ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಒಕ್ಕಲಿಗರನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಬಿಜೆಪಿಯ ತಂತ್ರವನ್ನು ವಿಫಲಗೊಳಿಸಿದ ನಿರ್ಮಲಾನಂದ ಶ್ರೀಗಳ ಕ್ರಮವನ್ನು ಸ್ವಾಗತಿಸುತ್ತೇವೆ: ಅಬ್ದುಲ್ ಮಜೀದ್ ಮೈಸೂರು

Posted by Vidyamaana on 2023-03-22 03:40:57 |

Share: | | | | |


ಒಕ್ಕಲಿಗರನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಬಿಜೆಪಿಯ ತಂತ್ರವನ್ನು ವಿಫಲಗೊಳಿಸಿದ ನಿರ್ಮಲಾನಂದ ಶ್ರೀಗಳ ಕ್ರಮವನ್ನು ಸ್ವಾಗತಿಸುತ್ತೇವೆ: ಅಬ್ದುಲ್ ಮಜೀದ್ ಮೈಸೂರು

ಬೆಂಗಳೂರು: ಉರಿ ಗೌಡ, ನಂಜೇಗೌಡ ಎಂಬ ಕಾಲ್ಪನಿಕ ವ್ಯಕ್ತಿಗಳನ್ನು ಮುನ್ನೆಲೆಗೆ ತರುವ ಮೂಲಕ ಒಕ್ಕಲಿಗ ಸಮುದಾಯವನ್ನು ಶತಮಾನಗಳಿಂದಲೂ ಅನ್ಯೋನ್ಯತೆಯಿಂದ ಬದುಕುತ್ತಿರುವ ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಬಿಜೆಪಿಯ ತಂತ್ರವನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ಅರ್ಥ ಮಾಡಿಕೊಂಡು ಅದನ್ನು ವಿಫಲಗೊಳಿಸಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ತಮ್ಮ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.


ಒಕ್ಕಲಿಗ ಸಮುದಾಯ ಮತ್ತು ಟಿಪ್ಪು ಸುಲ್ತಾನ್ ನಡುವಿನ ಬಾಂಧವ್ಯ ಬಹಳ ಗಟ್ಟಿಯಾಗಿತ್ತು. ಟಿಪ್ಪು ಸುಲ್ತಾನ್ ಅವಧಿಯಲ್ಲಿ ಕೃಷಿಗೆ ಸಾಕಷ್ಟು ಒತ್ತು ನೀಡಿದ್ದರು. ಮೈಸೂರು ಪ್ರಾಂತ್ಯದ ರೈತರು ಇಂದಿಗೂ ಕೂಡ ಸಮೃದ್ಧ ನೀರಾವರಿಯನ್ನು ಹೊಂದಿರುವುದಕ್ಕೆ ಮೂಲವಾದ ಕನ್ನಂಬಾಡಿ ಕಟ್ಟೆಯನ್ನು ನಿರ್ಮಾಣಕ್ಕೆ ಅಸ್ತಿಭಾರ ಹಾಕಿದವರು ಟಿಪ್ಪು ಸುಲ್ತಾನರೆ ಆಗಿದ್ದರು.ಬಿಜೆಪಿಯ ಈ ಷಡ್ಯಂತ್ರವನ್ನು ಅರಿತ ಒಕ್ಕಲಿಗ ಸಮುದಾಯ ಅದರ ವಿರುದ್ಧ ಸೆಟೆದು ನಿಂತದ್ದು ಅಭಿನಂದನಾರ್ಹ. ಅದಕ್ಕೆ ಬಲ ತುಂಬೋ ರೀತಿಯಲ್ಲಿ ಒಕ್ಕಲಿಗ ಸಮುದಾಯದ ಶ್ರೀಗಳಾದ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿ ಅವರು ತಮ್ಮ ಎಚ್ಚರಿಕೆಯ ಮೂಲಕ ಬಿಜೆಪಿಯ ಒಡೆದಾಳುವ ತಂತ್ರಕ್ಕೆ ತಡೆ ಒಡ್ಡಿದ್ದಾರೆ. ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಅವರ ಈ ಕ್ರಮಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದ ಮಜೀದ್ ಅವರು, ಮುಂದಿನ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯ ಬಿಜೆಪಿಯ ಈ ಕುತಂತ್ರಕ್ಕೆ ತಕ್ಕ ಪಾಠ ಕಲಿಸಲಿದೆ ಎಂದು ಹೇಳಿದ್ದಾರೆ.

ದೀಪಾವಳಿ ಸೀರೆ ವಿತರಣಾ ಕಾರ್ಯಕ್ರಮ; ಕೊಂಬೆಟ್ಟು ಕ್ರೀಡಾಂಗಣ ವೀಕ್ಷಿಸಿದ ಶಾಸಕರು

Posted by Vidyamaana on 2023-10-19 16:36:35 |

Share: | | | | |


ದೀಪಾವಳಿ ಸೀರೆ ವಿತರಣಾ ಕಾರ್ಯಕ್ರಮ; ಕೊಂಬೆಟ್ಟು ಕ್ರೀಡಾಂಗಣ ವೀಕ್ಷಿಸಿದ ಶಾಸಕರು

ಪುತ್ತೂರು:ನ.13 ರಂದು ದೀಪಾವಳಿ ಪ್ರಯುಕ್ತ ನಡೆಯಲಿರುವ ಬೃಹತ್ ಸೀರೆ ವಿತರಣಾ ಕಾರ್ಯಕ್ರಮವು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದ್ದು , ಸಮಾವೇಶ ನಡೆಯಲಿರುವ ಕೊಂಬೆಟ್ಟು ಕ್ರೀಡಾಂಗಣಕ್ಕೆ ಭೇಟಿ ನೀಡಿದ ಶಾಸಕರು ಸ್ಥಳ ವೀಕ್ಷಣೆ ಮಾಡಿದರು. ಸುಮಾರು 50 ಸಾವಿರಕ್ಕೂ‌ಮಿಕ್ಕಿ ಜನ ಸೇರುವ ನಿರೀಕ್ಷೆ ಇದ್ದು ಕೈಗೊಂಡಿರುವ ಸಿದ್ದತೆಗಳನ್ನು ಶಾಸಕರು ಪರಿಶೀಲನೆ ಮಾಡಿದರು.

ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ,ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್,ರೈ ಟ್ರಸ್ಟ್ ನ ಮುಖ್ಯಸ್ಥರಾದ ನಿಹಾಲ್ ಶೆಟ್ಟಿ, ನಿವೃತ್ತ ಶಿಕ್ಷಕ ದಯಾನಂದ ರೈ ಕೊರ್ಮಂಡ,ಎನ್ ಎಸ್ ಯು ಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬ್ಬೆ, ಯುವ ಕಾಂಗ್ರೆಸ್ ನ ಹನೀಫ್ ಪುಂಚತ್ತಾರ್, ಇಂಜಿನಿಯರ್ ಸಂತೋಷ್ ಶೆಟ್ಡಿ, ರವಿಪ್ರಸಾದ್ ಶೆಟ್ಟಿ ಬನ್ನೂರು, ಯೋಗೀಶ್ ಸಾಮಾನಿ, ಟ್ರಸ್ಟ್ ನ ಪ್ರಮುಖರಾದ ಕೃಷ್ಣಪ್ರಸಾದ್ ಭಟ್ ಬೊಳ್ಳಮೆ ,ದಾಮೋದರ್ ಕೋಡಿಂಬಾಡಿ ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ಶಿಕ್ಷಣ ಇಲಾಖೆಯ ಕರ್ನಾಟಕ ತಂಡದ ಕಬಡ್ಡಿ ತರಬೇತುದಾರರಾಗಿ ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಆಯ್ಕೆ

Posted by Vidyamaana on 2023-11-26 22:22:27 |

Share: | | | | |


ಶಾಲಾ ಶಿಕ್ಷಣ ಇಲಾಖೆಯ ಕರ್ನಾಟಕ ತಂಡದ ಕಬಡ್ಡಿ ತರಬೇತುದಾರರಾಗಿ ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಆಯ್ಕೆ

ಪುತ್ತೂರು : ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಲಿಟ್ಲ್ ಫ್ಲವರ್ ಶಾಲೆಯ ಸಹ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ಕರ್ನಾಟಕ ತಂಡದ ತರಬೇತುದಾರರಾಗಿ ಆಯ್ಕೆಗೊಂಡಿದ್ದಾರೆ.


ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಮಂಡ್ಯ ಜಿಲ್ಲೆಯ ಆದಿ ಚುಂಚನಗಿರಿ ಮಹಾಸಂಸ್ಥಾನದಲ್ಲಿ ನಡೆದ 14 ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಲಿಟ್ಲ್ ಫ್ಲವರ್ ಶಾಲೆಯ ನೇತೃತ್ವದ ತಂಡ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಜನವರಿ 28 ರಂದು ನಡೆಯುವ 14 ರ ವಯೋಮಾನದ ಬಾಲಕಿಯರ ಕಬಡ್ಡಿ ತಂಡದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಲಿಟ್ಲ್ ಫ್ಲವರ್ ಶಾಲೆಯ ಸಹ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ಕರ್ನಾಟಕ ತಂಡದ ತರಬೇತುದಾರರಾಗಿ ಆಯ್ಕೆಗೊಂಡಿದ್ದಾರೆ

ಹುಬ್ಬಳ್ಳಿಯ ಯುವತಿ ಅಂಜಲಿ ಹತ್ಯೆಗೈದ ಗಿರೀಶನಿಗೆ ಕೊಲೆಗಾರ ಸ್ನೇಹಿತ ಶೇಷ್ಯಾನೇ ರೋಲ್ ಮಾಡೆಲ್!

Posted by Vidyamaana on 2024-05-16 07:12:58 |

Share: | | | | |


ಹುಬ್ಬಳ್ಳಿಯ ಯುವತಿ ಅಂಜಲಿ ಹತ್ಯೆಗೈದ ಗಿರೀಶನಿಗೆ ಕೊಲೆಗಾರ ಸ್ನೇಹಿತ ಶೇಷ್ಯಾನೇ ರೋಲ್ ಮಾಡೆಲ್!

ಹುಬ್ಬಳ್ಳಿ: ಪ್ರೀತಿ ವಿಚಾರಕ್ಕೆ ಇಂದು ಮುಂಜಾನೆ ನಡೆದ ಅಂಜಲಿ(20) ಹತ್ಯೆ ಪ್ರಕರಣದ ಆರೋಪಿ ವಿಶ್ವನಿಗೆ ಕ್ರಿಮಿನಲ್‌ ಹಿನ್ನೆಲೆ ಇದೆ. ಕಳೆದ ಮೂರು ದಿನಗಳ ಹಿಂದೆಯಷ್ಟೇ ಈತನ ಸ್ನೇಹಿತ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಇದೀಗ ವಿಶ್ವ ಕೂಡ ಕೊಲೆ ಮಾಡಿದ್ದಾನೆ.ಈತ ಕೊಲೆ ಮಾಡಲು ಸ್ನೇಹಿತನಿಂದ ಪ್ರೇರಣೆ ಪಡೆದಿದ್ನಾ ಎನ್ನುವ ಸಂಶಯ ಮೂಡಿದೆ.

ಹಂತಕ ವಿಶ್ವನ ಸ್ನೇಹಿತ ಶೇಷ್ಯಾ ಹುಬ್ಬಳ್ಳಿ ತಾಲೂಕಿನ ಹಳ್ಳ್ಯಾಳದ ಸದ್ದಾಂ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾನೆ. ಶೇಷ್ಯಾ ಕೊಲೆ ಮಾಡಿದ ಬಳಿಕ ಅಂಜಲಿಯನ್ನ ಮುಗಿಸಲು ವಿಶ್ವ ಪ್ಲಾನ್ ಮಾಡಿರಬಹುದು ಎನ್ನಲಾಗುತ್ತಿದೆ.

ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 23

Posted by Vidyamaana on 2023-09-23 04:40:38 |

Share: | | | | |


ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 23

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಸೆ 23 ರಂದು



*9.30 ಕ್ಕೆಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ದಸರಾ ಉದ್ಘಾಟನೆ*



*10.30ಕ್ಕೆ ಬೈಪಾಸ್ ಉದಯಗಿರಿ  ಸಭಾಭವನದಲ್ಲಿ  ರೈ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಸಭೆ*


*12.30ಕ್ಕೆ ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ* *ವಿದ್ಯಾರ್ಥಿ ಸಂಘ ಉದ್ಘಾಟನೆ*

ಸ್ಥಳ: ಜೈನ ಭವನ ಪುತ್ತೂರು


*1 ಗಂಟೆಗೆ ಮುಂಡೂರು ಸಿ ಎ ಬ್ಯಾಂಕ್ ಮಹಾಸಭೆ*


*3 ಗಂಟೆಗೆ ಶಾಸಕರ ಕಚೇರಿಯಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿ ವಿತರಣೆ*


*ಸಂಜೆ 5 ಗಂಟೆಗೆ ಲೋಕೋಪಯೋಗಿ ಇಲಾಖಾ ವತಿಯಿಂದ ರಸ್ತೆ ಬದಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ*


*ಸಂಜೆ 6 ಗಂಟೆಗೆ ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿಯ ಗಣೇಶೋತ್ಸವದಲ್ಲಿ ಸರ್ದ ಧರ್ಮ ಧಾರ್ಮಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ*

ನಕಲಿ ದಾಖಲೆ ಪತ್ರ ಜಾಲ ಪತ್ತೆ: ಪುತ್ತೂರು ಮೂಲದ ಆರೋಪಿ ಸಿಸಿಬಿ ಬಲೆಗೆ

Posted by Vidyamaana on 2023-10-06 20:36:38 |

Share: | | | | |


ನಕಲಿ ದಾಖಲೆ ಪತ್ರ ಜಾಲ ಪತ್ತೆ: ಪುತ್ತೂರು ಮೂಲದ ಆರೋಪಿ ಸಿಸಿಬಿ ಬಲೆಗೆ

ಮಂಗಳೂರು, ಅ.6: ಆಧಾರ್, ರೇಶನ್ ಕಾರ್ಡ್, ಅಂಕಪಟ್ಟಿ ಮತ್ತಿತರ ಅತ್ಯಮೂಲ್ಯ ದಾಖಲೆ ಪತ್ರಗಳನ್ನೇ ಸೃಷ್ಟಿಸಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಹಾರ್ಟ್ ಅಟ್ಯಾಕ್ - ಹಾರ್ಟ್ ಫೈಲ್ಯೂರ್ - ಕಾರ್ಡಿಯಾಕ್ ಅರೆಸ್ಟ್: ಏನಿದೆ ವ್ಯತ್ಯಾಸ?



ಮಂಗಳೂರು ನಗರದ ಕಂಕನಾಡಿ– ಪಂಪ್ವೆಲ್ ಹಳೆ ರಸ್ತೆಯ ವಿಶ್ವಾಸ್ ಕ್ರೌನ್ ಅಪಾರ್ಟ್ಮೆಂಟಿನ ನೆಲ ಅಂತಸ್ತಿನಲ್ಲಿ ‘’ಹೆಲ್ಪ್ ಲೈನ್ ಮಂಗಳೂರು” ಎಂಬ ಹೆಸರಿನ ಶಾಪ್ ಇಟ್ಟುಕೊಂಡು ನಕಲಿ ದಾಖಲಾತಿಗಳನ್ನು ತಯಾರಿಸಿಕೊಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಕರ್ನಕಟ್ಟೆ ನಿವಾಸಿ ಬರ್ನಾಡ್ ರೋಶನ್ ಮೆಸ್ಕರೇನಸ್ (41) ಮೂಲತ ಪುತ್ತೂರು ತಾಲೂಕಿನ ದರ್ಬೆ ಕಾವೇರಿ ಕಟ್ಟೆ ನಿವಾಸಿ 

 ಹಾರ್ಟ್ ಅಟ್ಯಾಕ್ - ಹಾರ್ಟ್ ಫೈಲ್ಯೂರ್ - ಕಾರ್ಡಿಯಾಕ್ ಅರೆಸ್ಟ್: ಏನಿದೆ ವ್ಯತ್ಯಾಸ?


ಈತನ ಕಚೇರಿಯಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ, ನಕಲಿ ಶೈಕ್ಷಣಿಕ ದಾಖಲೆ ಪತ್ರಗಳು, ಜನನ ಪ್ರಮಾಣಪತ್ರ ಇತ್ಯಾದಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಅವುಗಳನ್ನು ಬಳಸಿಕೊಂಡು ಇತರೇ ದಾಖಲಾತಿಗಳನ್ನು ಮಾಡಿಕೊಡುತ್ತಿದ್ದ. ಅವನ್ನೇ ನೈಜ ದಾಖಲಾತಿಗಳೆಂದು ನಂಬಿಸಿ ಸಾರ್ವಜನಿಕರಿಗೆ ಮತ್ತು ಸರಕಾರಕ್ಕೆ ವಂಚಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ  ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.

 

ದಾಳಿ ಸಂದರ್ಭದಲ್ಲಿ ವಿವಿಧ ಹೆಸರುಗಳಲ್ಲಿ ತಯಾರಿಸಿಟ್ಟಿದ್ದ ನಕಲಿ ಆಧಾರ್ ಕಾರ್ಡ್ ಗಳು, ನಕಲಿ ರೇಷನ್ ಕಾರ್ಡ್, ನಕಲಿ ಉದ್ದಿಮೆ ಪರವಾನಿಗೆ ಪತ್ರ, ನಕಲಿ ಎಸ್ಎಸ್ಎಲ್ಸಿ ಅಂಕಪಟ್ಟಿ, ನಕಲಿ ಜನನ ಪ್ರಮಾಣ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ಮೂರು ವರ್ಷಗಳಿಂದ ಈತನಿಂದ ನಕಲಿ ದಾಖಲಾತಿಗಳನ್ನು ಪಡೆದವರು ಬ್ಯಾಂಕ್ ಇನ್ನಿತರ ಕಚೇರಿಗಳಿಗೆ ಸಾಲ ಸೌಲಭ್ಯಕ್ಕಾಗಿ ಮತ್ತು ಸರಕಾರಿ ಸೌಲಭ್ಯಗಳನ್ನು ಪಡೆಯಲು ಉಪಯೋಗಿಸಿದ್ದಾರೆ. ಆಮೂಲಕ ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟ ಉಂಟು ಮಾಡಿದ್ದಾನೆ.

 ಹಾರ್ಟ್ ಅಟ್ಯಾಕ್ - ಹಾರ್ಟ್ ಫೈಲ್ಯೂರ್ - ಕಾರ್ಡಿಯಾಕ್ ಅರೆಸ್ಟ್: ಏನಿದೆ ವ್ಯತ್ಯಾಸ?


ನಕಲಿ ಪ್ರಮಾಣ ಪತ್ರಗಳನ್ನು ತಯಾರಿಸಲು ಬಳಸುತ್ತಿದ್ದ ಲ್ಯಾಪ್ ಟಾಪ್, ಕಲರ್ ಪ್ರಿಂಟರ್, ಲ್ಯಾಮಿನೇಟರ್ ಮೆಶಿನ್, ಬಯೋಮೆಟ್ರಿಕ್ ಡಿವೈಸ್ ಗಳನ್ನು ವಶಪಡಿಸಲಾಗಿದೆ. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ದಾಖಲೆ ಪತ್ರ ತಯಾರಿ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು ಪತ್ತೆ ಕಾರ್ಯ ಮುಂದುವರಿದಿದೆ. 


ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಸಿಸಿಬಿ ಎಸಿಪಿ ಪಿಎ ಹೆಗಡೆ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಶ್ಯಾಮಸುಂದರ್, ತಂಡದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

Recent News


Leave a Comment: