ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಸುದ್ದಿಗಳು News

Posted by vidyamaana on 2024-07-03 19:28:29 |

Share: | | | | |


ಕಟ್ಟಡ ಕಾರ್ಮಿಕರಿಗೆ ಇ ಕಾರ್ಡು ವಿತರಣೆ-ಕಾರ್ಡು ಮಾಡಿಸಿ ಸವಲತ್ತು ಪಡೆದುಕೊಳ್ಳಿ: ಕಟ್ಟಡ ಕಾರ್ಮಿಕರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು:  ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಶಾಸಕ ಅಶೋಕ್ ರೈ ಕಚೇರಿ ಮೂಲಕ ಉಚಿತ ಕಾರ್ಮಿಕ ಇ ಕಾರ್ಡು ಮಾಡಿಸಿಕೊಂಡ ಕಟ್ಟಡ ಕಾರ್ಮಿಕರಿಗೆ ಕಾರ್ಡು ವಿತರಣಾ ಕಾರ್ಯಕ್ರಮ ಶಾಸಕರ ಕಚೇರಿಯಲ್ಲಿ ನಡೆಯಿತು.

ಒಟ್ಟು ೩೪ ಮಂದಿ ಕಾರ್ಮಿಕರಿಗೆ ಕಾರ್ಡು ವಿತರಿಸಲಾಯಿತು. ಕಟ್ಟಡ ಕಾರ್ಮಿಕರು ಶಾಸಕರ ಕಚೇರಿ ಮೂಲಕ ನೋಂದಾವಣೆ ಮಾಡಿಕೊಂಡಿದ್ದರು. ಇ ಕಾರ್ಡು ವಿತರಿಸಿ ಮಾತನಾಡಿದ ಶಾಸಕರು ರಾಜ್ಯ ಸರಕಾರದಿಂದ ಕಾರ್ಮಿಕರಿಗ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ.ಆಕಸ್ಮಿಕಮರಣಾವಾದರೆ ರೂ ೧ ಲಕ್ಷ ಮತ್ತು ಅಪಘಾತದಲ್ಲಿ ಮರಣಹೊಂದಿದರೆ ೫ ಲಕ್ಷ ಸರಕಾರದಿಂದ ಪರಿಹಾರ ಸಿಗುತ್ತದೆ. ಕಾರ್ಮಿಕರು ತನ್ನ ಕಚೇರಿ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಒಟ್ಟು ೩೦೦೦ ಮಂದಿಗೆ ಕಾರ್ಡು ವಿತರಣೆ ಮಾಡಲಾಗಿದೆ.

ಕಟ್ಟಡ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಸರಕಾರ ನೀಡುತ್ತಿದೆ. ಕಳೆದ ಸಾಲಿನಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್ ಕೂಡಾ ವಿತರಣೆ ಮಾಡಲಾಗಿದೆ. ಕಟ್ಟಡ ಕಾರ್ಮಿಕರು ಈ ಸೌಲಭ್ಯವನ್ನು ಪಡೆದುಕೊಳ್ಳುವುದರ ಜೊತೆ ಇದುವರೆಗೂ ಕಾರ್ಡು ಮಾಡಿಸದವರು ಶಾಸಕರ ಕಚೇರಿಗೆ ಬಂದು ಉಚಿತವಾಗಿ ಕಾರ್ಡು ಮಾಡಿಸಿಕೊಳ್ಳಬಹುದಾಗಿದೆ ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಮಾಧ್ಯಮ ಸಂಚಾಲಕ ಕೃಷ್ಣಪ್ರಸಾದ್ ಭಟ್ ಬೊಳ್ಳಾಯಿ ಉಪಸ್ಥಿತರಿದ್ದರು. ಸಿಬಂದಿ ರಚನಾ ಸ್ವಾಗತಿಸಿ ವಂದಿಸಿದರು.

 Share: | | | | |


ವಿಟ್ಲ :ಅನಾರೋಗ್ಯದಿಂದ ಅಡ್ಯನಡ್ಕ ನಿವಾಸಿ ಅಶ್ರಫ್ ನಿಧನ

Posted by Vidyamaana on 2024-02-21 16:32:03 |

Share: | | | | |


ವಿಟ್ಲ :ಅನಾರೋಗ್ಯದಿಂದ ಅಡ್ಯನಡ್ಕ ನಿವಾಸಿ ಅಶ್ರಫ್ ನಿಧನ

ವಿಟ್ಲ: ಮೂರು ದಿನಗಳ ಹಿಂದೆ ವಿದೇಶದಿಂದ ಬಂದಿದ್ದ ಯುವಕನೋರ್ವ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಕೇಪು ಗ್ರಾಮದ ಅಡ್ಯನಡ್ಕ ಮರಕ್ಕಿನಿ ನಿವಾಸಿ ಅಬ್ದುಲ್ ರಹಿಮಾನ್ ಅವರ  ಪುತ್ರ ಅಶ್ರಫ್(38) ಮೃತಪಟ್ಟವರು. ಇವರು ಕಳೆದ ಹಲವಾರು ವರ್ಷಗಳಿಂದ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಅನಾರೋಗ್ಯದಿಂದ ಮೂರು ದಿನದ ಹಿಂದೆ  ಸ್ವದೇಶಕ್ಕೆ ಬಂದಿದ್ದರು. ಕೇರಳದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಬಳಿಕ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 

ಮೃತರಿಗೆ ಪತ್ನಿ, ಪುತ್ರ, ಪುತ್ರಿ, ತಂದೆ, ತಾಯಿ ಅಗಲಿದ್ದಾರೆ .

ಪಿಯು ರಿಸಲ್ಟ್ ನಲ್ಲಿ ಅಮೋಘ ಪ್ರಗತಿ – ವಿಜ್ಞಾನ ವಿಭಾಗದಲ್ಲಿ 100 ಸಾಧನೆ

Posted by Vidyamaana on 2024-04-14 16:09:20 |

Share: | | | | |


ಪಿಯು ರಿಸಲ್ಟ್ ನಲ್ಲಿ ಅಮೋಘ ಪ್ರಗತಿ – ವಿಜ್ಞಾನ ವಿಭಾಗದಲ್ಲಿ 100 ಸಾಧನೆ

ಪುತ್ತೂರು: ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನ 2023-24ನೇ ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.99 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದ ಟ್ಯೂಷನ್ ತರಗತಿಯಲ್ಲಿ ದಾಖಲಾಗಿರುವ ಒಟ್ಟು 10 ವಿದ್ಯಾರ್ಥಿಗಳಲ್ಲಿ 7 ಮಂದಿ ಪ್ರಥಮ, 2 ಮಂದಿ ದ್ವಿತೀಯ ಹಾಗೂ ಓರ್ವ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಒಟ್ಟು 56 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ-1, ಪ್ರಥಮ ಶ್ರೇಣಿಯಲ್ಲಿ 21, ದ್ವಿತೀಯ ಶ್ರೇಣಿಯಲ್ಲಿ22 ಹಾಗೂ 11 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

ಕಲಾ ವಿಭಾಗದಲ್ಲಿ ಒಟ್ಟು 5 ವಿದ್ಯಾರ್ಥಿಗಳಲ್ಲಿ ಇಬ್ಬರು ಪ್ರಥಮ, ಒಬ್ಬರು ದ್ವಿತೀಯ ಹಾಗೂ ಒಬ್ಬರು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರುತ್ತಾರೆ ಎಂದು ಸಂಸ್ಥೆಯ ಪ್ರಾಂಶುಪಾಲೆ ಕೆ.ಹೇಮಲತಾ ಗೋಕಲ್ ನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ವಾಣಿಜ್ಯಶಾಸ್ತ್ರ/ಕಲಾ ವಿಭಾಗ

ದಿಶಾ-517, ಆಯಿಷಾತುಲ್ ಮಿಶ್ರಿಯಾ-479, ಹೇಮಂತ್ ಗೌಡ-459, ಚೈತಾಲಿ-447, ಗೌಡಪ್ಪ ಗೌಡ-425, ದರ್ಶನ್ ಸುಬ್ಬಯ್ಯ-413, ಧನುಷ್-410, ಧನುಷ್ ಪುಣಚ-410, ಮಹಮ್ಮದ್ ಯಝೀದ್-390, ಇಹ್‌ಶಾನ್-387, ಲಿಂಕಿತ್ ತಿಮ್ಮಯ್ಯ-386, ನಂದನಾ ಜೆ-352, ಮಹಮ್ಮದ್ ತಹಝ್ ಪಿ.-350, ಸಂಕೇತ್ ಪೂಜಾರಿ-349, ಮಹಮ್ಮದ್ ತಲ್‌ಹತ್-339, ಕುಮಾರಸ್ವಾಮಿ-335, ಶಂಬ್ರೀನಾ-327, ಯಶ್ವಂತ್-324, ನಿತಿನ್-320, ಲಿತಿಶ್-320.

ವಿಜ್ಞಾನ ಟ್ಯೂಷನ್ ವಿಭಾಗ :

ಅಶ್ವಿಜ-497, ಆಯಿಷಾ ಮುಶ್ರಿಫಾ-488, ಫಾತಿಮತ್ ಅಫೀದಾ-484, ಜೀವಿತಾ-450, ಇಬ್ರಾಹಿಂ ಅನಾಝ್-435, ಮಹಮ್ಮದ್ ರಿಝ್ವಾನ್-426, ಮಹಮ್ಮದ್ ಅನ್ಸಫ್-402, ಮಹಮ್ಮದ್ ಅಕ್ಮಲ್-337


ಮೂರು ಪಿಕಪ್ ನಲ್ಲಿತ್ತು ಎಂಟು ದನಗಳು -ಬಿಜೆಪಿ ಮುಖಂಡರಿಗೆ ಸೇರಿದ ವಾಹನದಲ್ಲಿ ಅಕ್ರಮ ಗೋಸಾಗಾಟ

Posted by Vidyamaana on 2023-07-13 16:08:30 |

Share: | | | | |


ಮೂರು ಪಿಕಪ್ ನಲ್ಲಿತ್ತು ಎಂಟು ದನಗಳು -ಬಿಜೆಪಿ ಮುಖಂಡರಿಗೆ ಸೇರಿದ ವಾಹನದಲ್ಲಿ ಅಕ್ರಮ ಗೋಸಾಗಾಟ

ಬೆಳ್ತಂಗಡಿ : ಅಕ್ರಮವಾಗಿ ಮೂರು ವಾಹನಗಳಲ್ಲಿ ಹಿಂಸ್ಮಾಕ ರೀತಿಯಲ್ಲಿ ಏಂಟು ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಭೇಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.


*ಪ್ರಕರಣದ ಸಾರಾಂಶ:* ಜುಲೈ 12 ರಂದು ಧರ್ಮಸ್ಥಳ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕನಾದ ಅನೀಲಕುಮಾರ್‌ ಡಿ  ರವರಿಗೆ ಸಿಕ್ಕಿದ ಖಚಿತ ಮಾಹಿತಿಯಂತೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಕನ್ಯಾಡಿ ರಾಮ ಮಂದಿರದ ಬಳಿ ಸಿಬ್ಬಂದಿರವರುಗಳೊಂದಿಗೆ ವಾಹನ ತಪಾಸಣೆ ಮಾಡುತ್ತಿದ್ದ ಸಮಯ ಸುಮಾರು 8:45 ಗಂಟೆಗೆ ಉಜಿರೆ  ಕಡೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಮೂರು ಪಿಕಪ್‌ ವಾಹನಗಳಾದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ರಮಾನಂದ ಸಾಲ್ಯಾನ್‌ ಸೇರಿದ ಪಿಕಪ್ ವಾಹನ KA-21B-7389 ಮತ್ತು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಪ್ರಮೋದ್ ಸಾಲ್ಯಾನ್ ಸೇರಿದ ಪಿಕಪ್ ವಾಹನ KA-70-0312 ಹಾಗೂ ಕೃಷ್ಣ ಎಂಬವರಿಗೆ ಸೇರಿದ  KA670209 ನೇ ನೋಂದಣಿ ಸಂಖ್ಯೆಯ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಸದ್ರಿ ವಾಹನದಲ್ಲಿ ಕಪ್ಪು ಮತ್ತು ಕಂದು ಬಣ್ಣದ  ದನ -3, ಬಿಳಿ ಬಣ್ಣದಲ್ಲಿ ಕಂದು ಮಿಶ್ರಿತ ಇರುವ ದನ-1 , ಕಂದು ಬಣ್ಣದ ದನ -2 , ಕಂದು ಬಣ್ಣದ 2 ಗಂಡು ಕರುಗಳು ಒಟ್ಟು 8 ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು ವಾಹನದಲ್ಲಿದ್ದ 1ನೇ ಆರೋಪಿ ಚೆನ್ನಕೇಶವ ಎಂಬತನನ್ನು ವಿಚಾರಿಸಿದಲ್ಲಿ ಇಂದಬೆಟ್ಟು ಮತ್ತು ನಾವೂರು ಪರಿಸರದಿಂದ ಜಾನುವಾರುಗಳನ್ನು ಖರೀದಿಸಿ ಹಾಸನ ಕಡೆಗೆ ಮಾರಾಟ ಮಾಡಲು ಮೂರು ವಾಹನಗಳಲ್ಲಿ  ಹಿಂಸಾತ್ಮಕವಾಗಿ ಜಾನುವಾರುಗಳನ್ನು  

ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದು ಕಂಡು ಬಂದ ಮೇರೆಗೆ ವಾಹನಗಳ ಸಹಿತ ಜಾನುವಾರುಗಳನ್ನು ಧರ್ಮಸ್ಥಳ ಪೊಲೀಸರು ವಶಪಡಿಸಿಕೊಂಡಿದ್ದಾರೆ.


*ಬಂಧಿತ ಆರೋಪಿಗಳು:* 1) ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮರವಳಲು ನಿವಾಸಿ

ಬೇಲೂರಯ್ಯಮ ಮಗನಾದ ಚೆನ್ನಕೇಶವ(33) , 2)ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಒಳಗದ್ದೆ ನಿವಾಸಿ ಉಮೇಶ್ ಗೌಡರ ಮಗ ಪುಷ್ಪರಾಜ್(20) ,3) ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಮೋರ್ತಾಜೆ ನಿವಾಸಿ ಆನಂದ ಬಂಗೇರ ಮಗನಾದ ಪ್ರಮೋದ್ ಸಾಲ್ಯಾನ್(49),

4) ಹೊಳೆನರಸೀಪುರ ತಾಲೂಕಿನ ಹಳೇಕೋಟೆ ನಿವಾಸಿ ವೀರಭದ್ರಯ್ಯ ಮಗನಾದ ಸಂದೀಪ್‌(27) ಬಂಧಿತ ಆರೋಪಿಗಳು.



*ವಶಪಡಿಸಿಕೊಂಡ ಸಾಮಗ್ರಿಗಳು:* ಜಾನುವಾರುಗಳ ಅಂದಾಜು ಮೌಲ್ಯ 65,000 ಸಾವಿರ ಹಾಗೂ ವಾಹನದ ಅಂದಾಜು ಮೌಲ್ಯ 7,00,000 ರೂಪಾಯಿ ಆಗಬಹುದು. ಒಟ್ಟು ವಶಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ ರೂ 7,65,000 ರೂಪಾಯಿ ಅಗಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ: 8,9,11 ಕರ್ನಾಟಕ ಗೋ ಹತ್ಯೆ ನಿಷೇಧಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ -2020 ಮತ್ತು ಕಲಂ: 11 (ಡಿ) ಪ್ರಾಣಿ ಹಿಂಸೆ ತಡೆ ಕಾಯಿದೆ ಜೊತೆಗೆ ಕಲಂ:66 ಜೊತೆಗೆ 192(ಎ) ಐ ಎಂ ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಅಧಿಕಾರಿಗಳು ಉದ್ಯಮಿಗಳಲ್ಲಿ ಹಣದ ಬೇಡಿಕೆ ನನ್ನ ಹೆಸರಿನಲ್ಲಿ ಹಣ ಕೇಳಿದರೆ ಕೊಡುವ ಅಗತ್ಯವಿಲ್ಲ: ಶಾಸಕ ಅಶೋಕ್ ರೈ

Posted by Vidyamaana on 2023-09-07 12:33:10 |

Share: | | | | |


ಅಧಿಕಾರಿಗಳು ಉದ್ಯಮಿಗಳಲ್ಲಿ ಹಣದ ಬೇಡಿಕೆ ನನ್ನ ಹೆಸರಿನಲ್ಲಿ ಹಣ ಕೇಳಿದರೆ ಕೊಡುವ ಅಗತ್ಯವಿಲ್ಲ: ಶಾಸಕ ಅಶೋಕ್ ರೈ

ಪುತ್ತೂರು: ನನ್ನ ಹೆಸರು ಹೇಳಿಕೊಂಡು ಕೆಲವರು ಸರಕಾರಿ ಇಲಾಖೆಯ ಅಧಿಕಾರಿಗಳ ಬಳಿ, ಉದ್ಯಮಿಗಳ ಬಳಿ ಹಣ ಕೇಳುತ್ತಿದ್ದಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದ್ದು ನನ್ನ ಹೆಸರು ಹೇಳಿ ಯಾರಾದರು ಹಣ ಕೇಳಿದರೆ ಕೊಡಬೇಕಾದ ಅವಶ್ಯಕತೆಯಿಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈಯವರು ತಿಳಿಸಿದ್ದಾರೆ.

ಕಳೆದ ಹಲವಾರು ದಿನಗಳಿಂದ ಈ ರೀತಿಯ ವಿಚಾರಗಳು ನಡೆಯುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ನಾನು ಯಾವುದೇ ಅಧಿಕಾರಿಗಳ ಬಳಿಯಾಗಲಿ, ಉದ್ಯಮಿಗಳ ಬಳಿಯಾಗಲಿ ಚುನಾವಣೆಗೆ ಮುನ್ನವೂ ಹಣ ಕೇಳಿಲ್ಲ ಆ ಬಳಿಕವೂ ಕೇಳಿಲ್ಲ ಇನ್ನು ಕೇಳುವುದೂ ಇಲ್ಲ ಅದರ ಅಗತ್ಯತೆ ನನಗಿಲ್ಲ. ನನ್ನ ಹೆಸರಿನಲ್ಲಿ ಯಾರಾದರೂ ಅಧಿಕಾರಿಗಳ ಬಳಿ , ಉದ್ಯಮಿಗಳ ಬಳಿ ಹಣ ಕೇಳಿದರೆ ಅವರು ಕೊಡಬೇಕಾದ ಅಗತ್ಯವಿಲ್ಲ. ಶಾಸಕರು ಹೇಳಿರಬಹುದೇ ಎಂಬ ಅನುಮಾನವೇ ಬೇಡ ನಾನು ಯಾರಲ್ಲೂ ಹಣ ಕಲೆಕ್ಷನ್ ಮಾಡಲು ಹೇಳಿಯೂ ಇಲ್ಲ , ಮುಂದಕ್ಕೆ ಹೇಳುವುದೂ ಇಲ್ಲಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.

ಫೆಲಸ್ತೀನ್ ಗೆ ಬೆಂಬಲ ಸೂಚಿಸಿ ಎಸ್.ಡಿ.ಪಿ.ಐ ವತಿಯಿಂದ ಪುತ್ತೂರು ತಾಲೂಕಿನ ವಿವಿಧೆಡೆ ಭಿತ್ತಿಪತ್ರ ಪ್ರದರ್ಶನ

Posted by Vidyamaana on 2023-10-20 16:35:47 |

Share: | | | | |


ಫೆಲಸ್ತೀನ್ ಗೆ ಬೆಂಬಲ ಸೂಚಿಸಿ ಎಸ್.ಡಿ.ಪಿ.ಐ ವತಿಯಿಂದ ಪುತ್ತೂರು ತಾಲೂಕಿನ ವಿವಿಧೆಡೆ ಭಿತ್ತಿಪತ್ರ ಪ್ರದರ್ಶನ

ಪುತ್ತೂರು: ಮಾತೃ ಭೂಮಿಗಾಗಿ ಇಸ್ರೇಲ್ ವಿರುದ್ಧ ಹೋರಾಡುತ್ತಿರುವ ಫೆಲೆಸ್ತೀನಿಗೆ ಭಾರತದ ಬೆಂಬಲ ಮುಂದುವರಿಸಬೇಕು ಮತ್ತು ಫೆಲಸ್ತೀನ್ ಹೋರಾಟಕ್ಕೆ ಭಾರತೀಯರಾದ ನಮ್ಮ ಬೆಂಬಲವಿದೆ ಎಂದು ಸೂಚಿಸಿ ತಾಲೂಕಿನ ವಿವಿಧ ಕಡೆಗಳಲ್ಲಿ ಭಿತ್ತಿಪತ್ರ ಪ್ರದರ್ಶನ ಮಾಡಲಾಯಿತು. ಕೂರ್ನಡ್ಕ, ಪರ್ಲಡ್ಕ, ಬನ್ನೂರು, ಸಾಲ್ಮರ, ಕಬಕ, ಬೀಟಿಕೆ ಮುರ,ಉರಿಮಜಲು, ಉಪ್ಪಿನಂಗಡಿ, ನೆಕ್ಕಿಲಾಡಿ, ಹಿರೇಬಂಡಾಡಿ, ಕೊಲ್ಪೆ ವಲಯದ ವತಿಯಿಂದ ಭಿತ್ತಿ ಪತ್ರ ಪ್ರದರ್ಶಿಸಲಾಯಿತು.

ಪುತ್ತೂರು : ಅನಾರೋಗ್ಯದಿಂದಿದ್ದ ವಿದ್ಯಾರ್ಥಿ ಆಕಾಶ್ ನಿಧನ

Posted by Vidyamaana on 2024-04-07 11:15:08 |

Share: | | | | |


ಪುತ್ತೂರು : ಅನಾರೋಗ್ಯದಿಂದಿದ್ದ ವಿದ್ಯಾರ್ಥಿ ಆಕಾಶ್ ನಿಧನ

ಪುತ್ತೂರು : ಅನಾರೋಗ್ಯದಿಂದಾಗಿ ಶಾಲಾ ವಿದ್ಯಾರ್ಥಿಯೋರ್ವ ನಿಧನರಾದ ಬಗ್ಗೆ ವರದಿಯಾಗಿದೆ.ಬಟ್ರುಪಾಡಿ ನಿವಾಸಿ, ಕೊಡಿಪ್ಪಾಡಿ ಶಾಲಾ 7ನೇ ತರಗತಿ ವಿದ್ಯಾರ್ಥಿ ಆಕಾಶ್ ಮೃತ ಬಾಲಕ



Leave a Comment: