ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ನಟ್ಟೋಜ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್ ನಿಧನ

Posted by Vidyamaana on 2024-03-12 10:00:00 |

Share: | | | | |


ನಟ್ಟೋಜ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್ ನಿಧನ

ಪುತ್ತೂರು: ಅಂಬಿಕಾ ವಿದ್ಯಾ ಸಂಸ್ಥೆಗಳ ಮಾತೃಸಂಸ್ಥೆಯಾಗಿರುವ ನಟ್ಟೋಜ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ಶಿವಾನಂದ್ ರಾವ್ (93) ಮಂಗಳವಾರ ಬೆಳಿಗ್ಗೆ ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.ಸಾಮಾಜಿಕ ಹಾಗೂ ರಾಜಕೀಯವಾಗಿ ಸಕ್ರೀಯರಾಗಿದ್ದ ಅವರು ಪ್ರಗತಿಪರ ಕೃಷಿಕರೂ ಹೌದು.ವಿಶ್ವ ಹಿಂದೂ ಪರಿಷತ್ ನ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಅಯೋಧ್ಯೆಯ ರಾಮ ಮಂದಿರ ಹೋರಾಟದಲ್ಲೂ ಗುರುತಿಸಿಕೊಂಡಿದ್ದರು. ಮಾಜಿ ಶಾಸಕ ರಾಂ ಭಟ್ ಅವರ ಆತ್ಮೀಯರಾಗಿದ್ದು, ರಾಜಕೀಯವಾಗಿಯೂ ಸಾಕಷ್ಟು ಕೆಲಸ ನಿರ್ವಹಿಸಿದ್ದಾರೆ.


ಅವರು ಪುತ್ರ ಅಂಬಿಕಾ ವಿದ್ಯಾಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಹಾಗೂ ನಾಲ್ಕು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಆ. 19ರಂದು ಕೊಣಾಜೆ ಪಿಎ ಕಾಲೇಜಿನಲ್ಲಿ ಗ್ಯಾಜ್ಯುವೇಷನ್ ಡೇ

Posted by Vidyamaana on 2023-08-18 15:27:26 |

Share: | | | | |


ಆ. 19ರಂದು ಕೊಣಾಜೆ ಪಿಎ ಕಾಲೇಜಿನಲ್ಲಿ ಗ್ಯಾಜ್ಯುವೇಷನ್ ಡೇ

ಮಂಗಳೂರು: ಕೊಣಾಜೆ ಪಿಎ ಕಾಲೇಜ್ ಆಫ್ ಇಂಜಿನಿಯರಿಂಗ್’ನಲ್ಲಿ ಆ. 19ರಂದು ಬೆಳಿಗ್ಗೆ 9.30ಕ್ಕೆ ಪೇಸ್ ಅಡಿಟೋರಿಯಂನಲ್ಲಿ 2019-2023ರ ಬ್ಯಾಚ್ ಸ್ಟೂಡೆಂಟ್’ಗಳ ಗ್ರಾಜ್ಯುವೇಷನ್ ಡೇ ನಡೆಯಲಿದೆ.

ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಮುಖ್ಯ ಅತಿಥಿಯಾಗಿರುವರು. ಸುರತ್ಕಲ್ ಎನ್.ಐ.ಟಿ.ಕೆ. ಇದರ ಸಿ.ಎಸ್.ಇ. ವಿಭಾಗದ ಡಾ. ಮೋಹಿತ್ ಪಿ. ತಹಿಲಿಯಾನಿ ಗೌರವ ಅತಿಥಿಯಾಗಿರುವರು. ಸಂಸ್ಥೆಯ ಟ್ರಸ್ಟಿಗಳಾದ ಅಬ್ದುಲ್ ಲತೀಫ್, ಮೊಹಮ್ಮದ್ ಶಾಫಿ, ಮುಹಮ್ಮದ್ ಅಮೀನ್ ಇಬ್ರಾಹಿಂ, ಮುಹಮ್ಮದ್ ಸಲ್ಮಾನ್ ಇಬ್ರಾಹಿಂ, ಜುಬೈರ್ ಇಬ್ರಾಹಿಂ, ಬಿಲಾಲ್ ಇಬ್ರಾಹಿಂ, ಆದಿಲ್ ಇಬ್ರಾಹಿಂ, ಸಂಸ್ಥೆಯ ನಿರ್ದೇಶಕ ಅಹ್ಮದ್ ಕುಟ್ಟಿ, ಬೆಂಗಳೂರು ಪ್ರೆಸಿಡೆನ್ಸಿ ಯೂನಿವರ್ಸಿಟಿಯ ಡೀನ್ ಡಾ. ಅಬ್ದುಲ್ ಶರೀಫ್ ಉಪಸ್ಥಿತರಿರುವರು.

ಮಧ್ಯಾಹ್ನ 2 ಗಂಟೆಗೆ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಅಬ್ದುಲ್ಲ ಇಬ್ರಾಹಿಂ ಅಧ್ಯಕ್ಷತೆ ವಹಿಸಲಿದ್ದು, ಮಂಗಳೂರು ವಿಶ್ವವಿದ್ಯಾಲಯದ (ಈವ್ಯಾಲ್ಯುವೇಷನ್) ರಿಜಿಸ್ಟ್ರಾರ್ ಡಾ. ರಾಜು ಕೃಷ್ಣ ಚಲನ್ನವರ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಫಾತಿಮಾ ಅಫ್ನಾ ಕಾಸರಗೋಡಿನಲ್ಲಿ ಪತ್ತೆ

Posted by Vidyamaana on 2024-02-01 19:15:43 |

Share: | | | | |


ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಫಾತಿಮಾ ಅಫ್ನಾ  ಕಾಸರಗೋಡಿನಲ್ಲಿ ಪತ್ತೆ

ಪುತ್ತೂರು: ಶಾಲೆಗೆಂದು ತೆರಳಿ ನಾಪತ್ತೆಯಾಗಿದ್ದ ಬಾಲಕಿ ಇದೀಗ ಕಾಸರಗೋಡಿನಲ್ಲಿ ಪತ್ತೆಯಾಗಿದ್ದಾಳೆ.


ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಫಾತಿಮಾ ಅಫ್ನಾ ಮನೆಯಿಂದ ಶಾಲೆಗೆಂದು ತೆರಳಿದ್ದು, ಆದರೆ ಶಾಲೆಗೆ ಹೋಗಿರಲಿಲ್ಲ.

ಇಂದು ಶಾಲೆಯಲ್ಲಿ ಪರೀಕ್ಷೆ ಇತ್ತು ಎನ್ನಲಾಗಿದ್ದು, ಅಫ್ನ ಶಾಲೆಗೆ ಹೋಗದೆ ನೇರವಾಗಿ ಪರ್ಲಡ್ಕದ ಬಾಲವನಕ್ಕೆ ತೆರಳಿದ್ದಳು. ಐಡಿ ಕಾರ್ಡ್‌ ಇಲ್ಲದ ಕಾರಣ ಬಾಲವನದ ಸಿಬ್ಬಂದಿ ಆಕೆಯನ್ನು ಒಳಗೆ ಬಿಟ್ಟಿರಲಿಲ್ಲ. ಅಲ್ಲಿಂದ ಹಿಂದಿರುಗಿ ಬಂದ ಅಫ್ನ ಪರ್ಲಡ್ಕದಲ್ಲಿರುವ ಸಂಬಂಧಿಕರೊಬ್ಬರ ಮನೆಗೆ ತೆರಳಿ ನಾನು ಶಾಲೆಗೆ ಹೋಗಿಲ್ಲ, ಇಂದು ಇಲ್ಲಿ ಇರುವುದಾಗಿ ಹೇಳಿದ್ದಾಳೆ. ಸಂಬಂಧಿಕರ ಮನೆಮಂದಿ ಆಕೆಯನ್ನು ಶಾಲೆಗೆ ಬಿಟ್ಟು ಬರಲು ಮುಂದಾದಾಗ ಅಫ್ನ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಮನೆಯ ಅಕ್ಕಪಕ್ಕದಲ್ಲಿ ಹುಡುಕಾಟ ನಡೆಸಿದರೂ ಆಕೆ ಕಾಣಸಿಕ್ಕಿರಲಿಲ್ಲ. ಸಂಬಂಧಿಕರಿಂದ ಮಾಹಿತಿ ಪಡೆದ ಮನೆಯವರು ಬೆಳಗ್ಗಿನಿಂದಲೇ ಅಫ್ನಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಆದರೆ ಅಫ್ನ ಎಲ್ಲಿಯೂ ಪತ್ತೆಯಾಗಿಲ್ಲ.


ಬಳ್ಕಾಡ್ ನಿವಾಸಿ ಅಶ್ರಫ್‌ ಎಂಬವರ ಪುತ್ರಿ 6ನೇ ತರಗತಿಯಲ್ಲಿ ಕಲಿಯುತ್ತಿರುವ ಫಾತಿಮಾ ಅಫ್ನ ನಾಪತ್ತೆಯಾಗಿರುವುದಾಗಿ ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಫಾತಿಮಾ ಅಫ್ನ ಕಾಸರಗೋಡಿನಲ್ಲಿ ಪತ್ತೆಯಾಗಿದ್ದು, ಪುತ್ತೂರಿಗೆ ಕರೆತರಲು ಮನೆಮಂದಿ ಪೊಲೀಸರೊಂದಿಗೆ ಕಾಸರಗೋಡಿಗೆ ತೆರಳಿದ್ದಾರೆ.


ನಗರದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಕಲಿಯುತ್ತಿರುವ ಅಫ್ನ ಎಂದಿನಂತೆ ಬೆಳಿಗ್ಗೆ ಮನೆಯಿಂದ ಇತರ ಮಕ್ಕಳ ಜೊತೆ ರಾಜ್ಯ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಶಾಲೆಗೆಂದು ಬಂದಿದ್ದಳು.  ಈ ಹಿನ್ನೆಲೆಯಲ್ಲಿ ನಗರದ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಾಲಕಿ ಪತ್ತೆಯಾಗುವುದರೊಂದಿಗೆ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.

ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕಿನಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಎಲುಬು ಮತ್ತು ಕೀಲು ತಪಾಸಣೆ, ಹಾಗೂ ಫಿಸಿಯೋಥೇರೇಪಿ ಉಚಿತ ಶಿಬಿರ

Posted by Vidyamaana on 2024-01-25 16:33:53 |

Share: | | | | |


ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕಿನಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಎಲುಬು ಮತ್ತು ಕೀಲು ತಪಾಸಣೆ, ಹಾಗೂ ಫಿಸಿಯೋಥೇರೇಪಿ ಉಚಿತ ಶಿಬಿರ

ಪುತ್ತೂರು: ಗಣರಾಜ್ಯೋತ್ಸವ ಪ್ರಯುಕ್ತ ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕಿನಲ್ಲಿ ಜ. 26ರಂದು ಮಧ್ಯಾಹ್ನ 2ರಿಂದ 6ರವರೆಗೆ ಎಲುಬು ಮತ್ತು ಕೀಲು ತಪಾಸಣೆ, ಹಾಗೂ ಫಿಸಿಯೋಥೇರೇಪಿ ಉಚಿತ ಶಿಬಿರ ನಡೆಯಲಿದೆ.

ಈ ಶಿಬಿರದಲ್ಲಿ 1200 ರೂ. ಮೌಲ್ಯದ ಎಲುಬು ಸಾಂದ್ರತ ಪರೀಕ್ಷೆ (Bone mineral density test) ಅನ್ನು ಉಚಿತವಾಗಿ ಮಾಡಲಾಗುವುದು. ಪುತ್ತೂರಿನ ಖ್ಯಾತ ಎಲುಬು ಮತ್ತು ಕೀಲು ಸರ್ಜನ್ ಡಾ. ಸಚಿನ್ ಶಂಕರ್ ಹಾರಕೆರೆ ಅವರು ಶಿಬಿರದಲ್ಲಿ ಸಂದರ್ಶನಕ್ಕೆ ಲಭ್ಯರಿರುವರು. ಅಲ್ಲದೇ, ಫಿಸಿಯೋಥೇರೇಪಿ ತಜ್ಞರ ಸಂದರ್ಶನ ಹಾಗೂ ಫಿಸಿಯೋಥೇರೇಪಿ ಚಿಕಿತ್ಸೆ ಉಚಿತವಾಗಿ ನಡೆಯಲಿದೆ.

ಎಲುಬು ಮತ್ತು ಕೀಲು ಸಂಬಂಧಿಸಿದ ವ್ಯಾಧಿಗಳಾದ ಸಂಧಿ ವಾತಾ, ಆಮವಾತ, ಕತ್ತು ನೋವು, ಸೊಂಟ ನೋವು, ಭುಜ ನೋವು, ಎಲುಬು ಮುರಿತ, ಸ್ಪೋರ್ಟ್ಸ್ ಇಂಜ್ಯೂರಿ ಇತ್ಯಾದಿ ಸಮಸ್ಯೆಗಳಿರುವವರು ಶಿಬಿರದ ಪ್ರಯೋಜನವನ್ನು ಪಡೆಯಬಹುದು ಎಂದು ಪುರುಷರಕಟ್ಟೆ ಸಿದ್ಧಣ್ಣ ಕಾಂಪ್ಲೆಕ್ಸಿನಲ್ಲಿರುವ ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕಿನ ಚೀಫ್ ಫಿಸಿಷಿಯನ್ ಮತ್ತು ಆಯುರ್ವೇದ ತಜ್ಞ ಡಾ. ಸುಜಯ್ ಕೃಷ್ಣ ತಂತ್ರಿ ಕೆಮ್ಮಿಂಜೆ ಪ್ರಕಟಣೆಯಲ್ಲಿ ತಿಳಿಸಿದರು.

ಅಮೇರಿಕಾದ ಬಾಲ್ಟಿಮೋರ್ ಸೇತುವೆಗೆ ಡಿಕ್ಕಿ ಹೊಡೆದ ಕಾರ್ಗೋ ಹಡಗು

Posted by Vidyamaana on 2024-03-27 21:46:33 |

Share: | | | | |


ಅಮೇರಿಕಾದ ಬಾಲ್ಟಿಮೋರ್ ಸೇತುವೆಗೆ ಡಿಕ್ಕಿ ಹೊಡೆದ ಕಾರ್ಗೋ ಹಡಗು

ವಾಷಿಂಗ್ಟನ್, ಮಾ 27: ಹಡಗು ಡಿಕ್ಕಿ ಹೊಡೆದ ಪರಿಣಾಮ ಅಮೆರಿಕದ ಬಾಲ್ಟಿಮೋರ್‌ನ ಪ್ರಮುಖ ಸೇತುವೆಯೊಂದು ಮಂಗಳವಾರ ಕುಸಿದುಬಿದ್ದಿದೆ. ಸೇತುವೆ ನೀರಿಗೆ ಉರುಳಿದ್ದು, ಕೆಲವು ವಾಹನಗಳು ಸಹ ನೀರುಪಾಲಾಗಿವೆ. ಇದರಿಂದ ಭಾರಿ ಪ್ರಮಾಣದ ಸಾವು ನೋವಿನ ಭೀತಿ ಉಂಟಾಗಿದೆ.

ಭಯಾನಕ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ ಸಿನಿಮೀಯ ಘಟನೆಯ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಂಟೇನರ್ ಹಡಗು, ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯ ಸ್ತಂಭಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಅದರ ಕೆಲವು ಭಾಗಗಳು ಪಾಟಾಪ್‌ಸ್ಕೋ ನದಿಗೆ ಉರುಳಿದೆ. ಬೃಹತ್ ಸೇತುವೆಯ ಪ್ರಮುಖ ಭಾಗ ನದಿಗೆ ಬಿದ್ದಿದೆ.ಅಮೆರಿಕದ ಸ್ಥಳೀಯ ಕಾಲಮಾನ ರಾತ್ರಿ 1.30 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಕನಿಷ್ಠ 20 ಮಂದಿ ನೀರಿಗೆ ಬಿದ್ದಿರುವ ಶಂಕೆಯೊಂದಿಗೆ ರಕ್ಷಣಾ ತಂಡಗಳು ಶೋಧ ಕಾರ್ಯ ನಡೆಸಿವೆ. ಸುಮಾರು 3 ಕಿಮೀ ಉದ್ದದ ಬೃಹತ್ ಸೇತುವೆ ಕುಸಿತದ ಘಟನೆಯ ವಿಡಿಯೋ ವೈರಲ್ ಆಗಿದೆ. 300 ಮೀಟರ್ ಉದ್ದದ ಹಡಗು, ಉಕ್ಕಿನ ಸೇತುವೆಯನ್ನು ನೀರುಪಾಲು ಮಾಡಿದೆ. ಕ್ಷಣಮಾತ್ರದಲ್ಲಿ ಸೇತುವೆ ಕುಸಿದಿದ್ದು, ಈ ವೇಳೆ ಸಣ್ಣ ಪ್ರಮಾಣದ ಹಲವು ಸ್ಫೋಟಗಳು ಉಂಟಾಗಿವೆ.


ಡಿಕ್ಕಿ ಹೊಡೆದ ರಭಸಕ್ಕೆ ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬಹುಭಾಗ ನೀರಿನಲ್ಲಿ ಮುಳುಗಿದೆ. ಸಿಂಗಪುರ ಧ್ವಜವುಳ್ಳ ಕಂಟೇನರ್ ಹಡಗು ಡಾಲಿ, ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿನ ಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಡ್ಜ್‌ನ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದೆ ಎಂದು ಸಿನರ್ಜಿ ಮೆರೈನ್ ಗ್ರೂಪ್‌ ಮಾಲೀಕ ಗ್ರೇಸ್ ಓಷನ್ ಪ್ರೈ ಲಿ ತಿಳಿಸಿದೆ. ಹಡಗಿನಲ್ಲಿದ್ದ ಇಬ್ಬರು ಪೈಲಟ್‌ಗಳು ಸೇರಿದಂತೆ ಎಲ್ಲಾ ಸಿಬ್ಬಂದಿಯನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಲಾಗಿದೆ. ಯಾವುದೇ ಗಾಯಗಳಾದ ವರದಿಯಾಗಿಲ್ಲ ಎಂದು ಹೇಳಿದೆ. ವಿಶಾಲವಾದ ಪಿಲ್ಲರ್‌ಗಳ ನಡುವೆ ಸಾಕಷ್ಟು ಅಂತರವಿದ್ದರೂ, ಈ ಹಡಗು ಪಿಲ್ಲರ್‌ಗೆ ಡಿಕ್ಕಿ ಹೊಡೆದಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ."ಐ- 695 ಕೀ ಬ್ರಿಡ್ಜ್‌ನ ಎರಡೂ ಮಾರ್ಗಗಳ ಎಲ್ಲಾ ಲೇನ್‌ಗಳನ್ನು ಬಂದ್ ಮಾಡಲಾಗಿದೆ. ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ" ಎಂದು ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರ ತಿಳಿಸಿದೆ. ಘಟನೆ ನಡೆದ ಸಂದರ್ಭದಲ್ಲಿ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯಲ್ಲಿ 20 ನಿರ್ಮಾಣ ಕಾರ್ಮಿಕರು ಇದ್ದರು ಎನ್ನಲಾಗಿದೆ. ಎಷ್ಟು ವಾಹನಗಳು ನದಿ ನೀರಿಗೆ ಬಿದ್ದಿವೆ, ಹಾಗೂ ಅವುಗಳಲ್ಲಿ ಎಷ್ಟು ಜನರಿದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ದೊರಕಿಲ್ಲ. ಮುಳುಗು ತಜ್ಞರು, ರಕ್ಷಣಾ ತಂಡಗಳು ನೀರಿನಲ್ಲಿ ಇರಬಹುದಾದ ಜನರಿಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಿವೆ.


1.6 ಮೈಲು (2.6 ಕಿಮೀ) ಉದ್ದದ ನಾಲ್ಕು ಲೇನ್ ಸೇತುವೆಯನ್ನು 1977ರಲ್ಲಿ ಉದ್ಘಾಟಿಸಲಾಗಿತ್ತು. ಪ್ರತಿ ವರ್ಷ ಕೋಟ್ಯಂತರ ವಾಹನಗಳ ಇದರ ಮೇಲೆ ಓಡಾಡುತ್ತವೆ. ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿ ಪಕ್ಕದಲ್ಲಿನ ಪೂರ್ವ ಕರಾವಳಿಯ ಕೈಗಾರಿಕಾ ನಗರವಾದ ಬಾಲ್ಟಿಮೋರ್ ಸುತ್ತಮುತ್ತಲಿನ ರಸ್ತೆ ಸಂಪರ್ಕಗಳಿಗೆ ಈ ಸೇತುವೆ ಪ್ರಮುಖವಾಗಿದೆ.


ಅಮೆರಿಕದ ರಾಷ್ಟ್ರಗೀತೆಯಾದ ದಿ ಸ್ಟಾರ್- ಸ್ಪಾಂಗಲ್ಡ್ ಬ್ಯಾನರ್ ಅನ್ನು ರಚಿಸಿದ ಅಮೆರಿಕದ ವಕೀಲ, ಕವಿ ಫ್ರಾನ್ಸಿಸ್ ಸ್ಕಾಟ್ ಕೀ ಅವರ ಸ್ಮರಣಾರ್ಥ ಬಾಲ್ಟಿಮೋರ್ ಸೇತುವೆಗೆ ಅವರ ಹೆಸರು ಇರಿಸಲಾಗಿದೆ.

ದುರಂತ ಸಂಭವಿಸುವ ಮುನ್ನ ‘ಮೇ ಡೇ’ ಕರೆ!

ವಿಮಾನ ಹಾಗೂ ಹಡಗುಗಳಲ್ಲಿ ಯಾವುದೇ ರೀತಿಯ ಅಪಾಯ ಸನ್ನಿವೇಶ ಎದುರಾದಾಗ ‘ಮೇ ಡೇ’ ಕರೆ ಕೊಡಲಾಗುತ್ತದೆ. ಮಂಗಳವಾರ ಉಕ್ಕಿನ ಸೇತುವೆಗೆ ಹಡಗು ಡಿಕ್ಕಿ ಹೊಡೆಯುವ ಮುನ್ನವೂ ಹಡಗಿನಲ್ಲಿ ಇದ್ದ ಭಾರತೀಯ ಸಿಬ್ಬಂದಿ ಅಮೆರಿಕದ ಸ್ಥಳೀಯ ಆಡಳಿತಕ್ಕೆ ಮೇ ಡೇ ಕರೆ ಕೊಟ್ಟಿತ್ತು. ಹೀಗಾಗಿ, ಉಕ್ಕಿನ ಸೇತುವೆಯ ಎರಡೂ ಬದಿಯಲ್ಲಿ ವಾಹನ ಸಂಚಾರವನ್ನು ತಡೆ ಹಿಡಿಯಲಾಗಿತ್ತು.


"ಐ- 695 ಕೀ ಬ್ರಿಡ್ಜ್‌ನ ಎರಡೂ ಮಾರ್ಗಗಳ ಎಲ್ಲಾ ಲೇನ್‌ಗಳನ್ನು ಬಂದ್ ಮಾಡಲಾಗಿದೆ. ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ" ಎಂದು ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರ ತಿಳಿಸಿದೆ. ಘಟನೆ ನಡೆದ ಸಂದರ್ಭದಲ್ಲಿ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯಲ್ಲಿ 20 ನಿರ್ಮಾಣ ಕಾರ್ಮಿಕರು ಇದ್ದರು ಎನ್ನಲಾಗಿದೆ. ಎಷ್ಟು ವಾಹನಗಳು ನದಿ ನೀರಿಗೆ ಬಿದ್ದಿವೆ, ಹಾಗೂ ಅವುಗಳಲ್ಲಿ ಎಷ್ಟು ಜನರಿದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ದೊರಕಿಲ್ಲ. ಮುಳುಗು ತಜ್ಞರು, ರಕ್ಷಣಾ ತಂಡಗಳು ನೀರಿನಲ್ಲಿ ಇರಬಹುದಾದ ಜನರಿಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಿವೆ.

ಪುತ್ತೂರು ಕಬಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿಧ್ಯಾರ್ಥಿನಿ ಮಂಜುಶ್ರೀ ಮೃತ್ಯು

Posted by Vidyamaana on 2024-05-26 07:43:42 |

Share: | | | | |


ಪುತ್ತೂರು ಕಬಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿಧ್ಯಾರ್ಥಿನಿ ಮಂಜುಶ್ರೀ ಮೃತ್ಯು

ಪುತ್ತೂರು ಮೇ 25: ಕೆಲ ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಧ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಮೃತರನ್ನು ಮಿತ್ತೂರು ಸಮೀಪದ ಸೂರ್ಯ ನಿವಾಸಿ ಲಿಂಗಪ್ಪ ಗೌಡರ ಪುತ್ರಿ, ವಿವೇಕಾನಂದ ಕಾಲೇಜಿನ ಪದವಿ ವಿದ್ಯಾರ್ಥಿನಿ ಮಂಜುಶ್ರೀ (20) ಎಂದು ಗುರುತಿಸಲಾಗಿದೆ



Leave a Comment: