ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಸುದ್ದಿಗಳು News

Posted by vidyamaana on 2024-07-03 19:28:29 |

Share: | | | | |


ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು:  ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಶಾಸಕ ಅಶೋಕ್ ರೈ ಕಚೇರಿ ಮೂಲಕ ಉಚಿತ ಕಾರ್ಮಿಕ ಇ ಕಾರ್ಡು ಮಾಡಿಸಿಕೊಂಡ ಕಟ್ಟಡ ಕಾರ್ಮಿಕರಿಗೆ ಕಾರ್ಡು ವಿತರಣಾ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.

ಒಟ್ಟು ೩೪ ಮಂದಿ ಕಾರ್ಮಿಕರಿಗೆ ಕಾರ್ಡು ವಿತರಿಸಲಾಯಿತು. ಕಟ್ಟಡ ಕಾರ್ಮಿಕರು ಶಾಸಕರ ಕಚೇರಿ ಮೂಲಕ ನೋಂದಾವಣೆ ಮಾಡಿಕೊಂಡಿದ್ದರು. ಇ ಕಾರ್ಡು ವಿತರಿಸಿ ಮಾತನಾಡಿದ ಶಾಸಕರು ರಾಜ್ಯ ಸರಕಾರದಿಂದ ಕಾರ್ಮಿಕರಿಗ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ.ಆಕಸ್ಮಿಕಮರಣಾವಾದರೆ ರೂ ೧ ಲಕ್ಷ ಮತ್ತು ಅಪಘಾತದಲ್ಲಿ ಮರಣಹೊಂದಿದರೆ ೫ ಲಕ್ಷ ಸರಕಾರದಿಂದ ಪರಿಹಾರ ಸಿಗುತ್ತದೆ. ಕಾರ್ಮಿಕರು ತನ್ನ ಕಚೇರಿ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಒಟ್ಟು ೩೦೦೦ ಮಂದಿಗೆ ಕಾರ್ಡು ವಿತರಣೆ ಮಾಡಲಾಗಿದೆ.

ಕಟ್ಟಡ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಸರಕಾರ ನೀಡುತ್ತಿದೆ. ಕಳೆದ ಸಾಲಿನಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ಕೂಡಾ ವಿತರಣೆ ಮಾಡಲಾಗಿದೆ. ಕಟ್ಟಡ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳುವುದರ ಜೊತೆ ಇದುವರೆಗೂ ಕಾರ್ಡು ಮಾಡಿಸದವರು ಶಾಸಕರ ಕಚೇರಿಗೆ ಬಂದು ಉಚಿತವಾಗಿ ಕಾರ್ಡು ಮಾಡಿಸಿಕೊಳ್ಳಬಹುದಾಗಿದೆ ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಮಾಧ್ಯಮ ಸಂಚಾಲಕ ಕೃಷ್ಣಪ್ರಸಾದ್ ಭಟ್ ಬೊಳ್ಳಾಯಿ ಉಪಸ್ಥಿತರಿದ್ದರು. ಸಿಬಂದಿ ರಚನಾ ಸ್ವಾಗತಿಸಿ ವಂದಿಸಿದರು.

 Share: | | | | |


ಭೀಕರ ರಸ್ತೆ ಅಪಘಾತ ಪ್ರಕರಣ : ಸಾವಿನ ಸಂಖ್ಯೆ 13ಕ್ಕೆ ಏರಿಕೆ,ಇಬ್ಬರ ಸ್ಥಿತಿ ಗಂಭೀರ

Posted by Vidyamaana on 2024-06-28 19:01:49 |

Share: | | | | |


ಭೀಕರ ರಸ್ತೆ ಅಪಘಾತ ಪ್ರಕರಣ : ಸಾವಿನ ಸಂಖ್ಯೆ 13ಕ್ಕೆ ಏರಿಕೆ,ಇಬ್ಬರ ಸ್ಥಿತಿ ಗಂಭೀರ

ಹಾವೇರಿ : ಇಂದು ಬೆಳ್ಳಂಬೆಳಗ್ಗೆ ಹಾವೇರಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಹತ್ತಕ್ಕೂ ಹೆಚ್ಚು ಜನರು ಸಾವನಪ್ಪಿದು ಇದೀಗ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ಹಾವೇರಿಯ ಎಸ್ ಪಿ ಅಂಶಿ ಕುಮಾರ್ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಇಬ್ಬರು ಮಕ್ಕಳು ಇಬ್ಬರು ಪುರುಷರು ಸೇರಿದಂತೆ 9 ಮಹಿಳೆಯರು ಸಾವನಪ್ಪಿದ್ದಾರೆ.

ಹೌದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಅಪಘಾತ ನಡೆದಿದೆ. ಚಿಂಚೋಳಿಯ ಮಾಯಮ್ಮ ದೇವಿ ದರ್ಶನ ಪಡೆದು ವಾಪಸಾಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಬೆಳ್ಳಂ ಬೆಳಗ್ಗೆ ಭೀಕರ ರಸ್ತೆ ಅಪಘಾತದಲ್ಲಿ 13 ಜನ ಸಾವನ್ನಪಪ್ಪಿದ್ದಾರೆ ಎಂದು ಎಸ್ ಪಿ ಅಂಶಿ ಕುಮಾರ್ ಮಾಹಿತಿ ನೀಡಿದ್ದಾರೆ.ಮೃತರು ಶಿವಮೊಗ್ಗ ಜಿಲ್ಲೆಯ ಮೂಲದವರು ಎಂದು ತಿಳಿದು ಬಂದಿದೆ. ಪರಶುರಾಮ, ಭಾಗ್ಯ, ನಾಗೇಶ್, ವಿಶಾಲಾಕ್ಷಿ,ಅರ್ಪಿತ,ಸುಭದ್ರ, ಬಾಯಿ, ಪುಣ್ಯ, ಮಂಜುಳಾಬಾಯಿ, ಆದರ್ಶ, ಮಾನಸ, ಅಪರೂಪ, ಮಂಜುಳಾ ಮೃತಪಟ್ಟವರ ಎಂದು ಗುರುತಿಸಲಾಗಿದೆ.

ಪುತ್ತೂರು ನಗರಸಭೆಯಲ್ಲಿ ತೆರಿಗೆ ವಸೂಲಾತಿ ಆಂದೋಲನ

Posted by Vidyamaana on 2023-10-06 08:36:41 |

Share: | | | | |


ಪುತ್ತೂರು ನಗರಸಭೆಯಲ್ಲಿ ತೆರಿಗೆ ವಸೂಲಾತಿ ಆಂದೋಲನ

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ಕಟ್ಟಡ ತೆರಿಗೆ, ಉದ್ಯಮ ಪರವಾನಿಗೆ, ನೀರಿನ ಶುಲ್ಕ ಇತ್ಯಾದಿ ತೆರಿಗೆಗಳು ಬಾಕಿ ಇರುವ ಹಿನ್ನೆಲೆಯಲ್ಲಿ ನಗರಸಭೆಯಿಂದ 31 ವಾರ್ಡ್‌ಗಳಲ್ಲಿ 15 ದಿನಗಳ ತೆರಿಗೆ ವಸೂಲಾತಿ ಆಂದೋಲನಕ್ಕೆ ಗುರುವಾರ ಚಾಲನೆ ನೀಡಲಾಯಿತು. ನಗರಸಭೆಯ ಪ್ರತಿ ವಾರ್ಡ್‌ಗಳಿಗೂ ನಗರಸಭೆ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಬಾಕಿದಾರರಿಗೆ ನೋಟೀಸ್ ನೀಡಿ ಎಚ್ಚರಿಕೆ ನೀಡಲಿದ್ದಾರೆ.


ನಗರಸಭೆ ಕಚೇರಿ ವಠಾರದಲ್ಲಿ ಆಂದೋಲನಕ್ಕೆ ತಮಟೆ ಬಡಿದು ಚಾಲನೆ ನೀಡಿದ ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಮಾತನಾಡಿ, ನಗರಸಭೆ ಪ್ರತಿ ವಾರ್ಡ್‌ಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ವಾರ್ಡ್‌ಗಳಲ್ಲಿ ಪರಿಶೀಲನೆ ನಡೆಸಿ ಬಾಕಿದಾರರನ್ನು ಜಾಗೃತಿಗೊಳಿಸಲಿದ್ದಾರೆ. ಬಾಕಿ ಮಾಡಿದವರಿಗೆ ನೋಟಿಸ್ ನೀಡುವ ಕಾರ್ಯ ಮಾಡಲಿದ್ದಾರೆ. ಈ ನಡುವೆ ಪ್ರತಿ ವಾರ್ಡ್‌ಗಳ ಗಲ್ಲಿಗಲ್ಲಿಯಲ್ಲೂ ವಾಹನದ ಮೂಲಕ ತಮಟೆ ಬಡಿಯುವ ಮೂಲಕ ಜಾಗೃತಿ ಮೂಡಿಸುವ ಕಾರ್ಯ ನಡೆಯಲಿದೆ ಎಂದರು.ನಗರಸಭೆಯ ಎಲ್ಲಾ ಕಾಮಗಾರಿಗಳು, ಕೆಲಸ ಕಾರ್ಯಗಳಿಗೆ ತೆರಿಗೆ ಹಣವನ್ನೇ ಬಳಕೆ ಮಾಡಲಾಗುತ್ತದೆ. ಈಗಾಗಲೇ ರಾಜ್ಯ ಸರಕಾರದ ವತಿಯಿಂದ ಆದೇಶ ಮಾಡಿರುವಂತೆ ಶೇ. 100ರಷ್ಟು ತೆರಿಗೆ ವಸೂಲಾತಿ ಜನವರಿ ತಿಂಗಳ ಒಳಗೆ ಮಾಡಬೇಕಾಗಿದೆ. ಅದಕ್ಕಾಗಿ ಆಂದೋಲನ ಹಮ್ಮಿಕೊಂಡಿದ್ದೇವೆ. ಮುಂದಿನ ದಿನ ರಾಜ್ಯ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಯಾವುದೇ ಅನುದಾನ ಬಿಡುಗಡೆ ಆಗಬೇಕಾದರೂ ಶೇ. 100ರಷ್ಟು ನಮ್ಮ ತೆರಿಗೆ ವಸೂಲಾತಿ ಆದರೆ ಮಾತ್ರ ನಮಗೆ ಅನುದಾನ ಬಿಡುಗಡೆಯಾಗಬಹುದು. ಈ ನಿಟ್ಟಿನಲ್ಲಿ 15 ದಿನಗಳ ಆಂದೋಲನದಲ್ಲಿ ನಾಗರಿಕರು ಬಾಕಿ ತೆರಿಗೆಯನ್ನು ಪಾವತಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನ ತೆರಿಗೆ ವಸೂಲಾತಿಗೆ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ ಎಂದರು.


ನಗರಸಭೆ ಸದಸ್ಯ ಯುಸೂಪ್ ಡೀಮ್, ಕಂದಾಯ ನಿರೀಕ್ಷಕ ರಾಜೇಶ್, ಬಿಲ್ ಕಲೆಕ್ಟರ್ ಪುರುಷೋತ್ತಮ, ರೇಣುಕಾ ಪ್ರಸಾದ್, ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್, ಕರುಣಾಕರ್, ಸಿ.ಆರ್. ದೇವಾಡಿಗ, ರವಿಪ್ರಕಾಶ್, ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾಕಿರಣ್, ವರಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು. ನಗರಸಭೆಯ ವಿವಿಧ ಕಡೆ ರಾಧಾಕೃಷ್ಣ ಅವರು ತಮಟೆ ಬಾರಿಸಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು.

ದ.ಕ. ಜಿಲ್ಲೆಯಲ್ಲಿ ಸುಡುಮದ್ದು ತಯಾರಿಕಾ ಘಟಕಗಳ ಪರವಾನಿಗೆ ತಾತ್ಕಾಲಿಕ ಅಮಾನತು: ದಂಡಾಧಿಕಾರಿ ಡಾ. ಆನಂದ್

Posted by Vidyamaana on 2024-01-30 08:16:46 |

Share: | | | | |


ದ.ಕ. ಜಿಲ್ಲೆಯಲ್ಲಿ ಸುಡುಮದ್ದು ತಯಾರಿಕಾ ಘಟಕಗಳ ಪರವಾನಿಗೆ ತಾತ್ಕಾಲಿಕ ಅಮಾನತು: ದಂಡಾಧಿಕಾರಿ ಡಾ. ಆನಂದ್

ಮಂಗಳೂರು : ವೇಣೂರಿನಲ್ಲಿ ಪಟಾಕಿ ಘಟಕ (Venoor Blast) ಸ್ಪೋಟದಿಂದ ಮೂವರ ಸಾವು ಘಟನೆ ನಡೆದ ನಂತರ ಸರ್ಕಾರ  ಎಚ್ಚೆತ್ತುಕೊಂಡಿದೆ.ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುಡುಮದ್ದು ತಯಾರಿಕಾ ಘಟಕಗಳಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಿ ದ.ಕ ಜಿಲ್ಲಾಧಿಕಾರಿ(ಪ್ರಭಾರ) ಡಾ.ಆನಂದ ಕೆ. ಆದೇಶ ಮಾಡಿದ್ದಾರೆ.ದ.ಕ ಜಿಲ್ಲೆಯ ಎಲ್ಲಾ ಸುಡುಮದ್ದು ತಯಾರಿಕಾ ಘಟಕಗಳನ್ನು ನಿರ್ಬಂಧಿಸಿ ಅಮಾನತ್ತಿನಲಿಡಲು ಆದೇಶ ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶ, ಸರ್ಕಾರದ ಮಾರ್ಗಸೂಚಿ ಪಾಲನೆಯ ಮರುಪರಿಶೀಲನೆಗಾಗಿ ಪಟಾಕಿ ತಯಾರಿಕೆ, ಮಾರಾಟ ಘಟಕಗಳ ಮರುಪರಿಶೀಲನೆಗೆ ಜಿಲ್ಲಾ ಮಟ್ಟದ ತನಿಖಾ ಸಮಿತಿ ರಚನೆ ಮಾಡಿಲಾಗಿದೆ.ಮಂಗಳೂರು ಮತ್ತು ಪುತ್ತೂರು ಎಸಿಗಳ ಅಧ್ಯಕ್ಷತೆಯ ಸಮಿತಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಸುಡುಮದ್ದು ತಯಾರಿಕಾ ಘಟಕಗಳನ್ನು ತಕ್ಷಣ ಸೀಲ್ ಡೌನ್ ಮಾಡಲು ಆದೇಶ ಮಾಡಲಾಗಿದೆ.ಬಳಿಕ ಸ್ಪೋಟಕ ಅಧಿನಿಯಮ ಮತ್ತು ಸರ್ಕಾರದ ಮಾರ್ಗಸೂಚಿ ಪಾಲನೆ ಬಗ್ಗೆ ಪರಿಶೀಲನೆಗೆ ಫೆ.5 ರೊಳಗೆ ಈ ಬಗ್ಗೆ ಸಮಗ್ರ ವರದಿ ಸಲ್ಲಿಸಲು ದ.ಕ ಜಿಲ್ಲಾಧಿಕಾರಿ ಆದೇಶ ಮಾಡಲಾಗಿದೆ.ಮುಂದಿನ ಆದೇಶದವರೆಗೆ ದ.ಕ ಜಿಲ್ಲೆಯ ಎಲ್ಲಾ ಸುಡುಮದ್ದು ಘಟಕಗಳು ಬಂದ್ ಗೆ ಆದೇಶ ಮಾಡಲಾಗಿದೆ.

ಬಂಟ್ವಾಳ: ಯಕ್ಷಗಾನದ ವೇಷಭೂಷಣ ತೊಟ್ಟು ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಗೆ ತರಾಟೆ

Posted by Vidyamaana on 2023-10-24 08:07:11 |

Share: | | | | |


ಬಂಟ್ವಾಳ: ಯಕ್ಷಗಾನದ ವೇಷಭೂಷಣ ತೊಟ್ಟು ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಗೆ ತರಾಟೆ

ಬಂಟ್ವಾಳ:ನವರಾತ್ರಿ ಸಂದರ್ಭದಲ್ಲಿ ವಿವಿಧ ನಮೂನೆಯ ಕಾಣಸಿಕ್ಕರೆ ಇಲ್ಲೊಬ್ಬ ವೇಷಧಾರಿ ಯಕ್ಷಗಾನದ ವೇಷ ಹಾಕಿದ್ದ ಎಂಬ‌ ಕಾರಣಕ್ಕಾಗಿ ಹಿರಿಯ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಅವರು ವೇಷಧಾರಿ ವ್ಯಕ್ತಿಯನ್ನು ತಡೆದು,ವೇಷವನ್ನು ಕಳಚಿಸಿದ ಘಟನೆಯೊಂದು ಬಿಸಿರೋಡಿನಲ್ಲಿ ನಡೆದಿದ್ದು, ಅ ಸಂದರ್ಭದಲ್ಲಿ ನಡೆದ ಮಾತಿನ ವಿಡಿಯೋ ಒಂದು ವೈರಲ್ ಆಗಿದೆ‌.ದಾವಣಗೆರೆ ಮೂಲದ ವ್ಯಕ್ತಿ ಎಂದು ಹೇಳಲಾಗಿರುವ ಈತ ಶನಿವಾರ ಬಿಸಿರೋಡಿನ ಬ್ರಹ್ಮಶ್ರೀ ನಾರಾಯಣ ಮಂದಿರದ ಬಳಿ ಯಕ್ಷಗಾನದ ವೇಷ ಹಾಕಿ ಹೋಗುತ್ತಿದ್ದ ಈ ವೇಳೆ ಆಗಮಿಸಿದ ಕಲಾವಿದ ಅಶೋಕ್ ‌ಶೆಟ್ಟಿ ಸರಪಾಡಿ ಅವರು ಯಕ್ಷಗಾನದ ವೇಷ ಹಾಕುವಂತಿಲ್ಲ,ಅದನ್ನು ತೆಗೆಯುವಂತೆ ಒತ್ತಾಯ ಮಾಡುವ ಬಗ್ಗೆ ವಿಡಿಯೋದಲ್ಲಿ ಕಂಡು ಬಂದಿದೆ. ಯಕ್ಷಗಾನ ವನ್ನು ನಾವು ಇಲ್ಲಿ ಪೂಜೆ ಮಾಡುತ್ತೇವೆ ನಿನಗೆ ಗೊತ್ತುಂಟಾ? ನೀನು ವೇಷು ಹಾಕಿ ಬಿಕ್ಷೆ ಬೇಡುತ್ತಿಯಾ ಎಂದು ಪ್ರಶ್ನಿಸಿದ್ದಾರೆ.


ನಾನು ತಪ್ಪು ಮಾಡಿದ್ದರೆ ನನಗೆ ಹೊಡೆಯಿರಿ ಎಂದು ವೇಷಧಾರಿ ಹೇಳಿದಾಗ ಹೊಡೆಯುವುದು ಅಲ್ಲ ವೇಷ ತೆಗೆಯದಿದ್ದಲ್ಲಿ ಕೈ ಕಾಲು ಮುರಿದು ಹಾಕುವಂತೆ ಬೆದರಿಸಿ,ಬೈದಿರುವ ವಿಡಿಯೋ ಇದೀಗ ವೈರಲ್ ಆಗಿದೆ.ವೇಷಧಾರಿಯ ವೇಷವನ್ನು ಕಳಚಿದ ಘಟನೆಯ ಬಗ್ಗೆ ವಿಡಿಯೋ ವೈರಲ್ ಆದ ಕೂಡಲೇ ಸಾರ್ವಜನಿಕ ವಲಯದಲ್ಲಿ ಪರವಿರೋಧದ ಚರ್ಚೆಗಳು ಆರಂಭವಾಗಿದೆ. ಯಕ್ಷಗಾನದ ಕಲೆಯ ಬಗ್ಗೆ ಅಪಚಾರ ಮಾಡುವುದು ಕೂಡ ಸರಿಯಲ್ಲ‌ಅವಹೇಳನಕಾರಿಯಾಗಿ ವೇಷಧರಿಸಿ ಕಲೆಯ ಬಗ್ಗೆ ನಿಂದನೆ ಮಾಡುವ ಕೆಲಸಗಳು ನಡೆಯಬಾರದು ಎಂಬ ಕೂಗು ಒಂದೆಡೆಯಾದರೆ, ವೇಷಧಾರಿಯ ಜೊತೆ ಇವರು ನಡೆದುಕೊಂಡ ನಡವಳಿಕೆ ಸರಿಯಲ್ಲ ಎಂಬ ಮಾತುಗಳು ಕೇಳಿಬಂದಿದೆ.


ಜಿಲ್ಲಾಡಳಿತ ಯಾವ ಯಾವ ವೇಷವನ್ನು ಹಾಕಬಾರದು ಎಂಬುದನ್ನು ಸುತ್ತೋಲೆ ಹೊರಡಿಸಬೇಕು. ಅಧಿಕೃತವಾಗಿ ಯಾವುದೇ ವೇಷವನ್ನು ಹಾಕಬಾರದು ಸುತ್ತೋಲೆಗಳಿಲ್ಲದ ಕಾರಣ ಅವರನ್ನು ತಡೆಯುವ ಹಕ್ಕು ಇಲ್ಲ ಎಂಬುದು ಇಲಾಖೆಯ ಸ್ಪಷ್ಟನೆಯಾಗಿದೆ.

ಪೋಷಕರೇ ಗಮನಿಸಿ : ಸುಕನ್ಯಾ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

Posted by Vidyamaana on 2024-06-22 11:31:59 |

Share: | | | | |


ಪೋಷಕರೇ ಗಮನಿಸಿ : ಸುಕನ್ಯಾ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

ನವದೆಹಲಿ : ಬೇಟಿ ಬಚಾವೋ-ಬೇಟಿ ಪಡಾವೋ ಅಭಿಯಾನದ ಅಡಿಯಲ್ಲಿ ಭಾರತ ಸರ್ಕಾರದ ಸಣ್ಣ ಠೇವಣಿ ಯೋಜನೆಯಾದ ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್ವೈ ಯೋಜನೆ) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು 2015 ರಲ್ಲಿ ಪ್ರಾರಂಭಿಸಿದರು. ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್ವೈ) ಅನ್ನು ದೇಶದಲ್ಲಿ ಹೆಣ್ಣು ಮಗುವಿನ ಭವಿಷ್ಯವನ್ನು ಭದ್ರಪಡಿಸಲು ವಿನ್ಯಾಸಗೊಳಿಸಲಾದ ಕಾರ್ಯತಂತ್ರದ ಹೂಡಿಕೆ ಯೋಜನೆಯಾಗಿ ಪರಿಚಯಿಸಲಾಯಿತು.

ಸುಕನ್ಯಾ ಸಮೃದ್ಧಿ ಯೋಜನೆ ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಜನನದಿಂದ 10 ವರ್ಷದವರೆಗೆ ಖಾತೆಯನ್ನು ತೆರೆಯಲು ಅನುವು ಮಾಡಿಕೊಡುತ್ತದೆ, ಖಾತೆಯು 21 ವರ್ಷಗಳ ನಂತರ ಪರಿಪಕ್ವಗೊಳ್ಳುತ್ತದೆ. ಮುಕ್ತಾಯದ ನಂತರ, ಮಗಳ ಶಿಕ್ಷಣ ಅಥವಾ ಮದುವೆಯ ವೆಚ್ಚಗಳನ್ನು ಬೆಂಬಲಿಸಲು ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು.

ಪೊಲೀಸರಿಗೆ ಧಮ್ಮಿ ಪ್ರಕರಣ; ಶಾಸಕ ಹರೀಶ್ ಪೂಂಜಾ, 40 ಮಂದಿ ವಿರುದ್ಧ ಚಾರ್ಜ್‌ಶೀಟ್

Posted by Vidyamaana on 2024-05-28 21:00:33 |

Share: | | | | |


ಪೊಲೀಸರಿಗೆ ಧಮ್ಮಿ ಪ್ರಕರಣ; ಶಾಸಕ ಹರೀಶ್ ಪೂಂಜಾ, 40 ಮಂದಿ ವಿರುದ್ಧ ಚಾರ್ಜ್‌ಶೀಟ್

ಬೆಳ್ತಂಗಡಿ : ಪೋಲಿಸರಿಗೆ ಧಮ್ಕಿ ಪ್ರಕರಣದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹಾಗೂ 40 ಮಂದಿ ವಿರುದ್ಧ ಪೊಲೀಸರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಶಾಸಕ ಹರೀಶ್‌ ಪೂಂಜಾ (Harish Poonja) ಜತೆ ಪೊಲೀಸ್ ಠಾಣೆಗೆ ಹೋಗಿದ್ದವರ ಹೆಸರನ್ನು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.ಪೊಲೀಸರಿಗೆ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ.ಪೊಲೀಸರಿಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಮೇ 22ರಂದು ವಿಚಾರಣೆಗೆ ಬಿಜೆಪಿ ಶಾಸಕ ಹರೀಶ್ ಪೂಂಜಾ ಹಾಜರಾಗಿದ್ದರು. ಅದಕ್ಕೂ ಮುನ್ನಾ ಅವರ ಬಂಧನಕ್ಕೆ ಬೆಳ್ತಂಗಡಿ ಪೊಲೀಸರು ಮುಂದಾದ ವೇಳೆ ಬಿಜೆಪಿ ಕಾರ್ಯಕರ್ತರು, ಮುಖಂಡರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನಂತರ ಶಾಸಕರನ್ನು ಪೊಲೀಸರು ಬಂಧಿಸದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿ ಅಲ್ಲಿಂದ ತೆರಳಿದ್ದರು.



Leave a Comment: