ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ಸೇವಾ ಸೌರಭಕ್ಕೆ ದಿನಗಣನೆ - 37 ಗ್ರಾಮಗಳಲ್ಲಿ 50 ಸಾವಿರಕ್ಕೂ ಅಧಿಕ ಜನರಿಗೆ ಆಮಂತ್ರಣ: ಸುಮಾ ಅಶೋಕ್ ರೈ

Posted by Vidyamaana on 2023-11-11 16:03:17 |

Share: | | | | |


ಸೇವಾ ಸೌರಭಕ್ಕೆ ದಿನಗಣನೆ - 37 ಗ್ರಾಮಗಳಲ್ಲಿ 50 ಸಾವಿರಕ್ಕೂ ಅಧಿಕ ಜನರಿಗೆ ಆಮಂತ್ರಣ: ಸುಮಾ ಅಶೋಕ್ ರೈ

ಪುತ್ತೂರು: ನ. ೧೩ ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಪುತ್ತೂರು ಶಾಸಕರಾದ ಅಶೋಕ್ ರೈ ನೇತೃತ್ವದ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ನಡೆಯಲಿರುವ ೧೧ ನೇ ವರ್ಷ ವಸ್ತ್ರದಾನ ಹಾಗೂ ಸಹಭೋಜನಾ ಕಾರ್ಯಕ್ರಮಕ್ಕೆ ಒಟ್ಟು ೩೭ ಗ್ರಾಮಗಳಲ್ಲಿ ೫೦ ಸಾವಿರಕ್ಕೂ ಮಿಕ್ಕಿ ಮಂದಿಯನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂದು ಟ್ರಸ್ಟಿನ ಮುಖ್ಯಸ್ಥೆ ಸುಮಾ ಅಶೋಕ್ ರೈ ತಿಳಿಸಿದರು.


ಬನ್ನೂರು, ಚಿಕ್ಕಮುಡ್ನೂರು, ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಉಪ್ಪಿನಂಗಡಿ, ಬಜತ್ತೂರು, ವಿಟ್ಲಮುಡ್ನೂರು, ಮಾನಿಲ, ಅಳಿಕೆ, ಪೆರುವಾಯಿ, ಪುಣಚ, ಕೇಪು, ವಿಟ್ಲ, ಕುಳ, ಕೊಡಿಪ್ಪಾಡಿ, ಕಬಕ, ಪುತ್ತೂರು ನಗರ, ಕೆಮ್ಮಿಂಜೆ, ಮುಂಡೂರು, ಶಾಂತಿಗೋಡು, ನರಿಮೊಗರು, ಕೆದಂಬಾಡಿ, ಕೆಯ್ಯೂರು, ಕೊಳ್ತಿಗೆ, ಮಾಡ್ನೂರು, ಕುರಿಯ, ಬಡಗನ್ನೂರು, ಪಡುವನ್ನೂರು, ಬೆಟ್ಟಂಪಾಡಿ, ನಿಡ್ಪಳ್ಳಿ, ಪಾಣಾಜೆ, ನೆಟ್ಟಣಿಗೆಮುಡ್ನೂರು, ಆರ್ಯಾಪು ಮತ್ತು ಒಳಮೊಗ್ರು ಗ್ರಾಮಗಳ ವಿವಿಧ ಕಡೆಗಳಲ್ಲಿ ಸಭೆಗಳನ್ನು ನಡೆಸಿ ಜನರನ್ನು ಆಹ್ವಾನಿಸಲಾಗಿದೆ. ಇದಲ್ಲದೆ ತಾಲೂಕಿನ ವಿವಿಧ ಜನತಾ ಕಾಲೊನಿಗಳು, ಪರಿಶಿಷ್ಟ ಜಾತಿ, ಪಂಗಡದ ಕಾಲನಿಗಳು ಸೇರಿದಂತೆ ಎಲ್ಲಾ ಕಾಲನಿಗಳಲ್ಲಿಯೂ ಸಭೆ ನಡೆಸಿ ಆಮಂತ್ರಣ ಪತ್ರವನ್ನು ನೀಡಲಾಗಿದೆ. ಎಲ್ಲಾ ಸಭೆಗಳಲ್ಲಿಯೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮಗೆ ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ ಎಂದು ಸುಮಾ ಅಶೋಕ್ ರೈ ಹೇಳಿದರು.

ನಾವು ಕಳೆದ ಹತ್ತು ದಿನಗಳಿಂದ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಸಭೆ ನಡೆಸಿ ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ರಾಜಕೀಯ ರಹಿತವಾಗಿ ಕಳೆದ ೧೦ ವರ್ಷಗಳಿಂದ ದೀಪಾವಳಿಯಂದು ವಸ್ತ್ರ ವಿತರಣೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಟ್ರಸ್ಟ್‌ನ ಸದಸ್ಯರಿಗೆ ಅಂಚೆ ಮೂಲಕ ಆಮಂತ್ರಣ ಪತ್ರ ಕಳುಹಿಸಿದ್ದೇವೆ. ಗ್ರಾಮೀಣ ಭಾಗಗಳಲ್ಲಿ ನಮಗೆ ಸಂಪೂರ್ಣ ಬೆಂಬಲದೊರಕಿದೆ. ಶಾಸಕ ಅಶೋಕ್ ರೈಯವರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ನಮ್ಮಲ್ಲಿ ಉತ್ತಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಕುಟುಂಬ ಸಮೇತ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮನ್ನು ಆಶೀರ್ವಸಿಸಬೇಕು.

ಇದು ನಿಮ್ಮದೇ ಕಾರ್ಯಕ್ರಮ: ಅಶೋಕ್ ರೈ

ಟ್ರಸ್ಟ್ ಮೂಲಕ ನಡೆಯುವ ವಸ್ತ್ರದಾನ ಹಾಗೂ ಸಹಭೋಜನ ಕಾರ್ಯಕ್ರಮ ನಿಮ್ಮದೇ ಕಾರ್ಯಕ್ರಮವಾಗಿದೆ. ರಾಜಕೀಯ, ಧರ್ಮ, ಜಾತಿ ಬೇದವಿಲ್ಲದೆ ಎಲ್ಲರೂ ಭಾಗವಹಿಸುವ ಮೂಲಕ ನಮಗೆ ಹರಸಬೇಕು. ನಾನು ಟ್ರಸ್ಟ್‌ನ ಅಧ್ಯಕ್ಷನಾಗಿ, ಶಾಸಕನಾಗಿ ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ, ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡುತ್ತಿದ್ದೇನೆ.

ಗ್ರಾಮ ಗ್ರಾಮಗಳಿಗೆ ತೆರಳಿ ಆಹ್ವಾನ ನೀಡಲಾಗಿದೆ: ಸುದೇಶ್ ಆರ್ ಶೆಟ್ಟಿ

ಹತ್ತು ದಿನಗಳಿಂದ ನಾವು ತಂಡವಾಗಿ ಗ್ರಾಮಗಳಿಗೆ ತೆರಳಿ ಟ್ರಸ್ಟ್‌ನ ವಸ್ತ್ರದಾನ ಹಾಗೂ ಸಹಭೋಜನಾ ಕಾರ್ಯಕ್ರಮಕ್ಕೆ ಜನತೆಯನ್ನು ಆಹ್ವಾನಿಸಿದ್ದೇವೆ. ಶಾಸಕರ ಮೇಲೆ ಪ್ರೀತಿ ಇಟ್ಟು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮಗೆ ಇನ್ನಷ್ಟು ಉತ್ತೇಜನವನ್ನು ನೀಡುವ ಮೂಲಕ ಆಶೀರ್ವದಿಸಬೇಕು.

ಸುದೇಶ್ ಶೆಟ್ಟಿ, ಟ್ರಸ್ಟ್ ಕಾರ್ಯಾಧ್ಯಕ್ಷರು.

ಬೆಂಗಳೂರಿನಿಂದ ಬಳ್ಳಾರಿಗೆ ಅಜ್ಜಿ ಶವ ಕೊಂಡೊಯ್ಯುತ್ತಿದ್ದ ಕಾರು ಪಲ್ಟಿ: ಮೂವರು ಮೊಮ್ಮಕ್ಕಳ ಸಾವು

Posted by Vidyamaana on 2024-01-20 07:18:43 |

Share: | | | | |


ಬೆಂಗಳೂರಿನಿಂದ ಬಳ್ಳಾರಿಗೆ ಅಜ್ಜಿ ಶವ ಕೊಂಡೊಯ್ಯುತ್ತಿದ್ದ ಕಾರು ಪಲ್ಟಿ: ಮೂವರು ಮೊಮ್ಮಕ್ಕಳ ಸಾವು

ಚಿತ್ರದುರ್ಗ : ಅಜ್ಜಿಗೆ ಅನಾರೋಗ್ಯವೆಂದು ಚಿಕಿತ್ಸೆ ಕೊಡಿಸುವುದಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೇ ಅಜ್ಜಿ ಸಾವನ್ನಪ್ಪಿದ್ದಾರೆ. ಇನ್ನು ಮೃತ ದೇಹವನ್ನು ಕಾರಿನಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಕೊಂಡೊಯ್ಯುವಾಗ ಚಿತ್ರದುರ್ಗದ ಬಳಿ ಕಾರಿನ ಟೈರ್ ಬ್ಲ್ಯಾಸ್ಟ್‌ ಆಗಿದ್ದು, ವೇಗದಲ್ಲಿದ್ದ ಕಾರು ಪಲ್ಟಿಯಾಗಿ ಅಜ್ಜಿಯ ಮೂವರು ಮೊಮ್ಮಕ್ಕಳು ಕೂಡ ಹೆದ್ದಾರಿಯಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ.ಅಜ್ಜಿಯ ಶವ ಕೊಂಡೊಯ್ಯುವಾಗ ಟೈಯರ್ ಬ್ಲಾಸ್ಟ್ ಕಾರು ಪಲ್ಟಿ, 3 ಮಂದಿ ಸ್ಥಳದಲ್ಲೇ ದುರ್ಮರಣಕ್ಕೀಡಾಗದ ಘಟನೆ ಚಿತ್ರದುರ್ಗದ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಬಳಿ ನಡೆದಿದೆ. ರಾಂಪುರ ಬಳಿಯ ಗ್ರ್ಯಾಂಡ್ ಪೋರ್ಡ್ ಹೋಟೆಲ್ ಬಳಿ ಮಧ್ಯಾಹ್ನದ ವೇಳೆ ಘಟನೆ ನಡೆದಿದೆ. ಮೃತರೆಲ್ಲರೂ ಬಳ್ಳಾರಿಯ ಸಿರುಗುಪ್ಪ ಮೂಲದವರು ಎಂದು ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನಿಂದ ಅಜ್ಜಿಯ ಶವ ಸಿರುಗುಪ್ಪಗೆ ಕೊಂಡೊಯ್ಯುತ್ತಿದ್ದರು. ಅಜ್ಜಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.ಇನ್ನು ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದರೆ, ಉಳಿದ 3 ಮಂದಿಯ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸ್ಥಳೀಯ ರಾಂಪುರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು, ಸ್ಥಳಕ್ಕೆ ಪಿಎಸ್‌ಐ ಪರಶುರಾಮ್ ಲಮಾಣಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಮೃತ ದೇಹಗಳನ್ನು ಕೂಡ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರಿನ ಟೈರ್ ಬ್ಲಾಸ್ಟ್‌ ಆಗಿದ್ದೇ ಕಾರು ಅಪಘಾತಕ್ಕೆ ಕಾರಣವೆಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.ಮೃತರೆಲ್ಲರೂ‌ ಸಿರುಗುಪ್ಪ ಮೂಲದವರಾಗಿದ್ದಾರೆ. ಸುರೇಶ್ (40) , ಮಲ್ಲಿ (25), ಭೂಮಿಕ (9) ಮೃತ ದುರ್ದೈವಿಗಳು. ಇನ್ನು ನಾಗಮ್ಮ (31), ತಾಯಮ್ಮ (56), ಧನರಾಜ್ (39) ಹಾಗೂ ಚಾಲಕ ಶಿವು (26) ಗಂಭೀರ ಗಾಯಾಳುಗಳು ಎಂದು ಗುರುತಿಸಲಾಗಿದೆ. ರಸ್ತೆಯಲ್ಲಿ ಮೃತ ದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದವು. ಇನ್ನು ಅಪಘಾತವಾದ ಸ್ಥಳದಲ್ಲಿ ಸಮಾರು 2 ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್: ಡಿಸಿಎಂ ಡಿಕೆ ಶಿವಕುಮಾರ ಹೇಳಿದ್ದೇನು?

Posted by Vidyamaana on 2024-06-14 15:34:19 |

Share: | | | | |


ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್: ಡಿಸಿಎಂ ಡಿಕೆ ಶಿವಕುಮಾರ ಹೇಳಿದ್ದೇನು?

ಬೆಂಗಳೂರು :ಬಿಎಸ್‌ ಯಡಿಯೂರಪ್ಪ ವಿರುದ್ಧ ಅರೆಸ್ಟ್ ವಾರೆಂಟ್ ವಿಚಾರ ಸಂಬಂಧ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವಾಗ? ನನಗೆ ಗೊತ್ತಿಲ್ಲ? ನಾನು ಮೀಟಿಂಗ್‌ನಲ್ಲಿದ್ದೇನೆ ನೀವು ಹೇಳಿದ್ಮೇಲೆ ಗೊತ್ತಾಗಿದ್ದು. ನನಗೆ ಈ ವಿಚಾರದಲ್ಲಿ ತಿಳಿವಳಿಕೆ ಇಲ್ಲ ಎಂದು ಪ್ರತಿಕ್ರಿಯಿಸಲು ನಿರಾಕರಿಸಿದರು

ಗಮನಿಸಿ : ಜುಲೈ 1 ರಿಂದ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಹೊಸ ನಿಯಮ ಜಾರಿ

Posted by Vidyamaana on 2024-06-22 08:29:59 |

Share: | | | | |


ಗಮನಿಸಿ : ಜುಲೈ 1 ರಿಂದ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಹೊಸ ನಿಯಮ ಜಾರಿ

ನವದೆಹಲಿ : ಜೂನ್ 30 ರ ನಂತರ, ಕೆಲವು ಪ್ಲಾಟ್ಫಾರ್ಮ್ಗಳ ಮೂಲಕ ಕ್ರೆಡಿಟ್ ಕಾರ್ಡ್ ಬಿಲ್ಗಳನ್ನು ಪಾವತಿಸುವುದು ಕಷ್ಟವಾಗಬಹುದು. ಫೋನ್ಪೇ, ಕ್ರೆಡ್, ಬಿಲ್ಡೆಸ್ಕ್ ಮತ್ತು ಇನ್ಫಿಬೀಮ್ ಅವೆನ್ಯೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ನಿಯಮಗಳಿಂದ ಪ್ರಭಾವಿತವಾಗಬಹುದಾದ ಕೆಲವು ಪ್ರಮುಖ ಫಿನ್ಟೆಕ್ ಗಳಾಗಿವೆ.ಫೋನ್ ಪೇ, ಕ್ರೆಡ್, ಬಿಲ್ ಡೆಸ್ಕ್ ಪ್ಲಾಟ್ ಫಾರ್ಮ್ ಗಳ ಮೂಲಕ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳ ಮೇಲೆ ಪರಿಣಾಮ ಬೀರುತ್ತದೆ. ಜೂನ್ 30 ರ ನಂತರದ ಎಲ್ಲಾ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಭಾರತ್ ಬಿಲ್ ಪಾವತಿ ವ್ಯವಸ್ಥೆ (ಬಿಬಿಪಿಎಸ್) ಮೂಲಕ ಪ್ರಕ್ರಿಯೆಗೊಳಿಸಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಈ ಹಿಂದೆ ನಿರ್ದೇಶನ ನೀಡಿತ್ತು.

ಬೆಳ್ತಂಗಡಿ: ಚಾರ್ಮಾಡಿ ಘಾಟ್‌ನಲ್ಲಿ ಆಳದ ಕಂದಕಕ್ಕೆ ಉರುಳಿದ ಕಾರು

Posted by Vidyamaana on 2023-04-10 05:39:52 |

Share: | | | | |


ಬೆಳ್ತಂಗಡಿ: ಚಾರ್ಮಾಡಿ ಘಾಟ್‌ನಲ್ಲಿ ಆಳದ ಕಂದಕಕ್ಕೆ ಉರುಳಿದ ಕಾರು

ಬೆಳ್ತಂಗಡಿ: ಕೊಟ್ಟಿಗೆಹಾರದಿಂದ ಉಜಿರೆ ಕಡೆ ಪ್ರಯಾಣಿಸುತ್ತಿದ್ದ ಕಾರೊಂದು ಚಾರ್ಮಾಡಿ ಘಾಟಿಯ ಎರಡನೇ ತಿರುವಿನ ಬಳಿ ಕಂದಕಕ್ಕೆ ಉರುಳಿ ಗಾಯಗೊಂಡಿದ್ದ ಗಾಯಾಳುಗಳ ಪೈಕಿ ಸರೋಜಿನಿ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಉಜಿರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿ ಹಾಗೂ ಕುಟುಂಬಸ್ಥರು ಶೃಂಗೇರಿಯ ಕೊಪ್ಪ ಎಂಬಲ್ಲಿ ಮರಣದ ಕಾರ್ಯಕ್ರಮಕ್ಕೆ ಹೋಗಿ ಮರಳುತ್ತಿದ್ದ ವೇಳೆ ರವಿವಾರ ರಾತ್ರಿ ಈ ಅವಘಡ ನಡೆದಿತ್ತು.ಕಾರಿನಲ್ಲಿ ಪ್ರಯಣಿಸುತ್ತಿದ್ದ ಪುಷ್ಪಾವತಿ ಆರ್.ಶೆಟ್ಟಿ, ಪುತ್ರಿ ಪೂರ್ಣಿಮಾ ಶೆಟ್ಟಿ, ಮೊಮ್ಮಗ ಸಮೃದ್, ಸಾಕ್ಷಿ, ಸಂಬಂಧಿಕ ಮಹಿಳೆ ಸರೋಜಿನಿ ಶೆಟ್ಟಿ ಹಾಗೂ ಕಾರು ಚಾಲಕರಾಗಿದ್ದ ಅರುಣ್ ಗಾಯಗೊಂಡಿದ್ದರು. ಎಲ್ಲಾ ಗಾಯಾಳುಗಳನ್ನು ತಕ್ಷಣವೇ ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆ, ಉಜಿರೆಯ ಎಸ್‌ಡಿಎಂ ಆಸ್ಪತ್ರೆ ಮತ್ತು ಬೆನಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಈ ಪೈಕಿ ಸರೋಜಿನಿ ಶೆಟ್ಟಿ ಮತ್ತು ಪೂರ್ಣಿಮಾ ಶೆಟ್ಟಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಳಿದವರು ಉಜಿರೆ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದಾರೆ.

ಪುಟ್ಟರಾಜುಗೆ ನೋಡಿದ ಹುಡ್ಗೀನಾ ಎಚ್‌ಡಿಕೆ ಮದುವೆಯಾಗೋದು ಸರಿನಾ?: ಸಚಿವ ಎನ್.ಚಲುವರಾಯಸ್ವಾಮಿ

Posted by Vidyamaana on 2024-03-27 08:22:35 |

Share: | | | | |


ಪುಟ್ಟರಾಜುಗೆ ನೋಡಿದ ಹುಡ್ಗೀನಾ ಎಚ್‌ಡಿಕೆ ಮದುವೆಯಾಗೋದು ಸರಿನಾ?: ಸಚಿವ ಎನ್.ಚಲುವರಾಯಸ್ವಾಮಿ

ಮಂಡ್ಯ (ಮಾ.27): ನಮ್ಮ ಮಂಡ್ಯ ಜಿಲ್ಲೆಗೆ ಕೆಟ್ಟ ದೃಷ್ಟಿ ಬೀಳುವುದು ಬೇಡ. ನಾವು ನಮ್ಮ ಜಿಲ್ಲೆಯನ್ನು ಹೇಗೋ ಅಭಿವೃದ್ಧಿ ಮಾಡಿಕೊಳ್ಳುತ್ತೇವೆ. ಆದರೆ, ನೀವು ಮಾತ್ರ ನಮ್ಮ ಜಿಲ್ಲೆಗೆ ಬರಬೇಡಿ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಮಂಡ್ಯದಿಂದ ಕಣಕ್ಕಿಳಿಯುವ ಮಾಜಿ ಸಿಎಂ ಕುಮಾರಸ್ವಾಮಿ ಕುರಿತು ಮನವಿ ಮಾಡಿದರು.ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ನಡೆದ ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನೀವು ಇನ್ನೊಮ್ಮೆ ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾದರೂ ನಮಗೆ ಸಂತೋಷ. ನಿಮ್ಮ ಬಗ್ಗೆ ನಾವು ಕೆಟ್ಟದಾಗಿ ಮಾತನಾಡುವುದಿಲ್ಲ. ಜಿಲ್ಲೆಯ ಕಡೆ ಮಾತ್ರ ನಿಮ್ಮ ದೃಷ್ಟಿ ಬೀಳದಿರಲಿ ಎಂದರು.


ಕುಮಾರಸ್ವಾಮಿ ನನಗೆ ಯಾವತ್ತೂ ವೈರಿಯಲ್ಲ. ಅವರು ನನ್ನನ್ನು ವೈರಿ ಅಂತ ಕರೆದಿದ್ದಾರೆ. ಅವರು ನನಗೆ ಸ್ನೇಹಿತರು. ಬುಟ್ಟಿಯೊಳಗೆ ಕರಿ ನಾಗರಹಾವು ಇದೆ, ಬಿಳಿ ನಾಗರಹಾವಿದೆ. ನಾಳೆ ಬಿಡ್ತೀವಿ, ನಾಡಿದ್ದು ಬಿಡ್ತೀವಿ ಎಂದು ಹೇಳುತ್ತಲೇ ಇದ್ದಾರೆ. ಇವರನ್ನು ನಂಬಿಕೊಂಡು ಪುಟ್ಟರಾಜು ಸಭೆ ಮಾಡಿದರು. ಧರ್ಮಸ್ಥಳ, ಚುಂಚನಗಿರಿ, ಅಯೋಧ್ಯೆಗೆಲ್ಲಾ ಹೋಗಿ ಬಂದರು. ಎಸ್.ಎಂ.ಕೃಷ್ಣ ಅವರ ಮನೆಗೂ ಹೋಗಿ ಬಂದರು. ಈಗ ಯಾಕೋ ಆಗ್ತಾ ಇಲ್ಲ ಕಣಯ್ಯ. ನೀನು ನೋಡಿದ ಹುಡುಗಿ ಸ್ವಲ್ಪ ಚೆನ್ನಾಗಿದ್ದಾಳೆ. ಹಾಗಾಗಿ ನಾನೇ ಮದುವೆಯಾಗಬೇಕು ಅಂತ ಬಯಸಿದ್ದೇನೆ.ನಿನಗೆ ಮುಂದೆ ಒಳ್ಳೆಯ ಹುಡುಗಿ ನೋಡೋಣ ಅಂದಿದ್ದಾರಂತೆ. ಮಗನ ಮದುವೆ ಮಾಡೋಕೆ ಹೋಗೆ ಅಪ್ಪನೇ ಮದುವೆಯಾದ ಎಂಬಂತಾಗಿದೆ ಎಂದು ಕುಹಕವಾಡಿದರು. ಈಗ ಪುಟ್ಟರಾಜು ಕತೆ ಏನಾಗಬೇಕು. ನಾನು ಹೇಗೋ ಕಾಂಗ್ರೆಸ್ ಸೇರಿ ಬಚಾವಾದೆ. ಆದರೆ, ಪುಟ್ಟರಾಜು ಕತೆ ಮುಗಿತು. ಅವರೂ ನಮ್ಮ ಸ್ನೇಹಿತರೇ. ಅವರೂ ಕೂಡ ಜೆಡಿಎಸ್‌ನೊಳಗೆ ಸಂತೋಷದಿಂದ ಏನೂ ಇಲ್ಲ ಎಂದರು. ಕಳೆದ ಚುನಾವಣಾ ಸಮಯದಲ್ಲಿ ಸುಮಲತಾ ಅವರನ್ನು ಸಾಕಷ್ಟು ಹೀಯಾಳಿಸಿದರು. ಇವತ್ತು ನಮ್ಮ ಅಕ್ಕ ಅಂತಾರೆ. ಅವತ್ತೇ ಅಕ್ಕ ಅಂದಿದ್ದರೆ ಅಂಬರೀಶ್ ಅಣ್ಣನವರ ಆತ್ಮಕ್ಕೆ ಶಾಂತಿ ಸಿಗುತ್ತಿತ್ತು.ನಮ್ಮ ಅಕ್ಕ ಚುನಾವಣೆಗೆ ನಿಂತಿದ್ದಾರೆ. ಅವರು ಗೆದ್ದರೂ ಒಂದೇ, ನಮ್ಮ ಅಣ್ಣ ಗೆದ್ದರೂ ಒಂದೇ ಎಂದಿದ್ದರೂ ಆಗುತ್ತಿತ್ತು. ಈಗ ಅವರ ಓಲೈಕೆ ಮಾಡಿಕೊಳ್ಳೋಕೆ ಅಕ್ಕ ಅಂತಿದ್ದಾರೆ ಎಂದು ದೂಷಿಸಿದರು. ಸಭೆಯಲ್ಲಿ ಅಭ್ಯರ್ಥಿ ಸ್ಟಾರ್‌ ಚಂದ್ರು, ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ, ದಿನೇಶ್ ಗೂಳಿಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಡಿ.ಗಂಗಾಧರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಚಿದಂಬರಂ, ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Recent News


Leave a Comment: