ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಶಾಸಕರ ಐಶಾರಾಮಿ ಕಚೇರಿಗೆ ನಗರಸಭೆಯ ತೆರಿಗೆ ಹಣ ವಿನಿಯೋಗ ಖಂಡನೀಯ

Posted by Vidyamaana on 2023-08-30 02:07:54 |

Share: | | | | |


ಶಾಸಕರ ಐಶಾರಾಮಿ ಕಚೇರಿಗೆ ನಗರಸಭೆಯ ತೆರಿಗೆ ಹಣ ವಿನಿಯೋಗ ಖಂಡನೀಯ

ಪುತ್ತೂರು: ಪುತ್ತೂರಿನಲ್ಲಿ ಶಾಸಕರ ಕಚೇರಿ ಲೋಕಾರ್ಪಣೆ ಆಗಿದೆ. ಇದಕ್ಕೆ ನಾವೆಲ್ಲ ಸಂತೋಷ ಪಡಬೇಕು. ಆದರೆ ಆ ಕಚೇರಿಗೆ ನಗರಸಭೆಯ ತೆರಿಗೆ ಹಣವನ್ನು ವಿನಿಯೋಗಿಸಿದ್ದು ಖಂಡನೀಯ. ಪುತ್ತೂರು ನಗರಸಭೆಯ ರೂ. 31ಲಕ್ಷ ವೆಚ್ಚ ಮಾಡಿ ಶಾಸಕರ ಐಶಾರಾಮಿ ಕಚೇರಿ ನಿರ್ಮಾಣ ಆಗಿದೆ. ಈ ಹಣವನ್ನು ನಗರಸಭೆಗೆ ಜಿಲ್ಲಾಧಿಕಾರಿಗಳು ಹಿಂದಿರುಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನ ಬಿಜೆಪಿ ನೇತೃತ್ವದಲ್ಲಿ ನಗರಸಭೆ ಸದಸ್ಯರೊಂದಿಗೆ ಪುತ್ತೂರು ನಗರಸಭೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಎಚ್ಚರಿಕೆ ನೀಡಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಶಾಸಕ ಅಶೋಕ್ ರೈ ಅವರ ಕಚೇರಿ ಮಾಡಲು ಅನುದಾನ ಎಲ್ಲಿಂದ ಬಂತು ಎಂಬುದನ್ನು ಯಾರು ನೋಡಿರಿಲ್ಲ. ಪುತ್ತೂರಿನ ಇತಿಹಾಸದಲ್ಲಿ ಶಾಸಕರಾಗಿದ್ದ ಸದಾನಂದ ಗೌಡ, ಶಕುಂತಳಾ ಶೆಟ್ಟಿ, ಮಲ್ಲಿಕಾಪ್ರಸಾದ್, ನಾನು ಕೂಡಾ ಸೇರಿದಂತೆ ಯಾರು ಕೂಡಾ ಐಶಾರಾಮದ ಕಚೇರಿ ಮಾಡಿಲ್ಲ. ಜನಾಮಾನ್ಯರ ತೆರಿಗೆ ಹಣದಲ್ಲಿ ಕಚೇರಿ ಮಾಡದೆ ತಾಲೂಕು ಪಂಚಾಯತ್, ತಾಲೂಕು ಆಡಳಿತ ಸೌಧದಲ್ಲೇ ಕಚೇರಿ ಮಾಡಿದ್ದೆವು. ಜನಸಾಮಾನ್ಯರಿಗೆ ಸುಲಭವಾಗಿ ಶಾಸಕರು ಸಿಗಬೇಕೆಂಬ ನಿಟ್ಟಿನಲ್ಲಿ ಎಲ್ಲಾ ಕಡೆ ಸರಕಾರಿ ಕಚೇರಿಯಲ್ಲೇ ಮಾಡಲಾಗಿತ್ತು. ಆದರೆ ಪುತ್ತೂರು ಶಾಸಕರು ತಮ್ಮ ಕಚೇರಿಗೆ ನಗರಸಭೆಯ ರೂ. 31ಲಕ್ಷವನ್ನು ವಿನಿಯೋಗಿಸಿದ್ದಾರೆ. ಪುತ್ತೂರು ನಗರಸಭೆಯ ಜನರ ತೆರಿಗೆ ಹಣದಲ್ಲಿ ಈ ಕಚೇರಿಗೆವಿನಿಯೋಗ ಮಾಡುವ ಕೆಲಸದ ಬದಲು ಅದು ಪುತ್ತೂರಿನ ಅಭಿವೃದ್ಧಿಗೆ ವಿನಿಯೋಗ ಆಗಬೇಕಾಗಿತ್ತು. ನಗರಸಭೆಯ ಸದಸ್ಯರಿಗೆ ಅನುದಾನ ಹಂಚಿಕೆ ಮಾಡಿದಲ್ಲಿ ಅವರು ತಮ್ಮ ತಮ್ಮ ವಾರ್ಡ್‌ಗಳ ಅಭಿವೃದ್ಧಿಗೆ ವಿನಿಯೋಗಿಸುತ್ತಿದ್ದರು. ಆದರೆ ಇಲ್ಲಿ ಶಾಸಕರು ಸೂಚನೆ ಕೊಟ್ಟು ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ನಗರಸಭೆಯ ಜನಪ್ರತಿನಿಧಿಗಳ ಗಮನಕ್ಕೂ ತಾರದೆ ನಿರ್ಣಯ ಮಾಡಿ ಅನುದಾನವನ್ನು ಶಾಸಕರ ಕಚೇರಿಗೆ ವಿನಿಯೋಗಿಸಲು ನೀಡಿರುವುದು ಖಂಡನೀಯ. ಈ ನಡುವೆ ಪುಡಾ ಕಚೇರಿನ್ನು ಖಾಸಗಿ ಕಟ್ಟಡಕ್ಕೆ ವರ್ಗಾವಣೆ ಮಾಡುವ ಮೂಲಕ ನಗರಸಭೆಗೆ ಪುಡಾದ ಬಾಡಿಗೆಯಿಂದ ಬರುವ ಅನುದಾನವು ಕಡಿತವಾಗಿದೆ. ಇದೀಗ ಪುಡಾವು ಹೆಚ್ಚುವರಿ ರೂ. 16ಸಾವಿರ ಬಾಡಿಗೆ ಕೊಡಬೇಕಾಗಿ ಬಂದಿದೆ. ಒಂದು ಶಾಸಕರ ಕಚೇರಿಗಾಗಿ ಎಷ್ಟು ಖರ್ಚನ್ನು ಸರಕಾರದ ಖಜಾನೆಯಿಂದ ಖರ್ಚು ಮಾಡುತ್ತಾರೆ ಎಂಬುದು ಜನಸಾಮಾನ್ಯರು ಯೋಚನೆ ಮಾಡಬೇಕು. ಭ್ರಷ್ಟಾಚಾರದ ಬಗ್ಗೆ ನಾವು ಮಾತನಾಡುತ್ತೇವೆ. ಆದರೆ ಎಲ್ಲಿಂದ ಭ್ರಷ್ಟಾಚಾರ ಆಗುತ್ತಿದೆ. ಎಲ್ಲಿ ಸರಕಾರದ ಹಣ ಪೋಲಾಗುತ್ತಿದೆ. ಇದನ್ನು ಯೋಚನೆ ಮಾಡಬೇಕು. ಅದಕ್ಕಾಗಿ ಪುತ್ತೂರು ನಗರಸಭೆಯ ಜನರು ತೆರಿಗೆ ರೂಪದಲ್ಲಿ ನಗರಸಭೆಗೆ ಕಟ್ಟಿದ ಹಣವನ್ನು ಮತ್ತೆ ನಗರಭೆಗೆ ಜಿಲ್ಲಾಧಿಕಾರಿಯವರು ಕೊಡಿಸಬೇಕು. ಆ ಹಣದಿಂದ ನಗರಸಭೆಯ ಸದಸ್ಯರು ತಮ್ಮ ತಮ್ಮ ವಾರ್ಡ್‌ಗಳಲ್ಲಿ ಅಭಿವೃದ್ಧಿ ಮಾಡಬಹುದು. ಇಲ್ಲವಾದಲ್ಲಿ ಮುಂದಿನ ದಿನ ಬಿಜೆಪಿಯಿಂದ ನಗರಸಭೆಯ ಮುಂದೆ ಪ್ರತಿಭಟನೆ ಅನಿವಾರ್ಯವಾಗಬಹುದು ಎಂದು ಅವರುಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ನಾನು ಶಾಸಕನಾಗಿದ್ದ ಸಂದರ್ಭ ಲೋಕೋಪಯೋಗಿ ಇಲಾಖೆಯವರು ನೇರ ಸರಕಾರದಿಂದ ನೀಡಿದ ರೂ. 3ಲಕ್ಷದಲ್ಲಿ ನನ್ನ ಕಚೇರಿ ನಿರ್ಮಾಣ ಆಗಿದೆ ಎಂದರು. ಆದರೆ ಈಗಿನ ಶಾಸಕರು ಒಂದು ಕಚೇರಿಗಾಗಿ ಇಷ್ಟೊಂದು ಹೊರೆ ಭರಿಸುವುದು ಅಗತ್ಯವಿತ್ತಾ ಎಂದು ಪ್ರಶ್ನಿಸಿದರು

 ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಎಸ್.ಶೆಟ್ಟಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ಸದಸ್ಯೆ ಗೌರಿ ಬನ್ನೂರು ಉಪಸ್ಥಿತರಿದ್ದರು.

ಬಾಲಿ ದ್ವೀಪದಲ್ಲಿ ತಮಿಳುನಾಡಿನ ನವದಂಪತಿ ದುರ್ಮರಣ

Posted by Vidyamaana on 2023-06-11 13:28:40 |

Share: | | | | |


ಬಾಲಿ ದ್ವೀಪದಲ್ಲಿ ತಮಿಳುನಾಡಿನ ನವದಂಪತಿ ದುರ್ಮರಣ

     ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈ ಮೂಲದ ನವವಿವಾಹಿತ ಜೋಡಿಯೊಂದು ಹನಿಮೂನ್​ ಪ್ರವಾಸದ ವೇಳೆ ದುರಂತ ಸಾವಿಗೀಡಾಗಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.ಮೃತರನ್ನು ಡಾ. ಲೋಕೇಶ್ವರನ್​ ಮತ್ತು ಡಾ. ವಿಬುಷ್ನಿಯಾ ಎಂದು ಗುರುತಿಸಲಾಗಿದೆ.ಇಬ್ಬರು ಕೂಡ ವೈದ್ಯರಾಗಿದ್ದರು. ಇತ್ತೀಚೆಗಷ್ಟೇ ಮದುವೆಯಾಗಿದ್ದರು. ಹನಿಮೂನ್​ಗೆಂದು ಇಂಡೋನೇಷ್ಯಾದ ಬಾಲಿ ದ್ವೀಪಕ್ಕೆ ತೆರಳಿದ್ದರು. ಫೋಟೋಗೆ ಪೋಸ್​ ಕೊಡುವ ವೇಳೆ ಇಬ್ಬರು ನೀರುಪಾಲಾಗಿದ್ದಾರೆ.ಜೂನ್​ 1ರಂದು ಮದುವೆಯಾದ ಲೋಕೇಶ್ವರನ್ ಮತ್ತು ವಿಬುಷ್ನಿಯಾ ತಮ್ಮ ಹೊಸ ಪ್ರಯಾಣವನ್ನು ಒಟ್ಟಿಗೆ ಆಚರಿಸಲು ಇಂಡೋನೇಷ್ಯಾಕ್ಕೆ ತೆರಳಿದ್ದರು. ಅನೇಕ ಜೋಡಿಗಳಂತೆ, ಅವರು ಕೂಡ ಸುಂದರವಾದ ನೆನಪುಗಳನ್ನು ಸೆರೆಹಿಡಿಯಲು ಉತ್ಸುಕರಾಗಿದ್ದರು. ಸಮುದ್ರದಲ್ಲಿ ಮೋಟಾರ್ ಬೋಟ್‌ನಲ್ಲಿ ಫೋಟೋಶೂಟ್ ಮಾಡಲು ನಿರ್ಧರಿಸಿದರು. ದುರಂತವೆಂದರೆ ಚಿತ್ರೀಕರಣದ ವೇಳೆ ಇಬ್ಬರೂ ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಎರಡೂ ಕುಟುಂಬಗಳು ಆಘಾತಕ್ಕೆ ಒಳಗಾಗಿವೆ. ಮಕ್ಕಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ದಂಪತಿ ಮೃತದೇಹಗಳನ್ನು ಹುಟ್ಟೂರಾದ ಚೆನ್ನೈಗೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ

ವಾಹನಗಳಿಗೆ HSRP ನಂಬರ್‌ ಪ್ಲೇಟ್‌ಗಳನ್ನು ಕಡ್ಡಾಯ ಡೆಡ್‌ಲೈನ್‌ ಮುಂದಕ್ಕೆ ???

Posted by Vidyamaana on 2023-10-26 10:03:03 |

Share: | | | | |


ವಾಹನಗಳಿಗೆ HSRP ನಂಬರ್‌ ಪ್ಲೇಟ್‌ಗಳನ್ನು ಕಡ್ಡಾಯ ಡೆಡ್‌ಲೈನ್‌ ಮುಂದಕ್ಕೆ ???

ಬೆಂಗಳೂರು: ವಾಹನಗಳಿಗೆ ನವೀಕೃತ ನಂಬರ್ ಪ್ಲೇಟ್ ಅಳವಡಿಸಲು ನಿಗದಿಪಡಿಸಲಾಗಿದ್ದ ಗಡುವನ್ನು ಪುನಃ 2 ಅಥವಾ 3 ತಿಂಗಳು ವಿಸ್ತರಣೆ ಮಾಡಲು ಸಾರಿಗೆ ಇಲಾಖೆ ತೀರ್ವನಿಸಿದೆ. ನವೆಂಬರ್ ಮೊದಲ ವಾರದಲ್ಲಿ ಹೊಸ ಆದೇಶ ಹೊರಬೀಳಲಿದೆ.


ಕರ್ನಾಟಕ ಸಾರಿಗೆ ಇಲಾಖೆಯೂ ಏಪ್ರಿಲ್‌ 1, 2019ಕ್ಕೂ ಮುನ್ನ ನೋಂದಣಿಯಾದ ವಾಹನಗಳಿಗೆ HSRP ನಂಬರ್‌ ಪ್ಲೇಟ್‌ಗಳನ್ನು ಕಡ್ಡಾಯಗೊಳಿಸಿದೆ. ಅದಲ್ಲದೇ ನವೆಂಬರ್ 17 ಡೆಡ್‌ಲೈನ್‌ ಅನ್ನು ಕೂಡ ಫಿಕ್ಸ್‌ ಮಾಡಿತ್ತು. ಅಳವಡಿಕೆ ಮಾಡದವರಿಗೆ ದಂಡ ವಿಧಿಸಲಾಗುತ್ತೆ ಎಂದು ಸೂಚಿಸಲಾಗಿತ್ತು. 2 ವೀಲರ್ ಕೂಡ ಇದರಿಂದ ಹೊರತಲ್ಲ.


ಆದರೆ, ಹೊಸ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ಗಳು ಎಲ್ಲಿ ಸಿಗುತ್ತವೆ ಎಂಬ ಸ್ಪಷ್ಟ ಮಾಹಿತಿಯನ್ನು ನೀಡದಿರುವುದರಿಂದ ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದಾರೆ.


ಈವರೆಗೂ ರಾಜ್ಯದಲ್ಲಿ ಬರೀ 2.30 ಲಕ್ಷ ವಾಹನಗಳಿಗೆ ಮಾತ್ರ ಎಚ್​ಎಸ್​ಆರ್​ಪಿ ಅಳವಡಿಸಲಾಗಿದೆ. 1950ರಿಂದಲೂ ಆಗಿರುವ ನೋಂದಣಿ ಪ್ರಕಾರ ರಾಜ್ಯದಲ್ಲಿ 2.15 ಕೋಟಿ ಹಳೇ ವಾಹನಗಳಿವೆ. 2019ರಿಂದ ಹಿಂದಿನ 15 ವರ್ಷದಲ್ಲಿ ನೋಂದಣಿಯಾಗಿರುವ ವಾಹನಗಳ ಲೆಕ್ಕ ತೆಗೆದುಕೊಂಡರೆ ಅಂದಾಜು 1.70 ಕೋಟಿ ವಾಹನಗಳಿವೆ.


ನ.17ರ ಒಳಗೆ ಒಂದೂವರೆ ಕೋಟಿ ವಾಹನಗಳಿಗೆ ನಾಮಫಲಕ ಅಳವಡಿಕೆ ಸಾಧ್ಯವಿಲ್ಲ. ಹೀಗಾಗಿ 2 ಅಥವಾ 3 ತಿಂಗಳು ಅವಧಿ ವಿಸ್ತರಿಸುವ ಬಗ್ಗೆ ಅಧಿಕಾರಿಗಳ ಹಂತದಲ್ಲಿ ಮಾತುಕತೆ ನಡೆದಿದೆ. ಎಚ್​ಎಸ್​ಆರ್​ಪಿ ಅಳವಡಿಸಲು ರಾಜ್ಯಾದ್ಯಂತ 4000ಕ್ಕೂ ಅಧಿಕ ಡೀಲರ್ ಪಾಯಿಂಟ್​ಗಳನ್ನು ಸಾರಿಗೆ ಇಲಾಖೆ ಗುರುತಿಸಿದೆ.

ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

Posted by Vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

ಚಿಕ್ಕಮಗಳೂರು :ಟ್ರಕ್ಕಿಂಗ್ ಹೋಗಿದ್ದ ರಕ್ಷಿತ್ ಹೃದಯಘಾತದಿಂದ ಮೃತ್ಯು

Posted by Vidyamaana on 2023-06-30 23:43:11 |

Share: | | | | |


ಚಿಕ್ಕಮಗಳೂರು :ಟ್ರಕ್ಕಿಂಗ್ ಹೋಗಿದ್ದ ರಕ್ಷಿತ್ ಹೃದಯಘಾತದಿಂದ ಮೃತ್ಯು

ಚಿಕ್ಕಮಗಳೂರು : ಟ್ರಕ್ಕಿಂಗ್ ಬಂದಿದ್ದ ಪ್ರವಾಸಿಗ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ರಕ್ಷಿತ್ (27) ಮೃತಪಟ್ಟ ಯುವಕ ಮೈಸೂರು ಮೂಲದ 7 ಯುವಕರ ತಂಡ ಟ್ರಕ್ಕಿಂಗ್ ಗೆ ಆಗಮಿಸಿದ್ದರು. ಕುದುರೆಮುಖದಿಂದ-ನೇತ್ರಾವತಿ ಪೀಕ್ ಸ್ಪಾಟ್ ಗೆ ತೆರಳಿದ್ದ ವೇಳೆ ಮಾರ್ಗ ಮಧ್ಯದಲ್ಲಿ ರಕ್ಷಿತ್‌ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಚಿಕ್ಕಮಗಳೂರು-ದಕ್ಷಿಣಕನ್ನಡ ಜಿಲ್ಲೆಯ ನೇತ್ರಾವತಿ ಪೀಕ್ ಸ್ಪಾಟ್ ನಿಂದ ಮೃತದೇಹವನ್ನ ಪೊಲೀಸರು ಕಳಸಕ್ಕೆ ತಂದಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೃದಯಾಘಾತ ಸಂಭವಿಸಿದೆ.

ಎ.24 : ಕಲ್ಲಾರೆ ಶಿವಬ್ರಾಹ್ಮಣ ಸಮಾಜ ಸೇವಾ ಸಂಘದ ಶಿವಕೃಪಾ ಸಭಾಭವನ ಲೋಕಾರ್ಪಣೆ

Posted by Vidyamaana on 2024-04-21 08:44:30 |

Share: | | | | |


ಎ.24 : ಕಲ್ಲಾರೆ ಶಿವಬ್ರಾಹ್ಮಣ ಸಮಾಜ ಸೇವಾ ಸಂಘದ ಶಿವಕೃಪಾ ಸಭಾಭವನ ಲೋಕಾರ್ಪಣೆ

ಪುತ್ತೂರು: ಕಲ್ಲಾರೆ ಶಿವಬ್ರಾಹ್ಮಣ್ಯ (ಸ್ಥಾನಿಕ) ಸಮಾಜ ಸೇವಾ ಸಂಘ ೧೯೩೬ರಲ್ಲಿ ಸ್ಥಾಪನೆಗೊಂಡು, ಕಳೆದ೮೮ ವರ್ಷಗಳಿಂದ ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಾ ಬಂದಿದೆ. ನೂತನವಾಗಿ ಸುಮಾರು ೧.೫೦ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ ಶಿವ ಕೃಪಾ ಸಭಾಭವನದ ಲೋಕಾರ್ಪಣೆ ಏ.೨೪ರಂದು ಸಾಯಂಕಾಲ ೬.೩೦ಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರಿಂದ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಸ್. ಕೆ. ಜಗನ್ನಿವಾಸ ರಾವ್ ಹೇಳಿದರು.



Leave a Comment: