ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ - ಇಂದು ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ

ಸುದ್ದಿಗಳು News

Posted by vidyamaana on 2024-07-09 08:24:41 |

Share: | | | | |


ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ - ಇಂದು ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ

ಪುತ್ತೂರು: ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಹರಾ ಅರ್ಥಮೂವರ್ ಮತ್ತು ಬೋರ್ ವೆಲ್ ಮಾಲಕ ಪಿ.ಎಂ ಅಶ್ರಫ್, ಕಾರ್ಯದರ್ಶಿಯಾಗಿ ಕೊಂಕಣ್ ಗ್ಯಾಸ್ ನಲ್ಲಿ 22 ವರ್ಷ ಸೀನಿಯರ್ ಎಕೌಂಟೆಂಟ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಿ.ವಸಂತ್ ಶಂಕರ್, ಕೋಶಾಧಿಕಾರಿಯಾಗಿ ಯುನೈಟೆಡ್ ಇನ್ಸೂರೆನ್ನ ನಿವೃತ್ತ ಉದ್ಯೋಗಿ ನವೀನ್‌ಚಂದ್ರ  ರವರು ಆಯ್ಕೆಯಾಗಿದ್ದಾರೆ.

ಉಳಿದಂತೆ ಜೊತೆ ಕಾರ್ಯದರ್ಶಿ ಯಾಗಿ ನವ್ಯಶ್ರೀ , ನಿಯೋಜಿತ ಅಧ್ಯಕ್ಷರಾಗಿ ಚಂದ್ರಹಾಸ ರೈ ಬಿ, ಉಪಾಧ್ಯಕ್ಷರಾಗಿ ಪ್ರದೀಪ್‌ ಪೂಜಾರಿ, ನಿಕಟಪೂರ್ವ ಅಧ್ಯಕ್ಷರಾಗಿ ಡಾ.ರಾಜೇಶ್ ಬೆಜ್ಜಂಗಳ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಜಯಪ್ರಕಾಶ್ ಎ.ಎಲ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಲೋಕೇಶ್

ಎಂ.ಎಚ್, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇತಕರಾಗಿ ಸನತ್ ರೈ, ಯೂತ್ ಸರ್ವಿಸ್ ನಿರ್ದೇಶಕರಾಗಿ ಜಗನ್ನಾಥ್ ಆರಿಯಡ್ಕ, ಸಾರ್ಜಂಟ್ ಎಟ್ ಆರ್ಮ್ಸ್ ಶಿವರಾಂ ಎಂ.ಎಸ್. ಚೀರ್‌ಮ್ಯಾನ್‌ಗಳಾಗಿ ಡಾ.ರಾಮಚಂದ್ರ ಕೆ(ವೆಬ್), ಡಾ.ನಮಿತಾ(ಪೋಲಿಯೋ ಪ್ಲಸ್),ಭಾರತಿ ಎಸ್.ರೈ(ಟೀಚ್), ಜಯಪ್ರಕಾಶ್ಅಮೈ(ಟಿಆ‌ರ್ ಎಫ್), ಲಾವಣ್ಯ  (ಮೆಂಬರ್‌ಶಿಪ್ ಡೆವಲಪ್‌ಮೆಂಟ್). ಪದ್ಮನಾಭ ಶೆಟ್ಟಿ(ಜಿಲ್ಲಾ ಪ್ರಾಜೆಕ್ಟ್), ಸಂತೋಷ್ ಶೆಟ್ಟಿ(ಕ್ರೀಡೆ), ಪ್ರಮೋದ್ ಕುಮಾರ್ ಕೆ.ಕೆ(ಸಾಂಸ್ಕೃತಿಕ), ಪ್ರದೀಪ್ ಬೊಳ್ಳಾರ್ (ಫೆಲೋಶಿಪ್), ಶಾಂತಕುಮಾರ್(ಹಾಜರಾತಿ ಸಮಿತಿ), ಮೊಹಮ್ಮದ್ ರಫೀಕ್ ದರ್ಜೆ (ಸಿಎಲ್‌ಸಿಸಿ), ಅಮಿತಾ ಶೆಟ್ಟಿ(ಎಥಿಕ್ಸ್), ಸಂತೋಷ್ ಶೆಟ್ಟಿ(ಕ್ಲಬ್ ಫೆಸಿಲಿಟೇಟರ್ )ರವರು ಆಯ್ಕೆಯಾಗಿದ್ದಾರೆ.

ಇಂದು ಪದ ಪ್ರದಾನ: ಜು.9 ರಂದು ಪರ್ಲಡ್ಕ-ಬೈಪಾಸ್ ಆಫ್ರಿ ಕಂಫರ್ಟ್‌ನಲ್ಲಿ ಕ್ಲಬ್‌ನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ ಜರಗಲಿದ್ದು, ರೋಟರಿ ಜಿಲ್ಲೆ 3181 ಇದರ ಪಿಡಿಜಿ ರಂಗನಾಥ್ ಭಟ್ ರವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಲಿದ್ದಾರೆ. ವಲಯ ಐದರ ಅಸಿಸ್ಟಂಟ್ ಗವರ್ನರ್ ಸೂರ್ಯನಾಥ ಆಳ್ವ, ವಲಯ ಸೇನಾನಿ ಮೊಹಮದ್ ರಫೀಕ್ ದರ್ಬೆ, ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುರೇಶ್ ಪಿ.ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

 Share: | | | | |


ವಿವಾದಾತ್ಮಕ ಹೇಳಿಕೆ ವಿಚಾರ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಬಿಜೆಪಿ ಅಧ್ಯಕ್ಷ ಜಯಂತ್ ಕೋಟ್ಯಾನ್ ವಿರುದ್ಧ ಪ್ರಕರಣ ದಾಖಲು

Posted by Vidyamaana on 2023-05-24 15:27:22 |

Share: | | | | |


ವಿವಾದಾತ್ಮಕ ಹೇಳಿಕೆ ವಿಚಾರ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಬಿಜೆಪಿ ಅಧ್ಯಕ್ಷ ಜಯಂತ್ ಕೋಟ್ಯಾನ್ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇ.22 ರಂದು ಬೆಳ್ತಂಗಡಿಯ ಕಿನ್ಯಮ್ಮಯಾನೆ ಗುಣವತಿ ಅಮ್ಮ ಸಭಾಂಗಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ನಡೆದ ಅಭಿನಂದನ ಕಾರ್ಯಕ್ರಮದ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 24 ಹಿಂದುಗಳ ಕೊಲೆ ಮಾಡಿದವರೆಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರ ವಿರುದ್ಧ ಪ್ರಕರಣ ದಾಖಲಾಗಿದೆ.ಪೂಂಜಾ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ಮಹಿಳಾ ಕಾಂಗ್ರೆಸ್ ಗ್ರಾಮೀಣ ಘಟಕದ ವತಿಯಿಂದ ಇಂದು ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದರು.ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶ್ರೀಮತಿ ನಮಿತ ಕೆ ಪೂಜಾರಿ ನೀಡಿದ ದೂರಿನ ಮೇರೆಗೆ ಶಾಸಕ ಹರೀಶ್ ಪೂಂಜಾ ಹಾಗೂ ಬಿಜೆಪಿ ಅಧ್ಯಕ್ಷ ಜಯಂತ್ ಕೋಟ್ಯಾನ್ ವಿರುದ್ಧ ಐಪಿಸಿ ಸೆಕ್ಷನ್ 153, 153ಎ, 505 ರಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರ ನಾಪತ್ತೆ- ಮದುವೆ ರದ್ದು.ವರನ ಮೊದಲ ಪತ್ನಿಯಿಂದ ಬೆಳ್ಳಾರೆ ಠಾಣೆಯಲ್ಲಿ ದೂರು

Posted by Vidyamaana on 2023-02-09 08:42:58 |

Share: | | | | |


ವರ ನಾಪತ್ತೆ- ಮದುವೆ ರದ್ದು.ವರನ ಮೊದಲ ಪತ್ನಿಯಿಂದ ಬೆಳ್ಳಾರೆ ಠಾಣೆಯಲ್ಲಿ ದೂರು

 ಸುಳ್ಯದ ಪುರಭವನದಲ್ಲಿಫೆ 9 ನಡೆಯಬೇಕಾಗಿದ್ದ ಮದುವೆಯೊಂದು ವರ ಬಾರದ ಕಾರಣ ರದ್ದುಗೊಂಡ ಘಟನೆ ವರದಿಯಾಗಿದ್ದು, ವರನ ಮೊದಲ ಪತ್ನಿ ಗಂಡನ ಮೇಲೆ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ದೂರು ನೀಡಿರುವಳೆಂದು ತಿಳಿದುಬಂದಿದೆ. ಉಬರಡ್ಕ ಗ್ರಾಮದ ಯುವತಿಗೆ ಪುತ್ತೂರು ತಾಲೂಕು ರೆಂಜ ಗ್ರಾಮದ ಗುಮ್ಮಟಗದ್ದೆಯ ಕೃಷ್ಣ ಎಂಬಾತನೊಂದಿಗೆ ಮದುವೆ ನಿಗದಿಯಾಗಿತ್ತು.ಇಂದು ಕೆ.ವಿ.ಜಿ. ಪುರಭವನದಲ್ಲಿ ಮದುವೆ ನಡೆಯಬೇಕಾಗಿತ್ತು. ಮದುಮಗನ ಕಡೆಯಿಂದ ಜನ ಬಂದು ಟೌನ್ ಹಾಲ್ ಅಲಂಕಾರವೂ ನಡೆದಿತ್ತು. ನಿನ್ನೆಯ ದಿನ ವಧುವಿನ ಮನೆಯಲ್ಲಿ ಡಿ.ಜೆ. ಅಳವಡಿಸಿ ಸಂಭ್ರಮಪಡಲಾಗಿತ್ತು. ಇಂದು ವಧುವಿನ ಕಡೆಯವರು ಮದುವೆಗಾಗಿ ಕೆ.ವಿ.ಜಿ. ಟೌನ್ ಹಾಲ್ ಗೆ ಬಂದು ಸಿದ್ಧತೆ ನಡೆಸುತ್ತಿದ್ದರು. 500 ಮಂದಿಗೆ ಭೋಜನದ ವ್ಯವಸ್ಥೆ ಮಾಡಲಾಗುತ್ತಿತ್ತು.ಇದ್ದಕ್ಕಿದ್ದಂತೆ ಮಾಹಿತಿ ಬಂತು - ವರ ಕಾಣುತ್ತಿಲ್ಲ ಎಂದು.ಅವನ ಫೋನ್ ನಂಬರಿಗೆ ಕರೆ ಮಾಡುವಾಗ ಸ್ವಿಚ್ ಆಫ್.ವಧುವಿನ ಕಡೆಯವರು ಕಂಗಾಲು. ವಿಷಯ ತಿಳಿದು ಬಂದದಲಿತ ಮುಖಂಡೆ ಸರಸ್ವತಿಯವರ ನೇತೃತ್ವದಲ್ಲಿ ಸುಳ್ಯಪೋಲೀಸ್ ಠಾಣೆಗೆ ವಿಷಯ ತಿಳಿಸಲಾಯಿತು.ಇಷ್ಟೊತ್ತಿಗೆ ತಿಳಿದು ಬಂದ ಮತ್ತೊಂದು ವಿಷಯವೆಂದರೆ, ಆ ವರನಿಗೆ ಈ ಹಿಂದೆ ಒಂದು ಮದುವೆಯಾಗಿದ್ದು, ಅವನ ಹೆಂಡತಿ ಗಂಡನ ವಿರುದ್ಧ ಬೆಳ್ಳಾರೆ ಪೋಲೀಸ್ ಠಾಣೆಗೆ ಹೋಗಿ ದೂರು ಕೊಡಲು ಹೋಗಿದ್ದಾಳೆ ಎಂದು. ಇನ್ನು ಈ ಮದುವೆ ಆಗುವುದಿಲ್ಲವೆಂದು ತಿಳಿದು ವಧುವಿನ ಕಡೆಯವರು ಸಭಾಂಗಣದಿಂದ ತೆರಳಿದರು. ಸಿದ್ಧಗೊಂಡಿದ್ದ ಊಟವನ್ನು ಹಾಸ್ಟೆಲ್ ಗಳಿಗೆ ಕೊಡುವುದೆಂದು ನಿರ್ಧರಿಸಿದರು.

ಮಾಜಿ ಸಿಎಂ ಯಡಿಯೂರಪ್ಪ ಕಾಲಿಗೆ ಗಾಯ

Posted by Vidyamaana on 2023-10-15 22:13:34 |

Share: | | | | |


ಮಾಜಿ ಸಿಎಂ ಯಡಿಯೂರಪ್ಪ ಕಾಲಿಗೆ ಗಾಯ

ರಾಯಚೂರು (ಅ.15): ರಾಜ್ಯದ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿಕಾರಿಪುರದಿಂದ ರಾಯಚೂರು ನಗರಕ್ಕೆ ಹೆಲಿಕಾಪ್ಟರ್‌ನಲ್ಲಿ ಹೋಗುವಾಗ ಕಾಲು ಉಳುಕಿದೆ. ಹೆಲಿಕಾಪ್ಟರ್‌ ಹತ್ತುವಾಗ ಕಾಲು ಉಳುಕಿದ್ದು, ನಂತರ ಹೆಲಿಕಾಪ್ಟರ್‌ ಇಳಿಯಲಾಗದೇ ಪರದಾಡಿದ ಪ್ರಸಂಗ ನಡೆದಿದೆ.ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಯಸ್ಸಾಗಿರುವ ಹಿನ್ನೆಲೆಯಲ್ಲಿ ಹೆಚ್ಚಾಗಿ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ದೂರದ ಪ್ರಯಾಣವನ್ನೂ ಮಾಡುವುದಿಲ್ಲ. ವಯೋಸಹಜವಾಗಿ ಸ್ನಾಯು ಹಾಗೂ ಕೀಲು- ಮೂಳೆಗಳಲ್ಲಿ ಶಕ್ತಿ ಕುಂದಿದ್ದು ಮೊದಲಿನಂತೆ ಸಕ್ರಿಯವಾಗಿ ರಾಜಕೀಯದಲ್ಲಿ ಭಾಗವಹಿಸುತ್ತಿಲ್ಲ. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಲವೆಡೆ ರಾಜ್ಯ ಸಂಚಾರ ಮಾಡಿ ಪಕ್ಷದ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಅದೇ ರೀತಿ ಇಂದು ಮಧ್ಯಾಹ್ನ ಭದ್ರತಾ ಸಿಬ್ಬಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿಕಾರಿಪುರದಿಂದ ಹೆಲಿಕಾಪ್ಟರ್‌ನಲ್ಲಿ ರಾಯಚೂರು ಜಿಲ್ಲೆಯ ಲಿಂಗಸಗೂರಿಗೆ ತೆರಳುವಾಗ ಘಟನೆ ನಡೆದಿದೆ. ಶಿಕಾರಿಪುರದಲ್ಲಿ ಹೆಲಿಕಾಪ್ಟರ್‌ ಹತ್ತುವಾಗ ಯಡಿಯೂರಪ್ಪ ಅವರ ಕಾಲು ಉಳುಕಿದೆ. ಇದಾದ ನಂತರ ಹೆಲಿಕಾಪ್ಟರ್‌ನಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ವಿಶ್ರಾಂತಿ ಪಡೆದಿದ್ದಾರೆ. ನಂತರ ಲಿಂಗಸಗೂರಿನಲ್ಲಿ ಇಳಿಯುವಾಗ ಕಾಲಿಗೆ ಪೆಟ್ಟು ಆಗಿದೆ ಎಂದು ತಿಳಿಸಿದ್ದಾರೆ. ಆಗ ಸಹಾಯಕರೊಂದಿಗೆ ಇಳಿಯಲು ಪ್ರಯತ್ನಿಸಿದರೂ ತೀವ್ರ ನೋವಿನಿಂದ ಕಾಲೂರಲೂ ಸಾಧ್ಯವಾಗದೇ ಪರದಾಡಿದ್ದಾರೆ.

ಅಕ್ರಮ ಸಂಬಂಧ ಇದೆಯೆಂದು ಹಲ್ಲೆ

Posted by Vidyamaana on 2023-08-23 16:26:59 |

Share: | | | | |


ಅಕ್ರಮ ಸಂಬಂಧ ಇದೆಯೆಂದು ಹಲ್ಲೆ

ಮಂಗಳೂರು: ಲೈವ್ ವಿಡಿಯೋ ಮಾಡಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದ್ದು ಗಂಭೀರ ಸ್ಥಿತಿಯಲ್ಲಿ ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 


ಪುತ್ತೂರಿನ ಕಟ್ಟತ್ತಾರು ನಿವಾಸಿ ಅಬ್ದುಲ್ ನಾಸಿರ್ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.‌


ಆತ್ಮಹತ್ಯೆಗೆ ಯತ್ನಿಸುವ ಮುನ್ನ ಯುವಕ ಬ್ಯಾರಿ ಭಾಷೆಯಲ್ಲಿ ವಿಡಿಯೋ ಮಾಡಿದ್ದು ಕೃತ್ಯಕ್ಕೆ ಕಾರಣ ಹೇಳಿ ನೇಣಿಗೆ ಶರಣಾಗುವುದಾಗಿ ಹೇಳಿದ್ದ.‌ ನಾನು ಕಟ್ಟತ್ತಾರು ನಿವಾಸಿ ಅಬ್ದುಲ್ ನಾಸಿರ್. ಅದ್ರಾಮ ಎಂಬವರ ಮನೆಯಲ್ಲಿ ಕಾರು ಚಾಲಕನಾಗಿದ್ದೆ. ಈಗ ಅಲ್ಲಿನ ಕುಟುಂಬದ ಹುಡುಗಿ ಜೊತೆಗೆ ಸಂಬಂಧ ಇದೆಯೆಂದು ಹೇಳಿ ಮನೆಗೆ ಕರೆದು ಹಲ್ಲೆ ನಡೆಸಿದ್ದಾರೆ. ನನಗೆ ಯಾವುದೇ ಹುಡುಗಿ ಜೊತೆಗೆ ಸಂಬಂಧ ಇಲ್ಲ. ನಾನು ಈಗ ಪುತ್ತೂರಿಗೆ ಹೋಗಿ ಸಾವಿಗೆ ಶರಣಾಗುತ್ತೇನೆ. ನನ್ನ ಸಾವಿಗೆ ಅದ್ರಾಮ ಮತ್ತು ಅವನ ಕುಟುಂಬಸ್ಥರೇ ಕಾರಣ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. 


ಕುಟುಂಬದ ಹೆಣ್ಣಿನ ಜೊತೆಗೆ ಸಂಬಂಧ ಇದೆಯೆಂದು ಹೇಳಿ ಹಲ್ಲೆ ನಡೆಸಿದ್ದಾರೆ. ನನಗೆ ಯಾವುದೇ ಹುಡುಗಿಯ ಸಂಬಂಧ ಇಲ್ಲ, ಆಕೆಯ ಗಂಡನೇ ಈ ಕಾರಿನಲ್ಲಿದ್ದಾನೆ ಎಂದು ಹೇಳಿ ಜೊತೆಗಿದ್ದ ನಾಲ್ವರು ಯುವಕರನ್ನು ತೋರಿಸಿದ್ದಾನೆ. ನೇಣಿಗೆ ಶರಣಾಗುತ್ತೇನೆಂದು ಹೇಳಿ ವಿಡಿಯೋ ಸ್ಟಾಪ್ ಮಾಡಿದ್ದ.‌ ಆನಂತರ ರಾತ್ರಿಯೇ ಪುತ್ತೂರಿನಲ್ಲಿ ನೇಣಿಗೇರಲು ಯತ್ನಿಸಿದ್ದು ಜೊತೆಗಿದ್ದವರು ರಕ್ಷಿಸಿ ಮಂಗಳೂರಿನ ಆಸ್ಪತ್ರೆಗೆ ಕರೆತಂದಿದ್ದಾರೆ.

ಸೌದಿ ಜೈಲಿನಲ್ಲಿ ಹದಿನೆಂಟು ವರ್ಷಗಳ ಸೆರೆವಾಸ ಮುಕ್ತಿಗೆ ಕಲೆಕ್ಟ್ ಆಯ್ತು 34 ಕೋಟಿ ರೂಪಾಯಿ

Posted by Vidyamaana on 2024-04-12 20:41:04 |

Share: | | | | |


ಸೌದಿ ಜೈಲಿನಲ್ಲಿ ಹದಿನೆಂಟು ವರ್ಷಗಳ ಸೆರೆವಾಸ ಮುಕ್ತಿಗೆ ಕಲೆಕ್ಟ್ ಆಯ್ತು 34 ಕೋಟಿ ರೂಪಾಯಿ

ಕೋಝಿಕ್ಕೋಡ್: ಸೌದಿ ಅರೇಬಿಯಾದಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೋಝಿಕ್ಕೋಡ್‌ನ ಕೋಡಂಪುಳ ಮೂಲದ ಅಬ್ದುಲ್ ರಹೀಮ್ ಬಿಡುಗಡೆಗೆ ನಿಧಿ ಸಂಗ್ರಹಿಸುವುದು ಇದರ ಉದ್ದೇಶವಾಗಿತ್ತು. ರಿಯಾದ್‌ನಲ್ಲಿ ಬಂಧಿಯಾಗಿರುವ ಅಬ್ದುಲ್ ರಹೀಮ್ ಬಿಡುಗಡೆಗಾಗಿ ಕೇರಳ ರಾಜ್ಯದ ಒಳಗೆ ಮತ್ತು ಹೊರಗೆ ಸರಿಸಾಟಿಯಿಲ್ಲದ ನಿಧಿ ಸಂಗ್ರಹ ನಡೆಯಿತು. ನಿಗದಿತ ಸಮಯಕ್ಕಿಂತ ಎರಡು ದಿನ ಮುಂಚಿತವಾಗಿ 34 ಕೋಟಿ ರೂ. ಪ್ರಪಂಚದ ಹಲವು ಭಾಗಗಳಿಂದ ಬಂದಿರುವ ಮಲಯಾಳಿಗಳು ಕೈಯಲ್ಲಿ ಹಣ ಸಿಕ್ಕಿತು. 18 ವರ್ಷಗಳಿಂದ ಜೈಲಿನಲ್ಲಿರುವ ಅಬ್ದುಲ್ ರಹೀಮ್ ಬಿಡುಗಡೆಗೆ ಸಂಗ್ರಹಿಸಿದ ಹಣವನ್ನು ಭಾರತೀಯ ರಾಯಭಾರಿ ಕಚೇರಿ ಮೂಲಕ ಸೌದಿ ಕುಟುಂಬಕ್ಕೆ ನೀಡಲಾಗುವುದು. 2006 ರಲ್ಲಿ, ಸೌದಿ ಅರೇಬಿಯಾದ 15 ವರ್ಷದ ಸ್ಥಳೀಯರು ಆಕಸ್ಮಿಕವಾಗಿ ಕೈ ಗಾಯದಿಂದ ಸಾವನ್ನಪ್ಪಿದರು.


ಅಬ್ದುಲ್ ರಹೀಮ್ ಬಿಡುಗಡೆಗಾಗಿ ಆರಂಭಿಸಲಾದ ಟ್ರಸ್ಟ್ ಮೂಲಕ ಪ್ರಮುಖ ನಿಧಿ ಸಂಗ್ರಹವಾಗಿತ್ತು. 31,93,46,568 ಬ್ಯಾಂಕ್ ತಲುಪಿದೆ. ಮನೆಗೆ ನೇರವಾಗಿ 2.52 ಕೋಟಿ ರೂ. ಇದರ ಪ್ರಕಾರ 34,45,46,568 ರೂ. ಬಾಬಿ ಚೆಮ್ಮನ್ನೂರ್ ನೀಡಿದ ಒಂದು ಕೋಟಿ ರೂಪಾಯಿ ಕೊಡುಗೆಯಿಂದ ಈ ಮೊತ್ತ ತಲುಪಿದೆ ಎಂದು ಹಣಕಾಸು ಸಮಿತಿಯ ಅಧಿಕಾರಿಗಳು ತಿಳಿಸಿದ್ದಾರೆ.ಅಬ್ದುಲ್ ರಹೀಮ್ ಫಾರೂಕ್ ಕೊಡಂಪುಳದವರಾಗಿದ್ದು, 18 ವರ್ಷಗಳಿಂದ ರಿಯಾದ್ ಜೈಲಿನಲ್ಲಿದ್ದಾರೆ. 

ನೆಲ್ಯಾಡಿ : ದ.ಕ. ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯ 9ನೇ ಶಾಖೆ ಉದ್ಘಾಟನೆ

Posted by Vidyamaana on 2023-09-18 15:36:23 |

Share: | | | | |


ನೆಲ್ಯಾಡಿ : ದ.ಕ. ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯ 9ನೇ ಶಾಖೆ ಉದ್ಘಾಟನೆ

ನೆಲ್ಯಾಡಿ : ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯ 9ನೇ ಶಾಖೆಯು ನೆಲ್ಯಾಡಿ ರಬ್ಬರ್ ಸೊಸೈಟಿ ಬಳಿ ಸೈಂಟ್ ಮೇರೀಸ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.



ಉದನೆ ಸಂತ ಅಂತೋನೀಸ್ ವಿದ್ಯಾಸಂಸ್ಥೆಯ ಸಂಚಾಲಕರಾದ ರೆ.ಫಾ. ಹನಿ ಜೇಕಬ್ ರವರು ಶಾಖೆಯ ಕಚೇರಿಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.



ಸಭಾ ಕಾರ್ಯಕ್ರಮವನ್ನು ಬೆಳಾಲು ಆರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.



ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಾಲಕೃಷ್ಣ ಬಾಣಜಾಲು, ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೋಕೇಶ್ ಬಾಣಜಾಲು, ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಲಾಂ ಬಿಲಾಲ್, ಸಂಘದ ಅಧ್ಯಕ್ಷರಾದ ಕುಸುಮಾಧರ್ ಎಸ್.ಕೆ., ಸಂಘದ ಉಪಾಧ್ಯಕ್ಷರಾದ ಗಿರಿಧರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ಎ. ಉಪಸ್ಥಿತರಿದ್ದರು.


ನವ್ಯ ಸ್ವಾಗತಿಸಿದರು. ಚೇತನ್ ಎ. ಪ್ರಾಸ್ತಾವಿಕವಾಗಿ ಮಾತನಾಡಿದರು. ಅರ್ಪಣಾ ವಂದಿಸಿದರು. ಡಾ. ರಾಜೇಶ್ ಬೆಜ್ಜಂಗಳ ನಿರೂಪಿಸಿದರು.



Leave a Comment: