ಉಳ್ಳಾಲ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ನಿಧನ

ಸುದ್ದಿಗಳು News

Posted by vidyamaana on 2024-07-08 11:07:30 | Last Updated by Vidyamaana on 2024-07-08 11:07:30

Share: | | | | |


ಉಳ್ಳಾಲ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ನಿಧನ

ಮಂಗಳೂರು(ಇಟ್ಟಿಕುಳಂ): ಉಳ್ಳಾಲ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಜಳ್ ನಿಧನರಾಗಿದ್ದಾರೆ. ಕಣ್ಣೂರಿನ ಇಟ್ಟಿಕುಳಂ ನಿವಾಸಿಯಾಗಿರುವ ಹಾಗೂ ಉಳ್ಳಾಲ ಖಾಝಿಯಾಗಿದ್ದ ಇವರು ಕೂರ ತಂಜಳ್ ಎಂದೇ ಪ್ರಸಿದ್ದರಾಗಿದ್ದರು. ಅಲ್ಪಕಾಲದಿಂದ ಅನಾರೋಗ್ಯದಿಂದಿದ್ದ ಅವರು ಇಂದು ಬೆಳಿಗ್ಗೆ ನಿಧರಾಗಿದ್ದಾರೆ.

ಮೃತರು ಪತ್ನಿ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಇಂದು ರಾತ್ರಿ 9

ಗಂಟೆ ವೇಳೆಗೆ ಕೂರ ಮಸೀದಿ ವಠಾರದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ. ಸುಲ್ತಾನುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಇಂದು ಸಂಜೆ 5 ಗಂಟೆಗೆ ಕೂರ ಮಸೀದಿಯಲ್ಲಿ ನಡೆಯಲಿರುವ ಜನಾಝಾನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಪುತ್ತೂರ್ದ ಪಿಲಿ ಯ ಊದು ಪೂಜೆ ಡೇಟ್ ಇಲ್ಲಿದೆ ನೋಡಿ!

Posted by Vidyamaana on 2023-10-15 08:24:18 |

Share: | | | | |


ಪುತ್ತೂರ್ದ ಪಿಲಿ ಯ ಊದು ಪೂಜೆ ಡೇಟ್ ಇಲ್ಲಿದೆ ನೋಡಿ!

ಪುತ್ತೂರು: ಪಿಲಿ ರಾಧಣ್ಣ ಮತ್ತು ಬಳಗದ ಪುತ್ತೂರ್ದ ಪಿಲಿ ಇದರ ಊದು ಪೂಜೆ ಕಾರ್ಯಕ್ರಮ ಅ. 23ರಂದು ಸಂಜೆ 7:30ಕ್ಕೆ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ.

ಪಿಲಿ ರಾಧಣ್ಣ ಮತ್ತು ಬಳಗದ 47ನೇ ವರ್ಷದ ಹುಲಿ ಕುಣಿತ ಕಾರ್ಯಕ್ರಮವು ಅ. 24 ರಂದು ಬೆಳಗ್ಗೆ 10 ಗಂಟೆಯಿಂದ ಹಲವು ಕಡೆಗಳಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸುಮಾರು 47 ವರುಷಗಳಿಂದ ಹುಲಿ ವೇಷ ಹಾಕಿ ಜನರನ್ನು ಮನರಂಜಿಸುತ್ತಿರುವ ಪಿಲಿ ರಾಧಣ್ಣ ಮತ್ತು ಬಳಗವು ಪುತ್ತೂರು ಮಾತ್ರವಲ್ಲದೇ ಜಿಲ್ಲೆಯ ಇನ್ನೂ ಹಲವು ಕಡೆಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ.

ಪುತ್ತೂರಿನಲ್ಲಿ ಬಿಜೆಪಿ ಗೆಲುವಿನ ಆಶೆಗೆ ಬಲ ತುಂಬಿದ ಯೋಗಿ ಭೇಟಿ

Posted by Vidyamaana on 2023-05-06 10:27:51 |

Share: | | | | |


ಪುತ್ತೂರಿನಲ್ಲಿ ಬಿಜೆಪಿ ಗೆಲುವಿನ ಆಶೆಗೆ ಬಲ ತುಂಬಿದ ಯೋಗಿ ಭೇಟಿ

ಪುತ್ತೂರು : ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪುತ್ತೂರಿಗೆ ಆಗಮಿಸಿದ್ದು, ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ. ದೇವಸ್ಥಾನದ ಬಳಿಯಿಂದ ರೋಡ್‌ ಶೋ ಆರಂಭಗೊಳಿಸಿದರು.ಮೊಟ್ಟೆತ್ತಡ್ಕ ಹೆಲಿಪ್ಯಾಡ್‌ ನಿಂದ ವಾಹನದ ಮೂಲಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಯೋಗಿ ಆದಿತ್ಯನಾಥ್‌ ಆಗಮಿಸಿ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.ದೇವಳದ ಬಳಿ ಮತ್ತು ರಸ್ತೆ ಇಕ್ಕೆಲಗಳಲ್ಲಿ ಯೋಗಿ ನೋಡಲು ಜನ ಸಲು ಗಟ್ಟಿ ನಿಂತಿದ್ದು, ಯೋಗಿ ಜನತೆಯತ್ತ ಕೈ ಬೀಸಿ ಸಂಭ್ರಮಿಸಿದ್ದಾರೆ

ಹೈವೇ ಬದಿಯಲ್ಲಿ ನಡೆದುಕೊಂಡು ಹೋಗ್ತಿದ್ದ ಯುವತಿಗೆ ಕಾರು ಡಿಕ್ಕಿ

Posted by Vidyamaana on 2023-10-12 22:11:32 |

Share: | | | | |


ಹೈವೇ ಬದಿಯಲ್ಲಿ ನಡೆದುಕೊಂಡು ಹೋಗ್ತಿದ್ದ ಯುವತಿಗೆ ಕಾರು ಡಿಕ್ಕಿ

ಬಂಟ್ವಾಳ : ಕಾರು ಡಿಕ್ಕಿ ಹೊಡೆದು ಪಾದಚಾರಿ ಯುವತಿಯೋರ್ವಳು ಮೃತಪಟ್ಟ ಘಟನೆ ಗುರುವಾರ ರಾತ್ರಿ ಸುಮಾರು 6.30 ಕ್ಕೆ ರಾಷ್ಟ್ರೀಯ ಹೆದ್ದಾರಿ 75 ರ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ನಡೆದಿದೆ.


    ಮೃತಪಟ್ಟ ಯುವತಿಯನ್ನು ವೀರಕಂಭ ಗ್ರಾಮದ ಬಾಯಿಲ ನಿವಾಸಿ ಶೇಖರ ಪೂಜಾರಿ ಅವರ ಪುತ್ರಿ ಪಾವನ ( 23) ಎಂದು ಗುರುತಿಸಲಾಗಿದೆ.


    ಬಿ.ಸಿ.ರೋಡಿನ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಈಕೆ ಕೆಲಸ ಬಿಟ್ಟು  ಬಸ್ ಮೂಲಕ ಬಂದು ದಾಸಕೋಡಿ ಎಂಬಲ್ಲಿ  ಇಳಿದು ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುವ ವೇಳೆ  ಡಸ್ಟರ್  ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.


    ಡಿಕ್ಕಿಯ ರಭಸಕ್ಕೆ ಯುವತಿ ರಸ್ತೆ ಬದಿಯ ತೋಡಿಗೆ ಎಸೆಯಲ್ಪಟ್ಟಿದ್ದು ತುಸು ದೂರದ ತನಕ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಕಾರು ಕೂಡ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ  ಎಂದು ಹೇಳಲಾಗಿದೆ.


     ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿಡಲಾಗಿದೆ.


ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾಹನ ಸವಾರ ರಿಗೆ ಬಿಗ್ ರಿಲೀಫ್: HSRP ನಂಬರ್ ಪ್ಲೇಟ್ ಅಳವಡಿಕೆಗೆ ಅವಧಿ ವಿಸ್ತರಣೆ

Posted by Vidyamaana on 2023-11-15 07:48:38 |

Share: | | | | |


 ವಾಹನ ಸವಾರ ರಿಗೆ ಬಿಗ್ ರಿಲೀಫ್:  HSRP ನಂಬರ್ ಪ್ಲೇಟ್ ಅಳವಡಿಕೆಗೆ ಅವಧಿ ವಿಸ್ತರಣೆ

ಬೆಂಗಳೂರು : 2019, ಏಪ್ರಿಲ್ 1ರ ನಂತ್ರ ಖರೀದಿಸಿದಂತ ವಾಹನಗಳಿಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ( HSRP Number Plate ) ಅಳವಡಿಸೋದು ಕಡ್ಡಾಯಗೊಳಿಸಲಾಗಿತ್ತು. ಇದಕ್ಕಾಗಿ ನವೆಂಬರ್.17 ಡೆಡ್ ಲೈನ್ ನೀಡಲಾಗಿತ್ತು. ಈಗ ಈ ಅವಧಿಯನ್ನು ಫೆ.17, 2024ರವರೆಗೆ ವಿಸ್ತರಿಸಲಾಗಿದೆ.ಈ ಮೂಲಕ ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಲಾಗಿದೆ.


ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಿರುವಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ( Minister Ramalingareddy ) ಅವರು, ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಕೆಗೆ ಅವಧಿ ವಿಸ್ತರಿಸುವಂತೆ ವಾಹನ ಸವಾರರು ಮನವಿ ಮಾಡಿದ್ದಾರೆ. ಈ ಮನವಿಯ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದರು.


ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ನೀಡಲಾಗಿರುವಂತ ಗಡುವನ್ನು ನವೆಂಬರ್.17ರಿಂದ ಫೆಬ್ರಬರಿ.17, 2024ರವರೆಗೆ ವಿಸ್ತರಣೆ ಮಾಡೋದಕ್ಕೆ ಚಿಂತನೆ ನಡೆಸಲಾಗುತ್ತಿದೆ. ಈ ಸಂಬಂಧ ಇಂದು ಸಂಜೆ ಆದೇಶ ಹೊರಡಿಸಲಾಗುತ್ತದೆ ಎಂದು ಹೇಳಿದರು.

ಕರ್ನಾಟಕದಲ್ಲಿ HSRP ಪಡೆಯುವುದು ಹೇಗೆ?

ಕರ್ನಾಟಕ ಸಾರಿಗೆ ಇಲಾಖೆಯ ವೆಬ್ಸೈಟ್ - https://transport.karnataka.gov.in ಅಥವಾ www.siam.in ಭೇಟಿ ನೀಡಿ ಮತ್ತು ಬುಕ್ HSRP ಕ್ಲಿಕ್ ಮಾಡಿ. ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ ಮತ್ತು ಕೇಳಿದ ಮೂಲ ವಾಹನ ವಿವರವನ್ನು ಭರ್ತಿ ಮಾಡಿ. ನಂತರ ಎಚ್‌ಎಸ್‌ಆರ್ಪಿಯನ್ನು ಅಂಟಿಸಲು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ ಮತ್ತು ಆನ್ಲೈನ್ನಲ್ಲಿ HSRP ಶುಲ್ಕವನ್ನು ಪಾವತಿಸಲು ಮುಂದುವರಿಯಿರಿ. ಯಾವುದೇ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.


ಒಟಿಪಿಯನ್ನು ರಚಿಸಿ ವಾಹನ ಮಾಲೀಕರ ಮೊಬೈಲ್ ಗೆ ಕಳುಹಿಸಲಾಗುತ್ತದೆ. ಮಾಲೀಕರು ತಮ್ಮ ಅನುಕೂಲ ಮತ್ತು ವೆಬ್ಸೈಟ್ಗೆ ಅನುಗುಣವಾಗಿ ಅಂಟಿಸುವ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಬಹುದು.ನಂತರ ಮಾಲೀಕರು ಎಚ್‌ಎಸ್‌ಆರ್ಪಿಯನ್ನು ಅಂಟಿಸಲು ಅವನ / ಅವಳ ವಾಹನ ತಯಾರಕರು ಅಥವಾ ಡೀಲರ್ಗೆ ಭೇಟಿ ನೀಡಬೇಕು. ಕೆಲವು ತಯಾರಕರು ಮನೆಗಳು ಮತ್ತು ಕಚೇರಿಗಳ ಮನೆ ಬಾಗಿಲಿಗೆ ಎಚ್‌ಎಸ್‌ಆರ್ಪಿ ಸೇವೆಯನ್ನು ಒದಗಿಸುತ್ತಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಹೆಚ್’ಡಿ ದೇವೇಗೌಡ: ರಾಜಕಾರಣದಲ್ಲಿ ತೀವ್ರ ಕುತೂಹಲ

Posted by Vidyamaana on 2023-12-15 15:03:14 |

Share: | | | | |


ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಹೆಚ್’ಡಿ ದೇವೇಗೌಡ: ರಾಜಕಾರಣದಲ್ಲಿ ತೀವ್ರ ಕುತೂಹಲ

ನವದೆಹಲಿ: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.ಸಂಸತ್ ಭವನದಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತು ದೇವೇಗೌಡ ಮತ್ತು ಖರ್ಗೆ ಅವರು ಮಾತುಕತೆ ನಡೆಸಿದರು. ಈ ಬಗ್ಗೆ ಟ್ವೀಟ್ ಮಾಡಿದ ರಾಜ್ಯಸಭಾ ಸದಸ್ಯ ರಾಜೀವ್ ಶುಕ್ಲಾ, “ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರನ್ನು ಸಂಸತ್ತಿನ ಭವನದಲ್ಲಿ ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದರು” ಎಂದರು.

ಸಿಲಿಂಡರ್ ಸ್ಫೋಟ : ಗಾಯಗೊಂಡಿದ್ದ ದಂಪತಿ ಮೃತ್ಯು

Posted by Vidyamaana on 2023-09-23 07:27:27 |

Share: | | | | |


ಸಿಲಿಂಡರ್ ಸ್ಫೋಟ : ಗಾಯಗೊಂಡಿದ್ದ ದಂಪತಿ ಮೃತ್ಯು

ಕೋಲಾರ: ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸಿಡಿದು ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ.


ಕೋಲಾರ ತಾಲೂಕಿನ ಮಣಿಘಟ್ಟ ರಸ್ತೆಯಲ್ಲಿರುವ ಮಧುಸೂಧನ್ ತೋಟದ ಮನೆಯಲ್ಲಿ ಸೆಪ್ಟೆಂಬರ್ 16ರಂದು ಈ ಘಟನೆ ನಡೆದಿದ್ದು, ಗಂಭೀರ ಗಾಯಗೊಂಡಿದ್ದ ದಂಪತಿ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುಪ್ಪಡಹಳ್ಳಿ ಗ್ರಾಮದ ದಂಪತಿ ಕೋಲಾರ ತಾಲೂಕಿನ ಮಣಿಘಟ್ಟ ರಸ್ತೆಯಲ್ಲಿರುವ ಮಧುಸೂಧನ್ ತೋಟದ ಮನೆಯಲ್ಲಿ ವಾಸವಿದ್ದರು.


ಕಾಫಿ ಮಾಡುವ ವೇಳೆ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಅವಘಡ ಸಂಭವಿಸಿತ್ತು. ಘಟನೆಯ ಪರಿಣಾಮ ತೀವ್ರ ಗಾಯಗೊಂಡ ದಂಪತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತ ದಂಪತಿಯನ್ನು ಗಿರೀಶ್ ಹಾಗೂ ನಂದಿನಿ ಎಂದು ಗುರುತಿಸಲಾಗಿದೆ.


 ಸಿಲಿಂಡರ್ ಬ್ಲಾಸ್ಟ್‌ನಿಂದ ದಂಪತಿಗೆ ಗಂಭೀರ ಗಾಯಗಳಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Recent News


Leave a Comment: