ಅಪ್ರಾಪ್ತಗೆ ಲೈಂಗಿಕ ಕಿರುಕುಳ ಆರೋಪ. ಬೆಳಿಯೂರುಕಟ್ಟೆ ನಿವಾಸಿ ಪ್ರಸಾದ್ ಬಂಧನ

ಸುದ್ದಿಗಳು News

Posted by vidyamaana on 2024-07-24 10:52:54 |

Share: | | | | |


ಅಪ್ರಾಪ್ತಗೆ ಲೈಂಗಿಕ ಕಿರುಕುಳ ಆರೋಪ. ಬೆಳಿಯೂರುಕಟ್ಟೆ ನಿವಾಸಿ ಪ್ರಸಾದ್ ಬಂಧನ

ಪುತ್ತೂರು : ಅಪ್ರಾಪ್ತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬೆಳಿಯೂರುಕಟ್ಟೆ ನಿವಾಸಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

ಬೆಳಿಯೂರುಕಟ್ಟೆ ನಿವಾಸಿ ಅಪ್ರಾಪ್ತೆಗೆ ವಿವಾಹಿತ ಪ್ರಸಾದ್ ಎಂಬ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

 Share: | | | | |


ರಾಧಾಸ್ ಜವಳಿ ಮಳಿಗೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳ ಆಹ್ವಾನ

Posted by Vidyamaana on 2024-02-20 12:56:38 |

Share: | | | | |


ರಾಧಾಸ್ ಜವಳಿ ಮಳಿಗೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳ ಆಹ್ವಾನ

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯಲ್ಲಿರುವ ಪ್ರತಿಷ್ಠಿತ ಜವಳಿ ಮಳಿಗೆಯಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ.

ರಾಧಾಸ್ ಸಿಲ್ಕ್ಸ್, ಟೆಕ್ಸ್ ಟೈಲ್, ರೆಡಿಮೇಡ್ ಸಂಸ್ಥೆಗೆ ಬಿಲ್ಲಿಂಗ್, ಸೇಲ್ಸ್ ಹಾಗೂ ಟೈಲರ್ ಬೇಕಾಗಿದ್ದಾರೆ. ಅನುಭವಸ್ಥ ಹಾಗೂ ಸ್ಥಳೀಯರಿಗೆ ಆದ್ಯತೆ. ಉತ್ತಮ ವೇತನ ನೀಡಲಾಗುವುದು. ಆಸಕ್ತರು ಸಂಸ್ಥೆಯ ಕಚೇರಿಗೆ ಭೇಟಿ ನೀಡುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ರೈ ಎಜುಕೇಶನಲ್ ಟ್ರಸ್ಟ್‌ ನಿಂದ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸುಗಳ ಬಗ್ಗೆ ಮಾಹಿತಿ ಕಾರ್ಯಾಗಾರ

Posted by Vidyamaana on 2024-03-23 07:56:34 |

Share: | | | | |


ರೈ ಎಜುಕೇಶನಲ್ ಟ್ರಸ್ಟ್‌ ನಿಂದ  ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸುಗಳ ಬಗ್ಗೆ ಮಾಹಿತಿ ಕಾರ್ಯಾಗಾರ

ಪುತ್ತೂರು: ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀರಾಮಕೃಷ್ಣ ಪ್ರೌಢ ಶಾಲೆ ಕೊಂಬೆಟ್ಟು ಇದರ ಜಂಟಿ ಆಶ್ರಯದಲ್ಲಿ ನಾಳೆ (ಮಾ. ೨೩ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಾಗಾರ ನಡೆಯಲಿದೆ ಎಂದು ಟ್ರಸ್ಟ್‌ನ ಕಾಯಾಧ್ಯಕ್ಷರಾದ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.

ಮಾ. ೨೩ ರಂದು ಬೆಳಿಗ್ಗೆ ೧೧ ಗಂಟೆಗೆ ಸುಂದರ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪಿಯುಸಿ ನಂತರ ವಿದ್ಯಾರ್ಥಿಗಳು ಯಾವ ಕೋರ್ಸು ಕಲಿತರೆ ಏನು ಉದ್ಯೋಗ ಪಡೆದುಕೊಳ್ಳಬಹುದು, ಕೋರ್ಸುಗಳು ಎಲ್ಲೆಲ್ಲಿ ಸಿಗುತ್ತದೆ, ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ವೃತ್ತಿಪರ ಕೋರ್ಸುಗಳು ಹೇಗೆ ಪರಿಣಾಮಕಾರಿ ಎಂಬ ವಿಚಾರದ ಬಗ್ಗೆ ಕಾರ್ಯಾಗಾರ ನಡೆಯಲಿದೆ.


ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಪಾತ್ರ ಕಾರ್ಯಾಗಾರವನ್ನು ಉದ್ಘಾಟನೆ ಮಾಡಲಿದ್ದಾರೆ.ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ಳಾರೆ ಸಪಪೂ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪಿ ವಿ ಸೂರ್ಯಾನಾರಾಯಣರವರು ಕಾರ್ಯಾಗಾರ ನಡೆಸಿಕೊಡಲಿದ್ದು, ಕಾರ್ಯಕ್ರಮದಲ್ಲಿ ಶ್ರೀರಾಮಕೃಷ್ಣ ಪ್ರೌಢ ಶಾಲೆ ಕೊಂಬೆಟ್ಟಿ ಇದರ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ, ಕ್ಯಾಡೊಕಾನ್ ವಿದ್ಯಾ ಸಂಸ್ಥೆ ಬೆಂಗಳೂರು ಇದರ ಶ್ರದ್ದಾ ಎಂ ರವರು ಭಾಗವಹಿಸಲಿದ್ದಾರೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಸಂತನ್ ನಿಧನ

Posted by Vidyamaana on 2024-02-28 11:19:42 |

Share: | | | | |


ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಸಂತನ್ ನಿಧನ

ರಾಜೀವ್​ ಗಾಂಧಿ(Rajiv Gandhi) ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಸಂತನ್​(Santhan) ಬುಧವಾರ ಬೆಳಗ್ಗೆ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಸಂತನ್ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದರು, ರಾಜೀವ್ ಗಾಂಧಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಬಿಡುಗಡೆಯಾದ ಬಳಿಕ ಅವರನ್ನು ತಿರುಚ್ಚಿಯ ಕೇಂದ್ರ ಕಾರಾಗೃಹದ ವಿಶೇಷ ಶಿಬಿರದಲ್ಲಿ ಇರಿಸಲಾಗಿತ್ತು.


ನವೆಂಬರ್ 11, 2022 ರಂದು, ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಆರು ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದೇಶದ ಮರುದಿನವೇ ನಳಿನಿ, ಶ್ರೀಹರನ್, ಸಂತನ್, ರಾಬರ್ಟ್ ಪಾಯಸ್, ಜಯಕುಮಾರ್ ಮತ್ತು ರವಿಚಂದ್ರನ್ 32 ವರ್ಷಗಳ ನಂತರ ಜೈಲಿನಿಂದ ಬಿಡುಗಡೆಯಾಗಿದ್ದರು.


ಇಲ್ಲಿ ಒಂದು ಸಮಸ್ಯೆ ಇತ್ತು. ನಳಿನಿ ಮತ್ತು ರವಿಚಂದ್ರನ್ ಅವರನ್ನು ಬಿಡುಗಡೆ ಮಾಡಲಾಯಿತು ಮತ್ತು ಅವರ ಕುಟುಂಬಗಳನ್ನು ಭೇಟಿ ಮಾಡಲು ಅವಕಾಶ ನೀಡಲಾಯಿತು ಆದರೆ ಉಳಿದ ನಾಲ್ವರನ್ನು ತಿರುಚ್ಚಿ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಶಿಬಿರದಲ್ಲಿ ಇರಿಸಲಾಗಿತ್ತು. ನಾಲ್ವರೂ ಶ್ರೀಲಂಕಾದ ಪ್ರಜೆಗಳಾಗಿದ್ದರಿಂದ ಹೀಗೆ ಮಾಡಲಾಗಿತ್ತು.


ಸಂತನ್ ಅವರು ತಿರುಚ್ಚಿ ಜೈಲಿನ ವಿಶೇಷ ಶಿಬಿರದಲ್ಲಿರುವ ತಮ್ಮ ಸೆಲ್ ನಿಂದ ಬಹಿರಂಗ ಪತ್ರ ಬರೆದಿದ್ದರು. ತ್ರದ ಮೂಲಕ, ಅವರು ತಮ್ಮ ದೇಶಕ್ಕೆ ಮರಳಲು ಧ್ವನಿ ಎತ್ತುವಂತೆ ವಿಶ್ವದಾದ್ಯಂತದ ತಮಿಳರಿಗೆ ಮನವಿ ಮಾಡಿದ್ದರು.32 ವರ್ಷಗಳಿಂದ ತಾಯಿಯನ್ನು ನೋಡಿಲ್ಲ ಎಂದಿದ್ದರು

ನನ್ನನ್ನು ಶ್ರೀಲಂಕಾಕ್ಕೆ ಕಳುಹಿಸಲು ವ್ಯವಸ್ಥೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ , ಕೇಂದ್ರ ಗೃಹ ಸಚಿವರು ಮತ್ತು ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದರು. ನನ್ನ ಪಾಸ್‌ಪೋರ್ಟ್ ಅನ್ನು ನವೀಕರಿಸಲು ಚೆನ್ನೈನಲ್ಲಿರುವ ಶ್ರೀಲಂಕಾದ ಡೆಪ್ಯುಟಿ ಹೈಕಮಿಷನ್ ಕಚೇರಿಗೆ ಹೋಗಲು ನನಗೆ ಅನುಮತಿ ನೀಡುವಂತೆ ನಾನು ಅಧಿಕಾರಿಗಳನ್ನು ವಿನಂತಿಸಿದೆ. ನನಗೆ ಇನ್ನೂ ಯಾವುದೇ ಉತ್ತರವೇ ಬಂದಿಲ್ಲ ಎಂದಿದ್ದರು.

ಗದಗ ನಾಲ್ವರ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ :ತಂದೆ, ತಾಯಿ ಕೊಲೆಗೆ ಮನೆ ಮಗನಿಂದಲೇ ಸುಪಾರಿ, ಗುರಿ ತಪ್ಪಿ ಸಂಬಂಧಿಕರನ್ನು ಮುಗಿಸಿದ್ದ ಕಿಲ್ಲರ್ ಗ್ಯಾಂಗ್

Posted by Vidyamaana on 2024-04-23 04:50:30 |

Share: | | | | |


ಗದಗ ನಾಲ್ವರ ಹತ್ಯೆ ಪ್ರಕರಣಕ್ಕೆ  ಟ್ವಿಸ್ಟ್ :ತಂದೆ, ತಾಯಿ ಕೊಲೆಗೆ ಮನೆ ಮಗನಿಂದಲೇ ಸುಪಾರಿ, ಗುರಿ ತಪ್ಪಿ ಸಂಬಂಧಿಕರನ್ನು ಮುಗಿಸಿದ್ದ ಕಿಲ್ಲರ್ ಗ್ಯಾಂಗ್

ಗದಗ, ಎ.22: ಇಡೀ ರಾಜ್ಯದ ಜನರನ್ನು ಬೆಚ್ಚಿಬೀಳುವಂತೆ ಮಾಡಿದ್ದ ಗದಗ ಜಿಲ್ಲೆಯ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ಪೊಲೀಸರ ವಿಚಾರಣೆಯಲ್ಲಿ ಮನೆಯ ಮಗನೇ ಇಡೀ ಕುಟುಂಬವನ್ನು ಮುಗಿಸಲು ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ. 


ಮನೆಯ ಹಿರಿಯ ಮಗನೇ ಆಸ್ತಿ ಮೇಲಿನ ದಾಹದಿಂದ ತನ್ನ ತಂದೆ, ತಾಯಿಯನ್ನು ಕೊಲೆ ಮಾಡಲು ಸುಪಾರಿ ನೀಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಆದರೆ, ಸುಪಾರಿ ಕಿಲ್ಲರ್‌ಗಳ ಎಡವಟ್ಟಿನಿಂದಾಗಿ, ಆ ದಿನ ಮನೆಗೆ ಬಂದು ಉಳಿದುಕೊಂಡಿದ್ದ ಅಮಾಯಕ ನೆಂಟರು ಜೀವ ತೆತ್ತಿದ್ದಾರೆ! 


ಗದಗ ನಗರದ ದಾಸರ ಓಣಿಯಲ್ಲಿ ಎರಡು ದಿನಗಳ ಹಿಂದೆ ನಾಲ್ವರ ಭೀಕರ ಹತ್ಯೆ ನಡೆದಿತ್ತು. ಶುಕ್ರವಾರ ಬೆಳಗಿನ ಜಾವ ಮೂರು ಗಂಟೆಗೆ ಕೊಲೆ ನಡೆದಿತ್ತು. ಬೆಟಗೇರಿ ನಗರಸಭೆ ಮಾಜಿ ಅಧ್ಯಕ್ಷ ಪ್ರಕಾಶ್ ಬಾಕಳೆ, ಹಾಲಿ ಉಪಾಧ್ಯಕ್ಷೆ ಸುನಂದಾ ಬಾಕಳೆ ಟಾರ್ಗೆಟ್ ಮಾಡಿ ಕೃತ್ಯ ನಡೆದಿತ್ತು. ಆದರೆ ಹಂತಕರು ಮನೆಗೆ ನುಗ್ಗಿ ಮೇಲಿನ ಮಹಡಿಯಲ್ಲಿ ಮಲಗಿದ್ದ ಪ್ರಕಾಶ್ ಅವರ ಕಿರಿಯ ಮಗ ಕಾರ್ತಿಕ್ ಬಾಕಳೆ (28), ಸಂಬಂಧಿಕರಾಗಿ ಮನೆಗೆ ಬಂದಿದ್ದ ಪರಶುರಾಮ್ ಹಾದಿಮನಿ (55), ಲಕ್ಷ್ಮೀ ಹಾದಿಮನಿ (45) ಮತ್ತು ಅವರ ಮಗಳು ಆಕಾಂಕ್ಷಾ (16) ಅವರನ್ನು ಹತ್ಯೆ ಮಾಡಿದ್ದರು. ಮಹಡಿಯಲ್ಲಿ ಸದ್ದು ಕೇಳಿ ಆತಂಕಗೊಂಡ ಪ್ರಕಾಶ್‌ ಬಾಕಳೆ ಪೊಲೀಸರಿಗೆ ಫೋನ್‌ ಮಾಡಿದಾಗ ಕೊಲೆಗಾರರು ಪರಾರಿಯಾಗಿದ್ದರು.

ಪುತ್ತೂರು ನಗರ ಠಾಣಾ ಪೊಲೀಸರ ಕಾರ್ಯಾಚರಣೆ

Posted by Vidyamaana on 2023-06-01 15:49:27 |

Share: | | | | |


ಪುತ್ತೂರು ನಗರ ಠಾಣಾ ಪೊಲೀಸರ ಕಾರ್ಯಾಚರಣೆ

ಪುತ್ತೂರು: ಮುಖ್ಯ ರಸ್ತೆಯ ಪ್ರಕಾಶ್ ಫೂಟ್‌ವೇರ್ ಅಂಗಡಿಗೆ ಕಳ್ಳರು ನುಗ್ಗಿ ಅಂಗಡಿಯಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ನಗದು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ ದೇವರಾಜ ಅರಸ್ ಬಡವಾಣೆಯ ಸಮೀರ್ (ಕಪ್ಪ), ಹಾಸನ ಶಂಕರಿಪುರಂ ನ ಚಂದ್ರಶೇಖರ್ (ಚಂದು) ಬಂಧಿತರು.ಪುತ್ತೂರು ಬಸ್‌ ನಿಲ್ದಾಣದ ಬಳಿಯ ಮಾಯಿದೆ ದೇವುಸ್‌ ಚರ್ಚ್‌ ಎದುರುಗಡೆ ‘ಪ್ರಕಾಶ್ ಫೂಟ್‌ವೇರ್’ ಎಂಬ ಹೆಸರಿನ ಚಪ್ಪಲಿ ಅಂಗಡಿಯಿಂದ 2022 ಸೆ.16 ರಂದು ಸುಮಾರು 15 ಲಕ್ಷ ರೂ. ಯನ್ನು ಕಳವುಗೈದು ಆರೋಪಿಗಳು ಪರಾರಿಯಾಗಿದ್ದರು.

ಈ ಬಗ್ಗೆ ಪ್ರಕಾಶ್ ಫೂಟ್‌ವೇರ್ ಮಳಿಗೆಯ ಮಾಲಕ ಸಮೀರ್ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಾಹನ ಸವಾರರೇ ಗಮನಿಸಿ : ನಾಳೆಯೊಳಗೆ HSRP ನಂಬರ್ ಪ್ಲೇಟ್ ಹಾಕಿಸದಿದ್ರೆ ದಂಡ ಬೀಳುತ್ತೆ ಹುಷಾರು

Posted by Vidyamaana on 2024-06-11 14:40:36 |

Share: | | | | |


ವಾಹನ ಸವಾರರೇ ಗಮನಿಸಿ : ನಾಳೆಯೊಳಗೆ HSRP ನಂಬರ್ ಪ್ಲೇಟ್ ಹಾಕಿಸದಿದ್ರೆ ದಂಡ ಬೀಳುತ್ತೆ ಹುಷಾರು

ಬೆಂಗಳೂರು : ಕರ್ನಾಟಕ ಸಾರಿಗೆ ಇಲಾಖೆಯು ರಾಜ್ಯದಲ್ಲಿ ಎಲ್ಲ ವಾಹನಗಳಿಗೂ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳು (HSRP) ಅಳವಡಿಕೆಗೆ ಆದೇಶ ಹೊರಡಿಸಿದೆ. ಆದರೆ, ರಾಜ್ಯ ಸರ್ಕಾರ ಈಗಾಗಲೇ ಹಲವು ಬಾರಿ ಅವಧಿ ವಿಸ್ತರಣೆ ಮಾಡಿ ಜೂನ್.‌ 12ಕ್ಕೆ ಗಡುವು ವಿಸ್ತರಿಸಿದೆ

2019ರ ಏಪ್ರಿಲ್ 1ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಕಳೆದ ವರ್ಷ ಆಗಸ್ಟ್ನಲ್ಲಿ ಅಧಿಸೂಚನೆ ಹೊರಡಿಸಿತ್ತು. ರಾಜ್ಯದಲ್ಲಿ ಸುಮಾರು ಎರಡು ಕೋಟಿ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಗತ್ಯವಿದೆ ಎಂದು ಸಾರಿಗೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ರಾಜ್ಯ ಸಾರಿಗೆ ಇಲಾಖೆ ಜೂನ್‌ 12 ರವರೆಗೆ ಎಚ್ ಎಸ್ ಆರ್ ಪಿ ಪಡೆಯಲು ನೋಂದಣಿ ಮಾಡಿಕೊಳ್ಳಲು ಅವಕಾಸ ನೀಡಿದೆ. ಅದಾದನಂತರ ಜೂನ್.‌13 ರಿಂದ ಪೊಲೀಸ್ ಇಲಾಖೆ ಜೊತೆಗೂಡಿ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಅವಧಿಯೊಳಗೆ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ 500 ರೂ.ನಿಂದ 1,000 ರೂ.ವರೆಗೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Recent News


Leave a Comment: