ಪುತ್ತೂರು: ನೇಣು ಬಿಗಿದು ಅನ್ಸರ್ ಆತ್ಮಹತ್ಯೆ

ಸುದ್ದಿಗಳು News

Posted by vidyamaana on 2024-07-05 12:22:17 |

Share: | | | | |


ಪುತ್ತೂರು: ನೇಣು ಬಿಗಿದು  ಅನ್ಸರ್  ಆತ್ಮಹತ್ಯೆ

ಪುತ್ತೂರು : ವಿವಾಹಿತ ಯುವಕನೊಬ್ಬ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ವಳತ್ತಡ್ಕ ಸಮೀಪದ ಕೊಪ್ಪಳ ಎಂಬಲ್ಲಿ ಗುರುವಾರ ನಡೆದಿದೆ.

ಮೂಲತಃ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ರೆಂಜಲಾಡಿ ನಿವಾಸಿಯಾಗಿದ್ದು, ಪ್ರಸ್ತುತ ಆರ್ಯಾಪು ಗ್ರಾಮದ ವಳತ್ತಡ್ಕ ಸಮೀಪದ ಕೊಪ್ಪಳ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿದ್ದ ಸಿದ್ದೀಕ್ ಅನ್ಸರ್(32) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ ಕೊಪ್ಪಳದಲ್ಲಿರುವ ತನ್ನ ಮಾವನ ಅಡಕೆ ತೋಟದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಡಕೆ ಗಾರ್ಬಲ್‌ನಲ್ಲಿ ದುಡಿಯುತ್ತಿದ್ದ ಸಿದ್ದೀಕ್ ಅನ್ಸರ್ ಸರ್ವೆ ಗ್ರಾಮದ ಕಲ್ಪನೆಯಲ್ಲಿ 10 ಸೆಂಟ್ಸ್ ಜಾಗ ಖರೀದಿಸಿ ಮನೆ ನಿರ್ಮಿಸಲು ಅಡಿಪಾಯ ಹಾಕಿದ್ದರು. ಆರ್ಯಾಪು ಗ್ರಾಮದ ಕೊಪ್ಪಳದಲ್ಲಿ ಬಾಡಿಗೆ ಮನೆ ಮಾಡಿ ಅಲ್ಲಿ ತಂದೆ, ತಾಯಿ ಹಾಗೂ ಪತ್ನಿ ಮಕ್ಕಳ ಜತೆ ವಾಸ್ತವ್ಯವಿದ್ದರು. ಕಳೆದ ಒಂದೂವರೆ ತಿಂಗಳಿನಿಂದ ವಿಪರೀತ ಹೊಟ್ಟೆನೋವು ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಪುತ್ತೂರಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರೂ ಗುಣಮುಖರಾಗದ ಅವರು ಗಾರ್ಬಲ್ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದರು. ಮನೆ ನಿರ್ಮಿಸುವ ಉದ್ದೇಶದಿಂದ ಸಾಲ ಪಡೆದಿದ್ದ ಅವರು ಸಾಲ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಪೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

 Share: | | | | |


ಪುತ್ತೂರು ಎಸ್‌ಡಿಪಿಐ ಕಾರ್ಯಕರ್ತರ ಸಮಾವೇಶ

Posted by Vidyamaana on 2023-02-10 16:00:29 |

Share: | | | | |


ಪುತ್ತೂರು ಎಸ್‌ಡಿಪಿಐ ಕಾರ್ಯಕರ್ತರ  ಸಮಾವೇಶ

ಪುತ್ತೂರು:ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯಕರ್ತರ ಸಭೆಯು ಪುತ್ತೂರಿನ ಎಂ.ಡಿ.ಎಸ್ ಟ್ರಿನಿಟಿ ಹಾಲ್ ನಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ಅಧ್ಯಕ್ಷತೆಯಲ್ಲಿ ಫೆ.10 ನಡೆಯಿತು.

ಕಾರ್ಯಕ್ರಮದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ  ಪ್ರಸಕ್ತ ಸನ್ನಿವೇಶದಲ್ಲಿ ಎಸ್‌ಡಿಪಿಐ ಪಕ್ಷದ ಅನಿವಾರ್ಯತೆ ಮತ್ತು ಚುನಾವಣಾ ರಾಜಕೀಯದಲ್ಲಿ ಪಕ್ಷದ ಪಾಲ್ಗೊಳ್ಳುವಿಕೆ ಅನಿವಾರ್ಯ ಯಾಕೆ ಎಂಬುದರ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಶಾಫಿ ಸಅದಿ ರಾಜೀನಾಮೆ

Posted by Vidyamaana on 2023-07-05 15:21:53 |

Share: | | | | |


ಶಾಫಿ ಸಅದಿ ರಾಜೀನಾಮೆ

ಬೆಂಗಳೂರು: ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಜುಲೈ 05 ರಂದು ರಾಜೀನಾಮೆ ಸಲ್ಲಿಸಿದ್ದಾರೆ.

ಕಳೆದ ಸಾಲಿನ ನವೆಂಬರ್ 18ಕ್ಕೆ ಶಾಫಿ ಸಅದಿ ವಕ್ಸ್ ಬೋರ್ಡ್‌ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ್ದರು. ನೂತನ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅವರ ನಾಮ ನಿರ್ದೇಶನವನ್ನು ರದ್ದುಗೊಳಿಸಿತ್ತು. ಆದರೆ, ಒಂದೇ ದಿನದಲ್ಲಿ ಆ ಆದೇಶವನ್ನು ಹಿಂಪಡೆಯಲಾಗಿತ್ತು.

ಸುಮಾರು ಎರಡು ಕೋಟಿ ರೂ.ವೆಚ್ಚದಲ್ಲಿ ನವೀಕೃತಗೊಂಡಿರುವ ವಕ್ಸ್ ಬೋರ್ಡ್ ಕಚೇರಿಯ ಕಟ್ಟಡದ ಉದ್ಘಾಟನೆವರೆಗೆ ತಮ್ಮನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಅವಕಾಶ ನೀಡುವಂತೆ ಶಾಫಿ ಸಅದಿ ಮನವಿ ಮಾಡಿದ್ದರು ಎಂದು ತಿಳಿದು ಬಂದಿದೆ. ಅದರಂತೆ, ಜು.3ರಂದು ನವೀಕೃತ ಕಟ್ಟಡ ಉದ್ಘಾಟನೆಯಾಗಿದ್ದು, ಅವರು ಇಂದು ರಾಜೀನಾಮೆ ನೀಡಿದ್ದಾರೆ.

ವಕ್ಸ್‌ ಬೋರ್ಡ್‌ಗೆ ಕಳೆದ ಸರಕಾರದ ಅವಧಿಯಲ್ಲಿ ತನ್ವಿರ್ ಸೇರ್ ಹಾಗೂ ಕನೀಝ್ ಫಾತಿಮಾ ಅವರನ್ನು ಶಾಸಕರ ಕೋಟಾದಲ್ಲಿ ನಾಮ ನಿರ್ದೇಶನ ಮಾಡಲಾಗಿತ್ತು. ಇದೀಗ ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬಂದಿರುವುದರಿಂದ ವಕ್ಸ್‌ ಬೋರ್ಡ್‌ಗೆ ಹೊಸದಾಗಿ ಶಾಸಕರನ್ನು ನಾಮ ನಿರ್ದೇಶನ ಮಾಡಬೇಕಿದೆ.


ಅಲ್ಲದೆ, ವಕ್ಸ್ ಬೋರ್ಡ್ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಬೇಕಿದೆ. ನೂತನ ಅಧ್ಯಕ್ಷರ ಆಯ್ಕೆಯಾಗುವವರೆಗೆ ಶಾಫಿ ಸಅದಿ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ


ಫೆ.11 : ಕ್ಯಾನ್ಸರ್ ರೋಗಿಗಳಿಗೆ ಉಚಿತ ಆಯುರ್ವೇದ ಉಪಶಮನಕಾರಿ ಚಿಕಿತ್ಸಾ ಸಲಹೆ ಹಾಗೂ ಸಂದರ್ಶನ

Posted by Vidyamaana on 2024-02-11 07:51:06 |

Share: | | | | |


ಫೆ.11 : ಕ್ಯಾನ್ಸರ್ ರೋಗಿಗಳಿಗೆ ಉಚಿತ ಆಯುರ್ವೇದ ಉಪಶಮನಕಾರಿ ಚಿಕಿತ್ಸಾ ಸಲಹೆ ಹಾಗೂ ಸಂದರ್ಶನ

ಪುತ್ತೂರು: ಪುರುಷರಕಟ್ಟೆ ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ವತಿಯಿಂದ ಕ್ಯಾನ್ಸರ್ ರೋಗಿಗಳಿಗೆ ಉಚಿತ ಆಯುರ್ವೇದ ಉಪಶಮನಕಾರಿ ಚಿಕಿತ್ಸೆಯ ಸಲಹೆ ಮತ್ತು ಸಂದರ್ಶನ ಫೆ.11 ಭಾನುವಾರ ಕ್ಲಿನಿಕ್ ನಲ್ಲಿ ನಡೆಯಲಿದೆ.


ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಆಯುರ್ವೇದ ಔಷಧಿ ಪದ್ಧತಿ ಮೂಲಕ ಕ್ಯಾನ್ಸ‌ರ್ ರೋಗದ ನೋವು ನಿವಾರಣೆಗೆ ಹಾಗೂ ಇತರ ಸಮಸ್ಯೆಗಳಿಗೆ ಉಚಿತ ಸಂದರ್ಶನ ಹಾಗೂ ಉಪಶಮನಕಾರಿ ಚಿಕಿತ್ಸೆಯ ಕುರಿತು ತಜ್ಞ ವೈದ್ಯರಾದ ಡಾ ಮಹೇಶ್.ಟಿ ಸಲಹೆ ನೀಡಲಿದ್ದಾರೆ.ಸಾರ್ವಜನಿಕರು ಮುಂಚಿತವಾಗಿ ತಮ್ಮ ಹೆಸರು ನೋಂದಾಯಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕಾಗಿ ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ನ ಮುಖ್ಯ ಫಿಸಿಷಿಯನ್, ಆಯುರ್ವೇದ ತಜ್ಞ ಡಾ. ಸುಜಯ್ ತಂತ್ರಿ, ಕೆಮ್ಮಿಂಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆಲಸ್ತೀನ್ ಗೆ ಬೆಂಬಲ ಸೂಚಿಸಿ ಎಸ್.ಡಿ.ಪಿ.ಐ ವತಿಯಿಂದ ಪುತ್ತೂರು ತಾಲೂಕಿನ ವಿವಿಧೆಡೆ ಭಿತ್ತಿಪತ್ರ ಪ್ರದರ್ಶನ

Posted by Vidyamaana on 2023-10-20 16:35:47 |

Share: | | | | |


ಫೆಲಸ್ತೀನ್ ಗೆ ಬೆಂಬಲ ಸೂಚಿಸಿ ಎಸ್.ಡಿ.ಪಿ.ಐ ವತಿಯಿಂದ ಪುತ್ತೂರು ತಾಲೂಕಿನ ವಿವಿಧೆಡೆ ಭಿತ್ತಿಪತ್ರ ಪ್ರದರ್ಶನ

ಪುತ್ತೂರು: ಮಾತೃ ಭೂಮಿಗಾಗಿ ಇಸ್ರೇಲ್ ವಿರುದ್ಧ ಹೋರಾಡುತ್ತಿರುವ ಫೆಲೆಸ್ತೀನಿಗೆ ಭಾರತದ ಬೆಂಬಲ ಮುಂದುವರಿಸಬೇಕು ಮತ್ತು ಫೆಲಸ್ತೀನ್ ಹೋರಾಟಕ್ಕೆ ಭಾರತೀಯರಾದ ನಮ್ಮ ಬೆಂಬಲವಿದೆ ಎಂದು ಸೂಚಿಸಿ ತಾಲೂಕಿನ ವಿವಿಧ ಕಡೆಗಳಲ್ಲಿ ಭಿತ್ತಿಪತ್ರ ಪ್ರದರ್ಶನ ಮಾಡಲಾಯಿತು. ಕೂರ್ನಡ್ಕ, ಪರ್ಲಡ್ಕ, ಬನ್ನೂರು, ಸಾಲ್ಮರ, ಕಬಕ, ಬೀಟಿಕೆ ಮುರ,ಉರಿಮಜಲು, ಉಪ್ಪಿನಂಗಡಿ, ನೆಕ್ಕಿಲಾಡಿ, ಹಿರೇಬಂಡಾಡಿ, ಕೊಲ್ಪೆ ವಲಯದ ವತಿಯಿಂದ ಭಿತ್ತಿ ಪತ್ರ ಪ್ರದರ್ಶಿಸಲಾಯಿತು.

ಡಾ.ಮೋಹನ ಆಳ್ವರಿಗೆ ಪಿತೃವಿಯೋಗ

Posted by Vidyamaana on 2023-10-31 16:03:17 |

Share: | | | | |


ಡಾ.ಮೋಹನ ಆಳ್ವರಿಗೆ ಪಿತೃವಿಯೋಗ

ಮಂಗಳೂರು, ಅ.31: ಮೂಡುಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವಾ ಅವರ ತಂದೆ, ಶತಾಯುಷಿ 106 ವರ್ಷದ ಮಿಜಾರು ಗುತ್ತು ಆನಂದ ಆಳ್ವ ನಿಧನರಾಗಿದ್ದಾರೆ. 


ಇಳಿ ವಯಸ್ಸು ಮೀರಿದ್ದರೂ ಮಿಜಾರಿನ ತಮ್ಮ ಮನೆಯಲ್ಲಿ ಆರೋಗ್ಯದಲ್ಲೇ ಇದ್ದ ಆನಂದ ಆಳ್ವರು ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತದಾನಕ್ಕಾಗಿ ಬಂಗಬೆಟ್ಟು ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದರು. ಇಡೀ ರಾಜ್ಯದಲ್ಲಿಯೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ಅತಿ ಹಿರಿಯ ವ್ಯಕ್ತಿ ಎನ್ನುವ ಹೆಗ್ಗಳಿಕೆ ಕೇಳಿಬಂದಿತ್ತು. 


1918ರಲ್ಲಿ ಜನಿಸಿದ್ದ ಆನಂದ ಆಳ್ವರು ಸಣ್ಣಂದಿನಲ್ಲಿ ಕಿನ್ನಿಕಂಬಳದ ಸರಕಾರಿ ಶಾಲೆಯಲ್ಲಿ ಐದನೇ ಕ್ಲಾಸು ಓದಿದ್ದರಂತೆ. ಮಿಜಾರಿನಲ್ಲಿದ್ದುಕೊಂಡೇ ಕೃಷಿಕನಾಗಿದ್ದ ಆನಂದ ಆಳ್ವರು ಒಂದು ಬಾರಿ ಬೀಡಿ ವ್ಯವಹಾರವನ್ನೂ ಮಾಡಿಕೊಂಡಿದ್ದರು. ಆನಂತರ ಅಬಕಾರಿ ಗುತ್ತಿಗೆಯನ್ನೂ ಮಾಡಿದ್ದರು. ಕಂಬಳ, ದೈವಾರಾಧನೆ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಸ್ವತಃ ಕಂಬಳದ ಕೋಣಗಳನ್ನು ಸಾಕಿ ಕಂಬಳದ ಸ್ಪರ್ಧೆಗಳಿಗೆ ತೆರಳುತ್ತಿದ್ದರು. 2022ರ ಆಗಸ್ಟ್ ತಿಂಗಳಲ್ಲಿ ಆಳ್ವಾಸ್ ಸಂಸ್ಥೆಯ ಆವರಣದಲ್ಲಿ ಆನಂದ ಆಳ್ವರ 105 ವರ್ಷದ ಸಂಭ್ರಮಪೂರ್ಣ ಕಾರ್ಯಕ್ರಮ ನಡೆದಿತ್ತು.

ಕರ್ತವ್ಯದಲ್ಲಿರೋ ಮಾಧ್ಯಮ ಸಿಬ್ಬಂದಿಗೆ ಅಂಚೆ ಪತ್ರದ ಮೂಲಕ ಮತ ಚಲಾವಣೆಗೆ ಅವಕಾಶ : ಚುನಾವಣಾ ಆಯೋಗ

Posted by Vidyamaana on 2024-03-20 10:07:44 |

Share: | | | | |


ಕರ್ತವ್ಯದಲ್ಲಿರೋ ಮಾಧ್ಯಮ ಸಿಬ್ಬಂದಿಗೆ ಅಂಚೆ ಪತ್ರದ ಮೂಲಕ ಮತ ಚಲಾವಣೆಗೆ ಅವಕಾಶ : ಚುನಾವಣಾ ಆಯೋಗ

ನವದೆಹಲಿ : ಲೋಕಸಭಾ ಚುನಾವಣೆಯಲ್ಲಿ ಅಂಚೆ ಮತದಾನಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಹೊಸ ಅಧಿಸೂಚನೆ ಹೊರಡಿಸಿದೆ. ಚುನಾವಣಾ ಆಯೋಗವು ಈಗ ಮಾಧ್ಯಮ ಸಿಬ್ಬಂದಿಗೆ ಅಂಚೆ ಮತಪತ್ರದ ಸೌಲಭ್ಯವನ್ನ ಒದಗಿಸಿದೆ. ಅಂದ್ರೆ, ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ಎಲ್ಲಾ ಅಧಿಕೃತ ಮಾಧ್ಯಮ ಸಿಬ್ಬಂದಿ ಅವರು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಸಾಧ್ಯವಾಗುತ್ತದೆ.ಆದಾಗ್ಯೂ, ಚುನಾವಣಾ ಆಯುಕ್ತರು ಮಾಧ್ಯಮ ಪ್ರಸಾರ ಪಾಸ್ ನೀಡುವ ಮಾಧ್ಯಮ ಸಿಬ್ಬಂದಿಗೆ ಮಾತ್ರ ಮತ ಚಲಾಯಿಸಲು ಸಾಧ್ಯವಾಗುತ್ತದೆ. 


ವಾಸ್ತವವಾಗಿ, ಚುನಾವಣಾ ಆಯೋಗವು ಯಾವುದೇ ಚುನಾವಣೆಯಲ್ಲಿ ಹೆಚ್ಚು ಹೆಚ್ಚು ಮತದಾರರನ್ನು ಭಾಗವಹಿಸಲು ಪ್ರಯತ್ನಿಸುತ್ತದೆ. ಆದರೆ ಚುನಾವಣೆಗಳಲ್ಲಿ, ಸಾವಿರಾರು ಮತ್ತು ಲಕ್ಷಾಂತರ ನೌಕರರು ಮತ್ತು ಭದ್ರತಾ ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿದ್ದಾರೆ. ಇದಲ್ಲದೆ, ಗಡಿಯಲ್ಲಿ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಜನರು ತಮ್ಮ ಕರ್ತವ್ಯವನ್ನ ಬಿಟ್ಟು ಚುನಾವಣೆಯಲ್ಲಿ ಮತ ಚಲಾಯಿಸಲು ತಮ್ಮ ಮನೆಗೆ ಹೋಗಲು ಸಾಧ್ಯವಾಗುವುದಿಲ್ಲ. ಅಂತಹ ಸಿಬ್ಬಂದಿ ಮತ್ತು ಸೈನಿಕರಿಗೆ, ಚುನಾವಣಾ ಆಯೋಗವು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಅವಕಾಶ ನೀಡುತ್ತದೆ.

Recent News


Leave a Comment: