ಜುಂಬಾ ಡ್ಯಾನ್ಸ್‌ ಮಾಡುತ್ತಲೇ ಹೃದಯಾಘಾತಕ್ಕೆ ಖ್ಯಾತ ಉದ್ಯಮಿ ಬಲಿ,ಸಾವಿನ ಕೊನೆ ಕ್ಷಣ ಸೆರೆ!

ಸುದ್ದಿಗಳು News

Posted by vidyamaana on 2024-07-23 06:33:29 | Last Updated by Vidyamaana on 2024-07-23 06:33:29

Share: | | | | |


ಜುಂಬಾ ಡ್ಯಾನ್ಸ್‌ ಮಾಡುತ್ತಲೇ ಹೃದಯಾಘಾತಕ್ಕೆ ಖ್ಯಾತ ಉದ್ಯಮಿ ಬಲಿ,ಸಾವಿನ ಕೊನೆ ಕ್ಷಣ ಸೆರೆ!

ಮುಂಬೈ :ಫಿಟ್ನೆಸ್ ಕಾಪಾಡಿಕೊಳ್ಳಲು ಹಲವರು ಜುಂಬಾ ಡ್ಯಾನ್ಸ್ ಮೊರೆ ಹೋಗುತ್ತಾರೆ. ಪ್ರತಿ ದಿನ ಜುಂಬಾ ಡ್ಯಾನ್ಸ್ ಕ್ಲಾಸ್‌ಗೆ ತೆರಳಿ ಬೆವರು ಹರಿಸುತ್ತಾರೆ. ಹೀಗೆ ಮಹಾರಾಷ್ಟ್ರದ ಉದ್ಯಮಿ ಕವಲ್ಜಿತ್ ಸಿಂಗ್ ಬಗ್ಗಾ ಫಿಟ್ನೆಸ್‌ಗಾಗಿ ಪ್ರತಿ ದಿನ ಜುಂಬಾ ಕ್ಲಾಸ್‌ಗೆ ತೆರಳಿ ಡ್ಯಾನ್ಸ್ ಮಾಡುತ್ತಾ ಬೆವರು ಹರಿಸುತ್ತಾರೆ.

ಇಂದು ಬೆಳಗ್ಗೆ ಜುಂಬಾ ಡ್ಯಾನ್ಸ್ ಮಾಡುತ್ತಿದ್ದಂತೆ ಉದ್ಯಮಿ ಕವಲ್ಜಿತ್ ಸಿಂಗ್ ಬಗ್ಗಾ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಉದ್ಯಮಿ ಬದುಕುಳಿಯಲಿಲ್ಲ.


ಛತ್ರಪತಿ ಸಂಭಾಜಿನಗರದ ನಿವಾಸಿಯಾಗಿರುವ ಅವಲ್ಜಿತ್ ಸಿಂಗ್ ಬಾಗ್ಗಾ ಪ್ರತಿದಿನ ಜುಂಬಾ ಡ್ಯಾನ್ಸ್ ಮಾಡುತ್ತಾರೆ. ಎಂದಿನಂತೆ ಇಂದೂ ಕೂಡ ಅವಲ್ಜಿತ್ ಸಿಂಗ್ ಬಾಗ್ಗಾ ಜುಂಬಾ ಡ್ಯಾನ್ಸ್‌ಗೆ ತೆರಳಿದ್ದಾರೆ. ಅವಲ್ಜಿತ್ ಸಿಂಗ್ ರೀತಿಯಲ್ಲಿ ಇತರ ಕೆಲವರು ಜುಂಬಾ ಡ್ಯಾನ್ಸ್ ಮಾಡುತ್ತಿದ್ದಾರೆ. ಜುಂಬಾ ಕ್ಲಾಸ್ ತೆರಳಿ 15 ನಿಮಿಷಗಳ ಕಾಲ ಡ್ಯಾನ್ಸ್ ಮಾಡಿದ್ದಾರೆ. ಹಲವರು ಇದೇ ಕ್ಲಾಸ್‌ನಲ್ಲಿ ಅವಲ್ಜಿತ್ ಸಿಂಗ್ ಜೊತೆ ಡ್ಯಾನ್ಸ್ ಮಾಡಿದ್ದಾರೆ.

ಕೊನೆಯ ಸಾಲಿನ ಬದಿಯಲ್ಲಿದ್ದ ಅವಲ್ಜಿತ್ ಸಿಂಗ್ ಡ್ಯಾನ್ಸ್ ಮಾಡುತ್ತಿದ್ದಂತೆ ಹೃದಯಾಘಾತವಾಗಿದೆ. ಡ್ಯಾನ್ಸ್ ಮಾಡಲು ಸಾಧ್ಯವಾಗದೆ ನಿಂತಿದ್ದಾರೆ. ಚೇತರಿಸಿಕೊಳ್ಳಲು ಕೆಲ ಕ್ಷಣ ನಿಂತಿದ್ದಾರೆ. ಇತರರು ಡ್ಯಾನ್ಸ್‌ನಲ್ಲಿ ತಲ್ಲೀನರಾಗಿದ್ದರು. ಆದರೆ ಅವಲ್ಜಿತ್ ಸಿಂಗ್ ಚೇತರಿಸಿಕೊಳ್ಳಲಿಲ್ಲ. ಕಾರಣ ತೀವ್ರ ಹೃದಯಾಘಾತದಿಂದ ಅವಲ್ಜಿತ್ ಕುಸಿದಿದ್ದಾರೆ. ಈ ವೇಳೆ ಮೆಲ್ಲನೆ ಕುಳಿತುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಅವಲ್ಜಿತ್ ಸಿಂಗ್ ಕುಸಿದು ಬೀಳುತ್ತಿದ್ದಂತೆ ಇತರರು ತಕ್ಷಣವೇ ನೆರವಿಗೆ ಧಾವಿಸಿದ್ದಾರೆ. ನೀರು ತಂದು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಯಾವುದಕ್ಕೂ ಅವಲ್ಜಿತ್ ಸಿಂಗ್ ಸ್ಪಂದಿಸಿಲ್ಲ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಅವಲ್ಜಿತ್ ಎತ್ತಿಕೊಂಡು ವಾಹನದ ಮೂಲಕ ಆಸ್ಪತ್ರೆ ದಾಖಲಿಸಿದ್ದಾರೆ. ಆಸ್ಪತ್ರೆ ದಾಖಲಿಸುವ ಮೊದಲೇ ಅವಲ್ಜಿತ್ ಸಿಂಗ್ ಬಾಗ್ಗಾ ಪ್ರಾಣ ಪಕ್ಷಿ ಹಾರಿಹೋಗಿದೆ. ತಪಾಸಣೆ ನಡೆಸಿದ ವೈದ್ಯರು ಅವಲ್ಜಿತ್ ಸಿಂಗ್ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.

ಜಿಮ್ ಅಭ್ಯಾಸದ ವೇಳೆ ಈ ರೀತಿ ಹೃದಯಾಘಾತಕ್ಕೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚಗೆ ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಬೆಳವಣಿಗೆ ನಡುವೆ ಇದೀಗ ಉದ್ಯಮಿ ಅವಲ್ಜಿತ್ ಸಿಂಗ್ ಬಾಗ್ಗಾ ನಿಧನ ಸುದ್ದಿ ಆತಂಕ ಹೆಚ್ಚಿಸಿದೆ. ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದ ಕವಲ್ಜಿತ್ ಸಿಂಗ್ ದಿಢೀರ್ ನಿಧನ ಇದೀಗ ಮತ್ತೆ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

 Share: | | | | |


ಚಿಕ್ಕಮಗಳೂರಲ್ಲಿ ಪೊಲೀಸರು-ವಕೀಲರ ಗಲಾಟೆ ಪ್ರಕರಣ; ರಸ್ತೆ ತಡೆದು 200 ಕ್ಕೂ ಹೆಚ್ಚು ಪೊಲೀಸರಿಂದ ಪ್ರತಿಭಟನೆ

Posted by Vidyamaana on 2023-12-03 04:14:07 |

Share: | | | | |


ಚಿಕ್ಕಮಗಳೂರಲ್ಲಿ ಪೊಲೀಸರು-ವಕೀಲರ ಗಲಾಟೆ ಪ್ರಕರಣ; ರಸ್ತೆ ತಡೆದು 200 ಕ್ಕೂ ಹೆಚ್ಚು ಪೊಲೀಸರಿಂದ ಪ್ರತಿಭಟನೆ

ಚಿಕ್ಕಮಗಳೂರು: ನಗರದಲ್ಲಿ ವಕೀಲರು ಮತ್ತು ಪೊಲೀಸರ ನಡುವಿನ ವಿವಾದ ತಾರಕಕ್ಕೇರುತ್ತಿದ್ದು, ಶನಿವಾರ ಆರು ಠಾಣೆಗಳ ಪೊಲೀಸ್‌ ಸಿಬ್ಬಂದಿ ಕರ್ತವ್ಯ ಸ್ಥಗಿತಗೊಳಿಸಿ ಮೌನ ಪ್ರತಿಭಟನೆ ಬಳಿಕ ರಸ್ತೆ ತಡೆ ನಡೆಸಿದರು.



ಹೆಲ್ಮೆಟ್‌ ಧರಿಸದ ವಕೀಲನ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಪಿಎಸ್‌ಐ ಸೇರಿ ಆರು ಸಿಬ್ಬಂದಿಗಳ ಅಮಾನತು ಹಿನ್ನೆಲೆಯಲ್ಲಿ ಆರು ಪೊಲೀಸ್‌ ಠಾಣೆಗಳ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ನಗರ ಪೊಲೀಸ್‌ ಠಾಣೆ ಮುಂದೆ ಜಮಾಯಿಸಿ ಅಸಮಾಧಾನ ಹೊರಹಾಕಿದರು.


ಮಂಗಳೂರಿನಿಂದ ಧಾವಿಸಿದ ಐಜಿಪಿ ಡಾ|ಚಂದ್ರಗುಪ್ತ ಅವರಿಗೂ ಮುತ್ತಿಗೆ ಹಾಕಿದರು. ಅಮಾನತುಗೊಂಡಿರುವ ಪೊಲೀಸರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಕಾರರು, ಸಾರ್ವಜನಿಕರಿಗೆ ರಕ್ಷಣೆ ನೀಡುತ್ತಿರುವ ಪೊಲೀಸರಿಗೇ ರಕ್ಷಣೆ ಇಲ್ಲದಂತಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ವಿಕ್ರಮ್‌ ಅಮಟೆ ಮುಂದೆ ಅಳಲು ತೋಡಿಕೊಂಡರು.


ಹೆಲ್ಮೆಟ್‌ ವಿಚಾರಕ್ಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಿರುವ ವಕೀಲ ಪ್ರೀತಮ್‌ ಠಾಣೆಯ ಬಳಿ ಪೊಲೀಸ್‌ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅವರ ಬೆಂಬಲಕ್ಕೆ ಬಂದ ವಕೀಲರ ಗುಂಪು ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಿದೆ. ಪೊಲೀಸರು ತಮ್ಮ ಕರ್ತವ್ಯ ಪಾಲಿಸಿದ್ದಕ್ಕೆ ಅಮಾನತು ಶಿಕ್ಷೆ ನೀಡಲಾಗಿದೆ. ಜನರಿಗೆ ರಕ್ಷಣೆ ನೀಡಲು ಸಾಧ್ಯವಾಗದ ಸ್ಥಳದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಜನರಿಗೆ ರಕ್ಷಣೆ ನೀಡುವ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ. ಠಾಣೆ ಬಳಿ ಗುಂಪು ಸೇರಿ ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಿದ ವಕೀಲರ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.ಎಸ್ಪಿ ಡಾ|ಅಮಟೆ ಪ್ರತಿಕ್ರಿಯಿಸಿ, ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದ್ದು, ನಿರಪರಾ ಧಿಗಳಿಗೆ ಕಾನೂನಿನ ರಕ್ಷಣೆ ಸಿಗಲಿದೆ ಎಂದು ಭರವಸೆ ನೀಡಿದರು. ಪೊಲೀಸರು ಕರ್ತವ್ಯಕ್ಕೆ ಮರಳಬೇಕು ಎಂದೂ ಸೂಚಿಸಿದರು. ಆದರೆ, ಇಷ್ಟಕ್ಕೆ ಸುಮ್ಮನಾಗದ ಪೊಲೀಸ್‌ ಸಿಬ್ಬಂದಿ ಮತ್ತು ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದ ನಗರ ಪೊಲೀಸ್‌ ಠಾಣೆ ಬಳಿಯಿಂದ ಹನುಮಂತಪ್ಪ ವೃತ್ತಕ್ಕೆ ತೆರಳಿ ರಸ್ತೆ ತಡೆ ನಡೆಸಿದರು. ಪೊಲೀಸ್‌ ಸಿಬ್ಬಂದಿಗಳ ಪ್ರತಿಭಟನೆ ವಿಚಾರ ಎಲ್ಲೆಡೆ ಹಬ್ಬುತ್ತಿದ್ದಂತೆ ಮತ್ತಷ್ಟು ಸಿಬ್ಬಂದಿ ಜತೆಗೂಡಿದರು.

ಇದಕ್ಕೂ ಮುನ್ನ ಬೆಳಗ್ಗೆ ಪೊಲೀಸರ ಕುಟುಂಬಸ್ಥರು ನಗರ ಪೊಲೀಸ್‌ ಠಾಣೆ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ನಡುವೆ, ವಕೀಲನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಪೊಲೀಸ್‌ ಸಿಬ್ಬಂದಿ ಗುರುಪ್ರಸಾದ್‌ ಎಂಬವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.

ಮಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಅನೀಸ್ ಮೃತ್ಯು

Posted by Vidyamaana on 2023-06-09 23:30:02 |

Share: | | | | |


ಮಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಅನೀಸ್ ಮೃತ್ಯು

ಮಂಗಳೂರು : ಉಪ್ಪಿನಂಗಡಿ ಬಳಿ ವಾರದ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಪುತ್ತೂರು Habitude ಬಟ್ಟೆ ಅಂಗಡಿ  ಮಾಲಕ ಹಮೀದ್ ನೀರಕಟ್ಟೆ ಅವರ ಸಹೋದರಿಯ ಮಗ ಅನೀಸ್ (27 ) ಚಿಕಿತ್ಸೆ ಫಲಕಾರಿಯಾಗದೆ ಇಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಜೂ 2 ರಂದು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಉಪ್ಪಿನಂಗಡಿ ಬಳಿಯ ಪಂಜಳ ಎಂಬಲ್ಲಿ  ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಬೈಕ್ ನಲ್ಲಿದ್ದ ಅನೀಸ್ ಮತ್ತು ಅವರ ಮಾವ ಹಮೀದ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ತೀವ್ರ ಗಾಯಗೊಂಡು ಕೋಮಾಗೆ ಜಾರಿದ್ದ ಅನೀಸ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಜೂ 9 ರಂದು ರಾತ್ರಿ ಅನೀಸ್ ಅಸುನೀಗಿದ್ದಾರೆ.ಮೃತರು ತಾಯಿ, ಇಬ್ಬರು ಇಬ್ಬರು ಸಹೋದರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕಾರ್ಕಳ : ದಾಯಾದಿಗಳಿಂದಲೇ ಮೃತ ವ್ಯಕ್ತಿಯ 6.5 ಕೋಟಿ ರೂ. ಮೌಲ್ಯದ ಆಸ್ತಿ, ನಗದು ಲಪಟಾಯಿಸಿ ವಂಚನೆ

Posted by Vidyamaana on 2023-02-27 03:50:02 |

Share: | | | | |


ಕಾರ್ಕಳ : ದಾಯಾದಿಗಳಿಂದಲೇ ಮೃತ ವ್ಯಕ್ತಿಯ 6.5 ಕೋಟಿ ರೂ. ಮೌಲ್ಯದ ಆಸ್ತಿ, ನಗದು ಲಪಟಾಯಿಸಿ ವಂಚನೆ

ಕಾರ್ಕಳ: ದಾಯಾದಿ ಸೋದರರಿಬ್ಬರು ಸೇರಿಕೊಂಡು ತಮ್ಮದೇ ಕುಟುಂಬದ ಮೃತಪಟ್ಟ ವ್ಯಕ್ತಿಯೊಬ್ಬರ ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಲಪಟಾಯಿಸಿದ್ದಾರೆ ಎಂದು ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ತಂದೆಯ ಮರಣದ ನಂತರ ಅವರ ಹೆಸರಲ್ಲಿದ್ದ ಕೋಟ್ಯಾಂತರ ರೂ. ಮೌಲ್ಯದ ಸ್ಥಿರಾಸ್ತಿ, ಷೇರುಗಳು ಹಾಗೂ ನಗದನ್ನು ಸೋದರ ಸಂಬಂಧಿಗಳಿಂದ ಲಪಟಾಯಿಸಿ ವಂಚನೆ ಎಸಗಿದ್ದಾರೆ ಎಂದು ಕಾರ್ಕಳದ ಪುನೀತ್ ರಾವ್ ಎಂಬವರು ನ್ಯಾಯಾಲಯದಲ್ಲಿ ದಾಖಲಿಸಿದ್ದ ಖಾಸಗಿ ದೂರಿನ ಮೇರೆಗೆ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.


ಪುನೀತ್ ರಾವ್ ಅವರ ತಂದೆ ಅಶೋಕ್ ರಾವ್ ಕಾರ್ಕಳದ ಮನೆಯಲ್ಲಿ ಒಬ್ಬರೇ ವಾಸವಿದ್ದು ಕಳೆದ 2020ರ ಜುಲೈ 13ರಂದು ಮೃತಪಟ್ಟಿದ್ದರು,ಅಶೋಕ್ ರಾವ್ ಅವರು ಕಾರ್ಕಳದ ಕಸಬಾ ಗ್ರಾಮದಲ್ಲಿ ಎಕರೆಗಟ್ಟಲೆ ಸ್ಥಿರಾಸ್ತಿ, ಬ್ಯಾಂಕ್ ಖಾತೆಯಲ್ಲಿ ದೊಡ್ಡ ಮೊತ್ತದ ಹಣ ಹಾಗೂ ವಿವಿಧ ಕಂಪೆನಿಗಳ ಕೋಟ್ಯಾಂತರ ರೂ. ಮೌಲ್ಯದ ಷೇರುಗಳನ್ನು ಹೊಂದಿದ್ದರು. ಅವರು ಮೃತಪಟ್ಟ ಮಾಹಿತಿಯನ್ನು ಆರೋಪಿ ದಿನೇಶ್. ಕೆ (51ವ) ಮತ್ತು ಅವರ ಪತ್ನಿ ಮಂಜುಳಾ ಎಂಬವರು ಪುನೀತ್ ರಾವ್ ಸಂಬAಧಿಕರಾದ ಕೃಷ್ಣರಾವ್ ಎಂಬವರಿಗೆ ಮಾಹಿತಿ ನೀಡಿದ್ದರು. ಮೃತಪಟ್ಟ ಮರುದಿನ ಅಶೋಕ್ ರಾವ್ ಹೆಸರಿನಲ್ಲಿದ್ದ ರೂ.4,24,90,548.90 ಮೌಲ್ಯದ ಷೇರುಗಳನ್ನು ಮತ್ತು ಅವರ ಹೆಸರಿನಲ್ಲಿದ್ದ ಸ್ಥಿರಾಸ್ತಿಗಳನ್ನು ಹಾಗೂ ಅವರ 2,20,76,238.81 ರೂ. ಬ್ಯಾಂಕ್ ಠೇವಣಿಗಳನ್ನು ಆರೋಪಿಗಳಾದ ಕಾರ್ಕಳ ಪೇಟೆಯ ನಿವಾಸಿ ದಿನೇಶ್ ಕೆ (51) ಮತ್ತು ಪೆರ್ವಾಜೆ ಗುದ್ದೇಲ್ ಬಾಕ್ಯಾರು ನಿವಾಸಿ ಪ್ರಸಾದ್ ಕೆ (27) ಎಂಬವರು ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವಂಚನೆ ಎಸಗಿದ್ದಾರೆ ಎಂದು ಪುನೀತ್ ರಾವ್ ದೂರಿನಲ್ಲಿ ತಿಳಿಸಿದ್ದಾರೆ.


ತಂದೆ ಅಶೋಕ್ ರಾವ್ ಅವರು ಮೃತಪಟ್ಟ ಸಂದರ್ಭದಲ್ಲಿ ನಾವೆಲ್ಲ ಅಮೆರಿಕದಲ್ಲಿ ವಾಸವಿದ್ದು, ಆ ಸಂದರ್ಭದಲ್ಲಿ ಕೋವಿಡ್ ಲಾಕ್ ಡೌನ್ ಇದ್ದ ಕಾರಣದಿಂದ ತಾಯಿ ಮತ್ತು ಸಹೋದರಿಗೆ ಊರಿಗೆ ಬರಲು ಸಾಧ್ಯವಾಗಿರಲಿಲ್ಲ.ಅಶೋಕ ರಾವ್ ಅವರು ಜೀವಂತವಾಗಿರುವಾಗ ತನ್ನ ಆಸ್ತಿ ಹಂಚಿಕೆ ಕುರಿತು ಯಾವುದೇ ಉಯಿಲು ಅಥವಾ ಬೇರೆ ಯಾವುದೇ ದಾಖಲೆ ಬರೆದಿರಲಿಲ್ಲ ಎಂದು ಅವರ ಪುತ್ರ ಪುನಿತ್ ರಾವ್ ಅವರು ದೂರಿನಲ್ಲಿ ತಿಳಿಸಿದ್ದು, ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ದಿನೇಶ್.ಕೆ ಹಾಗೂ ಪ್ರಸಾದ್ ಎಂಬವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

ಆ. 11 ಪುತ್ತೂರಿನಲ್ಲಿ ಗೃಹಜ್ಯೋತಿ ಗ್ಯಾರಂಟಿ ಯೋಜನೆಯ ಅಧಿಕೃತ ಚಾಲನೆ :ಅಶೋಕ್ ಕುಮಾರ್ ರೈ

Posted by Vidyamaana on 2023-08-07 12:01:29 |

Share: | | | | |


ಆ. 11 ಪುತ್ತೂರಿನಲ್ಲಿ ಗೃಹಜ್ಯೋತಿ ಗ್ಯಾರಂಟಿ ಯೋಜನೆಯ ಅಧಿಕೃತ ಚಾಲನೆ :ಅಶೋಕ್ ಕುಮಾರ್ ರೈ

ಪುತ್ತೂರು: ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಉಚಿತ ಗೃಹಜ್ಯೋತಿ ಯೋಜನೆಯ ಅಧಿಕೃತ ಚಾಲನಾ ಕಾರ್ಯಕ್ರಮ ಆ.11 ರಂದು ಪುತ್ತೂರಿನಲ್ಲಿ ನಡೆಯಲಿದೆ.

ಪುತ್ತೂರಿನ ಪುರಭವನದಲ್ಲಿ ನಡೆಯುವ ಕಾರ್ಯಕ್ರಮವನ್ಬು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಚಾಲನೆ ನೀಡಲಿದ್ದಾರಡ. ಪುತ್ತೂರು ಶಾಸಕರಾದ ಅಶೋಕ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದ್ದು ಈ ಕುರಿತ ಪೂರ್ವಭಾವಿ ಸಭೆಯು ಶಾಸಕರ ನೇತೃತ್ವದಲ್ಲಿ ನಡೆಯಿತು.ರಾಜೇಶ್ ಪುತ್ತೂರು ನಗರ ಸಹಾಯಕ ಇಂಜಿನಿಯರ್ ರಾ ಮಚಂದ್ರ ಕಾರ್ಯನಿರ್ವಾಹಕ ಇಂಜಿನಿಯರ್

ರಾಮಚಂದ್ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್

ಪುತ್ತೂರು ಬ್ಲಾಕ್ ಅಧ್ಯಕ್ಷ ರಾದ   ಎಂ ಬಿ ವಿಶ್ವನಾಥ ರೈ,ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಮ್ ಕೆ ಬಿ, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್ ಉಪಸ್ಥಿತರಿದ್ದರು.

ಗಂಡನ ಸ್ನೇಹಿತನಿಂದಲೇ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ

Posted by Vidyamaana on 2023-12-16 06:58:40 |

Share: | | | | |


ಗಂಡನ ಸ್ನೇಹಿತನಿಂದಲೇ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ

ಬಂಟ್ವಾಳ: ಮೂರು ಮಕ್ಕಳ ತಾಯಿಯನ್ನು ಆಕೆಯ ಗಂಡನ ಸ್ನೇಹಿತನೇ ಮದುವೆಯಾಗುವುದಾಗಿ ನಂಬಿಸಿ, ನಿರಂತರವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ಕೊನೆಗೆ ಹಲ್ಲೆಗೈದು ಕೊಲ್ಲುವ ಬೆದರಿಕೆ ಹಾಕಿದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಬಂಟ್ವಾಳ ತಾಲೂಕಿನ ಲೊರೆಟ್ಟೊ ಪದವು ನಿವಾಸಿಯೊಬ್ಬರ ಪತ್ನಿಯಾಗಿದ್ದ ಸಂತ್ರಸ್ತ ಮಹಿಳೆ ತಾನು ಮೋಸ ಹೋದ ಬಗ್ಗೆ ಪೊಲೀಸ್ ದೂರು ನೀಡಿದ್ದಾಳೆ. ನರಿಕೊಂಬು ನಿವಾಸಿ ತಸ್ಲೀಂ ಆರೀಫ್ ಆರೋಪಿಯಾಗಿದ್ದು ನಿರಂತರ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ ಹಾಕಿದ್ದಾನೆಂದು ದೂರು ದಾಖಲಾಗಿದೆ. 


ತಸ್ಲೀಂ ಆರೀಫ್ ಗಂಡನ ಸ್ನೇಹಿತನಾಗಿದ್ದು ಆತನ ಜೊತೆ ಮನೆಗೆ ಬರುತ್ತಿದ್ದು, ಸಲುಗೆ ಉಂಟಾಗಿ ಮೊಬೈಲ್ ನಂಬ್ರ ಪಡೆದು, ಗಂಡ ಕೆಲಸಕ್ಕೆ ಹೋದ ಸಮಯ ಮನೆಗೆ ಬರುತ್ತಿದ್ದ. ಸಲುಗೆ ಬರಬರುತ್ತಾ ದೈಹಿಕ ಸಂಪರ್ಕಕ್ಕೆ ಬಂದಾಗ ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ್ದ. ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ. ಕೊನೆಗೆ ಅಕ್ರಮ ಸಂಬಂಧ ಗಂಡನಿಗೆ ತಿಳಿದು ಅವಳಿಂದ ದೂರ ಇದ್ದ.  


ಬಳಿಕ ಆರೋಪಿಯೊಂದಿಗೆ ಸಂತ್ರಸ್ತ ಮಹಿಳೆ ಬಾಡಿಗೆ ಮನೆಯಲ್ಲಿ ವಾಸವಿದ್ಧಳು. ಮೂರು ತಿಂಗಳಿನಿಂದ ಮಹಿಳೆಯನ್ನು ಪಾಣೆಮಂಗಳೂರು ಗ್ರಾಮದ ಜೈನರ ಪೇಟೆಯಲ್ಲಿ ಬಾಡಿಗೆ ಮನೆ ಮಾಡಿ ಕೂರಿಸಿದ್ದ. ಇದೀಗ ಆರೋಪಿ ತಸ್ಲೀಂ ಕುಲ್ಲಕ ಕಾರಣಕ್ಕೆ ಸಂತ್ರಸ್ತೆಯ ಮುಖಕ್ಕೆ, ಬಾಯಿಗೆ ಕೈಯಿಂದ ಹೊಡೆದು ಸೊಂಟಕ್ಕೆ ಒದ್ದಿರುವುದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಮತ್ತು ಮಕ್ಕಳನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಆಕರ್ಷಣ್ ನ ಆಕರ್ಷಕ ಕೊಡುಗೆ

Posted by Vidyamaana on 2023-10-21 15:47:39 |

Share: | | | | |


ಆಕರ್ಷಣ್ ನ ಆಕರ್ಷಕ ಕೊಡುಗೆ

ಪುತ್ತೂರು: ಕಾಂಕ್ರೀಟ್ ಉತ್ಪನ್ನಗಳ ಕ್ಷೇತ್ರದಲ್ಲಿ ಹೊಸ ಛಾಪು ಮೂಡಿಸಿರುವ ಆಕರ್ಷಣ್ ಇಂಡಸ್ಟ್ರೀಸ್ ತನ್ನ 28ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ಆಫರ್’ಗಳನ್ನು ಹೊರಬಿಟ್ಟಿದೆ.

ಈ ಆಫರ್’ಗಳು ಅಕ್ಟೋಬರ್ 21ರಿಂದ ಆರಂಭಗೊಂಡಿದ್ದು, 25ರವರೆಗೆ ಮಾತ್ರ ಲಭ್ಯವಿರಲಿದೆ. ಈ ಐದು ದಿನಗಳಲ್ಲಿ ಗ್ರಾಹಕರು ಸಂಸ್ಥೆಗೆ ಭೇಟಿ ನೀಡಿ, ಉತ್ಪನ್ನಗಳನ್ನು ಖರೀದಿಸಿದಲ್ಲಿ ವಿಶೇಷ ಕೊಡುಗೆಗಳನ್ನು ನೀಡಲು ಆಕರ್ಷಣ್ ಇಂಡಸ್ಟ್ರೀಸ್ ಮುಂದಾಗಿದೆ.

ಸ್ಪರ್ಧಾತ್ಮಕ ದರದಲ್ಲಿ ಉತ್ಪನ್ನಗಳನ್ನು ನೀಡುವುದು ಮಾತ್ರವಲ್ಲ, ಇದರೊಂದಿಗೆ ಡೆಲಿವರಿಯನ್ನು ಉಚಿತವಾಗಿ ನೀಡಲಾಗುವುದು. ಡ್ರ್ಯಾಗನ್ ಫ್ರುಟ್ ಕೃಷಿಗೆಂದೇ ಸಿದ್ಧಪಡಿಸಿದ ಸ್ಟ್ಯಾಂಡ್’ಗೆ ಉಚಿತ ಡೆಲಿವರಿ, ಜನರ ಅಗತ್ಯಕ್ಕೆ ತಕ್ಕಂತೆ ವಿವಿಧ ವಿನ್ಯಾಸದಲ್ಲಿ ಲಭ್ಯವಿರುವ ಹಾಗೂ ಎರಡೇ ದಿನದಲ್ಲಿ ನಿರ್ಮಿಸಬಹುದಾದ ಸದೃಢ, ಸುಂದರ ರೆಡಿವಾಲ್ ಅಥವಾ ಕಾಂಪೌಂಡ್ ವಾಲ್, ಬೇಲಿ ಕಂಬಗಳ ಖರೀದಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Recent News


Leave a Comment: