕೋಟ್ಯಾನ್ ವಿರುದ್ಧ ವಂಚನೆ ಆರೋಪ

Posted by Vidyamaana on 2023-09-29 15:19:39 |

Share: | | | | |


ರಾಜಶೇಖರ್ ಕೋಟ್ಯಾನ್ ವಿರುದ್ಧ ವಂಚನೆ ಆರೋಪ

ಪುತ್ತೂರು : ರಾಜಶೇಖರ್ ಕೋಟ್ಯಾನ್ ಎಂಬವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಂಚನೆ ಆರೋಪಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಪುತ್ತಿಲ ಪರಿವಾರ ಸ್ಪಷ್ಟೀಕರಣ ನೀಡಿದೆ.


2023ರ ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಒತ್ತಾಯದಂತೆ ಪಕ್ಷೇತರರಾಗಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರು ಸ್ಪರ್ಧಿಸಿದರು.


ಚುನಾವಣೆಯ ಸಂದರ್ಭ ಕೇವಲ 20 ದಿನದಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ತಾಲೂಕು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಕಾರ್ಯಕರ್ತರು ದುಡಿದಿರುವವರಲ್ಲಿ ನೇರಳಕಟ್ಟೆಯ ರಾಜಶೇಖರ್ ಕೋಟ್ಯಾನ್ ಕೂಡ ಓರ್ವರು.


ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಜಶೇಖರ್ ಕೋಟ್ಯಾನ್ ವಿರುದ್ಧ ಕೆಲವು ಆರೋಪಗಳು ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ವಿಷಯ ಕರ್ನಾಟಕದ ಹಗರಿಬೊಮ್ಮನಹಳ್ಳಿಯ ಕ್ಷೇತ್ರದ ರಾಷ್ಟ್ರೀಯ ಪಕ್ಷದ ಟಿಕೇಟ್ ವಿಷಯದಲ್ಲಿ ನಾಯಕರ ನಡುವೆ ಚುನಾವಣಾ ಪೂರ್ವ ವ್ಯವಹಾರವಾಗಿದ್ದು, ಆ ಆರೋಪದಲ್ಲಿ ಪುತ್ತಿಲ ಪರಿವಾರದ ಹೆಸರು ಪ್ರಸ್ತಾಪವಾಗಿರುವುದರಿಂದ ಸ್ಪಷ್ಟನೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಬಂದ ದೂರಿನ ಪ್ರತಿಯಲ್ಲಿಯೂ ಪುತ್ತಿಲ ಪರಿವಾರದ ಬಗ್ಗೆ ಉಲ್ಲೇಖವಿಲ್ಲ. ಅವರ ವೈಯಕ್ತಿಕ ವ್ಯವಹಾರಕ್ಕೂ ನಮ್ಮ ಪುತ್ತಿಲ ಪರಿವಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪುತ್ತಿಲ ಪರಿವಾರ ತಿಳಿಸಿದೆ.

ಮುಳಿಯದಲ್ಲಿ ನಡೆಯುತ್ತಿದೆ ಡೈಮಂಡ್ ಫೆಸ್ಟ್

Posted by Vidyamaana on 2023-09-22 08:43:11 |

Share: | | | | |


ಮುಳಿಯದಲ್ಲಿ ನಡೆಯುತ್ತಿದೆ ಡೈಮಂಡ್ ಫೆಸ್ಟ್

ಪುತ್ತೂರು :"ಡೈಮಂಡ್ ಫೆಸ್ಟ್” ಸೆ.18ರಂದು ಆರಂಭಗೊಂಡಿತು. ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕ ಅಶ್ವಿನ್ ಎಲ್. ಶೆಟ್ಟಿ ವಜ್ರಾಭರಣಗಳನ್ನು ಬಿಡುಗಡೆಗೊಳಿಸಿ ಫೆಸ್ಟ್‌ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮುಳಿಯ ಜ್ಯುವೆಲ್ಸ್ ನಲ್ಲಿ ವಜ್ರಾಭರಣಗಳ ವಿಶೇಷ ಮಳಿಗೆ ಆರಂಭಗೊಂಡಿದೆ. ಮಹಿಳೆಯರಿಗೆ ಅಚ್ಚುಮೆಚ್ಚಿನ ವಜ್ರದ ಆಭರಣಗಳನ್ನು ಖರೀದಿಗೆ ಮುಳಿಯ ಸಂಸ್ಥೆ ಅವಕಾಶ ಒದಗಿಸಿದೆ. ರಿಯಾಯಿತಿ ದರದಲ್ಲಿ ವಜ್ರಗಳ ಆಭರಣ ಖರೀದಿಸಬಹುದು. ವೇದಾಂತ್ ಮತ್ತು ಕಿಸ್ನ ಎಂಬ ಎರಡು ವಿಧದ ಆಭರಣಗಳು ಫೆಸ್ಟ್‌ನಲ್ಲಿದೆ. ಗ್ರಾಹಕರು ಈ ಫೆಸ್ಟ್‌ನೊಂದಿಗೆ ಪಾಲ್ಗೊಳ್ಳಿ ಎಂದರು.ಮುಳಿಯ ಸಂಸ್ಥೆಯ ಮುಖ್ಯ ಆಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ ಮಾತನಾಡಿ ವಜ್ರಾದಪಿ ಕಠೋರಾನಿ ಎಂಬ ಮಾತಿನಂತೆ ವಜ್ರ ಕಾಠಿಣ್ಯತೆಯನ್ನು ಹೊಂದಿದ ವಸ್ತು. ವಜ್ರಾಭರಣ ಧರಿಸಿದ ಮಹಿಳೆ ವಜ್ರದ ಮೌಲ್ಯವನ್ನು ತನ್ನಲ್ಲಿ ಪ್ರತಿಬಿಂಬಿಸುತ್ತಾಳೆ. ಮಿಷನ್ ತಂತ್ರಜ್ಞಾನದಲ್ಲಿಯೂ ವಜ್ರವನ್ನು ಬಳಸಲಾಗುತ್ತದೆ. ಆಭರಣ ಚಿನ್ನ, ವಜ್ರಗಳ ಆಭರಣ ಖರೀದಿಗೆ ಪ್ರತೀ ಸಮಯವೂ ಸಕಾಲವಾಗಿದೆ. ವಜ್ರವನ್ನು ಯಾರೂ ಕೂಡ ಖರೀದಿಸಬಹುದು ಎಂದು ಹೇಳಿದರು.ಮುಳಿಯ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಪ್ರಾಸ್ತಾವಿಕ ಮಾತನಾಡಿ ಕಳೆದ ಕೆಲವು ವರುಷಗಳಿಂದ ಮುಳಿಯ ಡೈಮಂಡ್ ಫೆಸ್ಟ್ ಆಯೋಜಿಸಲಾಗುತ್ತಿದೆ. ಜನಸಾಮಾನ್ಯರಿಗೆ ಕೈಗೆಟಕುವ ಹಾಗೆ ಫೆಸ್ಟ್ ಮಾಡಲಾಗಿದೆ. ಇದು ಕೈಗೆಟುಕುವ ವೈಭವವಾಗಿದೆ. ಇಲ್ಲಿ ಎಲ್ಲರಿಗೂ ವಜ್ರವನ್ನು ಖರೀದಿಸುವ ಅವಕಾಶಗಳಿವೆ. ಮಿತದರದಲ್ಲಿ ವಜ್ರಾಭರಣ ಪಡೆಯಬಹುದು. ವಜ್ರದ ಆಭರಣಕ್ಕೆ ಕೂಡ ಮಾರುಕಟ್ಟೆ ದರದ ಪ್ರಕಾರ ವಿನಿಮಯ ಆಫರ್ ನೀಡಲಾಗುತ್ತದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದರು.

ಪ್ರಥಮ ಖರೀದಿ:

ಡೈಮಂಡ್ ಫೆಸ್ಟ್‌ನಲ್ಲಿ ಆರಂಭದ ದಿನವೇ ಗ್ರಾಹಕರಾದ ಗಣೇಶ್ ಮತ್ತು ಸವಿತಾ ಕೇದಗಡಿ ದಂಪತಿ ವಜ್ರಾಭರಣ ಖರೀದಿ ಮಾಡಿದರು. ಈ ಮೂಲಕ ಈ ಫೆಸ್ಟ್‌ನ ಪ್ರಥಮ ಖರೀದಿದಾರರಾದರು.

ಮುಳಿಯ ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಕೃಷ್ಣನಾರಾಯಣ ಉಪಸ್ಥಿತರಿದ್ದರು. ಸಿಬಂದಿ ಸಂದೇಶ್ ಪ್ರಾರ್ಥಿಸಿದರು. ಶೋರೂಮ್ ಮ್ಯಾನೇಜರ್ ನಾಮದೇವ ಮಲ್ಯ ಸ್ವಾಗತಿಸಿದರು. ಫ್ಲೋರ್ ಮೆನೇಜರ್ ಪ್ರವಿಣ ಕಾರ್ಯಕ್ರಮ ನಿರೂಪಿಸಿದರು. ಸ್ಟೋರ್ ಮ್ಯಾನೇಜರ್ ಯತೀಶ್ ವಂದಿಸಿದರು.

ಪುಣಚ: ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

Posted by Vidyamaana on 2024-04-14 16:27:29 |

Share: | | | | |


ಪುಣಚ: ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಕೊಟ್ಟ ಐದು ಗ್ಯಾರಂಟಿ ಭರವಸೆಯನ್ನು ಈಡೇರಿಸಿದ್ದೇವೆ ,ಕೊಟ್ಟ ಮಾತನ್ನು ಉಳಿಸಿಕೊಂಡ ನಾವು ಈ ಬಾರಿ ವೋಟು ಕೇಳುವಾಗ ಜನರ ಮುಂದೆ ಹೇಳುತ್ತಿದ್ದೇವೆ ಆದರೆ ಬಿಜೆಪಿಯವರಿಗೆ ಹೇಳಿಕೊಳ್ಳಲು ಏನಿದೆ ಎಂದು ಶಾಸಕರಾದ ಅಶೋಕ್ ರೈ ಯವರು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಅವರು ಪುಣಚಾ ದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಗ್ಯಾರಂಟಿಯ ಬಗ್ಗೆ ಅಪಹಾಸ್ಯ‌ಮಾಡುತ್ತಿದ್ದ ಬಿಜೆಪಿಯವರು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಹೇಳುತ್ತಿದ್ದರು ಆದರೆ ಗ್ಯಾರಂಟಿ ಪಡೆದುಕೊಳ್ಳಲು ಬಿಜೆಪಿಯವರು ಮೊದಲ ಸಾಲಿನಲ್ಲಿದ್ದರು ಎಂದು ವ್ಯಂಗ್ಯವಾಡಿದರು.

ಕಳೆದ ಏಳು ತಿಂಗಳಿಂದ ಕರ್ನಾಟಕ ಪ್ರತೀ‌ಮನೆಯಲ್ಲಿ ನೆಮ್ಮದಿಯ ವಾತಾವರಣ ಇದೆ, ಹಸಿವು ಮುಕ್ತ ರಾಜ್ಯವಾಗಿ ನಮ್ಮ‌ಕರ್ನಾಟಕ ಮುಂದೆ ಸಾಗುತ್ತಿದೆ. ಕಾಂಗ್ರೆಸ್ ಎಂದಿಗೂ ಬಡವರ ಪರ ಎಂಬುದನ್ನು ಗ್ಯಾರಂಟಿ ಸಾಭೀತು ಮಾಡಿದೆ. ಅಭಿವೃದ್ದಿ ವಿಚಾರದಲ್ಲಿ ಬಿಜೆಪಿ ಯದ್ದು ಶೂನ್ಯ ಸಾಧನೆಯಾಗಿದೆ ಎಂದು ಹೇಳಿದರು.

ಜನರಲ್ಲಿ‌ಭಯ ಹುಟ್ಟಿಸುವುದು ಬಿಜೆಪಿ ಹುಟ್ಟು ಗುಣ

ಪ್ರತೀ ಚುನಾವಣೆ ಬಂದಾಗ ಮನೆ ಮನೆಗೆ ತೆರಳಿ ಜನರಲ್ಲಿ‌ಭಯ ಹುಟ್ಟಿಸುವ ಕೆಲಸವನ್ನು ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೆಣ್ಣು‌ಮಕ್ಕಳು ಮನೆಯಿಂದ ಹೊರಗೆ ಹೋಗುವಂತಿಲ್ಲ, ಗಂಡು‌ಮಕ್ಕಳನ್ನು ಜೈಲಿಗೆ ಹಾಕುತ್ತಾರೆ ಎಂದು ಅಫ್ರಚಾರ ಮಾಡುತ್ತಾರೆ. ಸಮಾಜದಲ್ಲಿ‌ಕೋಮು ವಿಷ ಬೀಜ ಬಿತ್ತಿ ಅಧಿಕಾರ ಪಡೆಯುವುದೇ ಬಿಜೆಪಿ ಅಜೆಂಡವಾಗಿದೆ ಎಂದು ಶಾಸಕರು ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಇಂದು ಹೆಣ್ಣು‌ಮಕ್ಕಳು ಸ್ವಾಭಿಮಾನದಿಂದ ಬದಕುವಂತಾಗಿದೆ ಇದನ್ನು ಬಿಜೆಪಿಯವರಿಗೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕರು ಹೇಳಿದರು.


ಬಹಿಷ್ಕಾರ ಕರೆ ನೀಡಿದ್ದಕ್ಕೆ ಫೆಲೆಸ್ತೀನ್ ಪರ ಗುಂಪಿನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಮೆಕ್ ಡೊನಾಲ್ಡ್ಸ್

Posted by Vidyamaana on 2023-12-31 04:39:55 |

Share: | | | | |


ಬಹಿಷ್ಕಾರ ಕರೆ ನೀಡಿದ್ದಕ್ಕೆ ಫೆಲೆಸ್ತೀನ್ ಪರ ಗುಂಪಿನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಮೆಕ್ ಡೊನಾಲ್ಡ್ಸ್

ಹೊಸದಿಲ್ಲಿ: ಸರಣಿ ಫಾಸ್ಟ್‌ಫುಡ್ ಮಳಿಗೆಗಳನ್ನು ಹೊಂದಿರುವ ಮೆಕ್‌ಡೊನಾಲ್ಡ್ಸ್ ಮಲೇಶಿಯಾವು ಇಸ್ರೇಲ್‌ ಅನ್ನು ಬೆಂಬಲಿಸುವ ಕಂಪನಿಗಳನ್ನು ಬಹಿಷ್ಕರಿಸುವಂತೆ ಕರೆಗಳನ್ನು ನೀಡಿದ್ದಕ್ಕಾಗಿ ಫೆಲೆಸ್ತೀನ್ ಪರ ಗುಂಪು ಬಿಡಿಎಸ್ ಮಲೇಶಿಯಾದಿಂದ ಆರು ಮಿಲಿಯನ್ ರಿಂಗಿಟ್ (1.3 ಮಿಲಿಯನ್ ಡಾಲರ್)ಗಳ ಮಾನನಷ್ಟ ಪರಿಹಾರವನ್ನು ಕೋರಿ ಮೊಕದ್ದಮೆಯನ್ನು ದಾಖಲಿಸಿದೆ.ಬಿಡಿಎಸ್ ಮಲೇಶಿಯಾ ವಿರುದ್ಧ ದಾವೆಯು ಕಾನೂನಿಗನುಗುಣವಾಗಿ ನಮ್ಮ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ" ಎಂದು ಮೆಕ್‌ಡೊನಾಲ್ಡ್ಸ್ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.


"ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ತಾನು ಬೆಂಬಲಿಸುವುದಿಲ್ಲ ಅಥವಾ ಕ್ಷಮಿಸುವುದೂ ಇಲ್ಲ ಎಂದು ಹೇಳಿರುವ ಮೆಕ್‌ಡೊನಾಲ್ಡ್ಸ್ ಮಲೇಶಿಯಾ, ಬಹಿಷ್ಕಾರ ಕರೆಯು ವೈಯಕ್ತಿಕ ನಿರ್ಧಾರವಾಗಿದೆ ಎನ್ನುವುದನ್ನು ನಾವು ತಿಳಿದುಕೊಂಡಿದ್ದೇವೆ ಮತ್ತು ಅದನ್ನು ಗೌರವಿಸುತ್ತೇವೆ, ಆದರೆ ಅದು ಸತ್ಯಾಂಶಗಳನ್ನು ಆಧರಿಸಿರಬೇಕು, ಸುಳ್ಳು ಆರೋಪಗಳನ್ನಲ್ಲ ಎಂದು ನಾವು ನಂಬಿದ್ದೇವೆ" ಎಂದು ತಿಳಿಸಿದೆ.


"ಈ ಮಾನನಷ್ಟ ಆರೋಪವನ್ನು ನಾವು ಸ್ಪಷ್ಟವಾಗಿ ನಿರಾಕರಿಸುತ್ತೇವೆ" ಎಂದು ಬಿಡಿಎಸ್ ಮಲೇಶಿಯಾ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದೆ.ಬಿಡಿಎಸ್ ಮಲೇಶಿಯಾ 2005ರಲ್ಲಿ ಫೆಲೆಸ್ತೀನಿ ನಾಗರಿಕ ಸಮಾಜ ಸಂಸ್ಥೆಗಳು ಆರಂಭಿಸಿದ್ದ ಜಾಗತಿಕ ಬಹಿಷ್ಕಾರ, ಹೂಡಿಕೆ ಹಿಂದೆಗೆತ ಮತ್ತು ನಿರ್ಬಂಧಗಳ ಆಂದೋಲನದ ಭಾಗವಾಗಿದೆ.


ಆಂದೋಲನವು ಇಸ್ರೇಲ್ ಫೆಲೆಸ್ತೀನಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿಗಾಗಿ ಅದರ ವಿರುದ್ಧ ರಾಜಕೀಯ ಮತ್ತು ಆರ್ಥಿಕ ಕ್ರಮಗಳನ್ನು ಪ್ರತಿಪಾದಿಸುತ್ತದೆ.


ಗಾಝಾದಲ್ಲಿ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಗೆ ಪ್ರತಿಕ್ರಿಯೆಯಾಗಿ ಬಿಡಿಎಸ್ ಮಲೇಶಿಯಾ ಮೆಕ್‌ಡೊನಾಲ್ಡ್ಸ್, ಕೆಎಫ್‌ಸಿ ಮತ್ತು ಝರಾ ಸೇರಿದಂತೆ ಪಾಶ್ಚಾತ್ಯ ಬ್ರ್ಯಾಂಡ್‌ಗಳನ್ನು ಬಹಿಷ್ಕರಿಸುವಂತೆ ಮಲೇಶಿಯಾದ ಜನರಿಗೆ ಕರೆಗಳನ್ನು ತೀವ್ರಗೊಳಿಸಿದೆ. ಈ ಕಂಪನಿಗಳು ಫೆಲೆಸ್ತೀನಿಗಳ ಮೇಲೆ ಇಸ್ರೇಲಿ ದೌರ್ಜನ್ಯಗಳಲ್ಲಿ ಶಾಮೀಲಾಗಿವೆ ಎಂದು ಅದು ಆರೋಪಿಸಿದೆ.

ವೈರಲ್ ವೀಡಿಯೋ: ಬಸ್ಸಿನಲ್ಲಿ ಬೀಡಿ ಕಟ್ಟುತ್ತಾ ಉಚಿತ ಪ್ರಯಾಣ ಮಾಡಿದ ಮಹಿಳೆಯರು

Posted by Vidyamaana on 2024-01-23 16:53:36 |

Share: | | | | |


ವೈರಲ್ ವೀಡಿಯೋ: ಬಸ್ಸಿನಲ್ಲಿ ಬೀಡಿ ಕಟ್ಟುತ್ತಾ ಉಚಿತ ಪ್ರಯಾಣ ಮಾಡಿದ ಮಹಿಳೆಯರು

ಹೈದರಾಬಾದ್, ಜನವರಿ 23: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದೆ. ಆದರೆ ಮಹಿಳೆಯರು ಈ ಸೌಲಭ್ಯವನ್ನು ಅತಿಯಾಗಿ ಬಳಸಿಕೊಂಡು ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ. ಉಚಿತ ಪ್ರಯಾಣದ ವೇಳೆ ಹಲವು ಬಾರಿ ಬಸ್ಸುಗಳಲ್ಲಿ ಪರಸ್ಪರ ಥಳಿಸಿಕೊಂಡಿರುವ ನಿದರ್ಶನಗಳೂ ಇವೆ. ಹೀಗೆ ಸುದ್ದಿಯಾಗಿದ್ದ TSRTC ಉಚಿತ ಬಸ್ ಪ್ರಯಾಣ ಇದೀಗ ಮಹಿಳೆಯರಿಬ್ಬರು ಮಾಡಿರುವ ಕೆಲಸದಿಂದ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.


ವಿಡಿಯೋ ನೋಡಲು ಕ್ಲಿಕ್ ಮಾಡಿ 

ವೈರಲ್ ವೀಡಿಯೋ: ಬಸ್ಸಿನಲ್ಲಿ ಬೀಡಿ ಕಟ್ಟುತ್ತಾ ಉಚಿತ ಪ್ರಯಾಣ ಮಾಡಿದ ಮಹಿಳೆಯರು

ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಸುಮ್ಮನೆ ಕುಳಿತುಕೊಳ್ಳುವುದು ಏಕೆಂದು ತಮ್ಮ ಕೈಲಾದ ಕೆಲಸವನ್ನು ಸಾಂಗೋಪಾಂಗವಾಗಿ ಮಾಡಿದ್ದಾರೆ. ಘಟನೆಯ ವಿಡಿಯೋ ತೆಗೆದ ಯುವಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ. ಘಟನೆ ಯಾವ ಡಿಪೋದಲ್ಲಿ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.


ಈ ವೀಡಿಯೊವನ್ನು ಪೋಸ್ಟ್ ಮಾಡುವ ಮೊದಲು ಹೇ ರೇವಂತ್ ರೆಡ್ಡಿ, ಹೇ ಉತ್ತಮ್ ಕುಮಾರ್ ರೆಡ್ಡಿ, ಯೇ ಕ್ಯಾ ಹುವಾ! ಮನೆಯಲ್ಲಿ ಕುಳಿತು ಒಬ್ಬರೇ ಬೀಡಿ ಕಟ್ಟಿದರೆ ಬೇಜಾರಾಗುತ್ತದೆ ಎಂದು ಬಸ್ ಗಳಲ್ಲೂ ಹೀಗೆ ಕಾಯಕದಲ್ಲಿ ನಿರತರಾಗಿದ್ದಾರೆ ನೋಡಿ ಆನಂದಿಸಿ ಎಂದಿದ್ದಾರೆ.ವಿಡಿಯೋ ಹಾಕಿದವರ ವಿರುದ್ಧ ಕೆಲವರು ಟೀಕೆಯನ್ನೂ ಮಾಡಿದ್ದಾರೆ. ಹಾಯ್ ಬಿಚ್ಚಗಾಡು! ಅವರಿಗೆ ಸೀಟು ಸಿಕ್ಕರೆ ಉಚಿತ ಬಸ್ ಯೋಜನೆ ಯಶಸ್ವಿಯಾಗಿದೆ ಎಂದರ್ಥ. ಅವರು ಬೇರೆ ಏನನ್ನೂ ಮಾಡಲು ಸಾಧ್ಯವಿಲ್ಲ. ಅಷ್ಟಕ್ಕೂ ಅವರು ಏನನ್ನಾದರೂ ಮಾಡಿಕೊಳ್ಳಲಿ, ನಿನಗೇನು?ಇಷ್ಟು ಚೀಪಾಗಿ ಅವರ ಅನುಮತಿಯಿಲ್ಲದೆ ಆ ಮಹಿಳೆಯರ ವೀಡಿಯೊಗಳನ್ನು ತೆಗೆಯುವುದು ಅಪರಾಧವಲ್ಲವೆ ಎಂದೂ ಪ್ರಶ್ನಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.


ಸದ್ಯಕ್ಕೆ ಸರ್ಕಾರದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಉಚಿತ ಬಸ್‌ಗಳಲ್ಲಿ ಸಾಕಷ್ಟು ಅಹಿತಕರ ಘಟನೆಗಳು ಮತ್ತು ಆಘಾತಕಾರಿ ಘಟನೆಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಏನೆಲ್ಲಾ ಬೆಳವಣಿಗೆಗಳು ಸೃಷ್ಟಿಯಾಗುತ್ತವೋ ಎಂದು ಜನ ಮಾತನಾಡುತ್ತಿದ್ದಾರೆ.

ಮನೆಗೆ ಕರೆಸಿಕೊಂಡು ಪ್ರಿಯತಮನ ಮ್ಯಾಟರ್ ಕಟ್ ಮಾಡಿದ ಪ್ರಿಯತಮೆ..

Posted by Vidyamaana on 2024-03-06 13:48:39 |

Share: | | | | |


ಮನೆಗೆ ಕರೆಸಿಕೊಂಡು ಪ್ರಿಯತಮನ ಮ್ಯಾಟರ್ ಕಟ್ ಮಾಡಿದ ಪ್ರಿಯತಮೆ..

ಪಾಟ್ನಾ: ಯುವತಿಯೊಬ್ಬಳು ಪ್ರಿಯಕರನನ್ನು ಮನೆಗೆ ಕರೆದು ಆತನ ಖಾಸಗಿ ಅಂಗವನ್ನು ಕತ್ತರಿಸಿ ರಸ್ತೆಗೆ ಎಸೆದಿರುವ ಘಟನೆ ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ನಡೆದಿದೆ.


ಪ್ರಿಯತಮೆ ಪ್ರಿಯಕರ ಅನಿಲ್ ಗೊಂಡ್(25) ನನ್ನು ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದಾಳೆ. ಮನೆಗೆ ಬಂದ ಪ್ರಿಯಕರನ ಮೇಲೆ ಯುವತಿ ಹಲ್ಲೆ ನಡೆಸಿದ್ದು, ಆತನ ಖಾಸಗಿ ಅಂಗವನ್ನು ಕತ್ತರಿಸಿ ರಸ್ತೆಗೆ ಎಸೆದಿದ್ದಾಳೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಿಯಕರನನ್ನು ನೋಡಿ ಆತ ಸತ್ತು ಹೋಗಿದ್ದಾನೆ ಎಂದು ಭಾವಿಸಿ ಯುವತಿ ಅಲ್ಲಿಂದ ಪರಾರಿ ಆಗಿದ್ದಾಳೆ.

ಆದರೆ ತೀವ್ರವಾಗಿ ಗಾಯಗೊಂಡಿದ್ದ ಪ್ರಿಯಕರ ಅಲ್ಲಿಂದ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿ, ಬಳಿಕ ವಿಚಾರವನ್ನು ಕುಟುಂಬಸ್ಥರಿಗೆ ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ.

ಅನಿಲ್ ತನ್ನ ಗೆಳತಿಯ ಮನೆಗೆ ಕರೆದ ನಂತರ ದುಮ್ರಾನ್‌ನಲ್ಲಿರುವ ಮನೆಗೆ ಹೋಗಿದ್ದ. ಈ ವೇಳೆ ಈ ಕೃತ್ಯ ನಡೆದಿದೆ ಎಂದು ಸಹೋದರ ಪ್ರಮೋದ್ ಕುಮಾರ್ ಹೇಳಿದ್ದಾರೆ.ಸದ್ಯ ಅನಿಲ್‌ ಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಬಗ್ಗೆ ನಮಗೆ ಮಾಹಿತಿ ದೊರೆತ ತಕ್ಷಣ ನಾವು ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಕೃತ್ಯದ ಹಿಂದಿನ ಕಾರಣವೇನು ಎನ್ನುವುದನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಡುಮ್ರಾನ್ ಪೊಲೀಸ್ ಅಧಿಕಾರಿ ಅನಿಶಾ ರಾಣಾ ಹೇಳಿದ್ದಾರೆ.

ಅನಿಲ್‌ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ತಿಳಿಸಿದೆ.



Leave a Comment: