ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ವಕೀಲರೊಬ್ಬರ ಮೇಲೆ ಪೊಲೀಸರ ಹಲ್ಲೆ ಆರೋಪ

Posted by Vidyamaana on 2023-12-02 08:20:47 |

Share: | | | | |


ವಕೀಲರೊಬ್ಬರ ಮೇಲೆ ಪೊಲೀಸರ ಹಲ್ಲೆ ಆರೋಪ

ಚಿಕ್ಕಮಗಳೂರು: ಬೈಕ್ ಓಡಿಸುವಾಗ ಹೆಲ್ಮೆಟ್ ಹಾಕಿಲ್ಲದ ಕಾರಣಕ್ಕಾಗಿ ಪೊಲೀಸರು ವಕೀಲನನ್ನು ಠಾಣೆಗೆ ಕರೆದುಕೊಂಡು ಹೋಗಿ ಮನಸ್ಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಗುರುವಾರ ರಾತ್ರಿ ಟೌನ್ ಪೊಲೀಸ್ ಠಾಣೆಯಲ್ಲಿ ನಡೆದಿತ್ತು. ಈ ಘಟನೆಯಲ್ಲಿ ಯುವ ವಕೀಲ ಎನ್.ಟಿ ಪ್ರೀತಂ ತೀವ್ರವಾಗಿ ಗಾಯಗೊಂಡಿದ್ದರು.ಈ ಘಟನೆ ಸಂಬಂಧ 6 ಪೊಲೀಸರನ್ನು ಅಮಾನುತುಗೊಳಿಸಲಾಗಿದೆ.


ಹೆಲ್ಮೆಟ್ ಹಾಕಿರದ ಕಾರಣಕ್ಕೆ ವಕೀಲನನ್ನೇ ಥಳಿಸಿದ ಘಟನೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ಟೌನ್ ಪೊಲೀಸ್ ಠಾಣೆಯ ಪಿಎಸ್‌ಐ ಮಹೇಶ್ ಪೂಜಾರಿ, ಎಎಸ್‌ಐ ರಾಮಪ್ಪ, ಮುಖ್ಯ ಪೇದೆ ಶಶಿಧರ, ಪೇದೆಗಳಾದ ಗುರುಪ್ರಸಾದ್, ಬಿ.ಕೆ ನಿಖಿಲ್ ಹಾಗೂ ವಿ.ಟಿ ಯುವರಾಜ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಂ ಅಮಟೆ ಅಮಾನತುಗೊಳಿಸಿ ಶುಕ್ರವಾರ ಆದೇಶಿಸಿದ್ದಾರೆ.ಗುರುವಾರ ರಾತ್ರಿ ಯುವ ವಕೀಲ ಪ್ರೀತಂ ಮಾರ್ಕೆಟ್ ರಸ್ತೆಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ಟೌನ್ ಠಾಣೆಯ ಮಫ್ತಿಯಲ್ಲಿದ್ದ ಪೊಲೀಸರು ಬೈಕ್ ನಿಲ್ಲಿಸಿ ಹೆಲ್ಮೆಟ್ ಎಲ್ಲಿ ಎಂದು ಕೇಳುತ್ತಲೇ ಬೈಕಿನ ಕೀಯನ್ನು ತೆಗೆದುಕೊಂಡು, ಪೊಲೀಸ್ ಠಾಣೆ ಒಳಗೆ ಹೋಗಿದ್ದಾರೆ. ಠಾಣೆಯೊಳಗೆ ಹೋಗುತ್ತಿದ್ದಂತೆ ಪೊಲೀಸರು ಲಾಠಿ, ಪೈಪ್ ಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ಈ ಘಟನೆ ಸಂಬಂಧ ಡಿ.5ರೊಳಗೆ ವರದಿ ನೀಡುವಂತೆ ಹೈಕೋರ್ಟ್ ಸೂಚಿಸಿದೆ.

ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಮಲಗಿದ ಭೂಪ

Posted by Vidyamaana on 2024-01-11 16:52:09 |

Share: | | | | |


ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಮಲಗಿದ ಭೂಪ

ಕೊಟ್ಟಿಗೆಹಾರ: ಕಂಠಪೂರ್ತಿ ಕುಡಿದು ರಸ್ತೆಯ ಮಧ್ಯೆ ಮಲಗಿ ವಾಹನ ಸವಾರರು ಬೆಚ್ಚಿ ಬಿದ್ದಿರುವ ಘಟನೆ ಮೂಡಿಗೆರೆಯಿಂದ ಜನ್ನಾಪುರಕ್ಕೆ ಹೋಗುವ ರಸ್ತೆ ಹಳಸೆ ಗ್ರಾಮದ ತಿರುವಿನಲ್ಲಿ ಬುಧವಾರ ರಾತ್ರಿ ನಡೆದಿದೆ.ವಾಹನ ಚಾಲಕರು ಎಷ್ಟೇ ಬಾರಿ ಹಾರ್ನ್ ಮಾಡಿದರು ಮೇಲಕ್ಕೆ ಏಳದ ವ್ಯಕ್ತಿ, ಮಧ್ಯ ರಾತ್ರಿ ರಸ್ತೆಯಲ್ಲಿ ಮಲಗಿರುವುದನ್ನು ನೋಡಿ ವಾಹನ ಸವಾರರು ಬೆಚ್ಚಿ ಬಿದ್ದಿದ್ದಾರೆ. ಕೆಲ ಹೊತ್ತಿನ ಬಳಿಕ ಎದ್ದ ವ್ಯಕ್ತಿ ಮತ್ತೆ ರಸ್ತೆ ಮಧ್ಯದಲ್ಲೇ ಮಲಗಿದ್ದಾನೆ ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ. ಎಣ್ಣೆ ಮತ್ತಿನಲ್ಲಿ ವ್ಯಕ್ತಿಯ ಚಲ್ಲಾಟ, ವಾಹನ ಸವಾರರಿಗೆ ಪರದಾಟ ಎಂಬಂತಾಗಿದೆ.

ರಾಹುಲ್ ಗಾಂಧಿ ಬಂಧನ, ಸಂಸತ್ ಸದಸ್ಯತ್ವ ರದ್ದು ಖಂಡಿಸಿದ ಕರ್ನಾಟಕ ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷ ಜುನೈದ್ ಪಿ.ಕೆ

Posted by Vidyamaana on 2023-03-26 11:42:14 |

Share: | | | | |


ರಾಹುಲ್ ಗಾಂಧಿ ಬಂಧನ, ಸಂಸತ್ ಸದಸ್ಯತ್ವ ರದ್ದು ಖಂಡಿಸಿದ ಕರ್ನಾಟಕ ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷ ಜುನೈದ್ ಪಿ.ಕೆ

ಬೆಂಗಳೂರು: ಭಾರತ್ ಜೋಡೋದ ಯಶಸ್ಸನ್ನು ಸಹಿಸದೇ ಕವಟದಿಂದ, ದ್ವೇಷದಿಂದ ಕಾಂಗ್ರೆಸಿನ ಯುವ ನಾಯಕ, ಸಂಸದ ರಾಹುಲ್ ಗಾಂಧಿಯವರನ್ನು ಜೈಲಿಗೆ ಹಾಕುವ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಆದ್ದರಿಂದ ನರೇಂದ್ರ ಮೋದಿ ವಿರುದ್ಧ ಮೋದಿ ಹಟಾವೋ, ದೇಶ ಬಚಾವೋ ಎನ್ನುವ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಿದ್ದೇವೆ ಎಂದು ಕರ್ನಾಟಕ ಯಂಗ್ ಬ್ರಿಗೇಡ್ ಸೇವಾದಳದ ರಾಜ್ಯಾಧ್ಯಕ್ಷ ಜುನೈದ್‌ ಪಿ.ಕೆ. ಘೋಷಿಸಿದ್ದಾರೆ.

ಮೋದಿ ಎಂಬ ಉಪನಾಮ ಹೊಂದಿರುವ ವ್ಯಕ್ತಿಗಳು, ಮಧ್ಯಮ ವರ್ಗದವರು ಕಟ್ಟಿರುವ ತೆರಿಗೆ ಹಣವನ್ನು ಲೂಟಿ ಮಾಡಿದ್ದು, ಅದಕ್ಕೆ ಪ್ರಧಾನಿ ಬೆಂಬಲ ನೀಡಿದ್ದಾರೆ. ಹೀಗಿರುವಾಗ ಇದನ್ನು ಕಾಂಗ್ರೆಸಿನ ಮುಂಚೂಣಿ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿರುವುದರಲ್ಲಿ ತಪ್ಪೇನು ಎಂದು ಜುನೈದ್ ಪ್ರಶ್ನಿಸಿದ್ದಾರೆ.

ಸಂಸದನಾಗಿ, ಕಾಂಗ್ರೆಸ್ ಮುಂಚೂಣಿ ನಾಯಕನಾಗಿ, ಜಾತ್ಯಾತೀತತೆ, ಬಾಂಧವ್ಯದ ತಳಹದಿಯೊಂದಿಗೆ ಎಲ್ಲರನ್ನು ಜೊತೆಗೆ ಕೊಂಡೊಯ್ಯುವ ಯುವ ನಾಯಕ ರಾಹುಲ್‌ ಗಾಂಧಿ, ಮೋದಿ, ಚೋಕ್ಸಿಯಂತಹವರು ಲೂಟಿ ಮಾಡಿರುವ ಕೋಟ್ಯಾಂತರ ರೂ.ವನ್ನು ರಾಹುಲ್ ಗಾಂಧಿ ಸರಿಯಾಗಿಯೇ ಪ್ರಶ್ನಿಸಿದ್ದಾರೆ. ಇದನ್ನು ಸಹಿಸದೇ ಅವರನ್ನು ಜೈಲಿಗೆ ಕಳುಹಿಸುವುದು, ಅವರ ಸಂಸದ ಸ್ಥಾನವನ್ನು ರದ್ದು ಮಾಡಿಸುವ ಪ್ರಧಾನಿ ಮೋದಿ ಕ್ರಮಕ್ಕೆ ಯಂಗ್ ಬ್ರಿಗೇಡ್ ಖಂಡನೆ ಸೂಚಿಸುತ್ತದೆ ಎಂದು ಜುನೈದ್ ತಿಳಿಸಿದ್ದಾರೆ.

  ಪ್ರಜಾಪ್ರಭುತ್ವ ವಿರೋಧಿ ಕ್ರಮವನ್ನು ಅನುಸರಿಸುತ್ತಿರುವ ಮೋದಿ ಕ್ರಮವನ್ನು ಪ್ರತಿ ಮನೆಗೂ ತಲುಪಿಸಲಾಗುವುದು, ಪ್ರತಿ ಮಗುವಿಗೂ ತಲುಪಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ ; ಟ್ರಕ್ ಗೆ ಕಾರು ಡಿಕ್ಕಿ ಐವರು ಪೊಲೀಸರ ಸಾವು

Posted by Vidyamaana on 2023-11-20 15:27:41 |

Share: | | | | |


ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ ; ಟ್ರಕ್ ಗೆ ಕಾರು ಡಿಕ್ಕಿ  ಐವರು ಪೊಲೀಸರ ಸಾವು

ಜೈಪುರ: ಭೀಕರ ರಸ್ತೆ ಅಪಘಾತದಲ್ಲಿ ಐವರು ಪೊಲೀಸ್‌ ಅಧಿಕಾರಿಗಳು  ಸಾವನ್ನಪ್ಪಿ ಇಬ್ಬರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಚುರು ಎಂಬಲ್ಲಿ ಭಾನುವಾರ ನಡೆದಿದೆ.


ಇಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಆಗಲಿದ್ದ ಕಾರಣ ಪೊಲೀಸರು ಕಾರಿನಲ್ಲಿ ನಗೌರ್‌ನಿಂದ ಜುಂಜುನುಗೆ ಕರ್ತವ್ಯಕ್ಕಾಗಿ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.




ಪೊಲೀಸರ ವಾಹನ ಅತೀ ವೇಗದಿಂದ ಪ್ರಯಾಣಿಸುತ್ತಿತ್ತು. ಈ ವೇಳೆ ಟ್ರಕ್‌ ವೊಂದು ಓವರ್‌ ಟೇಕ್‌ ಮಾಡಿ ಹೋಗಿದೆ. ಇದೇ ಸಂದರ್ಭದಲ್ಲಿ ಮುಂದೆ ಹೋಗುತ್ತಿದ್ದ ಟ್ರಕ್‌ ಅಚಾನಕ್‌ ಆಗಿ ಬ್ರೇಕ್‌ ಹಾಕಿದೆ. ಪರಿಣಾಮ ಪೊಲೀಸರ ವಾಹನ ಟ್ರಕ್‌ ಗೆ ಹೋಗಿ ಢಿಕ್ಕಿ ಹೊಡೆದಿದೆ. ಇದರಿಂದ ವಾಹನದಲ್ಲಿ ಐವರು ಪೊಲೀಸರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ತಿಳಿಸಿದೆ. 


ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಮೃತ ಪೊಲೀಸರೆಲ್ಲ ರಾಜಸ್ಥಾನದ ನಾಗೌರ್ ಜಿಲ್ಲೆಯವರೆಂದು ವರದಿ ತಿಳಿಸಿದೆ.

ಹೃದಯಾಘಾತದಿಂದ ನಿಲಿಕಾ ನಿಧನ

Posted by Vidyamaana on 2024-06-27 16:50:11 |

Share: | | | | |


ಹೃದಯಾಘಾತದಿಂದ ನಿಲಿಕಾ ನಿಧನ

ಮಡಿಕೇರಿ: ಎಂದಿನಂತೆ ಇನ್ನೇನು ತನ್ನ ಕರ್ತವ್ಯಕ್ಕೆ ಹೊರಡಬೇಕಾಗಿದ್ದ ಯುವತಿ ಹೃದಯಾಘಾತದಿಂದ ಮನೆಯಲ್ಲಿ ಮೃತಪಟ್ಟ ದಾರುಣ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ನೆಲಜಿ ಗ್ರಾಮದಲ್ಲಿ ನಡೆದಿದೆ.ನೆಲಜಿ ಗ್ರಾಮದ ಕಾಫಿ ಬೆಳೆಗಾರರಾದ ಪೊನ್ನಪ್ಪ ಅವರ ಮಗಳು ನಿಲಿಕಾ ಪೊನ್ನಪ್ಪ (24) ಮೃತ ಯುವತಿ.

ವಾರ್ತಾಭಾರತಿಯ ವರದಿಗಾರ ಇಬ್ರಾಹಿಂ ಖಲೀಲ್ ಬನ್ನೂರು ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿ ಗೆ ಆಯ್ಕೆ

Posted by Vidyamaana on 2024-01-31 13:19:17 |

Share: | | | | |


ವಾರ್ತಾಭಾರತಿಯ ವರದಿಗಾರ ಇಬ್ರಾಹಿಂ ಖಲೀಲ್ ಬನ್ನೂರು  ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿ ಗೆ ಆಯ್ಕೆ

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ 2022-23 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ವಾರ್ತಾಭಾರತಿಯ ವರದಿಗಾರ ಪುತ್ತೂರು ಬನ್ನೂರು ನಿವಾಸಿ  ಇಬ್ರಾಹೀಂ ಖಲೀಲ್ ಬನ್ನೂರು ರವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


 ಅತ್ಯುತ್ತಮ ಕ್ರೀಡಾ ವರದಿಗಾಗಿ ಇಬ್ರಾಹೀಂ ಖಲೀಲ್‌ ಬನ್ನೂರು ಅವರಿಗೆ ಕೆ. ಎ. ನೆಟ್ಟಕಲಪ್ಪ ಪ್ರಶಸ್ತಿಯನ್ನು ಘೋಷಿಸಲಾಗಿದೆ.


ಇಬ್ರಾಹೀಂ ಖಲೀಲ್ ಅವರ ವರದಿ :


ಹ್ಯಾಟ್ರಿಕ್ ವಿಶ್ವಕಪ್ ಗೆದ್ದರೂ ಅಂಧ ಕ್ರಿಕೆಟಿಗರಿಗೆ ಬೆಳಕಾಗದ ಸರಕಾರ!


ದಾವಣಗೆರೆಯಲ್ಲಿ ಫೆ. 3 ಮತ್ತು 4 ರಂದು ನಡೆಯುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

Recent News


Leave a Comment: