ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಖಾಸಗಿ ಬಸ್‌ ಆಕ್ಟಿವಾ ಗೆ ಡಿಕ್ಕಿ: ಆಕ್ಟಿವಾ ಸವಾರ ಪರಾರಿ ನಿವಾಸಿ ಧರನೇಂದ್ರ ಮೃತ್ಯು

Posted by Vidyamaana on 2024-02-04 19:35:22 |

Share: | | | | |


ಖಾಸಗಿ ಬಸ್‌ ಆಕ್ಟಿವಾ ಗೆ ಡಿಕ್ಕಿ: ಆಕ್ಟಿವಾ ಸವಾರ ಪರಾರಿ ನಿವಾಸಿ ಧರನೇಂದ್ರ  ಮೃತ್ಯು

ಬೆಳ್ತಂಗಡಿ: ಖಾಸಗಿ ಬಸ್ಸಿನ ವೇಗದ ಅವಂತಾರದಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ದೂರು ಎಳೆದುಕೊಂಡ ಹೋದ ಪರಿಣಾಮ ಸವಾರ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಮಂಜೊಟ್ಟಿ ಸಮೀಪ ಫೆ.4 ರಂದು(ಇಂದು) ಸಂಜೆ ನಡೆದಿದೆ. 



ಮೃತಪಟ್ಟ ಯುವಕ ಮಂಜೊಟ್ಟಿ ಸಮೀಪದ ಪರಾರಿ ನಿವಾಸಿ ಧರಣೇಂದ್ರ (24) ಎನ್ನಲಾಗಿದೆ. ಬೆಳ್ತಂಗಡಿ ಕಡೆಯಿಂದ ತನ್ನ ಮನೆ ಮಂಜೊಟ್ಟಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೋಗುತಿದ್ದ ವೇಳೆ ಬೆಳ್ತಂಗಡಿ ಕಡೆಗೆ ವೇಗವಾಗಿ ಬರುತಿದ್ದ ಶ್ರೀ ದುರ್ಗಾ ಹೆಸರಿನ ಖಾಸಗಿ ಬಸ್ ಡಿಕ್ಕಿ ಹೊಡೆದು ನಂತರ ಸ್ವಲ್ಪ ದೂರ ಸ್ಕೂಟರ್ ಸಮೇತ ಬಸ್ ಎಳೆದುಕೊಂಡು ಹೋಗಿದೆ. 


ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರನ ತಲೆಗೆ ಗಂಭೀರ ಗಾಯಗೊಂಡಿದ್ದು.ತಕ್ಷಣ ಸ್ಥಳೀಯರು ಉಜಿರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಲೋಕಸಭಾ ಚುನಾವಣೆ: ಪೂರ್ವಸಿದ್ದತಾ ಪರಿಶೀಲನೆ ನಡೆಸಿದ ಡಿಸಿ, ಪೊಲೀಸ್ ಕಮೀಷನರ್, ಎಸ್ಪಿ

Posted by Vidyamaana on 2024-03-13 17:46:21 |

Share: | | | | |


ಲೋಕಸಭಾ ಚುನಾವಣೆ: ಪೂರ್ವಸಿದ್ದತಾ ಪರಿಶೀಲನೆ ನಡೆಸಿದ ಡಿಸಿ, ಪೊಲೀಸ್ ಕಮೀಷನರ್, ಎಸ್ಪಿ

ಮಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಇ.ವಿ.ಎಂ ಭದ್ರತಾ ಕೇಂದ್ರವಾದ ಸುರತ್ಕಲ್ ಎನ್.ಐ.ಟಿ.ಕೆ  ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೂರ್ವಸಿದ್ದತಾ ಪರಿಶೀಲನೆಯನ್ನು ಮಾ. 13ರಂದು ನಡೆಸಲಾಯಿತು.

 ಜಿಲ್ಲಾಧಿಕಾರಿ ಎಂ.ಪಿ ಮುಲೈ ಮುಹಿಲನ್,  ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್‌ ಅಗ್ರವಾಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯಂತ್ ಪರಿಶೀಲನೆ ನಡೆಸಿದರು.

ಪುತ್ತೂರು ಗಾಂಧಿಕಟ್ಟೆಗೆ ಆಗಮಿಸಿ 90 ವರ್ಷ ಪೂರೈಕೆ | ಮುಂದಿನ ಒಂದು ವರ್ಷಗಳ ಕಾರ್ಯಕ್ರಮಕ್ಕೆ ಜಸ್ಟೀಸ್ ಸಂತೋಷ್ ಹೆಗ್ಡೆಯವರಿಂದ ಚಾಲನೆ

Posted by Vidyamaana on 2023-02-26 08:22:46 |

Share: | | | | |


ಪುತ್ತೂರು ಗಾಂಧಿಕಟ್ಟೆಗೆ ಆಗಮಿಸಿ 90 ವರ್ಷ ಪೂರೈಕೆ | ಮುಂದಿನ ಒಂದು ವರ್ಷಗಳ ಕಾರ್ಯಕ್ರಮಕ್ಕೆ ಜಸ್ಟೀಸ್ ಸಂತೋಷ್ ಹೆಗ್ಡೆಯವರಿಂದ ಚಾಲನೆ

ಪುತ್ತೂರು ; ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಪುತ್ತೂರಿಗೆ ಆಗಮಿಸಿ ಪ್ರಸ್ತುತ ವರ್ಷಕ್ಕೆ 90 ವರ್ಷ ಪೂರೈಸಿದ್ದು, ಈ  ಸಂಭ್ರಮದಲ್ಲಿ ಒಂದು ವರ್ಷ ನಿರಂತರವಾಗಿ ಕಾರ್ಯಕ್ರಮಗಳು ಆಯೋಜಿಸಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಒಂದು ವರ್ಷಗಳ ಕಾರ್ಯಕ್ರಮಳಿಗೆ ಭಾನುವಾರ ಪುತ್ತೂರಿನ ಗಾಂಧಿ ಕಟ್ಟೆಯಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ .ಚಾಲನೆ ನೀಡಲಾಯಿತು.

ನಿವೃತ್ತ ಲೋಕಾಯುಕ್ತ ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು. ಗಾಂಧೀ ವಿಚಾರ ವೇದಿಕೆ ಪುತ್ತೂರು ಹಾಗೂ ಮಹಾತ್ಮ ಗಾಂಧೀ ಶಾಂತಿ ಪ್ರತಿಷ್ಠಾನದ ಸಹಯೋಗದಲ್ಲಿ ಒಂದು ವರ್ಷ ನಿರಂತರ ಕಾರ್ಯಕ್ರಮ ನಡೆಯಲಿದೆ.

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ, ಗಾಂಧಿ ವಿಚಾರ ವೇದಿಕೆ ಮಾತೃ ಘಟಕದ ಉಪಾಧ್ಯಕ್ಷ ಅಣ್ಣಾ ವಿನಯ ಚಂದ್ರ, ಗಾಂಧೀ ವಿಚಾರ ವೇದಿಕೆ ಅಧ್ಯಕ್ಷ ಕ್ಸೇವಿಯರ್ ಡಿ ಸೋಜ, ಮಾತೃ ಘಟಕದ ಅಧ್ಯಕ್ಷ ಶ್ರೀಧರ ಬಿಡೆ, ನ್ಯಾಯವಾದಿ ಜಗನ್ನಿವಾಸರಾವ್, ಗಾಂಧೀ ಕಟ್ಟೆ ಸಮಿತಿಯ ಸಯ್ಯದ್ ಕಮಲ್ ಸಹಿತ ಹಲವು ಮಂದಿ ಉಪಸ್ಥಿತರಿದ್ದರು. ಗಾಂಧೀಕಟ್ಟೆ ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿದರು. ರಮೇಶ್ ಬಾಬು ವಂದಿಸಿದರು.

ಬೆಂಗಳೂರು ಕಂಬಳ: ಅರಮನೆ ಮೈದಾನದಲ್ಲಿ ಕರೆ ವೀಕ್ಷಣೆ ಮಾಡಿದ ಶಾಸಕ ಅಶೋಕ್ ಕುಮಾರ್ ರೈ

Posted by Vidyamaana on 2023-09-22 16:37:14 |

Share: | | | | |


ಬೆಂಗಳೂರು ಕಂಬಳ: ಅರಮನೆ ಮೈದಾನದಲ್ಲಿ ಕರೆ ವೀಕ್ಷಣೆ ಮಾಡಿದ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ನವೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಈಗಾಗಲೇ ಸಿದ್ದತೆಗಳು ಆರಂಭಗೊಂಡಿದ್ದು ಶಾಸಕರಾದ ಅಶೋಕ್ ರೈ ನೇತೃತ್ವದ ನಿಯೋಗ ಅರಮನೆ ಮೈದಾನದಲ್ಲಿ ಕರೆ ನಿರ್ಮಾಣ ಮಾಡಬೇಕಾದ ಸ್ಥಳವನ್ನು ವೀಕ್ಷಣೆ ಮಾಡಿದರು.

ತುಳುನಾಡಿನ ಜನಪದ ಕಲೆಯಾದ ಕಂಬಳವು ಈಬಾರಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಆಯೋಜನೆ ಮಾಡಲಾಗಿದ್ದು ಬೆಂಗಳೂರು ಜನತೆ ಸೇರಿದಂತೆ ಬೆಂಗಳೂರಿನಲ್ಲಿರುವ ವಿವಿಧ ರಾಜ್ಯಗಳ ಜನತೆ , ವಿದೇಶಿಯರು ಈ ಬಾರಿ ಕಂಬಳವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಕಂಬಳ ಉಳಿವಿಗಾಗಿ ಸುಪ್ರಿಂಕೋರ್ಟು ಮೆಟ್ಟಿಲೇರಿ ಯಸಶ್ವಿಯಾದ ಅಶೋಕ್ ರೈಗಳು ಈ ಬಾರಿ ರಾಜ್ಯದ ರಾಜಧಾನಿಯಲ್ಲೇ ಕಂಬಳವನ್ನು ಆಯೋಜನೆ ಮಾಡುವ ಮೂಲಕ ತುಳುನಾಡಿನ ಜನಪದ ಕಲೆಯನ್ನು ಜಗತ್ತಿಗೆ ಪರಿಚಯಿಸಲು ಮುಂದಾಗಿದ್ದಾರೆ.

ಕಂಬಳದ ಕರೆ ನಿರ್ಮಾಣಕ್ಕಾಗಿ ಸ್ಥಳವನ್ನು ಗುರುತಿಸುವ ಕಾರ್ಯ ಪೂರ್ಣಗೊಂಡಿದ್ದು ಮುಂದಿನ ವಾರ ಕರೆ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಶಾಸಕರು ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ಖ್ಯಾತ ಸಂಗೀತ ನಿರ್ದೇಶಕರಾದ ಗುರುಕಿರಣ್, ಬೆಂಗಳೂರು ತುಳು ಒಕ್ಕೂಟದ ಅಧ್ಯಕ್ಷರಾದ ಸುಂದರ್‌ರಾಜ್ ರೈ, ಉದ್ಯಮಿಗಳಾದ ಗುಣರಂಜನ್ ಶೆಟ್ಟಿ, ಬೆಂಗಳೂರು ಲಿಕ್ಕರ್ ಎಸೋಶಿಯೇಶನ್ ಉಪಾಧ್ಯಕ್ಷರಾದ ಕರುಣಾಕರ್ ಹೆಗ್ಡೆ, ಅಕ್ಷಯರೈ ದಂಬೆಕಾನ, ಉಮಾನಾಥ ಶೆಟ್ಟಿ ಪೆರ್ನೆ, ಮುರಳೀಧರ್ ರೈ ಮಠಂತಬೆಟ್ಟು, ರಾಜ್‌ಕುಮಾರ್ ರೈ, ರಾಕೇಶ್ ರೈ ಕುದ್ರೈಾಡಿ, ಪ್ರಶಾಂತ್ ರೈ ಕೈಕಾರ, ಮಂಜುನಾಥ ಕನ್ಯಾಡಿ, ಕರುಣಾಕರ ಸಾಮಾನಿ, ಶರತ್ , ರಾಜೇಶ್ ಶೆಟ್ಟಿ ಕೋಡಿಂಬಾಡಿ, ಯತೀಶ್ ಕನಕಪುರ, ಆದರ್ಶ ಶೆಟ್ಟಿ, ಅಶ್ವಿನ್ ಪೂಜಾರಿ , ದೀಕ್ಷಿತ್ ರ ಮೊದಲಾದವರು ಉಪಸ್ಥಿತರಿದ್ದರು.

ಸಂಸದೆ ಕಂಗನಾ ರಣಾವತ್‌ಗೆ ಛೀಮಾರಿ ಹಾಕಿದ ಬಿಜೆಪಿ; ವಿವಾದ ಸೃಷ್ಟಿಸುವ ಹೇಳಿಕೆ ನೀಡದಂತೆ ವಾರ್ನಿಂಗ್

Posted by Vidyamaana on 2024-08-26 21:35:32 |

Share: | | | | |


ಸಂಸದೆ ಕಂಗನಾ ರಣಾವತ್‌ಗೆ ಛೀಮಾರಿ ಹಾಕಿದ ಬಿಜೆಪಿ; ವಿವಾದ ಸೃಷ್ಟಿಸುವ ಹೇಳಿಕೆ ನೀಡದಂತೆ ವಾರ್ನಿಂಗ್

ನವದೆಹಲಿ: ಪ್ರಧಾನಿ ಮೋದಿ ಸರ್ಕಾರವು ತೆಗೆದುಕೊಂಡ ಬಲವಾದ ಕ್ರಮಗಳಿಲ್ಲದಿದ್ದರೆ ರೈತರ ಪ್ರತಿಭಟನೆಯು ಭಾರತದಲ್ಲಿ ಪ್ರಸ್ತುತ ಬಾಂಗ್ಲಾದೇಶದಲ್ಲಿರುವ ಪರಿಸ್ಥಿತಿಯನ್ನು ಸೃಷ್ಟಿಸುತಿತ್ತು ಎಂದು ಮಂಡಿ ಸಂಸದೆ ಕಂಗನಾ ರಣಾವತ್​ ನೀಡಿರುವ ಹೇಳಿಕೆಯು ವಿವಾದವನ್ನು ಉಂಟುಮಾಡಿದೆ.

ಕಂಗನಾ ರಣಾವತ್​​ ಹೇಳಿಕೆಗೆ ಛೀಮಾರಿ ಹಾಕಿದ ಬಿಜೆಪಿ ರೈತರ ಪ್ರತಿಭಟನೆ ಕುರಿತ ಬಿಜೆಪಿ ಸಂಸದೆ ಕಂಗನಾ ರಣಾವತ್​ ಅವರ ಹೇಳಿಕೆಯು ಪಕ್ಷದ ನಿಲುವಲ್ಲ. ಬಿಜೆಪಿಯ ನೀತಿ ವಿಷಯಗಳ ಬಗ್ಗೆ ಮಾತನಾಡಲು ಅವರಿಗೆ ಅನುಮತಿ ಇಲ್ಲ. ಭಾರತೀಯ ಜನತಾ ಪಕ್ಷವು ಸಬ್ಕಾ ಸಾಥ್​​, ಸಬ್ಕಾ ವಿಕಾಸ್​​, ಸಬ್ಕಾ ವಿಶ್ವಾಸ್​​ ಔರ್​ ಸಬ್ಕಾ ಪ್ರಯಾಸ್​ ಧ್ಯೇಯವಾಕ್ಯದಂತೆ ಸಾಮಾಜಿಕ ಸಾಮರಸ್ಯದ ಕಡೆಗೆ ಬದ್ಧವಾಗಿದೆ ಎಂದು ಹೇಳಿದೆ. ಅಲ್ಲದೆ ಭವಿಷ್ಯದಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ಸ್ವಪಕ್ಷದವರೇ ಆದ ಕಂಗನಾ ರಣಾವತ್​​ಗೆ ಬಿಜೆಪಿ ಸೂಚಿಸಿದೆ.

ರೈತರ ಬಗ್ಗೆ ಮಾತನಾಡುವುದು ಕಂಗನಾ ಅವರ ಇಲಾಖೆ ಅಲ್ಲ. ಇದು ಅವರ ವೈಯಕ್ತಿಕ ಹೇಳಿಕೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ರೈತಸ್ನೇಹಿಯಾಗಿದೆ. ಕಂಗನಾ ಇಂತಹ ಹೇಳಿಕೆಗಳನ್ನು ನೀಡಬಾರದು, ಇಂತಹ ಹೇಳಿಕೆಗಳಿಂದ ದೂರವಿರಬೇಕು ಎಂದು ಪಂಜಾಬ್ ಬಿಜೆಪಿ ನಾಯಕ

ಬೆಳ್ತಂಗಡಿ : ಉಜಿರೆ ಖಾಸಗಿ ಕಾಲೇಜು ವಿದ್ಯಾರ್ಥಿ ವಿಶ್ಲೇಶ್ ಆತ್ಮಹತ್ಯೆ

Posted by Vidyamaana on 2024-03-09 20:09:25 |

Share: | | | | |


ಬೆಳ್ತಂಗಡಿ : ಉಜಿರೆ ಖಾಸಗಿ ಕಾಲೇಜು ವಿದ್ಯಾರ್ಥಿ ವಿಶ್ಲೇಶ್ ಆತ್ಮಹತ್ಯೆ

ಬೆಳ್ತಂಗಡಿ : ಉಜಿರೆ ಖಾಸಗಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.9ರಂದು ಧರ್ಮಸ್ಥಳದ ಕಜೋಡಿ ಮೂಲಿಕ್ಕಾರ್ ನಲ್ಲಿ ನಡೆದಿದೆ.

ಧರ್ಮಸ್ಥಳ ಗ್ರಾಮದ ಮೂಲಿಕ್ಕಾರ್ ನಿವಾಸಿ ರಾಮಣ್ಣ ಹಾಗೂ ಗೀತಾ ದಂಪತಿಗಳ ಪುತ್ರ ವಿಶ್ಲೇಶ್ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ಆತ್ಮಹತ್ಯೆ ದಾಖಲಾಗಿದೆ.

Recent News


Leave a Comment: