ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಉಪ್ಪಳ: ಮನೆಯ ಬಾಗಿಲು ಮುರಿದು ಕಳವು: 8 ಪವನ್ ಚಿನ್ನ, 45 ಸಾವಿರ ರೂ.ನಗದು ಕದ್ದು ಪರಾರಿ

Posted by Vidyamaana on 2023-02-04 04:20:01 |

Share: | | | | |


ಉಪ್ಪಳ: ಮನೆಯ ಬಾಗಿಲು ಮುರಿದು ಕಳವು: 8 ಪವನ್ ಚಿನ್ನ, 45 ಸಾವಿರ ರೂ.ನಗದು ಕದ್ದು ಪರಾರಿ

ಉಪ್ಪಳ: ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಸುಮಾರು 8 ಪವನ್ ಚಿನ್ನಾಭರಣ ಮತ್ತು 45 ಸಾವಿರ ರೂ. ನಗದು ಕಳವು ಮಾಡಿರುವ ಘಟನೆ ಉಪ್ಪಳದಲ್ಲಿ ನಡೆದಿದೆ.

     ಹಿದಾಯತ್ ಬಜಾ‌ರ್ ನ ಮುಹಮ್ಮದ್ ಸಲೀಂ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.ಸಲೀಂ ಗಲ್ಸ್‌ನಲ್ಲಿದ್ದು, ತಾಯಿ ಸಫಿಯಾ ಮನೆಗೆ ಬೀಗ ಹಾಕಿ ಸಾಲೆತ್ತೂರಿನ ಸಂಬಂಧಿಕರ ಮನೆಗೆ ತೆರಳಿದ್ದರು. ಗಲ್ಫ್ನಲ್ಲಿರುವ ಸಲೀಂ ಮೊಬೈಲ್ ಫೋನ್ ಮೂಲಕ ಮನೆಯಲ್ಲಿರುವ ಸಿಸಿ ಟಿವಿ ದೃಶ್ಯಗಳನ್ನು ಗಮನಿಸಿದಾಗ ತಡರಾತ್ರಿ ಮನೆಯೊಳಗೆ ಓರ್ವ ಮುಸುಕುಧಾರಿಯಾಗಿ ತೆರಳುತ್ತಿರುವುದು ಗಮನಕ್ಕೆ ಬಂದಿದೆ.ಇನ್ನು ತಕ್ಷಣ ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಮನೆಗೆ ಬಂದು ಗಮನಿಸಿದಾಗ ಮುಂಭಾಗದ ಬಾಗಿಲು ಮುರಿದಿರುವುದು ಕಂಡು ಬಂದಿದೆ. ಮೇಲಂತಸ್ತಿನಲ್ಲಿದ್ದ ಒಂದು ಮತ್ತು ಕೆಳಗಡೆ ಇದ್ದ ಮೂರು ಕಪಾಟುಗಳನ್ನು ಒಡೆದು ವಸ್ತ್ರಗಳನ್ನು ಎಸೆದಿರುವುದು ಕಂಡು ಬಂದಿದೆ.

ಭಾರತದ ಬೌಲಿಂಗ್ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾಕ್ಕೆ ಹೀನಾಯ ಸೋಲು

Posted by Vidyamaana on 2023-11-05 21:58:35 |

Share: | | | | |


ಭಾರತದ ಬೌಲಿಂಗ್ ದಾಳಿಗೆ ನಲುಗಿದ ದಕ್ಷಿಣ ಆಫ್ರಿಕಾಕ್ಕೆ ಹೀನಾಯ ಸೋಲು

ಕೋಲ್ಕತಾ: ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದ ದಕ್ಷಿಣ ಆಫ್ರಿಕಾ ತಂಡವು ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ದಾಳಿಯ ಎದುರು ಮಂಕಾಗಿ ಹೀನಾಯ ಸೋಲು ಕಂಡಿತು. ಗೆಲುವಿನೊಂದಿಗೆ ಭಾರತ ಅಗ್ರ ಸ್ಥಾನಿಯಾಗಿ ಸೆಮಿ ಫೈನಲ್ ಪ್ರವೇಶಿಸಲಿದೆ.



327 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ಘಟಾನುಘಟಿ ಬ್ಯಾಟ್ಸ್ ಮ್ಯಾನ್ ಗಳು ಇಂದು ಭಾರತದ ಬೌಲಿಂಗ್ ದಾಳಿಗೆ ಸಿಲುಗಿ ಪತರು ಗುಟ್ಟಿ ಹೋದರು. 27.1 ಓವರ್ ಗಳಲ್ಲಿ ಕೇವಲ 83 ರನ್ ಗಳಿಗೆ ಆಲೌಟಾಗುವ ಮೂಲಕ ಭಾರತ 243 ರನ್‌ಗಳ ಅತ್ಯಮೋಘ ಸ್ಮರಣೀಯ ಜಯ ಸಾಧಿಸಿತು.


ಭಾರತದ ಪರ ವೇಗಿ ಸಿರಾಜ್ ಅವರು ಅದ್ಬುತ ಫಾರ್ಮ್ ನಲ್ಲಿದ್ದ ಡಿ’ಕಾಕ್ ಅವರನ್ನು ಬೌಲ್ಡ್ ಮಾಡುವ ಮೂಲಕ ಮೊದಲ ಆಘಾತ ನೀಡಿದರು. ಆಬಳಿಕ ದಕ್ಷಿಣ ಆಫ್ರಿಕಾ ಆಟಗಾರರು ತಲೆ ಎತ್ತಲು ಸಾಧ್ಯವಾಗಲಿಲ್ಲ.


ಭಾರತದ ಪರ ಬಿಗಿ ದಾಳಿ ನಡೆಸಿದ ರವೀಂದ್ರ ಜಡೇಜಾ 5 ವಿಕೆಟ್ ಕಬಳಿಸಿದರು. ಶಮಿ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಕಿತ್ತರು ವಿರಾಟ್ ಕೊಹ್ಲಿ ಅವರು ಜನ್ಮದಿನದ ಸಂಭ್ರಮದಲ್ಲಿ ಅಮೋಘ ಶತಕ ಸಿಡಿಸಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಸರಿಗಟ್ಟಿದರು. ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿ ಭರ್ಜರಿ ಮೊತ್ತವನ್ನು ದಕ್ಷಿಣ ಆಫ್ರಿಕಾ ತಂಡದ ಎದುರಿಗಿಟ್ಟಿದೆ. ನಾಯಕ ರೋಹಿತ್ ಶರ್ಮ ಮತ್ತು ಶುಭಮನ್ ಗಿಲ್ 62 ರನ್ ಜತೆಯಾಟವಾಡಿ ವೇಗದ ಆರಂಭ ಒದಗಿಸಿಕೊಟ್ಟರು. ಶರ್ಮ 24 ಎಸೆತಗಳಲ್ಲಿ 40 ರನ್ ಗಳಿಸಿ ಔಟಾದರು. ಗಿಲ್ 23 ರನ್ ಗಳಿಸಿದ್ದ ವೇಳೆ ನಿರ್ಗಮಿಸಿದರು.



ಆ ಬಳಿಕ ತಾಳ್ಮೆಯ ಆಟವಾಡಿದ ಕೊಹ್ಲಿ119 ಎಸೆತಗಳಲ್ಲಿ 100 ರನ್ ಗಳಿಸಿ ಸಂಭ್ರಮಿಸಿದರು. ಕೊಹ್ಲಿ ಅವರಿಗೆ ಉತ್ತಮ ಜತೆಯಾಟದ ಸಾಥ್ ನೀಡಿದ ಶ್ರೇಯಸ್ ಅಯ್ಯರ್ 87 ಎಸೆತಗಳಲ್ಲಿ 77 ರನ್ ಗಳಿಸಿ ಔಟಾದರು. ಕೆಎಲ್ ರಾಹುಲ್ 8 ರನ್, ಸೂರ್ಯಕುಮಾರ್ ಯಾದವ್ 22 ಗಳಿಸಿದ್ದ ವೇಳೆ ಔಟಾದರು.


ಕೊಹ್ಲಿ121 ಎಸೆತಗಳಲ್ಲಿ 101 ರನ್ ಗಳಿಸಿ ಅಜೇಯರಾಗಿ ಉಳಿದರು. ಕೊಹ್ಲಿ ಆಕರ್ಷಕ 10 ಬೌಂಡರಿಗಳನ್ನು ಬಾರಿಸಿದ್ದರು. ರವೀಂದ್ರ ಜಡೇಜಾ 15 ಎಸೆತಗಳಲ್ಲಿ 29 ರನ್ ಗಳಿಸಿ ಔಟಾಗದೆ ಉಳಿದರು.


ಸಚಿನ್ ತೆಂಡೂಲ್ಕರ್ 452 ಇನ್ನಿಂಗ್ಸ್ ಗಳಲ್ಲಿ 49 ಶತಕ ಬಾರಿಸಿದ್ದು,ವಿರಾಟ್ ಕೊಹ್ಲಿ ಅವರು 277 ಇನ್ನಿಂಗ್ಸ್ ಗಳಲ್ಲಿ 49 ನೇ ಶತಕ ದಾಖಲಿಸಿ ಹೊಸ ದಾಖಲೆಯತ್ತ ಮುನ್ನುಗ್ಗುತ್ತಿದ್ದಾರೆ.


8 ರಲ್ಲಿ 8 ಪಂದ್ಯಗಳನ್ನು ಗೆದ್ದಿರುವ ರೋಹಿತ್ ಶರ್ಮ ಬಳಗ ಸೆಮಿ ಫೈನಲ್ ಗೂ ಮುನ್ನ ನೆದರ್ ಲ್ಯಾಂಡ್ಸ್ ವಿರುದ್ಧ ಪಂದ್ಯವನ್ನು ಆಡಲಿದೆ. ದಕ್ಷಿಣ ಆಫ್ರಿಕಾ ತಂಡ ಅಫ್ಘಾನ್ ಎದುರು ಪಂದ್ಯ ಆಡಲಿದೆ

ಬೈಕ್ ಸ್ಕಿಡ್ : ನಾಟಕ ಕಲಾವಿದ ಗೌತಮ್ ಸ್ಥಳದಲ್ಲೇ ಮೃತ್ಯು

Posted by Vidyamaana on 2023-12-31 11:43:08 |

Share: | | | | |


ಬೈಕ್ ಸ್ಕಿಡ್ : ನಾಟಕ ಕಲಾವಿದ ಗೌತಮ್ ಸ್ಥಳದಲ್ಲೇ ಮೃತ್ಯು

ಬಂಟ್ವಾಳ : ನಾಟಕ ಕಲಾವಿದನೋರ್ವ ಬೈಕ್ ಸ್ಕಿಡ್ ಆಗಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ವಗ್ಗ ಸಮೀಪದ ಕೊಡ್ಯಮಲೆ ಎಂಬಲ್ಲಿ ನಡೆದಿದೆ.‌ಕೊಡ್ಯಮಲೆ ನಿವಾಸಿ ಗೌತಮ್ ಮೃತಪಟ್ಟ ಅವಿವಾಹಿತ ಯುವಕ.‌‌ಗೌತಮ್ ಬೆಳುವಾಯಿಯಲ್ಲಿ ನಡೆದ ಕದಂಬ ನಾಟಕದಲ್ಲಿ ಭಾಗವಹಿಸಿ ಹಿಂತಿರುಗುವ ವೇಳೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.


ಗೌತಮ್ ಕದಂಬ ನಾಟಕದ ಓರ್ವ ಕಲಾವಿದನಾಗಿ ಮಿಂಚುವ ಯುವಕನಾಗಿದ್ದು, ಹಗಲು ಹೊತ್ತಿನಲ್ಲಿ ಬಿಸಿರೋಡಿನ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

‌ಅಪಘಾತ ನಡೆದು ಬೆಳಿಗ್ಗೆ ವರೆಗೆ ಯಾರು ನೋಡಿರಲಿಲ್ಲ. ಬೆಳಿಗ್ಗೆ ದಾರಿಯಲ್ಲಿ ಹೋಗುವವರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಟ್ರಾಫಿಕ್ ಎಸ್.ಐ. ಸುತೇಶ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಲ್ಲಿ ಒಂದೇ ಮನೆಗೆ 21 ಬ್ಯಾಂಕ್ ಗಳಿಂದ ಸಾಲ ಪಡೆದ ಭೂಪ: ಹರಾಜಿ ಗೆ ಬ್ಯಾಂಕ್ ಗಳಿಂದ ಪೈಪೋಟಿ

Posted by Vidyamaana on 2024-02-18 20:36:42 |

Share: | | | | |


ಬೆಂಗಳೂರಲ್ಲಿ ಒಂದೇ ಮನೆಗೆ 21 ಬ್ಯಾಂಕ್ ಗಳಿಂದ ಸಾಲ ಪಡೆದ ಭೂಪ: ಹರಾಜಿ ಗೆ ಬ್ಯಾಂಕ್ ಗಳಿಂದ ಪೈಪೋಟಿ

ಬೆಂಗಳೂರು : ನಗರದಲ್ಲಿ ಒಂದೇ ಮನೆಗೆ ಒಂದು ಬ್ಯಾಂಕ್ ನಿಂದ ಲೋನ್ ಸಿಗೋದೇ ಕಷ್ಟ. ಹೀಗಿರುವಾಗ ಒಂದೇ ಮನೆಗೆ ಬರೋಬ್ಬರಿ 21 ಬ್ಯಾಂಕ್ ಗಳಿಂದ ಕೋಟ್ಯಂತರ ಸಾಲವನ್ನು ವ್ಯಕ್ತಿಯೊಬ್ಬ ಪಡೆದಿದ್ದಾರೆ. ಆ ಬಳಿಕ ಬ್ಯಾಂಕ್ ಗಳಿಗೆ ಸಾಲ ಕಟ್ಟಲಾಗದೇ, ಪರಾರಿಯಾಗಿದ್ದಾನೆ. ಇಂತಹ ಮನೆಯನ್ನು ಹರಾಜು ಹಾಕೋದಕ್ಕಾಗಿ 21 ಬ್ಯಾಂಕ್ ಗಳು ಪೈಪೋಟಿ ಕೂಡ ನಡೆಸಿರೋ ಘಟನೆ ನಡೆದಿದೆ.ಬೆಂಗಳೂರಿನ ಬೊಮ್ಮನಹಳ್ಳಿಯ ಬೇಗೂರಿನ ನಂಜುಂಡಪ್ಪ ಲೇಔಟ್ ನಲ್ಲಿನ ನಂಜುಂಡಯ್ಯ ಎಂಬುವರು ತಮ್ಮ ಒಂದೇ ಮನೆಯ ಮೇಲೆ 21 ಬ್ಯಾಂಕ್ ಗಳಿಂದ 5 ಕೋಟಿಗೂ ಹೆಚ್ಚು ಸಾಲ ಪಡೆದಿದ್ದಾರೆ. ಸಾಲ ಕಟ್ಟದ ಕಾರಣ, ನಂಜುಂಡಯ್ಯ ಮನೆಗೆ 21 ಬ್ಯಾಂಕ್ ಗಳು ಮನೆ ಹರಾಜು ಹಾಕೋ ಬಗ್ಗೆ ನೋಟಿಸ್ ಅಂಟಿಸಿದ್ದಾರೆ.


ಸಾಲ ಕಟ್ಟಲಾಗದೇ ಮನೆಗೆ ಬೀಗ ಹಾಕಿಕೊಂಡು ನಂಜುಂಡಯ್ಯ ಪರಾರಿಯಾಗಿದ್ದು, ಈಗ ನಾ ಮುಂದು, ತಾ ಮುಂದೆ ಎನ್ನುವಂತೆ ಬ್ಯಾಂಕ್ ಗಳು ನಂಜುಂಡಯ್ಯ ಮನೆಯನ್ನು ಹರಾಜು ಮಾಡೋದಕ್ಕೆ ತುದಿಗಾಲಲ್ಲಿ ನಿಂತಿವೆ.


ಒಂದು ಮನೆಗೆ ಒಂದು ಬಾರಿಗೆ ಸಾಲ ಕೊಡುವುದಕ್ಕೆ ವಿವಿಧ ದಾಖಲೆ ಪತ್ರಗಳನ್ನು ಹತ್ತಾರು ಬಾರಿ ಪಡೆದು, ಪರಿಶೀಲಿಸೋ ಬ್ಯಾಂಕ್ ಗಳು ಮಾತ್ರ, ನಂಜುಂಡಯ್ಯಗೆ 21 ಬ್ಯಾಂಕ್ ಗಳು ಸಾಲ ಕೊಟ್ಟಿದ್ದು ಹೇಗೆ ಎಂಬ ಅನುಮಾನ ಈಗ ಕಾಡುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಮೋದಿ ಮತ್ತೊಮ್ಮೆ ಪ್ರಧಾನಿಯಾದ ಸಂಭ್ರಮ ಅನ್ನದಾನ ಮಾಡಿದ ಪಂಚಮುಖಿ ಫ್ರೆಂಡ್ಸ್

Posted by Vidyamaana on 2024-06-15 11:22:21 |

Share: | | | | |


ಮೋದಿ ಮತ್ತೊಮ್ಮೆ ಪ್ರಧಾನಿಯಾದ ಸಂಭ್ರಮ  ಅನ್ನದಾನ ಮಾಡಿದ ಪಂಚಮುಖಿ ಫ್ರೆಂಡ್ಸ್

ಪುತ್ತೂರು: ಕೋರ್ಟ್ ರಸ್ತೆ ಪಂಚಮುಖಿ ಫ್ರೆಂಡ್ಸ್ ವತಿಯಿಂದ ಬಿರುಮಲೆ ಪ್ರಜ್ಞಾ ಆಶ್ರಮದಲ್ಲಿ ಶುಕ್ರವಾರ ಮಧ್ಯಾಹ್ನ ಅನ್ನದಾನ ಸೇವೆ ಜರಗಿತು.


ವಿಟ್ಲ : 400 ಕೆ.ವಿ. ಕಾಮಗಾರಿ ವಿರೋಧಿಸಿ ಪ್ರತಿಭಟನೆ

Posted by Vidyamaana on 2023-10-10 15:28:55 |

Share: | | | | |


ವಿಟ್ಲ : 400 ಕೆ.ವಿ. ಕಾಮಗಾರಿ ವಿರೋಧಿಸಿ ಪ್ರತಿಭಟನೆ

ವಿಟ್ಲ : ನಂದಿಕೂರಿನಿಂದ ಕಾಸರಗೋಡಿಗೆ ಹೋಗುವ 400ಕೆ.ವಿ ಹೈ ಟೆನ್ಶನ್ ಮಾರ್ಗವನ್ನು ಪುಣಚ ಗ್ರಾಮದ ಬೈರಿಕಟ್ಟೆಯಿಂದ ಕಾಮಗಾರಿ ಆರಂಭ ಮಾಡಲು ಯತ್ನಿಸಿದಾಗ ಪರಿಸರದ ರೈತ ವರ್ಗದವರು ಪ್ರತಿಭಟಿಸಿದ ಘಟನೆ ನಡೆದಿದೆ.


ಈ ಬಗ್ಗೆ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಹಿಂದೂ ಮುಖಂಡ ಭೇಟಿ ನೀಡಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.

ಈ ಬಗ್ಗೆ ಅಧಿಕಾರಿಗಳ ಜೊತೆ ಹಾಗೂ ರೈತ ವರ್ಗದವರ ಜೊತೆ ಚರ್ಚಿಸಿದರು.

ಯಾವುದೇ ಕಾರಣಕ್ಕೂ ಅನುಷ್ಠಾನ ಮಾಡೋದಕ್ಕೆ ಬಿಡೋದಿಲ್ಲ., ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗುವಂತೆ ಯಾವುದೇ ಆಸ್ಪಾದನೆ ಕೊಡಬೇಡಿ ಎಂದು ಅಧಿಕಾರಿಗಳ ಜೊತೆ ಮಾತನಾಡಿದರು.

ರೈತ ವರ್ಗದವರ ಜೊತೆ ಯಾವಾಗಲೂ ನಿಲ್ಲುವುದಾಗಿ., ರೈತರ ಪರ ಪುತ್ತಿಲ ಬ್ಯಾಟ್ ಬೀಸಿದ್ದು, ನಿಮ್ಮೊಂದಿಗೆ ನಾನಿದ್ದೇನೆ ಎಂಬ ಭರವಸೆಯನ್ನು ರೈತರಿಗೆ ನೀಡಿದರು.

400 ಕೆ.ವಿ. ವಿದ್ಯುತ್ ವಿರೋಧಿ ಹೋರಾಟ ಸಮಿತಿ ವಿಟ್ಲದ ಅಧ್ಯಕ್ಷರಾದ ರಾಜೀವ ಗೌಡ, ಸಂಜೀವ ಗೌಡ ಒಕ್ಕೆತ್ತೂರು, ಚಿತ್ರಾಂಜನ್ ಮಂಗಿಲಪದವು, ರೋಹಿತಾಶ್ವ ಮಂಗಿಲಪದವು, ದಾಮೋದರ ಗೌಡ ಒಕ್ಕೆತ್ತೂರು, ಅಬ್ಬಾಸ್ ಪುಣಚ, ಪುಣಚ ಪಂಚಾಯತ್ ಸದಸ್ಯ ಅಶೋಕ್, ಭಾಸ್ಕರ್ ಉಪಾಧ್ಯಾಯ ಪುಣಚ, ಪಾರ್ಥ ಸಾರಥಿ ವಾರಣಾಸಿ ಹಾಗೂ ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಮಾರ್ತ, ಸುಧೀರ್ ಕುಮಾರ್ ಶೆಟ್ಟಿ ಮೊಡಂಬೈಲ್, ಭೀಮ ಭಟ್, ರಘುರಾಮ್ ಶೆಟ್ಟಿ ವಿಟ್ಲ, ಶರತ್ ಎನ್.ಎಸ್, ನವೀನ್ ಕುಮಾರ್ ಕಾಶೀಮಠ ಮತ್ತು ಹಲವರು ಉಪಸ್ಥಿತರಿದ್ದರು

Recent News


Leave a Comment: