ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ದಿಯಾ

ಸುದ್ದಿಗಳು News

Posted by vidyamaana on 2024-07-08 14:36:42 |

Share: | | | | |


ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ದಿಯಾ

ಬೆಂಗಳೂರು : ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ದಿಯಾ ಮಂಡೋಲ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.ದಿಯಾ ಮಂಡೋಲ್ ಪಶ್ಚಿಮ ಬಂಗಾಳ‌ ಮೂಲದವಳಾಗಿದ್ದು, ಮದರ್ ಥೆರೆಸಾ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದಳು.

ಮೂರು ದಿನಗಳ ಹಿಂದೆ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ದಿಯಾ ಕೌಟುಂಬಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಾಸ್ಟೆಲ್​​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹಪಾಠಿಗಳು ರೂಮಿಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಾಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

 Share: | | | | |


ದಕ್ಷಿಣಕನ್ನಡ ಜಿಲ್ಲೆಗೆ ಸೇರಿದಂತೆ ರಾಜ್ಯ ಬಿಜೆಪಿಗೆ ನೂತನ ಜಿಲ್ಲಾಧ್ಯಕ್ಷರ ನೇಮಕ

Posted by Vidyamaana on 2024-01-15 04:50:45 |

Share: | | | | |


ದಕ್ಷಿಣಕನ್ನಡ ಜಿಲ್ಲೆಗೆ ಸೇರಿದಂತೆ ರಾಜ್ಯ ಬಿಜೆಪಿಗೆ ನೂತನ ಜಿಲ್ಲಾಧ್ಯಕ್ಷರ ನೇಮಕ

ಮಂಗಳೂರು, ಜ.15: ರಾಜ್ಯದಲ್ಲಿ ಪಕ್ಷದ 39 ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆದೇಶ ಮಾಡಿದ್ದಾರೆ. 


ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಸತೀಶ್ ಕುಂಪಲ, ಉಡುಪಿ ಜಿಲ್ಲೆಯ ಅಧ್ಯಕ್ಷರಾಗಿ ಕಿಶೋರ್ ಕುಂದಾಪುರ ಅವರನ್ನು ಆಯ್ಕೆ ಮಾಡಲಾಗಿದೆ.ಶಿವಮೊಗ್ಗ - ಟಿಡಿ ಮೇಘರಾಜ್, ಉತ್ತರ ಕನ್ನಡ - ಎನ್.ಎಸ್ ಹೆಗಡೆ, ಕೊಡಗು - ರವಿ ಕಾಳಪ್ಪ , ಹಾಸನ - ಸಿದ್ದೇಶ್ ನಾಗೇಂದ್ರ, ಬೆಂಗಳೂರು ದಕ್ಷಿಣ- ಸಿಕೆ ರಾಮಮೂರ್ತಿ ಹೀಗೆ ಎಲ್ಲ ಜಿಲ್ಲೆಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ

ಪ್ರೀತಿ ನಿರಾಕರಿಸಿದ ವಿದ್ಯಾರ್ಥಿನಿಯ ಕೊಲೆಗೈದು ರೈಲಿಗೆ ತಲೆಕೊಟ್ಟ ಶರತ್

Posted by Vidyamaana on 2024-03-05 21:27:17 |

Share: | | | | |


ಪ್ರೀತಿ ನಿರಾಕರಿಸಿದ  ವಿದ್ಯಾರ್ಥಿನಿಯ ಕೊಲೆಗೈದು ರೈಲಿಗೆ ತಲೆಕೊಟ್ಟ ಶರತ್

ಹಾಸನ : ಪ್ರೀತಿ ನಿರಾಕರಿಸಿದ ಶಾಲಾ ಬಾಲಕಿಯನ್ನು ಕೊಂದು ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೇ ಈ ಘಟನೆ ನಡೆದಿದೆ. ಅರಸೀಕೆರೆ ತಾಲೂಕಿನ ಬೆಳಗುಂಬ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಭೂಮಿಕಾ ಕೊಲೆಯಾದ ಬಾಲಕಿಯಾಗಿದ್ದು, ಶರತ್‌ (23) ಕೊಲೆ ಮಾಡಿದ ಆರೋಪಿಯಾಗಿದ್ದಾನೆ.ತನ್ನ ಪ್ರೀತಿಯನ್ನು ನಿರಾಕರಿಸಿದಳೆಂದು  ಭೂಮಿಕಾಳ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ ಶರತ್ ಬಳಿಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ವಿದ್ಯಾರ್ಥಿನಿ ಭೂಮಿಕಾ ಶಾಲೆ ಮುಗಿಸಿ ಮನೆಗೆ ಹೋಗುವಾಗ ತೋಟದಲ್ಲಿ ಆಕೆಯನ್ನು ಅಡ್ಡಗಟ್ಟಿದ ಶರತ್‌ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.


ಕೊಲೆ ಮಾಡಿದ ಬಳಿಕ ಅರಸೀಕೆರೆ ಸಮೀಪ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬಿಗ್ BREAKING NEWS: ಚುನಾವಣಾ ಆಯುಕ್ತ ಅರುಣ್ ಗೋಯಲ್ ರಾಜೀನಾಮೆ

Posted by Vidyamaana on 2024-03-09 21:11:55 |

Share: | | | | |


ಬಿಗ್ BREAKING NEWS: ಚುನಾವಣಾ ಆಯುಕ್ತ ಅರುಣ್ ಗೋಯಲ್ ರಾಜೀನಾಮೆ

ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳ ಮೊದಲು ಚುನಾವಣಾ ಆಯುಕ್ತ ಅರುಣ್ ಗೋಯೆಲ್ ರಾಜೀನಾಮೆ ನೀಡಿದರು ಮತ್ತು ಅಧ್ಯಕ್ಷ ದ್ರೌಪದಿ ಮುರ್ಮು ಅವರ ರಾಜೀನಾಮೆಯನ್ನು ಅಂಗೀಕರಿಸಿದರು. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆ, 2023 ರ ಸೆಕ್ಷನ್ 11 ರ ಷರತ್ತು (1) ಕ್ಕೆ ಅನುಸಾರವಾಗಿ, ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಅವರು ಸಲ್ಲಿಸಿದ ರಾಜೀನಾಮೆಯನ್ನು 2024 ರ ಮಾರ್ಚ್ 09 ರಿಂದ ಜಾರಿಗೆ ಬರುವಂತೆ ಸ್ವೀಕರಿಸಲು ರಾಷ್ಟ್ರಪತಿಗಳು ಸಂತೋಷಪಡುತ್ತಾರೆ" ಎಂದು ಶನಿವಾರ ಹೊರಡಿಸಿದ ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.ಗೋಯೆಲ್ ಅವರು ನವೆಂಬರ್ 21, 2022 ರಂದು ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು.


1985ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಅರುಣ್ ಗೋಯಲ್ ಈ ಹಿಂದೆ ಭಾರತ ಸರ್ಕಾರದ ಬೃಹತ್ ಕೈಗಾರಿಕಾ ಸಚಿವಾಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಮೇ.10 : ದರ್ಬೆಯಲ್ಲಿ ಪ್ರತಿಷ್ಠಿತ ವಸ್ತ್ರ ಮಳಿಗೆ ಎಂ. ಸಂಜೀವ ಶೆಟ್ಟಿ ಯ ನೂತನ ಮಳಿಗೆ ಶುಭಾರಂಭ

Posted by Vidyamaana on 2024-05-09 21:17:30 |

Share: | | | | |


ಮೇ.10 : ದರ್ಬೆಯಲ್ಲಿ ಪ್ರತಿಷ್ಠಿತ ವಸ್ತ್ರ ಮಳಿಗೆ ಎಂ. ಸಂಜೀವ ಶೆಟ್ಟಿ ಯ ನೂತನ ಮಳಿಗೆ ಶುಭಾರಂಭ

ಪುತ್ತೂರು: ಮದುವೆ ಜವಳಿಗೆಂದೇ ಪ್ರಸಿದ್ದಿ ಪಡೆದ ಎಂ.ಸಂಜೀವ ಶೆಟ್ಟಿ ಮಳಿಗೆಯ ನೂತನ ಶಾಖೆ ಪುತ್ತೂರಿನ ದರ್ಬೆ ವೃತ್ತದ ಬಳಿ ಮೇ 10ರಂದು ಶುಭಾರಂಭಗೊಳ್ಳಲಿದೆ.

8 ದಶಕಗಳ ವಸ್ತ್ರ ಪರಂಪರೆಯನ್ನು ಹೊಂದಿರುವ ಎಂ.ಸಂಜೀವ ಶೆಟ್ಟಿ ವಸ್ತ್ರವ್ಯಾಪಾರ ಮಳಿಗೆ, ಎಲ್ಲಾ ಪೀಳಿಗೆಯ ಗ್ರಾಹಕರ ಮನಗೆಲ್ಲುವಲ್ಲಿ ಸಫಲವಾಗಿದೆ. 1944ರಲ್ಲಿ ವಸ್ತ್ರೋದ್ಯಮಕ್ಕೆ ಕಾಲಿರಿಸಿದ ಈ ಸಂಸ್ಥೆ, ಇದೀಗ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಆಧುನಿಕ ಹಾಗೂ ಆಕರ್ಷಕ ವಿನ್ಯಾಸಗಳತ್ತ ಮುಖ ಮಾಡಿದೆ.

6ನೇ ಬಾರಿ ವಿಶ್ವಕಪ್ ಗೆ ಮುತ್ತಿಟ್ಟ ಆಸ್ಟ್ರೇಲಿಯ

Posted by Vidyamaana on 2023-11-19 21:31:00 |

Share: | | | | |


6ನೇ ಬಾರಿ ವಿಶ್ವಕಪ್ ಗೆ ಮುತ್ತಿಟ್ಟ ಆಸ್ಟ್ರೇಲಿಯ

ಅಹ್ಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಅಮೋಘ ನಿರ್ವಹಣೆ ನೀಡಿದ ಆಸ್ಟ್ರೇಲಿಯ ತಂಡ ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಸಾಮರ್ಥ್ಯಕ್ಕೆ ಸವಾಲೊಡ್ಡಿ ನಿಂತು ಆರನೇ ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಇದು ಭಾರತ ಎರಡನೇ ಬಾರಿ ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯದ ಎದುರು ಸೋಲಿಗೆ ಶರಣಾಗಿರುವುದು.



ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಅಮೋಘ ನಿರ್ವಹಣೆ ತೋರಿದ ಆಸೀಸ್ ಟಾಸ್ ಗೆದ್ದು ಭಾರತವನ್ನು 240 ರನ್ ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಭಾರತದ ಬೌಲರ್ ಗಳ ಮೇಲೆ ಇಟ್ಟಿದ್ದ ಭರವಸೆಯೂ ಹುಸಿಯಾಯಿತು. ಗುರಿ ಬೆನ್ನಟ್ಟಿದ್ದ ಆಸೀಸ್ ತನ್ನ ಸಾಮರ್ಥ್ಯ ಮೆರೆದು 43 ಓವರ್ ಗಳಲ್ಲಿ 4ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿ ವಿಶ್ವಕಪ್ ಮುಡಿಗೇರಿಸಿಕೊಂಡಿತು. 


ಆಸ್ಟ್ರೇಲಿಯದ ಆರಂಭಿಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅತ್ಯಮೋಘ ಶತಕ ಸಿಡಿಸಿದರು. ವಿಶ್ವಕಪ್ ಫೈನಲ್ ನಲ್ಲಿ ಶತಕ ಸಿಡಿಸಿದ ಏಳನೇ ಬ್ಯಾಟರ್ ಎನಿಸಿಕೊಂಡರು. ಅವರು 95 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಸ್ಮರಣೀಯ ಆಟವಾಡಿದ ಹೆಡ್, ಕಪ್ ಗೆಲ್ಲಲು ಕೇವಲ ಎರಡೇ ರನ್ ಬಾಕಿ ಇದ್ದಾಗ 137 ರನ್ ಗಳಿಸಿದ್ದ ವೇಳೆ ಸಿರಾಜ್ ಎಸೆದ ಚೆಂಡನ್ನು ಗಿಲ್ ಕೈಗಿತ್ತು ನಿರ್ಗಮಿಸಿದರು. 120 ಎಸೆತಗಳಲ್ಲಿ ಅದ್ಭುತ ಇನ್ನಿಂಗ್ಸ್ ಕಟ್ಟಿದ ಹೆಡ್ 15 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ಸಿಡಿಸಿದರು. ಲಬುಶೇನ್  ಔಟಾಗದೆ 58 ರನ್ ಗಳಿಸಿದರು.


ಭೋರ್ಗರೆಯುತ್ತಿರುವ ಅಹ್ಮದಾಬಾದ್‌ ಕ್ರೀಡಾಂಗಣವನ್ನು ನಿಶ್ಯಬ್ದಗೊಳಿಸುವುದೇ ನಮ್ಮ ಗುರಿ ಎಂದು ಆಸ್ಟ್ರೇಲಿಯ ತಂಡದ ನಾಯಕ ಪ್ಯಾಟ್‌ ಕಮಿನ್ಸ್ ಪಂದ್ಯಕ್ಕೂ ಮುನ್ನ ಹೇಳಿಕೆ ನೀಡಿದ್ದರು. ಅದನ್ನು ಆಸೀಸ್ ತಂಡ ನಿಜವಾಗಿಸಿದೆ. ಸತತ 10 ಗೆಲುವಿನೊಂದಿಗೆ ಕಪ್ ಎತ್ತುವ ವಿಶ್ವಾಸ ಹೊಂದಿದ್ದ ರೋಹಿತ್ ಬಳಗ ಗೆಲುವಿನ ಶಿಖರದಿಂದ ಜಾರಿತು. ಕ್ರೀಡಾಂಗಣದಲ್ಲಿ ಸೇರಿದ್ದ ಲಕ್ಷಾಂತರ ಭಾರತದ ಅಭಿಮಾನಿಗಳು ಮೌನಕ್ಕೆ ಶರಣಾಗಿ ಹೋದರು. ಹಲವರ ಕಣ್ಣಗಳಿಂದ ಧಾರಾಕಾರವಾಗಿ ನೀರು ಸುರಿಯಿತು.ಗುರಿ ಬೆನ್ನಟ್ಟಿದ ಆಸೀಸ್ ಆರಂಭದಿಂದಲೇ ಅಬ್ಬರಿಸುತ್ತಾ ಸಾಗಿತು. ಆದರೆ 7 ರನ್ ಗಳಿಸಿದ್ದ ಡೇವಿಡ್ ವಾರ್ನರ್ ಅವರು ಶಮಿ ಎಸೆದ ಚೆಂಡನ್ನು ಕೊಹ್ಲಿ ಕೈಗಿತ್ತು ನಿರ್ಗಮಿಸಿದರು. ಇದು ಆರಂಭಿಕ ಆಘಾತವಾಯಿತು. 15 ರನ್ ಗಳಿಸಿದ್ದ ಮಿಚೆಲ್ ಮಾರ್ಷ್ ಬುಮ್ರಾ ಎಸೆದ ಚೆಂಡನ್ನು ರಾಹುಲ್ ಕೈಗಿತ್ತು ನಿರ್ಗಮಿಸಿದರು.ಆ ಬಳಿಕ ಸ್ಮಿತ್‌ ಎಲ್ಬಿಡಬ್ಲ್ಯೂ ಮೂಲಕ ಔಟಾಗಿದ್ದು ವಿಶ್ವಕಪ್ ಫೈನಲ್ ನಂತಹ ಮಹತ್ವದ ಪಂದ್ಯದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ.ಆಸೀಸ್ ಅಮೋಘ ಗೆಲುವು ಸಾಧಿಸಿದ ಕಾರಣ ಆ ವಿಚಾರ ಇಲ್ಲೇ ಮರೆತುಹೋಗಲಿದೆ.



ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ವಿಶ್ವಕಪ್ ಹೀರೋ ಎನಿಸಿಕೊಂಡರು. ನಾಲ್ಕನೇ ವಿಕೆಟ್ ಗೆ ಹೆಡ್ ಅವರಿಗೆ ಸಾಥ್ ನೀಡಿ ಅದ್ಭುತ ಜತೆಯಾಟವಾಡಿದ ಮಾರ್ನಸ್ ಲಬುಶೇನ್ ಅವರು ಗೆಲುವನ್ನು ಖಚಿತ ಪಡಿಸಿದರು.


ಆರಂಭದಲ್ಲಿ ನಾಯಕ ರೋಹಿತ್ ಶರ್ಮ ಅವರು ಅಬ್ಬರಿಸುತ್ತಿದ್ದ ವೇಳೆ ಶುಭಮಂ ಗಿಲ್ ಅವರು ತಂಡ 4.2 ಓವರ್ ಗಳಲ್ಲಿ 30 ರನ್ ಗಳಿಸಿದ್ದ ವೇಳೆ ಔಟಾಗಿ ಆಘಾತ ಅನುಭವಿಸಿತು. 4 ರನ್ ಗೆ ಗಿಲ್ ನಿರ್ಗಮಿಸಿದರು. ಆ ಬಳಿಕ ಶರ್ಮ 47 ರನ್ ಗಳಿಸಿ ವಿಶ್ವಾಸ ಮೂಡಿಸಿದ್ದ ವೇಳೆ ಆಘಾತಕಾರಿಯಾಗಿ ಔಟಾದರು. 4 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದ್ದರು. ಮ್ಯಾಕ್ಸ್‌ವೆಲ್ ಎಸೆದ ಚೆಂಡನ್ನು ರೋಹಿತ್ ದೊಡ್ಡ ಹೊಡೆತಕ್ಕೆ ಮುಂದಾದರು ಈ ವೇಳೆ ಹೆಡ್ ಅದ್ಬುತ ಕ್ಯಾಚ್ ಹಿಡಿದರು.


ಅದ್ಬುತ ಫಾರ್ಮ್ ನಲ್ಲಿದ್ದ ಶ್ರೇಯಸ್ ಅಯ್ಯರ್ 4 ರನ್ ಗೆ ಔಟಾಗಿ ನಿರಾಶರಾದರು. ಆಬಳಿಕ ತಾಳ್ಮೆಯ ಆಟವಾಡಿದ ಕೊಹ್ಲಿ 63 ಎಸೆತಗಳಲ್ಲಿ 54 ರನ್ ಗಳಿಸಿದ್ದ ವೇಳೆ ದುರದೃಷ್ಟವೆಂಬಂತೆ ಔಟಾದರು. ಅವರು 4 ಬೌಂಡರಿಗಳನ್ನು ಬಾರಿಸಿದ್ದರು. ನಾಯಕ ಕಮ್ಮಿನ್ಸ್ ಎಸೆದ ಚೆಂಡು ಕೊಹ್ಲಿ ಅವರ ಬ್ಯಾಟ್ ಗೆ ತಗುಲಿ ವಿಕೆಟ್ ಗೆ ಅಪ್ಪಳಿಸಿತು.


ತಾಳ್ಮೆಯ ಆಟವಾಡಿದ ಕೆಎಲ್ ರಾಹುಲ್ 107 ಎಸೆತಗಳಲ್ಲಿ 66 ರನ್ ಗಳಿಸಿ ಭರವಸೆ ಮೂಡಿಸಿದರು. ಆದರೆ ಸ್ಟಾರ್ಕ್ ಅವರು ಎಸೆದ ಚೆಂಡು ಕೀಪರ್ ಜೋಶ್ ಇಂಗ್ಲಿಸ್ ಅವರ ಕೈ ಸೇರಿ ನಿರ್ಗಮಿಸಿದರು. ರವೀಂದ್ರ ಜಡೇಜಾ ಕೂಡ ದೊಡ್ಡ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ.22 ಎಸೆತಗಳಲ್ಲಿ 9 ರನ್ ಗಳಿಸಿ ಔಟಾದರು. ಶಮಿ 6 ರನ್ ಗಳಿಸಿ ಔಟಾದರು.


ಸೂರ್ಯಕುಮಾರ್ ಯಾದವ್ 28 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. ಬುಮ್ರಾ 1 ರನ್ ಗೆ ಔಟಾದರು. ಕೊನೆಯ ಎಸೆತದಲ್ಲಿ ಕುಲದೀಪ್ ಯಾದವ್ 10 ರನ್ ಗಳಿಸಿದ್ದ ವೇಳೆ ರನ್ ಔಟಾದರು. ಮತ್ತು ಸಿರಾಜ್ 8 ರನ್ ಗಳಿಸಿ ಔಟಾಗದೆ ಉಳಿದರು. ಆಸೀಸ್ ಬಿಗಿ ದಾಳಿಯ ನಡುವೆಯೂ 50 ಓವರ್ ಗಳಲ್ಲಿ 240 ರನ್ ಗಳಿಗೆ ಆಲೌಟಾಯಿತು.ಆಸೀಸ್ ಪರ ಬಿಗಿ ದಾಳಿ ಸಂಘಟಿಸಿದ ಮಿಚೆಲ್ ಸ್ಟಾರ್ಕ್3, ಜೋಶ್ ಹ್ಯಾಜಲ್ವುಡ್2 , ಗ್ಲೆನ್ ಮ್ಯಾಕ್ಸ್ವೆಲ್ 1, ಪ್ಯಾಟ್ ಕಮ್ಮಿನ್ಸ್2 , ಆಡಮ್ ಝಂಪಾ 1 ವಿಕೆಟ್ ಪಡೆದರು.

ಬೆಳ್ತಂಗಡಿ : ನೆರಿಯ ಮೂವರು ಬಿಜೆಪಿ ಪಕ್ಷದ ಸದಸ್ಯತ್ವದಿಂದ ಅಮಾನತು

Posted by Vidyamaana on 2023-10-04 07:53:37 |

Share: | | | | |


ಬೆಳ್ತಂಗಡಿ : ನೆರಿಯ ಮೂವರು ಬಿಜೆಪಿ ಪಕ್ಷದ ಸದಸ್ಯತ್ವದಿಂದ ಅಮಾನತು


ಬೆಳ್ತಂಗಡಿ : ಬಿಜೆಪಿ ಪಕ್ಷದ ಆದೇಶ ಉಲ್ಲಂಘಟನೆ - ಮೂವರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಿದ ಬಿಜೆಪಿ

ಬೆಳ್ತಂಗಡಿ : ನೆರಿಯ ಗ್ರಾಮ ಪಂಚಾಯತ್ ನ ದ್ವಿತೀಯ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ಆದೇಶವನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ನೆರಿಯ ಗ್ರಾಮ ಪಂಚಾಯತ್ ಸದಸ್ಯರುಗಳಾಗಿದ್ದು, ಪಕ್ಷದ ಜವಾಬ್ದಾರಿಯನ್ನು ಹೊಂದಿರುವ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಸಂತಿ ಕಡ್ಡಿಬಾಗಿಲು ಮನೆ( ನೆರಿಯ ಗ್ರಾಮ ಪಂಚಾಯತ್ ಹಾಲಿ ಅಧ್ಯಕ್ಷೆ) , ನೆರಿಯ ಗ್ರಾಮದ ಬೂತ್ ಸಮಿತಿ ಅಧ್ಯಕ್ಷರಾದ ಶ್ರೀಮತಿ ಕುಶಾಲ ಕಡ್ಡಿಬಾಗಿಲು ಮನೆ( ಹಾಲಿ ನೆರಿಯ ಗ್ರಾಮ ಪಂಚಾಯತ್ ಸದಸ್ಯೆ), ನೆರಿಯ ಗ್ರಾಮ ಬೂತ್ ಸಮಿತಿ ಅಧ್ಯಕ್ಷರಾದ ಸಚಿನ್ ಅಣಿಯೂರು ಕುಲೆನಾಡಿ ಮನೆ(ಹಾಲಿ ನೆರಿಯ ಗ್ರಾಮ ಪಂಚಾಯತ್ ಸದಸ್ಯ)  ಇವರನ್ನು ತಕ್ಷಣದಿಂದ ಅನ್ವಯವಾಗುವಂತೆ ಭಾರತೀಯ ಜನತಾ ಪಾರ್ಟಿಯ ಎಲ್ಲಾ ಹುದ್ದೆ ಹಾಗೂ ಜವಾಬ್ದಾರಿಗಳಿಂದ ಮುಕ್ತಗೊಳಿಸಿರುವುದಾಗಿ ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಪ್ರಕಟಣೆಯಲ್ಲಿ ತಿಳಿಸಿದೆ.

Recent News


Leave a Comment: