ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ಬಸ್ ಸ್ಟ್ಯಾಂಡಿನಲ್ಲಿದ್ದ ಚನ್ನರಾಯಪಟ್ಟಣದ ಮಹಿಳೆಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿದ ಕಾಮುಕ ಅಂದರ್

Posted by Vidyamaana on 2023-11-29 20:27:55 |

Share: | | | | |


ಬಸ್ ಸ್ಟ್ಯಾಂಡಿನಲ್ಲಿದ್ದ ಚನ್ನರಾಯಪಟ್ಟಣದ ಮಹಿಳೆಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿದ ಕಾಮುಕ ಅಂದರ್

ಪುತ್ತೂರು : ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಮಹಿಳೆಯೊಬ್ಬರಿಗೆ ಮದ್ಯ ಕುಡಿಸಿ ಅತ್ಯಾಚಾರ ಮಾಡಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.


ಮೂಲತಃ ಆರ್ಯಾಪು ನಿವಾಸಿ, ಪ್ರಸ್ತುತ ಬನ್ನೂರಿನಲ್ಲಿ ವಾಸವಿರುವ ಸಂಶುದ್ದೀನ್ ಆಸ್ಗರ್ ಆಲಿ (23) ಬಂಧಿತ ಆರೋಪಿ.


ಹಾಸನ ತಾಲೂಕು ಚೆನ್ನರಾಯಪಟ್ಟಣದ ನಿವಾಸಿಯಾಗಿರುವ ಮಹಿಳೆ ನ.24 ರಂದು ರಾತ್ರಿ ವೇಳೆ ಪುತ್ತೂರು ಬಸ್ ನಿಲ್ದಾಣದಲ್ಲಿ ಇದ್ದಾಗ, ಅಪರಿಚಿತ ವ್ಯಕ್ತಿಯೋರ್ವ ಸದರಿ ಮಹಿಳೆಗೆ ಮದ್ಯವನ್ನು ಸೇವಿಸಲು ನೀಡಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದು, ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ 114/2023 ಕಲಂ 376 ಐ.ಪಿ.ಸಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.


ನ.28 ರಂದು ಸಂಜೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ವರದಿಯಾಗಿದೆ.

BIGG NEWS : ಬಿಯರ್ ಬೆಲೆ ಹೆಚ್ಚಿಸಿದ್ದ ರಾಜ್ಯ ಸರಕಾರ ಕ್ಕೇ ಶಾಕ್‌ ಕೊಟ್ಟ ಮದ್ಯಪ್ರಿಯರು

Posted by Vidyamaana on 2024-02-12 22:10:33 |

Share: | | | | |


BIGG NEWS : ಬಿಯರ್ ಬೆಲೆ ಹೆಚ್ಚಿಸಿದ್ದ ರಾಜ್ಯ ಸರಕಾರ ಕ್ಕೇ ಶಾಕ್‌ ಕೊಟ್ಟ ಮದ್ಯಪ್ರಿಯರು

ಬೆಂಗಳೂರು : ರಾಜ್ಯ ಸರ್ಕಾರ ಫೆಬ್ರವರಿ 1ರಿಂದ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇ 185ರಿಂದ 195ಕ್ಕೆ ಏರಿಸಿ ಮದ್ಯಪ್ರಿಯರ ಕಿಸಿಗೆ ಕೈ ಹಾಕಲು ಮಂದಾಗಿತ್ತು. ಆದರೆ ಈಗ ರಾಜ್ಯ ಸರ್ಕಾರಕ್ಕೆ ಮದ್ಯಪ್ರಿಯರೇ ಶಾಕ್‌ ಕೊಟ್ಟಿದ್ದಾರೆ.ಫೆಬ್ರವರಿ 1ರಂದು ಎಇಡಿ ಹೆಚ್ಚಳದ ನಂತರ ಬಿಯರ್ ಮಾರಾಟದಲ್ಲಿ ಕಡಿಮೆಯಾಗಿದೆ ಎನ್ನಲಾಗಿದೆ.ಈ ನಡುವೆ ಗಿ ಪ್ರತಿ ಬಾಟಲಿ ಬಿಯರ್‌ ದರವು ಕನಿಷ್ಠ 8 ರೂ.ಗಳಿಂದ ಗರಿಷ್ಠ 15 ರೂ.ವರೆಗೆ ಹೆಚ್ಚಳವಾಗಿದೆ. ಹೀಗಾಗಿ ಮದ್ಯಪ್ರಿಯರು ಬಿಯರ್‌ ಖರೀದಿಗೆ ನಿರಾಸಕ್ತಿ ತೋರಿದ್ದರಿಂದ ರಾಜ್ಯದೆಲ್ಲೆಡೆ ಫೆಬ್ರವರಿ 1ರಿಂದಲೂ ಬಿಯರ್‌ ಮಾರಾಟದಲ್ಲಿ ಕಡಿಮೆಯಾಗಿದೆ ಎನ್ನಲಾಗಿದೆ. ಹಲವು ಮದ್ಯ ಪ್ರಿಯರು ಕಡಿಮೆ ಬೆಲೆಯ ಬಿಯರ್‌ ಬ್ರ್ಯಾಂಡ್‌ಗಳತ್ತ ಮುಖ ಮಾಡುತ್ತಿದ್ದಾರೆ. ಮತ್ತೆ ಕೆಲ ಮದ್ಯಪ್ರಿಯರು ಬಿಯರ್‌ ಖರೀದಿ ಪ್ರಮಾಣ ಕಡಿಮೆ ಮಾಡಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ. ದುಬಾರಿ ಬ್ರ್ಯಾಂಡ್‌ಗಳ ಬಿಯರ್‌ಗಳಿಗೆ ಮೊದಲಿದ್ದಂತೆ ಬೇಡಿಕೆ ಇಲ್ಲ. ಬಹುತೇಕ ಕಡಿಮೆ ಬೆಲೆಯ ಬಿಯರ್‌ಗಳನ್ನು ಕೊಂಡುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಟೈಲರ್‌ ಜತ್ತಪ್ಪ ಗೌಡ ನಿಧನ.

Posted by Vidyamaana on 2023-06-05 01:21:48 |

Share: | | | | |


ಟೈಲರ್‌ ಜತ್ತಪ್ಪ ಗೌಡ ನಿಧನ.

ಪುತ್ತೂರು: ನೈತ್ತಾಡಿ ನಿವಾಸಿ ಮುಕ್ವೆಯಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದ ಜತ್ತಪ್ಪ ಗೌಡ(57ವ.)ರವರು ಜೂ.4ರಂದು ಮಂಗಳೂರು ಆಸತ್ರೆಯಲ್ಲಿ ನಿಧನರಾದರು.

ನೈತ್ತಾಡಿ ನಿವಾಸಿ ಗಣೇಶ್ ನೈತ್ತಾಡಿ ಅವರ ಸಹೋದರರಾಗಿರುವ ಜತ್ತಪ್ಪ ಗೌಡ ಅವರು ಇತ್ತೀಚೆಗೆ ಮನೆಯಲ್ಲಿ ಕುಸಿದು ಬಿದಿದ್ದರು. ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ. ಟೈಲರ್ ವೃತ್ತಿ ಮಾಡಿಕೊಂಡಿದ್ದ ಜತ್ತಪ್ಪ ಗೌಡ ಅವರು ಕೋವಿಡ್ ಬಳಿಕ ಮನೆಯಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದರು. ಮೃತರು ತಾಯಿ ದುಗ್ಗಮ್ಮ, ಪತ್ನಿ ಬೇಬಿ, ಇಬ್ಬರು ಪುತ್ರರು, ಸಹೋದರ ಗಣೇಶ್‌ ನೈತಾಡಿ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಕೇಂದ್ರ ಜುಮ್ಮಾ ಮಸೀದಿ ಗೆ ಭೇಟಿ ನೀಡಿದ ಪುತ್ತೂರಿನ ನೂತನ ಶಾಸಕ ಅಶೋಕ್ ರೈ

Posted by Vidyamaana on 2023-05-13 16:12:12 |

Share: | | | | |


ಕೇಂದ್ರ ಜುಮ್ಮಾ ಮಸೀದಿ ಗೆ ಭೇಟಿ ನೀಡಿದ ಪುತ್ತೂರಿನ ನೂತನ ಶಾಸಕ ಅಶೋಕ್ ರೈ

ಪುತ್ತೂರು: ನೂತನ ಶಾಸಕರಾಗಿ ಆಯ್ಕೆಯಾಗಿರುವ ಅಶೋಕ್ ಕುಮಾರ್ ರೈ ಅವರು ಶನಿವಾರ ಸಂಜೆ ದರ್ಗಾ ಹಾಗೂ ಚರ್ಚಿಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.

ಪುತ್ತೂರು ಕೇಂದ್ರ ಜುಮ್ಮಾ ಮಸೀದಿ ವಠಾರ ದಲ್ಲಿರುವ ಪುತ್ತೂರು ತಂಙಳ್ ದರ್ಗಕ್ಕೆ  ಭೇಟಿ ನೀಡಿ ಪ್ರಾರ್ಥಿಸಿದರು. ಅವರ ಜೊತೆಗೆ ಪ್ರಮುಖರು ಉಪಸ್ಥಿತರಿದ್ದರು.

ಮೈಸೂರಿಂದ ಬಿಜೆಪಿ ಟಿಕೆಟ್ ಘೋಷಣೆ: ಯದುವೀರ್ ಮೊದಲ ಪ್ರತಿಕ್ರಿಯೆ

Posted by Vidyamaana on 2024-03-14 04:53:09 |

Share: | | | | |


ಮೈಸೂರಿಂದ ಬಿಜೆಪಿ ಟಿಕೆಟ್ ಘೋಷಣೆ: ಯದುವೀರ್ ಮೊದಲ ಪ್ರತಿಕ್ರಿಯೆ

ಮೈಸೂರು: ಮುಂಬರುವ ಲೋಕಸಭಾ ಚುನಾವಣೆಗೆ ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಭಾರತೀಯ ಜನತಾ ಪಕ್ಷದಿಂದ ಅವಕಾಶ ನೀಡಲಾಗಿದೆ. ನಮ್ಮ ಪೂರ್ವಜರ ಮಹತ್ತರ ಕೊಡುಗೆಗಳಿಂದ ಕರ್ನಾಟಕ ಜನತೆಯ ಬೆಂಬಲ ಮತ್ತು ಭಾವನಾತ್ಮಕ ಸಂಪರ್ಕವು ನಿಸ್ಸಂದೇಹವಾಗಿ ನಮ್ಮೊಟ್ಟಿಗಿದೆ ಎಂದು ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಟಿಕೆಟ್‌ ಘೋಷಣೆ ಬಳಿಕ ಫೇಸ್‌ಬುಕ್‌ನ ತಮ್ಮ ಖಾತೆಯಲ್ಲಿ ಪೋಸ್ಟ್ ಹಾಕಿರುವ ಅವರು, ಒಂಬತ್ತು ವರ್ಷಗಳಿಂದ ನಾನು ನಮ್ಮ ಕ್ಷೇತ್ರದ ಹಾಗೂ ರಾಜ್ಯದ ಸಾರ್ವಜನಿಕ ಜೀವನದ ಭಾಗವಾಗಿದ್ದೇನೆ. ಅನೇಕ ಪ್ರಜಾಬಾಂಧವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ. ನನ್ನನ್ನು ಮುಕ್ತವಾಗಿ ಒಬ್ಬ ಸ್ನೇಹಿತನಂತೆ ಸ್ವಾಗತಿಸಿ ಆತಿಥ್ಯವನ್ನು ನೀಡಿದ್ದೀರಿ. ಈಗ ಆ ಋಣವನ್ನು ತೀರಿಸಲು ಅವಕಾಶ ಕೇಳುತ್ತಿದ್ದೇನೆ ಎಂದು ಕೋರಿದ್ದಾರೆ.


ನಿಮ್ಮೆಲ್ಲರ ಬೆಂಬಲ ಮತ್ತು ಆಶೀರ್ವಾದದಿಂದ ಮೈಸೂರು ಮತ್ತು ಕೊಡಗಿನ ಸರ್ವಾಂಗೀಣ ಏಳಿಗೆ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಲು ನಾನು ಆಶಿಸುತ್ತಿದ್ದೇನೆ. ಜನರ ಶುಭ ಹಾರೈಕೆ ಮತ್ತು ಬೆಂಬಲವನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.


ಚುನಾವಣೆಯಲ್ಲಿ ಪಕ್ಷವನ್ನು ಪ್ರತಿನಿಧಿಸಲು ತಮ್ಮ ಮೇಲೆ ನಂಬಿಕೆ ಇಟ್ಟ ಪ್ರಧಾನಿ ನರೇಂದ್ರ ಮೋದಿ ಅವರಿಂದಹಿಡಿದು ‍ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೆಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

ಎರಡು ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕಾಗಿ ಪ್ರತಾಪ ಸಿಂಹ ಅವರನ್ನು ಅಭಿನಂದಿಸುತ್ತೇನೆ. ಈ ಕ್ಷೇತ್ರದ ಅಭಿವೃದ್ಧಿಗೆ ಅವರ ಬದ್ಧತೆ ನಮ್ಮೆಲ್ಲರ ಭವಿಷ್ಯದ ಆಕಾಂಕ್ಷೆಗಳಿಗೆ ಭದ್ರ ಅಡಿಪಾಯ ಹಾಕಿಕೊಟ್ಟಿದೆ ಎಂದು ಶ್ಲಾಘಿಸಿದ್ದಾರೆ.

ಮೈಸೂರು: ಸ್ನಾನ ಮಾಡಲು ಕಪಿಲಾ ನದಿಗಿಳಿದ ಮೂವರು ಅಯ್ಯಪ್ಪ ಮಾಲಾಧಾರಿಗಳು ಸಾವು

Posted by Vidyamaana on 2024-01-20 09:37:11 |

Share: | | | | |


ಮೈಸೂರು: ಸ್ನಾನ ಮಾಡಲು ಕಪಿಲಾ ನದಿಗಿಳಿದ ಮೂವರು ಅಯ್ಯಪ್ಪ ಮಾಲಾಧಾರಿಗಳು ಸಾವು

ಮೈಸೂರು :ಸ್ನಾನ ಮಾಡಲು ಕಪಿಲಾ ನದಿಗಿಳಿದ ಮೂವರು ಅಯ್ಯಪ್ಪ ಮಾಲಾಧಾರಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಸಂಭವಿಸಿದೆ.ತುಮಕೂರು ಮೂಲದ ಗವಿ ರಂಗ(19), ರಾಕೇಶ್(19) ಹಾಗೂ ಅಪ್ಪು(16) ಮೃತಪಟ್ಟ ದುರ್ದೈವಿಗಳು. ನಂಜನಗೂಡು ತಾಲೂಕಿನ ಹೆಜ್ಜೆಗೆ ಸೇತುವೆ ಬಳಿ ಸ್ನಾನ ಮಾಡಲು ಇಳಿದು ಮೃತಪಟ್ಟಿದ್ದಾರೆ.ಕಪಿಲ ನದಿಯಲ್ಲಿ ಶುಕ್ರವಾರ ಬೆಳಿಗ್ಗೆ ಸ್ನಾನಕ್ಕೆಂದು ಇಳಿದಿದ್ದ ಅಯ್ಯಪ್ಪ ಮಾಲಾಧಾರಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಐವರು ಗುರುವಾರ ತಡರಾತ್ರಿ ಇಲ್ಲಿನ ನಂಜುಂಡೇಶ್ವರನ ದರ್ಶನಕ್ಕೆ ಬಂದಿದ್ದರು. ಶುಕ್ರವಾರ ಬೆಳಿಗ್ಗೆ ಸ್ನಾನಕ್ಕೆಂದು ನದಿಗೆ ಇಳಿದಿದ್ದಾರೆ. ಇಬ್ಬರು ಈಜಿ ಮೇಲೆ ಬಂದಿದ್ದಾರೆ ಎನ್ನಲಾಗಿದೆ.


ಪಟ್ಟಣದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಮೃತದೇಹಗಳನ್ನು ಹೊರ ತೆಗೆಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಶಾಸಕ ದರ್ಶನ್‌ ಧ್ರುವನಾರಾಯಣ ಸ್ಥಳಕ್ಕೆ ಭೇಟಿ ನೀಡಿದ್ದರು. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Leave a Comment: