ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಸುಳ್ಯ; ಖ್ಯಾತ ಐಸ್ ಕ್ರೀಂ ಉದ್ಯಮಿ ಕಾಪಿಲ ಗಿರಿಯಪ್ಪ ಗೌಡರ ಸೊಸೆ ಐಶ್ವರ್ಯ ಆತ್ಮಹತ್ಯೆಗೆ ಶರಣು

Posted by Vidyamaana on 2023-10-27 12:05:25 |

Share: | | | | |


ಸುಳ್ಯ; ಖ್ಯಾತ ಐಸ್ ಕ್ರೀಂ ಉದ್ಯಮಿ ಕಾಪಿಲ ಗಿರಿಯಪ್ಪ ಗೌಡರ ಸೊಸೆ ಐಶ್ವರ್ಯ ಆತ್ಮಹತ್ಯೆಗೆ ಶರಣು

ಸುಳ್ಯ ;ಡೈರಿ ರಿಚ್ ಐಸ್ ಕ್ರೀಂನ ಉದ್ಯಮಿ ಕನಕಮಜಲಿನ ಕಾಪಿಲ ಗಿರಿಯಪ್ಪ ಗೌಡರ ಸೊಸೆ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಿರಿಯಪ್ಪ ಗೌಡ ಅವರ ಪುತ್ರ ರಾಜೇಶ್ ಇವರ ಪತ್ನಿ ಐಶ್ವರ್ಯ(26) ಆತ್ಮಹತ್ಯೆಗೆ ಶರಣಾದವರು.


ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆ ಸುಬ್ರಹ್ಮಣ್ಯ ಗೌಡ ಹಾಗೂ ಉಷಾ ದಂಪತಿಯ ಪುತ್ರಿಯಾದ ಐಶ್ವರ್ಯ ನಾಲ್ಕು ವರ್ಷಗಳ ಹಿಂದೆ ರಾಜೇಶ್ ಅವರನ್ನು ವಿವಾಹವಾಗಿದ್ದರು. ಐಶ್ವರ್ಯ ರವರು ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಪತಿ ರಾಜೇಶ್ ಸ್ವಂತ ಐಸ್ ಕ್ರೀಮ್ ಪಾರ್ಲರ್ ನಡೆಸಿಕೊಂಡು ಬೆಂಗಳೂರಿನಲ್ಲೇ ವಾಸವಾಗಿದ್ದರು.


ಐಶ್ವರ್ಯಳ ತಂದೆ ತಾಯಿ ಕೊಡ ಬೆಂಗಳೂರಿನಲ್ಲೇ ನೆಲೆಸಿದ್ದು, ಕೆಲ ಸಮಯಗಳಿಂದ ಐಶ್ವರ್ಯ ತನ್ನ ತಾಯಿ ಮನೆಗೆ ಬಂದಿದ್ದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಪುತ್ತೂರು ರಾಜಕೀಯಕ್ಕೆ ಅಕ್ಷರಮಾಲೆಯ ಆರಂಭದ ಪಾಠ

Posted by Vidyamaana on 2023-04-18 07:27:15 |

Share: | | | | |


ಪುತ್ತೂರು ರಾಜಕೀಯಕ್ಕೆ ಅಕ್ಷರಮಾಲೆಯ ಆರಂಭದ ಪಾಠ

ಪುತ್ತೂರು: ರಾಜ್ಯ ರಾಜಕಾರಣವೇ ಪುತ್ತೂರಿನತ್ತ ತಿರುಗಿ ನೋಡುವಂತಾಗಿದೆ. ಬಂಡಾಯ, ಪಕ್ಷಾಂತರ ಇದರ ಹೊರತಾಗಿ ಕೆಲ ಅನೂಹ್ಯ ಘಟನೆಗಳಿಗೆ ಪುತ್ತೂರು ಸಾಕ್ಷಿಯಾಗಿದೆ. ಮುಂದೇನು ಎಂದು ಮತದಾರರು ತುದಿಗಾಲಲ್ಲಿ ನಿಂತುಕೊಳ್ಳುವಂತಾಗಿದೆ. ಇದರ ನಡುವೆ ರಾಜಕೀಯಕ್ಕೆ ಅಕ್ಷರಮಾಲೆಯ ಆರಂಭದ ಪಾಠ ಮಾಡಲು ಹೊರಟ್ಟಿದ್ದಾರೆ ಅಭ್ಯರ್ಥಿಗಳು.

ಅ+ಅ+ಆ… ಇದು ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಹೆಸರಿನ ಮೊದಲ ಅಕ್ಷರ. ಅಶೋಕ್ ಕುಮಾರ್ ರೈ, ಅರುಣ್ ಕುಮಾರ್ ಪುತ್ತಿಲ, ಆಶಾ ತಿಮ್ಮಪ್ಪ ಈ ಮೂರು ಅಭ್ಯರ್ಥಿಗಳ ಹೆಸರಿನ ಮೊದಲ ಅಕ್ಷರ ಅಕ್ಷರಮಾಲೆಯ ಮೊದಲ ಅಕ್ಷರದಿಂದ ಆರಂಭವಾಗುತ್ತದೆ. ಅಂದರೆ ಇವರುಗಳು ಪುತ್ತೂರಿನ ರಾಜಕೀಯಕ್ಕೆ ಹೊಸ ಪಾಠ ಹೇಳಲು ಹೊರಟಿದ್ದಾರೆಯೇ ಎಂಬಂತೆ ಭಾಸವಾಗುವಂತಿದೆ.

      ಇದೀಗ ರಾಜಕೀಯ ಗಂಭೀರತೆ ಪಡೆದುಕೊಂಡಿದ್ದರೆ, ಇಂತಹದ್ದೊಂದು ಚೋದ್ಯದ ಸಂಗತಿ ಎಲ್ಲೆಡೆ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾದವರು ಸಮಾಜ ಸೇವಕ ಎಂದೇ ಗುರುತಿಸಿಕೊಂಡ ಅಶೋಕ್ ಕುಮಾರ್ ರೈ. ಇನ್ನು, ಬಿಜೆಪಿಯ ಟಿಕೇಟ್ ನಿರೀಕ್ಷೆಯಲ್ಲಿದ್ದು, ಇದೀಗ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವವರು ಹಿಂದೂ ಫೈರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ. ಬಿಜೆಪಿಯ ಅಧಿಕೃತ ಅಭ್ಯರ್ಥಿ ಲೇಡಿ ಬಾಂಡ್ ಆಶಾ ತಿಮ್ಮಪ್ಪ.

ಈ ಮೂವರ ತ್ರಿಕೋನ ಸ್ಪರ್ಧೆ ರಾಜಕೀಯಕ್ಕೆ ಹೊಸ ಭಾಷ್ಯ ಬರೆಯಬಹುದೇ? ಅಥವಾ ರಾಜ್ಯ, ರಾಷ್ಟ್ರ ನಾಯಕರಿಗೆ ಹೊಸ ಸಂದೇಶವನ್ನು ಕಳುಹಿಸಬಹುದೇ? ಅಭ್ಯರ್ಥಿಗಳ ಸೋಲು – ಗೆಲುವು ರಾಜಕೀಯಕ್ಕೆ ಹೊಸ ತಿರುವನ್ನೇ ನೀಡಬಹುದೇ? ಹೀಗೆ ನಾನಾ ರೀತಿಯ ಪ್ರಶ್ನೆಗಳು ಮತದಾರರ ತಲೆಯಲ್ಲಿ ಓಡಾಡುತ್ತಿವೆ.

ನಿಫಾ ವೈರಸ್ ಎಂದರೇನು? ಲಕ್ಷಣಗಳೇನು ಗೊತ್ತಾ? ಈ ಸೋಂಕಿಗೆ ಚಿಕಿತ್ಸೆ ಇಲ್ಲವೇ?

Posted by Vidyamaana on 2023-09-14 16:49:44 |

Share: | | | | |


ನಿಫಾ ವೈರಸ್ ಎಂದರೇನು? ಲಕ್ಷಣಗಳೇನು ಗೊತ್ತಾ? ಈ ಸೋಂಕಿಗೆ ಚಿಕಿತ್ಸೆ ಇಲ್ಲವೇ?

1998ರಲ್ಲಿ ಮಲೇಷ್ಯಾದ ಕಾಂಪುಂಗ್ ಸುಂಗಾತ್ ನಿಫಾ ವಲಯದಲ್ಲಿ ಕಾಣಿಸಿಕೊಂಡ ಮಾರಕ ಜ್ವರಕ್ಕೆ ಕಾರಣವಾದ ವೈರಸನ್ನು ನಿಫಾ ವೈರಸ್ ಎಂದು ಕರೆಯುತ್ತಾರೆ. ನಿಫಾ ವೈರಸ್ ಬಾವಲಿಗಳ ಮೂಲಕ ಹರಡುತ್ತದೆ. ಈ ಕ್ಷಣದವರೆಗೆ ಈ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ ನಿಫಾ ವೈರಸ್ ಮಾರಣಾಂತಿಕ ಎಂದೇ ಕುಖ್ಯಾತಿ ಪಡೆದಿದೆ.ಈ ವೈರಸ್ ಪತ್ತೆಯಾದರೆ ಶೇ.74ರಷ್ಟು ಸಾವು ಖಚಿತ ಎನ್ನಲಾಗಿದೆ


ವೈರಸ್ ಹೇಗೆ ಹರಡುತ್ತದೆ?: ಸೋಂಕಿರುವ ಬಾವಲಿ ಕಚ್ಚಿದ ಹಣ್ಣನ್ನು ತಿನ್ನವುದರಿಂದ ವೈರಸ್‌ ಹರಡುವ ಸಾಧ್ಯತೆಗಳಿವೆ. ಅಲ್ಲದೆ ಇದೊಂದು ಸಾಂಕ್ರಾಮಿಕ ಕಾಯಿಲೆಯಾದ್ರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹೀಗಾಗಿ ಬಾವಲಿಗಳು ಕಚ್ಚಿದ ಸಾಧ್ಯತೆಯಿರುವ ಹಣ್ಣುಗಳನ್ನು ತಿನ್ನಲೇಬೇಡಿ.


ನಿಫಾ ವೈರಸ್ ಲಕ್ಷಣಗಳೇನು?

* ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ

* ಕೆಲವರಲ್ಲಿ ಅಪಸ್ಮಾರದ ಲಕ್ಷಣಗಳು ಕಾಣಿಸುತ್ತವೆ

* ಈ ಲಕ್ಷಣಗಳು ಸಾಮಾನ್ಯವಾಗಿ 10ರಿಂದ 12 ದಿನ ಕಾಣಿಸುತ್ತದೆ

* ಬಳಿಕ ಪ್ರಜ್ಞಾಹೀನರಾಗುತ್ತಾರೆ

* ನಂತರ ಈ ಜ್ವರ ತೀವ್ರವಾಗಿ ಮೆದುಳಿಗೆ ವ್ಯಾಪಿಸುತ್ತದೆ

* ಕೆಲವು ಬಾರಿ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಸಾವು ಸಂಭವಿಸಬಹುದು

ನಿಫಾ ವೈರಸ್ ವಿಶ್ವದ ಯಾವೆಲ್ಲಾ ಭಾಗಗಳಲ್ಲಿ

ಹರಡಿತ್ತು?

ನಿಫಾ ವೈರಸ್ ಮೊದಲು ಕಾಣಿಸಿಕೊಂಡಿದ್ದು, 1998ರಲ್ಲಿ.. ಮಲೇಷ್ಯಾ ಹಾಗೂ ಸಿಂಗಪುರ ದೇಶಗಳಲ್ಲಿ ನೂರಾರು ಜನರನ್ನು ಈ ಮಹಾಮಾರಿ ಬಲಿ ತೆಗೆದಿಕೊಂಡಿತ್ತು. 300ಕ್ಕೂ ಹೆಚ್ಚು ಮಂದಿ ಸೋಂಕಿತರಾಗಿದ್ದರು. ಒಟ್ಟು ಸೋಂಕಿತರ ಪೈಕಿ ಶೇ. 70 ರಿಂದ 86ರಷ್ಟು ಮಂದಿ ಸಾವನ್ನಪ್ಪಿದ್ದರು. 1998 ರಿಂದ 2015ರವರೆಗೆ ವಿಶ್ವಾದ್ಯಂತ ಒಟ್ಟು 600ಕ್ಕೂ ಹೆಚ್ಚು ನಿಫಾ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ತೆ ಹೇಳಿದೆ. 2001ರಲ್ಲಿ ಭಾರತ ಹಾಗೂ ಬಾಂಗ್ಲಾ ದೇಶಗಳಲ್ಲಿ ಒಟ್ಟು 91 ಮಂದಿ ನಿಫಾ ವೈರಸ್ ಸೋಂಕಿಗೆ ತುತ್ತಾಗಿದ್ದರು. ಈ ಪೈಕಿ 62 ಮಂದಿ ಸಾವನ್ನಪ್ಪಿದ್ದರು. 2018ರಲ್ಲಿ


ಕೇರಳದಲ್ಲಿ 21 ಮಂದಿ ನಿಫಾ ಮಾರಿಗೆ600ಕ್ಕೂ ಹೆಚ್ಚು ನಿಫಾ ಪ್ರಕರಣಗಳು ವರದಿಯಾಗಿವ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 2001ರಲ್ಲಿ ಭಾರತ ಹಾಗೂ ಬಾಂಗ್ಲಾ ದೇಶಗಳಲ್ಲಿ ಒಟ್ಟು 91 ಮಂದಿ ನಿಫಾ ವೈರಸ್ ಸೋಂಕಿಗೆ ತುತ್ತಾಗಿದ್ದರು. ಈ ಪೈಕಿ 62 ಮಂದಿ ಸಾವನ್ನಪ್ಪಿದ್ದರು. 2018ರಲ್ಲಿ ಕೇರಳದಲ್ಲಿ 21 ಮಂದಿ ನಿಫಾ ಮಾರಿಗೆ ಬಲಿಯಾಗಿದ್ದರು. 2019 ಹಾಗೂ 2021ರಲ್ಲೂ ಕೇರಳದಲ್ಲಿ ಕಾಣಿಸಿಕೊಂಡಿದ್ದ ನಿಫಾ, ಇದೀಗ ಮತ್ತೆ ಕೇರಳದಲ್ಲಿ ತಲೆ ಎತ್ತಿದೆ.

ಉಡುಪಿಯಲ್ಲಿ ಗ್ಯಾಂಗ್ ವಾರ್: ಇಬ್ಬರು ಆರೋಪಿಗಳ ಬಂಧನ

Posted by Vidyamaana on 2024-05-25 11:35:04 |

Share: | | | | |


ಉಡುಪಿಯಲ್ಲಿ ಗ್ಯಾಂಗ್ ವಾರ್: ಇಬ್ಬರು ಆರೋಪಿಗಳ ಬಂಧನ

ಉಡುಪಿ: ನಡು ರಸ್ತೆಯಲ್ಲಿ ಗ್ಯಾಂಗ್ ವಾರ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಕಾಪುವಿನ ಗರುಡ ಗ್ಯಾಂಗಿನ ಆಶಿಕ್ ಮತ್ತು ರಕೀಬ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್ ನಲ್ಲಿದ್ದ ಉಳಿದವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉದ್ಯಮಿ ಅನ್ಸಾರ್ ಬೆಳ್ಳಾರೆಯವರಿಂದ ಶಾಸಕರಿಗೆ ಅಭಿನಂದನೆ

Posted by Vidyamaana on 2023-08-28 09:55:32 |

Share: | | | | |


ಉದ್ಯಮಿ ಅನ್ಸಾರ್ ಬೆಳ್ಳಾರೆಯವರಿಂದ ಶಾಸಕರಿಗೆ ಅಭಿನಂದನೆ

ಪುತ್ತೂರು: ದುಬಾಯಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ,ಸಮಾಜ ಸೇವಕರಾದ ಅನ್ಸಾರ್ ಬೆಳ್ಳಾರೆಯವರು ಪುತ್ತೂರು ಶಾಸಕರನ್ನು ಅಭಿನಂದಿಸಿದರು.

ಆ.28 ರಂದು ಶಾಸಕರ ಕಚೇರಿಗೆ ಭೇಟಿ ನೀಡಿದ ಅವರು ಅಭಿವೃದ್ದಿ ವಿಚಾರದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಲು ಮುಂದಾಗಿರುವ ನೋವು ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ದಿ ಗೂ ಸಹಕಾರ ಮಾಡಬೇಕು ಎಂದು ಶಾಸಕರಲ್ಲಿ‌ಮನವಿ ಮಾಡಿದರು. ಈ ಸಂದರ್ಬದಲ್ಲಿ‌ ಸಲೀಂ ಕೋಡಿಂಬಾಡಿ ಉಪಸ್ಥಿತರಿದ್ದರು.

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವ್ಯಸಗಿದ ಪ್ರಕರಣ : ಅರ್ಜಿ ವಾಪಸ್ ಪಡೆದ HD ರೇವಣ್ಣ

Posted by Vidyamaana on 2024-05-03 12:33:26 |

Share: | | | | |


ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವ್ಯಸಗಿದ ಪ್ರಕರಣ : ಅರ್ಜಿ ವಾಪಸ್ ಪಡೆದ HD ರೇವಣ್ಣ

ಬೆಂಗಳೂರು : ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಸಗಿದ ಕೇಸ್ ಸಂಬಂಧಿಸಿದಂತೆ ಶಾಸಕ HD ರೇವಣ್ಣ ನಿನ್ನೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಕುರಿತಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಿತು. ನಂತರ ಎಸ್‌ಐಟಿ ಹೇಳಿಕೆ ಹಿನ್ನೆಲೆಯಲ್ಲಿ ಇದೀಗ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಾಪಸ್ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.



Leave a Comment: