ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಪ್ರಿಯಕರನ ಜೊತೆ ಸೇರಿ ಅತ್ತೆ ಮುಗಿಸಿದ ಐನಾತಿ ಸೊಸೆ: ಹೇಗೆ ಪ್ಲಾನ್ ಮಾಡಿದಳು ಗೊತ್ತಾ?

Posted by Vidyamaana on 2023-10-17 20:15:37 |

Share: | | | | |


ಪ್ರಿಯಕರನ ಜೊತೆ ಸೇರಿ ಅತ್ತೆ ಮುಗಿಸಿದ ಐನಾತಿ ಸೊಸೆ: ಹೇಗೆ ಪ್ಲಾನ್ ಮಾಡಿದಳು ಗೊತ್ತಾ?

ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಸೊಸೆ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.


ರಶ್ಮಿ, ಪುರುಷೋತ್ತಮ್, ಅಕ್ಷಯ್ ಬಂಧಿತ ಆರೋಪಿಗಳು. ಈ ಮೂವರನ್ನು ಬ್ಯಾಡರಹಳ್ಳಿ ಪೊಲೀಸರು (By

non

arahalli Police Station) ಬಂಧಿಸಿದ್ದಾರೆ.ಘಟನೆ ಏನು..?: ರಶ್ಮಿ ತನ್ನ ಪ್ರಿಯಕರ ಹಾಗೂ ಆತನ ಸ್ನೇಹಿತನ ಜೊತೆ ಸೇರಿ ಅತ್ತೆ ಲಕ್ಷ್ಮಮ್ಮನನ್ನ ಕೊಂದಿದ್ದಳು.


ಆರೋಪಿ ರಶ್ಮಿಯು ಮಂಜುನಾಥ್ ಎಂಬಾತನನ್ನು ಮದುವೆಯಾಗಿದ್ದಳು. ಆದರೆ ಕ್ರಮೇಣ ತಮ್ಮ ಮನೆಯ ಮೇಲೆ ಬಾಡಿಗೆಗೆ ಇದ್ದ ಅಕ್ಷಯ್ ಜೊತೆ ಸಂಪರ್ಕ ಹೊಂದಿದ್ದಳು. ಇತ್ತ ಮನೆಯ ಹಣದ ವ್ಯವಹಾರ ಸಂಬಂಧ ಲಕ್ಷ್ಮಮ್ಮ ಹಾಗೂ ರಶ್ಮಿ ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ತಾನೇ ಮನೆ ವ್ಯವಹಾರ ನೋಡಿಕೊಳ್ಳಬೇಕು ಎಂದು ರಶ್ಮಿ ಕಾದು ಕುಳಿತಿದ್ದಳು. ಅದರಂತೆ ಪ್ರಿಯಕರನ ಜೊತೆ ಸೇರಿ ಅತ್ತೆಯನ್ನೇ ಕೊಲೆ ಮಾಡುವ ಪ್ಲಾನ್ ಮಾಡಿದ್ದಳು.ಅಕ್ಟೋಬರ್ 10ರಂದು ಪ್ರಿಯಕರ ಅಕ್ಷಯ್ ಮತ್ತು ಆತನ ಸ್ನೇಹಿತ ಪುರುಷೋತ್ತಮ್ ಜೊತೆ ಸೇರಿ ಉಸಿರುಗಟ್ಟಿಸಿ ಅತ್ತೆಯನ್ನು ಕೊಲೆ ಮಾಡಿದ್ದಳು. ನಂತರ ಹಾರ್ಟ್ ಅಟ್ಯಾಕ್ ಅಂತಾ ಸೀನ್ ಕ್ರಿಯೇಟ್ ಮಾಡಿದ್ದರು.


ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಉಡುಪಿ : ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ

Posted by Vidyamaana on 2024-04-03 16:50:40 |

Share: | | | | |


ಉಡುಪಿ : ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ

ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಅವರು ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.ಬೆಳಿಗ್ಗೆ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿದ ಅವರು ಬಳಿಕ ನೂರಾರು ಕಾರ್ಯಕರ್ತರ ಜೊತೆ ತೆರಳಿ ನಾಮಪತ್ರ ಸಲ್ಲಿಸಿದರು.

ಮಸೂದ್ ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಶಿವಪ್ರಸಾದ್ ಗೆ ಜಾಮೀನು

Posted by Vidyamaana on 2023-08-11 16:38:18 |

Share: | | | | |


ಮಸೂದ್ ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಶಿವಪ್ರಸಾದ್ ಗೆ ಜಾಮೀನು

ಸುಳ್ಯ :ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಕಳಂಜದಲ್ಲಿ ಕಳೆದ ವರ್ಷ ಸಂಭವಿಸಿದ್ದ ಮಸೂದ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿದ್ದ ನಾಲ್ಕನೇ ಆರೋಪಿ ಶಿವಪ್ರಸಾದ್ ಕಳಂಜ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ.


ಹೈಕೋರ್ಟ್ ಆದೇಶದ ಮೇಲೆ ಬಿಡುಗಡೆ ಮಾಡಲಾಗಿದೆ. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ನೇತೃತ್ವದ ಪೀಠವು ಆದೇಶವನ್ನು ಹೊರಡಿಸಿದೆ. ಇತ್ತೀಚೆಗೆ ಪ್ರಕರಣದ 7ನೇ ಆರೋಪಿಯಾಗಿರುವ ಜಿಮ್ ರಂಜಿತ್ ಜಾಮೀನು ಕೋರಿ ವಕೀಲರ ಮೂಲಕ ಹೈಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದು ಆ.೪ ರಂದು ಷರತ್ತುಬದ್ಧ ಜಾಮೀನು ಮಂಜೂರುಗೊಳಿಸಿತ್ತು.2022 ಜು.19ರಂದು ಕಳಂಜದಲ್ಲಿ 8 ಮಂದಿ ಯುವಕರ ತಂಡ ಮಸೂದ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಗಂಭೀರ ಗಾಯಗೊಂಡ ಮಸೂದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿ 8 ಮಂದಿ ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು

ಲಂಚ ಸ್ವೀಕರಿಸುವಾಗ ರೆಡ್‌ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ PSI

Posted by Vidyamaana on 2024-05-30 21:54:10 |

Share: | | | | |


ಲಂಚ ಸ್ವೀಕರಿಸುವಾಗ ರೆಡ್‌ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ PSI

ಮೈಸೂರು: ಲಂಚ ಸ್ವೀಕರಿಸುತ್ತಿದ್ದ‌ ಸಬ್ ಇನ್ಸ್ ಪೆಕ್ಟರ್ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಮೈಸೂರಿನ ಕುವೆಂಪು ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ರಾಧಾ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.ಕ್ರಿಮಿನಲ್ ಕೇಸ್ ಒಂದರ ಸಂಬಂಧ ಕುವೆಂಪುನಗರದ ವ್ಯಕ್ತಿಯಿಂದ 25000 ರೂ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ರಾಧಾ ಅವರನ್ನು ಬಂಧಿಸಿದ್ದಾರೆ.

ಪುತ್ತೂರಿನ ಫ್ಯಾಶನ್ ಲೋಕದ ಮಹಾಉತ್ಸವ ಆ 01 ರಿಂದ ಪ್ರಾರಂಭ

Posted by Vidyamaana on 2023-07-31 14:33:54 |

Share: | | | | |


ಪುತ್ತೂರಿನ ಫ್ಯಾಶನ್ ಲೋಕದ ಮಹಾಉತ್ಸವ  ಆ 01 ರಿಂದ ಪ್ರಾರಂಭ

ಪುತ್ತೂರು: ಫ್ಯಾಮಿಲಿ ಶೋರೂಂ ರಾಧಾಸ್’ನಲ್ಲಿ ಪುತ್ತೂರಿನ ಫ್ಯಾಶನ್ ಲೋಕದ ಮಹಾ ಉತ್ಸವ ಮಾನ್ಸೂನ್ ಮೇಳ ನಾಳೆಯಿಂದ (ಆಗಸ್ಟ್ 1) ಆರಂಭಗೊಳ್ಳಲಿದೆ.

ವಸ್ತ್ರ ಪ್ರಿಯರು ಕಾತರದಿಂದ ಕಾಯುತ್ತಿದ್ದ ಮಹಾ ಉತ್ಸವ ಕೊನೆಗೂ ಸಮೀಪಿಸಿದೆ. ದೊಡ್ಡ ಅವಕಾಶ, ಅತಿದೊಡ್ಡ ಸಂಗ್ರಹ, ಅತ್ಯಂತ ದೊಡ್ಡ ಉತ್ಸವ ಇದಾಗಿದ್ದು, ವೈವಿಧ್ಯಮಯ ವಸ್ತ್ರಗಳು ಗ್ರಾಹಕರ ಮುಂದೆ ತೆರೆದುಕೊಳ್ಳಲಿದೆ.

ಪ್ರತಿದಿನ ಹೊಸ ಸಂಗ್ರಹದೊಂದಿಗೆ ಬರುವುದಷ್ಟೇ ಅಲ್ಲ, ರಾಧಾ’ಸ್ ಮಾನ್ಸೂನ್ ಮೇಳದಲ್ಲಿ ಅತೀ ಕಡಿಮೆ ಬೆಲೆಗೆ ಗ್ರಾಹಕರನ್ನು ತಲುಪುವುದು ವಿಶೇಷ. ಈ ಮಾನ್ಸೂನ್ ಮೇಳದಲ್ಲಿ ವಸ್ತ್ರಗಳನ್ನು ಖರೀದಿಸಿ ನಂಬರ್ ವನ್ ಶಾಪಿಂಗ್ ಅನುಭವವನ್ನು ತಮ್ಮದಾಗಿಸಿಕೊಳ್ಳಬಹುದು.

ಸಿಲ್ಕ್ಸ್, ಟೆಕ್ಸ್’ಟೈಲ್, ರೆಡಿಮೇಡ್ ವಸ್ತ್ರಗಳಿಗೆ ಹೆಸರುವಾಸಿಯಾಗಿರುವ ಪುತ್ತೂರಿನ ಪ್ರತಿಷ್ಠಿತ ಫ್ಯಾಮಿಲಿ ಶೋರೂಂ ರಾಧಾ’ಸ್, ಗ್ರಾಹಕರಿಗೆ ಮಾನ್ಸೂನಿನ ರಸದೌತಣ ಉಣಬಡಿಸಲು ತಯಾರಾಗಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇರುವುದು ಗ್ರಾಹಕರ ದೃಷ್ಟಿಯಿಂದ ಅನುಕೂಲಕರ. ಗ್ರಾಹಕರಿಗಾಗಿ ಸಿದ್ಧವಾಗಿರುವ ಮಾನ್ಸೂನ್ ಮೇಳದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

ಅಶೋಕ್ ಕುಮಾರ್ ರೈ ಗೆ ಸಿಕ್ತು ಭರ್ಜರಿ ಗೆಲುವಿನ ರುಚಿ

Posted by Vidyamaana on 2023-05-13 08:01:56 |

Share: | | | | |


ಅಶೋಕ್ ಕುಮಾರ್ ರೈ ಗೆ  ಸಿಕ್ತು ಭರ್ಜರಿ ಗೆಲುವಿನ ರುಚಿ

ಪುತ್ತೂರು: ರಾಜ್ಯದ ಗಮನ ಸೆಳೆದಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಶೋಕ್ ಕುಮಾರ್ ರೈ 3351ಮತಗಳಿಂದ  ಜಯಭೇರಿ ಭಾರಿಸಿದ್ದಾರೆ.


ಜನಮತಗಣನೆಯಲ್ಲಿ ಮುನ್ನಡೆ ಸಾಧಿಸಿರುವ ಅಶೋಕ್ ಕುಮಾರ್ ರೈ ಅವರು, ಶಾಸಕರಾಗಿ ಆಯ್ಕೆಯಾಗಿದ್ದಾರೆ. ನಿರೀಕ್ಷೆಯಂತೆ, ಪುತ್ತೂರಿನಲ್ಲಿ ಕಾಂಗ್ರೆಸ್ ಬಹುಮತ ಪಡೆದುಕೊಂಡಿದೆ.

ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ನಡುವಿನ ಪೈಪೋಟಿಯ ಲಾಭವನ್ನು ಕಾಂಗ್ರೆಸ್ ಸಮರ್ಥವಾಗಿ ಬಳಸಿಕೊಂಡಿದೆ. ಬಿಜೆಪಿಯ ಮತಗಳು ವಿಭಜನೆಗೊಂಡಿದ್ದು ಹಾಗೂ ಕಾಂಗ್ರೆಸ್ ಒಗ್ಗಟ್ಟಿನಿಂದ ಮುನ್ನುಗ್ಗಿದ್ದರಿಂದ ಗೆಲುವಿನ ಪತಾಕೆ ಹಾರಿಸಲು ಸಾಧ್ಯವಾಯಿತು. ಅಶೋಕ್ ಕುಮಾರ್ ರೈ ಅವರ ಮುಂದಾಳುತ್ವ ಕಾಂಗ್ರೆಸಿಗೆ ವರದಾನವಾಗಿದೆ.



Leave a Comment: