ಮಂಗಳೂರಿನಲ್ಲಿ ಚಡ್ಡಿಗ್ಯಾಂಗ್ ಹಾವಳಿ - ಕೋಡಿಕಲ್ ನಲ್ಲಿ ಮನೆಯೊಂದರ ಕಿಟಕಿ ಗ್ರಿಲ್ಸ್ ಕತ್ತರಿಸಿದ ಕಳ್ಳತನಕ್ಕೆ ಯತ್ನಿಸಿದ ಕಳ್ಳರು

ಸುದ್ದಿಗಳು News

Posted by vidyamaana on 2024-07-08 08:23:43 |

Share: | | | | |


ಮಂಗಳೂರಿನಲ್ಲಿ ಚಡ್ಡಿಗ್ಯಾಂಗ್ ಹಾವಳಿ - ಕೋಡಿಕಲ್ ನಲ್ಲಿ ಮನೆಯೊಂದರ ಕಿಟಕಿ ಗ್ರಿಲ್ಸ್ ಕತ್ತರಿಸಿದ ಕಳ್ಳತನಕ್ಕೆ ಯತ್ನಿಸಿದ ಕಳ್ಳರು

 ಮಂಗಳೂರು : ಮಂಗಳೂರಿನಲ್ಲಿ ಒಂದೆಡೆ ಮುಂಗಾರು ಮಳೆ ಅಬ್ಬರವಿದ್ದರೆ ಇನ್ನೊಂದೆಡೆ ಕಳ್ಳರ ಭಯ ಪ್ರಾರಂಭವಾಗಿದ್ದು, ಕಳ್ಳತನಕ್ಕೆ ಹೆಸರು ಮಾಡಿರುವ ಚೆಡ್ಡಿ ಗ್ಯಾಂಗ್ ನಗರದಲ್ಲಿ ಕಾಣಿಸಿಕೊಂಡಿದೆ. ಅಲ್ಲದೆ ಕೋಡಿಕಲ್ ನಲ್ಲಿ ನಿನ್ನೆ ರಾತ್ರಿ ಮನೆಯೊಂದರ ಕಿಟಕಿ ಗ್ರಿಲ್ಸ್ ಕತ್ತರಿಸಿ ಕಳ್ಳರು ಮನೆಗೆ ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ.ಈ ಕೃತ್ಯವನ್ನು ಹೊರ ರಾಜ್ಯದ ಚಡ್ಡಿ ಗ್ಯಾಂಗ್ ನಡೆಸಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಳ್ಳರು ಮನೆಯ ಕಿಟಕಿ ಕತ್ತರಿಸುವುದಕ್ಕೂ ಮುನ್ನ ಕೋಡಿಕಲ್ ಪರಿಸರದಲ್ಲಿ ಅಡ್ಡಾಡುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಐವರಿದ್ದ ಕಳ್ಳರ ತಂಡ ಮೆಲ್ಲನೆ ಹೆಜ್ಜೆ ಇಡುತ್ತಾ ಕೈಯಲ್ಲಿ ಟಾರ್ಚ್ ಬೆಳಕು ಹರಿಸಿ ಕಳವಿಗೆ ಮನೆ ಹುಡುಕುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ‌. ಚಡ್ಡಿ ಹಾಕಿದ್ದ ಕಳ್ಳರ ಗ್ಯಾಂಗ್ ಸದಸ್ಯರು ಬರುತ್ತಿದ್ದಾಗಲೇ ನಾಯಿಗಳು ಜೋರಾಗಿ ಬೊಗಳಿದ್ದು ಅವುಗಳತ್ತ ಕಳ್ಳರು ಕಲ್ಲೆಸೆದು ಓಡಿಸಿದ್ದಾರೆ.

ಕಿಟಕಿ ಕತ್ತರಿಸಿ ಒಂದು ಮನೆಯ ಒಳಗೆ ನುಗ್ಗಿದ್ದ ಕಳ್ಳರು ಬೆಲೆಬಾಳುವ ವಸ್ತುಗಳಿಗಾಗಿ ಜಾಲಾಡಿದ್ದಾರೆ. ಆದರೆ ಅವರಿಗೆ ಚಿಲ್ಲರೆ ನಗದು ಬಿಟ್ಟರೆ ಯಾವುದೇ ವಸ್ತುಗಳು ಸಿಕ್ಕಿಲ್ಲ. ವಿಶೇಷ ಅಂದ್ರೆ, ಮನೆಮಂದಿ ಮಲಗಿದ್ದಾಗಲೇ ಕಳ್ಳರು ನುಗ್ಗಿ ಹುಡುಕಾಟ ಮುಗಿಸಿ ಸದ್ದಿಲ್ಲದೆ ಹೊರಕ್ಕೆ ತೆರಳಿದ್ದಾರೆ. ಮನೆಯವರಿಗೆ ಬೆಳಗಾದಾಗಲೇ ಕಳವು ಕೃತ್ಯ ತಿಳಿದುಬಂದಿತ್ತು.

 Share: | | | | |


ಕರ್ತವ್ಯದಲ್ಲಿರೋ ಮಾಧ್ಯಮ ಸಿಬ್ಬಂದಿಗೆ ಅಂಚೆ ಪತ್ರದ ಮೂಲಕ ಮತ ಚಲಾವಣೆಗೆ ಅವಕಾಶ : ಚುನಾವಣಾ ಆಯೋಗ

Posted by Vidyamaana on 2024-03-20 10:07:44 |

Share: | | | | |


ಕರ್ತವ್ಯದಲ್ಲಿರೋ ಮಾಧ್ಯಮ ಸಿಬ್ಬಂದಿಗೆ ಅಂಚೆ ಪತ್ರದ ಮೂಲಕ ಮತ ಚಲಾವಣೆಗೆ ಅವಕಾಶ : ಚುನಾವಣಾ ಆಯೋಗ

ನವದೆಹಲಿ : ಲೋಕಸಭಾ ಚುನಾವಣೆಯಲ್ಲಿ ಅಂಚೆ ಮತದಾನಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಹೊಸ ಅಧಿಸೂಚನೆ ಹೊರಡಿಸಿದೆ. ಚುನಾವಣಾ ಆಯೋಗವು ಈಗ ಮಾಧ್ಯಮ ಸಿಬ್ಬಂದಿಗೆ ಅಂಚೆ ಮತಪತ್ರದ ಸೌಲಭ್ಯವನ್ನ ಒದಗಿಸಿದೆ. ಅಂದ್ರೆ, ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ಎಲ್ಲಾ ಅಧಿಕೃತ ಮಾಧ್ಯಮ ಸಿಬ್ಬಂದಿ ಅವರು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಸಾಧ್ಯವಾಗುತ್ತದೆ.ಆದಾಗ್ಯೂ, ಚುನಾವಣಾ ಆಯುಕ್ತರು ಮಾಧ್ಯಮ ಪ್ರಸಾರ ಪಾಸ್ ನೀಡುವ ಮಾಧ್ಯಮ ಸಿಬ್ಬಂದಿಗೆ ಮಾತ್ರ ಮತ ಚಲಾಯಿಸಲು ಸಾಧ್ಯವಾಗುತ್ತದೆ. 


ವಾಸ್ತವವಾಗಿ, ಚುನಾವಣಾ ಆಯೋಗವು ಯಾವುದೇ ಚುನಾವಣೆಯಲ್ಲಿ ಹೆಚ್ಚು ಹೆಚ್ಚು ಮತದಾರರನ್ನು ಭಾಗವಹಿಸಲು ಪ್ರಯತ್ನಿಸುತ್ತದೆ. ಆದರೆ ಚುನಾವಣೆಗಳಲ್ಲಿ, ಸಾವಿರಾರು ಮತ್ತು ಲಕ್ಷಾಂತರ ನೌಕರರು ಮತ್ತು ಭದ್ರತಾ ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿದ್ದಾರೆ. ಇದಲ್ಲದೆ, ಗಡಿಯಲ್ಲಿ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಜನರು ತಮ್ಮ ಕರ್ತವ್ಯವನ್ನ ಬಿಟ್ಟು ಚುನಾವಣೆಯಲ್ಲಿ ಮತ ಚಲಾಯಿಸಲು ತಮ್ಮ ಮನೆಗೆ ಹೋಗಲು ಸಾಧ್ಯವಾಗುವುದಿಲ್ಲ. ಅಂತಹ ಸಿಬ್ಬಂದಿ ಮತ್ತು ಸೈನಿಕರಿಗೆ, ಚುನಾವಣಾ ಆಯೋಗವು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಅವಕಾಶ ನೀಡುತ್ತದೆ.

ಬಿಜೆಪಿ ಟಿಕೇಟ್ ಡೀಲ್ ಪ್ರಕರಣ : ವಜ್ರಾದೇಹಿ ಸ್ವಾಮಿಜೀಗೆ ಸಿಸಿಬಿ ನೋಟೀಸ್

Posted by Vidyamaana on 2023-10-10 16:50:37 |

Share: | | | | |


ಬಿಜೆಪಿ ಟಿಕೇಟ್ ಡೀಲ್ ಪ್ರಕರಣ : ವಜ್ರಾದೇಹಿ ಸ್ವಾಮಿಜೀಗೆ ಸಿಸಿಬಿ ನೋಟೀಸ್

ಬೆಂಗಳೂರು: ಬಿಜೆಪಿ ಟಿಕೆಟ್ ಡೀಲ್ ವಿಷಯವಾಗಿ


ಹಿಂದೂ ಮುಖಂಡೆ ಚೈತ್ರ ಕುಂದಾಪುರ (Chaithra


Kundapura) ಹಾಗೂ ಹಾಲಶ್ರೀ ಸ್ವಾಮಿಜಿ


ಬಂಧನವಾಗಿ ತಿಂಗಳು ಕಳೆದ ನಂತರ ದಕ್ಷಿಣ ಕನ್ನಡದ ಪ್ರಮುಖ ಹಿಂದೂ ಪರ ಇರುವ ಸ್ವಾಮಿಜೀಗೆ ವಿಚಾರಣೆಗೆ ಹಾಜರಾಗಲು ನೋಟಿಸ್


ಜಾರಿಯಾಗಿದೆ.ಉದ್ಯಮಿ ಗೋವಿಂದ ಬಾಬು ಪೂಜಾರಿಗೆ


ಬೈಂದೂರಿನ ಬಿಜೆಪಿ ಟಿಕೇಟ್ ನೀಡುವ ವಿಚಾರವಾಗಿ ಡೀಲ್ ನಡೆದು ಚೈತ್ರ ಕುಂದಾಪುರ ಬಂಧನ ಆದ ನಂತರ ಚೈತ್ರ ಇಡಿ ಗೆ ಬರೆದ ಪತ್ರದಲ್ಲಿ ವಜ್ರಾದೇಹಿ ಶ್ರೀ, ಚಕ್ರವರ್ತಿ ಸೂಲಿಬೆಲೆ, ಹಾಗೂ ಸಿಟಿ ರವಿ ಹೆಸರು ಉಲ್ಲೇಖವಾಗಿತ್ತು.ಇದೀಗ ಸಿಸಿಬಿ ಮಂಗಳೂರು ಗುರುಪುರ ವಜ್ರಾದೇಹಿ ಮಠದ ರಾಜಶೇಖರಾನಂದ ಸ್ವಾಮಿಜೀಗೇ ನೋಟಿಸ್ ಜಾರಿ ಮಾಡಿದೆಬೆಂಗಳೂರು ನಗರ ಸಿಸಿಬಿ ಮಹಿಳಾ ಸಂರಕ್ಷಣಾ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ

ಬೆಂಗಳೂರು ಸಿಸಿಬಿ ಸಹಾಯಕ ಪೊಲೀಸ್ಕಮಿಷನರ್ ರವರಾದ ರೀನಾ ಸುವರ್ಣ ಅವರು ವಜ್ರಾದೇಹಿ ಶ್ರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಗೆಳೆತನಕ್ಕೆ ಜಾತಿಯಿಲ್ಲ - ಪುಣಚದಲ್ಲೊಂದು ಸ್ಪೆಷಲ್ ಬರ್ತ್ ಡೇ ಸೆಲೆಬ್ರೇಷನ್

Posted by Vidyamaana on 2023-08-29 10:22:25 |

Share: | | | | |


ಗೆಳೆತನಕ್ಕೆ ಜಾತಿಯಿಲ್ಲ - ಪುಣಚದಲ್ಲೊಂದು ಸ್ಪೆಷಲ್ ಬರ್ತ್ ಡೇ ಸೆಲೆಬ್ರೇಷನ್

ಪುತ್ತೂರು: ಸದಾ ಕೋಮು ವಿಚಾರಕ್ಕೆ ಸುದ್ದಿಯಾಗುತ್ತಿರುವ ಕರಾವಳಿ ಭಾಗದಲ್ಲಿ ಇದೀಗ ಒಂದು ಸೌಹಾರ್ದತೆಯ ‘ಬರ್ತ್ ಡೇ’ ಆಚರಣೆ ಸಖತ್ ಸುದ್ದಿಯಾಗ್ತಿದೆ.


ವಿಟ್ಲದ ಪುಣಚದಲ್ಲಿ ಮುಸ್ಲಿಂ ಯುವಕರು ಸೇರಿಕೊಂಡು ತಮ್ಮ ಹಿಂದೂ ಗೆಳೆಯನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗ್ತಿದ್ದು, ಕೋಮು ಕುದಿಯಾಗಿರುವ ಕರಾವಳಿ ಭಾಗದಲ್ಲಿ ಸೌಹಾರ್ದತೆಯ ಸಿಂಚನಕ್ಕೆ ಸಾಕ್ಷಿಯಾಗಿದೆ.


ಪುಣಚದ ದಿವಾಕರ್ ಎಂಬ ಯುವಕನ ಜನ್ಮ ದಿನವನ್ನು ಇಲ್ಲಿನ ‘ಪಿರ್ಸತೆ ಚಂಹಿಮಾರ್ ಮುಸ್ಲಿಂ ಗ್ರೂಪ್’ನ ಸದಸ್ಯರು ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದಾರೆ.


ತಮ್ಮ ಹಿಂದು ಗೆಳೆಯನಿಗೆ ಬರ್ತ್ ಡೇ ಶುಭಾಶಯಗಳನ್ನು ಕೋರಿ ವಿಭಿನ್ನವಾಗಿ ಆಚರಿಸಿಕೊಂಡ ಈ ಜನ್ಮದಿನಾಚರಣೆಗೆ ಇದೀಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಎಡಪದವು:ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ

Posted by Vidyamaana on 2024-04-19 20:04:23 |

Share: | | | | |


ಎಡಪದವು:ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ

ಬಜ್ಪೆ :ಇಲ್ಲಿನ ಎಡಪದವು ಪೇಟೆಯಲ್ಲಿ ಶುಕ್ರವಾರ ಸಂಜೆ ಮಣ್ಣು ತುಂಬಿಕೊಂಡು ಹೋಗುತ್ತಿದ್ದ ಬೃಹತ್ ಲಾರಿಯೊಂದರ ಬ್ರೇಕ್ ಫೇಲ್ ಆದ ಕಾರಣ ರಸ್ತೆ ಬದಿಯಲ್ಲಿದ್ದ ಅಂಗಡಿಗಳಿಗೆ ಗುದ್ದಿ ಬಳಿಕ ಖಾಸಗಿ ಬಸ್, ಲಾರಿ ಮತ್ತು ಹಲವು ವಾಹನಗಳಿಗೆ ಗುದ್ದಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಭಾರೀ ಅವಘಡ ತಪ್ಪಿ ಹೋಗಿದೆ.

ಭಾರತ ಸೇರಿ ಜಗತ್ತಿನಾದ್ಯಂತ X ಸರ್ವರ್ ಡೌನ್ ಬಳಕೆದಾರರ ಪರದಾಟ

Posted by Vidyamaana on 2024-04-23 21:50:13 |

Share: | | | | |


ಭಾರತ ಸೇರಿ ಜಗತ್ತಿನಾದ್ಯಂತ X ಸರ್ವರ್ ಡೌನ್ ಬಳಕೆದಾರರ ಪರದಾಟ

ನವದೆಹಲಿ: ಟ್ವಿಟರ್ ಸ್ಥಗಿತದ ಕೆಲವೇ ವಾರಗಳ ನಂತರ, ಎಲೋನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ (ಹಿಂದೆ ಟ್ವಿಟರ್) ಮಂಗಳವಾರ ಮತ್ತೆ ಸರ್ವರ್‌ ಡೌನ್ ಆಗಿರುವ ಬಗ್ಗೆ ವರದಿ ಬರುತ್ತಿದ್ದಾವೆ.ಎಕ್ಸ್‌ ಸ್ಥಗಿತ ಟ್ರ್ಯಾಕಿಂಗ್ ವೆಬ್ಸೈಟ್ Downdetector.com ಪ್ರಕಾರ, ಭಾರತದಲ್ಲಿ ನೂರಾರು ಬಳಕೆದಾರರು ಎಕ್ಸ್ ಅನ್ನು ಪ್ರವೇಶಿಸುವಲ್ಲಿ, ಬಳಕೆ ಮಾಡುವಲ್ಲಿ ಸಮಸ್ಯೆಗಳನ್ನು ಎದುರಿಸಿದ್ದಾರೆ.

ನಿಡ್ಪಳ್ಳಿ:ಬಿಜೆಪಿ-ಕಾಂಗ್ರೆಸ್-ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ

Posted by Vidyamaana on 2023-07-11 23:06:46 |

Share: | | | | |


ನಿಡ್ಪಳ್ಳಿ:ಬಿಜೆಪಿ-ಕಾಂಗ್ರೆಸ್-ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ

ಪುತ್ತೂರು: ನಿಡ್ಪಳ್ಳಿ ಗ್ರಾಮ ಪಂಚಾಯತ್ ಉಪಚುನಾವಣೆಗೆ ದಿನ ನಿಗದಿಯಾಗಿದ್ದು, ಕಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ನಿಡ್ಪಳ್ಳಿ ಗ್ರಾ.ಪಂ.ನ 1ನೇ ವಾರ್ಡ್ ಸದಸ್ಯರಾಗಿದ್ದ, ಬಿಜೆಪಿ ಬೆಂಬಲಿತ ಸದಸ್ಯ ಮುರಳೀಕೃಷ್ಣ ಭಟ್ ಅವರ ಮರಣದ ಬಳಿಕ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ.

ಈ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚಂದ್ರಶೇಖರ್ ಪ್ರಭು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸತೀಶ್ ಶೆಟ್ಟಿ ಹಾಗೂ ಹರೀಶ್ ಕಣಕ್ಕೆ ಧುಮುಕ್ಕಿದ್ದಾರೆ. ಈ ಬಾರಿ ಪುತ್ತಿಲ ಪರಿವಾರವೂ ಸತ್ವ ಪರೀಕ್ಷೆಗೆ ಮುಂದಾಗಿದ್ದು, ಜಗನ್ನಾಥ ರೈ ಕೊಳೆಂಬೆತ್ತಿಮಾರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.


ಹೀಗಿದೆ ಲೆಕ್ಕಾಚಾರ:

ಹಿಂದಿನ ಬಾರಿಯ ಚುನಾವಣೆಯಲ್ಲಿ ಮುರಳೀಕೃಷ್ಣ ಭಟ್ ಅವರು 29 ಮತಗಳಿಂದ ಗೆಲುವು ಸಾಧಿಸಿದ್ದರು. ಆಗ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ನೇರಾ ನೇರ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಪುತ್ತಿಲ ಪರಿವಾರವೂ ಕಣದಲ್ಲಿ ಇರುವುದರಿಂದ ವಿಧಾನಸಭಾ ಚುನಾವಣೆಯ ಬಳಿಕ ಬಿಜೆಪಿಗೆ ಮತ್ತೊಮ್ಮೆ ಅಗ್ನಿ ಪರೀಕ್ಷೆಯಿದು. ಬಿಜೆಪಿ ಮತಗಳು ಹೋಳಾಗುವ ಕಾರಣದಿಂದ ಕಾಂಗ್ರೆಸ್ ಪರಿಸ್ಥಿತಿಯ ಪ್ರಯೋಜನ‌ ಪಡೆದುಕೊಳ್ಳುತ್ತದೆಯೇ? ಅಥವಾ ಮುರಳೀಕೃಷ್ಣ ಭಟ್ ಅವರ ಅನುಕಂಪದ ಮತಗಳು ಬಿಜೆಪಿ ಗೆಲುವಿಗೆ ಕಾರಣವಾಗಲಿದೆಯೇ? ಹೊಸ ಅಲೆ ಸೃಷ್ಟಿಸಿರುವ ಅರುಣ್ ಕುಮಾರ್ ಪುತ್ತಿಲ ಅವರು ಹೊಸದಾಗಿ ಇನ್ನಿಂಗ್ಸ್ ಶುಭಾರಂಭ ಮಾಡುವ ಸಾಧ್ಯತೆ ಇದೆಯೇ? ಹೀಗೆ ಅನೇಕ ಲೆಕ್ಕಾಚಾರಗಳು ಕಣದಲ್ಲಿ ಕೇಳಿಬರುತ್ತಿದೆ.


ಪಕ್ಷದ ಪರವಾಗಿ ನಿಂತ ಪ್ರಮುಖರು:

ಕಾಂಗ್ರೆಸ್, ಬಿಜೆಪಿ ಹಾಗೂ ಪುತ್ತಿಲ ಪರಿವಾರದ ಬೆಂಬಲಿತ ಸದಸ್ಯರು ನಾಮಪತ್ರ ಸಲ್ಲಿಸುವಾಗ ಪಕ್ಷದ ಪ್ರಮುಖರು ಜೊತೆಯಲ್ಲಿದ್ದದ್ದು ಕಣದ ಗಂಭೀರತೆಗೆ ಸಾಕ್ಷಿಯಾಗಿತ್ತು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಪರವಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ಶಾಸಕ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆಶಾ ತಿಮ್ಮಪ್ಪ ಹಾಗೂ ಕಾಂಗ್ರೆಸಿನಿಂದ ಜಿಲ್ಲಾ ಪ್ರಚಾರ ಸಮಿತಿಯ ಜಂಟಿ ಸಂಯೋಜಕ ಕೃಷ್ಣಪ್ರಸಾದ್ ಆಳ್ವ ಮತ್ತು ಪ್ರಮುಖರು, ಪುತ್ತಿಲ ಪರಿವಾರದಿಂದ ಅರುಣ್ ಕುಮಾರ್ ಪುತ್ತಿಲ, ಪ್ರಸನ್ನ ಕುಮಾರ್ ಮಾರ್ತಾ, ಉಮೇಶ್ ಗೌಡ ವೀರಮಂಗಲ ಮೊದಲಾದವರು ಉಪಸ್ಥಿತರಿದ್ದರು.

Recent News


Leave a Comment: