ಉಡುಪಿ: ನಾಳೆ (ಜು.09)ರಂದು ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಸುದ್ದಿಗಳು News

Posted by vidyamaana on 2024-07-08 17:22:55 |

Share: | | | | |


ಉಡುಪಿ: ನಾಳೆ (ಜು.09)ರಂದು ಶಾಲಾ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ: ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನೆಲೆ ಜು.09 ರಂದು ರೆಡ್ ಅಲರ್ಟ್ ಘೋಷಿಸಿದ್ದು ಅದರಂತೆ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಮಂಗಳವಾರ ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಜು.9ರಂದು ರಜೆ ಘೋಷಿಸಿ ಉಡುಪಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ

 Share: | | | | |


ಮುಸ್ಲಿಂ ಜಮಾಅತ್ ದ.ಕ. ಈಸ್ಟ್ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ

Posted by Vidyamaana on 2023-07-23 02:34:27 |

Share: | | | | |


ಮುಸ್ಲಿಂ ಜಮಾಅತ್ ದ.ಕ. ಈಸ್ಟ್ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ

ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ. ಈಸ್ಟ್ ಜಿಲ್ಲಾ ಸಮಿತಿ ರಚನಾ ಸಭೆಯು ಗುರುವಾರ ರೋಟರಿ ಮನಿಷಾ ಹಾಲ್‌ನಲ್ಲಿ ನಡೆಯಿತು.


ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಉಪಾಧ್ಯಕ್ಷ ಸಯ್ಯದ್ ಇಸ್ಮಾಯಿಲ್ ತಂಜಳ್ ಉಜಿರೆ ಸಭೆಯ ಅಧ್ಯಕ್ಷತೆ ವಹಿಸಿ ವಹಿಸಿ, ದುಆಃ ನೆರೆವೇರಿಸುವ ಮೂಲಕ ಸಭೆಗೆ ಚಾಲನೆ ನೀಡಿದರು.


ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರದಾನ ಕಾರ್ಯದರ್ಶಿ ಅಬೂ ಸುಫ್‌ಯಾನ್ ಎಚ್. ಐ. ಇಬ್ರಾಹಿಂ ಮದನಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್.ಪಿ. ಹಂಝ ಸಖಾಫಿ ನೇತೃತ್ವದಲ್ಲಿ 14 ಪದಾಧಿಕಾರಿಗಳನ್ನು ಒಳಗೊಂಡ 31 ಮಂದಿ ಸದಸ್ಯರ ಈಸ್ಟ್ ಜಿಲ್ಲಾ ಸಮಿತಿಯನ್ನು ರಚಿಸಿದರು.ಅಧ್ಯಕ್ಷರಾಗಿ ಅಬ್ದುರಹ್ಮಾನ್ ಹಾಜಿ ಅರಿಯಡ್ಕ ಪ್ರಧಾನ ಕಾರ್ಯದರ್ಶಿಯಾಗಿ ಜಿ.ಮುಹಮ್ಮದ್ ಕಾಮಿಲ್ ಸಖಾಫಿ, ಕೋಶಾಧಿಕಾರಿಯಾಗಿ ಬಿ.ಪಿ. ಇಸ್ಮಾಯಿಲ್ ಹಾಜಿ ಬೈತಡ್ಕ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.


ಉಪಾಧ್ಯಕ್ಷರಾಗಿ ಮುಹಮ್ಮದ್ ಕುಂಞ ಗೂನಡ್ಕ ಎ.ಕೆ. ಅಹ್ಮದ್ ಪರಪ್ಪು, ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ, ಕೆ.ಬಿ. ಕಾಸಿಂ ಹಾಜಿ ಮಿತ್ತೂರು, ಕಾರ್ಯದರ್ಶಿಯಾಗಿ ಕೆ.ಇ. ಅಬೂಬಕ್ಕರ್ ನೆಲ್ಯಾಡಿ, ಇಸ್ಮಾಯಿಲ್ ಮಾಸ್ಟರ್ ಮಂಗಳಪದವು, ಅಬ್ದುಲ್ ಕರೀಂ ಹಾಜಿ ಚೆನ್ನಾರ್, ಕಾಸಿಂ ಪದ್ಮುಂಜ, ಅಬ್ಬೋನು ಮದ್ದಡ್ಕ, ಅಬ್ದುಲ್ ಹಮೀದ್ ಸುಣ್ಣಮೂಲೆ ಹಾಗೂ ಮಾಧ್ಯಮ ಕಾರ್ಯದರ್ಶಿಯಾಗಿ ಹಾಜಿ ಯೂಸುಫ್ ಸಯೀದ್‌ ಪುತ್ತೂರು ಅವರನ್ನು ಆಯ್ಕೆ ಮಾಡಲಾಯಿತು.ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಉಮ‌ ಮುಸ್ಲಿಯಾರ್ ಮರ್ಧಾಳ, ಅಶ್ರಫ್ ಸಖಾಫಿ ಸವಣೂರು, ಕೆ.ಎಂ. ಮುಸ್ತಫಾ ಸುಳ್ಯ ಹನೀಫ್ ಹಾಜಿ ಇಂದ್ರಾಜೆ, ಅಬ್ಬಾಸ್ ಮದನಿ ಬಂಡಾಡಿ, ಅಬ್ಬಾಸ್ ಬಟ್ಲಡ್ಕ ಇಟ್ಬಾಲ್ ಬಪ್ಪಳಿಗೆ, ಅಬ್ದುಲ್ಲಾ ಮುಸ್ಲಿಯಾರ್ ಬನ್ನೂರು, ಯು.ಕೆ. ಹನೀಫ್ ಉಜಿರೆ, ಪಿ.ಯು. ಅಬ್ದುರಹ್ಮಾನ್ ಮುಸ್ಲಿಯಾರ್ ನಾವೂರು, ಇಬ್ರಾಹೀಂ ಮುಸ್ಲಿಯಾರ್ ಕೊಡಂಗಾಯಿ, ಅಬ್ದುಲ್ ಖಾದಿರ್ ಸಖಾಫಿ ಕಡಂಬು, ಉಸ್ಮಾನ್ ಹಾಜಿ ಸರ್ಕಲ, ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ಮುಹಮ್ಮದ್ ರಫಿ ಕಾಜೂರು, ಎಸ್‌ವೈಎಸ್ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ ಹಾಗೂ ಎಸ್ಸೆಸ್ಸೆಫ್ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಕೀಂ ಕಳಂಜಿಬೈಲ್ ಅವರನ್ನು ಆಯ್ಕೆ ಮಾಡಲಾಯಿತು.


ಸಭೆಯಲ್ಲಿ ಸಯ್ಯದ್ ಎಸ್.ಎಂ. ತಂಜಳ್ ಬೆಳ್ತಂಗಡಿ, ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಬಿ. ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು, ಕರ್ನಾಟಕ ಮುಸ್ಲಿಂ ಜಮಾಅತ್ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹೀಂ ಸಅದಿ ಉಪಸ್ಥಿತರಿದ್ದರು. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಕಾರ್ಯಕ್ರಮ ನಿರೂಪಿಸಿದರು.

ವಿಟ್ಲ : 400ಕೆ.ವಿ ಹೈ ಟೆನ್ಶನ್ ಕಾಮಗಾರಿ ಆರಂಭ

Posted by Vidyamaana on 2023-10-10 15:30:58 |

Share: | | | | |


ವಿಟ್ಲ : 400ಕೆ.ವಿ ಹೈ ಟೆನ್ಶನ್ ಕಾಮಗಾರಿ ಆರಂಭ

ವಿಟ್ಲ : ನಂದಿಕೂರಿನಿಂದ ಕಾಸರಗೋಡಿಗೆ ಹೋಗುವ 400ಕೆ.ವಿ ಹೈ ಟೆನ್ಶನ್ ಮಾರ್ಗವನ್ನು ಪುಣಚ ಗ್ರಾಮದ ಬೈರಿಕಟ್ಟೆಯಿಂದ ಕಾಮಗಾರಿ ಆರಂಭ ಮಾಡಲು ಮುಂದಾದಾಗ ಪರಿಸರದ ರೈತ ವರ್ಗದವರು ಪ್ರತಿಭಟಿಸಿದ ಘಟನೆ ನಡೆದಿದೆ.

ವಿಷಯ ತಿಳಿದು ಪುತ್ತೂರು ಮಾಜಿ ಶಾಸಕರಾದ ಸಂಜೀವ ಮಠಂದೂರು ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣ ಕಾಮಗಾರಿಗಳನ್ನು ನಿಲ್ಲಿಸಬೇಕು ಮತ್ತು ಈ ಭಾಗದ ರೈತರ ಸಭೆ ಕರೆದು ಚರ್ಚಿಸಬೇಕು ಎಂದರು.

ಇದಕ್ಕೆ ಸ್ಪಂದಿಸಿದ ಡಿ.ಸಿಯವರು ಕಾಮಗಾರಿಯನ್ನು ಈ ಕೂಡಲೇ ನಿಲ್ಲಿಸುವಂತೆ ಬಂಟ್ವಾಳ ತಹಶೀಲ್ದಾರ್ ರವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪುತ್ತೂರು ಮಂಡಲ ಬಿಜೆಪಿ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್,ವಿಟ್ಲ ಬಿಜೆಪಿ ಪ್ರಮುಖರಾದ ಕರುಣಾಕರ ನಾಯ್ತೊಟ್ಟು,ಪುಣಚ ಪಂಚಾಯತ್ ಸದಸ್ಯರಾದ ಅಶೋಕ್ ಮೂಡಂಬೈಲು, ತೀರ್ಥರಾಮ್, ರೈತ ಮುಖಂಡರಾದ ಸಂಜೀವ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಫೆ.11 : ಕ್ಯಾನ್ಸರ್ ರೋಗಿಗಳಿಗೆ ಉಚಿತ ಆಯುರ್ವೇದ ಉಪಶಮನಕಾರಿ ಚಿಕಿತ್ಸಾ ಸಲಹೆ ಹಾಗೂ ಸಂದರ್ಶನ

Posted by Vidyamaana on 2024-02-11 07:51:06 |

Share: | | | | |


ಫೆ.11 : ಕ್ಯಾನ್ಸರ್ ರೋಗಿಗಳಿಗೆ ಉಚಿತ ಆಯುರ್ವೇದ ಉಪಶಮನಕಾರಿ ಚಿಕಿತ್ಸಾ ಸಲಹೆ ಹಾಗೂ ಸಂದರ್ಶನ

ಪುತ್ತೂರು: ಪುರುಷರಕಟ್ಟೆ ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ವತಿಯಿಂದ ಕ್ಯಾನ್ಸರ್ ರೋಗಿಗಳಿಗೆ ಉಚಿತ ಆಯುರ್ವೇದ ಉಪಶಮನಕಾರಿ ಚಿಕಿತ್ಸೆಯ ಸಲಹೆ ಮತ್ತು ಸಂದರ್ಶನ ಫೆ.11 ಭಾನುವಾರ ಕ್ಲಿನಿಕ್ ನಲ್ಲಿ ನಡೆಯಲಿದೆ.


ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಆಯುರ್ವೇದ ಔಷಧಿ ಪದ್ಧತಿ ಮೂಲಕ ಕ್ಯಾನ್ಸ‌ರ್ ರೋಗದ ನೋವು ನಿವಾರಣೆಗೆ ಹಾಗೂ ಇತರ ಸಮಸ್ಯೆಗಳಿಗೆ ಉಚಿತ ಸಂದರ್ಶನ ಹಾಗೂ ಉಪಶಮನಕಾರಿ ಚಿಕಿತ್ಸೆಯ ಕುರಿತು ತಜ್ಞ ವೈದ್ಯರಾದ ಡಾ ಮಹೇಶ್.ಟಿ ಸಲಹೆ ನೀಡಲಿದ್ದಾರೆ.ಸಾರ್ವಜನಿಕರು ಮುಂಚಿತವಾಗಿ ತಮ್ಮ ಹೆಸರು ನೋಂದಾಯಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕಾಗಿ ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ನ ಮುಖ್ಯ ಫಿಸಿಷಿಯನ್, ಆಯುರ್ವೇದ ತಜ್ಞ ಡಾ. ಸುಜಯ್ ತಂತ್ರಿ, ಕೆಮ್ಮಿಂಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಕೆ ಶಿವಕುಮಾರ್ ಬಂದಿಳಿದ ಹೆಲಿಪ್ಯಾಡ್ ಬಳಿ ಬೆಂಕಿ ಅವಘಡ

Posted by Vidyamaana on 2023-05-04 10:30:53 |

Share: | | | | |


ಡಿಕೆ ಶಿವಕುಮಾರ್ ಬಂದಿಳಿದ ಹೆಲಿಪ್ಯಾಡ್ ಬಳಿ ಬೆಂಕಿ ಅವಘಡ

ಉತ್ತರ ಕನ್ನಡ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಗೆ ಹದ್ದು ಡಿಕ್ಕಿಯಾದ ಘಟನೆ ಇನ್ನೂ ಹಸಿಯಾಗಿರುವಾಗಲೇ ಇಂದು ಅವರು ಬಂದಿಳಿದ ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡಿದೆ. ಹೊನ್ನಾವರದ ರಾಮತೀರ್ಥ ಬಳಿಯ ಹೆಲಿಪ್ಯಾಡ್ ನಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಮತೀರ್ಥ ಬಳಿಯ ಹೆಲಿಪ್ಯಾಡ್ ನಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದೆ. ಮೈಸೂರಿನಿಂದ ಹೊನ್ನಾವರಕ್ಕೆ ಹೆಲಿಕಾಪ್ಟರ್ ನಲ್ಲಿ ತೆರಳಿದ್ದ ಡಿ.ಕೆ ಶಿವಕುಮಾರ್ ಅವರು ರಾಮತೀರ್ಥದ ಹೆಲಿಪ್ಯಾಡ್ ಗೆ ಬಂದಿಳಿದರು. ಈ ವೇಳೆ, ಹೆಲಿಪ್ಯಾಡ್ ನ ಬಳಿಯ ಹುಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೆಲಿಕಾಪ್ಟರ್ ಗೆ ಸಿಗ್ನಲ್ ಕೊಡುವ ಸ್ಟೋಕ್ ಕ್ಯಾಂಡಲ್ ನಿಂದ ಬೆಂಕಿ ಆವರಿಸಿದೆ ಎಂದು ಹೇಳಲಾಗುತ್ತಿದೆ. ಹುಲ್ಲಿಗೆ ಹೊತ್ತಿಕೊಂಡ ಬೆಂಕಿಯನ್ನು ಕೂಡಲೇ ಸಿಬ್ಬಂದಿ ಆರಿಸಿದ್ದು, ಬಾರೀ ದುರಂತ ತಪ್ಪಿದೆ. ಅದೃಷ್ಟವಶಾತ್ ಹೆಲಿಕಾಪ್ಟರ್ ನಲ್ಲಿ ಇದ್ದವರಿಗೆ ಯಾವುದೇ ಹಾನಿಯಾಗಿಲ್ಲ.ತಕ್ಷಣ ಸ್ಥಳದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಆಗಬಹುದಾದ ದುರ್ಘಟನೆಯನ್ನು ತಡೆದಿದ್ದಾರೆ.

ಇಂದು ಹೊನ್ನಾವರದ ಸೆಂಟ್ ಥಾಮಸ್ ಸಭಾಂಗಣದ ಆವರಣದಲ್ಲಿ ಅಭ್ಯರ್ಥಿಗಳ ಪರ ಮತ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಈ ಸಭೆಗೆ ಮೈಸೂರಿನಿಂದ ಹೊನ್ನಾವರಕ್ಕೆ ಹೆಲಿಕಾಪ್ಟರ್ ನಲ್ಲಿ ಡಿಕೆಶಿ ಪ್ರಯಾಣಿಸಿದ್ದರು.

ನೇಜಾರು ಕೊಲೆ ಪ್ರಕರಣ: ಆರೋಪಿಗೆ 14 ದಿನ ನ್ಯಾಯಾಂಗ ಬಂಧನ‌ ವಿಸ್ತರಣೆ

Posted by Vidyamaana on 2023-12-05 20:38:13 |

Share: | | | | |


ನೇಜಾರು ಕೊಲೆ ಪ್ರಕರಣ: ಆರೋಪಿಗೆ 14 ದಿನ ನ್ಯಾಯಾಂಗ ಬಂಧನ‌ ವಿಸ್ತರಣೆ

ಉಡುಪಿ: ನೇಜಾರಿನ ತಾಯಿ ಮತ್ತು ಮಕ್ಕಳ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗುಲೆ(39)ಯ ನ್ಯಾಯಾಂಗ ಬಂಧನ ಅವಧಿಯನ್ನು 14 ದಿನಗಳ ಕಾಲ ವಿಸ್ತರಿಸಿ ಉಡುಪಿಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.


ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಪ್ರವೀಣ್ ಚೌಗುಲೆಯನ್ನು ಪೊಲೀಸರು ನ.22ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಡಿ.5ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.


ನ್ಯಾಯಾಧೀಶೆ ದೀಪಾ ಆರೋಪಿಗೆ ಡಿ.18ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಸಹಾಯಕ ಪಬ್ಲಿಕ್ ಪ್ರಾಸಿಕ್ಯುಟರ್ ಎಚ್.ಎಂ.ನದಾಫ್ ಮತ್ತು ಆರೋಪಿ ಪರ ನ್ಯಾಯಾಲಯ ನೇಮಿಸಿದ ಸರಕಾರಿ ವಕೀಲ ರಾಜು ಪೂಜಾರಿ ಹಾಜರಿದ್ದರು.

ಗಮನಿಸಿ : ಜುಲೈ 1 ರಿಂದ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಹೊಸ ನಿಯಮ ಜಾರಿ

Posted by Vidyamaana on 2024-06-22 08:29:59 |

Share: | | | | |


ಗಮನಿಸಿ : ಜುಲೈ 1 ರಿಂದ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಹೊಸ ನಿಯಮ ಜಾರಿ

ನವದೆಹಲಿ : ಜೂನ್ 30 ರ ನಂತರ, ಕೆಲವು ಪ್ಲಾಟ್ಫಾರ್ಮ್ಗಳ ಮೂಲಕ ಕ್ರೆಡಿಟ್ ಕಾರ್ಡ್ ಬಿಲ್ಗಳನ್ನು ಪಾವತಿಸುವುದು ಕಷ್ಟವಾಗಬಹುದು. ಫೋನ್ಪೇ, ಕ್ರೆಡ್, ಬಿಲ್ಡೆಸ್ಕ್ ಮತ್ತು ಇನ್ಫಿಬೀಮ್ ಅವೆನ್ಯೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ನಿಯಮಗಳಿಂದ ಪ್ರಭಾವಿತವಾಗಬಹುದಾದ ಕೆಲವು ಪ್ರಮುಖ ಫಿನ್ಟೆಕ್ ಗಳಾಗಿವೆ.ಫೋನ್ ಪೇ, ಕ್ರೆಡ್, ಬಿಲ್ ಡೆಸ್ಕ್ ಪ್ಲಾಟ್ ಫಾರ್ಮ್ ಗಳ ಮೂಲಕ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳ ಮೇಲೆ ಪರಿಣಾಮ ಬೀರುತ್ತದೆ. ಜೂನ್ 30 ರ ನಂತರದ ಎಲ್ಲಾ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಭಾರತ್ ಬಿಲ್ ಪಾವತಿ ವ್ಯವಸ್ಥೆ (ಬಿಬಿಪಿಎಸ್) ಮೂಲಕ ಪ್ರಕ್ರಿಯೆಗೊಳಿಸಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಈ ಹಿಂದೆ ನಿರ್ದೇಶನ ನೀಡಿತ್ತು.

Recent News


Leave a Comment: