ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಉತ್ತರ ಪ್ರದೇಶ: ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌, ಸಹೋದರನ ಗುಂಡಿಕ್ಕಿ ಹತ್ಯೆ

Posted by Vidyamaana on 2023-04-16 02:53:05 |

Share: | | | | |


ಉತ್ತರ ಪ್ರದೇಶ: ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌, ಸಹೋದರನ ಗುಂಡಿಕ್ಕಿ ಹತ್ಯೆ

ಪ್ರಯಾಗ್‌ರಾಜ್: ಉತ್ತರಪ್ರದೇಶದ ಮಾಜಿ ಸಂಸದ, ಗ್ಯಾಂಗ್ ಸ್ಟರ್ ಅತೀಕ್‌ ಅಹ್ಮದ್‌ ಹಾಗೂ ಅವರ ಸಹೋದರ ಅಶ್ರಫ್‌ ಅಹ್ಮದ್‌ ರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. 

ಉತ್ತರ ಪ್ರದೇಶದ ಪ್ರಯಾಗರಾಜ್ ನಗರದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದಾಗ ಅತೀಕ್‌ ಸಹೋದರರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.  

ಫುಲ್ಪುರ್ ಕ್ಷೇತ್ರದ ಮಾಜಿ ಸಂಸದ ಅತೀಕ್ ಅಹ್ಮದ್ ಕೊಲೆ, ಸುಲಿಗೆ, ಅಪಹರಣ ಸೇರಿದಂತೆ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರನ್ನು ಬಿಗಿ ಭದ್ರತೆಯ ಜೈಲಿನಲ್ಲಿ ಇರಿಸಲಾಗಿತ್ತು. ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ಪೊಲೀಸ್ ರಕ್ಷಣೆಯಲ್ಲಿ ಪ್ರಯಾಗ್‌ರಾಜ್‌ಗೆ ಕರೆತರುವಾಗ ಅವರನ್ನು ಹತ್ಯೆಗೈಯಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಘಟನಾ ಸ್ಥಳದಿಂದ ಇಬ್ಬರು ಶೂಟರ್‌ ಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ.

ಗುರುವಾರವಷ್ಟೇ, ಪೊಲೀಸರು ಎನ್‌ಕೌಂಟರ್‌ನಲ್ಲಿ ಅತೀಕ್‌ ಪುತ್ರನನ್ನು ಹತ್ಯೆಗೈದಿದ್ದರು.

ಅತಿಕ್‌ ಪುತ್ರ ಹಾಗೂ ಆತನ ಸಹಚರರನ್ನು ಪೊಲೀಸ್‌ ಕಾರ್ಯಾಚರಣೆ ವೇಳೆ ಎನ್‌ಕೌಂಟರ್‌ ಮಾಡಲಾಗಿದೆ ಎಂದು ಯುಪಿ ಪೊಲೀಸರು ತಿಳಿಸಿದ್ದರು. ಶನಿವಾರ ಪುತ್ರನ ಅಂತಿಮ ಸಂಸ್ಕಾರ ನಡೆದಿದ್ದು, ಅಂದೇ ಅತೀಕ್‌ ಅವರ ಹತ್ಯೆ ನಡೆದಿದೆ. ಈ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ

ವಿಧಾನ ಪರಿಷತ್ತಿನ ಉಪಚುನಾವಣೆಗೆ ಕಾಂಗ್ರೆಸ್ ನಿಂದ ಜಗದೀಶ್ ಶೆಟ್ಟರ್ ಸ್ಪರ್ಧೆ

Posted by Vidyamaana on 2023-06-20 03:56:16 |

Share: | | | | |


ವಿಧಾನ ಪರಿಷತ್ತಿನ ಉಪಚುನಾವಣೆಗೆ ಕಾಂಗ್ರೆಸ್ ನಿಂದ ಜಗದೀಶ್ ಶೆಟ್ಟರ್ ಸ್ಪರ್ಧೆ

ಬೆಂಗಳೂರು: ವಿಧಾನ ಪರಿಷತ್ತಿನ ಉಪಚುನಾವಣೆಗೆ ಕಾಂಗ್ರೆಸ್ ನಿಂದ ಜಗದೀಶ್ ಶೆಟ್ಟರ್ ಸ್ಪರ್ಧೆ ಮಾಡಲಿದ್ದಾರೆ.ಜೂನ್.30ರಂದು ನಡೆಯಲಿರುವ ವಿಧಾನಪರಿಷತ್ತಿನ ಮೂರು ಸ್ಥಾನಗಳ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷ ಮೂವರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಅದರಂತೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ತಿಪ್ಪಣ್ಣಪ್ಪ ಕಮಕನೂರ್ ಹಾಗೂ ಎನ್ ಎಸ್ ಬೋಸೆರಾಜು ಅವರು ಸ್ಪರ್ಧಿಸಲಿದ್ದಾರೆ.

ಇಂದು ವಿಧಾನ ಪರಿಷತ್ ಉಪ ಚುನಾವಣೆಗೆ ಕೊನೆಯ ದಿನವಾದ ಕಾರಣ ಕಾಂಗ್ರೆಸ್ ಪಕ್ಷದಿಂದ ಈ ಮೂವರು ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಲಿದ್ದಾರೆ.

ಜೂನ್.21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂನ್.23ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಜೂನ್. 30ರಂದು ಮತದಾನವನ್ನು ನಿಗದಿ ಪಡಿಸಲಾಗಿದೆ. ಜೂನ್.30ರಂದು ಬೆಳಿಗ್ಗೆ 9 ರಿಂದ 4 ಗಂಟೆಯವರೆಗೆ ನಡೆಸಲಾಗುತ್ತದೆ. ಸಂಜೆ 5 ಗಂಟೆಗೆ ಮತಗಳ ಏಣಿಕೆ ಕಾರ್ಯ ನಡೆದು, ಫಲಿತಾಂಶ ಅಂದೇ ಘೋಷಣೆಯಾಗಲಿದೆ.

ಕಾರ್ಯಕ್ರಮಕ್ಕೆ ಗೈರು ಅನಂತ್ ನಾಗ್ ಬಿಜೆಪಿ ಸೇರ್ಪಡೆ ಮುಂದೂಡಿಕೆ

Posted by Vidyamaana on 2023-02-22 16:50:25 |

Share: | | | | |


ಕಾರ್ಯಕ್ರಮಕ್ಕೆ ಗೈರು ಅನಂತ್ ನಾಗ್ ಬಿಜೆಪಿ ಸೇರ್ಪಡೆ  ಮುಂದೂಡಿಕೆ

ಬೆಂಗಳೂರು : ಸ್ಯಾಂಡಲ್ ವುಡ್ ಹಿರಿಯ ನಟ ಮತ್ತು ಮಾಜಿ ಸಚಿವ ಅನಂತ್ ನಾಗ್ ಅವರು ಇಂದು ಸಂಜೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿತ್ತು, ಆದರೆ ಅವು ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಮುಂದೂಡಿಕೆಯಾಗಿದೆ.

ಇಂದು ಸಂಜೆ 4.30ಕ್ಕೆ ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪಕ್ಷಕ್ಕೆ ಸೇರಲಿದ್ದಾರೆ . ಆದರೆ ನಟ ಅನಂತ್ ನಾಗ್ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಬಿಜೆಪಿ ಸೇರ್ಪಡೆಯನ್ನು ಸದ್ಯಕ್ಕೆ ಮುಂದೂಡಿದ್ದಾರೆ ಎನ್ನಲಾಗಿದೆ. ಕೊನೇ ಕ್ಷಣದಲ್ಲಿ ನಟ ಅನಂತ್ ನಾಗ್ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

ಸಮುದ್ರದಲ್ಲಿ ವಿಮಾನ ಪತನ; ಖ್ಯಾತ ನಟ, ಇಬ್ಬರು ಪುತ್ರಿಯರು ಸಾವು

Posted by Vidyamaana on 2024-01-06 09:27:19 |

Share: | | | | |


ಸಮುದ್ರದಲ್ಲಿ ವಿಮಾನ ಪತನ; ಖ್ಯಾತ ನಟ, ಇಬ್ಬರು ಪುತ್ರಿಯರು ಸಾವು

ಲಾಸ್ ಎಂಜಲೀಸ್: 30 ವರ್ಷಗಳ ವೃತ್ತಿಜೀವನದಲ್ಲಿ ಟಾಮ್ ಕ್ರೂಸ್ ಮತ್ತು ಜಾರ್ಜ್ ಕ್ಲೂನಿ ಅವರೊಂದಿಗೆ ಚಲನಚಿತ್ರಗಳಲ್ಲಿ ನಟಿಸಿದ ಜರ್ಮನ್ ಮೂಲದ ಅಮೇರಿಕನ್ ನಟ ಕ್ರಿಶ್ಚಿಯನ್ ಆಲಿವರ್ ಮತ್ತು ಅವರ ಇಬ್ಬರು ಪುತ್ರಿಯರು ಗುರುವಾರ ಕೆರಿಬಿಯನ್ ದ್ವೀಪದ ಕರಾವಳಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.


ನಟ ಹಾಗು ಇಬ್ಬರು ಪುತ್ರಿಯರ ಜೊತೆ ಸಣ್ಣ ವಿಮಾನದಲ್ಲಿ ಸೇಂಟ್ ಲೂಸಿಯಾಕ್ಕೆ ಹೋಗುತ್ತಿದ್ದಾಗ ಬೆಕ್ವಿಯಾ ಬಳಿಯ ಪೆಟಿಟ್ ನೆವಿಸ್ ದ್ವೀಪದ ಪಶ್ಚಿಮದಲ್ಲಿ ತಾಂತ್ರಿಕ ತೊಂದರೆಗೆ ಒಳಗಾಗಿ ಸಮುದ್ರದಲ್ಲಿ ಪತನಗೊಂಡು ಆಲಿವರ್ ಮತ್ತು ಇಬ್ಬರು ಪುತ್ರಿಯರಾದ 10 ವರ್ಷದ ಮಡಿತಾ ಕ್ಲೆಪ್ಸರ್ ಮತ್ತು 12 ವರ್ಷದ ಆನಿಕ್ ಕ್ಲೆಪ್ಸರ್ ಸಾವನ್ನಪ್ಪಿದ್ದಾರೆ.ಅಲ್ಲದೆ ಅಪಘಾತದಲ್ಲಿ ಪೈಲಟ್ ರಾಬರ್ಟ್ ಸ್ಯಾಚ್ಸ್ ಕೂಡ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದು. ಅಪಘಾತಕ್ಕೆ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ ತಾಂತ್ರಿಕ ಸಮಸ್ಯೆಯಿಂದ ವಿಮಾನ ಅಪಘಾತಕ್ಕೆ ಒಳಗಾಗಿರಬಹುದು ಎಂದು ಮೂಲಗಳು ಮಾಹಿತಿ ನೀಡಿವೆ.


ವಿಮಾನ ಸಮುದ್ರದಲ್ಲಿ ಪತನಗೊಳ್ಳುತ್ತಿದ್ದಂತೆ ಮೀನುಗಾರರು, ಮುಳುಗುತಜ್ಞರು ಮತ್ತು ಕೋಸ್ಟ್ ಗಾರ್ಡ್ ಸಿಬಂದಿಗಳು ಸ್ಥಳಕ್ಕೆ ಧಾವಿಸಿ, ಆಲಿವರ್ ಅವರ ಪುತ್ರಿಯರಾದ ಆನಿಕ್ ಮತ್ತು ಮಡಿತಾ ಕ್ಲೆಪ್ಸರ್ ಮತ್ತು ವಿಮಾನದ ಪೈಲಟ್ ಸೇರಿದಂತೆ ವಿಮಾನದಲ್ಲಿದ್ದ ನಾಲ್ವರ ಶವಗಳನ್ನು ಹೊರತೆಗೆದಿದ್ದಾರೆ.ಫಾರೆವರ್ ಹೋಲ್ಡ್ ಯುವರ್ ಪೀಸ್” ಗಾಗಿ ತನ್ನ ಅಂತಿಮ ದೃಶ್ಯಗಳ ಚಿತ್ರೀಕರಣವನ್ನು ಇತ್ತೀಚೆಗೆ ಆಲಿವರ್ ಮುಗಿಸಿದ್ದರು, ನಟನ ಅಗಲಿಕೆಗೆ ಹಾಲಿವುಡ್ ಸಂತಾಪ ಸೂಚಿಸಿದೆ. ಆಲಿವರ್ ನಿಧನಕ್ಕೆ ಚಿತ್ರದ ನಿರ್ದೇಶಕ ನಿಕ್ ಲಿಯಾನ್ ಮತ್ತು ಸಹ-ನಟ ಬಾಯಿ ಲಿಂಗ್ ಅವರೂ ಸಂತಾಪ ಸೂಚಿಸಿದ್ದಾರೆ ಅಲ್ಲದೆ ಲಿಯಾನ್ ತಮ್ಮ ಸಹದ್ಯೋಗಿಯನ್ನು ನೆನಪಿಸಿಕೊಂದು ಆತ ಒಬ್ಬ ನನ್ನ ಉತ್ತಮ ಸಹೋದ್ಯೋಗಿ, ನಟ ಮತ್ತು ಸ್ನೇಹಿತನಾಗಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ.

ಮಂಗಳೂರು ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ

Posted by Vidyamaana on 2024-03-16 19:18:55 |

Share: | | | | |


ಮಂಗಳೂರು ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ

ಮಂಗಳೂರು : ಅರುಣ್ ಕುಮಾರ್ ಪುತ್ತಿಲ ಮಂಗಳೂರಿನ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದು, ಕಾರ್ಯಕರ್ತರು ಶಾಲು ಹಾಕಿ ಸ್ವಾಗತಿಸಿದರು.ಅರುಣ್ ಪುತ್ತಿಲ ಮಂಗಳೂರು ಬಿಜೆಪಿ ಕಚೇರಿಗೆ ಭೇಟಿ ನೀಡುವ ಹಿನ್ನೆಲೆ  ನೂರಾರು ಕಾರ್ಯಕರ್ತರು ಆಗಮಿಸಿದರು.

ಚಿನ್ನದ ಹಬ್ಬ ಮುಳಿಯ ಚಿನ್ನೋತ್ಸವಕ್ಕೆ ಚಾಲನೆ

Posted by Vidyamaana on 2024-04-24 04:30:45 |

Share: | | | | |


ಚಿನ್ನದ ಹಬ್ಬ ಮುಳಿಯ ಚಿನ್ನೋತ್ಸವಕ್ಕೆ ಚಾಲನೆ

ಪುತ್ತೂರು : 24 ವರ್ಷಗಳ ಹಿಂದೆ ವಜ್ರರತ್ನಗಳ ಪ್ರದರ್ಶನ ಹಬ್ಬದ ಮೂಲಕ ಗ್ರಾಹಕರಿಗೆ ಹತ್ತಿರವಾದ ಪ್ರಸಿದ್ದ ಚಿನ್ನಾಭರಣ ಮಳಿಗೆಯಾದ ಪುತ್ತೂರಿನ ಮುಳಿಯ ಜ್ಯುವೆಲ್ಸ್ ನಲ್ಲಿ ಪ್ರತಿ ವರ್ಷ ನಡೆಯುವ ಚಿನ್ನೋತ್ಸವಕ್ಕೆ ಈ ಬಾರಿ ಚಿನ್ನದ ಹಬ್ಬ ” ಮುಳಿಯ ಚಿನ್ನೋತ್ಸವ” ಕ್ಕೆ ಎ.22 ರಂದು ಚಾಲನೆ ನೀಡಲಾಯಿತು.

ಮೇ.20ರ ತನಕ ನಡೆಯುವ ಈ ಚಿನ್ನೋತ್ಸವವನ್ನು ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಆಫ್ ಸಯನ್ಸ್ನ ಪ್ರೊ. ಡಾ. ಸೌಮ್ಯ ಅವರು ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಚಿನ್ನಾಭರಣದ ಹೊಸ ವಿನ್ಯಾಸಗಳನ್ನು ಅನಾವರಣಗೊಳಿಸಿದರು.

ಆಭರಣದಲ್ಲಿ ಹೊಸ ವಿನ್ಯಾಸದ ಆಕಾಂಕ್ಷೆಯನ್ನು ಮುಳಿಯ ಪೂರೈಸುತ್ತಿದೆ :


ಮುಳಿಯ ಚಿನ್ನೋತ್ಸವವನ್ನು ಉದ್ಘಾಟಿಸಿದ ವಿವೇಕಾನಂದ ಇಂಜಿನಿಯರಿಂಗ್ ಆಫ್ ಸಯನ್ಸ್ ಇದರ ಪ್ರೊ. ಡಾ. ಸೌಮ್ಯ ಅವರು ಮಾತನಾಡಿ ನನ್ನ ಸುಮಾರು 30 ವರ್ಷದ ಅನುಭವದಲ್ಲಿ ಮುಳಿಯ ಜ್ಯುವೆಲ್ಸ್ನೊಂದಿಗೆ ಉತ್ತಮ ಸಂಬಂಧವಿದೆ. ಯಾಕೆಂದರೆ ನಮ್ಮ ಕಟುಂಬ ಸಮೇತ ಇಲ್ಲಿನ ಗ್ರಾಹಕರಾಗಿದ್ದೇವೆ. ಇದಕ್ಕೆ ಕಾರಣ ಮುಳಿಯ ನಂಬಿಕೆಯನ್ನು ಉಳಿಸಿಕೊಂಡಿದೆ. ಇದರೊಂದಿಗೆ ಪ್ರತಿಯೊಬ್ಬರಿಗೂ ನನ್ನ ಆಭರಣ ಇತರರಿಗಿಂತ ಭಿನ್ನ ಹೊಸತನ ಹೊಸ ಶೈಲಿಯಲ್ಲಿರಬೇಕೆಂಬ ಆಸೆ ಇರುತ್ತದೆ. ಅದಕ್ಕೆ ತಕ್ಕಂತೆ ಮುಳಿಯ ಜ್ಯುವೆಲ್ಸ್ ಆ ಹೊಸತನದ ಆಕಾಂಕ್ಷೆಯನ್ನು ಪೂರೈಸುತ್ತಿದೆ ಎಂದ ಅವರು ಇದರ ಜೊತೆಗೆ ಸಿಬ್ಬಂದಿಗಳ ನಗುಮೊಗದ ಸೇವೆ ನಾವು ಚಿನ್ನಾಭರಣ ನೋಡಲು ಬಂದವರು ಖರೀದಿಸುವಷ್ಟರ ಮಟ್ಟಿಗೆ ಹೋಗುತ್ತೇವೆ ಎಂದರು

Recent News


Leave a Comment: