ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ಪುತ್ತೂರು ಗಾಂಧಿ ಕಟ್ಟೆಯ ಬಳಿ ಇತ್ತಂಡಗಳ ನಡುವೆ ಹೊಡೆದಾಟ

Posted by Vidyamaana on 2024-02-02 11:29:07 |

Share: | | | | |


ಪುತ್ತೂರು ಗಾಂಧಿ ಕಟ್ಟೆಯ ಬಳಿ ಇತ್ತಂಡಗಳ ನಡುವೆ ಹೊಡೆದಾಟ

ಪುತ್ತೂರು : ಎರಡು ತಂಡಗಳ ನಡುವೆ ಹೊಡೆದಾಟ ನಡೆದ ಘಟನೆ ಫೆ.1 ರಂದು ರಾತ್ರಿ ಪುತ್ತೂರು ಬಸ್ ನಿಲ್ದಾಣದ ಸಮೀಪದ ಹೂವಿನ ಮಾರುಕಟ್ಟೆ ಬಳಿ ನಡೆದಿದೆ.


ಪುತ್ತೂರು ಬಸ್ ನಿಲ್ದಾಣ ಸಮೀಪದ ಗಾಂಧಿಕಟ್ಟೆ ಸಮೀಪ ಹಣ್ಣು-ಹಂಪಲು ವಿತರಣೆಯ ಪಿಕಪ್ ವಾಹನದವರು ಹಾಗೂ ಮಾರುತಿ 800 ಕಾರಿನಲ್ಲಿದ್ದವರ ನಡುವೆ ಹೂವಿನ ಮಾರುಕಟ್ಟೆ ಮುಂಭಾಗ ನಡುರಸ್ತೆಯಲ್ಲೇ ಹೊಡೆದಾಟ ನಡೆದಿದೆ ಎಂದು ವರದಿಯಾಗಿದೆ.


ಹೊಡೆದಾಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಯಾವ ಕಾರಣಕ್ಕೆ ಹೊಡೆದಾಟ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಪೆರುವಾಜೆ:ಮರಕ್ಕೆ ಡಿಕ್ಕಿಯಾಗಿ ಸ್ಕೂಟರ್ ಪಲ್ಟಿ ಸಹಸವಾರ ಮಹಮ್ಮದ್ ರಾಝಿಕ್ ಸಾವು

Posted by Vidyamaana on 2024-04-13 11:45:27 |

Share: | | | | |


ಪೆರುವಾಜೆ:ಮರಕ್ಕೆ ಡಿಕ್ಕಿಯಾಗಿ ಸ್ಕೂಟರ್ ಪಲ್ಟಿ ಸಹಸವಾರ ಮಹಮ್ಮದ್ ರಾಝಿಕ್ ಸಾವು

ಬೆಳ್ಳಾರೆ :ಸ್ಕೂಟರೊಂದು ಮರಕ್ಕೆ ಡಿಕ್ಕಿಯಾಗಿ ಮಗುಚಿ ಬಿದ್ದು ಸಹಸವಾರ ಮೃತಪಟ್ಟ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಪೆರುವಾಜೆ ಬೋರಡ್ಕ ಎಂಬಲ್ಲಿ ನಡೆದಿರುವ ಕುರಿತು ಪ್ರಕರಣ ದಾಖಲಾಗಿದೆ.

ಘಟನೆ ಕುರಿತು ಪೆರುವಾಜೆ ನಿವಾಸಿ ಜಬ್ಬಾರ್ ಕೆ ಎಂಬವರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದಾರೆ.ಏ.11ರಂದು ರಾತ್ರಿ ನನ್ನ ಬಾಬು ಕೆ.ಎ.21 ಇಎ-2558ನೇ ಸ್ಕೂಟರಿನಲ್ಲಿ ಸಂಬಂಧಿಕರಾದ ಮಹಮ್ಮದ್ ಮುಸಾಬ್ ಸವಾರನಾಗಿ ಹಾಗೂ ಮಹಮ್ಮದ್ ರಾಜೀಕ್‌ರವರು ಸಹಸವಾರನಾಗಿ ಪ್ರಯಾಣಿಸುತ್ತಾ, ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಬೋರಡ್ಕ ಎಂಬಲ್ಲಿಗೆ ತಲುಪಿದಾಗ, ಮಹಮ್ಮದ್ ಮುಸಾಬ್ ಸ್ಕೂಟರನ್ನು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ, ಸದ್ರಿ ಸ್ಕೂಟರ್ ರಸ್ತೆಬದಿಯ ಮರಕ್ಕೆ ಡಿಕ್ಕಿಯಾಗಿ ಮಗುಚಿ ಬಿದ್ದಿತ್ತು.ಸ್ಕೂಟರ್‌ನ ಹಿಂದಿನಿಂದ ಬರುತ್ತಿದ್ದ ನಾನು ಕಾರನ್ನು ನಿಲ್ಲಿಸಿ,

ಕುಂಡಡ್ಕ ನಿವಾಸಿ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್ ತಲಪಾಡಿಯಿಂದ ನಾಪತ್ತೆ

Posted by Vidyamaana on 2023-11-18 11:58:36 |

Share: | | | | |


ಕುಂಡಡ್ಕ ನಿವಾಸಿ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್ ತಲಪಾಡಿಯಿಂದ ನಾಪತ್ತೆ

ಸುಳ್ಯ  ಪೆರುವಾಜೆ ಗ್ರಾಮದ ಕುಂಡಡ್ಕ ಹನೀಪ್ ಇಂದ್ರಾಜೆ ಅವರ ಪುತ್ರ, ತಲಪಾಡಿ ಬಿಲಾಲ್ ಮಸೀದಿಯ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್ ಎಂಬ ಬಾಲಕ ನ.16 ರ ಸಂಜೆಯಿಂದ ನಾಪತ್ತೆಯಾಗಿದ್ದಾನೆ(Sullia student missing case ) .


ಈತ ತಲಪಾಡಿಯ ಬಿಲಾಲ್ ಮಸೀದಿಯಲ್ಲಿ ಮದ್ರಸ ಶಿಕ್ಷಣದ ಜತೆಗೆ ಶಾಲಾ ಶಿಕ್ಷಣ ಪಡೆಯುತಿದ್ದ. ಎಂಟನೇ ತರಗತಿಯ ವಿದ್ಯಾರ್ಥಿ ಆಗಿರುವ ಈತ ಗುರುವಾರ ಸಂಜೆ ಶಾಲೆಯಿಂದ ಮಸೀದಿಗೆ ಬಂದಿದ್ದು, ಅಲ್ಲಿ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವನು ಮರಳಿ ಬಂದಿಲ್ಲ. ಪೋಷಕರು ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದು ಹುಡುಕಾಟ ನಡೆಸುತ್ತಿದ್ದಾರೆ.


ಗೋಧಿ ಮೈಬಣ್ಣ ಹೊಂದಿದ್ದು ಎತ್ತರ ನಾಲ್ಕೂವರೆ ಅಡಿ ಉದ್ದವಿದ್ದು ಕಾಣಲು ಸೌಮ್ಯ ಸ್ವಭಾವದ ಬಾಲಕನಾಗಿದ್ದು ಯಾರಾದರೂ ಕಂಡು ಬಂದಲ್ಲಿ ತಕ್ಷಣ ಈ ನಂಬರಿಗೆ 9731293268, 9686123077 ಕರೆ ಮಾಡುವಂತೆ ಮನೆಯವರು ವಿನಂತಿಸಿಕೊಂಡಿದ್ದಾರೆ.

ಉಡುಪಿ: ಭೀಕರ ಕಾರು ಅಪಘಾತ - ಯುವಕ ಸ್ಥಳದಲ್ಲೇ ಸಾವು, ನಾಲ್ವರ ಸ್ಥಿತಿ ಗಂಭೀರ

Posted by Vidyamaana on 2023-12-21 16:34:47 |

Share: | | | | |


ಉಡುಪಿ: ಭೀಕರ ಕಾರು ಅಪಘಾತ - ಯುವಕ ಸ್ಥಳದಲ್ಲೇ ಸಾವು, ನಾಲ್ವರ ಸ್ಥಿತಿ ಗಂಭೀರ

ಉಡುಪಿ : ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿ.21ರಂದು ತಡರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಉದ್ಯಾವರದ ಐಸಿವೈಎಂ ಅಧ್ಯಕ್ಷ ಸ್ಥಳದಲ್ಲೇ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.ಅಪಘಾತದಲ್ಲಿ ಮೃತರಾದವರನ್ನು ಉದ್ಯಾವರದ ಸಂಪಿಗೆ ನಗರದ ನಿವಾಸಿ ರಾಬರ್ಟ್ ಕ್ಯಾಸ್ತಲಿನೋ ಎಂಬವರ ಪುತ್ರ ಜೋಯಿಸ್ಟನ್ ಕ್ಯಾಸ್ಟಲಿನೋ (22) ಎಂದು ಗುರುತಿಸಲಾಗಿದೆ.ಉದ್ಯಾವರದ ಐಸಿವೈಎಂ ಘಟಕದ ಸದಸ್ಯರಿದ್ದ ಫಿಗೋ ಕಾರು ಕುಂದಾಪುರದಲ್ಲಿ ಕಾರ್ಯಕ್ರಮ ಮುಗಿಸಿ ಉಡುಪಿ ಕಡೆಗೆ ಬರುತ್ತಿದ್ದಾಗ ಕೋಟೇಶ್ವರ ಬಳಿ ಕೆಟ್ಟು ನಿಂತ ಲಾರಿಗೆ ಡಿಕ್ಕಿ ಹೊಡೆದಿದೆ.


ಪರಿಣಾಮ ಲೆಸ್ಟನ್ ಪಿಂಟೊ (22), ಜಸ್ಟಿನ್ ಕಾರ್ಡೋಜಾ (22), ವಿಲ್ಸನ್ ಮಾರ್ಟಿಸ್ (23) ಮತ್ತು ಗ್ಲಾಡೆನ್ ಡಿಸಿಲ್ವಾ (23) ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದವರು ಉದ್ಯಾವರದ ಐಸಿವೈಎಂ ಘಟಕದ ಸದಸ್ಯರು ಎಂದು ತಿಳಿದು ಬಂದಿದೆ.ಯುವ ನಾಯಕನ ಅಗಲಿಕೆಗೆ ಕ್ರೈಸ್ತ ಸಮುದಾಯ ಸಂತಾಪ ಸೂಚಿಸಿದೆ.

ಲೋಕಸಭೆ ಚುನಾವಣೆ : ಎಪ್ರಿಲ್ 26 ರಂದು ಸಮಸ್ತ ಮದರಸ ಗಳಿಗೆ ರಜೆ ಘೋಷಣೆ

Posted by Vidyamaana on 2024-04-25 07:17:31 |

Share: | | | | |


ಲೋಕಸಭೆ ಚುನಾವಣೆ : ಎಪ್ರಿಲ್ 26 ರಂದು ಸಮಸ್ತ ಮದರಸ ಗಳಿಗೆ ರಜೆ ಘೋಷಣೆ

ಮಂಗಳೂರು : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಪ್ರಿಲ್ 26 ರಂದು ಸಮಸ್ತ ಮದರಸ ಗಳಿಗೆ ರಜೆ ಘೋಷಿಸಲಾಗಿದೆ. 

ನೆಲ್ಲಿಕಟ್ಟೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ವಿದ್ಯಾ ಜ್ಯೋತಿ ಎಲ್ ಕೆಜಿ ಮತ್ತು ಯುಕೆಜಿ ತರಗತಿ ಉದ್ಘಾಟನೆ

Posted by Vidyamaana on 2023-09-09 19:36:57 |

Share: | | | | |


ನೆಲ್ಲಿಕಟ್ಟೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ವಿದ್ಯಾ ಜ್ಯೋತಿ ಎಲ್ ಕೆಜಿ ಮತ್ತು ಯುಕೆಜಿ ತರಗತಿ ಉದ್ಘಾಟನೆ

ಪುತ್ತೂರು: ನೆಲ್ಲಿಕಟ್ಟೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ರೋಟರಿಕ್ಲಬ್ ಪುತ್ತೂರು ಸಿಟಿ, ರೋಟರಿ ಕ್ಲಬ್ ಪುತ್ತೂರು ಸಿಟಿ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ವಿದ್ಯಾ ಜ್ಯೋತಿ ಎಲ್ ಕೆಜಿ ಮತ್ತು ಯುಕೆಜಿ ಮತ್ತು ಅಂಗನವಾಡಿ ಪುನಶ್ವೇತನ ರೋಟರಿ ಜಿಲ್ಲಾ ಯೋಜನೆಯನ್ನು ಶಾಸಕ ಅಶೋಕ್ ರೈ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಸರಕಾರ ಮಾಡಬೇಕಾದ ಕೆಲಸವನ್ನು ರೋಟರಿ ಕ್ಲಬ್ ಮಾಡುತ್ತಿರುವುದು ಶ್ಲಾಘನೀಯ, ರೋಟರಿ ಕ್ಲಬ್ ನಿಂದ ಸಮಾಜ ಸೇವೆ ನಿರಂತರವಾಗಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು ಮುಂದಿನ ಒಂದು ವರ್ಷದೊಳಗೆ ಎಲ್ಲಾ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಎಲ್ ಕೆ .ಜಿ ತರಗತಿ ಆರಂಭಿಸಲಾಗುವುದು ಮಾತ್ರವಲ್ಲ ಶಿಕ್ಷಕರ ನೇಮಕಾತಿಯೂ ಪೂರ್ಣಗೊಳ್ಳಲಿದೆ. ಇಂಗ್ಲೀಷ್ ಮಾದ್ಯಮದಲ್ಲಿ ಶಿಕ್ಷಣ ಅತೀ ಮುಖ್ಯವಾಗಿದ್ದು, ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು. ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತ, ರೋಟರಿ ಕ್ಲಬ್ ಪುತ್ತೂರು ಸಿಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುರೇಂದ್ರ ಕಿಣಿ, ರೋನ್ 4 ರ ಅಸಿಸ್ಟಂಟ್ ಗವರ್ನರ್ ಲಾರೆನ್ಸ್ ಗೋನ್ಸಾಲ್ವಿಸ್, ನಗರ ಸಬಾ ಸದಸ್ಯ ಶಕ್ತಿ ಸಿನ್ಹಾ ನೆಲ್ಲಿಕಟ್ಟೆ ಸರಕಾರಿ ಹಿ.ಪ್ರಾ. ಶಾಲೆ ಮುಖ್ಯ ಶಿಕ್ಷಕಿ ಯಶೋಧ, ಎಸ್ ಡಿ ಎಂಸಿ ಅಧ್ಯಕ್ಷೆ ವಸುಧಾ, ರೊ. ಶ್ಯಾಮಲಾ ಎಂ ಶೆಟ್ಟಿ, ರೊ.ಗ್ರೇಸಿ ಗೊನ್ಸಾಲ್ವಿಸ್, ರೊ.ಸುಧಾಕರ್ ಶೆಟ್ಟಿ ಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಡಾ. ಶಶಿಧರ್ ಕಜೆ ಕಾರ್ಯಕ್ರಮ ನಿರೂಪಿಸಿದರು.



Leave a Comment: