ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಮುರ : ಟಿಪ್ಪರ್-ಸ್ಕೂಟರ್ ನಡುವೆ ಡಿಕ್ಕಿ : ಇಬ್ಬರು ಗಂಭೀರ

Posted by Vidyamaana on 2024-02-22 15:59:18 |

Share: | | | | |


ಮುರ : ಟಿಪ್ಪರ್-ಸ್ಕೂಟರ್ ನಡುವೆ ಡಿಕ್ಕಿ : ಇಬ್ಬರು ಗಂಭೀರ

ಪುತ್ತೂರು:  ಮುರ ಸಮೀಪ ಎಂಪಿಎಂ ಸ್ಕೂಲ್ ಬಳಿ ಸ್ಕೂಟರ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದೆ. ಸ್ಕೂಟರ್ ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಚಿಂತಾಜನಕ ಸ್ಥಿತಿಯಲ್ಲಿ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕೆಎ 21 ಡಬ್ಲೂ 0247 ನಂಬರಿನ ಸ್ಕೂಟರ್ ಪುತ್ತೂರಿನಿಂದ ಕಬಕ ಕಡೆಗೆ ವೇಗವಾಗಿ ಹೋಗುತ್ತಿದ್ದ ವೇಳೆ ಕಬಕದಿಂದ ಪುತ್ತೂರ ಕಡೆ ಬರುತ್ತಿದ್ದ ಟಿಪ್ಪರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ 

ರಸ್ತೆ ವಿಭಜಕಕ್ಕೆ ಆಂಬುಲೆನ್ಸ್ ಡಿಕ್ಕಿ: ಚಾಲಕ ಸಾವು

Posted by Vidyamaana on 2024-07-02 20:15:00 |

Share: | | | | |


ರಸ್ತೆ ವಿಭಜಕಕ್ಕೆ ಆಂಬುಲೆನ್ಸ್ ಡಿಕ್ಕಿ: ಚಾಲಕ ಸಾವು

ಕುಣಿಗಲ್: ಆಂಬುಲೆನ್ಸ್ ವಾಹನ ನಿಯಂತ್ರಣ ತಪ್ಪಿ, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಸಿಂಗೋನಹಳ್ಳಿ ಅಗ್ರಹಾರ ಗೇಟ್ ಬಳಿ ಮಂಗಳವಾರ ಸಂಭವಿಸಿದೆ.ಮೃತನನ್ನು ಮುಳಬಾಗಿಲಿನ ಶ್ರೀಕಾಂತ (26) ಎಂದು ಗುರುತಿಸಲಾಗಿದೆ.

ಲೋಕಸಭಾ ಚುನಾವಣೆ ಹಿನ್ನಲೆ : ಪುತ್ತೂರು ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಪಥಸಂಚಲನ

Posted by Vidyamaana on 2024-03-23 16:48:08 |

Share: | | | | |


ಲೋಕಸಭಾ ಚುನಾವಣೆ ಹಿನ್ನಲೆ : ಪುತ್ತೂರು ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಪಥಸಂಚಲನ

ಪುತ್ತೂರು :ಲೋಕಸಭಾ ಚುನಾವಣೆ-2024ರ (Lok Sabha Election-2024) ಅಂಗವಾಗಿ ಮತದಾರರಲ್ಲಿ (Voters) ಯಾವುದೇ ಭಯಬೇಡ ನಿಮ್ಮ ಜತೆ ನಾವಿದ್ದೇವೆ, ಮುಕ್ತವಾಗಿ ಪ್ರಜಾಪ್ರಭುತ್ವದ ತಮ್ಮ ಹಕ್ಕನ್ನು ನಿರ್ಭೀತಿಯಿಂದ ಚಲಾಯಿಸಿ ಎನ್ನುವ ಮುಂಜಾಗ್ರತೆಗಾಗಿ ಪುತ್ತೂರು ನಗರ ಹಾಗೂ ಗ್ರಾಮಾಂತರ  ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಪೊಲೀಸ್‌ ಇಲಾಖೆ ವತಿಯಿಂದ ಪಥಸಂಚಲನ  ನಡೆಸಲಾಯಿತು.


ಪುತ್ತೂರು ಉಪ ವಿಭಾಗದ ಡಿವೈಎಸ್‌ಪಿ ಅರುಣ್ ನಾಗೇ ಗೌಡ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಅರೆ ಸೇನಾ ಪಡೆ ಜತೆ ಪೊಲೀಸ್ ಸಿಬ್ಬಂದಿಗಳು ನಗರ ಸೇರಿದಂತೆ ತಾಲೂಕಿನ ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.ದರ್ಬೆ ವೃತ ದಿಂದ ಪ್ರಾರಂಭವಾದ ಪಥಸಂಚಲನವು ನಗರದ ವಿವಿಧ ಕಡೆ ಸಂಚರಿಸಿ, ಲೋಕಸಭಾ ಚುನಾವಣೆ ಅಂಗವಾಗಿ ಮತದಾರರು ನಿರ್ಭೀತಿಯಿಂದ ಮತ ಚಲಾಯಿಸುವ ಕುರಿತು ಜಾಗೃತಿ ಮೂಡಿಸಲಾಯಿತು,

ಉಡುಪಿಯಲ್ಲಿ ಗ್ಯಾಂಗ್ ವಾರ್: ಇಬ್ಬರು ಆರೋಪಿಗಳ ಬಂಧನ

Posted by Vidyamaana on 2024-05-25 11:35:04 |

Share: | | | | |


ಉಡುಪಿಯಲ್ಲಿ ಗ್ಯಾಂಗ್ ವಾರ್: ಇಬ್ಬರು ಆರೋಪಿಗಳ ಬಂಧನ

ಉಡುಪಿ: ನಡು ರಸ್ತೆಯಲ್ಲಿ ಗ್ಯಾಂಗ್ ವಾರ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಕಾಪುವಿನ ಗರುಡ ಗ್ಯಾಂಗಿನ ಆಶಿಕ್ ಮತ್ತು ರಕೀಬ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್ ನಲ್ಲಿದ್ದ ಉಳಿದವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

VIDEO ನಿಯಂತ್ರಣ ತಪ್ಪಿದ ಸಾರಿಗೆ ಬಸ್ ಬೈಕ್​ಗೆ ಡಿಕ್ಕಿ; ಓರ್ವ ಮೃತ್ಯು

Posted by Vidyamaana on 2023-11-05 12:16:41 |

Share: | | | | |


VIDEO  ನಿಯಂತ್ರಣ ತಪ್ಪಿದ ಸಾರಿಗೆ ಬಸ್ ಬೈಕ್​ಗೆ ಡಿಕ್ಕಿ; ಓರ್ವ ಮೃತ್ಯು

ನವದೆಹಲಿ: ವೇಗವಾಗಿ ಬಂದ ದೆಹಲಿ ಸಾರಿಗೆ ಸಂಸ್ಥೆಯ (DTC) ಬಸ್​ವೊಂದು ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಸಾಗುತ್ತಿದ್ದ ಇತರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.


VIDEO ನಿಯಂತ್ರಣ ತಪ್ಪಿದ ಸಾರಿಗೆ ಬಸ್ ಬೈಕ್​ಗೆ ಡಿಕ್ಕಿ ಹೊಡೆದ ವಿಡಿಯೋ ನೋಡಲು ಕ್ಲಿಕ್ ಮಾಡಿ

 ಅಪಘಾತ ದೆಹಲಿಯ ರೋಹಿಣಿ ನಗರ ಪ್ರದೇಶದಲ್ಲಿ ವರದಿಯಾಗಿದೆ.ಅಪಘಾತದ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಸ್ ಅತಿವೇಗವಾಗಿ ಚಲಿಸುತ್ತಿದ್ದ ಕಾರಣ, ಚಾಲಕ ನಿಯಂತ್ರಣ ಕಳೆದುಕೊಂಡು ಸ್ಥಳದಲ್ಲಿದ್ದ ಕಾರು ಮತ್ತು ಬೈಕ್​ಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ರಸ್ತೆ ಬದಿ ನಿಂತಿದ್ದ ದ್ವಿಚಕ್ರ ವಾಹನಗಳು ಸೇರಿದಂತೆ ಹಲವು ವಾಹನಗಳು ಜಖಂಗೊಂಡಿವೆ.

ಅಪಘಾತದ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದು, ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ,

ಜೂ 14 ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ರೆಡ್‌ಕ್ರಾಸ್‌ ನಿಂದ ಜಾಗತಿಕ ರಕ್ತದಾನಿಗಳ ದಿನಾಚರಣೆ ರಕ್ತದಾನ ಶಿಬಿರ

Posted by Vidyamaana on 2023-06-13 09:33:05 |

Share: | | | | |


ಜೂ 14 ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ರೆಡ್‌ಕ್ರಾಸ್‌ ನಿಂದ ಜಾಗತಿಕ ರಕ್ತದಾನಿಗಳ ದಿನಾಚರಣೆ ರಕ್ತದಾನ ಶಿಬಿರ

ಪುತ್ತೂರು: ರಕ್ತದಾನ ಪ್ರಕ್ರಿಯೆಯಲ್ಲಿ ಕಳೆದ ಏಳು ವರ್ಷಗಳಿಂದ ಮು೦ಚೂಣಿಯಲ್ಲಿರುವ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ವತಿಯಿಂದ ಭಾರತೀಯ ರೆಡ್ ಕ್ರಾಸ್‌ ಸಂಸ್ಥೆ ಪುತ್ತೂರು ಮತ್ತು ರೋಟರಿ ಕ್ಯಾಂಪೊ ರಕ್ತ ನಿಧಿ ಇವುಗಳ ಸಹಯೋಗದಲ್ಲಿ ಜಾಗತಿಕ ರಕ್ತದಾನಿಗಳ ದಿನಾಚರಣೆ ಮತ್ತು ಸಾರ್ವಜನಿಕ ರಕ್ತದಾನ ಶಿಬಿರವು ಜೂ.14ರಂದು ರೋಟರಿ ಕ್ಯಾ೦ಪ್ಯೂ ರಕ್ತ ನಿಧಿ ವಠಾರದಲ್ಲಿ ಜರಗಲಿರುವುದು, ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ರಕ್ತದಾನ ಮಾಡಲು ಅವಕಾಶವಿದ್ದು ರಕ್ತದಾನಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬಹುದೆಂದು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಕಾರ್ಯನಿರ್ವಾಹಕ ಇಫಾಜ್ ಬನ್ನೂರು ಮತ್ತು ರೆಡ್‌ ಕ್ರಾಸ್‌ ಪುತ್ತೂರು ಇದರ ಕಾರ್ಯಕ್ರಮ ಸಂಯೋಜನಾ ಸಮಿತಿಯ ಮುಖ್ಯಸ್ಥ ಪ್ಯಾಟ್ರಿಕ್ ಸಿಪ್ರಿಯನ್‌ ಮಸ್ಕರೇನಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Leave a Comment: