ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಸುದ್ದಿಗಳು News

Posted by vidyamaana on 2024-07-25 12:27:06 |

Share: | | | | |


ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಪಣಂಬೂರು: ಇಲ್ಲಿನ ಜೋಕಟ್ಟೆ ಗ್ರಾಮ ಪಂಚಾಯತ್ ಗುಡ್ಡೆ ಎಂಬಲ್ಲಿ ಮನೆಯ ಮೇಲೆ� ತಡೆಗೋಡೆ ಕುಸಿದು ಬಿದ್ದು ಯುವಕ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ‌.ಮುಲ್ಕಿ ಕೊಲ್ನಾಡು ನಿವಾಸಿ ಶಂಕರ ಎಂಬವರ ಪುತ್ರ ಶೈಲೇಶ್ (17) ಮೃತ ಯುವಕ. ಜೋಕಟ್ಟೆಯಲ್ಲಿರುವ ತನ್ನ ದೊಡಮ್ಮನ ಮಗಳ ಮನೆಗೆ ಬಂದಿದ್ದ ಶೈಲೇಶ್, ಇಲ್ಲಿಯೇ ಉಳಿದುಕೊಂಡಿದ್ದ.

ಮನೆಯಲ್ಲಿ ಶೈಲೇಶ್ ರವರ ದೊಡ್ಡಮನ ಮಗಳು ಸವಿತಾ, ಆಕೆಯ ಗಂಡ ಸುರೇಶ್ ಮತ್ತು ಮಗು ಸಾಕ್ಷಿ ಮನೆಯ ಒಂದು ಕೋಣೆಯಲ್ಲಿ ಮಲಗಿದ್ದು, ಶೈಲೇಶ್ ಇನ್ನೊಂದು ಕಡೆ ಮಲಗಿದ್ದ. ತಡೆಗೋಡೆ ಕುಸಿದು ಹಂಚಿನ ಮನೆಯ ಮೇಲೆ ಬಿದ್ದಿದ್ದರಿಂದ ಅಲ್ಲಿ ಮಲಗಿದ್ದ ಶೈಲೇಶ್ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಇತರ ಮೂರು ಜನರಲ್ಲಿ ಸವಿತಾ ಅವರಿಗೆ ಸಣ್ಣ ಗಾಯವಾಗಿದ್ದು‌, ಚಿಕಿತ್ಸೆ ಪಡೆದಿದ್ದಾರೆ‌ ಎಂದು ತಿಳಿದು ಬಂದಿದೆ.

ಶೈಲೇಶ್ ಅವರ ಮೃತದೇಹವನ್ನು ನಗರದ ಎ.ಜೆ.ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು, ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

 Share: | | | | |


ಪುತ್ತೂರು : ಶಾಸಕರಿಗೆ ಅಭಿನಂದನೆ ಸಲ್ಲಿಸಿ ಅಳವಡಿಸಿದ ಫ್ಲೆಕ್ಸ್ ಗೆ ಹಾನಿ : ಠಾಣೆಗೆ ದೂರು

Posted by Vidyamaana on 2024-01-29 12:51:26 |

Share: | | | | |


ಪುತ್ತೂರು : ಶಾಸಕರಿಗೆ ಅಭಿನಂದನೆ ಸಲ್ಲಿಸಿ ಅಳವಡಿಸಿದ ಫ್ಲೆಕ್ಸ್ ಗೆ ಹಾನಿ : ಠಾಣೆಗೆ ದೂರು

ಪುತ್ತೂರು : ನಗರಸಭಾ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿಯಲ್ಲಿ ಮಂಜೂರಾಗಿರುವ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ ಸಲ್ಲಿಸಿ ಇಲ್ಲಿನ ಕೋರ್ಟ್ ರಸ್ತೆಯಲ್ಲಿ ಅಳವಡಿಸಿದ ಬ್ಯಾನರ್ ಗೆ ಹಾನಿಗೊಳಿಸಲಾಗಿದೆ ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್. ಮಹಮ್ಮದ್ ಆಲಿ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಕೋರ್ಟ್ ರಸ್ತೆಯಲ್ಲಿ ಈ ಹಿಂದೆ ನಡೆದ ಕಾಂಕ್ರಿಟೀಕರಣ ರಸ್ತೆ ಕಾಮಗಾರಿ ಕಳಪೆಯಾಗಿ ಅಲ್ಲಲ್ಲಿ ಕಾಂಕ್ರೀಟ್ ಕಿತ್ತು ಹೋಗಿ ಸಂಚಾರಕ್ಕೆ ತೊಂದರೆಯಾಗುತ್ತಿರುವುದಕ್ಕೆ ಸದರಿ ರಸ್ತೆಯನ್ನು ಸುಸಜ್ಜಿತವಾಗಿ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಕಾಂಕ್ರೀಟ್ ರಸ್ತೆ ಮೇಲೆ ವೈಟ್ ಟಾಪಿಂಗ್ ಮಾಡುವ ಕಾಮಗಾರಿಗೆ ಶಾಸಕ ಅಶೋಕ್ ಕುಮಾರ್ ರೈ ಯವರು 42 ಲಕ್ಷ ರೂ. ಅನುದಾನ ಮಂಜೂರುಗೊಳಿಸಿ ಕಾಮಗಾರಿಯ ಶಂಕುಸ್ಥಾಪನೆ ಮಾಡಿದ್ದರು.


ಅನುದಾನ ಮಂಜೂರು ಮಾಡಿರುವ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಅಭಿನಂದನೆ ಸಲ್ಲಿಸುವ ಫ್ಲೆಕ್ಸ್ ನ್ನು ಮುಖ್ಯ ರಸ್ತೆಯಿಂದ ಕೋರ್ಟ್ ರಸ್ತೆಗೆ ತಿರುಗುವಲ್ಲಿ ನಗರ ಕಾಂಗ್ರೆಸ್ ವತಿಯಿಂದ ಅಳವಡಿಸಲಾಗಿತ್ತು. ಈ ಫ್ಲೆಕ್ಸ್ ನ್ನು ರಾತ್ರಿ ಯಾರೋ ಕಿಡಿಗೇಡಿಗಳು ಹರಿದು ಹಾನಿಗೊಳಿಸಿದ್ದಾರೆ. ಹಾನಿಗೊಳಿಸಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಆಲಿಯವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪುತ್ತೂರು : ಶತಾಯುಷಿ ಪದ್ಮಾವತಿ ತ್ಯಾಂಪಣ್ಣ ಪೂಜಾರಿ ನಿಧನ

Posted by Vidyamaana on 2023-12-25 04:40:12 |

Share: | | | | |


ಪುತ್ತೂರು : ಶತಾಯುಷಿ ಪದ್ಮಾವತಿ ತ್ಯಾಂಪಣ್ಣ ಪೂಜಾರಿ ನಿಧನ

ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಬಸಂತಕೋಡಿ ನಿವಾಸಿ ಪದ್ಮಾವತಿ ತ್ಯಾಂಪಣ್ಣ ಪೂಜಾರಿ

(102 ವ) ಅವರು ವಯೋಸಹಜ ಡಿ. 23 ರಂದು ಸ್ವ ಗೃಹದಲ್ಲಿ ನಿಧನ ಹೊಂದಿದರು


ಚುನಾವಣೆಯ ಪ್ರತಿ ಸಂದರ್ಭ ಇವರು ಸತತವಾಗಿ ಮತದಾನ ಮಾಡುತ್ತಿದ್ದರು. ಬಲ್ನಾಡು ಗ್ರಾಮ ಗ್ರಾಮ ಪಂಚಾಯತ್ ವತಿಯಿಂದ ಇತ್ತೀಚೆಗೆ ಇವರನ್ನು ಗೌರವಿಸಿ ಸನ್ಮಾನ ಮಾಡಲಾಗಿದೆ.


ಮೃತರು ಮಕ್ಕಳಾದ ಪುತ್ತೂರು ಸರಕಾರಿ ಆಸ್ಪತ್ರೆಯ ನಿವೃತ್ತ ವಾಹನ ಚಾಲಕ ನಾರಾಯಣ ಪೂಜಾರಿ ಬಸಂತಕೋಡಿ, ಮಂಗಳೂರಿನಲ್ಲಿ ಉದ್ಯಮಿ ಮೋಹನ್ ಬಲ್ನಾಡ್ ಮತ್ತು ಪುತ್ರಿ ಹರಿಣಿ ಎಲ್ಯಣ್ಣ ಪೂಜಾರಿ ಪೆರಿಯಾತ್ತೋಡಿ ಅವರನ್ನು ಅಗಲಿದ್ದಾರೆ.

ವಿಟ್ಲ ಮೋತಿ ಸಿಟಿ ಕಟ್ಟಡದಲ್ಲಿ ಮೆಹಂದಿ ತರಗತಿ ಉದ್ಘಾಟನೆ

Posted by Vidyamaana on 2024-07-02 22:10:24 |

Share: | | | | |


ವಿಟ್ಲ ಮೋತಿ ಸಿಟಿ ಕಟ್ಟಡದಲ್ಲಿ ಮೆಹಂದಿ ತರಗತಿ ಉದ್ಘಾಟನೆ

ವಿಟ್ಲ: ಮೆಹಂದಿಗೆ ಪ್ರಾಚೀನ ಕಾಲದ ಇತಿಹಾಸ ಇದ್ದು ಅದೊಂದು ಕೈಯಿಂದ ಕೈಯಲ್ಲಿ ಅರಳುವ ಅದ್ಬುತ ಕಲೆಯಾಗಿದೆ. ವಿದ್ಯಾರ್ಥಿನಿಯರು, ಯುವತಿಯರು ಹಾಗೂ ಗೃಹಣಿಯರು ಮೆಹಂದಿ ಬಿಡಿಸುವುದು ಕಲಿಯುವ ಮೂಲಕ ಕುಟುಂಬಕ್ಕೆ ಆರ್ಥಿಕ ನೆರವಾಗಬಹುದು ಎಂದು ವಿಟ್ಲದ ದಂತ ವೈದ್ಯೆ ಡಾ. ಕೌಲತ್ ಬಿ.ಎಂ. ಹೇಳಿದರು. 

ವಿಟ್ಲ ಸ್ಕೂಲ್ ರೋಡಿನ ಮೋತಿ ಸಿಟಿ ಕಟ್ಟಡದಲ್ಲಿ ಇತ್ತೀಚಿಗೆ ಆರಂಭಗೊಂಡ ದಿ ನ್ವಾಲೇಜ್ ಹಬ್ ಟ್ಯೂಷನ್ ಆ್ಯಂಡ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಮೆಹಂದಿ ತರಗತಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. 


ಕಾರ್ಯಕರ್ತರ ಭಾವನೆಗಳಿಗೆ ಮನ್ನಣೆ ಕೊಡುವ ಸಲುವಾಗಿ ಮಾತೃ ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳಬೇಕು:ಅರುಣ್ ಕುಮಾರ್ ಪುತ್ತಿಲ

Posted by Vidyamaana on 2024-02-05 22:51:54 |

Share: | | | | |


ಕಾರ್ಯಕರ್ತರ ಭಾವನೆಗಳಿಗೆ ಮನ್ನಣೆ ಕೊಡುವ ಸಲುವಾಗಿ ಮಾತೃ ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳಬೇಕು:ಅರುಣ್ ಕುಮಾರ್ ಪುತ್ತಿಲ

ಪುತ್ತೂರು, ಫೆ.5: ಪುತ್ತಿಲ ಪರಿವಾರವನ್ನು ಬಿಜೆಪಿ ಜೊತೆ ವಿಲೀನ ಮಾಡುವ ಕುರಿತು ಮಹತ್ವದ ಸಮಾಲೋಚನಾ ಸಭೆಯನ್ನು ಪುತ್ತೂರಿನಲ್ಲಿ ನಡೆಸಲಾಗಿದ್ದು ಪರಿವಾರದ ನಾಯಕರು ಬಿಜೆಪಿ ನಾಯಕರಿಗೇ ಎಚ್ಚರಿಕೆ ನೀಡಿದ್ದಲ್ಲದೆ, ಜವಾಬ್ದಾರಿ ಸಹಿತ ಸೇರ್ಪಡೆಗೆ ಮೂರು ದಿನಗಳ ಗಡುವು ನೀಡಿದ್ದಾರೆ. 


ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲ ಒಟ್ಟು ಸೇರಿಸಿ ಅಧ್ಯಕ್ಷ ಸ್ಥಾನ ನೀಡಬೇಕೆಂಬುದು ಪ್ರಮುಖ ಬೇಡಿಕೆಯಾಗಿದೆ. ಈ ಬಗ್ಗೆ ನೂರಾರು ಮಂದಿ ಸೇರಿದ್ದ ಸಭೆಯಲ್ಲಿ ನಿರ್ಣಯ ಸ್ವೀಕರಿಸಲಾಗಿದೆ. ಸಭೆ ನಿರ್ಣಯ ಮಂಡಿಸಿದ ಬಳಿಕ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅರುಣ್ ಪುತ್ತಿಲ, ಸಭೆಯ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಕಾರ್ಯಕರ್ತರ ಭಾವನೆಗಳಿಗೆ ಮನ್ನಣೆ ಕೊಡುವ ಸಲುವಾಗಿ ಮಾತೃ ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈ ಬಗ್ಗೆ ಸೂಕ್ತ ನಿರ್ಧಾರವನ್ನು ಮೂರು ದಿನಗಳೊಳಗೆ ಕೈಗೊಳ್ಳಬೇಕು. ಇಲ್ಲವಾದಲ್ಲಿ ಚುನಾವಣಾ ರಾಜಕೀಯಕ್ಕೆ ಪುತ್ತಿಲ ಪರಿವಾರ ಸಿದ್ಧವಾಗಿದೆ ಎಂದಿದ್ದಾರೆ. 




ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 718 ವಾಟ್ಸಾಪ್ ಗ್ರೂಪ್ ಗಳಲ್ಲಿ 4,23,400 ಜನ ಬೆಂಬಲಿಗರಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವುದು ದೊಡ್ಡ ಸಂಗತಿಯೇ ಅಲ್ಲ. ಬೇರೆ ವ್ಯವಸ್ಥೆಗಳ ಅಗತ್ಯವೂ ಇಲ್ಲ. ನಾವೆಲ್ಲ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿದ್ದು ರಕ್ತವನ್ನು ಬೆವರಾಗಿಸಿ ಮಾತೃ ಪಕ್ಷವನ್ನು‌ ಅಧಿಕಾರಕ್ಕೆ ತರಲು ದುಡಿದಿದ್ದೇವೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಗೌರವ ತರುವ ವ್ಯವಸ್ಥೆಗಳು ಸುಸೂತ್ರವಾಗಿ‌ ನಡೆಯಬೇಕು ಮತ್ತು ಇದಕ್ಕಾಗಿ ಪುತ್ತಿಲ ಪರಿವಾರ ಸಂಘಟನೆ ಕೆಲವು ತೀರ್ಮಾನಗಳನ್ನ‌ ತೆಗೆದುಕೊಂಡಿದ್ದಾರೆ. ಅವರ ನಿರ್ಧಾರಕ್ಕೆ ನಾನು ಕಟಿಬದ್ಧನಾಗಿದ್ದೇನೆ. ಇಲ್ಲವಾದಲ್ಲಿ ಪುತ್ತೂರಿನಲ್ಲಿ ನಡೆದ ವಿದ್ಯಾಮಾನಗಳು ಇಡೀ ರಾಜ್ಯದಲ್ಲಿ ನಡೆಯಲಿದೆ ಎಂದು ಅರುಣ್ ಕುಮಾರ್ ಪುತ್ತಿಲ ಬಿಜೆಪಿ ನಾಯಕರನ್ನು ಎಚ್ಚರಿಸಿದ್ದಾರೆ.  


ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ, ಪುತ್ತೂರು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಸ್ಥಾನ ನೀಡಬೇಕು. ನೀಡಿದಲ್ಲಿ ಮಾತ್ರ ಮಾತೃಪಕ್ಷ ಬಿಜೆಪಿ ಜೊತೆಗೆ ಪುತ್ತಿಲ ಪರಿವಾರವನ್ನ ವಿಲೀನ ಮಾಡುತ್ತೇವೆ. ನಾವೆಲ್ಲರೂ ಬಿಜೆಪಿಗರು, ನಾವೆಲ್ಲ ಸಂಘ ಪರಿವಾರ, ನಮ್ಮ ಹಿತೈಷಿಗಳೆಲ್ಲ ಬಿಜೆಪಿಗರು, ನಮ್ಮಮತದಾರರು ಬಿಜೆಪಿಗರೇ ಆಗಿದ್ದಾರೆ. 10 ತಿಂಗಳಿನಿಂದ ಬಿಜೆಪಿ ಜೊತೆ ಸಂಧಾನ ಮಾತುಕತೆ ಮಾತ್ರ ನಡೀತಾ ಇದೆ. 


ಆದ್ರೆ ಯಾವುದೇ ನಿರ್ಧಾರ ಇಲ್ಲಿಯ ವರೆಗೂ ಆಗಿಲ್ಲ. ಅರುಣ್ ಪುತ್ತಿಲರಿಗೆ ನಾಯಕತ್ವ ನೀಡಲು ವಿಫಲವಾದರೆ ನಾವೇನು ಮಾಡಬಹುದು.‌ ದೊಡ್ಡ ರಾಜಕೀಯ ವಿಪ್ಲವ ನಡೆಯಲಿದೆ. ಜಿಲ್ಲೆಯ ರಾಜಕೀಯಕ್ಕೆ ಸುನಾಮಿ ಬರಲಿ, ಬಿರುಗಾಳಿ ಬರಲಿ, ಭೂಕಂಪವಾಗ್ಲಿ.. ನಾವೂ ಮುಂದೆ ಬರುವ ಚುನಾವಣೆಯಲ್ಲಿ ಸ್ಪರ್ಧಿಸಿಯೇ ಸಿದ್ಧ.‌ ಹಿಂದುತ್ವ ಮತ್ತು ಕೇಸರಿಯ ಗೌರವಕ್ಕೆ ಪುತ್ತಿಲ ಪರಿವಾರ ಯಾವತ್ತೂ ಸಿದ್ಧ ಎಂದು ಗುಡುಗಿದ್ದಾರೆ. 


ಕ್ಷಮೆ ಕೇಳುವ ಅವಶ್ಯಕತೆ ಇಲ್ಲ ; ಉಪಾಧ್ಯ


ಅರುಣ್ ಕುಮಾರ್ ಪುತ್ತಿಲ ಯಾರನ್ನೂ ನಾವು ಬೈದಿಲ್ಲ. ಹಾಗಾಗಿ ಯಾರಲ್ಲೂ ಕ್ಷಮೆ ಕೇಳುವ ಅವಶ್ಯಕತೆಯಿಲ್ಲ ಎಂದು ಪುತ್ತಿಲ ಪರಿವಾರದ ಮುಖಂಡ ಶ್ರೀಕೃಷ್ಣ ಉಪಾಧ್ಯಾಯ ಹೇಳಿದ್ದಾರೆ. ಮೂರು ದಿನಗಳೊಳಗೆ ಎಲ್ಲವೂ ಸರಿಯಾಗುವಂತೆ ನೋಡಿಕೊಳ್ಳಿ. ಎಲ್ಲವೂ ಸರಿಯಾಗುವ ಶಕ್ತಿಯನ್ನು ಈ ತುಳುವ ಮಣ್ಣು ನೀಡಲಿ. ಅರುಣ್‌ ಪುತ್ತಿಲ ಬಿಜೆಪಿ ಸೇರ್ಪಡೆಗೆ ಪುತ್ತೂರು ಬಿಜೆಪಿಯ ಸ್ಥಾಪಿತ ಬೆರಳೆಣಿಕೆಯ ಜನರ ವಿರೋಧವಿದೆ. ಆದರೆ ಅರುಣ್‌ ಪುತ್ತಿಲ ಹಿಂದೆ ಬಹುದೊಡ್ಡ ಪಡೆ ಇದೆ. ಆ ಕಾರಣದಿಂದಲೇ ಪುತ್ತೂರಿನ ಚುನಾವಣೆ ಹೈಲೈಟ್‌ ಆಗಿದೆ. ಪುತ್ತಿಲ ಒಳಗೆ ಬಂದ್ರೆ ನಮ್ಮ ಕುರ್ಚಿಗೆ ಪೆಟ್ಟು ಬೀಳುತ್ತೆ ಎಂದು ನಾಲ್ಕು ಜನ ಮಾತ್ರ ಅಡ್ಡಿ ಬಿಟ್ರೆ 32000 ಜನರ ವಿರೋಧವೇ ಇಲ್ಲ ಎಂದರು.ವೇದಿಕೆಯಲ್ಲಿ ಪುತ್ತಿಲ ಪರಿವಾರದ ಸಲಹೆಗಾರ ಶಶಾಂಕ ಕೊಟೇಚಾ, ಅಧ್ಯಕ್ಷ ಪ್ರಸನ್ನ ಮಾರ್ತ, ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಕಾನೂನು ಸಲಹೆಗಾರ ರಾಜೇಶ್ ಆರ್ಲಪದವು, ನಗರ ಅಧ್ಯಕ್ಷ ಅನಿಲ್‌ ತೆಂಕಿಲ ಪಸ್ಥಿತರಿದ್ದರು. ರವಿ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನವೀನ್ ರೈ ಪಂಜಳ ಕಾರ್ಯಕ್ರಮ ನಿರೂಪಿಸಿದರು.

ಬಂಟ್ವಾಳ : ಬಾತ್ ರೂಂ ಕಿಂಡಿಯಿಂದ ಯುವತಿಯ ಸ್ನಾನದ ವಿಡಿಯೋ ರೆಕಾರ್ಡ್ ಮಾಡಿ ಎಸ್ಕೇಪ್ ಆದ ಆಸಾಮಿ!

Posted by Vidyamaana on 2023-08-29 09:47:48 |

Share: | | | | |


ಬಂಟ್ವಾಳ : ಬಾತ್ ರೂಂ ಕಿಂಡಿಯಿಂದ ಯುವತಿಯ ಸ್ನಾನದ ವಿಡಿಯೋ ರೆಕಾರ್ಡ್ ಮಾಡಿ ಎಸ್ಕೇಪ್ ಆದ ಆಸಾಮಿ!

ಬಂಟ್ವಾಳ: ಯುವತಿಯೊಬ್ಬಳು ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಈ ದೃಶ್ಯವನ್ನು ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿ ಬಳಿಕ ಅಲ್ಲಿಂದ ಎಸ್ಕೇಪ್ ಆಗಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಜಕ್ರಿಬೆಟ್ಟು ಎಂಬಲ್ಲಿನ ಹಂಚಿನ ಮನೆಯೊಳಗೆ ಬಚ್ಚಲು ಕೋಣೆಯಲ್ಲಿ ರಾತ್ರಿ ವೇಳೆ ಯುವತಿಯೋರ್ವಳು ಸ್ನಾನ ಮಾಡುತ್ತಿರುವ ವೇಳೆ ಅಪರಿಚಿತ ವ್ಯಕ್ತಿಯೋರ್ವ ಗೋಡೆಯ ಕಿಂಡಿ ನಡುವಿನಿಂದ ಮೊಬೈಲ್ ಮೂಲಕ ಸ್ನಾನದ ದೃಶ್ಯಗಳನ್ನು ರೆಕಾರ್ಡ್ ಮಾಡುತ್ತಿದ್ದ.

ಇದನ್ನು ಗಮನಿಸಿದ ಯುವತಿ ಜೋರಾಗಿ ಬೊಬ್ಬೆ ಹಾಕಿದ್ದು, ತಕ್ಷಣವೇ ಅಪರಿಚಿತ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

 ಯುವತಿಯ ಬೊಬ್ಬೆ ಕೇಳಿ ಇವಳ ತಾಯಿ ಹಾಗೂ ನೆರೆಮನೆಯವರು ಓಡಿ ಬಂದು ವಿಷಯ ಕೇಳಿ, ಓಡಿಹೋದ ವ್ಯಕ್ತಿಯ ಹುಡುಕಾಟ ನಡೆಸಿದ್ದಾರೆ ಆದರೆ, ಅಂದು ಆತನ ಪತ್ತೆಯಾಗಿರಲಿಲ್ಲ.

ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

 ಆರೋಪಿ ವಶಕ್ಕೆ 

 ಬಚ್ಚಲು ಕೋಣೆಯಲ್ಲಿ ಸ್ನಾನ ಮಾಡುತ್ತಿದ್ದ ಯುವತಿಯ ವಿಡಿಯೋ ಚಿತ್ರೀಕರಣ ಮಾಡಿದ ಆರೋಪಿ ಜಗದೀಪ್ ಆಚಾರ್ಯ ಎಂಬಾತನನ್ನು ಬಂಟ್ವಾಳ ನಗರ ಪೋಲೀಸ್ ಠಾಣೆಯ ಎಸ್.ಐ. ರಾಮಕೃಷ್ಣ ನೇತೃತ್ವದ ತಂಡ ವಶಕ್ಕೆ ಪಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಗ್ರಾರ್ ನಿವಾಸಿಯಾಗಿರುವ ಆರೋಪಿಯನ್ನುಇದೀಗ  ಪೋಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

  ಘಟನೆ ಕುರಿತು ಪ್ರಕರಣ ದಾಖಲಾದ ಬೆನ್ನಲ್ಲೆ ಪೋಲೀಸರು ಆರೋಪಿಯ ಪತ್ತೆಗೆ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಬಳಿಕ,  ಸಂಶಯದ ಮೇಲೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಈತ ಸತ್ಯ ಬಾಯಿಬಿಟ್ಟಿದ್ದಾನೆ ಎಂಬುದು ತಿಳಿದು ಬಂದಿದೆ.

ಇಷ್ಟು ದಿನ ಪಾಸಾಗ್ತಿತ್ತು ಇನ್ನು ಕಷ್ಟ - ವಿಧಾನಸೌಧದಲ್ಲಿ ನಕಲಿ ಪಾಸ್ ಗಳದ್ದೇ ಕಾರುಬಾರು

Posted by Vidyamaana on 2023-07-15 10:49:03 |

Share: | | | | |


ಇಷ್ಟು ದಿನ ಪಾಸಾಗ್ತಿತ್ತು ಇನ್ನು ಕಷ್ಟ - ವಿಧಾನಸೌಧದಲ್ಲಿ ನಕಲಿ ಪಾಸ್ ಗಳದ್ದೇ ಕಾರುಬಾರು

ಬೆಂಗಳೂರು: ಇತ್ತೀಚೆಗೆ ರಾಜ್ಯದ ಶಕ್ತಿ ಕೇಂದ್ರ ವಿಧಾನಸಭೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಶಾಸಕರ ಕುರ್ಚಿಯಲ್ಲಿ ಕುಳಿತ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ವಿಧಾನಸೌಧ ಪ್ರವೇಶ ದ್ವಾರದಲ್ಲಿ ಪೊಲೀಸರು ತಪಾಸಣೆ ಚುರುಕುಗೊಳಿಸಿದ್ದು, ಕಳೆದ ನಾಲ್ಕೈದು ದಿನಗಳಲ್ಲಿ 250ಕ್ಕೂ ಹೆಚ್ಚು ನಕಲಿ ಪಾಸ್‌ ಗಳು ಪತ್ತೆಯಾಗಿವೆ. ಅಲ್ಲದೆ, ಶಾಸಕರು, ಸಚಿವರ ಹೆಸರಿನ ಪಾಸ್‌ಗಳನ್ನು ಕಲರ್‌ ಜೆರಾಕ್ಸ್‌ ಮಾಡಿಸಿ ಭದ್ರತಾ ಸಿಬ್ಬಂದಿಗೆ ಯಾಮಾರಿಸುತ್ತಿದ್ದ ಸಂಚು ಬಹಿರಂಗಗೊಂಡಿದೆ.ವಿಧಾನಸೌಧ ಪ್ರವೇಶಕ್ಕೆ ಶಾಸಕರು, ಸಚಿವರಿಗೆ ಗುರುತಿನ ಚೀಟಿ ನೀಡಲಾಗುತ್ತದೆ. ಅದೇ ರೀತಿ ಅವರ ಸಿಬ್ಬಂದಿ ಮತ್ತು ವಾಹನಗಳಿಗೂ ಅಧಿಕೃತ ಪಾಸ್‌ ನೀಡಲಾಗುತ್ತದೆ. ಅದನ್ನು ದುರ್ಬಳಕೆ ಮಾಡಿಕೊಳ್ಳುವ ವಂಚಕರು, ಈ ಪಾಸ್‌ಗಳನ್ನು ದುರ್ಬಳಕೆ ಮಾಡಿಕೊಂಡು ಕಲರ್‌ ಜೆರಾಕ್ಸ್‌ ಮಾಡಿ ಒಳ ಪ್ರವೇಶಿಸುತ್ತಿರುವುದು ಪತ್ತೆಯಾಗಿದೆ. ಹೀಗೆ ಕಳೆದ 4-5 ದಿನಗಳಲ್ಲಿ ಸುಮಾರು 300 ಮಂದಿ ಈ ರೀತಿ ನಕಲಿ ಪಾಸ್‌ಗಳನ್ನು ಬಳಸಿಕೊಂಡು ವಿಧಾನಸೌಧ ಪ್ರವೇಶಿಸಿರುವುದು ಪತ್ತೆಯಾಗಿದೆ.ನಕಲಿ ಪಾಸ್‌ಗಳು ಮಾತ್ರವಲ್ಲ, ಅವಧಿ ಮೀರಿದ ಪಾಸ್‌ಗಳು ತಪಾಸಣೆ ವೇಳೆ ಸಿಕ್ಕಿವೆ. ಈ ಬಗ್ಗೆ ಸರ್ಕಾರದ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಜನಪ್ರತಿನಿಧಿಗಳು ಮತ್ತು ಅವರ ಸಿಬ್ಬಂದಿಗೂ ಮಾಹಿತಿ ನೀಡಿ ನಕಲಿ ಪಾಸ್‌ಗಳ ಕಡಿವಾಣಕ್ಕೆ ಸಹಾಯ ನೀಡುವಂತೆ ಕೋರಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.


ಜುಲೈ 10ರಂದು ಬಜೆಟ್‌ ಮಂಡನೆ ವೇಳೆ ತಿಪ್ಪೇರುದ್ರಸ್ವಾಮಿ ಎಂಬಾತ ದೇವದುರ್ಗ ಶಾಸಕಿ ಕೆರೆಮ್ಮ ಸ್ಥಾನದಲ್ಲಿ ಕೆಲ ಹೊತ್ತು ಕುಳಿತುಕೊಂಡಿರುವುದು ಪತ್ತೆಯಾಗಿತ್ತು. ಹೀಗಾಗಿ ವಿಧಾನಸೌಧ ಭದ್ರತಾ ಉಸ್ತುವಾರಿ ವಹಿಸಿಕೊಂಡಿದ್ದ ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಡಾ ಎಸ್‌ .ಡಿ.ಶರಣಪ್ಪ, ಎಲ್ಲ ಪ್ರವೇಶ ದ್ವಾರದಲ್ಲಿ ತಪಾಸಣೆ ಬಿಗಿಗೊಳಿಸಿದರು.



ಮತ್ತೂಂದೆಡೆ ಅದೇ ದಿನ ಜು. 10ರಂದು ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಉದ್ಯೋಗಿ ಬ್ಯಾಗಿನಲ್ಲಿ ಚಾಕು ಇರುವುದು ಪತ್ತೆಯಾಗಿದ್ದು, ಪೊಲೀಸ್‌ ವಿಚಾರಣೆ ವೇಳೆ ಕ್ರಿಮಿನಲ್‌ ಉದ್ದೇಶವಿಲ್ಲದಿರುವುದು ಕಂಡು ಬಂದಿದ್ದರಿಂದ ಮುಚ್ಚಳಿಕೆ ಪತ್ರ ಬರೆಸಿ ಪೊಲೀಸರು ಬಿಟ್ಟು ಕಳುಹಿಸಿದ್ದರು. ಹೀಗಾಗಿ ವಿಧಾನಸೌಧಕ್ಕೆ ಪ್ರವೇಶಿಸುವ ಎಲ್ಲಾ ಗೇಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ತಪಾಸಣೆ ಬಿಗಿಗೊಳಿಸುವಂತೆ ಸೂಚಿಸಲಾಗಿದೆ.ಅಲ್ಲದೆ, ಬ್ಯಾಗ್‌ ಸೇರಿ ಇತರೆ ವಸ್ತುಗಳನ್ನು ಇಟ್ಟುಕೊಂಡು ಅನುಮಾನಸ್ಪದವಾಗಿ ಬರುವ ಎಲ್ಲರನ್ನು ಲೋಹಪರಿಶೋಧಕ ಯಂತ್ರಗಳ ಪರೀಕ್ಷೆ ಒಳಪಡಿಸಬೇಕು. ಅಲ್ಲದೆ, ಬ್ಯಾಗ್‌ಗಳನ್ನು ಕಡ್ಡಾಯವಾಗಿ ಸ್ಕಾನಿಂಗ್‌ಗೆ ಒಳಪಡಿಸಬೇಕು. ಅಧಿಕೃತ ಗುರುತಿನ ಚೀಟಿ ಅಥವಾ ಪಾಸ್‌ ಇದ್ದರೆ ಮಾತ್ರ ಒಳಪ್ರವೇಶಿಸಲು ಬಿಡಬೇಕು ಎಂದು ಮಾರ್ಷಲ್‌ಗ‌ಳಿಗೂ ಖಡಕ್‌ ಎಚ್ಚರಿಕೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.


ಈ ಕುರಿತು ಮಾಹಿತಿ ನೀಡಿದ ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಡಾ ಎಸ್‌.ಡಿ.ಶರಣಪ್ಪ, ಮುಂದಿನ ದಿನಗಳಲ್ಲಿ ನಕಲಿ ಪಾಸ್‌ ಬಳಸಿದರೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು

Recent News


Leave a Comment: