ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಹಂಚು ಸರಿಸಿ ಒಳ ನುಗ್ಗಿದ ಗಾಂಜಾ ವ್ಯಸನಿ

Posted by Vidyamaana on 2023-10-27 17:03:21 |

Share: | | | | |


ಹಂಚು ಸರಿಸಿ ಒಳ ನುಗ್ಗಿದ ಗಾಂಜಾ ವ್ಯಸನಿ

ಉಳ್ಳಾಲ: ಮಧ್ಯರಾತ್ರಿ ಮನೆಯ ಮೇಲ್ಛಾವಣಿಯ ಹಂಚು ಸರಿಸಿ ಒಳನುಗ್ಗಿದ ಗಾಂಜಾ ವ್ಯಸನಿಯೋರ್ವ ಮಂಚದಲ್ಲಿ ಇಬ್ಬರು ಹೆಣ್ಮಕ್ಕಳೊಂದಿಗೆ ಮಲಗಿದ್ದ ಮಹಿಳೆಗೆ ಲೈಂಗಿಕ ಕೀಟಲೆ ಕೊಟ್ಟಿದ್ದು ಕೂಡಲೇ ಎಚ್ಚೆತ್ತ ಮನೆಮಂದಿಯ ಚೀರಾಟಕ್ಕೆ ಆಗಂತುಕ ಮೊಬೈಲನ್ನೇ ಬಿಟ್ಟೋಡಿದ ಘಟನೆ ಹರೇಕಳ ಗ್ರಾಮದ ರಾಜಗುಡ್ಡೆ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.


ಹರೇಕಳ ಗ್ರಾಮದ ಕೊಜಪಾಡಿ ನಿವಾಸಿ ನೌಫಾಲ್(32)ಎಂಬಾತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದು ಅತ್ಯಾಚಾರ ಯತ್ನ ಆರೋಪದಲ್ಲಿ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆ ಹರೇಕಳದ ರಾಜಗುಡ್ಡೆಯ ಬಾಡಿಗೆ ಮನೆಯೊಂದರಲ್ಲಿ ಗಂಡ, ಇಬ್ಬರು ಪುತ್ರಿಯರೊಂದಿಗೆ ವಾಸವಿದ್ದಾರೆ. ಗಂಡ ರಾತ್ರಿ ಪಾಳಿ ಸೆಕ್ಯುರಿಟಿ ಗಾರ್ಡ್ ವೃತ್ತಿಗೆ ತೆರಳಿದ್ದು ಮನೆಯೊಳಗೆ ಸಂತ್ರಸ್ತ ಮಹಿಳೆ ಇಬ್ಬರು ಹೆಣ್ಮಕ್ಕಳೊಂದಿಗೆ ಮಲಗಿದ್ದ ವೇಳೆ ಮನೆಯೊಳಗೆ ನುಗ್ಗಿದ ನೌಫಾಲ್ ಮಂಚದ ಕೆಳಗೆ ಮಲಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಎಚ್ಚೆತ್ತ ಮಹಿಳೆ ಮತ್ತು ಮಕ್ಕಳು ಜೋರಾಗಿ ಚೀರಾಡಿದ್ದು ಗಲಿಬಿಲಿಗೊಂಡ ನೌಫಾಲ್ ತನ್ನ ಮೊಬೈಲನ್ನೇ ಬಿಟ್ಟು ಓಡಿದ್ದಾನೆ. ಮಧ್ಯರಾತ್ರಿಯೇ ಘಟನಾ ಸ್ಥಳದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಜಮಾವಣೆಗೊಂಡಿದ್ದು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಗುರುವಾರ ಆರೋಪಿ ನೌಫಾಲನ್ನ ಬಂಧಿಸಿದ್ದಾರೆ.

ರಸ್ತೆ ಬದಿಯ ಮಾವು,ಹಲಸು ಇನ್ನಿತರ ಹಣ್ಣುಗಳ ಏಲಂ ರದ್ದು: ಸರಕಾರದ ಆದೇಶ ಕೆಡಿಪಿ ಸಭೆಯಲ್ಲಿ ತಿಳಿಸಿದ ಉಸ್ತುವಾರಿ ಸಚಿವರು

Posted by Vidyamaana on 2024-07-06 21:25:39 |

Share: | | | | |


ರಸ್ತೆ ಬದಿಯ ಮಾವು,ಹಲಸು ಇನ್ನಿತರ ಹಣ್ಣುಗಳ ಏಲಂ ರದ್ದು: ಸರಕಾರದ ಆದೇಶ ಕೆಡಿಪಿ ಸಭೆಯಲ್ಲಿ ತಿಳಿಸಿದ ಉಸ್ತುವಾರಿ ಸಚಿವರು

ಮಂಗಳೂರು: ರಸ್ತೆ ಬದಿಗಳಲ್ಲಿರುವ ಮಾವು, ಹಲಸು ಹಾಗೂ ಇನ್ನಿತರ ಹಣ್ಣಿನ‌ಮರಗಳ ಕಾಯಿಗಳನ್ನು ಏಲಂ ಮಾಡುವ ಪ್ರಕ್ರಿಯೆಯನ್ನು ಜಿಲ್ಲಾಡಳಿತ ರದ್ದು ಮಾಡಿದ್ದು‌ಮುಂದೆ ಸಾರ್ವಜನಿಕ ಸ್ಥಳದಲ್ಲಿರುವ ಮರಗಳ ಹಣ್ಣನ್ನು ಏಲಂ ಮಾಡುವಂತಿಲ್ಲ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಜಿಪಂ‌ಸಭಾಂಗಣದಲ್ಲಿ ನಡೆದ ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಅಶೋಕ್ ರೈ ರಸ್ತೆ ಬದಿಯಲ್ಲಿರುವ ಹಣ್ಣಿನ‌ಮರಗಳ ಹಣ್ಣುಗಳನ್ನು ಚಿಲ್ಲರೆ ಹಣಕ್ಕಾಗಿ ಏಲಂ ಕರೆಯಲಾಗುತ್ತದೆ. ಏಲಂ ಪಡೆದವರು ಹಣ್ಣು ಕೊಯ್ಯುವ ವೇಳೆಗೆ ಮರಕ್ಕೂ ಹಾನಿ ಮಾಡುತ್ತಾರೆ. ಈ ಹಣ್ಣನ್ನು ಹಾಗೇ ಉಳಿಸಿಕೊಂಡಲ್ಲಿ ಪ್ರಾಣಿ, ಪಕ್ಷಿ ಹಾಗೂ ಮನುಷ್ಯರಿಗೂ ತಿನ್ನಬಹುದು ಯಾವುದೇ ಕಾರಣಕ್ಕೂ ಏಲಂ ಮಾಡದಂತೆ ವ್ಯವಸ್ಥೆ ಆಗಬೇಕು ಎಂದು ಶಾಸಕರು ಮನವಿ ಮಾಡಿದರು.‌ 

ಇದಕ್ಕೆ ಉತ್ತರ ನೀಡಿದ ಸಚಿವ ದಿನೇಶ್ ಗುಂಡೂರಾವ್ ಜಿಲ್ಲೆಯಲ್ಲಿ‌ಇನ್ನುಮುಂದೆ ಎಲ್ಲಿಯೂ ರಸ್ತೆ ಬದಿಯಲ್ಲಿರುವ ಹಣ್ಣಿನ ಮರಗಳ ಹಣ್ಣನ್ನು ಏಲಂ ನಡೆಸಬಾರದು, ಈ ಬಗ್ಗೆ ಸ್ಥಳೀಯ ಸಂಸ್ಥೆಗೆ ಆದೇಶ ಹೊರಡಿಸಿ ಎಂದು ಜಿಲ್ಲಾಧಿಕಾರಿಗೆ ಸಚಿವರು ಸೂಚನೆ ನೀಡಿದರು. ಮಾವು ಏಲ‌ಂ ಮಾಎದಂತೆ ಕಳೆದ ಬಾರಿ ಶಾಸಕ ಅಶೋಕ್ ರೈ ತಡೆದದ್ದನ್ನು ಇಲ್ಲಿ ಸ್ಮರಿಸಬಹುದು.

ನಿಲ್ಸಿ..- ಮದುವೆ ಸಮಾರಂಭಕ್ಕೆ ದಿಡೀರ್ ಎಂಟ್ರಿ ಕೊಟ್ಟ ಯುವತಿ

Posted by Vidyamaana on 2024-01-05 16:39:03 |

Share: | | | | |


ನಿಲ್ಸಿ..- ಮದುವೆ ಸಮಾರಂಭಕ್ಕೆ ದಿಡೀರ್ ಎಂಟ್ರಿ ಕೊಟ್ಟ ಯುವತಿ

ಮಂಗಳೂರು: ಮದುವೆ ನಡೆಯುತ್ತಿದ್ದ ವೇಳೆ ಏಕಾಏಕಿ ಕಲ್ಯಾಣ ಮಂಟಪಕ್ಕೆ (Wedding Function) ಬಂದ ಯುವತಿಯೊಬ್ಬಳು ವರ ತನಗೆ ಮದುವೆಯಾಗುವುದಾಗಿ ಮೋಸ ಮಾಡಿದ್ದಾನೆ ಎಂದು ಜಗಳವಾಡಿದ ಘಟನೆ ಮಂಗಳೂರಿನಲ್ಲಿ (Mangaluru) ನಡೆದಿದೆ.ಕಲ್ಯಾಣ ಮಂಟಪಕ್ಕೆ ಬಂದು ಗಲಾಟೆ ಮಾಡಿದ ಯುವತಿಯನ್ನು ಇಂದು ಮದುವೆಯಾಗುತ್ತಿರುವ ವರನ ಮಾಜಿ ಪ್ರೇಯಸಿ ಎಂದು ಹೇಳಲಾಗ್ತಿದ್ದು, ತನ್ನನ್ನು ಬಿಟ್ಟು ಬೇರೊಬ್ಬ ಯುವತಿಯ ಜೊತೆಗೆ ಮದುವೆಯಾಗುತ್ತಿರುವುದನ್ನು ಪ್ರಶ್ನಿಸಿ ಆಕೆ ಗಲಾಟೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.ಅಂದ ಹಾಗೆ ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಬೀರಿ ಬಳಿ ನಡೆದಿದ್ದು, ಕೇರಳ ಮೂಲದ ಅಕ್ಷಯ್ ಎಂಬಾತನ ಮದುವೆ ಮಂಗಳೂರು ಮೂಲದ ಯುವತಿ ಜೊತೆ ನಡೆಯುತ್ತಿದ್ದಾಗ ಮೈಸೂರು ಮೂಲದ ಮಾಜಿ ಪ್ರೇಯಸಿ ಕಲ್ಯಾಣ ಮಂಟಪಕ್ಕೆ ಎಂಟ್ರಿಕೊಟ್ಟು ತನಗೆ ಅನ್ಯಾಯವಾಗಿದೆ, ನ್ಯಾಯ ಬೇಕು ಎಂದು ಆಗ್ರಹ ಮಾಡಿದ್ದಾಳೆ.ಕೇರಳದ ಕೊಝಿಕ್ಕೋಡ್ ಮೂಲದ ಅಕ್ಷಯ್ ಒಂದೂವರೆ ವರ್ಷದ ಹಿಂದೆ ಮೈಸೂರಿನ ಯುವತಿಯನ್ನು ಶಾದಿ ಡಾಟ್ ಕಾಮ್ ಮೂಲಕ ಪರಿಚಯ ಮಾಡಿಕೊಂಡಿದ್ದನು. ನಂತರ ವಿವಾಹವಾಗುವುದಾಗಿ ನಂಬಿಸಿ ಆಕೆಯನ್ನು ಅಲ್ಲಿಲ್ಲಿ ಸುತ್ತಾಡಿಸಿ ದೈಹಿಕ ಸಂಪರ್ಕ ನಡೆಸಿದ್ದಾನೆ. ನಂತರ ಆತ ವರಸೆ ಬದಲಾಯಿಸಿದ್ದು, ಆಕೆಯನ್ನು ಬಿಟ್ಟು ಬೇರೊಬ್ಬ ಯುವತಿಯ ಜೊತೆ ಮದುವೆಗೆ ಮುಂದಾಗಿದ್ದಾನೆ.ಅಂದಹಾಗೆ ಸಂತ್ರಸ್ತ ಯುವತಿ ಕಳೆದ ಡಿಸೆಂಬರ್ 26 ರಂದು ಅಕ್ಷಯ್ ವಿರುದ್ಧ ಕೇರಳದ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ಪ್ರಕರಣ ಸಂಬಂಧ ಅರೋಪಿ ಅಕ್ಷಯ್​ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿತ್ತು. ಈ ನಡುವೆ ಮಂಗಳೂರನ ಯುವತಿ ಜೊತೆ ಅಕ್ಷಯ್​ಗೆ ವಿವಾಹ ನಿಶ್ಚಯವಾಗಿದೆ.ಅಕ್ಷಯ್‌ಗೆ ಕರ್ನಾಟಕ-ಕೇರಳ ಗಡಿಭಾಗ ಬೀರಿಯ ಖಾಸಗಿ ಹಾಲ್​ನಲ್ಲಿ ಮದುವೆ ನಡೆಯುತ್ತಿರುವ ವಿಚಾರ ತಿಳಿದ ಬೆನ್ನಲ್ಲೇ ಉಳ್ಳಾಲ ಪೊಲೀಸರೊಂದಿಗೆ ಹಾಲ್‌ಗೆ ಆಗಮಿಸಿದ ಯುವತಿ ಕಲ್ಯಾಣ ಮಂಟಪದ ಮುಂಭಾಗದಲ್ಲಿ ಹೈಡ್ರಾಮ ನಡೆಸಿದ್ದಾಳೆ. ನಂತರ ಪೊಲೀಸರೇ ಆಕೆಯನ್ನು ಹಾಲ್ ಬಳಿಯಿಂದ ಕೇರಳದ ಮಂಜೇಶ್ವರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.ಈ


ಮಧ್ಯೆ, ಆರೋಪಿಯನ್ನು ಅರೆಸ್ಟ್ ಮಾಡಿ ಅಂದರೆ ನನ್ನನ್ನೇ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಯುವತಿ ಆಕ್ರೋಶ ಹೊರಹಾಕಿದ್ದಾಳೆ. ನಂತರ ಅಕ್ಷಯ್ ಮಂಗಳೂರು ಯುವತಿಗೆ ತಾಳಿ ಕಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಪಕ್ಷದ ಸದಸ್ಯತ್ವ ಅಭಿಯಾನದ ಕಾರ್ಯಕ್ರಮದಡಿ ಕಾಪಿಕಾಡ್ ಮನೆಗೆ ಭೇಟಿ ನೀಡಿದ್ದು ನಿಜ : ಸತೀಶ್ ಕುಂಪಲ ಸ್ಪಷ್ಟನೆ

Posted by Vidyamaana on 2024-09-07 08:12:14 |

Share: | | | | |


ಪಕ್ಷದ ಸದಸ್ಯತ್ವ ಅಭಿಯಾನದ ಕಾರ್ಯಕ್ರಮದಡಿ ಕಾಪಿಕಾಡ್ ಮನೆಗೆ ಭೇಟಿ ನೀಡಿದ್ದು ನಿಜ : ಸತೀಶ್ ಕುಂಪಲ ಸ್ಪಷ್ಟನೆ

ಪುತ್ತೂರು  : ತುಳು ಚಿತ್ರನಟ,ನಿರ್ದೇಶಕ ದೇವದಾಸ್ ಕಾಪಿಕಾಡರ ಬಿಜೆಪಿ ಪಕ್ಷ ಸೇರ್ಪಡೆ ವಿವಾದ ಕುರಿತು ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರು ಸ್ಪಷ್ಟನೆ ನೀಡಿದ್ದು ಪಕ್ಷದ ಸದಸ್ಯತ್ವ ಅಭಿಯಾನದ ಕಾರ್ಯಕ್ರಮದಡಿ ದೇವದಾಸ್ ಕಾಪಿಕಾಡ್ ಮನೆಗೆ ಭೇಟಿ ನೀಡಿದ್ದು ನಿಜ ಎಂದಿದ್ದಾರೆ.

ಮಾದ್ಯಮಗಳಿಗೆ ಈ ಬಗ್ಗೆ ಹೇಳಿಕೆ ನೀಡಿದ ಅವರು ಪಕ್ಷದ ಸದಸ್ಯತ್ವ ಅಭಿಯಾನದ ಕಾರ್ಯಕ್ರಮದಡಿ ದೇವದಾಸ್ ಕಾಪಿಕಾಡ್ ಮನೆಗೆ ಭೇಟಿ ನೀಡಿದ್ದು ನಿಜ. ಪಕ್ಷದ ಸದಸ್ಯನಾಗಿ ಮಾಡುವ ಉದ್ಧೇಶದಿಂದ ಅವರ ಮನೆಗೆ ಹಿರಿಯರು ಭೇಟಿ ನೀಡಿದ್ದರು. ಸದಸ್ಯತ್ವ ಅಭಿಯಾನದ ವಿಚಾರದಲ್ಲಿ ಅವರು ಪೂರಕವಾಗಿ ಸ್ಪಂದಿಸಿದ್ದರು. ಪಕ್ಷಾತೀತವಾಗಿರುವ ಸೆಲೆಬ್ರೆಟಿಗಳ ಮನೆಗೆ ಪಕ್ಷದ ಮುಖಂಡರು ಭೇಟಿಯಾಗೋದು ಸಾಮಾನ್ಯವಾಗಿದ್ದು ಅವರು ಪಕ್ಷದ ಕಾರ್ಯಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುತ್ತಾರೆ ಎಂದಲ್ಲ.

ಪಾಟ್ರಕೋಡಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾ ಕಾರ್ಯಕ್ರಮ

Posted by Vidyamaana on 2023-10-18 17:05:29 |

Share: | | | | |


ಪಾಟ್ರಕೋಡಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾ ಕಾರ್ಯಕ್ರಮ

ಪುತ್ತೂರು: ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲಿ ೨ ರಿಂದ ೩ ಸಾವಿರ ಉದ್ಯೋಗ ಸೃಷ್ಟಿ ಮಾಡುವ ಗುರಿಯನ್ನು ಹೊಂದಿದ್ದು ಇದಕ್ಕಾಗಿ ಹಲವು ಯೋಜನೆಗಳನ್ನು ಇಲ್ಲಿ ಜ್ಯಾರಿ ಮಾಡುವ ಆಲೋಚನೆಯಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ಪಾಟ್ರಕೋಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.


ಬಹುಗ್ರಾಮ ಕುಡಿಯುವ ನೀರಿನ ಯೋಜನಯಡಿ ಕೆದಿಲ ಗ್ರಾಮದಲ್ಲಿ ೩ ಕೋಟಿ ಲೀಟರ್ ಸಾಮರ್ಥ್ಯದ ಬೃಹತ್ ನೀರಿನ ಟ್ಯಾಂಕ್ ನಿರ್ಮಾಣವಾಗಲಿದೆ. ಈ ಯೋಜನೆಯಡಿ ಸುಮಾರು ೫೦೦ ಮಿಕ್ಕಿ ಮಂದಿ ಸ್ಥಳೀಯರಿಗೆ ಉದ್ಯೋಗ ಲಭಿಸಲಿದೆ,ಕೊಯಿಲ ಜಾನುವಾರು ಕೇಂದ್ರಕ್ಕೆ ಪುನಶ್ಚೇತನ ದೊರೆಯಲಿದ್ದು ಅಲ್ಲಿ ಸುಮಾರು ೭೦೦ ಮಂದಿಗೆ ಉದ್ಯೋಗ ಮತ್ತು ಕೆಎಂಎಫ್ ನ್ನು ಪುತ್ತೂರಿಗೆ ಸ್ಥಳಾಂತರ ಮಾಡುವುದರಿಂದ ಸುಮಾರು ೧೦೦೦ ಮಂದಿಗೆ ಉದ್ಯೋಗ ಲಭಿಸಲಿದೆ. ಸ್ಥಳೀಯರನ್ನೇ ಉದ್ಯೋಗಕ್ಕೆ ಸೇರಿಸಿಕೊಳ್ಳುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಶಾಸಕರು ಹೇಳಿದರು.


 


ಪುತ್ತೂರಿಗೆ ಹಣ ಬಂದು ಬೀಳಬೇಕು


ಪುತ್ತೂರು ಅಭಿವೃದ್ದಿಯಾಗಬೇಕಾದರೆ ಒಂದಷ್ಟು ಹಣ ಇಲ್ಲಿ ಬೀಳಬೇಕು, ಉದ್ಯಮಗಳು ಆರಂಭವಾದರೆ ಮಾತ್ರ ಇಲ್ಲಿ ಎಲ್ಲರಿಗೂ ವ್ಯಾಪಾರ , ವ್ಯವಹಾರವಾಗುತ್ತದೆ ಇಲ್ಲದೇ ಹೋದರೆ ಕೇವಲ ಅಡಿಕೆ ಮಾರಿದ ಹಣ ಮಾತ್ರ ಇಲ್ಲಿ ಚಲಾವಣೆಯಲ್ಲಿರುತ್ತದೆ ಎಂದು ಹೇಳಿದ ಶಾಸಕರು ಪುತ್ತೂರಿನ ಯುವಕ, ಯುವತಿಯರಿಗೆ ಉದ್ಯೋಗ ಲಭಿಸಿದರೆ ಅವರ ಕುಟುಂಬಕ್ಕೂ ಆಧಾರವಾಗುತ್ತದೆ ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಯಾವುದೇ ಉದ್ಯಮ ಆರಂಭವಾಗುವುದಾದರೂ ಅದಕ್ಕೆ ನನ್ನ ಪೂರ್ಣ ಬೆಂಬಲ ಇದೆ ಎಂದು ಹೇಳಿದರು.ಪುತ್ತೂರಿನ ಜನತೆ ನೆಮ್ಮದಿಯಿಂದ ಇರಬೇಕೆಂಬುದೇ ನನ್ನ ಆಶಯವಾಗಿದೆ ಎಂದು ಶಾಸಕರು ಹೇಳಿದರು.


 


ಶಾಸಕರಿಗೆ ಇಷ್ಟು ಗಟ್ಸ್ ಇದೆ ಎಂದು ಗೊತ್ತೇ ಇರಲಿಲ್ಲ: ಹೇಮನಾಥ ಶೆಟ್ಟಿ


ಚುನಾವಣೆ ಸಂದರ್ಬದಲ್ಲಿ ಅಶೋಕ್ ರೈ ಬಗ್ಗೆ ಕೆಲವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದರು, ಶ್ರೀಮಂತ ವ್ಯಕ್ತಿ ಅದು ಹೇಗೆ ಬಡವರ ಕೆಲಸ ಮಾಡುತ್ತಾರೆ, ಬಡವರು ಇವರ ಬಳಿ ಹೇಗೆ ಹೋಗಬಹುದು ಅವರ ಸ್ಟೈಲೇ ಬೇರೆ ಇರಬಹುದು ಎಂದೆಲ್ಲಾ ಹೇಳಿದ್ದರು. ಆದರೆ ಶಾಸಕರಾದ ಬಳಿಕ ಕಟ್ಟಕಡೇಯ ಬಡ ವ್ಯಕ್ತಿ ಕೂಡಾ ಅವರ ಛೇಂಬರಿನಲ್ಲಿ ಕುಳಿತು ಸಮಸ್ಯೆ ಹೇಳುತ್ತಿದ್ದು, ಬಡವರ ಕೆಲಸ ಮಾಡುತ್ತಿದ್ದು ಅಶೋಕ್ ರೈಯವರಿಗೆ ಇಷ್ಟೊಂದು ಗಟ್ಸ್ ಇದೆ ಎಂದು ಶಾಸಕರಾದ ಬಳಿಕವೇ ಗೊತ್ತಾಗಿದ್ದು ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು. ಕುಡಿಯುವ ನೀರಿನ ಸಂಪರ್ಕಕ್ಕೆ ದಾಖಲೆ ಕೊಡಿ ಎಂದು ಕೇಳುವ ಪಂಚಾಯತ್ ಅಧಿಕಾರಿಗಳ ಬೆಂಡೆತ್ತಿದ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.


ಕೆದಿಲ ಕಾಂಗ್ರೆಸ್ ಭದ್ರಕೋಟೆ: ಡಾ. ರಾಜಾರಾಂ


ಕೆದಿಲ ಗ್ರಾಮದ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದೆ, ಕಳೇದ ಚುನಾವಣೆಯಲ್ಲಿ ೧೦೦೦ ಮತಗಳ ಲೀಡನ್ನು ತಂದುಕೊಟ್ಟಿದೆ, ಜಾತ್ಯಾತೀತ ಮನೋಭಾವದ ಕೆದಿಲ ಗ್ರಾಮಸ್ಥರನ್ನು ಅಭಿನಂದಿಸುವುದಾಗಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ ಹೇಳಿದರು. ಕೆದಿಲ ಗ್ರಾಮಕ್ಕೆ ಅನುದಾನದಲ್ಲಿ ಹೆಚ್ಚಿನ ಒತ್ತು ನೀಡುವುದಾಗಿ ಶಾಸಕರು ಹೇಳಿದ್ದಾರೆ. ಈಗಾಗಲೇ ಹಲವು ಕಾಮಗಾರಿಗಗಳ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ, ಹಿಂದೆಂದೂ ಕಣದ ರೀತಿಯಲ್ಲಿ ಈ ಗ್ರಾಮ ಅಭಿವೃದ್ದಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಕೆದಿಲ ಗ್ರಾಮಕ್ಕೆ ಶಾಸಕರು ವಿಶೇಷ ಒತ್ತುಕೊಡಬೇಕು: ಫಾರೂಕ್ ಬಾಯಬ್ಬೆ


ಕೆದಿಲದಲ್ಲಿ ಜಾತ್ಯಾತೀತ ಮನಸ್ಸುಗಳು ಒಂದಾಗಿದೆ, ಈ ಕಾರಣಕ್ಕೆ ಕಾಂಗ್ರೆಸ್‌ಗೆ ಪೂರ್ಣ ಪ್ರಮಾಣದ ಬೆಂಬಲ ದೊರಕಿದೆ. ನೂತನ ಶಾಸಕರು ಕೆದಿಲ ಗ್ರಾಮಕ್ಕೆ ವಿಶೇಷ ಒತ್ತು ನೀಡಿ ಅಭಿವೃದ್ದಿಗೆ ಹೆಚ್ಚಿನ ಅನುದಾನವನ್ನು ನೀಡಬೇಕೆಂದು ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷರಾದ ಫಾರೂಕ್ ಬಾಯಬ್ಬೆ ಆಗ್ರಹಿಸಿದರು. ಕಾಂಗ್ರೆಸ್ ಸರಕಾರ ಮತ್ತು ಕಾಂಗ್ರೆಸ್ ಶಾಸಕರ ಬಗ್ಗೆ ನಮಗೆ ಪೂರ್ಣ ವಿಶ್ವಾಸವಿದ್ದು ಈಗಾಗಲೇ ಹಲವು ಕಾಮಗಾರಿಗಳ ಬಗ್ಗೆ ಶಾಸಕರಲ್ಲಿ ಮಾತನಾಡಿದ್ದೇವೆ ಶಾಸಕರು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ ಎಂಬುದು ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಕೆದಿಲ ಗ್ರಾಮ ಅಭಿವೃದ್ದಿಯಾಗಲಿದೆ ಎಂದು ಹೇಳಿದರು.


ವೇದಿಕೆಯಲ್ಲಿ ಕೆದಿಲ ವಲಯ ತಾಪಂ ಮಾಜಿ ಸದಸ್ಯ ಆದಂಕುಂಞಿ ಹಾಜಿ, ಬ್ಲಾಕ್ ಉಪಾಧ್ಯಕ್ಷರಾದ ಉಮಾನಾಥ ಶೆಟ್ಟಿ ಪೆರ್ನೆ, ವಲಯ ಅಧ್ಯಕ್ಷರಾದ ಪ್ರವೀಣ್ ಚಂದ್ರ ಶೆಟ್ಟಿ, ಕೆದಿಲ ಗ್ರಾಪಂ ಅಧ್ಯಕ್ಷ ಹರೀಶ್ ಗ್ರಾಪಂ ಸದಸ್ಯರುಗಳಾದ ಬೀಪಾತುಮ್ಮ, ಸುಲೈಮಾನ್, ಹಬೀಬ್ ಮುಹ್ಸಿನ್, ಉನೈಸ್ ಗಡಿಯಾರ್, ಅಝೀಝ್ ಸತ್ತಿಕ್ಕಲ್, ಕೆದಿಲ ಸೊಸೈಟಿ ನಿರ್ದೆಶಕ ಜಿ ಮಹಮ್ಮದ್, ಪಾಟ್ರಕೋಡಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಶ್ರಫ್ ಉಪಸ್ಥಿತರಿದ್ದರು.


ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷರಾದ ಫಾರೂಕ್ ಬಾಯಬ್ಬೆ ಸ್ವಾಗತಿಸಿದರು. ಬೂತ್ ಅಧ್ಯಕ್ಷ ರಝಾಕ್ ವಂದಿಸಿದರು. ಶರೀಫ್ ಕೆ ಎಸ್ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು.

ನಿಲ್ಲಿಸಿದ ಕಾರು ಫುಲ್ ಶೇಕಿಂಗ್ ಹತ್ತಿರ ಹೋಗಿ ನೋಡಿದವರಿಗೆ ಶಾಕಿಂಗ್ ಈ ನ್ಯೂಸ್ ಫುಲ್ ಇಂಟ್ರೆಸ್ಟಿಂಗ್

Posted by Vidyamaana on 2024-08-07 16:22:13 |

Share: | | | | |


ನಿಲ್ಲಿಸಿದ ಕಾರು ಫುಲ್ ಶೇಕಿಂಗ್  ಹತ್ತಿರ ಹೋಗಿ ನೋಡಿದವರಿಗೆ ಶಾಕಿಂಗ್ ಈ ನ್ಯೂಸ್ ಫುಲ್ ಇಂಟ್ರೆಸ್ಟಿಂಗ್

ಉಡುಪಿ : ನಗರದಲ್ಲಿ ಹಾಡ ಹಗಲಲ್ಲೇ ಕಾರಿನೊಳಗೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಜೋಡಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದ ಬಳಿಕ ಸ್ಥಳದಿಂದ ಪರಾರಿಯಾದ ಘಟನೆ ಬುಧವಾರ (ಆಗಸ್ಟ್ 7) ರಂದು ನಡೆದಿದೆ.

ಕವಿ ಮುದ್ದಣ ಮಾರ್ಗದಿಂದ ಚಿತ್ತರಂಜನ್ ಸರ್ಕಲ್ ಸಂಪರ್ಕಿಸುವ ರಸ್ತೆಯ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಎದುರು, ಕಾರು ನಿಲುಗಡೆಗೊಳಿಸಿ ಒಳಭಾಗದಲ್ಲಿ ಹಾಡ ಹಗಲಲ್ಲೇ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಯುವಕ ಮತ್ತು ಯುವತಿಯ ಜೋಡಿ ಕಾರನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

Recent News


Leave a Comment: