ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಸುದ್ದಿಗಳು News

Posted by vidyamaana on 2024-07-24 18:06:21 | Last Updated by Vidyamaana on 2024-07-24 18:06:21

Share: | | | | |


ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಕಾರವಾರ: ಉತ್ತರ ಕನ್ನಡದ ಶಿರೂರಿನ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಕೋಝಿಕ್ಕೋಡ್ ಮೂಲದ ಅರ್ಜುನ್ ಅವರ ಲಾರಿ ಎಂದು ನಂಬಲಾದ ಟ್ರಕ್ ನದಿಯ ಆಳದಲ್ಲಿ ಇರುವ ಸುಳಿವು ಲಭ್ಯವಾಗಿದೆ. ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಚಿವರು ಮಾಹಿತಿ ನೀಡಿದ್ದಾರೆ.

ನದಿಯ ಕೆಳಭಾಗದಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು ಅದಕ್ಕಾಗಿ ಶೋಧ ನಡೆಯುತ್ತಿದೆ.

ಶಿರೂರಿನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಒಂಬತ್ತನೇ ದಿನದಂದು, ಲಾರಿಯ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಪಡೆಯಲಾಗಿದೆ. ಇಂದು ಬೆಳಗ್ಗೆ ಬೂಮ್ ಲೆಂಗ್ತ್ ಕ್ರೇನ್ ಬಂದಿದ್ದು, ತಪಾಸಣೆ ಪುನರಾರಂಭವಾಗಿದೆ. ಈ ಯಂತ್ರವು 60 ಅಡಿ ಆಳದವರೆಗೆ ಹುಡುಕಬಲ್ಲ ಸಾಮರ್ಥ್ಯ ಹೊಂದಿದೆ. ಪೊಲೀಸ್ ವಾಹನದೊಂದಿಗೆ ವಾಹನವನ್ನು ಸ್ಥಳಕ್ಕೆ ತರಲಾಗಿದೆ.

ಈ ಕುರಿತು ಕೃಷ್ಣ ಬೈರೇಗೌಡ Xನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ X ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.ಜುಲೈ 16 ರಂದು ಬೆಳಿಗ್ಗೆ ಕೋಝಿಕ್ಕೋಡ್‌ನ ಕಂಡ್ಯಕ್ಕಲ್ ಮೂಲದ ಅರ್ಜುನ್ (30) ಕರ್ನಾಟಕ-ಗೋವಾ ಗಡಿಯಲ್ಲಿ ಹಾದು ಹೋಗುವ ಪನ್ವೇಲ್-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದರು. ಭೂಕುಸಿತದಲ್ಲಿ ಟೀ ಅಂಗಡಿ ಮಾಲೀಕ ಸೇರಿದಂತೆ 10 ಜನರು ಸಾವನ್ನಪ್ಪಿದ ಸ್ಥಳದಲ್ಲಿ ಲಾರಿಯ ಜಿಪಿಎಸ್ ಸ್ಥಳವನ್ನು ಕೊನೆಯದಾಗಿ ಪತ್ತೆ ಹಚ್ಚಲಾಯಿತು.

 Share: | | | | |


BREAKING :ವಯನಾಡ್ ನಲ್ಲಿ ಭೀಕರ ಭೂಕುಸಿತ : ಮೃತರ ಸಂಖ್ಯೆ 95ಕ್ಕೆ ಏರಿಕೆ, 2 ದಿನಗಳ ಶೋಕಾಚರಣೆ ಘೋಷಣೆ

Posted by Vidyamaana on 2024-07-30 17:12:16 |

Share: | | | | |


BREAKING :ವಯನಾಡ್ ನಲ್ಲಿ ಭೀಕರ ಭೂಕುಸಿತ : ಮೃತರ ಸಂಖ್ಯೆ 95ಕ್ಕೆ ಏರಿಕೆ, 2 ದಿನಗಳ ಶೋಕಾಚರಣೆ ಘೋಷಣೆ

ವಯನಾಡ್ : ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಕನಿಷ್ಠ 95 ಜನರು ಸಾವನ್ನಪ್ಪಿದ್ದಾರೆ ಮತ್ತು 119 ಜನರು ಗಾಯಗೊಂಡಿದ್ದಾರೆ. ಮೂಲಗಳ ಪ್ರಕಾರ, ಗುಡ್ಡಗಾಡು ಪ್ರದೇಶಗಳಿಂದ ಈವರೆಗೆ 250 ಜನರನ್ನು ರಕ್ಷಿಸಲಾಗಿದೆ.ರಕ್ಷಣಾ ಕಾರ್ಯಾಚರಣೆಗಾಗಿ ಸೇನೆ ಮತ್ತು ನಾಲ್ಕು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ತಂಡಗಳನ್ನು ನೆಲದಲ್ಲಿ ನಿಯೋಜಿಸಲಾಗಿದೆ.

ಇಂದು ಕರ್ನಾಟಕ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ -ಮಾಹಿತಿ ಕಾರ್ಯಾಗಾರ

Posted by Vidyamaana on 2023-07-12 03:12:42 |

Share: | | | | |


ಇಂದು ಕರ್ನಾಟಕ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ -ಮಾಹಿತಿ ಕಾರ್ಯಾಗಾರ

ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ - ಮಾಹಿತಿ ಕಾರ್ಯಾಗಾರವು ಜು.12ರಂದು ಸಂತ ಫಿಲೋಮಿನಾ ಪ. ಪೂ. ಕಾಲೇಜಿನ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ ನಡೆಯಲಿದೆ. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್‌ ರಾಯನ್ ಕ್ರಾಸ್ತಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ತಿಲಕ್ ರೈ, ಕುತ್ಯಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ ಹರೀಶ್ ರೈ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಸಂತ ಫಿಲೋಮಿನ ಕಾಲೇಜಿನ ಕ್ಯಾಂಪಸ್ ಡೈರೆಕ್ಟರ್ ರೆ, ಫಾ. ಸ್ಟಾನಿ ಪಿಂಟೋ, ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್‌ ಕುಮಾರ್ ಮತ್ತು ಜಿಲ್ಲಾ ಉಪಾಧ್ಯಕ್ಷ ಡಾ|ಶಿವಶರಣ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಸರಣಿ ಕಳ್ಳತನ ಸಿ.ಸಿ ಕ್ಯಾಮರಾಕ್ಕೆ ಕವಚ ಹಾಕಿ ನುಗ್ಗಿದ ಕಳ್ಳರು ಆತಂಕದಲ್ಲಿ ವ್ಯಾಪರಸ್ಥರು

Posted by Vidyamaana on 2023-12-26 07:25:23 |

Share: | | | | |


ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಸರಣಿ ಕಳ್ಳತನ ಸಿ.ಸಿ ಕ್ಯಾಮರಾಕ್ಕೆ ಕವಚ ಹಾಕಿ ನುಗ್ಗಿದ ಕಳ್ಳರು  ಆತಂಕದಲ್ಲಿ ವ್ಯಾಪರಸ್ಥರು

ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಇರುವ ಹೋಟೆಲ್, ಮೆಡಿಕಲ್‌ ಹಾಗೂ ಅಂಗಡಿಗಳಿಗೆ ಕಳ್ಳರು ನುಗ್ಗಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.


ಬ.ಸಿ.ರೋಡಿನ ಆನಿಯಾ ದರ್ಬಾರ್ ಹೋಟೆಲಿಗೆ ನುಗ್ಗಿದ ಕಳ್ಳರು ಕ್ಯಾಶ್ ಡ್ರಾಯರ್ ನಲ್ಲಿದ್ದ 70 ಸಾವಿರಕ್ಕೂ ಅಧಿಕ ಮೊತ್ತದ ನಗದು ಹಣವನ್ನು ಎಗರಿಸಿದ್ದಾರೆ.


ಮುಸುಕುಧಾರಿಯಾಗಿರುವ ಕಳ್ಳನೋರ್ವ ಹೋಟೆಲಿನ ಗೇಟಿನ ಬೀಗವನ್ನು ಬಲವಂತವಾಗಿ ತೆಗೆಯುವ ದೃಶ್ಯ సిసి ಟಿವಿಯಲ್ಲಿ ದೊರಕಿದ್ದು, ಉಳಿದಂತೆ ಒಳ ಪ್ರವೇಶಿಸುವ ಹಂತದಲ್ಲಿ ಸಿಸಿ ಕ್ಯಾಮರಾಕ್ಕೂ ಕವಚ ಹಾಕಿ ನುಗ್ಗಿದ್ದಾನೆ. ಹೋಟೆಲ್ ನ ಇನ್ನೊಂದು ಪಕ್ಕದಲ್ಲಿರುವ ಅಂಗಡಿ, ಮೇಲಂತಸ್ತಿನಲ್ಲಿರುವ ಮೆಡಿಕಲ್ ಗೂ ನುಗ್ಗಿದ್ದಾರೆ.


ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಪುತ್ತಿಲ ಪ್ರಚಾರ ಬಾನೆತ್ತರಕ್ಕೆ : ಅಭಿಮಾನಿಗಳು ಹಾರಿಸಿದ್ರು ಬೃಹತ್ ಗಾತ್ರದ ಬಲೂನ್

Posted by Vidyamaana on 2023-05-03 08:29:35 |

Share: | | | | |


ಪುತ್ತಿಲ ಪ್ರಚಾರ ಬಾನೆತ್ತರಕ್ಕೆ : ಅಭಿಮಾನಿಗಳು ಹಾರಿಸಿದ್ರು ಬೃಹತ್ ಗಾತ್ರದ ಬಲೂನ್

ಪುತ್ತೂರು : ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರ ಪ್ರಚಾರರ್ಥವಾಗಿ ಅಭಿಮಾನಿಗಳು ಬೃಹತ್ ಬಲೂನ್ ಅನ್ನು ಬಾನೆತ್ತರಕ್ಕೆ ಹಾರಿಸಿದ ಘಟನೆ ಪೋಳ್ಯದಲ್ಲಿ ನಡೆದಿದೆ.

ಪೋಳ್ಯದಲ್ಲಿ ಪುತ್ತಿಲ ಅಭಿಮಾನಿಗಳು ಪ್ರಚಾರರ್ಥವಾಗಿ ಬೃಹತ್ ಬಲೂನ್ ಅನ್ನು ಗಗನಕ್ಕೆ ಹಾರಿಸಿದ್ದಾರೆ.ಪುತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ಸತ್ಯ,ಧರ್ಮ, ನ್ಯಾಯ ನಿಷ್ಠೆಯ ಸಮರ್ಥ ಅಭ್ಯರ್ಥಿ’ ಎಂದು ಬಲೂನ್ ಮೇಲೆ ಬರೆದು ಅಭಿಮಾನಿ ಗಳು ಅದನ್ನು ಗಗನದತ್ತ ಹಾರಿಸಿದ್ದಾರೆ.ಅಭಿಮಾನಿ ಕಾರ್ಯಕರ್ತರ ಒತ್ತಾಯದ ಮೇರೆಗೆ ಪುತ್ತಿಲ ರವರು ಚುನಾವಣಾ ಕಣಕ್ಕೆ ಇಳಿದಿದ್ದು, ನೆಚ್ಚಿನ ನಾಯಕನ ವಿಜಯ ಪತಾಕೆಯು ಬಾನೆತ್ತರಕ್ಕೆ ಹಾರಬೇಕೆನ್ನುವ ಮಹದಾಸೆಯನ್ನಿಟ್ಟುಕೊಂಡು ಕಾರ್ಯಕರ್ತರು ಬಲೂನ್ ಅನ್ನು ಬಾನೆತ್ತರಕ್ಕೆ ಹಾರಿಸಿದ್ದಾರೆನ್ನಲಾಗಿದೆ.

ವಿರೋಧ ಪಕ್ಷಗಳ ಸಭೆಯಲ್ಲಿ ಮೈತ್ರಿಗೆ INDIA ಎಂದು ಹೆಸರಿಟ್ಟ ನಾಯಕರು

Posted by Vidyamaana on 2023-07-18 10:00:32 |

Share: | | | | |


ವಿರೋಧ ಪಕ್ಷಗಳ ಸಭೆಯಲ್ಲಿ ಮೈತ್ರಿಗೆ INDIA ಎಂದು ಹೆಸರಿಟ್ಟ ನಾಯಕರು

ಬೆಂಗಳೂರು : ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ರಾಜಕೀಯ ಪಕ್ಷಗಳು ಇಂದು ದೆಹಲಿ ಮತ್ತು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸುತ್ತಿವೆಮಹಾಮೈತ್ರಿಕೂಟದ ನಾಯಕರು ತನ್ನ ಎರಡನೇ ಏಕತಾ ಸಭೆಯನ್ನು ಬೆಂಗಳೂರಿನಲ್ಲಿ ನಡೆಸುತ್ತಿದ್ದರೆ, ಬಿಜೆಪಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (INDA) ಪ್ರತಿಪಕ್ಷಗಳ ವಿರುದ್ಧ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸಭೆ ನಡೆಸಲಿದೆ.ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕರು ಬೆಂಗಳೂರಿನಲ್ಲಿ ಮೈತ್ರಿಗೆ ಇಂಡಿಯಾ ಎಂದು ನಾಮಕರಣ ಮಾಡಿದ್ದಾರೆ.


I – Indian

N – National

D – Democractic

I – Inclusive

A - Alliance ಎಂದು ನಾಮಕರಣ ಮಾಡಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಕೇಂದ್ರದ ವಿರೋಧ ಪಕ್ಷಗಳ ಸಭೆಯಲ್ಲಿ ಇಂದು ವಿವಿಧ ಪಕ್ಷದ ನಾಯಕರೊಂದಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಸಾಮೂಹಿಕ ಹೋರಾಟ ನಡೆಸಲು ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳು ಹಾಗೂ ಕಾರ್ಯತಂತ್ರಗಳ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು.

ಬಂಟ್ವಾಳ - ಕೆಳಗಿನಪೇಟೆಯ ಅಲ್-ಅಮೀನ್ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಹೊನಲು ಬೆಳಕಿನ ದಫ್ ಸ್ಪರ್ದೆ

Posted by Vidyamaana on 2024-02-20 08:29:32 |

Share: | | | | |


ಬಂಟ್ವಾಳ - ಕೆಳಗಿನಪೇಟೆಯ ಅಲ್-ಅಮೀನ್ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಹೊನಲು ಬೆಳಕಿನ ದಫ್ ಸ್ಪರ್ದೆ

ಬಂಟ್ವಾಳ : ಇಲ್ಲಿನ ಕೆಳಗಿನ ಪೇಟೆಯ ಅಲ್-ಅಮೀನ್ ಯೂತ್ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಹೊನಲು ಬೆಳಕಿನ ದಫ್ ಸ್ಪರ್ಧಾ ಕಾರ್ಯಕ್ರಮವು ಕೆಳಗಿನಪೇಟೆಯಲ್ಲಿ  ಶನಿವಾರ ರಾತ್ರಿ ನಡೆಯಿತು . 


  ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಸ್ತ ಕೇಂದ್ರ ಮುಶಾವರ ಸದಸ್ಯ ಹಾಜಿ ಅಬ್ದುಲ್ ಖಾದರ್ ಮುಸ್ಲಿಯಾರ್ ಅಲ್-ಖಾಸಿಮಿ ಬಂಬ್ರಾಣ ಮಾತನಾಡಿ ದಫ್ ಎಂಬುದು ಪವಿತ್ರ ಇಸ್ಲಾಮಿನ ನಾಲ್ಕು ಮದ್ಸ್ ಹಬ್ ಗಳೂ ಕೂಡಾ ಅನುಮತಿಸಿದ ಇಸ್ಲಾಮೀ ಕಲಾ ಪ್ರಕಾರವಾಗಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸ್ಪರ್ಧಾ ರೂಪದಲ್ಲಿ ಕಾರ್ಯಕ್ರಮ ಆಯೋಜಿಸುವುದು ಸಮ್ಮತಾರ್ಹವಾಗಿದೆ ಎಂದ ಅವರು 

ಧಾರ್ಮಿಕ ನೆಲೆಗಟ್ಟಿನ ಕಾರ್ಯಕ್ರಮಗಳನ್ನು ಊರಿನಲ್ಲಿ ಯುವಕರು ಸಂಘಟಿಸುವಾಗ ಅವುಗಳನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ಕೆಎಸ್ಸೆಸ್ಸೆಫ್  ಬಂಟ್ವಾಳ ವಲಯಾಧ್ಯಕ್ಷ ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಅವರು ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳು ಧರ್ಮದ ನೆಲೆಗಟ್ಟಿನಲ್ಲಿಯೇ ಆಯೋಜನೆಗೊಳ್ಳಬೇಕೇ ಹೊರತು ಇತರ ಲೌಕಿಕ ಅಥವಾ ಆಡಂಬರದ ಉದ್ದೇಶವನ್ನು ಹೊಂದುವಂತಾಗ ಬಾರದು ಎಂದರು.


ಸಯ್ಯಿದ್ ಇಬ್ರಾಹಿಂ ಬಾತಿಷಾ ತಂಙಳ್ ಆನೆಕಲ್ ದುವಾಶಿರ್ವಚನಗೈದರು. ಬಂಟ್ವಾಳ ಖತೀಬ್ ಮುಹಮ್ಮದ್ ರಿಯಾಝ್ ಫೈಝಿ ಮುಖ್ಯ ಭಾಷಣಗೈದರು. ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಬಂಟ್ವಾಳ ಪುರಸಭಾ ಸದಸ್ಯ ಮೂನಿಶ್ ಅಲಿ ಮಾತನಾಡಿ ಶುಭ ಹಾರೈಸಿದರು.


ರಾಜ್ಯ ಗೇರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ ಎಚ್ ಖಾದರ್, ಬಂಟ್ವಾಳ ಜುಮಾ ಮಸೀದಿ ಅಧ್ಯಕ್ಷ ಅಹ್ಮದ್ ಶಾಫಿ, ಉಪಾಧ್ಯಕ್ಷ ಪಿ ಬಿ ಇಸ್ಮಾಯಿಲ್, ತೌಹೀದ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಹಾಜಿ ಅಬ್ದುಲ್ ರಹಿಮಾನ್, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹಾರೂನ್ ರಶೀದ್ ಬಂಟ್ವಾಳ, ಬಂಟ್ವಾಳ ಅಲ್-ಸಫರ್ ಫ್ರೆಂಡ್ಸ್ ಅಧ್ಯಕ್ಷ ಮುಹಮ್ಮದ್ ನಿಝಾಂ, ಮಾನವತಾ ಸೇವಾ ಸಂಸ್ಥೆಯ ಸ್ಥಾಪಕಾಧ್ಯಕ್ಷ ಮುಸ್ತಫಾ ಜೋಕಟ್ಟೆ, ಪುದು ಗ್ರಾ.ಪಂ ಸದಸ್ಯ ಹಾಶೀರ್ ಪೇರಿಮಾರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 


    ಖಾದರ್ ಮಾಸ್ಟರ್ ಬಂಟ್ವಾಳ, ಮುಹಮ್ಮದ್ ಬಿಕಾಂ, ಡೈಮಂಡ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಅಲ್ತಾಫ್, ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಸದಸ್ಯ ಮಲ್ಲಿಕ್, ಉದ್ಯಮಿಗಳಾದ ಮುಸ್ತಫಾ ಫರಂಗಿಪೇಟೆ, ವೀಲ್ ಎಫ್.ಸಿ.ಯ

ತೌಸೀಫ್, ಎಸ್ಡಿಪಿಐ ಬಂಟ್ವಾಳ ಬೂತ್ ಅಧ್ಯಕ್ಷ ಕುರ್ಶಿದ್, ಯೂತ್ ಫ್ರೆಂಡ್ಸ್ ನ ಪ್ರಮುಖರಾದ ಜಲಾಲ್, ಫಾರಿಸ್, ಲತೀಫ್, ಬಿಲಾಲ್, ಸಿನಾನ್, ಅಲಿ, ಅಸ್ವೀರ್, ಸರ್ವಾನ್, ಸರ್ದಿನ್, ತೌಫೀರ್, ಖಲಂದರ್ ಶಾಫಿ ಮೊದಲಾದವರು ಉಪಸ್ಥಿತರಿದ್ದರು. 


ಇದೇ ವೇಳೆ ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು, ಹಾಜಿ ಬಿ ಎಚ್ ಖಾದರ್ ಬಂಟ್ವಾಳ, ಅಬ್ದುಲ್ ಮಜೀದ್ ಫೈಝಿ ಕೋಲ್ಪೆ, ಯೂಸುಪ್ ಮುಸ್ಲಿಯಾರ್ ಕೋಲ್ಪೆ, ಹಾಫಿಳ್ ಸಯೀದ್ ಬಂಟ್ವಾಳ, ರಾಝಿಕ್ ವಿಟ್ಲ, ಮುಹಮ್ಮದ್ ಮುಸ್ತಫಾ ಜೋಕಟ್ಟೆ ಅವರನ್ನು ಸನ್ಮಾನಿಸಲಾಯಿತು. 


ಇರ್ಶಾದ್ ಬಂಟ್ವಾಳ ಸ್ವಾಗತಿಸಿ, ಅಬ್ದುಲ್ ಖಾದರ್ ರಾಝಿ ವಂದಿಸಿದರು. ಪತ್ರಕರ್ತರಾದ ಲತೀಫ್ ನೇರಳಕಟ್ಟೆ ಹಾಗೂ ಪಿ ಎಂ ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು. 

 *ಮಜೂರು ಸಿರಾಜುಲ್ ಹುದಾ ದಫ್ ತಂಡಕ್ಕೆ ಪ್ರಶಸ್ತಿ* 

  ದಫ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಉಡುಪಿ ಮಜೂರಿನ ಸಿರಾಜುಲ್ ಹುದಾ ದಫ್ ತಂಡ  ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಉಳ್ಳಾಲ ಅಕ್ಕರೆಕೆರೆಯ ಅಲ್-ಜಝೀರಾ ದಫ್ ತಂಡ  ದ್ವಿತೀಯ ಹಾಗೂ ಕಟಪಾಡಿ - ಮಣಿಪುರದ ಖಲಂದರ್ ಷಾ ದಫ್  ತಂಡ ತೃತೀಯ ಸ್ಥಾನ ಪಡೆದುಕೊಂಡಿತು. ಸುರತ್ಕಲ್ - ಕೃಷ್ಣಾಪುರದ ಬದ್ರಿಯಾ ದಫ್ ತಂಡ ಉತ್ತಮ ಹಾಡುಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಇದಕ್ಕೂ ಮೊದಲು ಮಾಸ್ಟರ್ ಅಸೀಬ್ ಹಾಗೂ ಸಂಗಡಿಗರ ನೇತೃತ್ವದ ಇಷ್ಕೇ ಮದೀನ ಬುರ್‍ದಾ ಸಂಘದಿಂದ ಬುರ್‍ದಾ ಮಜ್ಲಿಸ್ ಕಾರ್ಯಕ್ರಮ ನಡೆಯಿತು.

Recent News


Leave a Comment: