ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಅಧಿಕಾರ ಸ್ವೀಕಾರ

ಸುದ್ದಿಗಳು News

Posted by vidyamaana on 2024-07-05 10:22:02 |

Share: | | | | |


ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಅಧಿಕಾರ ಸ್ವೀಕಾರ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಇಂದು ಮಂಗಳೂರಿನ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರಿಷ್ಯಂತ್ ಬೆಂಗಳೂರು ವೈರ್ ಲೆಸ್ ವಿಭಾಗದ ಎಸ್ಪಿಯಾಗಿ ವರ್ಗಾವಣೆಯಾಗಿದ್ದರು.

2016 ರ ಕರ್ನಾಟಕ ಕೇಡರ್ ನ IPS ಅಧಿಕಾರಿ ಯತೀಶ್ ಎನ್ ಈ ಹಿಂದೆ ಮಂಡ್ಯ ಎಸ್ಪಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದರು. ಇನ್ನೂ ಹಲವಾರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 Share: | | | | |


ವಿಟ್ಲ: ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ; ಬಾಯಾರು ನಿವಾಸಿ ರಾಜೇಶ್ ಬಂಧನ

Posted by Vidyamaana on 2023-08-01 16:08:11 |

Share: | | | | |


ವಿಟ್ಲ: ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ; ಬಾಯಾರು ನಿವಾಸಿ  ರಾಜೇಶ್ ಬಂಧನ

ವಿಟ್ಲ: ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು  ವಿಟ್ಲ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.


ಕೇರಳ ಬಾಯಾರು ನಿವಾಸಿ ರಾಜ ಯಾನೆ ರಾಜೇಶ(26) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ನೊಂದ ಬಾಲಕಿ ಐದು ಮಂದಿಯ ಹೆಸರನ್ನು ದೂರಿನಲ್ಲಿ ತಿಳಿಸಿದ್ದು ಮೂರು ಮಂದಿಯನ್ನು ರವಿವಾರ ಬಂಧಿಸಿದ್ದು, ಓರ್ವನನ್ನು ಸೋಮವಾರ ಬಂಧಿಸಿದರೆ, ಇನ್ನೋರ್ವ ಆರೋಪಿಯನ್ನು ಮಂಗಳವಾರ ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಧಾರವಾಡ: ಪಕ್ಷೇತರ ಅಭ್ಯರ್ಥಿ ದಿಂಗಾಲೇಶ್ವರ ಸಾಮೀಜಿ ಘೋಷಿಸಿದ ಆಸ್ತಿ ಎಷ್ಟು?

Posted by Vidyamaana on 2024-04-18 20:45:03 |

Share: | | | | |


ಧಾರವಾಡ: ಪಕ್ಷೇತರ ಅಭ್ಯರ್ಥಿ ದಿಂಗಾಲೇಶ್ವರ ಸಾಮೀಜಿ ಘೋಷಿಸಿದ ಆಸ್ತಿ ಎಷ್ಟು?

ಧಾರವಾಢ: ಸಂಸದ ಪ್ರಹ್ಲಾದ್ ಜೋಷಿ ವಿರುದ್ಧ ಸಮರ ಸಾರಿ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಗದಗ ಜಿಲ್ಲೆಯ ಬಾಳೆಹೊಸೂರ-ಶಿರಹಟ್ಟಿಯ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸಾಮೀಜಿ ನಾಮಪತ್ರ ಸಲ್ಲಿಸಿದ್ದು, ₹ 9.75 ಕೋಟಿ ಆಸ್ತಿ ಘೋಷಿಸಿದ್ದಾರೆ.

ಧಾರವಾಡ ಕ್ಷೇತ್ರದ ಲೋಕಸಭೆ ಚುನಾವಣೆಗೆ ಇಂದು ಐವರು ಆರು ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ಶಿರಹಟ್ಟಿಯ ದಿಂಗಾಗಲೇಶ್ವರ ಸ್ವಾಮೀಜಿ ಎರಡು ಪ್ರತಿ ನಾಮಪತ್ರ ಸಲ್ಲಿಸಿದ್ದಾರೆ.

ನವೀಕರಣಗೊಂಡ ಮಾನಕ ಜ್ಯುವೆಲ್ಸ್ ನಲ್ಲಿ ಗಣಹೋಮ

Posted by Vidyamaana on 2023-06-06 08:12:47 |

Share: | | | | |


ನವೀಕರಣಗೊಂಡ ಮಾನಕ ಜ್ಯುವೆಲ್ಸ್ ನಲ್ಲಿ ಗಣಹೋಮ

ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿ ಕಳೆದ 18 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮಾನಕ ಜ್ಯುವೆಲ್ಸಿನಲ್ಲಿ ಸೋಮವಾರ ಗಣಹೋಮ ನಡೆಯಿತು.

ಮಾನಕ ಜ್ಯುವೆಲ್ಸಿನ ಹೊಸ ಮಳಿಗೆ ಶುಭಾರಂಭಗೊಂಡ ಮಳಿಗೆ ಹಿಂದಿನ ಮಳಿಗೆಯನ್ನು ನವೀಕರಿಸಲಾಯಿತು. ಇದೀಗ ಮತ್ತೆ ಸೇವೆಗೆ ಸಿದ್ಧಗೊಂಡಿದ್ದು, ಈ ಹಿನ್ನೆಲೆಯಲ್ಲಿ ಜೂನ್ 5ರಂದು ಗಣಹೋಮ ನೆರವೇರಿಸಲಾಯಿತು.

ಜಗನ್ನಾಥ್ ಭಟ್ ಅವರು ಪೂಜಾ ವಿಧಿವಿಧಾನ ನಡೆಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರ ತಾಯಿ ಮಾನಕ ಎಸ್. ಖಂದರೆ,ಮಾಲಕ ಸಿದ್ಧನಾಥ್ ಖಂದರೆ , ಸಹೋದರ ಸಹದೇವ್ ಖಂದರೆ , ವಿಶ್ವಂಭರ್ ಅದಿಕ್ ಕದಮ್ , ಮಾಲಕರ ಪತ್ನಿ ಪದ್ಮಿನಿ ಎಸ್.ಕೆ., ಪುತ್ರರಾದ ಶ್ರೀವರ್ಧನ್ ಎಸ್.ಕೆ., ಶೌರ್ಯವರ್ಧನ್ ಎಸ್.ಕೆ. ಮೊದಲಾದವರು ಉಪಸ್ಥಿತರಿದ್ದರು.

ನಮ್ಮ ಊರಿನ ನಿಮ್ಮ ಅಂಗಡಿ ಮಂಗಲ್ ಹೈಪರ್ ಮಾರ್ಕೆಟ್ ಶುಭಾರಂಭ

Posted by Vidyamaana on 2024-04-02 17:35:20 |

Share: | | | | |


ನಮ್ಮ ಊರಿನ ನಿಮ್ಮ ಅಂಗಡಿ ಮಂಗಲ್ ಹೈಪರ್ ಮಾರ್ಕೆಟ್ ಶುಭಾರಂಭ

ಪುತ್ತೂರು: ಕಳೆದ ಹಲವಾರು ವರುಷಗಳಿಂದ ಗುಣಮಟ್ಟ ಮತ್ತು ವಿಶ್ವಾಸಾರ್ಹ ಸೇವೆಯ ಮೂಲಕ ಗ್ರಾಹಕರ ಮನಗೆದ್ದಿರುವ ನಗರದ ಹೊರವಲಯದಲ್ಲಿರುವ ಮಂಜಲ್ಪಡುವಿನಲ್ಲಿ ವ್ಯವಹರಿಸುತ್ತಿರುವ ಮಂಗಲ್ ಸ್ಟೋರ್ಸ್‌ ನೂತನ ಮಳಿಗೆ "ಮಂಗಲ್ ಹೈಪರ್ ಮಾರ್ಕೆಟ್" ಪುತ್ತೂರಿನ ಹೃದಯ ಭಾಗದಲ್ಲಿರುವ ಜಿ.ಎಲ್.ಒನ್ ಮಾಲ್‌ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.

ಬನ್ನೂರು ರೈತರ ಸೇವಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಮಾಸ್ಟರ್ ಪ್ಲಾನರಿಯ ಆಡಳಿತ ನಿರ್ದೇಶಕ ಎಸ್. ಕೆ ಆನಂದ್ ಮತ್ತು ಜಿಎಲ್.ಒನ್ ಮಾಲ್‌ನ ಮಾಲಕ ಬಲರಾಮ ಆಚಾರ್ಯರವರು ದೀಪ ಪ್ರಜ್ವಲಿಸಿದರು.

ಮಾಲ್ ಪರಿಪೂರ್ಣತೆಗೆ ಹೈಪರ್ ಮಾರ್ಕೆಟ್ ಅವಶ್ಯ : ಬಲರಾಮ ಆಚಾರ್ಯ:

ಬಲರಾಮ ಆಚಾರ್ಯ ಮಾತನಾಡಿ, ಜಿ.ಎಲ್.ಒನ್ ಮಾಲ್ ಆರಂಭಗೊಂಡು ಇಂದಿಗೆ ಒಂದು ವರ್ಷ ಪೂರ್ಣವಾಗಿದೆ. ಕಾಕತಾಳೀಯವೆಂಬಂತೆ ಇಂದು ಹೈಪರ್ ಮಾರ್ಕೆಟ್ ಆರಂಭಗೊಂಡಿದೆ. ಇಲ್ಲಿಗೆ ಹೈಪರ್ ಮಾರ್ಕೆಟ್ ಬರಬೇಕೆಂದು ಪ್ರಯತ್ನಪಟ್ಟಿದ್ದೆವು. ಹೊಸ ಅವಕಾಶ ಹುಟ್ಟಿಕೊಂಡು ಹೈಪರ್ ಮಾರ್ಕೆಟ್ ಶುಭಾರಂಭಗೊಂಡಿದೆ. ಮಾಲ್ ಪರಿಪೂರ್ಣವಾಗಿ ಇರಬೇಕಾದರೆ ಒಂದು ಹೈಪರ್ ಮಾರ್ಕೆಟ್ ಅವಶ್ಯಕತೆ ಇದೆ. ಇದು ಎಲ್ಲಾ ಗ್ರಾಹಕರಿಗೆ ಉಪಯುಕ್ತವಾಗಲಿ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.

ದಾನ ಧರ್ಮ ಮಾಡಲು ಮನಸ್ಸು ಬೇಕು – ಪಂಜಿಗುಡ್ಡೆ ಈಶ್ವರ ಭಟ್:


ಡಿ.21-23: ಸುದಾನ ಶಾಲೆಯಲ್ಲಿ ವಾರ್ಷಿಕೋತ್ಸವದ ಸಂಭ್ರಮ

Posted by Vidyamaana on 2023-12-21 16:23:24 |

Share: | | | | |


ಡಿ.21-23: ಸುದಾನ ಶಾಲೆಯಲ್ಲಿ ವಾರ್ಷಿಕೋತ್ಸವದ ಸಂಭ್ರಮ

ಪುತ್ತೂರು: ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣದ ಜೊತೆಗೆ ಪರಿಸರದ ಶಿಕ್ಷಣವೂ ಮುಖ್ಯ ಎನ್ನುವ ವಿಶಾಲ ದೃಷ್ಟಿಯಿಂದ ಹಚ್ಚ ಹಸಿರಿನ ನಡುವೆ ರೂಪುಗೊಂಡಿರುವ ಪುತ್ತೂರಿನ ಸುದಾನ ವಸತಿಯುತ ಶಾಲೆಯಲ್ಲಿ ಡಿ.21,22 ಮತ್ತು 23ರಂದು ಮೂರು ದಿನಗಳ ಕಾಲ ಶಾಲಾ ವಾರ್ಷಿಕೋತ್ಸವವು ವಿಜೃಂಭಣೆಯಿಂದ ನಡೆಯಲಿದೆ.


ಪ್ರತಿ ವರ್ಷ ಒಂದು ಧೈಯ ವಾಕ್ಯವನ್ನು ಇಟ್ಟುಕೊಂಡು ಕಾರ್ಯಾಚರಿಸುವ ಸಂಸ್ಥೆಯು 2023-24ರ ಈ ವರ್ಷ ಭಾರತದ ಕರಾವಳಿಯ ವೈಭವದ ಪರಂಪರೆ ಎಂಬ ಧೈಯ ದೃಷ್ಟಿಯನ್ನು ಅಳವಡಿಸಿಕೊಂಡಿದೆ. ಈ ವರ್ಷ ಎಲ್ಲಾ ಕಾರ್ಯಕ್ರಮಗಳೂ ಈ ಆಶಯದೊಂದಿಗೆ ನಡೆಯಲಿದ್ದು ವಾರ್ಷಿಕೋತ್ಸವದಲ್ಲಿ ಭಾರತದ ಕರಾವಳಿಯ ಸಾಂಸ್ಕೃತಿಕ ಸಿರಿಯ ಅನಾವರಣವು ನಡೆಯಲಿದೆ.


1991-92ರಲ್ಲಿ ಆರಂಭವಾದ ಸುದಾನ ವಸತಿ ಶಾಲೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಹಲವು ಕಾರ್ಯಕ್ರಮಗಳನ್ನು ಸೌಲಭ್ಯಗಳನ್ನು ಅಳವಡಿಸಿಕೊಂಡಿದ್ದು, ರಾಜ್ಯಮಟ್ಟದ ಪರಿಸರ ಮಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಶಾಲೆಯಲ್ಲಿ ಹೈನುಗಾರಿಕೆ, ಪಕ್ಷಿಧಾಮ, ಔಷಧೀಯ ಗಿಡಗಳ ವನ, ಗದ್ದೆ ಬೇಸಾಯ, ಅಲಂಕಾರಿಕ ಮತ್ತು ವಿವಿಧ ಹಣ್ಣುಗಳ ಗಿಡಗಳುಳ್ಳ ನರ್ಸರಿ, ಕಿಟ್ಟೆಲ್ ಲೈಬ್ರೇರಿ, ವಿಶಾಲವಾದ ಆಟದ ಮೈದಾನ ಮುಂತಾದ ಅನೇಕ ವಿನೂತನ ಸೌಲಭ್ಯಗಳನ್ನು ಹೊಂದಿದೆ.


ಶೈಕ್ಷಣಿಕವಾಗಿ ಅಭೂತಪೂರ್ವ ಸಾಧನೆಯನ್ನು ಮಾಡುತ್ತಾ ಸೃಜನಶೀಲತೆಯೊಂದಿಗೆ ಕಾರ್ಯಾಚರಿಸುತ್ತಿರುವ ಸುದಾನ ಶಾಲಾ ವಾರ್ಷಿಕೋತ್ಸವದ ಮೊದಲ ದಿನ, ಡಿ.21ರಂದು

ಶಾಲಾ ವಾರ್ಷಿಕೋತ್ಸವ ಉದ್ಘಾಟನೆ ಶಾಲಾಗೀತೆ  Sudana School Anthem ಬಿಡುಗಡೆ, ಶೈಕ್ಷಣಿಕ ವರ್ಷದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಾಧಕ ಪುರಸ್ಕಾರ ಮತ್ತು ಯುಕೆಜಿ ಮಕ್ಕಳ ಘಟಕೋತ್ಸವವು ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂ ಡಾ। ಆಂಟನಿ ಪ್ರಕಾಶ್ ಮೊಂತೆರೋ, ಅಕ್ಷಯ ಕಾಲೇಜಿನ ಸಂಚಾಲಕರಾದ ಜಯಂತ ನಡುಬೈಲ್ ಅವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.


ಡಿ.22 ರಂದು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಾರ್ಷಿಕೋತ್ಸವ ನಡೆಯಲಿದ್ದು ಶಾಲೆಯ ಹಿರಿಯ ವಿದ್ಯಾರ್ಥಿ ಡಾ. ಸಂಜನಾ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಲಿದ್ದು ಅವನಿ ಬೆಳ್ಳಾರೆ ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ. ಡಿ.23ರಂದು ಪ್ರೌಢಶಾಲಾ ವಾರ್ಷಿಕೋತ್ಸವವು ನಡೆಯಲಿದ್ದು ಸಾಹಿತಿ ಡಾ.ನರೇಂದ್ರ ರೈ ದೇರ್ಲರವರು ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಸುಶಾಂತ ಹಾರ್ವಿನ್, ಡಾ. ವಿಖ್ಯಾತ್ ನಾರಾಯಣ್ ಸತ್ಯಾತ್ಮ, ಹರ್ಷಿತ್ ಎಂ.ಬಿ ಭಾಗವಹಿಸಲಿದ್ದಾರೆ. ಮೂರು ದಿನವೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು ವಿದ್ಯಾರ್ಥಿಗಳು, ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಭಾರತದ ಕರಾವಳಿಯ ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸಲಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.

ಉಪ್ಪಿನಂಗಡಿ: ಚಾಲಕನ ಅಜಾಗರೂಕತೆಯಿಂದ ಹಿಮ್ಮುಖವಾಗಿ ಚಲಿಸಿದ ಖಾಸಗಿ ಬಸ್ ; ಅಂಗಡಿಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಹಾನಿ

Posted by Vidyamaana on 2024-03-03 13:48:11 |

Share: | | | | |


ಉಪ್ಪಿನಂಗಡಿ: ಚಾಲಕನ ಅಜಾಗರೂಕತೆಯಿಂದ ಹಿಮ್ಮುಖವಾಗಿ ಚಲಿಸಿದ ಖಾಸಗಿ ಬಸ್ ; ಅಂಗಡಿಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಹಾನಿ

ಉಪ್ಪಿನಂಗಡಿ: ಚಾಲಕನ ಅಜಾಗರೂಕತೆಯಿಂದ ಖಾಸಗಿ ಬಸ್ ಹಿಮ್ಮುಖವಾಗಿ ಚಲಿಸಿದ ಪರಿಣಾಮ ಅಂಗಡಿಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಹಾನಿಯಾಗಿರುವ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಚಾಲಕ ಅಜಾಗರೂಕತೆಯಿಂದ ಬಸ್ ಹಿಮ್ಮುಖವಾಗಿ ಚಲಾಯಿಸಿದ್ದರಿಂದ ಬಸ್ ವಾಹನಗಳ ಪಾರ್ಕಿಂಗ್ ಪ್ರದೇಶ ದಾಟಿ ಅಂಗಡಿಗೆ ನುಗ್ಗಿದ್ದರಿಂದ ನಾಗರಾಜ್ ಭಟ್ ಎಂಬವರ ಸಿಹಿತಿಂಡಿ ಮತ್ತು ತಂಪು ಪಾನೀಯ ಮಾರಾಟದ ಅಂಗಡಿಗೆ ಹಾನಿಯಾಗಿದೆ. ಕಬ್ಬು ಅರೆಯುವ ಯಂತ್ರ ಸೇರಿದಂತೆ ಅಂಗಡಿಯ ಕಪಾಟುಗಳಿಗೂ ಹಾನಿಯಾಗಿದೆ. ಮಾತ್ರವಲ್ಲದೆ ಮೂರಾಲ್ಕು ದ್ವಿಚಕ್ರ ವಾಹನ ಹಾಗೂ ಕಾರಿಗೂ ಹಾನಿಯಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಈ ದುರ್ಘಟನೆಯ ಸಂದರ್ಭ ಕೆಲವೇ ಜನರಿದ್ದರಿಂದ, ಅವರು ಅಲ್ಲಿಂದ ಓಡಿ ಪಾರಾಗಿದ್ದಾರೆ. ಅದೃಷ್ಟವಶಾತ್ ಅಂಗಡಿಯವರು ಅಪಾಯದಿಂದ ಪಾರಾಗಿದ್ದಾರೆ

Recent News


Leave a Comment: