ತುಮಕೂರಿನಲ್ಲಿ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೊಂದು ರೋಚಕ ಟ್ವಿಸ್ಟ್!

ಸುದ್ದಿಗಳು News

Posted by vidyamaana on 2024-03-23 15:52:34 | Last Updated by Vidyamaana on 2024-03-23 15:52:34

Share: | | | | |


ತುಮಕೂರಿನಲ್ಲಿ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೊಂದು ರೋಚಕ ಟ್ವಿಸ್ಟ್!

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಕಾರಿನೊಳಗಿದ್ದ ಮೂವರು ಸಾವನ್ನಪ್ಪಿದ ಸಂಬಂಧಿಸಿದಂತೆ ಮೂವರು ಸೇರಿ 50 ಲಕ್ಷ ಮಿಕ್ಕಿ ಹಣ ತುಮಕೂರು ಹೋಗುವಾಗ ತೆಗೆದುಕೊಂಡು ಹೋಗಿದ್ದರು ಎಂದು ಕುಟುಂಬ ಸದಸ್ಯರು ಕೋರಾ ಪೊಲೀಸರ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ.

*💥Whats App Group ಗೆ ಸೇರಲು ಕ್ಲಿಕ್ ಮಾಡಿ

*ಹಣ ತೆಗೆದುಕೊಂಡು ಹೋದ ವಿಚಾರ*:  ಇನ್ನೂ ಕಾರಿನಲ್ಲಿ ಹೋಗುವಾಗ ಮದಡ್ಕದ ಇಸಾಕ್ ಉಜಿರೆಯಲ್ಲಿದ್ದ ಸ್ವಂತ ಮನೆಯನ್ನು ಮಾರಾಟ ಮಾಡಿದ ಹಣ ಮತ್ತು ಮಗಳ ಚಿನ್ನವನ್ನು ಅಡವಿಟ್ಟು ಸುಮಾರು 35 ಲಕ್ಷ ಹಣವನ್ನು ತೆಗೆದುಕೊಂಡು ಹೋಗಿದ್ದರು ಎಂದು ಇಸಾಕ್ ಪತ್ನಿ ಕೋರಾ ಪೊಲೀಸ್ ಠಾಣೆಯಲ್ಲಿ ಮಾ.23 ರಂದು ಪೊಲೀಸ್ ವಿಚಾರಣೆ ವೇಳೆ ಹೇಳಿಕೆಯನ್ನು ನೀಡಿದ್ದಾರೆ. ಇನ್ನೂ ಶಿರ್ಲಾಲು ಸಿದ್ದಿಕ್ ಮತ್ತು ಟಿ.ಬಿ.ಕ್ರಾಸ್ ಸಾಹುಲ್ ಹಮೀದ್ ಕೂಡ ಸ್ನೇಹಿತರ ಮೂಲಕ ಪಡೆದ ಸುಮಾರು 15 ಲಕ್ಷಕ್ಕೂ ಮಿಕ್ಕಿ ಹಣ ತುಮಕೂರು ಹೋಗುವಾಗ ತೆಗೆದುಕೊಂಡು ಹೋಗಿದ್ದರು ಎಂದು ಮನೆಯವರು ಹೇಳಿಕೆ ನೀಡಿದ್ದಾರೆ. ಒಟ್ಟು ಮೂವರ ಬಳಿ 50 ಲಕ್ಷಕ್ಕೂ ಮಿಕ್ಕಿ ಹಣ ತುಮಕೂರು ಹೋಗುವಾಗ ಇತ್ತು ಎನ್ನಲಾಗಿದೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಹೇಳಲಾಗಿದೆ.

ಮೂವರು ಕೂಡ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ  ಪ್ಲ್ಯಾನ್ ಮಾಡಿ ಕರೆಸಿಕೊಂಡು ಮಾ.21 ರಂದು ರಾತ್ರಿ ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿ ನಂತರ ಹಣವನ್ನು ದೋಚಿದ್ದಾರೆ ಎನ್ನಲಾಗಿದೆ. ಇನ್ನೂ ಪ್ರಕರಣ ಸಂಬಂಧ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಸೇರಿ ಆರು ಜನರನ್ನು ಮೊಬೈಲ್ ಕಾಲ್ ಡಿಟೈಲ್ಸ್ ಮೂಲಕ  ಕಾರ್ಯಾಚರಣೆ ನಡೆಸಿ ಮಾ.22 ರಂದು ರಾತ್ರಿ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೆಂಕಿಗಾಹುತಿಯಾದ ಕಾರನ್ನು ಕೋರಾ ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿದ್ದು. ಮೂವರ ಶವ ಸರಕಾರಿ ಆಸ್ಪತ್ರೆಯಲ್ಲಿ ಡಿಎನ್ಎ ಪರೀಕ್ಷೆ ಮಾಡಿದ ಬಳಿಕ ಮುಂದಿನ ಗುರುವಾರ ಅಥವಾ ಶುಕ್ರವಾರ ಮೃತದೇಹವನ್ನು ಗುರುತು ಪತ್ತೆಯಾದ ಬಳಿಕ ಅವರ ಕಟುಂಬ ಸದಸ್ಯರಿಗೆ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.


 Share: | | | | |


ವರ್ಗಾವಣೆಗೊಂಡ ಗಿರೀಶ್ ನಂದನ್

Posted by Vidyamaana on 2023-07-07 14:08:27 |

Share: | | | | |


ವರ್ಗಾವಣೆಗೊಂಡ ಗಿರೀಶ್ ನಂದನ್

ಪುತ್ತೂರು: ಇಲ್ಲಿನ ಸಹಾಯಕ ಆಯುಕ್ತರಾಗಿದ್ದ ಗಿರೀಶ್ ನಂದನ್ ವರ್ಗಾವಣೆಗೊಂಡಿದ್ದಾರೆ.

ತೆರವಾಗಲಿರುವ ಪುತ್ತೂರು ಸಹಾಯಕ ಆಯುಕ್ತ ಹುದ್ದೆಗೆ ಮಂಗಳೂರು ಕೆ.ಐ.ಎ.ಡಿ.ಬಿ. ವಿಶೇಷ ಭೂಸ್ವಾಧೀನಾಧಿಕಾರಿ ಮಹೇಶ್ ಚಂದ್ರ ನೇಮಕಗೊಂಡಿದ್ದಾರೆ.

ಗಿರೀಶ್ ನಂದನ್ ಅವರು ಎತ್ತಿನಹೊಳೆ ಯೋಜನೆಯ ವಿಶೇಷ ಭೂಸ್ವಾಧಿನಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಅ. 2ರಿಂದ ಪುತ್ತೂರಿನ ನ್ಯೂ ಮಂಗಳೂರು ಎಲೆಕ್ಟ್ರಾನಿಕ್ಸ್ ಫರ್ನಿಚರ್ ನಲ್ಲಿ ಬಿಗ್ ಸೇಲ್

Posted by Vidyamaana on 2023-10-02 04:39:41 |

Share: | | | | |


ಅ. 2ರಿಂದ ಪುತ್ತೂರಿನ ನ್ಯೂ ಮಂಗಳೂರು ಎಲೆಕ್ಟ್ರಾನಿಕ್ಸ್  ಫರ್ನಿಚರ್ ನಲ್ಲಿ ಬಿಗ್ ಸೇಲ್

ಪುತ್ತೂರು: ದರ್ಬೆ ಬುಶ್ರಾ ಟವರ್ ನಲ್ಲಿರುವ ನ್ಯೂ ಮಂಗಳೂರು ಇಲೆಕ್ಟೋನಿಕ್ಸ್‌ನ ವಾರ್ಷಿಕೋತ್ಸವದ ಪ್ರಯುಕ್ತ ಬಿಗ್ ಸೇಲ್ ಅ. 2ರಿಂದ 7ರವರೆಗೆ ನಡೆಯಲಿದೆ.


ಪುತ್ತೂರಿನಲ್ಲಿ ಕಳೆದ 44 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ನ್ಯೂ ಮಂಗಳೂರು ಫರ್ನಿಚರಿನ ಸಹ ಸಂಸ್ಥೆಯಾಗಿರುವ ನ್ಯೂ ಮಂಗಳೂರು ಇಲೆಕ್ಟೋನಿಕ್ಸ್‌, ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ಮುಂದಿಟ್ಟಿದೆ.



ಗಿಫ್ಟ್ ಕೂಪನ್: ಪುತ್ತೂರಿನ ಬುಶ್ರಾ ಟವರ್ ನಲ್ಲಿ ಹಾಗೂ ದರ್ಬೆಯ ಐಕೆ ಮಾಲ್ ನಲ್ಲಿ ಪುತ್ತೂರಿನ ಅತೀ ದೊಡ್ಡ ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ ಶೋರೂಮ್ ಹೊಂದಿರುವ ನ್ಯೂ ಮಂಗಳೂರು ಫರ್ನಿಚರ್ ಹಾಗೂ ಏಷಿಯನ್ ವುಡ್ ನಲ್ಲಿ ಪ್ರತೀ ಖರೀದಿಗೆ ಗಿಫ್ಟ್ ಕೂಪನ್ ಇರಲಿದ್ದು ಅದರಲ್ಲಿ ಪ್ರಥಮ ಬಹುಮಾನ ಸೈಡ್ ಬೈ ಸೈಡ್ ರೆಫ್ರಿಜರೆಟರ್, ದ್ವಿತೀಯ ಬಹುಮಾನ ಕಾರ್ನರ್ ಸೋಫಾ ಸೆಟ್, ಮೂರನೇ ಬಹುಮಾನ 32 ಇಂಚಿನ LED TV, ನಾಲ್ಕನೇ ಬಹುಮಾನ ಮಿಕ್ಸರ್ ಗ್ರೈಂಡರ್ ಹಾಗೂ ಇತರ 36 ಆಕರ್ಷಕ ಬಹುಮಾನಗಳಿರಲಿದೆ.


ಸ್ಕ್ರಾಚ್ & ವಿನ್: ಸ್ಕ್ರಾಚ್ & ವಿನ್ ಮೂಲಕ 10ಗ್ರಾಂ. ಗೋಲ್ಡ್ ಕಾಯಿನ್ , 32 ಇಂಚಿನ ಎಲ್ಇಡಿ ಟಿವಿ, ಸಿಲ್ವರ್ ಕಾಯಿನ್, ಏರ್ ಕಂಡಿಷನ್, ಸಿಂಗಲ್ ಡೋಲ್ ರೆಫ್ರಿಜರೇಟರ್ ಹಾಗೂ ಹಲವಾರು ಬಹುಮಾನ ಗೆಲ್ಲುವ ಅವಕಾಶವಿದೆ. ಗಿಫ್ಟ್ ವೋಚರ್:ಎಲೆಕ್ಟ್ರಾನಿಕ್ಸ್ ಖರೀದಿಯ ಮೇಲೆ ಗಿಫ್ಟ್ ವೋಚರ್ ಮತ್ತು ಪ್ರತಿ ಖರೀದಿಯ ಮೇಲೆ ಹಲವು ಉಡುಗೊರೆಗಳು ಲಭ್ಯವಿರುತ್ತದೆ.


ಕ್ಯಾಶ್ ಬ್ಯಾಕ್ : ಆಯ್ದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಎಕ್ಟ್ರಾ ವಾರಾಂಟಿಗಳಿದ್ದು, 20% ಕ್ಯಾಶ್ ಬ್ಯಾಕ್ ಕೂಡ ಲಭ್ಯವಿರುತ್ತದೆ.


40% ಆಫರ್: ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ ಖರೀದಿಯ ಮೇಲೆ ಶೇ.40ರವರೆಗೆ ರಿಯಾಯಿತಿ ಹಾಗೂ ಖರೀದಿಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಲಭ್ಯವಿರುತ್ತದೆ.


6 ದಿನಗಳಲ್ಲಿ ಹಲವು ಆಫರ್ ಗಳಿದ್ದು ಅ.7ಕ್ಕೆ ಈ ಎಲ್ಲಾ ಆಫರ್ ಕೊನೆಗೊಳ್ಳಲಿದ್ದು ಗ್ರಾಹಕರು ಈ ವಿಶೇಷ ಆಫರ್ ನ ಸೌಲಭ್ಯ ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಬಿಲ್ಲವ ಸಮಾಜದ ಓಲೈಕೆಗಾಗಿ ನಾರಾಯಣ ಗುರು ನೆನಪಾಗಿದ್ದಾರೆ:ಬಿಲ್ಲವ ಸಮಾಜಕ್ಕೆ ಅಪಮಾನ ಮಾಡಿದವರನ್ನು ಸನ್ಮಾನಿಸುವ ಅಗತ್ಯ ಏನಿತ್ತು:ಸತ್ಯಜಿತ್ ಸುರತ್ಕಲ್

Posted by Vidyamaana on 2024-04-14 07:49:28 |

Share: | | | | |


ಬಿಲ್ಲವ ಸಮಾಜದ ಓಲೈಕೆಗಾಗಿ ನಾರಾಯಣ ಗುರು ನೆನಪಾಗಿದ್ದಾರೆ:ಬಿಲ್ಲವ ಸಮಾಜಕ್ಕೆ ಅಪಮಾನ ಮಾಡಿದವರನ್ನು ಸನ್ಮಾನಿಸುವ ಅಗತ್ಯ ಏನಿತ್ತು:ಸತ್ಯಜಿತ್ ಸುರತ್ಕಲ್

ಮಂಗಳೂರು, ಎ.13: ಕೇರಳ ಸರಕಾರ ಗಣರಾಜ್ಯೋತ್ಸವ ಪರೇಡಿಗೆ ನಾರಾಯಣ ಗುರು ಸ್ತಬ್ಧಚಿತ್ರ ಮಾಡಿದಾಗ, ಇಲ್ಲದ ನೆಪ ಹೇಳಿ ನಿರಾಕರಣೆ ಮಾಡಲಾಗಿತ್ತು. ಆನಂತರ, ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ನಾರಾಯಣ ಗುರುಗಳ ಪಠ್ಯವನ್ನೇ ಏಳನೇ ತರಗತಿಯಿಂದ ತೆಗೆದು ಹಾಕಲಾಗಿತ್ತು. ಅದನ್ನು ಬಿಜೆಪಿ ನಾಯಕರು ಪ್ರಶ್ನೆ ಮಾಡಲಿಲ್ಲ. ಇದೀಗ ಬಿಲ್ಲವ ಸಮಾಜದ ಓಲೈಕೆಗಾಗಿ ಬಿಜೆಪಿಗೆ ಮತ್ತೆ ನಾರಾಯಣ ಗುರು ನೆನಪಾಗಿದ್ದಾರೆ. ಪ್ರಧಾನಿ ಮೋದಿಯವರ ಮೂಲಕ ಮಾಲಾರ್ಪಣೆ ಮಾಡುವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ ಎಂದು ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಕಟಕಿಯಾಡಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ತಬ್ಧಚಿತ್ರದ ವಿಚಾರ ಬಂದಾಗ ಇಲ್ಲಿನ ಸಂಸದರು ಮುಂದಿನ ವರ್ಷವೇ ನಾವು ಸ್ತಬ್ಧಚಿತ್ರ ಮಾಡಿಸುತ್ತೇವೆ ಎಂದಿದ್ದರು. ಆದರೆ ಅದು ಈಡೇರಿಕೆ ಆಗಿಲ್ಲ. ನಾವು ಬಿಲ್ಲವ ಸಮಾಜದಿಂದ ಪ್ರತಿಭಟನೆ ನಡೆಸಿದಾಗಲೂ ಯಾವುದೇ ಬಿಜೆಪಿ ನಾಯಕರು ನಮಗೆ ಬೆಂಬಲ ನೀಡಿಲ್ಲ. ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ನಾರಾಯಣ ಗುರುಗಳ ಪಠ್ಯ ತೆಗೆದು ಹಾಕಿದ್ದ ರೋಹಿತ್ ಚಕ್ರತೀರ್ಥ ಅವರನ್ನು ನಮ್ಮ ವಿರೋಧ ನಡುವೆಯೇ ಮಂಗಳೂರಿಗೆ ತಂದು ಸನ್ಮಾನ ಮಾಡಿದ್ದರು

ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಹೆಚ್’ಡಿ ದೇವೇಗೌಡ: ರಾಜಕಾರಣದಲ್ಲಿ ತೀವ್ರ ಕುತೂಹಲ

Posted by Vidyamaana on 2023-12-15 15:03:14 |

Share: | | | | |


ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಹೆಚ್’ಡಿ ದೇವೇಗೌಡ: ರಾಜಕಾರಣದಲ್ಲಿ ತೀವ್ರ ಕುತೂಹಲ

ನವದೆಹಲಿ: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.ಸಂಸತ್ ಭವನದಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತು ದೇವೇಗೌಡ ಮತ್ತು ಖರ್ಗೆ ಅವರು ಮಾತುಕತೆ ನಡೆಸಿದರು. ಈ ಬಗ್ಗೆ ಟ್ವೀಟ್ ಮಾಡಿದ ರಾಜ್ಯಸಭಾ ಸದಸ್ಯ ರಾಜೀವ್ ಶುಕ್ಲಾ, “ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರನ್ನು ಸಂಸತ್ತಿನ ಭವನದಲ್ಲಿ ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದರು” ಎಂದರು.

ಭ್ರಷ್ಟಾಚಾರ ನಿರ್ಮೂಲನೆ-ಸರ್ಕಾರಿ ಮೆಡಿಕಲ್ ಕಾಲೇಜು-ವಿಟ್ಲಕ್ಕೆ ತಾಲೂಕು ಕೇಂದ್ರ : ಪುತ್ತಿಲ ‍ಪ್ರಣಾಳಿಕೆ ಬಿಡುಗಡೆ

Posted by Vidyamaana on 2023-04-26 09:59:06 |

Share: | | | | |


ಭ್ರಷ್ಟಾಚಾರ ನಿರ್ಮೂಲನೆ-ಸರ್ಕಾರಿ ಮೆಡಿಕಲ್ ಕಾಲೇಜು-ವಿಟ್ಲಕ್ಕೆ ತಾಲೂಕು ಕೇಂದ್ರ : ಪುತ್ತಿಲ ‍ಪ್ರಣಾಳಿಕೆ ಬಿಡುಗಡೆ

ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರು ಹಿಂದುತ್ವದ ರಕ್ಷಣೆ ಜೊತೆಗೆ ಭ್ರಷ್ಟಾಚಾರ ರಹಿತ, ಜನಸ್ನೇಹಿ ಅಡಳಿತ ನೀಡುವ ಭರವಸೆಯ ಜೊತೆಗೆ 31 ವಿಷಯಾಧಾರಿತ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.

ದರ್ಬೆಯ ಸುಭದ್ರ ಕಲ್ಯಾಣ ಮಂಟಪದ ಬಳಿ ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು.

ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ, ಸುನಿಲ್ ಬೋರ್ಕರ್, ಭಾಸ್ಕರ್ ಆಚಾರ್ಯ ಇಂದಾರು, , ಸೇಡಿಯಾಪು ಜನಾರ್ದನ ಭಟ್, ಡಾ.ಗಣೇಶ್ ಪ್ರಸಾದ್ ಮುದ್ರಾಜೆ, ಪ್ರಸನ್ನ ಕುಮಾರ್ ಮಾರ್ತಾ, ಸ್ನೇಹ ಸಿಲ್ಕ್ ನ ಸತೀಶ್ ಕುಮಾರ್, ನಿವೃತ್ತ ತಹಸೀಲ್ದಾರ್ ಮೋನಪ್ಪ ಪುರುಷ, ನಿವೃತ್ತ ಸೇನಾನಿ ಚಂದಪ್ಪ ಮೂಲ್ಯ, ಕುಶಾಲಪ್ಪ ಗೌಡ ಬಳಕ್ಕ, ರಾಜಶೇಖರ್ ಉದ್ಯಮಿ ಬನ್ನೂರು, ನಗರ ಯುವ ಮೋರ್ಚಾದ ಮಾಜಿ ಅಧ್ಯಕ್ಷ ಪ್ರವೀಣ್ ಭಂಡಾರಿ, ಮರದಮುತ್ತು ಕೌಡಿಚ್ಚಾರ್, ಪಡ್ನೂರು ಶ್ರೀರಾಮ ಯುವಕ ಮಂಡಲದ ಲೋಕೇಶ್, ಅರುಣ್ ಇಂಡಸ್ಟ್ರೀಸ್ ಅರುಣ್ ಕುಮಾರ್ ರೈ ಡಿಂಬ್ರಿ, ಸಾಯಿಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಪ್ರಣಾಳಿಕೆ ಸಿದ್ಧಪಡಿಸುವಲ್ಲಿ ಸತೀಶ್ ರೈ ನೀರ್ಪಾಡಿ, ಪ್ರಮೋದ್ ರೈ, ಮನ್ನಥ ಶೆಟ್ಟಿ ಸಹಕರಿಸಿದರು.

ಪ್ರಣಾಳಿಕೆಯಲ್ಲಿ ಏನಿದೇ..!!??

ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಸರಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ/ ಲಂಚ ರಹಿತ ಜನಸ್ನೇಹಿ ಆಡಳಿತ ವ್ಯವಸ್ಥೆ ಜನ ವಿರೋಧಿ ಕಾನೂನುಗಳ ರದ್ದತಿಗೆ ಕ್ರಮ

ಪುತ್ತೂರನ್ನು ಜಿಲ್ಲಾ ಕೇಂದ್ರವಾಗಿಸಲು ಹಾಗೂ ಸಂಬಂಧಿಸಿದ ಎಲ್ಲಾ ವ್ಯವಸ್ಥೆಗಳ ಸ್ಥಳಾಂತರಕ್ಕೆ ಕ್ರಮ

ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಹಾಗೂ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಎಲ್ಲಾ ಕ್ರಮ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಕ್ರಮ

ವಿಟ್ಲವನ್ನು ತಾಲೂಕು ಕೇಂದ್ರ ಮಾಡುವ ಸಂಕಲ್ಪ – ಶಾಸಕರ ಕಛೇರಿ ಪ್ರಾರಂಭ ಹಾಗೂ ವಾರದಲ್ಲಿ ಎರಡು ದಿನ ಈ ಕಛೇರಿಯಿಂದ ಕಾರ್ಯ ನಿರ್ವಹಣೆ.

400KV ಉಡುಪಿ – ಕಾಸರಗೋಡು ವಿದ್ಯುತ್ ಮಾರ್ಗವು ರೈತರ ಜಮೀನಿನಲ್ಲಿ ಹಾದು ಹೋಗದಂತೆ ಕ್ರಮ.

ಅಡಿಕೆ, ತೆಂಗು, ರಬ್ಬರ್, ಕೋಕೋ ಮುಂತಾದ ಬೆಳೆಗಳ ಮೌಲ್ಯವರ್ಧನೆ, ರೋಗ ನಿರ್ವಹಣೆ, ಸಂಶೋಧನೆಗೆ ಕ್ರಮ

ವ್ಯವಸ್ಥಿತವಾಗಿ ಕ್ಷೇತ್ರದಾದ್ಯಂತ ಅಣೆಕಟ್ಟುಗಳ ನಿರ್ಮಾಣ, ನಿರ್ವಹಣೆಗೆ ಕ್ರಮ

11E ನಕ್ಷೆ ಶುಲ್ಕ ಕಡಿತ, ಅಕ್ರಮ ಸಕ್ರಮ ಪ್ಲಾಟಿಂಗ್ ಸಮಸ್ಯೆಗೆ ಪರಿಹಾರ, ಅಕ್ರಮ ಸಕ್ರಮ, ಕುಮ್ಕಿ ಹಕ್ಕು 94c, 94CC ಮಂಜೂರಾತಿಗೆ ಕ್ರಮ, ಭೂ ಪರಿವರ್ತನೆ ನಿಯಮ ಸರಳೀಕರಣ ಮತ್ತು ಶೀಘ್ರ ಅನುಮತಿಗೆ ವ್ಯವಸ್ಥೆ

ನಗರ ಪ್ರದೇಶದಲ್ಲಿ ಕಟ್ ಕನ್ವರ್ಷನ್ ಸಮಸ್ಯೆ ಪರಿಹಾರ, ನಿವೇಶನ ರಹಿತರಿಗೆ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ಆದ್ಯತೆ ಹಾಗೂ ಖಾಸಗಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಟ್ರಾಫಿಕ್ ಸಮಸ್ಯೆಗೆ ಪರಿಹಾರ

ಪ್ರಾಕೃತಿಕ ಸಮತೋಲನಕ್ಕೆ ಪರಿಸರ ಸ್ನೇಹಿ ಸಸ್ಯಗಳ ನಾಟಿ ಬಗ್ಗೆ ಕ್ರಮ

ನಗರ ಪ್ರದೇಶಕ್ಕೆ ಸೂಕ್ತ ಒಳಚರಂಡಿ ವ್ಯವಸ್ಥೆ

ಕ್ಷೇತ್ರದಾದ್ಯಂತ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಕ್ರಮ

ತುಳುನಾಡಿನ ಕ್ರೀಡೆ, ಕಲೆ, ಸಂಸ್ಕೃತಿ ಪ್ರೋತ್ಸಾಹಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪನೆ. ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿಸಲು ಪ್ರಯತ್ನ

ಉಚಿತ ಶಿಕ್ಷಣ ಒದಗಿಸುವ ಸರಕಾರಿ ಶಾಲೆಗಳ ಮತ್ತು ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಕ್ರಮ

ಕ್ಷೇತ್ರದ ವ್ಯಾಪ್ತಿಯಲ್ಲಿ ಐಟಿ ಹಬ್ ಸ್ಥಾಪಿಸಿ, ತಾಲೂಕು ಕೇಂದ್ರದಲ್ಲಿ ಉದ್ಯೋಗ ಮೇಳ ಯೋಜನೆಗೆ ಕ್ರಮ

ಹೋಬಳಿಗೊಂದು ಕೈಗಾರಿಕಾ ವಲಯ ರಚಿಸಿ, ವಿವಿಧ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ.

ದೇಶೀಯ ಗೋ ತಳಿಗಳ ಸಂರಕ್ಷಣೆ, ಗೋಶಾಲೆಗಳ ಸ್ಥಾಪನೆ, ಪಶುಪಾಲನೆಗೆ ಪ್ರೋತ್ಸಾಹ.

ಎಂಡೋಸಲ್ಫಾನ್ ಸಂತ್ರಸ್ತರ ಆರೈಕೆ, ಕಲ್ಯಾಣಕ್ಕೆ ಸೂಕ್ತ ಯೋಜನೆ.

.ರಿಕ್ಷಾ/ಟ್ಯಾಕ್ಸಿ ವಾಹನಗಳ ಚಾಲಕ ಮಾಲಕರ ಸಮಸ್ಯೆಗಳಿಗೆ ಪರಿಹಾರ.

ಪುತ್ತೂರು ತಾಲೂಕು ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ.

ಕೋಟಿ ಚೆನ್ನಯ ಥೀಮ್ ಪಾರ್ಕ್ ನಿರ್ಮಾಣ.

ವಿಟ್ಲ ಉಪ್ಪಿನಂಗಡಿಯಲ್ಲಿ ಅಗ್ನಿಶಾಮಕ ಠಾಣೆ ರಚನೆಗೆ ಕ್ರಮ.

ಸುಸಜ್ಜಿತ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ನಿರ್ಮಾಣ ಹಾಗೂ ಕ್ರೀಡಾಳುಗಳ ತರಬೇತಿಗೆ ಸಮರ್ಪಕ ವ್ಯವಸ್ಥೆ.

ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸೂಕ್ತ ವ್ಯವಸ್ಥೆ.

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅಡಿಸ್ಥಳ ಮಂಜೂರಾತಿ, ಅಭಿವೃದ್ಧಿಗೆ ಸೂಕ್ತ ಕ್ರಮ.

ದಿ. ಸೌಮ್ಯಭಟ್ ಸ್ಮರಣಾರ್ಥವಾಗಿ ಯುವತಿಯರಿಗೆ ಸ್ವ- ಉದ್ಯೋಗ ತರಬೇತಿ ಕೇಂದ್ರ ಸ್ಥಾಪನೆ.

ದಿ. ಕಾರ್ತಿಕ್ ಮೇರ್ಲ ಸ್ಮರಣಾರ್ಥವಾಗಿ ಸರಕಾರಿ ಐಟಿಐ ಸ್ಥಾಪನೆ.

ದಿ. ಪ್ರವೀಣ್ ನೆಟ್ಟಾರು ಸ್ಮರಣಾರ್ಥವಾಗಿ ಯುವಕರಿಗೆ ಸ್ವ- ಉದ್ಯೋಗ ತರಬೇತಿ ಕೇಂದ್ರ ಸ್ಥಾಪನೆ ಮತ್ತು ಸೈನ್ಯಕ್ಕೆ ಸೇರಲು ಬೇಕಾದ ತರಬೇತಿಗೆ ವ್ಯವಸ್ಥೆ.

ಸರಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ, ಶಿಕ್ಷಣ ಇಲಾಖೆಯಲ್ಲಿ ಅತಿಥಿ ಉಪನ್ಯಾಸಕರು, ಗ್ರಾಮ ಸಹಾಯಕರ ಖಾಯಾಮತಿ ಬಗ್ಗೆ ಕ್ರಮ.

ಯುವಕರ, ಯುವತಿಯರ, ಮಹಿಳೆಯರ, ಶ್ರಮಜೀವಿಗಳ, ರೈತರ, ಹಿರಿಯರ, ಎಲ್ಲಾ ಸಮಸ್ಯೆಗಳಿಗೆ ಸಹಾಯವಾಣಿ (Help Line) ಮೂಲಕ ದಿನದ 24 ಗಂಟೆಯೂ ಸ್ಪಂದನೆ.

BJP Ticket ವಂಚನೆ ; ಗದಗದಲ್ಲೂ ಅಭಿನವ ಹಾಲಶ್ರೀಯಿಂದ 1 ಕೋಟಿ ರೂ. ನಾಮ!

Posted by Vidyamaana on 2023-09-23 07:12:53 |

Share: | | | | |


BJP Ticket ವಂಚನೆ ; ಗದಗದಲ್ಲೂ ಅಭಿನವ ಹಾಲಶ್ರೀಯಿಂದ 1 ಕೋಟಿ ರೂ. ನಾಮ!

ಗದಗ: ರಾಜ್ಯದೆಲ್ಲೆಡೆ ಬಿಜೆಪಿ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣ ಸಂಚಲನವುಂಟು ಮಾಡಿದ್ದು, ಅದೇ ಮಾದರಿಯಲ್ಲಿ ಜಿಲ್ಲೆಯ ಶಿರಹಟ್ಟಿ ಎಸ್ಸಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರಿಂದ ಹಣ ಪಡೆದು ವಂಚಿಸಿರುವ ಆರೋಪದಡಿ ಅಭಿನವ ಹಾಲಶ್ರೀ ವಿರುದ್ಧ ಪ್ರಕರಣ ದಾಖಲಾಗಿದೆ.


ಶಿರಹಟ್ಟಿ ತಾಲೂಕಿನ ರಣತೂರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಸಂಜಯ್ ಚವಡಾಳ ಅವರೇ ಅಭಿನವ ಹಾಲಶ್ರೀ ವಿರುದ್ಧ 1 ಕೋಟಿ ರೂ. ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ. ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಬಿಂಬಿಸಿಕೊಂಡಿದ್ದ ಸಂಜಯ್ ಚವಡಾಳ ಅವರು ಚುನಾವಣೆಗೆ ಮುಂಚಿತವಾಗಿ 1 ಕೋಟಿ ರೂ. ಹಣವನ್ನು ಶ್ರೀಗಳಿಗೆ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.


ಮೂಲತಃ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದವರಾದ ಸಂಜಯ್ ಚವಡಾಳ ಕರ್ತವ್ಯ ಲೋಪದಡಿ ಅಮಾನತ್ತುಗೊಂಡಿದ್ದು, ಪ್ರಸ್ತುತ ಮುಂಡರಗಿ ಪಟ್ಟಣದಲ್ಲಿ ವಾಸವಾಗಿದ್ದಾರೆ. ಸೆ. 19ರಂದು ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಹಾಲಶ್ರೀ ವಿರುದ್ಧ ಲಿಖಿತ ದೂರು ನೀಡಿದ್ದಾರೆ.


ಸಂಜಯ್ ಚವಡಾಳ ಅವರು ಮೂರು ಹಂತದಲ್ಲಿ ಹಣ ನೀಡಿರುವುದಾಗಿ ದೂರಿನಲ್ಲಿ ದಾಖಲಿಸಿರುವ ಬಗ್ಗೆ ಮಾಹಿತಿಯಿದೆ. ಸೂಕ್ತ ದಾಖಲೆ ಇಲ್ಲದ ಕಾರಣ ಮುಂಡರಗಿ ಪೊಲೀಸರು ಕೇವಲ ಎನ್‌ಸಿ ದಾಖಲಿಸಿಕೊಂಡು ಸಮರ್ಪಕ ದಾಖಲೆ ಒದಗಿಸುವಂತೆ ಮುಂಡರಗಿ ಪೊಲೀಸರು ಸೂಚಿಸಿದ್ದಾರೆ. ಇತ್ತ ದೂರು ದಾಖಲಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸಂಜಯ್ ಕಣ್ಮರೆಯಾಗಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.ಎಸ್‌ಪಿ ಬಿ.ಎಸ್. ನೇಮಗೌಡ ಪ್ರತಿಕ್ರಿಯೆ: ಎಂಎಲ್‌ಎ ಟಿಕೆಟ್‌ಗಾಗಿ ಹಣ ಪಡೆದು ವಂಚಿಸಿರುವ ಅಭಿನವ ಹಾಲಶ್ರೀ ವಿರುದ್ಧ ಮತ್ತೊಂದು ದೂರು ದಾಖಲಾದ ಹಿನ್ನೆಲೆಯಲ್ಲಿ ದೂರು ನೀಡಿದ ಸಂಜಯ ಚವಡಾಳಗೆ ಗದಗ ಪೊಲೀಸರು ನೋಟಿಸ್ ನೀಡಿದ್ದು, ಹಣ ನೀಡಿದ ಬಗ್ಗೆ ದಾಖಲೆ ಒದಗಿಸುವಂತೆ ಸೂಚಿಸಲಾಗಿದೆ. ಸಂಜಯ ಚವಡಾಳ ನೀಡಿದ ದೂರಿನ ಅನ್ವಯ ವಿಚಾರಣೆ ಆರಂಭಿಸಿದ್ದೇವೆ. ಶಿರಹಟ್ಟಿ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಕೇಳಿದ್ದ ಸಂಜಯ್, ವಿವಿಧ ಹಂತದಲ್ಲಿ ನಗದು ರೂಪದಲ್ಲಿ ಹಣವನ್ನ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈಗಾಗಲೇ ಸಂಜಯ್ ಚವಡಾಳಗೆ ವಂಚನೆ ಕುರಿತಂತೆ ಸಮಂಜಸ ದಾಖಲೆಗಳನ್ನ ಸಲ್ಲಿಸುವಂತೆ ನೋಟಿಸ್ ನೀಡಿದೇವೆ. ಇದುವರೆಗೂ ಯಾವುದೇ ದಾಖಲೆಯನ್ನು ದೂರುದಾರರು ಒದಗಿಸಿಲ್ಲ. ದಾಖಲೆಗಳನ್ನ ನೀಡಿದ ನಂತರ ಮುಂದಿನ ತನಿಖೆ ಆರಂಭಿಸುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರು ಉದಯವಾಣಿಗೆ ಮಾಹಿತಿ ನೀಡಿದ್ದಾರೆ.



Leave a Comment: